ಮಡಿಕೇರಿ ಡಿ.9 NEWS DESK : 2024ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯ ಕಬ್ಬನ್ ಉದ್ಯಾನವನ ಬೆಂಗಳೂರು ಇಲ್ಲಿ ಪುಸ್ತಕಗಳ ನೋಂದಣಿ ಅದಿನಿಯಮದಡಿ ಸಲ್ಲಿಸಲಾಗುವ ಪ್ರತಿ ಗ್ರಂಥದ ಮೂರು ಪ್ರತಿಗಳಲ್ಲಿ ಒಂದು ಪ್ರತಿಯನ್ನು ನಿಯಮಾನುಸಾರ ಆಯುಕ್ತರ ಕಚೇರಿಗೆ ಪಡೆದು ಈ ಪುಸ್ತಕವನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಪರಿಗಣಿಸಲಾಗುವುದು. ಪ್ರಥಮ ಮುದ್ರಣಗೊಂಡ ವರ್ಷದಿಂದ ಕನಿಷ್ಠ 10 ವರ್ಷಗಳ ಅವಧಿಯ ನಂತರ ಮರು ಮುದ್ರಣಗೊಳ್ಳುವ/ ಪರಿಷ್ಕೃತ ಮುದ್ರಣಗೊಳ್ಳುವ ಉತ್ತಮ ಪುಸ್ತಕಗಳನ್ನು ಓದುಗರ ಬೇಡಿಕೆಗೆ ಅನುಗುಣವಾಗಿ ಆಯಾ ಪ್ರಾಧಿಕಾರಗಳ ಅಧಿಕಾರಿಗಳ/ ಪ್ರಾಧಿಕಾರದ ವಿವೇಚನಾ ಕೋಟಾದಡಿ ಸರ್ಕಾರವು ನಿಗದಿಪಡಿಸಿದ ಅಳತೆಗಳಿಗೆ ಅನುಗುಣವಾಗಿ ಬೆಲೆ ನಿಗದಿಪಡಿಸಿಕೊಂಡು ನೇರವಾಗಿ ಖರೀದಿಸಲು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಸಭೆಯಲ್ಲಿ ನಿರ್ಣಯಿಸಿರುತ್ತಾರೆ. 2024ರಲ್ಲಿ ಕರ್ನಾಟಕದಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟಗೊಳ್ಳುವ ಯಾವುದೇ ಭಾಷೆಯ ಪುಸ್ತಕಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ದಿನಾಂಕ 01-01-2025 ರ ಸಂಜೆ 5.30ರ ಒಳಗಾಗಿ ನೋಂದಣಿ ಮಾಡಿಸತಕ್ಕದ್ದು, ಈ ಪುಸ್ತಕಗಳನ್ನು…
ಲೇಖಕ: admin
ಮಡಿಕೇರಿ ಡಿ.10 NEWS DESK : ಪ್ರಸಕ್ತ 2024-25 ನೇ ಸಾಲಿಗೆ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆರ್ಜಿ ಗ್ರಾಮ, ಪೆರಂಬಾಡಿ, ವಿರಾಜಪೇಟೆ ತಾ, ಕೊಡಗು ಇಲ್ಲಿಗೆ ಸ್ಟಾಪ್ ನರ್ಸ್ ಹುದ್ದೆಗೆ ಆಹ್ವಾನಿಸಲಾಗಿದೆ. ಸ್ಟಾಪ್ ನರ್ಸ್ ಹುದ್ದೆಗೆ(ಹುದ್ದೆ 1) ಜಿಎನ್‍ಎಂ ವಿದ್ಯಾರ್ಹತೆ ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಮೌಲಾನಾ ಆಜಾದ್ ಭವನ, ಎಫ್‍ಎಂಸಿ ಕಾಲೇಜು ಹತ್ತಿರ, ಮಡಿಕೇರಿ, ಕಚೇರಿ ದೂ.ಸಂ. 08272-225528, ನಿಲಯ ಪಾಲಕರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆರ್ಜಿ ಗ್ರಾಮ, ಪೆರಂಬಾಡಿ, ವಿರಾಜಪೇಟೆ ತಾಲ್ಲೂಕು ದೂ.ಸಂ. 9008545442 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆರ್.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಹನ್ನೆರಡು ರಾಶಿಗಳ ವಾರ ಭವಿಷ್ಯ (ಡಾ.ಮಹಾಬಲೇಶ್ವರ ಭಟ್, ಮೂರ್ನಾಡು 81056 34429) ಮೇಷ ರಾಶಿ :: ಈ ವಾರದಲ್ಲಿ ದೂರ ಪ್ರಯಾಣ, ಧನಾಗಮನ, ಹಿತಶತ್ರುಗಳಿಂದ ಕಿರುಕುಳ, ಹೊಸ ವಸ್ತು ಖರೀದಿ, ಆರೋಗ್ಯದ ಕಡೆ ಎಚ್ಚರ ವಹಿಸಿ. :: ಶುಭ ಸಂಖ್ಯೆ :; 1, 2, 3, 9 :: ಶುಭ ಬಣ್ಣ :: ಕೆಂಪು, ಹಳದಿ, ಕೇಸರಿ ವೃಷಭ ರಾಶಿ :: ಮಕ್ಕಳಿಂದ ಚಿಂತೆ, ಕೋರ್ಟ್ ಕಚೇರಿ ಕಾರ್ಯದಲ್ಲಿ ಒತ್ತಡ, ಸ್ನೇಹಿತರಿಂದ ಸಹಾಯ, ಮಾನಸಿಕ ಒತ್ತಡ. :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಬಿಳಿ, ಹಸಿರು, ಕಪ್ಪು ಮಿಥುನ ರಾಶಿ :: ಆರೋಗ್ಯದಲ್ಲಿ ಏರುಪೇರು, ಸಾಮಾಜಿಕ ಕಾರ್ಯದಲ್ಲಿ ಯಶಸ್ಸು, ಆತ್ಮೀಯರಿಂದ ಪ್ರಶಂಸೆ, ಕಚೇರಿ ಕೆಲಸದಲ್ಲಿ ಜಯ. :: ಶುಭಸಂಖ್ಯೆ : 3, 5, 6 :: ಶುಭ ಬಣ್ಣ :: ಕೆಂಪು, ಹಸಿರು ಕರ್ಕಾಟಕ ರಾಶಿ :: ಸಾಲಗಾರರ ಒತ್ತಡ, ಮನೆಯಲ್ಲಿ ಕಿರಿಕಿರಿ,…
:: NEWS DESK :: ವೇಷ ಇದರ ಉಲೇಖ ನಮಗೆ ಪುರಾಣದಿಂದ ಹಿಡಿದು ಇಂದಿನವರೆಗೂ ಚಾಲನೆಯಲ್ಲಿ ಹಾಗೂ ನಮ್ಮ. ದೈನಂದಿನ ಬದುಕಿನಲ್ಲಿ ಹಾಸು ಹೊಕ್ಕಿದ ಬಹಳ ಅರ್ಥವಿರುವ ಶಬ್ದ. ಇದು ದೇವರಿಂದ ಹಿಡಿದು ರಾಜರವರೆಗೂ ರಾಜನಿಂದ ನಮ್ಮ ಪ್ರಜಾಪ್ರಭುತ್ವದ ನಾಯಕರವರೆಗೆ ಪ್ರಜಾಪ್ರಭುತ್ವದ ನಾಯಕರಿಂದ ಹಿಡಿದು ಇಂದಿನ ಶ್ರೀ ಸಾಮಾನ್ಯನವರೆಗೂ ವೇಷ ಬದಲಾವಣೆ ನಾವು ಕಾಣಬಹುದು. ವೇಷ ಬದಲಾವಣೆ ದೇವರು ಲೋಕ ಕಲ್ಯಾಣಕಾಗಿ ರಾಕ್ಷಸರು ದೇವ ಲೋಕ ನಾಶಕ್ಕಾಗಿ ವೇಷ ಬದಲಾವಣೆ ಮಾಡುತಿದ್ದರು. ಅದರ ಬಗ್ಗೆ ವಿವರಣೆ ಅವಶ್ಯಕತೆ ಇಲ್ಲ. ಅದನ್ನು ನಾವು ಪುರಾಣ ಕಥೆಯಲ್ಲಿ ಓದಿರುತ್ತೇವೆ. ರಾಮಾಯಣ ಮತ್ತು ಮಹಾಭಾರತದಲ್ಲೂ ಇದರ ಉಲೇಖವಿದೆ. ಪುನಃ ಅದನ್ನು ಬರೆದು ನಿಮ್ಮ ಸಮಯದ ವ್ಯಯ ಮಾಡುವುದು ಬೇಡ. ಅದೇ ರೀತಿಯಲ್ಲಿ ರಾಜರ ಆಡಳಿತದಿಂದ ಹಿಡಿದು ಪ್ರಜಾಪ್ರಭುತ್ವ ಆಡಳಿತದವರೆಗೂ ವೇಷ ಬದಲಾವಣೆ ನಾವು ಕಾಣಬಹುದು. ಪತ್ತೆದಾರಿಕೆ ಗೂಢಚಾರ ಕಳ್ಳತನಕ್ಕೆ ಅಪಹರಣ ಹೀಗೆ ಹತ್ತು ಹಲವು ವಿಧಗಳ ರೂಪದಲ್ಲಿ ನಾಗರೀಕತೆ ಮತ್ತು ಆಧುನಿಕ ಜೀವನದಲ್ಲಿ ವೇಷ ಬದಲಾವಣೆ…
ಮಡಿಕೇರಿ ಡಿ.9 NEWS DESK : ಶ್ರೀ ರಂಗಪಟ್ಟಣ-ಕುಶಾಲನಗರ ನಡುವಿನ ಉದ್ದೇಶಿತ ಚತುಷ್ಪಥ ಹೆದ್ದಾರಿ ಕಾಮಗಾರಿಯನ್ನು ಮುಂದಿನ 2-3 ತಿಂಗಳಿನಲ್ಲಿ ಆರಂಭಿಸಲಾಗುವುದು ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಹಿತಿ ನೀಡಿದರು. ನಗರದ ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿ ಸಂಸದರ ನೂತನ ಕಚೇರಿಯನ್ನು ಹಿರಿಯ ವೈದ್ಯ ಡಾ.ಪಾಟ್ಕರ್ ಸೇರಿದಂತೆ ಗಣ್ಯರು ಉದ್ಘಾಟನೆ ಮಾಡಿದರು. ಬೆಳಿಗ್ಗೆ ಕಚೇರಿಯಲ್ಲಿ ವಿವಿಧ ಹೋಮ, ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಯದವೀರ್ ಒಡೆಯರ್, ಕೊಡಗು ಮುಖ್ಯ ಕ್ಷೇತ್ರವಾಗಿದ್ದು, ಇಲ್ಲಿಗೆ ಸಮಯ ನೀಡಬೇಕಾಗಿರುವುದು ಜನಪ್ರತಿನಿಧಿಯಾದ ನನ್ನ ಕರ್ತವ್ಯವಾಗಿದೆ. ಅಭಿವೃದ್ಧಿ ದೃಷ್ಟಿಯಲ್ಲಿ ಜನರಿಗೆ ನನ್ನ ಸಂಪರ್ಕ ಸಿಗುವ ಸಲವಾಗಿ ಕಚೇರಿ ಆರಂಭಿಸಲಾಗಿದ್ದು, ನಮ್ಮ ಸಲಹೆಗಾರರು ವಾರದ ಎಲ್ಲಾ ದಿನಗಳಲ್ಲೂ ಕಚೇರಿಯಲ್ಲಿ ಲಭ್ಯವಿರುತ್ತಾರೆ. ನಾನು ನನ್ನ ಕ್ಷೇತ್ರ ಪ್ರತಿನಿಧಿಸುವ ಮೈಸೂರು, ಕೊಡಗಿನ ಜನರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನನ್ನ ಸೇವೆಯನ್ನು ಮುಡಿಪಾಗಿಟ್ಟಿದ್ದೇನೆ ಎಂದು ಹೇಳಿದರು. ವಿಕಸಿತ ಭಾರತದಲ್ಲಿ ಕೊಡಗಿನ ಗ್ರಾಮ ಮಟ್ಟದ…
ಮಡಿಕೇರಿ ಡಿ.9 NEWS DESK : ಮೂರ್ನಾಡು ಮಹಿಳಾ ಮಂಡಳಿಯ ವಾರ್ಷಿಕ ಮಹಾಸಭೆ ಡಿ.11ರಂದು ಮಂಡಳಿಯ ಅಧ್ಯಕ್ಷರಾದ ಮೀನಾಕ್ಷಿ ಕೇಶವ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10.30 ಗಂಟೆಗೆ ಸಮಾಜದ ಕಟ್ಟಡದಲ್ಲಿ ನಡೆಯಲಿದೆ ಎಂದು ಮಹಿಳಾ ಮಂಡಳಿ ಪ್ರಕಟಣೆ ತಿಳಿಸಿದೆ.
ಸಿದ್ದಾಪುರ ಡಿ.9 NEWS DESK : ಮುಂಬೈಯಲ್ಲಿ ನಡೆದ ಏಷಿಯನ್ ಪ್ಯಾರಾ ಪಂಜ ಕುಸ್ತಿ ಕ್ರೀಡಾಕೂಟದಲ್ಲಿ ಏಷ್ಯಕ್ಕೆ ಮೂರನೇ ಸ್ಥಾನ ಪಡೆದ ಅರೆಕಾಡು ಗ್ರಾಮದ ವಿಶೇಷಚೇತನರಾದ ಕೆ.ಎಂ.ಹಸ್ಸನ್ ಅವರನ್ನು ನೆಲ್ಯಹುದಿಕೇರಿ ಪೈಸಾರಿ ಪ್ರೀಮಿಯರ್ ಲೀಗ್ ಕ್ರೀಡಾಕೂಟದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಮಡಿಕೇರಿ ಡಿ.9 NEWS DESK : ಕುಶಾಲನಗರದಲ್ಲಿ ಡಿ.12 ಮತ್ತು 13 ರಂದು ನಡೆಯುವ ಹನುಮ ಜಯಂತಿ ಹಾಗೂ ದಶಮಂಟಪಗಳ ಶೋಭಾಯಾತ್ರೆಗೆ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಹಾಗೂ ಹಿಂದೂ ವಾಗ್ಮಿ ಸಿ.ಟಿ ರವಿ ಅವರನ್ನು ಕುಶಾಲನಗರ ಹನುಮ ಜಯಂತಿ ಸಮಿತಿ ಸದಸ್ಯರು ಚಿಕ್ಕಮಗಳೂರು ನಿವಾಸಕ್ಕೆ ಭೇಟಿ ನೀಡಿ ಆಹ್ವಾನಿಸಿದರು.
ಪೊನ್ನಂಪೇಟೆ, ಡಿ.9 NEWS DESK : ದ. ಕೊಡಗಿನ ವಿ. ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಬಿಟ್ಟಂಗಾಲ, ಬಿ. ಶೆಟ್ಟಿಗೇರಿ ಮತ್ತು ಹಾತೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಐನ್ ಮನೆಗಳನ್ನು ಹೊಂದಿರುವ ಕೊಡವ ಮನೆತನಗಳ ನಡುವಿನ 3ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈಫ್ಲೈಯರ್ಸ್ ಕಪ್-2024ರ 3ನೇ ದಿನದ ಪಂದ್ಯಾವಳಿಯಲ್ಲಿ ಕಾದಾಡಿದ ತಂಡಗಳ ಪೈಕಿ 4 ಬಲಿಷ್ಠ ಕುಟುಂಬ ತಂಡಗಳು ಸೆಮಿ ಫೈನಲ್ಸ್ ಪ್ರವೇಶಿಸಿದೆ. ಪಂದ್ಯಾವಳಿಯ ಸೆಮಿ ಫೈನಲ್ಸ್ ಇಂದು (ಡಿ.9) ನಡೆಯಲಿದೆ. 3ನೇ ದಿನದ ಪಂದ್ಯದಲ್ಲಿ ,ಚಂದೂರ, ಚೇಂದಂಡ, ಮುರುವಂಡ ಮತ್ತು ತೀತಮಾಡ ತಂಡಗಳು ವಿಜಯ ಸಾಧಿಸಿ ಪಂದ್ಯಾವಳಿಯ ಸೆಮಿ ಫೈನಲ್ಸ್ ಗೆ ಅರ್ಹತೆ ಪಡೆದುಕೊಂಡಿತು. ಈ ನಾಲ್ಕು ತಂಡಗಳು ಇಂದು ನಡೆಯಲಿರುವ ಸೆಮಿ ಫೈನಲ್ಸ್ ಪಂದ್ಯಾವಳಿಯಲ್ಲಿ ಎದುರಾಳಿಗಳನ್ನು ಮಣಿಸಿ ಚಾಂಪಿಯನ್ ಆಗುವ ಹೆಗ್ಗುರಿಯೊಂದಿಗೆ ಫೈನಲ್ ಪ್ರವೇಶಿಸಲು ತೀವ್ರ ಹೋರಾಟ ನಡೆಸಲಿದೆ. ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ…
ಮಡಿಕೇರಿ ಡಿ.9 NEWS DESK : ದಕ್ಷಿಣ ಕನ್ನಡ ಹಾಗೂ ಕೊಡಗು ಗೌಡ ಸಮಾಜ ಬೆಂಗಳೂರು ವತಿಯಿಂದ ಸ್ನೇಹಮಿಲನ ಷಷ್ಟ್ಯಾಬ್ಧಿ ಸಂಭ್ರಮ, ಪ್ರತಿಭಾ ಪುರಸ್ಕಾರ, ಸಮಾಜದ ಮಾಜಿ ಅಧ್ಯಕ್ಷರು, ಮಹಿಳಾ ಹಾಗೂ ಯುವ ಘಟಕದ ಮಾಜಿ ಅಧ್ಯಕ್ಷರು ಗಳಿಗೆ, ಕಾರ್ಯದರ್ಶಿಗಳಿಗೆ ಸನ್ಮಾನ ಕಾರ್ಯಕ್ರಮ ಬೆಂಗಳೂರಿನ ಲಗ್ಗೆರೆ ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಅದ್ದೂರಿಯಾಗಿ ನಡೆಯಿತು. ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮವರು ಸಂಘಟಿತರಾಗಬೇಕು, ಅರೆಭಾಷೆ ಮಾತಾಡುತ್ತಾ ಭಾಷೆಯನ್ನು ಬೆಳೆಸಬೇಕು. ಭಾಷೆ ಬೆಳೆದರೆ ಸಂಸ್ಕೃತಿ ಬೆಳೆದಂತೆ, ಭಾಷೆ ನಶಿಸಿದರೆ ಸಂಸ್ಕೃತಿ ನಶಿಸಿದಂತೆ. ಭಾಷಾ ಸಂಸ್ಕೃತಿ, ಆಚಾರ ವಿಚಾರಗಳಲ್ಲಿ ಎಲ್ಲರೂ ಸಮಾಜದೊಂದಿಗೆ ಕೈಜೋಡಿಸಿ ಉತ್ತಮ ಕಾರ್ಯಗಳನ್ನು ನಡೆಸಲು ಕಾರ್ಯ ಪ್ರವರ್ತ ರಾಗಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ರಾಜ್ಯ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾಟ ಪುರುಷೋತ್ತಮ ಬಿಳಿಮಲೆ ಮಾತನಾಡಿ, ನಮ್ಮ ಮಾತೃ ಭಾಷೆಯನ್ನು ಸಮಾಜದಲ್ಲಿ ಬೆಳೆಸಬೇಕು, ಅರೆ ಭಾಷೆ ಅರ್ಧ…






