ಕಣಿವೆ ಅ.9 NEWS DESK : ಐಟಿಡಿಪಿ ಇಲಾಖೆ ಅಧಿಕಾರಿಗಳು ಜೇನು ಕುರುಬರ ಹಾಡಿಗಳಿಗೆ ಬರುತ್ತಿಲ್ಲ. ಅವರ ಕಾರುಗಳು ಹೋಗುವಂತಹ ರಸ್ತೆಗಳು ಇರುವ ಕಡೆಗಳಲ್ಲಿ ಮಾತ್ರ ಹೋಗ್ತಾ ಇದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಹಾಡಿಗಳೇ ಗೊತ್ತಿಲ್ಲ. ಇಂತಹ ಬೇಜವಬ್ದಾರಿ ಇಲಾಖಾಧಿಕಾರಿಗಳಿಂದ ಜೇನು ಕುರುಬ ಜನಾಂಗಕ್ಕೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಜೇನು ಕುರುಬರ ಮುಖಂಡ, ಜಿ.ಪಂ ಮಾಜಿ ಸದಸ್ಯ ಹಾಗೂ ನಂಜರಾಯಪಟ್ಟಣ ಗ್ರಾ.ಪಂ ಸದಸ್ಯ ಆರ್.ಕೆ.ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು. ಕುಶಾಲನಗರ ತಾಲ್ಲೂಕು ಚಿಕ್ಲಿಹೊಳೆ ಜಲಾಶಯದ ಬಳಿ ಇರುವ ಕಟ್ಟೆಹಾಡಿಯಲ್ಲಿ ನಡೆದ ಗ್ರಾಮ ಅರಣ್ಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜೇನು ಕುರುಬರ ಹೆಸರಿನಲ್ಲಿ ಉಳ್ಳವರು ಹಾಗೂ ಜೇನು ಕುರುಬರಲ್ಲದವರು ಜಾತಿ ಪ್ರಮಾಣ ಪತ್ರಗಳನ್ನು ಮಾಡಿಸಿಕೊಂಡು ನಿಜವಾದ ಅರ್ಹ ಫಲಾನುಭವಿಗಳಿಗೆ ವಂಚಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮೀಸಲಿಡುವ ಪರಿಶಿಷ್ಟರ ಅನುದಾನದ ಶೇ.25 ರಷ್ಟು ಹಣ ನಮ್ಮ ಜೇನು ಕುರುಬರಿಗೆ ಸಲ್ಲಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮ ನಮ್ಮ…
ಲೇಖಕ: admin
ಪುತ್ತೂರು ಅ.9 NEWS DESK : ಐಇಇಇ ಸಂಸ್ಥೆಯು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದು, ಪದವಿಪೂರ್ವ, ಪದವಿ ಮತ್ತು ಮುಂದುವರಿದ ವೃತ್ತಿಪರ ಶಿಕ್ಷಣಕ್ಕಾಗಿ ಪೂರಕ ಸಂಪನ್ಮೂಲಗಳನ್ನು ಒದಗಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳನ್ನು ಒದಗಿಸುತ್ತದೆ ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು. ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಐಇಇಇ ವಿದ್ಯಾರ್ಥಿ ವಿಭಾಗ, ಐಇಇಇ ಮಂಗಳೂರು ಉಪ ವಿಭಾಗ ಹಾಗೂ ವುಮನ್ ಇನ್ ಇಂಜಿನಿಯರಿಂಗ್ ಸಂಯುಕ್ತ ಆಶ್ರಯದಲ್ಲಿ ನಡೆದ ಐಇಇಇ ದಿನಾಚರಣೆಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತಾಡಿದರು. ಐಇಇಇ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನೂತನ ತಂತ್ರಜ್ಞಾನಗಳನ್ನು ಕಲಿಯುವುದರ ಜತೆಯಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ ಎಂದರು. ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ, ಐಇಇಇ ತನ್ನ ಕಲಿಕಾ ಜಾಲದ ಮೂಲಕ ಸಂಶೋಧನಾ ನಿರತರಿಗೆ, ಇಂಜಿನಿಯರಿಂಗ್ ಪ್ರಾಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ನಿರಂತರ ವೃತ್ತಿಪರ ಶಿಕ್ಷಣವನ್ನು ನೀಡುತ್ತದೆ. ಇದರ ಚಟುವಟಿಕೆಗಳು ಕಾಲೇಜಿನಲ್ಲಿ ವರ್ಷಪೂರ್ತಿ…
ಮಡಿಕೇರಿ ಅ.9 NEWS DESK : ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಸರಿಗಮ ಖ್ಯಾತಿಯ ಸುರೇಖಾ, ಪ್ರಥ್ವಿ ಭಟ್, ರೇಷ್ಮಾ, ಸ್ನೇಹ ನಂಜಪ್ಪ ಮತ್ತು ತಂಡದಿಂದ ಸಂಗೀತ ರಸಸಂಜೆ, ಮಹಿಳಾ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಮಡಿಕೇರಿ ಅ.9 NEWS DESK : ವಿಶ್ವ ವಿಖ್ಯಾತ ಮಡಿಕೇರಿ ದಸರಾ ಉತ್ಸವದ ಅಂಗವಾಗಿ ಮಡಿಕೇರಿಯಲ್ಲಿ ಜರುಗಲಿರುವ ಆಯುಧ ಪೂಜಾ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ. ಮಡಿಕೇರಿ ದಸರಾ ಉತ್ಸವ ಸಮಿತಿಯ ಸದಸ್ಯರು ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಆಹ್ವಾನ ನೀಡಿದರು. ಈ ಸಂದರ್ಭ ಆಯುಕ್ತರಾದ ರಮೇಶ್, ಸಮಿತಿ ಕಾರ್ಯದರ್ಶಿ ಬಿ.ವೈ.ರಾಜೇಶ್, ಖಜಾಂಚಿ ಅರುಣ್ ಶೆಟ್ಟಿ, ಸಮಿತಿಯ ಪ್ರಮುಖರಾದ ಸತೀಶ್ ಪೈ, ಲೋಕೇಶ್ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.
ಮಡಿಕೇರಿ ಅ.9 NEWS DESK : ನಗರದ ಶ್ರೀ ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ದಸರಾ ಮಂಟಪ ಸಮಿತಿ 29ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದ್ದು, ಈ ಬಾರಿ ಶ್ರೀ ಕೊಲ್ಲೂರು ಮೂಕಾಂಬಿಕೆ ಮಹಿಮೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಮುದ್ದಂಡ ಚಂಗಪ್ಪ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‍ನ ಜೇಮ್ಸ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಮಡಿಕೇರಿ ಸ್ಕಂದ ಡೆಕೋರೇಟರ್ಸ್‍ನ ಅನಿಲ್ ಧ್ವನಿವರ್ಧಕ ಒದಗಿಸಲಿದ್ದು, ಬೆಂಗಳೂರಿನ ಅನು ಪ್ರೊ ಲೈಟಿಂಗ್‍ನವರು ಸ್ಟುಡಿಯೋ ಲೈಟಿಂಗ್ ವ್ಯವಸ್ಥೆ ಮಾಡಲಿದ್ದಾರೆ. ಒಟ್ಟು 20 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಮಡಿಕೇರಿಯ ಶೋಮ್ಯಾನ್ ಕ್ರಿಯೇಷನ್ಸ್ ತಂಡ ಕಲಾಕೃತಿಗಳನ್ನು ರಚಿಸಲಿದೆ. ಪ್ಲಾಟ್‍ಫಾರಂ ನಿರ್ಮಾಣ, ಟ್ರ್ಯಾಕ್ಟರ್ ಸೆಟ್ಟಿಂಗ್ಸ್, ಕಲಾಕೃತಿಗಳಿಗೆ ಚಲನವಲನ ವ್ಯವಸ್ಥೆಯನ್ನು ಸಮಿತಿಯ ಸದಸ್ಯರುಗಳೇ ಮಾಡಲಿದ್ದಾರೆ. ಬೆಂಗಳೂರಿನ ಮೈತ್ರಿ ಕ್ರಿಯೇಷನ್ ಆಂಡ್ ಇವೆಂಟ್‍ನವರು ಫೈರ್ ಎಫೆಕ್ಟ್ ವ್ಯವಸ್ಥೆ ಮಾಡಲಿದ್ದಾರೆ. ಒಟ್ಟು 22 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ವಾಲಗ ಮಂಟಪವನ್ನು ಮುನ್ನಡೆಸಲಿದೆ. ಕಳೆದ ಬಾರಿ ತೃತೀಯ ಬಹುಮಾನ…
ವಿರಾಜಪೇಟೆ ಅ.9 NEWS DESK : ಉಡುಪಿಯ ಬ್ರಹ್ಮಾವರದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಬಾಲಕರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗಿನ 14 ವರ್ಷದೊಳಗಿನ ಬಾಲಕರ ತಂಡವು ಹಾಸನ ತಂಡವನ್ನು ಮಣಿಸಿ ವಿಜೇತಗೊಂಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮೈಸೂರು ವಿಭಾಗ ಮಟ್ಟದ 14 ವರ್ಷದೊಳಗಿನ ಮತ್ತು 17 ವರ್ಷದೊಳಗಿನ ಬಾಲಕರ ಕ್ರಿಕೆಟ್ ಪಂದ್ಯಾವಳಿಯನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ಶಾರದಾ ಶಾಲೆಯ ಮೈದಾನದಲ್ಲಿ ಆಯೋಜಿಸಿತು. ಪ್ರತಿ ತಂಡಕ್ಕೆ ಮೂರು ಸುತ್ತುಗಳ ಪಂದ್ಯ ನಡೆಯಿತು. ಮೊದಲ ಸುತ್ತಿನಲ್ಲಿ ಕೊಡಗು ತಂಡ ಮಂಡ್ಯ ಜಿಲ್ಲೆಯ ತಂಡವನ್ನು ಸೋಲಿಸಿ ಎರಡನೆ ಸುತ್ತಿಗೆ ಅರ್ಹತೆ ಪಡೆಯಿತು. ಸೆಮಿಫೈನಲ್ ಪಂದ್ಯದಲ್ಲಿ ತನ್ನ ಎದುರಾಳಿ ಉಡುಪಿ ಜಿಲ್ಲಾ ತಂಡದೊಂದಿಗೆ ಆಡಿ ಉತ್ತಮ ಪ್ರದರ್ಶನ ತೋರುವ ಮೂಲಕ ಫೈನಲ್ ಗೆ ಅರ್ಹತೆ ಪಡೆಯಿತು. ಫೈನಲ್ ಪಂದ್ಯಾವಳಿಯಲ್ಲಿ ಹಾಸನ ಜಿಲ್ಲಾ ತಂಡ ಮತ್ತು ಕೊಡಗು ಜಿಲ್ಲಾ ತಂಡದ ಮಧ್ಯೆ ನಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೊಡಗು ಜಿಲ್ಲಾ ತಂಡವು 10 ಓವರ್‌ಗಳಲ್ಲಿ…
ಮಡಿಕೇರಿ NEWS DESK ಅ.9 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀದಂಡಿನ ಮಾರಿಯಮ್ಮ ದೇವಿಗೆ ದಸರಾದ ಏಳನೇ ದಿನವಾದ ಇಂದು ಶಾರದ ದೇವಿಯ ಅಲಂಕಾರದಲ್ಲಿ ಗಮನ ಸೆಳೆಯುತ್ತಿದೆ. ನೂರಾರು ಭಕ್ತರು ಪೂಜೆ ಸಲ್ಲಿಸಿ ವಿಶೇಷ ಅಲಂಕಾರವನ್ನು ವೀಕ್ಷಿಸಿದರು. ನವರಾತ್ರಿಯ ಪ್ರಯುಕ್ತ ಶ್ರೀದಂಡಿನ ಮಾರಿಯಮ್ಮ ದೇವಾಲಯದಲ್ಲಿ ಪ್ರತಿದಿನ ವಿಶೇಷ ಅಲಂಕಾರ ಸೇವೆ ಮತ್ತು ವಿಶೇಷ ಪೂಜೆ ನಡೆಯುತ್ತಿದೆ. ಅ.10 ರಂದು ಬಳೆಯ ಅಲಂಕಾರ ನಡೆಯಲಿದೆ.
ಮಡಿಕೇರಿ ಅ.9 NEWS DESK : ಗೋಣಿಕೊಪ್ಪದಲ್ಲಿ ನಡೆದ ‘ಮಕ್ಕಳ ದಸರಾ’ ನೃತ್ಯ ಸ್ಪರ್ಧೆಯಲ್ಲಿ ಮೂರ್ನಾಡಿನ “ಸ್ಟೆಪ್ಅಪ್ ಶ್ಯಾಡೋಸ್” ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ಭಾಗವಹಿಸಿ ಜೂನಿಯರ್ ಮತ್ತು ಸೀನಿಯರ್ ಎರಡು ವಿಭಾಗದಲ್ಲೂ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕುಶಾಲನಗರ ಅ.9 NEWS DESK : ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಸವಿನೆನಪಿಗಾಗಿ ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ‘ಶಿಕ್ಷಕ ಸಿರಿ’ ಕಾರ್ಯಕ್ರಮ ನಡೆಯಿತು. ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕೊಡಗು ವಿವಿ ಕುಲಪತಿ ಡಾ.ಅಶೋಕ ಸಂಗಪ್ಪ ಆಲೂರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶಿಕ್ಷಕ ವರ್ಗ ಜ್ಞಾನದಾಸೋಹದಂತಹ ಅತ್ಯಂತ ಶ್ರೇಷ್ಠ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಸಮಾಜದಲ್ಲಿ ಅಜ್ಞಾನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜ್ಯೋತಿಯಂತಹ ಸೇವೆ ಒದಗಿಸುತ್ತಿದ್ದಾರೆ. ವಿದ್ಯಾರ್ಥಿಗಳ ಜೀವನ ಪ್ರಕಾಶಮಯವಾಗಿಸಲು ಸತ್ಯ, ಸುಜ್ಞಾನದ ಬೀಜ ಬಿತ್ತುವ ಮೂಲಕ, ಜವಾಬ್ದಾರಿಯುತ ವ್ಯಕ್ತಿಯಾಗಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಅಧಿಕ ಫಲ ಅಪೇಕ್ಷಿಸದೆ ಪಠ್ಯದೊಂದಿಗೆ ನಮ್ಮ ಜ್ಞಾನ, ಅನುಭವ, ಜೀವನ ಮೌಲ್ಯಗಳನ್ನು, ಬದುಕಿನ ಸೂತ್ರಗಳನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ದೈವಿಕ ಕಾಯಕವನ್ನು ಶಿಕ್ಷಕರು ನಿರ್ವಹಿಸಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್, ಪೋಷಕರ…
ವಿರಾಜಪೇಟೆ ಅ.9 NEWS DESK : ವಿರಾಜಪೇಟೆಯ ಮಗ್ಗುಲದಲ್ಲಿರುವ ಪ್ರತಿಷ್ಟಿತ ದಂತ ಮಹಾವಿದ್ಯಾಲಯವಾದ ಕೊಡಗು ದಂತ ಮಹಾ ವಿದ್ಯಾಲಯಕ್ಕೆ ಹ್ಯಾನೋವರ್‍ನ ಇಂಟರ್‍ನ್ಯಾಷನಲ್ ಆರ್ಥೊಡಾಂಟಿಕ್ ಸೊಸೈಟಿಯ ಉಪಾಧ್ಯಕ್ಷ ಪ್ರೊ.ಜಾನ್. ವಿ ರೈಮನ್ ಮತ್ತು ಆರ್ಥೊಡಾಂಟಿಸ್ಟ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜನ್ ಹಾಗೂ ಅಡ್ವಾನ್ಸ್‍ಡ್ ರಿಪೊಸಿಷನಿಂಗ್ ಅಪ್ಲೈಯನ್ಸ್‍ನ ಸಂಶೋದಕ ಪ್ರೊ.ಅಲಾದಿನ್ ಸಬಾಗ್ ಭೇಟಿ ನೀಡಿದರು. ಕೊಡಗು ದಂತ ಮಹಾ ವಿದ್ಯಾಲಯ(ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್) ನ 25 ನೇ ವರ್ಷದ ಸಂಭ್ರಮಾಚರಣೆಯ ನೆನಪಿಗಾಗಿ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‍ನ ರಜತ ಮಹೋತ್ಸವ ಉಪನ್ಯಾಸ ಸರಣಿಯ ಭಾಗವಾಗಿ ಕೊಡಗು ದಂತ ಮಹಾವಿದ್ಯಾಲಯ ಮತ್ತು ಇಂಟರ್ ನ್ಯಾಷನಲ್ ಆರ್ಥೋಡಾಂಟಿಕ್ ಸೊಸೈಟಿಯ ವೈಜ್ಞಾನಿಕ ಮತ್ತು ಭೋಧನ ವಿನಿಮಯ ಒಪ್ಪಂದದ ಅಡಿಯಲ್ಲಿ ಈ ಭೇಟಿ ಹಾಗೂ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಯುರೋಪಿಯನ್ ಅಸೋಸಿಯೇಶನ್ ಆಫ್ ಆರ್ಥೊಡಾಂಟಿಸ್ಟ್ಗೆ ಭಾರತವನ್ನು ಪ್ರತಿನಿಧಿಸುವ ರಾಯಭಾರಿಗಳಾಗಿ ನೇಮಕಗೊಂಡ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‍ನ ಡೀನ್ ಡಾ. ಸುನಿಲ್ ಮುದ್ದಯ್ಯ ಮತ್ತು ಡಾ. ಅನ್ಮೋಲ್…






