ಲೇಖಕ: admin

ಮಡಿಕೇರಿ ಅ.8 NEWS DESK : ಮಾಯಮುಡಿಯ ಕೋಲುಬಾಣೆ ಕಾವೇರಿ ಅಸೋಸಿಯೇಷನ್ ವತಿಯಿಂದ ವಿವಿಧ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು. ಕೋಲುಬಾಣೆ ಮೈದಾನದಲ್ಲಿ ನಡೆದ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕಾಳಪಂಡ ಟಿ.ಟಿಪ್ಪು ಬಿದ್ದಪ್ಪ ಅವರು, ಯುವ ಸಮೂಹ ಕ್ರೀಡೆಗೆ ಹೆಚ್ಚು ಮಹತ್ವ ನೀಡಬೇಕು. ಮೊಬೈಲ್ ಹವ್ಯಾಸದಿಂದಾಗಿ ಕ್ರೀಡೆ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಮಾರು ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಯುವಕರು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಒಳ್ಳೆಯ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಂಸ್ಥೆಯ ಹಿರಿಯ ಸದಸ್ಯ ಚೆಪ್ಪುಡಿರ ಕಿಟ್ಟು ಅಯ್ಯಪ್ಪ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಪರಸ್ಪರ ಸ್ನೇಹ, ಸೌಹಾರ್ಧತೆ ಬೆಳೆಯುತ್ತದೆ ಎಂದರು. ಕ್ರೀಡಾ ಕಾರ್ಯದರ್ಶಿ ಆಪಟ್ಟೀರ ಎಸ್.ಟಾಟು ಮೊಣಪ್ಪ, ಉಪಾಧ್ಯಕ್ಷ ನಾಮೇರ ರವಿ ದೇವಯ್ಯ, ಕಾರ್ಯದರ್ಶಿ ಎಸ್.ಎಸ್.ಸುರೇಶ್, ಕಾಳಪಂಡ ಸಿ.ನರೇಂದ್ರ, ಆಪಟ್ಟೀರ ಎ.ಬೋಪಣ್ಣ, ಎಸ್.ವಿ.ಮಂಜುನಾಥ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.…

Read More

ಮಡಿಕೇರಿ ಅ.8 NEWS DESK : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ.ಡಾ.ಶ್ರೀಧರ ಹೆಗಡೆ ಅವರಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ಹಿಂದಿ ಅನುವಾದ ಪುರಸ್ಕಾರ ಲಭಿಸಿದೆ. ರಾಜ್ಯ ಮಟ್ಟದ ಈ ಪುರಸ್ಕಾರವನ್ನು ಬೆಂಗಳೂರು ವಿಶ್ವ ವಿದ್ಯಾಲಯದ ಹಿಂದಿ ವಿಭಾಗ ನೀಡಿ ಗೌರವಿಸಿದೆ. ಪ್ರೊ.ಡಾ.ಶ್ರೀಧರ ಹೆಗಡೆ ಅವರು ಕುವೆಂಪು ಅವರ ನಾಟಕ “ಬಲಿದಾನ” ವನ್ನು ಹಿಂದಿ ಭಾಷೆಗೆ ಅನುವಾದ ಮಾಡಿದ್ದಾರೆ. ಈ ಕೃತಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ಹಿಂದಿ ಅನುವಾದ ಪುರಸ್ಕಾರ ಸಿಕ್ಕಿರುವುದರಿಂದ ಕನ್ನಡ ಮತ್ತು ಹಿಂದಿ ಭಾಷೆ ಬಾಂಧವ್ಯವೂ ಹೆಚ್ಚಿದಂತ್ತಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತರಾದ ಡಾ.ಶ್ರೀಧರ ಹೆಗಡೆ ಅವರು 22 ಕ್ಕಿಂತ ಹೆಚ್ಚು ಕೃತಿಗಳನ್ನು ಕನ್ನಡದಲ್ಲಿ ಮತ್ತು 15 ಕ್ಕಿಂತ ಹೆಚ್ಚು ಕೃತಿಗಳನ್ನು ಹಿಂದಿ ಭಾಷೆಯಲ್ಲಿ ರಚಿಸಿದ್ದಾರೆ. ಅಲ್ಲದೆ ಕನ್ನಡದಿಂದ ಹಿಂದಿ ಭಾಷೆಗೆ 10ಕ್ಕಿಂತ ಅಧಿಕ ಹಾಗೂ ಹಿಂದಿಯಿಂದ ಕನ್ನಡಕ್ಕೆ 5 ಕ್ಕಿಂತ ಹೆಚ್ಚು ಕೃತಿಗಳನ್ನು ಅನುವಾದಿಸಿ ಕನ್ನಡ ಮತ್ತು ಹಿಂದಿ ಸಾಹಿತ್ಯದ ಪರಿಚಯ ಮಾಡಿ…

Read More

ಮಡಿಕೇರಿ ಅ.8 NEWS DESK : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು 49ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಕೂಪದಿರ ಅಯ್ಯಪ್ಪ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದ್ದು, ಶ್ರೀ ಕೃಷ್ಣನ ಬಾಲಲೀಲೆ ಹಾಗೂ ಕಂಸವಧೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ದಿಂಡಿಗಲ್‍ನ ಕಳೆಯಗಂ ಲೈಟಿಂಗ್ ಬೋರ್ಡ್ ಅಳವ ಡಿಸಲಿದ್ದು, ಧ್ವನಿವರ್ಧಕ ಹಾಗೂ ಸ್ಟುಡಿಯೋ ಲೈಟಿಂಗ್ ವ್ಯವಸ್ಥೆಯನ್ನು ಬೆಂಗ ಳೂರಿನ ಪಿಎಸ್‍ಎಲ್ ಸಂಸ್ಥೆ ಒದಗಿಸಲಿದೆ. ಪ್ಲಾಟ್ ಫಾರಂ ನಿರ್ಮಾಣ ಹಾಗೂ ಟ್ರ್ಯಾಕ್ಟರ್ ಸೆಟ್ಟಿಂಗ್ಸ್‍ನ್ನು ಸಮಿತಿ ಸದಸ್ಯರೇ ಮಾಡಲಿದ್ದಾರೆ. 19 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಸಮಿತಿಯ ಆಲ್ವಿನ್, ರಾಕಿ ಮತ್ತು ಸದಸ್ಯರು ಕಲಾಕೃತಿ ಗಳನ್ನು ರಚಿಸಲಿದ್ದಾರೆ. ಕಲಾಕೃತಿಗಳಿಗೆ ಚಲನ – ವಲನವನ್ನು ಸಮಿತಿಯ ಪ್ರಸಾದ್ ಆಚಾರ್ಯ, ಮನೋಜ್ ತಂಡ ನೀಡಲಿದೆ. ಫೈರ್ ವರ್ಕ್ ಹಾಗೂ ಸ್ಪೆಷಲ್ ಎಫೆಕ್ಟನ್ನು ಬೆಂಗಳೂರಿನ ಆಲ್ಫಾ ಇವೆಂಟ್ ತಂಡ ನೀಡಲಿದೆ. ಒಟ್ಟು 25 ಲಕ್ಷ ವೆಚ್ಚದಲ್ಲಿ…

Read More

ಮಡಿಕೇರಿ ಅ.8 NEWS DESK : ಕರ್ನಾಟಕ ಲೋಕಾಯುಕ್ತ, ಕೊಡಗು ಜಿಲ್ಲೆ, ಮಡಿಕೇರಿಯ ಲೋಕಾಯುಕ್ತ ಅಧಿಕಾರಿಗಳು ಅ.9 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪೊನ್ನಂಪೇಟೆ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿ ವಿತರಿಸಿ, ಭರ್ತಿ ಮಾಡಿದ ಮತ್ತು ನೋಟರಿಯಿಂದ ಆಫಿಡೆವಿಟ್ ಮಾಡಿಸಿದ ಅರ್ಜಿ ಸ್ವೀಕರಿಸಲಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ದ ಸಾರ್ವಜನಿಕರು ದೂರುಗಳನ್ನು ನಿಗದಿತ ಪತ್ರದಲ್ಲಿ ನೀಡಬಹುದು. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದೆ. ಹೆಚ್ಚಿನ ವಿವರಗಳಿಗೆ ಮಡಿಕೇರಿ ಲೋಕಾಯುಕ್ತ ಪೊಲೀಸ್ ಕಚೇರಿ, ಗೌಳಿಬೀದಿ ಮಡಿಕೇರಿ ದೂ.ಸಂ.08272-295297 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.

Read More

ಮಡಿಕೇರಿ ಅ.8 NEWS DESK : ನಗರದ ಶ್ರೀ ಕೋದಂಡ ರಾಮ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ. 50ನೇ ವರ್ಷದ ಆಚರಣೆಯಲ್ಲಿ ಶ್ರೀ ರಾಮನಿಂದ ರಾವಣನ ಸಂಹಾರ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಎಸ್.ಕುಶಾಲ್ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‍ನ ಡೇವಿಡ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. 27 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಹಾಗೂ ಸಮಿತಿ ಸದಸ್ಯರು ಕಲಾಕೃತಿಗಳನ್ನು ರಚಿಸಲಿದ್ದಾರೆ. ಟೀಂ ಜೆವೈಸಿ ಕಲಾಕೃತಿಗಳಿಗೆ ಚಲನವಲನ ನೀಡಲಿದೆ. ಟ್ರ್ಯಾಕ್ಟರ್ ಸೆಟ್ಟಿಂಗ್ಸ್‍ನ್ನು ಸಮಿತಿಯ ಹೇಮರಾಜ್, ವಿವೇಕ್, ಮಂಜಿ, ರವೀಂದ್ರ ತಂಡದವರು ಮಾಡಲಿದ್ದಾರೆ. ಸೋಮವಾರಪೇಟೆಯ ಲೋಬೋ ಧ್ವನಿವರ್ಧಕ ಒದಗಿಸಲಿದ್ದು, ಮಡಿಕೇರಿಯ ಗೌತಮ್ ಮತ್ತು ಸಂದೇಶ್ ಸ್ಟುಡಿಯೋ ಲೈಟಿಂಗ್ ವ್ಯವಸ್ಥೆ ಮಾಡಲಿದ್ದಾರೆ. ಸಮಿತಿ ಸದಸ್ಯರೆ ಪ್ಲಾಟ್‍ಫಾರಂ ನಿರ್ಮಾಣ ಮಾಡಲಿದ್ದಾರೆ. 25 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಕಳೆದ ಬಾರಿ ಪ್ರಥಮ ಬಹುಮಾನ ಪಡೆದಿದ್ದು, ಈ ಬಾರಿಯೂ ಜನಾಕರ್ಷಣೆಯೊಂದಿಗೆ ಬಹುಮಾನಕ್ಕೆ ಪೈಪೋಟಿ…

Read More

ಮಡಿಕೇರಿ ಅ.8 NEWS DESK : ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಕೃಷಿ-ತೋಟಗಾರಿಕೆ ಮೇಳವು ಅ.18 ರಿಂದ 21 ರವರೆಗೆ ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಶಿವಮೊಗ್ಗದ ನವಿಲೆ ಕೃಷಿ ಮಹಾವಿದ್ಯಾಲಯದಲ್ಲಿ ನಡೆಯಲಿದೆ.

Read More

ಮಡಿಕೇರಿ ಅ.8 NEWS DESK : ನಗರದ ದೇಚೂರು ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ 106ನೇ ವರ್ಷದ ಉತ್ಸವ ಆಚರಣೆ ತಯಾರಿ ನಡೆಸುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಆರ್.ಪಿ.ಚಂದ್ರಶೇಖರ್ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ಕಾಳಿಂಗ ಮರ್ದನ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ದಿಂಡಿಗಲ್‍ನ ಜೇಮ್ಸ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದು, ಕೊಪ್ಪಳದ ಪದ್ಮ ಎಲೆಕ್ಟ್ರಿಕಲ್ಸ್‍ನವರು ಧ್ವನಿವರ್ಧಕ ಹಾಗೂ ಸ್ಟುಡಿಯೋ ಲೈಟ್ ವ್ಯವಸ್ಥೆ ಮಾಡಲಿದ್ದಾರೆ. 28 ಕಲಾ ಕೃತಿಗಳನ್ನು ಬಳಸಲಾಗುತ್ತಿದ್ದು, ಮಡಿಕೇರಿಯ ಆರ್.ಬಿ.ರವಿ ಕ್ರಿಯೇಷನ್ಸ್‍ರವರು ಕಲಾಕೃತಿಗಳನ್ನು ರಚಿಸಲಿದ್ದಾರೆ. ಪ್ಲಾಟ್‍ಫಾರಂ ನಿರ್ಮಾಣ, ಕಲಾಕೃತಿಗಳಿಗೆ ಚಲನವಲನ ವ್ಯವಸ್ಥೆಯನ್ನು ಮಡಿಕೇರಿಯ ಪುಣ್ಯ ಕ್ರಿಯೇಷನ್ಸ್‍ನ ಪ್ರಮೋದ್ ಮತ್ತು ತಂಡದವರು ಮಾಡಲಿದ್ದಾರೆ. ಟ್ರ್ಯಾಕ್ಟರ್ ಸೆಟ್ಟಿಂಗ್ಸ್‍ನ್ನು ಮಡಿಕೇರಿಯ ಗಣೇಶ್ ಬೆಳವಾಯಿ, ಕಿರಣ್, ಸೋಮ, ನಿತಿಶ್ ತಂಡ ಮಾಡಲಿದ್ದು, ಬೆಂಗಳೂರಿನ ಗನ್ ಅನಿಲ್ ಸ್ಪೆಷಲ್ ಎಫೆಕ್ಟ್ ಕಲ್ಪಿಸಲಿದ್ದಾರೆ. ಒಟ್ಟು 16 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಜನಾಕರ್ಷಣೆ ಪಡೆಯುವುದರ ಜೊತೆಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗುವುದು. ಮಂಗಳೂರಿನ ನಾಸಿಕ್ ಬ್ಯಾಂಡ್ ಮಂಟಪವನ್ನು…

Read More

ಮಡಿಕೇರಿ ಅ.8 NEWS DESK : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‍ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‍ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಬ್ಯೂಟಿ ಪಾರ್ಲರ್ ಕುರಿತ 30 ದಿನಗಳ ಉಚಿತ ತರಬೇತಿಯು ನ.5 ರಿಂದ ಪ್ರಾರಂಭವಾಗಲಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‍ನ್ನು ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಅ.18 ಕೊನೆಯ ದಿನವಾಗಿದೆ. ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ರುಡ್‍ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ,…

Read More

ಮಡಿಕೇರಿ NEWS DESK ಅ.8 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀದಂಡಿನ ಮಾರಿಯಮ್ಮ ದೇವಿಗೆ ದಸರಾದ ಆರನೇ ದಿನವಾದ ಇಂದು ಮಹಾಲಕ್ಷ್ಮಿ ಅಲಂಕಾರ ಮಾಡಲಾಯಿತು. ನೂರಾರು ಭಕ್ತರು ಪೂಜೆ ಸಲ್ಲಿಸಿ ವಿಶೇಷ ಅಲಂಕಾರವನ್ನು ವೀಕ್ಷಿಸಿದರು. ನವರಾತ್ರಿಯ ಪ್ರಯುಕ್ತ ಶ್ರೀದಂಡಿನ ಮಾರಿಯಮ್ಮ ದೇವಾಲಯದಲ್ಲಿ ಪ್ರತಿದಿನ ವಿಶೇಷ ಅಲಂಕಾರ ಸೇವೆ ಮತ್ತು ವಿಶೇಷ ಪೂಜೆ ನಡೆಯುತ್ತಿದೆ. ಅ.9 ರಂದು ಶಾರದ ದೇವಿಯ ಅಲಂಕಾರ ನಡೆಯಲಿದೆ.

Read More

ಮಡಿಕೇರಿ ಅ.8 NEWS DESK : ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಮಡಿಕೇರಿ ದಸರಾ ಸಮಿತಿ ಹಾಗೂ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಗಾನ ಸುಧೆಯೊಂದಿಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸೋನಿ ಟಿ.ವಿ.ರಿಯಾಲಿಟಿ ಶೋ, ಸೂಪರ್ ಸ್ಟಾರ್ ಸಿಂಗರ್ ಪ್ರಶಸ್ತಿ ವಿಜೇತ ಅವಿರ್ಭವ್ ಅವರ ಗಾನ ಸುಧೆ ಎಲ್ಲರ ಗಮನ ಸೆಳೆಯಿತು. ಕೊಡಗು ಪತ್ರಕರ್ತರ ಸಂಘದ ಸದಸ್ಯರಿಂದ ಸಂಗೀತ ರಸಮಂಜರಿ, ಕುಶಾಲನಗರದ ಏಂಜಲ್ ವಿಂಗ್ಸ್ ತಂಡ, ಮಡಿಕೇರಿ ನಾಟ್ಯನಿಕೇತನ, ಕಿಂಗ್ಸ್ ಆಫ್ ಕೂರ್ಗ್ ತಂಡ ಸೇರಿದಂತೆ ವಿವಿಧ ತಂಡದಿಂದ ಸಾಂಸ್ಕೃತಿಕ ವೈವಿದ್ಯಮಯ ಕಾರ್ಯಕ್ರಮ ನಡೆಯಿತು.

Read More