ಲೇಖಕ: admin

ಮಡಿಕೇರಿ ಅ.5 NEWS DESK : ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ದಸರಾ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಡಿಕೇರಿ ದಸರಾ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಗಳಿಸಿಕೊಂಡಿದೆ. ಜನೋತ್ಸವ ಯಶಸ್ವಿಗೆ ಮಡಿಕೇರಿ ದಸರಾ ಸಮಿತಿ ಹಾಗೂ ದಶಮಂಟಪಗಳು ಪ್ರಮುಖ ಕಾರಣವಾಗಿದೆ. ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮದ ಜನಪ್ರಿಯತೆ ಹೆಚ್ಚಾಗುವುದು ಜಿಲ್ಲೆಗೆ ಹಿರಿಮೆ ತಂದಿದೆ ಎಂದರು. ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷ ವೆಂಕಟರಾಜಾ ಮಾತನಾಡಿ, ಅಪಾರ ಶ್ರಮವಹಿಸಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದು ಯಶಸ್ವಿಯಾಗಬೇಕಾದರೆ ಜನರ ಸಹಕಾರ ಬಹುಮುಖ್ಯ ಎಂದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಹೆಚ್.ಟಿ.ಅನಿಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪವಿಭಾಧಿಕಾರಿ ವಿನಾಯಕ್ ನರ್ವಾಡೆ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ರಾಜ್ಯ ಸರ್ಕಾರದ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ…

Read More

ಮಡಿಕೇರಿ ಅ.5 NEWS DESK : ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಎಬಿವಿಪಿ ಪ್ರಮುಖರಾದ ಕೌಶಲ್ಯ ನೇತೃತ್ವದಲ್ಲಿ ಜಮಾಯಿಸಿದ ಫೀ.ಮಾ.ಕಾರ್ಯಪ್ಪ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಸರ್ಕಾರಿ ವಿವಿಗಳಲ್ಲಿ ಹಾಗೂ ವಿವಿ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಮರ್ಪಕ ಬೋಧಕ ವರ್ಗವಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ರಾಜ್ಯದ 460ಕ್ಕೂ ಅಧಿಕ ಪ್ರಥಮ ದರ್ಜೆ ಕಾಲೇಜುಗಳ ಖಾಯಂ ಉಪನ್ಯಾಸಕರಿಲ್ಲದೆ ಸಮಸ್ಯೆ ತಲೆದೋರಿದೆ. ತಕ್ಷಣವೇ ಸರ್ಕಾರ ಈ ಸಮಸ್ಯೆಗಳನ್ನು ಪರಿಹರಿಸಿ ವಿದ್ಯಾರ್ಥಿಗಳ ನೆರವಿಗೆ ಬರಬೇಕೆಂದು ಆಗ್ರಹಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Read More

ಮಡಿಕೇರಿ ಅ.5 NEWS DESK : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕ ಕದಳಿ ವೇದಿಕೆಯ ಮಡಿಕೇರಿ ತಾಲ್ಲೂಕು ಅಧ್ಯಕ್ಷರಾಗಿ ಮಡಿಕೇರಿ ಮಹದೇವಪೇಟೆಯ ಕೂರ್ಗ್ ಆಪ್ಟಿಕಲ್ಸ್ ನ ನೇತ್ರ ತಜ್ಞರಾದ ವಿಜಯಲಕ್ಷ್ಮಿ ಅವರನ್ನು ನೇಮಕಗೊಳಿಸಲಾಗಿದೆ. ಹನ್ನೆರಡನೇ ಶತಮಾನದ ಶರಣರ ಚಿಂತನೆಗಳನ್ನು ತಾಲ್ಲೂಕಿನಾದ್ಯಂತ ಬಿತ್ತರಿಸುವ ಮೂಲಕ ಶರಣ ಸಾಹಿತ್ಯ ಹಾಗೂ ಸಂಸ್ಕೃತಿಯ ಪ್ರಸಾರಕ್ಕೆ ಮುಂದಾಗಬೇಕೆಂದು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷೆ ಸುಶೀಲಾ ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿರಾಜಪೇಟೆ ಅ.5 NEWS DESK : ಬೇಟೋಳಿ ಗ್ರಾಮದ ರಾಮನಗರ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ವನದುರ್ಗೆ ದೇವಿಯ ಗುಡಿಯಲ್ಲಿ ನವರಾತ್ರಿ ಪ್ರಯುಕ್ತ ಶ್ರೀ ದುರ್ಗಾ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಮುಂಜಾನೆಯಿಂದಲೇ ದುರ್ಗಾ ಮಾತೆಗೆ ಅಲಂಕಾರ ಪೂಜೆ, ಕುಂಕುಮಾರ್ಚನೆ, ಪುಷ್ಪರ್ಚನೆ, ದೇವಿ ಅಷ್ಟೋತ್ತರ ಪಠಣ, ಪಾರಾಯಣ, ನೈವೇದ್ಯ ಅರ್ಪಣೆ ಮೊದಲಾದ ಸೇವೆಗಳು ಜರುಗಿದವು. ನಂತರ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣಾ ಸೇವೆಗಳು ನಡೆದವು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಹಾಜರಿದ್ದರು. ದೇವಸ್ಥಾನದ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್  ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು.

Read More

ಮಡಿಕೇರಿ ಅ.5 NEWS DESK : ಮಡಿಕೇರಿ ದಸರಾ ಜನೋತ್ಸವದಲ್ಲಿಂದು (ಶನಿವಾರ ಅ.5) ಮಕ್ಕಳ ನಡೆಯಲಿದೆ, 11 ನೇ ವಷ೯ದ ಮಕ್ಕಳ ದಸರಾ ಅಂಗವಾಗಿ ನಗರದ ಗಾಂಧಿ ಮೈದಾನದಲ್ಲಿ ಬೆಳಗ್ಗಿನಿಂದಲೇ ಮಕ್ಕಳಿಗಾಗಿ ವೈವಿಧ್ಯಮಯ ಸ್ಪಧಾ೯ ಕಾಯ೯ಕ್ರಮಗಳನ್ನು ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಮಕ್ಕಳ ದಸರಾ ಸಮಿತಿ ಸಂಚಾಲಕ ಅನಿಲ್ ಹೆಚ್ ಟಿ ತಿಳಿಸಿದ್ದಾರೆ. ಬೆಳಗ್ಗೆ 9 ಗಂಟೆಯಿಂದಲೇ ಗಾಂಧಿ ಮೈದಾನದಲ್ಲಿ ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳಿಂದ ಮಂಟಪ, ಕ್ಲೇಮಾಡೆಲಿಂಗ್ ಮತ್ತು ಛದ್ನವೇಶ ಸ್ಪಧೆ೯ಗಳು ಆಯೋಜಿತವಾಗಿದೆ, ಅತ್ಯಧಿಕ ಸಂಖ್ಯೆಯಲ್ಲಿ ಮಕ್ಕಳ ದಸರಾಕ್ಕೆ ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದು ಛದ್ನವೇಷ ಸ್ಪಧೆ೯ಗೇ 130 ಸ್ಪಧಿ೯ಗಳಿದ್ದಾರೆ, ಮಕ್ಕಳ ಅಂಗಡಿಗೆ 80 ಮಕ್ಕಳ ಸಂತೆಗೆ 65 ಮಕ್ಕಳ ಮಂಟಪಕ್ಕೆ 20, ಕ್ಲೇಮಾಡೆಲಿಂಗ್ ಸ್ಪಧೆ೯ಗೆ 23 ಸ್ಪಧಿ೯ಗಳ ನೋಂದಣಿಯಾಗಿದೆ. ಇದೇ ವೇಳೆ ನಂಜನಗೂಡಿನ ಸುನಾದ್ ವಿನೋದಿನಿ ಸಂಗೀತ ಶಾಲಾ ಮಕ್ಕಳಿಂದ ವಾದ್ಯ ವೈವಿಧ್ಯ ಕೂಡ ಆಯೋಜಿತವಾಗಿದೆ. ಸಂಜೆ 6 ಗಂಟೆಯಿಂದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿತ ಸಾಂಸ್ಕೖತಿಕ…

Read More

ಮಡಿಕೇರಿ ಅ.5 NEWS DESK : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಿಯು ಶರನ್ನವರಾತ್ರಿಯ ಮೂರನೇ ದಿನವಾದ ಇಂದು ಬೇವಿನ ಅಲಂಕಾರದಲ್ಲಿ ಗಮನ ಸೆಳೆಯುತ್ತಿದ್ದಾರೆ. ಅ.6 ರಂದು ವಿಶೇಷ ಖಾದ್ಯ ಅಲಂಕಾರ, ನಡೆಯಲಿದೆ.

Read More

*ಸಿದ್ದಾಪುರ ಅ.4 : ನವಪಲ್ಲವ ಸಾಹಿತ್ಯ ವೇದಿಕೆ ಹಾಗೂ ಕೆ.ಪಿ.ಎಸ್ ನೆಲ್ಯಹುದಿಕೇರಿ ಇದರ ಸಂಯುಕ್ತ ಆಶ್ರಯದಲ್ಲಿ ಜಯಲಕ್ಷ್ಮಿ ಎಂ.ಬಿ ಅವರ “ಸಾಂಚವ್ಯ” ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಅ.5ರಂದು ನೆಲ್ಯಹುದಿಕೇರಿಯ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಲಿದೆ. ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ನ ಪ್ರಾಂಶುಪಾಲರಾದ ಡಾ.ಕೋರನ ಸರಸ್ವತಿ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ಜನಶಕ್ತಿ ವಾರಪತ್ರಿಕೆಯ ಸಂಪಾದಕ ಡಾ.ಎಸ್.ವೈ.ಗುರುಶಾಂತ ಪುಸ್ತಕ ಪರಿಚಯ ಮಾಡಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಗೋಣಿಕೊಪ್ಪಲು ಕಾಪ್ಸ್ ಶಾಲೆಯ ಪ್ರೊ.ಎಂ.ಡಿ.ನAಜುAಡ, ಗ್ಯಾರಂಟಿ ಅನುಷ್ಠಾನ ಸಮಿತಿಯ ಕುಶಾಲನಗರ ಅಧ್ಯಕ್ಷ ವಿ.ಪಿ.ಶಶಿಧರ್ ಪಾಲ್ಗೊಳ್ಳಲಿದ್ದಾರೆ.

Read More

ಮಡಿಕೇರಿ ಅ.4 NEWS DESK : ಕೊಡಗಿನ ಸುಂದರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರಯತ್ನದೊಂದಿಗೆ ದಸರಾ ಸಮಿತಿಗಳು ಅಧಿಕ ಶಬ್ಧದಿಂದ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಡಿಜೆ ಅಬ್ಬರಕ್ಕೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು ಮತ್ತು ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಮನವಿ ಮಾಡಿದ್ದಾರೆ. ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ಭವನದಲ್ಲಿ ನಡೆದ “ಸಂವಾದ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಬ್ಬರದ ಡಿಜೆ ಸಂಗೀತ ಯಾವುದೇ ಭಾಗಕ್ಕೆ ತೆರಳಿದರು ನಿಮಗೆ ಕಾಣಸಿಗುತ್ತದೆ. ಆದರೆ ಹಿರಿಯರಿಂದ ಬಳುವಳಿಯಾಗಿ ಬಂದ ಕೊಡಗಿನ ಸಂಸ್ಕೃತಿಯನ್ನು ನಾವು ಇಲ್ಲೆ ಕಾಣಲು ಸಾಧ್ಯವೆನ್ನುವುದನ್ನು ಅರ್ಥೈಸಿಕೊಂಡು, ಡಿಜೆ ಬದಲಾಗಿ ಇಲ್ಲಿನ ಸಂಸ್ಕೃತಿ ಮತ್ತು ವಾಲಗಕ್ಕೆ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಿದರು. ಲೋಕಸಭೆ, ರಾಜ್ಯಸಭೆಗಳಲ್ಲಿ ಅಂಗೀಕಾರವಾಗಿ ಬಂದ ಶಬ್ಧ ಮಾಲಿನ್ಯ ನಿಯಂತ್ರಣ ಕಾನೂನು ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿದ ಕಾನೂನೇ ಆಗಿದೆ. ಕಾನೂನು ಎನ್ನುವುದು “ಶಿಕ್ಷೆ” ನೀಡುವುದಕ್ಕೆ ಇರುವುದಲ್ಲ, ಬದಲಾಗಿ ತಪ್ಪುಗಳು ನಡೆಯದಂತೆ ನೋಡಿಕೊಳ್ಳುವುದಕ್ಕಾಗಿ…

Read More

ಮಡಿಕೇರಿ ಅ.4 NEWS DESK :  ಸಿಬಿಎಸ್‍ಇ ದಕ್ಷಿಣ ವಲಯದ ಹಾಕಿ ಪಂದ್ಯಾವಳಿಗೆ ನಗರದ ಕೊಡಗು ವಿದ್ಯಾಲಯದ ಮೈದಾನದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.  ಪಂದ್ಯಾವಳಿಯಲ್ಲಿ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿನ ಸಿಬಿಎಸ್‍ಇ 22 ಶಿಕ್ಷಣ ಸಂಸ್ಥೆಗಳ 36 ತಂಡದ 700 ಆಟಗಾರರು ಪಾಲ್ಗೊಂಡಿದ್ದಾರೆ. ಆಟಗಾರರನ್ನು ಆರತಿಯೊಂದಿಗೆ, ಹಣೆಗೆ ತಿಲಕವನ್ನಿಟ್ಟು, ಸಾಂಪ್ರದಾಯಿಕ ಕೊಡವ ವಾಲಗದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಷ್ಟ್ರೀಯ ಮಟ್ಟದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ್ತಿ ಹಾಗೂ ಎಫ್‍ಎಂಕೆಎಂಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಪುಷ್ಪ ಕುಟ್ಟಣ್ಣ, ಸಿಬಿಎಸ್‍ಇ ಪರಿವೀಕ್ಷಕ ಅಫ್ಸರ್ ಅಹಮದ್ ಮತ್ತು ಶಾಲಾ ಕ್ರೀಡಾಧ್ಯಕ್ಷರಾದ ರಘು ಮಾದಪ್ಪ ಅವರನ್ನು ಒಳಗೊಂಡಂತೆ ಶಾಲಾ ಮುಖ್ಯಸ್ಥರು ಸಿಬಿಎಸ್‍ಇ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಕ್ರೀಡಾ ಜ್ಯೋತಿ ಜ್ವಲನ : ಉದ್ಘಾಟನಾ ಸಮಾರಂಭದಲ್ಲಿ ಪಂದ್ಯಾವಳಿಯಲ್ಲಿ ಪಾಲ್ಗೊಂಡ ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪರ್ಲಿನ್ ಪೊನ್ನಮ್ಮ ಅವರು ಮೈದಾನಕ್ಕೆ ತಂದ ಕ್ರೀಡಾ ಜ್ಯೋತಿಯನ್ನು…

Read More

ಮಡಿಕೇರಿ ಅ.4 NEWS DESK : ಬೇರ್  ನಾ ನೋಡಿದ ಕೊಡವ ಸಿನಿಮಾದಲ್ಲಿ ಅಪರೂಪದ ಸಿನಿಮಾ. ಕೊಡವ ಸಿನೆಮಾ ಅಂದರೆ ಇಂದು ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರ ಹೆಸರು ಟ್ಯಾಗ್ ಆಗುವುದು ಸಾಮಾನ್ಯವಾಗಿ ಹೋಗಿದೆ.  ಬೇರ್ ಒಂದು ಕೌಟುಂಬಿಕ ಸಂಬಂಧ ಗಳ/ವಿಷೇಶವಾಗಿ ಅಪ್ಪ ಮಗಳ ಸಂಬಂಧ ದ ಸುತ್ತ ಹೆಣೆದ ಕಥೆ. ಇಡೀ ಸಿನಿಮಾ ನಿರೀಕ್ಷೆ ಗಳು ಹುಸಿಯಾದಾಗ ಆಗುವ ನೋವು,  ಮಾನಸಿಕವಾಗಿ ಬದುಕನ್ನೇ ಹೇಗೆಲ್ಲ ಜರ್ಜರಿತ  ಗೊಳಿಸುತ್ತದೆ ಎಂಬುದನ್ನ “ಬೇರ್” ತಿಳಿಸಿ ಕೊಡುತ್ತದೆ. ತೆಳಂಗ್ ನೀರ್ (ಗೋಪಿ ಪೀಣ್ಯ ರ) ಸಿನಿಮಾದ ನಂತರ ಕೊಡವ ಭಾಷೆಯಲ್ಲಿ ಅತ್ಯಂತ ವಿಭಿನ್ನ ವಾಗಿ ಮೂಡಿಬಂದಿರುವ ಸಿನಿಮಾ ಎಂದು ಹೆಮ್ಮೆಯಿಂದ ಹೇಳುವೆ. ಬೇರ್ ತಾಂತ್ರಿಕವಾಗಿ ಕೂಡಾ ತಾಂತ್ರಿಕ ತೆಯನ್ನ ಚೆನ್ನಾಗಿ ಬಳಸಿಕೊಂಡು ಕೊಡವ ಭಾಷಾ ಸಿನಿಮಾಗೆ ಹೊಸ ಭಾಷ್ಯವನ್ನು ಬರೆದಿದೆ.  ಸಿನಿಮಾದ ನಿರ್ದೇಶಕರು ಪ್ರತೀ ಫ್ರೇಮ್ ನಲ್ಲೂ  ಆಶಕ್ತಿಯನ್ನ ಬಹಳ ಶ್ರದ್ಧೆಯಿಂದ ಹೋಮ್ ಮಾಡಿರುವುದು ಅವರ ಇದುವರೆಗಿನ ಅನುಭವವನ್ನು ದಾರೆಎರೆದಿರುವುದನ್ನ  ಪ್ರೇಕ್ಷಕರು “ಬೇರ್” ನಲ್ಲಿ…

Read More