ಲೇಖಕ: admin

ಕುಶಾಲನಗರ NEWS DESK ಅ.2 : ಯುವ ಪೀಳಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣದ ಕನಸು ನನಸಾಗಿಸಬೇಕಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕೊಡಗು ಜಿಲ್ಲಾ ಸದಸ್ಯರಾದ ಎಂ.ಎನ್.ಚಂದ್ರಮೋಹನ್ ಕರೆ ನೀಡಿದ್ದಾರೆ. ಕುಶಾಲನಗರ ಮೂಕಾಂಬಿಕಾ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಡ್ಡೆ ಹೊಸೂರು ವಲಯ ಮತ್ತು ವಿದ್ಯಾ ಸಂಸ್ಥೆ ಸಹಯೋಗದೊಂದಿಗೆ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ಪ್ರತಿಯೊಬ್ಬರು ಸಮಾಜದಲ್ಲಿ ಇತರರಿಗೆ ಮಾರ್ಗದರ್ಶನ ನೀಡುವಂತಹ  ಪ್ರಜೆಗಳಾಗಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸೂದನ ಗೋಪಾಲ್ ಅವರು ಮಾತನಾಡಿ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ನಿರಂತರ ಚಟುವಟಿಕೆಗಳು ಕಾರ್ಯಕ್ರಮಗಳ ಮೂಲಕ ಮಾತ್ರ ಸ್ವಾಸ್ಥ್ಯ ಸಮಾಜ ಕಾಣಲು ಸಾಧ್ಯ ಎಂದರು. ಈ ಸಂದರ್ಭ ಗುಡ್ಡೆ ಹೊಸೂರು ವಲಯದ ಮೇಲ್ವಿಚಾರಕರಾದ ಸತೀಶ್, ಮುಳ್ಳುಸೋಗೆ ವ್ಯಾಪ್ತಿಯ ಒಕ್ಕೂಟದ ಅಧ್ಯಕ್ಷರಾದ  ವನಿತ,…

Read More

ಮಡಿಕೇರಿ NEWS DESK ಅ.2 : ಅಂತರಾಷ್ಟ್ರೀಯ ಮಾದಕ ವಸ್ತು ದಂಧೆ ಪ್ರಕರಣವನ್ನು ಭೇದಿಸಿರುವ ಕೊಡಗು ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿ, ಕೋಟ್ಯಾಂತರ ಮೌಲ್ಯದ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಕೊಡಗು ಜಿಲ್ಲೆಯ ಹೆಗ್ಗಳ ಗ್ರಾಮದ ನಾಸಿರುದ್ದೀನ್ ಎಂ.ಯು(26), ಎಡಪಾಲ ಗ್ರಾಮದ ಯಾಹ್ಯಾ ಸಿ.ಹೆಚ್(28), ಕುಂಜಿಲ ಗ್ರಾಮದ ಅಕನಾಸ್(26), ಬೇಟೋಳಿ ಗ್ರಾಮದ ವಾಜಿದ್(26), ಕೇರಳದ ಕಣ್ಣೂರು ಗ್ರಾಮದ ರಿಯಾಜ್(44), ಕಾಸರಗೋಡಿನ ಮೆಹರೂಫ್(37) ಹಾಗೂ ರವೂಫ್(28) ಬಂಧಿತ ಆರೋಪಿಗಳು. ಇವರ ಬಳಿಯಿಂದ ಸುಮಾರು ರೂ.3 ಕೋಟಿ ಬೆಲೆ ಬಾಳುವ 3.31 ಕೆ.ಜಿ ಹೈಡ್ರೋ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಹೈಡ್ರೋ ಗಾಂಜಾವನ್ನು ವಿಮಾನದ ಮೂಲಕ ಭಾರತ ಮತ್ತು ದುಬೈಗೆ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಅಂತರ ರಾಷ್ಟ್ರೀಯ ವ್ಯವಸ್ಥಿತ ಜಾಲವೊಂದನ್ನು ಕೊಡಗು ಪೊಲೀಸ್ ಅಧಿಕಾರಿಗಳು ಪತ್ತೆ ಹಚ್ಚಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ಹೆಮ್ಮೆ ವ್ಯಕ್ತಪಡಿಸಿದರು. ಥೈಲ್ಯಾಂಡ್ ದೇಶದ ಬ್ಯಾಂಕಾಕ್ ನಗರದಲ್ಲಿ ಕೆಫೆ ಇಟ್ಟುಕೊಂಡಿರುವ ಕೇರಳ…

Read More

ಕುಶಾಲನಗರ ಅ.2 NEWS DESK :  ಶ್ರೀ ಶಿರಡಿ ಸಾಯಿ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರ ಸಾಯಿ ಬಾಬಾ ದೇವಾಲಯದಲ್ಲಿ ಅ.3 ರಿಂದ 12 ರ ವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ಟ್ರಸ್ಟ್ ಅಧ್ಯಕ್ಷ ಧರೇಶ್ ಬಾಬು ತಿಳಿಸಿದ್ದಾರೆ. ಕುಶಾಲನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು 3 ರಂದು ದೇವಾಲಯದಲ್ಲಿ ಅಲಂಕಾರ ಪೂಜಾ ಕಾರ್ಯಕ್ರಮ, 4 ರಂದು ಗಾಯತ್ರಿ ದೇವಿ ಪೂಜಾ ಕಾರ್ಯಕ್ರಮ, 5 ರಂದು ಅನ್ನಪೂರ್ಣ ದೇವಿ, 6 ರಂದು ಲಲಿತ ತ್ರಿಪುರ ಸುಂದರಿ ದೇವಿ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಅ.7 ರಂದು ಮಹಾ ಚಂಡಿಕಾ ದೇವಿ ಪೂಜಾ ಕಾರ್ಯಕ್ರಮ, 8 ರಂದು ಮಹಾಲಕ್ಷ್ಮಿ ದೇವಿ ವಿಶೇಷ ಪೂಜಾ ಕಾರ್ಯಕ್ರಮ, ಅ.9 ರಂದು ಸರಸ್ವತಿ ದೇವಿ ಆರಾಧನೆ 10 ರಂದು ದುರ್ಗಾದೇವಿ ಅಲಂಕಾರ ಪೂಜೆ ಮತ್ತು ನಾಗದೇವರ ಹಾಗೂ ಸುಬ್ರಹ್ಮಣ್ಯೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ.11 ರಂದು ಮಹಿಷಾಸುರ…

Read More

ಸಿದ್ದಾಪುರ ಅ.2 NEWS DESK : ಮಾಲ್ದಾರೆಯ ಜನಪರ ಸಂಘಟನೆ ವತಿಯಿಂದ ಗುಡ್ಲೂರು ಗ್ರಾಮದಲ್ಲಿ 155ನೇ ಗಾಂಧಿ ಜಯಂತಿಯನ್ನ ಅಚರಿಸಲಾಯಿತು. ಗ್ರಾಮದ ನಿಲ್ದಾಣ ಬಳಿ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಮಾಜ ಸೇವಕ ಬಾಲನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಾತ್ಮ ಗಾಂಧಿಯ ಜೀವನ ಸಂದೇಶವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಜನಪರ ಸಂಘದ ಅಧ್ಯಕ್ಷ ಭಾವ ಮಾಲ್ದಾರೆ ಮಾತನಾಡಿ, ದೇಶದಲ್ಲಿ ಪ್ರತಿಯೊಬ್ಬರು ಸ್ವತಂತ್ರವಾಗಿ ಸಂವಿಧಾನದ ಆಶಯದಂತೆ ಬದುಕಲು ಮಹಾತ್ಮ ಗಾಂಧೀಜಿಯವರ ತ್ಯಾಗ ಪರಿಶ್ರಮ ಕಾರಣವಾಗಿದೆ. ಶಾಂತಿಯುತವಾಗಿ ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹಾತ್ಮ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಂಡು, ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿಶ್ವದಾದ್ಯಂತ ಗಾಂಧಿ ಜಯಂತಿಯನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ರೂಪೇಶ್, ನಿವೃತ್ತ ಬ್ಯಾಂಕ್ ಅಧಿಕಾರಿ ನಾರಾಯಣ, ಪ್ರಮುಖರಾದ ಪ್ರೇಮ, ಮೂರ್ತಿ, ಚೋಳರಾಜ್, ಅಗಸ್ಟಿನ್, ಪ್ರಭಾಕರ್, ಎರ್ಮು, ರಂಜು, ಶಿಜು…

Read More

ಮಡಿಕೇರಿ ಅ.2 NEWS DESK : ತಾಜುಲ್ ಉಲಮಾ ಉಳ್ಳಾಲ ತಂಙಲ್(ಖ.ಸಿ)ರವರ 11ನೇ ಉರೂಸ್ ಕಾರ್ಯಕ್ರಮ ಯಶಸ್ವಿಗೊಳಿಸಲು ಕೊಡಗು ಜಿಲ್ಲಾ ಮದನೀಸ್ ಅಸ್ಸೋಸಿಯೇಷನ್  ಕರೆ  ನೀಡಿದೆ. 6 ದಶಕಗಳ ಕಾಲ ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿ ಪಡೆದ ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ)ರವರು ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಉಳ್ಳಾಲವನ್ನು ಕೇಂದ್ರವಾಗಿಸಿಕೊಂಡು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ರಂಗಗಳಲ್ಲಿ ಮಹೋನ್ನತ ಸೇವೆಗಳನ್ನು ಮಾಡುವುದರೊಂದಿಗೆ ಸುನ್ನೀ ಜಗತ್ತಿಗೆ ಆಧ್ಯಾತ್ಮಿಕ ಬೆಳಕನ್ನು ಹಚ್ಚಿದ, 4 ಸಾವಿರಕ್ಕೂ ಅಧಿಕ ಉನ್ನತ ಉಲಮಾಗಳನ್ನು ಸಮುದಾಯಕ್ಕೆ, ಪವಿತ್ರ ಧರ್ಮಕ್ಕೆ ಸಮರ್ಪಿಸಿದ, ನೂರಾರು ಮೊಹಲ್ಲಾಗಳ ಖಾಝಿಯಾಗಿದ್ದ,  ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಸುಧೀರ್ಘಕಾಲದ ಅಧ್ಯಕ್ಷರು, ಅಖಿಲ ಭಾರತ  ಉಲಮಾ ಒಕ್ಕೂಟದ ನಿರ್ದೇಶಕರೂ ಆಗಿದ್ದ ಶೈಖುನಾ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ -ಬುಖಾರಿ(ಖ.ಸಿ)ರವರ 11ನೇ ಉರೂಸ್ ಇದೇ ಅಕ್ಟೋಬರ್ 4, 5, 6 ದಿನಾಂಕಗಳಲ್ಲಿ ಕೇರಳದ ಪಯ್ಯನ್ನೂರಿನ ಎಟ್ಟಿಕುಳಂನಲ್ಲಿ ನಡೆಯಲಿದೆ. ಈ ಉರೂಸ್ ನಲ್ಲಿ ಕರ್ನಾಟಕ ಹಾಗೂ ಕೇರಳ…

Read More

ಮಡಿಕೇರಿ ಅ.2 NEWS DESK : ವಿಶ್ವ ಹಿಂದೂ ಪರಿಷದ್ ಧರ್ಮ ಪ್ರಸಾರ ವಿಭಾಗದ ವತಿಯಿಂದ ಹಿಂದೂ ಸಮಾಜದ ದೇವಾಲಯಗಳು ಹಾಗೂ ಪೂಜಾ ಮಂದಿರಗಳ ಮೂಲಕ ಸಮಾಜದಲ್ಲಿ ಏಕತೆ ಮತ್ತು ಸನಾತನ ಧರ್ಮ ವಿರೋಧಿ ಚಟುವಟಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಒಂದು ದಿನದ ಅರ್ಚಕರ ಚಿಂತನಾ ಬೈಠಕ್ ಸಭೆ ನಡೆಯಿತು. ವಿರಾಜಪೇಟೆಯ ಕಾಕೋಟು ಪರಂಬುವಿನ ಶ್ರೀ ಕಾಳಭೈರವ ದೇವಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರೀಯ ಧರ್ಮ ಪ್ರಸಾರದ ಪ್ರಮುಖ ಸೂರ್ಯನಾರಾಯಣ ಅವರು ಬೌದ್ಧಿಕ್ ಮೂಲಕ ಜಾಗೃತಿ ಸಂದೇಶ ನೀಡಿದರು. ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಚಿ.ನಾ.ಸೋಮೇಶ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಜಿಲ್ಲಾ ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಸಹ ಕಾರ್ಯದರ್ಶಿ ಯತೀಶ್ ನಂಜಪ್ಪ ವಂದಿಸಿದರು. ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ್ ಪರಿಷದ್ ಗೀತೆಯನ್ನು ಪ್ರಸ್ತುತ ಪಡಿಸಿದರು. ಜಿಲ್ಲಾ ಮಠ ಮಂದಿರ ಪ್ರಮುಖ್ ಡಾ.ಮಹಾಭಲೇಶ್ವರ ಭಟ್, ಶ್ರೀಕಾಳಭೈರವ ದೇವಾಲಯದ…

Read More

ಮಡಿಕೇರಿ ಅ.2 NEWS DESK : ತಾಳತ್ತಮನೆಯ ಶ್ರೀ ದುರ್ಗಾಭಗವತಿ ದೇವಾಲಯದಲ್ಲಿ ನವರಾತ್ರಿಯ ಅಂಗವಾಗಿ ಅ.3 ರಿಂದ ಅ.12ರ ವರೆಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ. ಭಕ್ತಾಧಿಗಳು ಬೆಳಿಗ್ಗೆ 9 ಹಾಜರಿದ್ದು, ಅಲಂಕಾರ ಪೂಜಾ ಸೇವೆಯನ್ನು ಮಾಡಿಸಬಹುದಾಗಿ ದೇವಾಲಯದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 9449476138, 9448303653, 9449679460, 9449933457 ಸಂಪರ್ಕಿಸಬಹುದಾಗಿದೆ.

Read More

ಮಡಿಕೇರಿ ಅ.2 NEWS DESK : ಮಡಿಕೇರಿ ದಸರಾದಲ್ಲಿ ಈ ವಷ೯ದಿಂದ ಕಾಫಿ ದಸರಾ ಎಂಬ ವಿನೂತನ ಕಾಯ೯ಕ್ರಮವನ್ನು ಜಾರಿಗೊಳಿಸಲಾಗುತ್ತಿದ್ದು, ಅ.6 ಮತ್ತು 7 ರಂದು ಆಯೋಜಿತ ಕಾಫಿ ದಸರಾದಲ್ಲಿ ಕಾಫಿ ಮತ್ತು ಇತರ ಕೃಷಿಗೆ ಸಂಬಂಧಿಸಿದ ಅನೇಕ ಮಾಹಿತಿ ಕೃಷಿಕರಿಗೆ ದೊರಕಲಿದೆ. ಅಲ್ಲದೆ ಜಿಲ್ಲೆಯ 7 ಮಂದಿ ಸಾಧಕ ಕೃಷಿಕರನ್ನೂ ಕಾಫಿ ದಸರಾ ಸಂದಭ೯ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ. ನಗರದಲ್ಲಿ ಕಾಫಿ ದಸರಾ ಸಂಬಂಧಿತ ಪೂವ೯ಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಡಾ.ಮಂಥರ್ ಗೌಡ, ಇದೇ ಮೊದಲ ಬಾರಿಗೆ ಆಯೋಜಿತವಾಗಿರುವ ಕಾಫಿ ದಸರಾಕ್ಕೆ ಕಾಫಿ ಮಂಡಳಿ, ಕನಾ೯ಟಕ ಪ್ಲಾಂಟಸ್೯ ಅಸೋಸಿಯೇಷನ್, ಕೊಡಗು ಪ್ಲಾಂಟಸ್೯ ಅಸೋಸಿಯೇಷನ್ ಸೇರಿದಂತೆ ಕಾಫಿ ವಲಯದಿಂದ ಉತ್ತಮ ಸ್ಪಂದನ ದೊರಕಿದೆ. ಈಗಾಗಲೇ 32 ಮಳಿಗೆಗಳು ಭತಿ೯ಯಾಗಿದ್ದು, ಕಾಫಿ, ಹೈನುಗಾರಿಕೆ, ಬಿದಿರು, ತೋಟಗಾರಿಕಾ ಬೆಳೆಗಳು, ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಈ ಮಳಿಗೆಗಳಲ್ಲಿ ದೊರಕಲಿದೆ. ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕಾ…

Read More

ಮಡಿಕೇರಿ ಅ.2 NEWS DESK : ಗಾಂಧಿ ಜಯಂತಿ ಪ್ರಯುಕ್ತ ಅರಣ್ಯ ಇಲಾಖೆಯ ವತಿಯಿಂದ ವಿರಾಜಪೇಟೆ ತಾಲ್ಲೂಕಿನ ಚೇಲಾವಾರ ಕಬ್ಬೆ ಬೆಟ್ಟದ ಭಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.  ಡಿಎಫ್ ಜಗನಾಥ್, ಎಸ್.ಎಫ್. ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಕಬ್ಬೆ ಬೆಟ್ಟದ ಭಾಗದಲ್ಲಿ 30ಕ್ಕೂ ಅಧಿಕ ಸಿಬ್ಬಂದಿಗಳು ಪಾಲ್ಗೊಂಡು ಸ್ವಚ್ಛತಾ ಶ್ರಮದಾನ ನಡೆಸಿದರು.

Read More

ಮೈಸೂರು ಅ.2 NEWS DESK : ಗಾಂಧಿ ಜಯಂತಿಯ ಅಂಗವಾಗಿ ಪ್ರಧಾನಿ ಮೋದಿಯವರ ‘ಸ್ವಚ್ಛತೆಯೇ ಸೇವೆ’ ಅಭಿಯಾನದ ಧ್ಯೇಯದಂತೆ ಮೈಸೂರು ವಿಶ್ವವಿದ್ಯಾನಿಲಯದ ಓಪನ್ ಏರ್ ಥಿಯೇಟರ್ ನಲ್ಲಿ ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ವಚ್ಛತಾ ಶ್ರಮದಾನ ನಡೆಸಿದರು.  ಈ ಸಂದರ್ಭ ಹೆಚ್ಚಿನ ಸಂಖ್ಯೆಯಲಿ ಕಾರ್ಯಕರ್ತರು ಹಾಜರಿದ್ದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು.

Read More