ಲೇಖಕ: admin

ಸುಂಟಿಕೊಪ್ಪ ಡಿ.13 NEWS DESK : ಸುಂಟಿಕೊಪ್ಪ 1ನೇ ವಿಭಾಗ ಹಾಗೂ 3ನೇ ವಿಭಾಗದಲ್ಲಿ ಇದೀಗ ನೂತನ ಟ್ರಾನ್ಸ್‌ಫಾರಂ ಅಳವಡಿಸುವ ಮೂಲಕ ವಿದ್ಯುತ್ ಇಲಾಖೆ ಗ್ರಾಮಸ್ಥರ ಗಂಭೀರ ಸಮಸ್ಯೆಯ ಪರಿಹಾರಕ್ಕೆ ಮುಂದಾಗಿದ್ದು, ಚೆಸ್ಕಾಂ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಗ್ರಾಮಸ್ಥರು ಹಾಗೂ ಪಂಚಾಯಿತಿ ಶ್ಲಾಘನೆ ವ್ಯಕ್ತಪಡಿಸಿದೆ. ಸುಂಟಿಕೊಪ್ಪ 1ನೇ ವಿಭಾಗದ ಗುಡ್ಡಪ್ಪ ರೈ, ಶಿವರಾಮ ರೈ ಬಡಾವಣೆ ಹಾಗೂ ಮಾಸ್ಟರ್ ಬಡಾವಣೆಯಯಲ್ಲಿ ವಿದ್ಯುತ್ ಮಂದಬೆಳಕಿನ ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ಇಲ್ಲಿನ ನಿವಾಸಿಗಳು ಪಂಚಾಯಿತಿ ಸದಸ್ಯರುಗಳ ಗಮನಕ್ಕೆ ತಂದ ಮೇರೆಗೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಚೆಸ್ಕಾಂ ಇಲಾಖೆಗೆ ನೂತನ ಟ್ರಾನ್ಸ್‌ಫಾರಂ ಅಳವಡಿಸುವಂತೆ ಮನವಿ ಮಾಡಲಾಗಿತ್ತು. ಇದೀಗ ನೂತನ ಟ್ರಾನ್ಸ್‍ಫಾರಂ ಅಳವಡಿಸುವ ಮೂಲಕ ವಿದ್ಯುತ್ ಇಲಾಖೆ ಗ್ರಾಮಸ್ಥರ ಗಂಭೀರ ಸಮಸ್ಯೆಯನ್ನು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸಭೆಯಲ್ಲಿ ನಿರ್ಣಯ ಕೈಗೊಂಡು ಪಂಚಾಯಿತಿ ವತಿಯಿಂದ ಚೆಸ್ಕಾಂ ಇಲಾಖೆಗೆ ಪತ್ರ ಬರೆದು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಮನವಿ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಚೆಸ್ಕಾಂ…

Read More

ಮಡಿಕೇರಿ ಡಿ.13 NEWS DESK : ಭಾರತೀಯ ಭಾಷಾ ದಿವಸ ಹಾಗೂ ತಮಿಳು ಮಹಾ ಕವಿ ಸುಬ್ರಹ್ಮಣ್ಯ ಭಾರತಿಯಾರ್ ಅವರ 143 ನೇ ಜಯಂತಿಯ ಅಂಗವಾಗಿ ತಮಿಳುನಾಡಿನ ರಾಜಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಅವರನ್ನು ರಾಜ್ಯಪಾಲ ಆರ್.ಎನ್. ರವಿ ಅವರು ಸನ್ಮಾನಿಸಿದರು. ಪ್ರಾಚೀನ ತಮಿಳು ಗ್ರಂಥ ತಿರುಕುರಳ್ ಅನ್ನು ಕೊಡವ ಭಾಷಾ ಅನುವಾದದ ಮೂಲಕ ಭಾರತೀಯ ಭಾಷಾ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಕಾವೇರಿ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಇವರು ಮುಲ್ಲೇಂಗಡ ಮಧೋಶ್ ಪೂವಯ್ಯ ಅವರ ಪತ್ನಿ ಹಾಗೂ ನಾಲ್ಕೇರಿ ಗ್ರಾಮದ ಚೆಪ್ಪುಡಿರ ಸನ್ನು ಮುದ್ದಪ್ಪ ಮತ್ತು ನಳಿನಿ ದಂಪತಿಗಳ ಪುತ್ರಿ.

Read More

ಮಡಿಕೇರಿ NEWS DESK  ಡಿ.12 :    ಭಾರತೀಯ ರೋಲರ್  ಸ್ಕೇಟಿಂಗ್ ಸಂಸ್ಥೆಯ ವತಿಯಿಂದ  ಮೈಸೂರಿನಲ್ಲಿ ನಡೆದ  62 ನೇ   ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಯುರೋ ಸ್ಕೂಲ್  ‌ಚಿಮ್ಮಿ ಹಿಲ್ಸ್ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿ ಡಿವಿನ್ ಗಣಪತಿ  400 ಮೀಟರ್ ಓಟದ ಸ್ಪರ್ಧೆಯಲ್ಲಿ  ಚಿನ್ನದ ಪದಕ ಮತ್ತು 600 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನುಗಳಿಸುವ ಮೂಲಕ ರಾಷ್ಟ್ರ ಮಟ್ಟಕ್ಕೆ ಅಯ್ಕೆಯಾಗಿದ್ದಾನೆ. ಮೂಲತಃ ಕೊಡಗಿನವರಾದ ಕೋಲೇರ ರೋಷನ್‌ ಹಾಗೂ ತಾಲಿ  ಧರ್ಮಾವತಿ ದಂಪತಿಯ ಪುತ್ರ ಡಿವಿನ್ ಗಣಪತಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾನೆ. ಇವರಿಗೆ ಬೃಂದಾವನ ಸ್ಕೇಟಿಂಗ್ ಸಂಸ್ಥೆಯ ತರಬೇತುದಾರರಾದ ಸಿ.ಎಂ.ನಾಗೇಶ್ ಹಾಗೂ ಮಧುಚಂದ್ರು ತರಬೇತಿ ನೀಡಿದ್ದಾರೆ.

Read More

ಕುಶಾಲನಗರ NEWS DESK ಡಿ.12 : ಕುಶಾಲನಗರ ಸಮೀಪದ ಹೆಬ್ಬಾಲೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಬನಶಂಕರಿ ಇಕೋ ಕ್ಲಬ್ ವತಿಯಿಂದ ಶಾಲಾ ವಿದ್ಯಾರ್ಥಿಗಳು ಕಣಿವೆ ಸಮೀಪದ ಭುವನಗಿರಿಯಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ಇಂದು ಭೇಟಿ ನೀಡಿದರು. ಘಟಕದಲ್ಲಿ ನಡೆಯುವ  ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ಹಸಿಕಸ ಮತ್ತು ಒಣಕಸ ವಿಂಗಡಣೆ ಮಾಡಿ ಈ ಕಸಗಳಿಂದ ಮನೆ ಕಟ್ಟುವ ಇಟ್ಟಿಗೆಯ ತಯಾರಿ ಮತ್ತು ಕಾಂಪೋಸ್ಟ್ ಗೊಬ್ಬರವನ್ನು ಹೇಗೆ ತಯಾರಿ ಮಾಡುತ್ತಾರೆ ಎಂಬ ಮಾಹಿತಿಯನ್ನು ಮನದಟ್ಟು ಮಾಡಿಕೊಂಡರು.  ನಂತರ ಕಣಿವೆಯ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಸ್ಥಳದ ಇತಿಹಾಸವನ್ನು ತಿಳಿದುಕೊಂಡರು. ಸ್ನೇಹಿತರೊಂದಿಗೆ ಹಾಗೂ ಶಿಕ್ಷಕರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು. ಈ ಸಂದರ್ಭ ಶಾಲೆಯ ಇಕೋ ಕ್ಲಬ್ ಮತ್ತು ವಿಜ್ಞಾನ ಶಿಕ್ಷಕಿ ಕೆ.ಎಸ್.ರಮ್ಯಾ ಮತ್ತು ಆಂಗ್ಲ ಭಾಷೆ ಶಿಕ್ಷಕಿ  ರಂಜನ ಹಾಜರಿದ್ದರು.

Read More

ಕುಶಾಲನಗರ NEWS DESK ಡಿ.12 : ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಫರ್ಟಿಲಿಟಿ‌ ಸೆಂಟರ್ ವತಿಯಿಂದ ಕುಶಾಲನಗರದಲ್ಲಿ ಔಟ್ರೀಚ್ ಕ್ಲಿನಿಕ್ ಸ್ಥಾಪಿಸುವ ಮೂಲಕ ಶೀಘ್ರದಲ್ಲೇ ಸೇವೆ ಒದಗಿಸಲಾಗುವುದು ಎಂದು ಕಾಂಗರೂ ಕೇರ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ನ ಫೌಂಡರ್ ಹಾಗೂ ಸಿಇಒ ಕೂಡ ಆದ ಮಕ್ಕಳ ತಜ್ಞ ಡಾ.ಶೇಖರ್ ಸುಬ್ಬಯ್ಯ ತಿಳಿಸಿದರು. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‌ ಮಹಿಳಾ ಮತ್ತು ಮಕ್ಕಳ ಚಿಕಿತ್ಸೆಗಾಗಿ ಸ್ಥಾಪಿಸಿರುವ ಆಸ್ಪತ್ರೆ ಬೆಂಗಳೂರು, ರಾಮನಗರ ಹಾಗೂ‌ ಮೈಸೂರಿನಲ್ಲಿ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಮೈಸೂರು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಕುಶಾಲನಗರದ ಮುಖ್ಯ ರಸ್ತೆಯಲ್ಲಿರುವ ಮೆಡಿ ಪ್ಲೆಕ್ಸ್ ಡಯಗ್ನಾಸ್ಟಿಕ್ ಲ್ಯಾಬ್ ಕೇಂದ್ರದಲ್ಲಿ ಔಟ್ ರೀಚ್ ಕ್ಲಿನಿಕ್ ಮುಂದಿನ ವಾರದಿಂದ ಕಾರ್ಯಾರಂಭ‌ ಮಾಡಲಿದೆ. ಕೊಡಗು ಜಿಲ್ಲೆಯ ವಿವಿಧೆಡೆಗಳಿಂದ ಹಾಗೂ ಗಡಿಭಾಗದಿಂದ ಮೈಸೂರಿಗೆ ಆಗಮಿಸುವವರಿಗೆ ಕುಶಾಲನಗರದಲ್ಲಿ ಔಟ್ ರೀಚ್ ಕ್ಲಿನಿಕ್ ಸ್ಥಾಪನೆಯಿಂದ ಅತ್ಯಂತ ಅನುಕೂಲ ಒದಗಲಿದೆ. ಮೈಸೂರಿನಿಂದ ತಜ್ಞ ವೈದ್ಯರು ತಪಾಸಣೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಲಿದ್ದಾರೆ. ಕೊಡಗು…

Read More

ಮಡಿಕೇರಿ NEWS DESK  ಡಿ.12 : ದೇವಟ್ ಪರಂಬು ಹತ್ಯಾಕಾಂಡದ 239ನೇ ವರ್ಷಾಚರಣೆ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಹಿರಿಯರಿಗೆ ಶ್ರದ್ಧಾಂಜಲಿ ಸಲ್ಲಿಸಿತು. ಕೊಡವ ನರಮೇಧ ಸ್ಮಾರಕ ಸಮಾಧಿಯಲ್ಲಿ ಪುಷ್ಪ ನಮನ ಸಲ್ಲಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಪ್ರಮುಖರು ಹಿರಿಯರಿಗೆ ಗೌರವ ಅರ್ಪಿಸಿದರು. ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕುಗಳೊಂದಿಗೆ ಕೊಡವ ಸ್ವಯಂ ಆಡಳಿತ ಲ್ಯಾಂಡ್ ಅನ್ನು ರೂಪಿಸಬೇಕೆಂದು ಒತ್ತಾಯಿಸಿದರು. ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಆದಿಮಸಂಜಾತ ಕೊಡವರನ್ನು ಗುರುತಿಸಿ ಮತ್ತು ವಿದೇಶಿ ಆಡಳಿತಗಾರರು ಹಿಂದೆ ವಶಪಡಿಸಿಕೊಂಡ ಅಥವಾ ಅಡಮಾನ ಇಟ್ಟಿರುವ ಅವರ ಆನುವಂಶಿಕ ಭೂಮಿಯನ್ನು ಪುನಃಸ್ಥಾಪಿಸಬೇಕು. ದೇವಾಟ್‌ಪರಂಬ್‌ನಲ್ಲಿ ಅಂತರಾಷ್ಟ್ರೀಯ ಕೊಡವ ಜನಾಂಗೀಯ ಹತ್ಯೆಯ ಸ್ಮಾರಕವನ್ನು ನಿರ್ಮಿಸಬೇಕು. ವಿಶ್ವಸಂಸ್ಥೆ (ಯುಎನ್‌ಒ) ಮತ್ತು ಭಾರತ ಸರ್ಕಾರವು ದೇವಾಟ್‌ಪರಂಬ್ ದುರಂತ ಮಡಿಕೇರಿ ಕೋಟೆ, ನಾಲ್ನಾಡು ಅರಮನೆಯಲ್ಲಿ ನಡೆದ ಕೊಡವ ಜನಾಂಗದ ರಾಜಕೀಯ ಹತ್ಯೆಗಳನ್ನು ಜಂಟಿಯಾಗಿ ಖಂಡಿಸಬೇಕು. ವಿಶ್ವರಾಷ್ಟ್ರ ಸಂಸ್ಥೆ (UNO) ದ ಅಂತರರಾಷ್ಟ್ರೀಯ…

Read More

ಮಡಿಕೇರಿ ಡಿ.12 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ 30ನೇ ವರ್ಷದ ಸಾರ್ವತ್ರಿಕ ಪುತ್ತರಿ ನಮ್ಮೆಯನ್ನು ಸಕಲ ಕೊಡವ ಜನಪದ ಪರಂಪರೆಯಂತೆ ರೋಹಿಣಿ ನಕ್ಷತ್ರದ ಆರಂಭದಲ್ಲಿ ಡಿ.14 ರಂದು ಪೂರ್ವಹ್ನ 10 ಗಂಟೆಗೆ ಬಾಳೆಲೆ ಹೋಬಳಿಯ ಪತ್ತ್‍ಕಟ್ ನಾಡ್‍ನ ಬಿಳೂರು ಗ್ರಾಮದ ಕಾಂಡೇರ ಸುರೇಶ್‍ರವರ ಭತ್ತದ ಗದ್ದೆಯಲ್ಲಿ ಕದಿರು ತೆಗೆಯುವ ಮೂಲಕ ಆಚರಿಸಲಾಗುವುದು ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಸಾರ್ವತ್ರಿಕವಾಗಿ ಕೊಡವರ ಎಲ್ಲಾ ಹಬ್ಬ ಹರಿದಿನಗಳನ್ನು ಕಳೆದ ಮೂರು ದಶಕಗಳಿಂದ ಸಿಎನ್‍ಸಿ ಆಚರಿಸುತ್ತ ಬರುವ ಉದ್ದೇಶ ಅತೀ ಸಣ್ಣ ಕೊಡವ ಸಮುದಾಯದ ಜನ್ಮಭೂಮಿ ಹಾಗೂ ಪೂರ್ವಾರ್ಜಿತ ಭೂಮಿ, ಭಾಷೆ, ಸಂಸ್ಕೃತಿ, ಪರಂಪರೆ, ಜನಪದ ಮತ್ತು ಸ್ವಯಂ ನಿರ್ಣಯ ಹಕ್ಕುಗಳಿಗೆ ಸಂವಿಧಾನದ 14, 19, 21, 51ಎ(ಎಫ್), 29, 30, 25, 26, 347, 350 ಇವುಗಳ ಅನ್ವಯ 6 ಮತ್ತು 8ನೇ ಶೆಡ್ಯೂಲ್ ಒಳಗೊಂಡಂತೆ ರಾಜ್ಯಾಂಗದತ್ತ ಹಕ್ಕುಗಳ ಮಂಡನೆಗೆ ಪೂರಕವಾಗಿ ಮತ್ತು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು…

Read More

ಮಡಿಕೇರಿ ಡಿ.12 NEWS DESK : ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಮಡಿಕೇರಿಯಲ್ಲಿ ಒಂದು ಗ್ರೂಪ್-ಡಿ ಹುದ್ದೆ ಖಾಲಿ ಇದ್ದು, ಹೊರಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಕನಿಷ್ಠ ಎಸ್‍ಎಸ್‍ಎಲ್‍ಸಿ ತೇರ್ಗಡೆ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ಡಿಸೆಂಬರ್, 18 ರಂದು ಬೆಳಗ್ಗೆ ನಡೆಯಲಿರುವ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು. ಇಚ್ಛೆ ಇರುವ ಅಭ್ಯರ್ಥಿಗಳು ಆಯೋಗದ ದೂ.ಸಂ.08272-229852 ಅಥವಾ ಖುದ್ದಾಗಿ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿ ಹಾಗೂ ಸಹಾಯಕ ರಿಜಿಸ್ಟ್ರಾರ್  ತಿಳಿಸಿದ್ದಾರೆ.

Read More

ಸೋಮವಾರಪೇಟೆ ಡಿ.12 NEWS DESK : ಕೊಡಗಿನ ವೀರ ಸೇನಾನಿಗಳನ್ನು ಅವಮಾನ ಮಾಡಿದ ವ್ಯಕ್ತಿಯನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕೊಡಗು ಸರ್ವ ಜನಾಂಗದ ಒಕ್ಕೂಟದಿಂದ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕರೆ ನೀಡಿದ್ದ ಕೊಡಗು ಬಂದ್‍ಗೆ ಸೋಮವಾರಪೇಟೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟದಣದಲ್ಲಿ ಖಾಸಗಿ ಬಸ್ ಗಳ ಸಂಚಾರವಿಲ್ಲದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಪರದಾಡುವಂತಾಯಿತು. ಪಟ್ಟಣದಲ್ಲಿ ಬೆರಳಣಿಕೆಯ ಹೊಟೇಲ್‍ಗಳು ಮುಚ್ಚಲ್ಪಟಿದ್ದವು. ಉಳಿದಂತೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು. ಶಾಲಾ-ಕಾಲೇಜು ವಾಹನಗಳಲ್ಲಿ ವಿದ್ಯಾರ್ಥಿಗಳು ಬೆಳಿಗ್ಗೆ ತೆರಳಿದರು. ಎಂದಿನಂತೆ ಆಟೋ ಸಂಚಾರವಿತ್ತು. ತಾಲ್ಲೂಕು ಕಚೇರಿ, ಸಹಕಾರ ಹಾಗು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ನಡೆದವು.

Read More

ಮಡಿಕೇರಿ ಡಿ.12 NEWS DESK : ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಡಿ.29 ರಂದು ವಿಶ್ವಮಾನವ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು. ಈ ಸಂಬಂಧ ನಗರದ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕುವೆಂಪು ಅವರ ಕುರಿತು ಉಪನ್ಯಾಸ, ಕವನವಾಚನ, ಗಮಕ ವಾಚನ ಏರ್ಪಡಿಸುವುದು, ಗೀತಾಗಾಯನ ಮತ್ತಿತರ ಕಾರ್ಯಕ್ರಮವನ್ನು ಆಚರಿಸುವುದರ ಜೊತೆಗೆ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ವ್ಯವಸ್ಥಿತವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು. ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳನ್ನು ಆಹ್ವಾನಿಸುವುದರ ಜೊತೆಗೆ ಹಲವು ಕಾರ್ಯಕ್ರಮ ಆಯೋಜಿಸುವ ಸಂಬಂಧ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ…

Read More