ಲೇಖಕ: admin

ಮಡಿಕೇರಿ ಅ.21 NEWS DESK : ರೀಬಿಲ್ಡ್ ಕೊಡಗು ಸಂಸ್ಥೆ (ಟೈಮ್ ಟು ಗಿವ್ ಬ್ಯಾಕ್ and ಜಾಯ್ ಆಫ್ ಗಿವಿಂಗ್) ಯ 6ನೇ ವಾರ್ಷಿಕೋತ್ಸವ ಅ.25 ರಂದು ಮಡಿಕೇರಿಯಲ್ಲಿ ನಡೆಯಲಿದೆ. ನಗರದ ರೋಟರಿ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಸಂಸ್ಥೆಯ ಸಂಸ್ಥಾಪಕ ಕೆ.ಎ.ಕುಶಾಲಪ್ಪ (ಕೇಳಪಂಡ) ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕ್ರೀಡಾಪಟು ಅಶ್ವಿನಿ ನಾಚಪ್ಪ, ಗೌರವ ಅತಿಥಿಯಾಗಿ ಬೆಂಗಳೂರಿನ ರೀಇನ್‍ವೆಂಟ್ ಅಪಾರಲ್ಸ್ ನ ನಿರ್ದೇಶಕರಾದ ಅಭಿತಾ ಜೈನ್ ಬಾಬೆಲ್, ವಿಶೇಷ ಅತಿಥಿಯಾಗಿ ರೋರಿಟೊ ಪ್ರೈವೆಟ್ ಲಿಮಿಟೆಡ್ ನ ಪ್ರಧಾನ ವ್ಯವಸ್ಥಾಪಕರಾದ ಎಂ.ಆರ್.ಕಾರ್ತಿಕ್ ಕರೈಮೀಂದರ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 60 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಗುವುದು. ಅಶ್ವಿನಿ ನಾಚಪ್ಪ, ಅಭಿತಾ ಜೈನ್ ಬಾಬೆಲ್, ರೀಬಿಲ್ಡ್ ಕೊಡಗು ಪ್ರತಿನಿಧಿಗಳು, ರೋಟರಿ ಅಧ್ಯಕ್ಷರು ಹಾಗೂ ಇನ್ನರ್ ವೀಲ್ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ರೀಬಿಲ್ಡ್ ಕೊಡಗು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Read More

ಮಡಿಕೇರಿ ಅ.21 NEWS DESK : ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪತ್ರಕರ್ತರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆದರ್ಶ್ ಅದ್ಕಲೇಗಾರ್, ಶಶಿಕುಮಾರ್ ರೈ ಚಾಂಪಿಯನ್ ಪಟ್ಟ ಅಲಂಕರಿಸಿದರು. ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಆದರ್ಶ್ ಅದ್ಕಲೇಗಾರ್ ನವೀನ್ ಡಿಸೋಜಾರನ್ನು 2-1 ಸೆಟ್‍ಗಳಿಂದ ಮಣಿಸಿದರು. ಆದರ್ಶ್ ಅದ್ಕಲೇಗಾರ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ನವೀನ್ ಡಿಸೋಜ ದ್ವಿತೀಯ ಸ್ಥಾನ ಪಡೆದರು. ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ವಿನೋದ್ ಅವರನ್ನು ರಿಜ್ವಾನ್ ಹುಸೇನ್ ಮಣಿಸಿ ತೃತೀಯ ಸ್ಥಾನ ಪಡೆದರು. ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಆದರ್ಶ್ ಅದ್ಕಲೇಗಾರ್ ಮತ್ತು ಶಶಿಕುಮಾರ್ ರೈ ಜೋಡಿ ಇಸ್ಮಾಯಿಲ್ ಕಂಡಕೆರೆ ಮತ್ತು ಹೆಚ್.ಜೆ.ರಾಕೇಶ್ ಜೋಡಿಯನ್ನು ನೇರ ಸೆಟ್‍ಗಳಿಂದ ಮಣಿಸಿ ಪ್ರಥಮ ಸ್ಥಾನ ಪಡೆದರು. ಇಸ್ಮಾಯಿಲ್ ಕಂಡಕೆರೆ ಮತ್ತು ಹೆಚ್.ಜೆ.ರಾಕೇಶ್ ಜೋಡಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ನವೀನ್ ಡಿಸೋಜ ಮತ್ತು ಸವಿತಾ ರೈ ಜೋಡಿ,…

Read More

ಮಡಿಕೇರಿ ಅ.21 NEWS DESK : ಕೃಷಿಕರು ಬೆಳೆದ ಬಗೆಬಗೆಯ ಹಣ್ಣಿನ ಪ್ರದರ್ಶನ ಹಾಗೂ ವೈವಿಧ್ಯತಾ ಮೇಳವು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಎಲ್ಲರ ಗಮನ ಸೆಳೆಯಿತು. ರೈತರು ಬೆಳೆದ ಹಣ್ಣುಗಳಾದ ಕೊಡಗಿನ ಕಿತ್ತಳೆ, ರಸಬಾಳೆ, ಪಚ್ಚೆಬಾಳೆ, ಚಂದ್ರಬಾಳೆ, ಸಪೋಟ, ಹಲಸು, ಪ್ಯಾಶನ್ ಫ್ರೂಟ್, ಅಂಬಟೆ, ಸೀಬೆಕಾಯಿ, ಬೆಣ್ಣೆಹಣ್ಣು, ವಿಧದ ನಿಂಬೆ, ಪಪ್ಪಾಯ, ಚಕೋತ, ಚೆರಿ, ಪಾಲೆಹಣ್ಣು, ನೆಲ್ಲಿಕಾಯಿ ಜೊತೆಗೆ ವಿದೇಶಿ ಹಣ್ಣುಗಳಾದ ರಾಂಬೂಟಾನ್, ಮ್ಯಾಂಗೊಸ್ಟೀನ್, ಫಿಂಗರ್ ಬನಾನ, ಮೆಕಡೋಮಿಯ, ಡ್ರ್ರಾಗನ್ ಫ್ರೂಟ್, ಫ್ಯಾಸನ್ ಫ್ರೂಟ್, ಚೆರಿಗೋವಾ, ಬಂಚ್ ಗೋವಾ, ರೋಲಿನಿಯಾ, ಫಿಗ್, ಎಗ್‍ಫ್ರೂಟ್ ಹಣ್ಣುಗಳು ಪ್ರದರ್ಶನಗೊಂಡವು. ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ವತಿಯಿಂದ `ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ಜಾಗೃತಿ ಕಾರ್ಯಕ್ರಮ, ಹಣ್ಣುಗಳ ವೈವಿದ್ಯತಾ ಮೇಳ ಹಾಗೂ ಮ್ಯಾಂಗೋಸ್ಟೀನ್ ಮತ್ತು ರಾಂಬುಟಾನ್ ಹಣ್ಣಿನ ಕ್ಷೇತ್ರೋತ್ಸವವು ಅಧಿಕ ಮೌಲ್ಯದ ವಿದೇಶಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿ ಸಂಘದ ಮೂಲಕ ಸಸ್ಯತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ…

Read More

ನಾಪೋಕ್ಲು ಅ.21 NEWS DESK : ಕಾವೇರಿ ತೀರ್ಥೋದ್ಭವ ಕಳೆದು ಪವಿತ್ರ ತುಲಾ ಮಾಸದ ಹತ್ತನೇ ದಿನ ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಹಲವು ವರ್ಷಗಳಿಂದ ಪರದಂಡ ಕುಟುಂಬಸ್ಥರಿಂದ ಆಚರಿಸಿಕೊಂಡು ಬರಲಾಗುತ್ತಿರುವ ಪತ್ತಾಲೋಧಿ ಆರಾಧನೆ ಉತ್ಸವವು ಅ.27 ರಂದು ದೇವಾಲಯದಲ್ಲಿ ಜರುಗಲಿದೆ. ಪ್ರತಿವರ್ಷದಂತೆ ಪೂಜೆಗಳು, ಸತ್ಯನಾರಾಯಣ ಪೂಜೆ, ಮಹಾಪೂಜೆಗಳು, ತುಲಾಭಾರ ಸೇವೆಗಳು ನಡೆಲಿದೆ. ಕೊಡಗಿನ ಭಕ್ತಾಧಿಗಳು ಆಗಮಿಸಿ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ದೇವತಕ್ಕರಾದ ಪರದಂಡ ಕುಟುಂಬಸ್ಥರು ವಿನಂತಿಸಿದ್ದಾರೆ. ವರದಿ : ದುಗ್ಗಳ ಸದಾನಂದ. 

Read More

ನಾಪೋಕ್ಲು ಅ.21 NEWS DESK : ಮೈಸೂರಿನ ಕೊಡಗು ಗೌಡ ಸಮಾಜದ ವತಿಯಿಂದ ಸಮುದಾಯದ ಬಾಂಧವರಿಗೆ ಹಾಗೂ ಭಕ್ತಾದಿಗಳಿಗೆ ಕಾವೇರಿ ತೀರ್ಥ ವಿತರಣೆ ಮಾಡಲಾಯಿತು. ಸಮಾಜದ ಸಭಾಂಗಣದಲ್ಲಿ ತೀರ್ಥವನ್ನು ದೇವರ ಮಂಟಪದಲ್ಲಿರಿಸಿ ಕಾವೇರಿ ತೀರ್ಥಕ್ಕೆ ವಿಶೇಷ ಪೂಜೆ ನೆರವೇರಿಸಿದ ಬಳಿಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ, ಪದಾಧಿಕಾರಿಗಳಾದ ಕುದುಪಜೆ ಚಂದ್ರಶೇಖರ್, ಪೊನ್ನೆಟಿ ನಂದ, ನಡುಮನೆ ಚಂಗಪ್ಪ, ನಡುವಟ್ಟಿರ ಲಕ್ಷ್ಮಣ, ನಿರ್ದೇಶಕರಾದ ಪಟ್ಟಡ ಶಿವಕುಮಾರ್, ಕೊಂಬಾರನ ಸುಬ್ಬಯ್ಯ, ಹೊಸೂರು ರಾಘವಯ್ಯ, ಕುಂಟುಪಣಿ ರಮೇಶ್, ಪಾಣತ್ತಲೆ ವಸಂತ, ತೋಟಂಬೈಲ್ ಇಂದಿರಾ, ಕುಂಟುಪುಣಿ ಶೀಲಾ, ಚಪ್ಪೇರಾ ಯಮುನಾ, ಗೌಡ ಸಮಾಜದ ಮಾಜಿ ಅಧ್ಯಕ್ಷ ತೊಟಂಬೈಲು ಮನೋಹರ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಂಡಿರ ಬಸಪ್ಪ ಮತ್ತಿತರರು ಹಾಜರಿದ್ದರು. ವರದಿ : ದುಗ್ಗಳ ಸದಾನಂದ.

Read More

ನಾಪೋಕ್ಲು ಅ.21 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ ಸಮಿತಿ, ಬಲಮುರಿ ಮಹಾದೇವ ಸ್ಪೋಟ್ರ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕಾವೇರಿಯ ಎರಡನೆಯ ಪುಣ್ಯಕ್ಷೇತ್ರ ಬಲಮುರಿಯಲ್ಲಿ ಭಕ್ತಿ ಗೀತೆ ಗಾಯನ ನಡೆಯಿತು. ನಾಪೋಕ್ಲುವಿನ ರವಿ ಓಂಕಾರ್ ಮ್ಯೂಸಿಕ್ ತಂಡ ಹಾಗೂ ಸ್ಥಳೀಯ ಕಲಾವಿದರಾದ ಗುಡ್ಡೆರ ತೇಜು, ಮೇಡತನ ರಶ್ಮಿ, ಕೋಳಿಮಾಡು ಪ್ರಶಾಂತ್ ಅವರ ಕಂಠಸಿರಿಯಲ್ಲಿ ಭಕ್ತಿ ಗೀತೆ ಗಾಯನ ಜನ ಮನ್ನಣೆ ಪಡೆಯಿತು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಬೊಳ್ಳಚೆಟ್ಟಿರ ಪ್ರಕಾಶ್ ಕಾಳಪ್ಪ ಉದ್ಘಾಟಿಸಿ ಶುಭ ಹಾರೈಸಿದರು. ಕಾವೇರಿ ನದಿಯಲ್ಲಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ವಾಸು ಎಂಬವರನ್ನು ರಕ್ಷಿಸಿ ಜೀವ ಉಳಿಸಿದ ಈಜು ತಜ್ಞ, ಸಾಹಸಿ ಎಂ.ಆರ್.ಬಿಪಿನ್ ಅವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಿ ಶುಭ ಹಾರೈಸಲಾಯಿತು. ಅಗಸ್ತೇಶ್ವರ ದೇವಸ್ಥಾನ ಸಮಿತಿ…

Read More

ಮಡಿಕೇರಿ ಅ.21 NEWS DESK : ತಲಕಾವೇರಿಯಿಂದ ಪವಿತ್ರ ಕಾವೇರಿ ತೀರ್ಥ ಕಾಶಿ ವಿಶ್ವನಾಥನ ಸನ್ನಿಧಿಗೆ ತಲುಪಿದ್ದು, ಕೊಡಗಿನ ಭಕ್ತರ ಮೂಲಕ ಕಾಶಿ ವಿಶ್ವನಾಥನಿಗೆ ಅಭಿಷೇಕಗೊಂಡಿದೆ. ನಂತರ ಅಯೋಧ್ಯೆಯ ಬಾಲರಾಮನಿಗೆ ತಲುಪಲಿದೆ. ಕೊಡವ ರೈಡರ್ಸ್ ಕ್ಲಬ್ ಸಂಸ್ಥಾಪಕ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಸಂಘಟನಾ ಕಾರ್ಯದರ್ಶಿ ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ ತಮ್ಮ ಕುಟುಂಬದೊಂದಿಗೆ ಕಾಶಿಗೆ ತೆರಳಿ, ಕೊಡಗು ಜಿಲ್ಲೆಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಚಕ್ಕೆರ ಮನು ಅವರ ಮೂಲಕ ಅಲ್ಲಿನ ಆರ್‍ಎಸ್‍ಎಸ್ ಪ್ರಮುಖರಾದ ರಮೇಶ್ ಕುಮಾರ್ ಹಾಗೂ ದೀನ್ ದಯಾಳ್ ಪಾಂಡೆ ಅವರನ್ನು ಸಂಪರ್ಕಿಸಿ ಸಹಕಾರದಿಂದ ಕೊಡವ ಉಡುಪಿನಲ್ಲಿ ಕಾವೇರಿ ತೀರ್ಥವನ್ನು ನೇರವಾಗಿ ಕಾಶಿ ವಿಶ್ವನಾಥನಿಗೆ ಅಭಿಷೇಕ ಮಾಡಿದ್ದಾರೆ. ಅಲ್ಲದೇ, ಕೊಡವ ಜನಾಂಗದ ಹಾಗೂ ಕೊಡಗಿನ ಸಮಸ್ಯೆಗಳ ಪರಿಹಾರದೊಂದಿಗೆ ಶ್ರೋಯೋಭಿವೃದ್ಧಿಗಾಗಿ ಕಾಶಿ ವಿಶ್ವನಾರ್ಥನಲ್ಲಿ ಪ್ರಾರ್ಥಿಸಲಾಯಿತು ಎಂದು ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ ತಿಳಿಸಿದ್ದಾರೆ. ಅಯೋಧ್ಯೆಗೆ ತೆರೆಳಿ ಬಾಲ ರಾಮನಿಗೆ ಕಾವೇರಿ ತೀರ್ಥವನ್ನು ತಲುಪಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ…

Read More

ಮಡಿಕೇರಿ ಅ.20 NEWS DESK : ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾಜ ಬಾಂಧವರನ್ನು ಬೆಸೆಯುವ ಬಹಳ ದೊಡ್ಡ ಶಕ್ತಿಯಿದೆ. ಈ ಸಾಮಥ್ಯ೯ವನ್ನು ಮಲಯಾಳಿ ಸಮಾಜದವರು ಸೂಕ್ತ ರೀತಿಯಲ್ಲಿ ಬಳಸಿಕೊಂಡಿದ್ದಾರೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ.ಶ್ಲಾಘಿಸಿದ್ದಾರೆ.  ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಿಂದೂ ಮಲಯಾಳಿ ಸಂಘದ ವತಿಯಿಂದ ಓಣಂಂ ಘೋಷಂ ಮತ್ತು ಓಣಂ ಸಧ್ಯ ಅಂಗವಾಗಿ ನಡೆದ ಕ್ರೀಡಾಸ್ಪಧೆ೯ಗಳನ್ನು ಕ್ರಿಕೆಟ್ ಆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕೊಡಗಿನಲ್ಲಿ ನೆಲಸಿರುವ ಹಿಂದೂ ಮಲಯಾಳಿ ಸಮುದಾಯದವರು ವ್ಯಾಪಾರ ವಿಸ್ತರಣೆಯ ಜತೆಗೇ  ಸ್ಥಳೀಯರ ಜತೆ ಗೆಳೆತನ, ಮಾನವೀಯತೆ ಗುಣದ ವಿಸ್ತರಣೆಗೂ ಕಾರಣರಾಗಿದ್ದಾರೆ, ಹೀಗಾಗಿಯೇ ಮಲಯಾಳಿ ಸಮಾಜಬಾಂಧವರು ಸ್ಥಳೀಯರೊಂದಿಗೆ ಅನ್ಯೋನ್ಯತೆಯಿಂದ ಬದುಕು ಕಂಡುಕೊಳ್ಳುವಂತಾಗಿದೆ ಎಂದರು. ಸಮುದಾಯದ ಒಗ್ಗಟ್ಟಿನಲ್ಲಿ ಮುಖ್ಯ ಪಾತ್ರ ವಹಿಸುವ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಿಂದೂ ಮಲಯಾಳಿ ಸಮಾಜದ ಪ್ರಮುಖರು ಆದ್ಯತೆ ನೀಡುವ ಮೂಲಕ ತಮ್ಮ ಸಂಘವನ್ನು ಬಲಿಷ್ಟವಾಗಿಸಿರುವುದು ಮೆಚ್ಚುವಂಥ ಕಾಯ೯ ಎಂದು ಶ್ಲಾಘಿಸಿದ ಅನಿಲ್, ಕೊಡಗಿನಲ್ಲಿ…

Read More

ಮಡಿಕೇರಿ ಅ.21 NEWS DESK  : ಸಮಥ೯ ಕನ್ನಡಿಗರು ಸಂಸ್ಥೆ ವತಿಯಿಂದ ನವಂಬರ್ 3 ರಂದು ಭಾನುವಾರ ನಗರದ ಓಂಕಾರಸದನದಲ್ಲಿ ನಿಮ್ಮ ಪ್ರತಿಭೆ- ನಮ್ಮ ವೇದಿಕೆ, ಹಿಮವನ ಸಾಂಸ್ಕೃತಿಕ ಸಂಗಮ ಎಂಬ ಸಾಂಸ್ಕೃತಿಕ ಸ್ಪಧಾ೯ ಕಾಯ೯ಕ್ರಮಗಳನ್ನು ಮಹಿಳೆಯರು ಹಾಗೂ ಮಕ್ಕಳಿಗಾಗಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ ಜಯಲಕ್ಷ್ಮಿ ತಿಳಿಸಿದ್ದಾರೆ. ಸ್ಪಧೆ೯ಗಳ ವಿವರಗಳು ಇಂತಿದೆ ::  ಛದ್ಮವೇಷ ಸ್ಪರ್ಧೆ : (1 ರಿಂದ 3 ವರ್ಷದ ಮಕ್ಕಳಿಗೆ ಮತ್ತು 4 ರಿಂದ 7 ವರ್ಷದ ಮಕ್ಕಳಿಗೆ)  ಪ್ರತ್ಯೇಕ ವಿಭಾಗದಲ್ಲಿ ಹೆಸರು ನೋಂದಣಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ : 9902651146 – ಬಿ.ಸಿ.ಶಾಂತಿ. ಸಮೂಹ ನೃತ್ಯ : (8 ವರ್ಷದಿಂದ 12 ವರ್ಷದ ಮಕ್ಕಳಿಗೆ)  ನಿಯಮಗಳು. – ತಂಡದಲ್ಲಿ ಕನಿಷ್ಠ 6 ಗರಿಷ್ಠ 10 ಮಕ್ಕಳು ಇರಬೇಕು, ಹಾಡು ಕನ್ನಡದ್ದೇ ಆಗಿರಬೇಕು. ಸಮಯ 4 ನಿಮಿಷ , ಹೆಸರು ನೋಂದಣಿಗಾಗಿ ಸಂಪರ್ಕಿಸಿ, 7224875919 :ಅರ್ಪಿತಾ ಸಂದೀಪ್ ಭಟ್ ಜಾನಪದ ನೃತ್ಯ : ಪ್ರೌಢಶಾಲಾ…

Read More

ಬೆಂಗಳೂರು ಅ.21 NEWS DESK : ಭಾರತೀಯ ಫಿಲ್ಟರ್ ಕಾಫಿ, ಅದರ ಶ್ರೀಮಂತ ಪರಿಮಳ ಮತ್ತು ರುಚಿಯೊಂದಿಗೆ, ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸಿದೆ, ಈ ವಾರ ಬಿಡುಗಡೆಯಾದ ಟೇಸ್ಟ್‌ ಅಟ್ಲಾಸ್‌ (Taste Atlas) ನ ವಿಶ್ವದ ಅತ್ಯುತ್ತಮ- ಕಾಫಿ ಪಾನೀಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. “ಇವು ವಿಶ್ವದ 10 ಅತ್ಯುತ್ತಮ ಕಾಫಿ ಪಾನೀಯಗಳಾಗಿವೆ!” ಎಂದು ಟೇಸ್ಟ್‌ ಅಟ್ಲಾಸ್‌ ಉಲ್ಲೇಖಿಸುತ್ತದೆ. ಮೊದಲ ಸ್ಥಾನ ಪಡೆದ ಮೂರರಲ್ಲಿ ಗ್ರೀಸ್‌ನ ಎಸ್ಪ್ರೆಸೊ ಫ್ರೆಡ್ಡೊ ಮೂರನೇ ಸ್ಥಾನದಲ್ಲಿದ್ದರೆ, ಕ್ಯೂಬಾದ ಕೆಫೆ ಕ್ಯೂಬಾನೊ ಅಗ್ರ ಸ್ಥಾನವನ್ನು ಪಡೆದಿದೆ. ದಕ್ಷಿಣ ಭಾರತದ ಫಿಲ್ಟರ್ ಕಾಫಿಯ ಶ್ರೇಯಾಂಕವು ಭಾರತದಲ್ಲಿ ಮತ್ತು ಜಾಗತಿಕವಾಗಿ ಅದರ ಸಾಂಸ್ಕೃತಿಕ ಮಹತ್ವ ಮತ್ತು ವ್ಯಾಪಕ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ. ಪಾನೀಯದ ವಿಶಿಷ್ಟವಾದ ತಯಾರಿಕೆ ಮತ್ತು ಸೇವೆಯ ಶೈಲಿಯು ಅದರ ವಿಶಿಷ್ಟ ಸುವಾಸನೆಯೊಂದಿಗೆ ವಿಶ್ವ ವೇದಿಕೆಯಲ್ಲಿ ಅದರ ಹೆಚ್ಚುತ್ತಿರುವ ಗುರುತಿಸುವಿಕೆಗೆ ಕಾರಣವಾಗಿದೆ. ಟೇಸ್ಟ್ ಅಟ್ಲಾಸ್ ವಿಯೆಟ್ನಾಮೀಸ್ ಐಸ್ಡ್ ಕಾಫಿ, ಗ್ರೀಸ್‌ನಿಂದ ಫ್ರಾಪ್ಪೆ ಮತ್ತು ಜರ್ಮನಿಯ ಐಸ್ಕಫೀ ಸೇರಿದಂತೆ ಇತರ ಗಮನಾರ್ಹ…

Read More