ವಿರಾಜಪೇಟೆ ಅ.4 NEWS DESK : ಹುದಿಕೇರಿಯ ಜನತಾ ಪ್ರೌಢಶಾಲೆಯಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ 14-17 ರ ವಯೋಮಿತಿಯ ಕ್ರೀಡಾಕೂಟದಲ್ಲಿ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆ ವಿದ್ಯಾರ್ಥಿಗಳು 4*100 ರಿಲೇ ಓಟದಲ್ಲಿ ಸ್ಪರ್ಧಿಸಿ ದ್ವಿತೀಯ ಸ್ಥಾನವನ್ನು ಗಳಿಸಿದರು. ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಾದ ಲೋಹಿತ್ ವಿ, ಕಾರ್ತಿಕ್ ಸಿ,ಆರ್, ಲಿಶನ್ ಕೆ.ಪಿ ಹಾಗೂ ಪ್ರಥನ್ ಎಂ., ಹಾಗೆಯೇ ಬಾಲಕರ ವಿಭಾಗದ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಮತ್ತು 200ಮೀ, 100 ಮೀಟರ್ ಓಟದಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನವನ್ನು ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್ ಪಾಂಡೆ, ಉಪ ಪ್ರಾಂಶುಪಾಲರಾದ ದೀಪ ಮೌಳ್, ದೈಹಿಕ ಶಿಕ್ಷಣ ಶಿಕ್ಷರಾದ ಗಂಗಾಧರ ಮಾಗಳ್ದ, ತಂಡದ ವ್ಯವಸ್ಥಾಪಕರಾದ ಎಂ.ಕೆ.ಪುರಂದರ್ ಹಾಗೂ ಶಾಲಾ ಸಿಬ್ಬಂದಿಗಳು ಇದ್ದರು.
ಲೇಖಕ: admin
ಮಡಿಕೇರಿ ಅ.4 NEWS DESK : ಎನ್‌ಎಸ್‌ಯುಐ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಭಾರತದ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ದಿನಾಚರಣೆ ಎಂಬ ವಿಷಯದ ಕುರಿತು ನಡೆದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಥಮ ಬಹುಮಾನವನ್ನು ಮಡಿಕೇರಿಯ ಸಂತ ಜೋಸೆಫ್ ಕಾಲೇಜಿನ ವಿದ್ಯಾರ್ಥಿನಿ ಕೆ.ಜಿ.ಸಾಹಿತ್ಯ ಪಡೆದುಕೊಂಡರು. ಸೋಮವಾರಪೇಟೆಯ ಸಂತ ಮೈಕಲ್ ಕಾಲೇಜಿನ ವಿದ್ಯಾರ್ಥಿನಿ ಅಹಲ್ಯ ಹೆಚ್.ಶೆಟ್ಟಿ ದ್ವಿತೀಯ, ಕೊಟ್ಟಮುಡಿ ಮರ್ಕಜುಲ್ ಹಿದಾಯ ಕಾಲೇಜಿನ ಸಹದತ್ ಇಸ್ಮಾಯಿಲ್ ತೃತೀಯ ಸ್ಥಾನ ಪಡೆದುಕೊಂಡರು. ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳಿ ಬಹುಮಾನ ವಿತರಿಸಲಾಯಿತು. ಲೇಖಕ ಹಾಗೂ ಸಾಹಿತಿ ಸಾಹಿತ್ಯ ನಂದಾವರ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಅಬ್ದುಲ್ ರಾಶಿದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತಾಪ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಕಾಲೇಜಿನ ಪ್ರಾಂಶುಪಾಲರಾದ ಜೋಸೆಫ್, ಕಾಲೇಜಿನ ಪ್ರಾಂಶುಪಾಲರಾದ ನೂರಾನಿ ಉಸ್ತಾದ್, ವಿವಿಧ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
ಮಡಿಕೇರಿ NEWS DESK ಅ.4 : ಕುಶಾಲನಗರದ ಕೂಡ್ಲೂರು ಬಸವೇಶ್ವರ ಬಡಾವಣೆಯಲ್ಲಿ ಕಲಹ ನಡೆದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕೊಡಲಿಯಿಂದ ನಡೆಸಿದ ಹಲ್ಲೆಯಿಂದ ಬಸವೇಶ್ವರ ಬಡಾವಣೆಯ ನಿವಾಸಿ ಜೋಸೆಫ್ (55) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದು, ಸುಂದರನಗರ ನಿವಾಸಿ ವಸಂತ (46) ಅವರು ಚಿಕಿತ್ಸೆ ಫಲಕಾರಿಯಾಗದೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರಕರಣದ ಆರೋಪಿ ಬಸವೇಶ್ವರ ಬಡಾವಣೆಯ ನಿವಾಸಿ ಗಿರೀಶ್ (29) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವೆಲ್ಡಿಂಗ್ ವೃತ್ತಿ ಮಾಡುತ್ತಿದ್ದ ಜೋಸೆಫ್ ಹಾಗೂ ವಸಂತ ಅವರು ಮನೆಯ ಬಳಿ ಇದ್ದಾಗ ಗಿರೀಶ್ ಬಂದು ಈ ಹಿಂದೆ ಮಾಡಿದ ಕೆಲಸದ ಬಾಕಿ ಹಣ ನೀಡುವಂತೆ ಜೋಸೆಫ್ ಅವರ ಬಳಿ ಕೇಳಿದ್ದಾನೆ. ಯಾವುದೇ ಹಣ ನೀಡಲು ಬಾಕಿ ಇರುವುದಿಲ್ಲ ಎಂದು ಜೋಸೆಫ್ ಅವರು ಹೇಳಿದಾಗ ಕುಪಿತಗೊಂಡ ಗಿರೀಶ್ ತನ್ನ ಮನೆಗೆ ಹೋಗಿ ಕೊಡಲಿ ತಂದು ಜೋಸೆಫ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ತಡೆಯಲು ಹೋದ ವಸಂತ…
ಮಡಿಕೇರಿ ಅ.4 NEWS DESK : ಕೊಡಗಿನ ಕ್ರೀಡೆಯೆಂದರೆ ಹಾಕಿ ಆಟ ಅದರಲ್ಲೂ ಹಾಕಿ ಆಡುತ್ತಲೇ ಜೀವ ತ್ಯಜಿಸಿದ ಆಟಗಾರನೇ ಚೌರೀರ ಹರಿ ಅಚ್ಚಯ್ಯ. ಚೌರೀರ ಅಪ್ಪಯ್ಯ ಹಾಗೂ ದೇಚವ್ವ (ತಾಮನೆ ಕಾಡುಮಂಡ) ದಂಪತಿಯರ ಪುತ್ರನಾಗಿ ಹರಿ ಅವರು ಜನವರಿ 30, 1953 ರಂದು ಮಡಿಕೇರಿಯಲ್ಲಿ ಜನಿಸಿದರು. ಶಿಕ್ಷಣ :: ಹರಿ ಅವರು ಪ್ರಾಥಮಿಕ ಶಿಕ್ಷಣವನ್ನು ಹಾಗು ಪ್ರೌಢ ಶಿಕ್ಷಣವನ್ನು ಮಡಿಕೇರಿಯಲ್ಲಿ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಪಡೆದರು. ಬಾಲ್ಯದಿಂದಲೇ ಹಾಕಿಯ ಓಡನಾಟ :: ಬಾಲ್ಯದಿಂದಲೇ ಹಾಕಿ ಆಟದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ಹರಿಪಾಲ್ ಅವರು ತಮಗಿಂತ ಹಿರಿಯ ಆಟಗಾರರ ಜೊತೆ ಹಾಕಿ ಆಡುತ್ತಿದ್ದರು. ತಮ್ಮ 10- 12 ನೇ ವಯಸ್ಸಿನಲ್ಲಿ ಗೋಲ್ ಕೀಪರ್ ಆಗಿ ಆಡುತ್ತಿದ್ದರು. ನಂತರ ಕಾಲೇಜು ದಿನಗಳಲ್ಲಿ ಫುಲ್ ಬ್ಯಾಕ್ ಆಗಿ ಆಡಲು ಪ್ರಾರಂಭಿಸಿದರು. ಸ್ನೇಹಿತರ ಅನಿಸಿಕೆ :: ಕೋಟೆರ ಮುದ್ದಯ್ಯ ಹಾಗೂ ಹರಿಪಾಲ್ ಅವರಿಬ್ಬರು ಕಾಲೇಜು ಸಹಪಾಠಿಗಳಾಗಿ, ಮೈಸೂರು ವಿಶ್ವವಿದ್ಯಾನಿಲಯದ ಪರ…
ನಾಪೋಕ್ಲು ಅ.4 NEWS DESK : ಅಂಕುರ್ ಪಬ್ಲಿಕ್ ಶಾಲೆಯ ಲಿಯೋ ಕ್ಲಬ್ ವತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಲಿಯೋ ಕ್ಲಬ್ ಸದಸ್ಯರು ಶಾಲಾ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಗೊಳಿಸಿ, ನಾಪೋಕ್ಲು – ಭಾಗಮಂಡಲ ಮುಖ್ಯ ರಸ್ತೆ ಬಸ್ ತಂಗುದಾಣ ಸುತ್ತಮುತ್ತ ಇದ್ದ ಪ್ಲಾಸ್ಟಿಕ್ ಗಳನ್ನು ಸಂಗ್ರಹಿಸಿ ಪರಿಸರವನ್ನು ಶುಚಿಗೊಳಿಸಿದರು. ಗಾಂಧೀಜಿಯವರ ಚಿಂತನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಲಿಯೋ ಕ್ಲಬ್ ಸದಸ್ಯರು ಕಾರ್ಯ ನಿರ್ವಹಿಸಿದ್ದು, ಕಾರ್ಯಕ್ರಮದಲ್ಲಿ ಅಂಕುರ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಕೇಟೋಳಿರ ರತ್ನ ಚರ್ಮಣ್ಣ ಶಿಕ್ಷಕ ಬೃಂದ ಹಾಜರಿದ್ದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಅ.4 NEWS DESK : ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ, ಜನರ ಆರೋಗ್ಯ ಮತ್ತು ಮನಸ್ಸು ಸ್ವಚ್ಛವಾಗಿರುತ್ತದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಸ್ವಚ್ಛತೆಯೇ ಸೇವೆ ಎಂಬ ಘೋಷ ವಾಕ್ಯದೊಂದಿಗೆ ವಿರಾಜಪೇಟೆ ನಗರಾದ್ಯಂತ ಸಂಚರಿಸಿದ ಶಾಸಕರು ತಾವೇ ಸ್ವಚ್ಛತಾ ಕಾರ್ಯ ಕೈಗೊಂಡು ನಗರವಾಸಿಗಳಿಗೆ ಸ್ವಚ್ಛತೆಯ ಸಂದೇಶವನ್ನು ಸಾರಿದರು. ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪುರಸಭೆಯ ನೂತನ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಕಾಂಗ್ರೆಸ್ ಪಕ್ಷದ ಪುರಸಭೆ ಕೌನ್ಸಿಲರ್’ಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಹಾಜರಿದ್ದರು.
ವಿರಾಜಪೇಟೆ ಅ.4 NEWS DESK : ಪೆಗ್ಗರಿಕಾಡು, ಬಿಟ್ಟಂಗಾಲ, ವಿರಾಜಪೇಟೆಯ ನವೋದಯ ಯುವಕ ಸಂಘದ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಟಿ.ಪಿ.ಸುಬ್ಬಯ್ಯ, ಉಪಾಧ್ಯಕ್ಷರಾಗಿ ಹೆಚ್.ಕೆ.ಸುಮಂತ್, ಖಜಾಂಚಿಯಾಗಿ ಟಿ.ಎಮ್.ಸುದೀಶ್, ಕಾರ್ಯದರ್ಶಿಯಾಗಿ ಹೆಚ್.ಎ.ಶಿವಕುಮಾರ್, ಸಲಹೆಗಾರರಾಗಿ ವಿನೋದ್ ಪಿ.ಎನ್, ಅಜಿತ್ ಟಿ.ವಿ. ಮತ್ತು ಬಿ.ಎಂ.ದಿನೇಶ್ ಅವರನ್ನು ಆಯ್ಕೆ ಮಾಡಲಾಯಿತು.
ನಾಪೋಕ್ಲು ಅ.4 NEWS DESK : ಅಜ್ಜಿಮುಟ್ಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಗಾಂಧಿ ಜಯಂತಿ ಆಚರಿಸಲಾಯತು. ಗಾಂಧಿ ಜಯಂತಿ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ ಮತ್ತು ಸಿಹಿಯನ್ನು ಹಂಚಿ ದಿನದ ಮಹತ್ವದ ಬಗ್ಗೆ ವಿವರಿಸಿದರು. ಈ ಸಂದರ್ಭ ಮುಖ್ಯ ಶಿಕ್ಷಕಿ ಪುಷ್ಪವತಿ, ಶೌರ್ಯ ಮಾಸ್ಟರ್ ದಿವ್ಯಮಂದಪ್ಪ ಬಾಳೆಯಡ, ಶೌರ್ಯ ಸ್ವಯಂ ಸೇವಕರದ ದಿಲಿಶ್, ಶಂಕರ್, ಮಾಯಿಲಪ್ಪ, ಸುನೀತಾ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಹಾಜರಿದ್ದರು. ವರದಿ : ದುಗ್ಗಳ ಸದಾನಂದ.
ನಾಪೋಕ್ಲು ಅ.4 NEWS DESK : ಕೊಡಗು ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ವಿರಾಜಪೇಟೆಯ ಆಂಜನೇಯ ದೇವಾಲಯದ ಸಮೀಪದ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪಿ.ಎನ್.ಹರಿಶಂಕರ್ ಪ್ರಸಾದ್, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಂಡು ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ಅಧಿಕ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಸಂಘದ ಶ್ರೇಯೋಭಿವೃದ್ಧಿಗೆ ಸಲಹೆ-ಸೂಚನೆಗಳನ್ನು ನೀಡಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಎಂ.ಎಸ್.ಸುಧೀರ್ ಕುಮಾರ್, ನಿರ್ದೇಶಕರಾದ ಎನ್.ನಾಗರಾಜ್, ಎ.ವಿ.ಮಂಜುನಾಥ್, ಎಸ್.ಯು.ಪಾರ್ವತಿ, ಎಂ.ಜಿ.ರಾಮಪ್ರಸಾದ್, ಕೆ.ಆರ್.ರಂಜಿತ್, ಎನ್.ಎಸ್.ಉದಯ ಶಂಕರ್, ಎಸ್.ಎಸ್.ಮೀನಾಕ್ಷಿ, ಸಿ.ಎಸ್.ಸುರೇಶ್, ಕೆ.ಎಸ್.ಮಂಜುನಾಥ್, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ರಾಮು ಮೂಗೂರು, ಮಾಜಿ ಅಧ್ಯಕ್ಷೆ ಗೀತಾ ಗಿರೀಶ್ ಹಾಗೂ ಇನ್ನಿತರ ನಿರ್ದೇಶಕರುಗಳು ಹಾಜರಿದ್ದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಅ.4 NEWS DESK : ಮಡಿಕೇರಿ ದಸರಾ ಜನೋತ್ಸವ ಅಂಗವಾಗಿನ ಸಾಂಸ್ಕೃತಿಕ ಕಾಯ೯ಕ್ರಮಗಳಿಗೆ ಇಂದು (ಅ.4) ಸಂಜೆ 6 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಚಾಲನೆ ದೊರಕಲಿದ್ದು, ಜಿಲ್ಲಾಧಿಕಾರಿ ಮತ್ತು ಮಡಿಕೇರಿ ದಸರಾ ಸಮಿತಿ ಅಧ್ಯಕ್ಷ ವೆಂಕಟ ರಾಜಾ ಕಾಯ೯ಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಎಂದು ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ.ತಿಳಿಸಿದ್ದಾರೆ. ಉದ್ಘಾಟನಾ ಕಾಯ೯ಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಸುಜಾಕುಶಾಲಪ್ಪ, ಶಾಸಕರುಗಳಾದ ಬೋಜೇಗೋಡ, ಧನಂಜಯ ಸಜಿ೯, ಮಾಜಿ ಶಾಸಕರಾದ ಕೆ ಜಿ ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಎಂ.ಪಿ.ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಮುಖ್ಯಕಾಯ೯ನಿವ೯ಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ನಗರಸಭೆ ಪೌರಾಯುಕ್ತ ರಮೇಶ್, ದಸರಾ ಸಮಿತಿ ಕಾಯಾ೯ಧ್ಯಕ್ಷ ಪ್ರಕಾಶ್ ಆಚಾಯ೯, ಪ್ರಧಾನ ಕಾಯ೯ದಶಿ೯ ರಾಜೇಶ್ ಬಿ.ವೈ, ಖಜಾಂಚಿ ಅರುಣ್ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇ೯ಶಕ ಕುಮಾರ್, ವಾತಾ೯ಧಿಕಾರಿ ಚಿನ್ನಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಕಾವ್ಯಶ್ರೀ ಕಪಿಲ್ ತಂಡದಿಂದ ನೖತ್ಯ, ವಿರಾಜಪೇಟೆಯ ಕಾವೇರಿ ಅಯ್ಯಪ್ಪ ತಂಡದಿಂದ ಹಾಡುಗಾರಿಕೆ ಎ ಕ್ರಿಯೇಟಿವ್…






