ಲೇಖಕ: admin

ಮಡಿಕೇರಿ NEWS DESK ಸೆ.29 : ಅರೆಭಾಷಿಕರು  ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಅರೆಭಾಷೆ ಕಲಿಸಬೇಕು. ಆಗ ಮಾತ್ರ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಮಡಿಕೇರಿ ಗ್ರಾಮಾಂತರ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಕೆ ಹೇಳಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೊಡಗು ಗೌಡ ಸಮಾಜಗಳ ಒಕ್ಕೂಟ ಸಭಾಂಗಣದಲ್ಲಿ ಭಾನುವಾರ ನಡೆದ ಜಿಲ್ಲೆಯ ಅರೆಭಾಷೆ ಬರಹಗಾರರು ಮತ್ತು ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಅರೆಭಾಷಿಗರು ಇದ್ದು, ಅರೆಭಾಷೆ ಮಾತನಾಡುವಂತಾಗಬೇಕು ಬರಹಗಾರನೂ ಒಬ್ಬ ಕಲಾವಿದ, ಅವನ ಕಲೆಯ ಮೂಲ ಭಾಷೆ ಆಗಿರುತ್ತದೆ. ಆ ಭಾಷೆಯನ್ನು ಚಿಕ್ಕ ವಯಸ್ಸಿನಲ್ಲಿಯೇ ಆತ ಕರಗತ ಮಾಡಿದರೆ ಉತ್ತಮ ಬರಹಗಾರನಾಗಿ ಮೂಡಿಬರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಹಿರಿಯ ಸಾಹಿತಿ ಬಾರಿಯಂಡ ಜೋಯಪ್ಪ ಮಾತನಾಡಿ ಸಾಹಿತ್ಯ ನಮ್ಮಲ್ಲೇ ಇರುವಂತಹ ವಸ್ತು, ಅದನ್ನು ಗುರುತಿಸಿ ನಾವು ಹೊರಗೆ ತೆಗೆಯಬೇಕು. ಸಣ್ಣ ಸಣ್ಣ ವಿಷಯಗಳಿಂದ ಬರವಣಿಗೆ ಪ್ರಾರಂಭ…

Read More

ಪೊನ್ನಂಪೇಟೆ NEWS DESK ಸೆ.29 : ಪೊನ್ನಂಪೇಟೆ ಸಮೀಪದ ಪ್ರಶಾಂತಿ ನಿಲಯದಲ್ಲಿ ವೈವಿಧ್ಯಮಯ ಸಾಕುಪ್ರಾಣಿಗಳ ಕುಟುಂಬದೊಂದಿಗೆ ನಿಮ್ಮ ಗುಣಮಟ್ಟದ ಸಮಯವನ್ನು ಆನಂದಿಸಲು ಸಜ್ಜುಗೊಂಡಿರುವ “ಸಾಯಿ ಪೆಟ್ ಸ್ಟೇಷನ್” ಅಕ್ಟೋಬರ್‌ 1 ರಂದು ಉದ್ಘಾಟನೆಗೊಳ್ಳಲಿದೆ. ಸಾಯಿ ಪೆಟ್ ಸ್ಟೇಷನ್ ನ ಉದ್ಘಾಟನೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ, ಒಲಂಪಿಯನ್‌ ಹಾಕಿ ಆಟಗಾರರಾಗಿದ್ದ ಲೆಫ್ಟಿನೆಂಟ್‌ ಕರ್ನಲ್‌ ಬಿ.ಕೆ.ಸುಬ್ರಮಣಿ ಹಾಗು ಕೊಡಗು ಜಿಲ್ಲಾ ಹೋಟೆಲ್‌-ರೆಸಾರ್ಟ್‌-ರೆಸ್ಟೋರೆಂಟ್‌ ಅಸೋಸಿಯೇಷನ್‌ ಅಧ್ಯಕ್ಷರಾದ ದಿನೇಶ್‌ ಕಾರ್ಯಪ್ಪ ಇವರುಗಳು ಭಾಗವಹಿಸಲಿದ್ದಾರೆ. ವೈವಿಧ್ಯಮಯ ಸಾಕುಪ್ರಾಣಿಗಳ ಸ್ವರ್ಗವಾದ ಸಾಯಿ ಪೆಟ್ ಸ್ಟೇಷನ್ ಅಕ್ಟೋಬರ್‌ 2 ರಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ ಎಂದು ಸಾಯಿ ಪೆಟ್ ಸ್ಟೇಷನ್ ನ ಮುಖ್ಯಸ್ಥರಾದ ಝರು ಗಣಪತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಶಾಲನಗರ NEWS DESK ಸೆ 29: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೂರ್ಗ್ ಲಾರಿ ಚಾಲಕರು‌ ಮತ್ತು‌ ಮಾಲೀಕರ ಸಂಘದ  ಜಿಲ್ಲಾ ಘಟಕದ ಕಚೇರಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕುಶಾಲನಗರದ ರೈತ ಸಹಕಾರ ಭವನ‌ ಸಮೀಪ ಆರಂಭಿಸಿರುವ ನೂತನ ಕಛೇರಿಯನ್ನು ಕುಶಾಲನಗರ ಕಾವೇರಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ  ಜಿ.ಎ.ಲೋಕೇಶ್ ಉದ್ಘಾಟಿಸಿದರು. ನಂತರ ಸರಳ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಅಸ್ತಿತ್ವಕ್ಕೆ ಬಂದಿರುವ ನೂತನ‌ ಜಿಲ್ಲಾ ಸಂಘ ಅಭಿವೃದ್ದಿಯತ್ತ ಸಾಗುವುದರೊಂದಿಗೆ ಸದಸ್ಯರ ಕಷ್ಟಗಳಿಗೆ, ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಅಗತ್ಯ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಲಿ  ಎಂದು ಶುಭ ಹಾರೈಸಿದರು. ಕೂರ್ಗ್ ಲಾರಿ ಚಾಲಕರ ಮತ್ತು‌ ಮಾಲೀಕರ ಸಂಘದ ಅಧ್ಯಕ್ಷ ಕೆ.ಯು.ರಫೀಕ್ ಮಾತನಾಡಿ, ಸಂಘದ ಎಲ್ಲಾ ಸದಸ್ಯರ ಸಹಕಾರದಿಂದ ನೂತನ ಸಂಘ ಸ್ಥಾಪಿಸಿದ್ದು, ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಹಲವು ಸಮಾಜಮುಖಿ‌ ಕಾರ್ಯಕ್ರಮಗಳನ್ನು‌ ಹಮ್ಮಿಕೊಳ್ಳುವ ಚಿಂತನೆ ಹೊಂದಲಾಗಿದೆ. ಅದೇ ರೀತಿ ಸಂಘದ ಸದಸ್ಯರ ಸರ್ವಾಂಗೀಣ ಅಭಿವೃದ್ಧಿಗೆ  ಸಂಘ ಒತ್ತು ನೀಡಲಿದೆ ಎಂದು ತಿಳಿಸಿದರು. ನೂತನ ಸಂಘದ ಉದ್ಘಾಟನೆ ಹಿನ್ನಲೆಯಲ್ಲಿ ಕುಶಾಲನಗರ ಸಮುದಾಯ…

Read More

ಕುಶಾಲನಗರ NEWS DESK ಸೆ.29 : ಕೊಡಗು ಜಿಲ್ಲಾ ಯುವ ಜನ ಸಂಘದ ವತಿಯಿಂದ “ಸ್ನೇಹ, ಸಮತ್ವ ಹಾಗೂ ಸಹಿಷ್ಣುತೆಯನ್ನು ಸಾರುವ ಬೃಹತ್ ‌ಮಿಲಾದ್ ಮೆರವಣಿಗೆ ಹಾಗೂ ಮೌಲಿದ್ ಮಜ್ಲಿಸ್ ಕುಶಾಲನಗರದಲ್ಲಿ ನಡೆಯಿತು. ಕೊಡಗು ಜಿಲ್ಲಾ ಕಾಝಿ ಅಬ್ದುಲ್ಲಾ ಫೈಜ಼ಿರವರ ನೇತೃತ್ವದಲ್ಲಿ ‌ನಡೆದ ಮೆರವಣಿಗೆಯು ಕುಶಾಲನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಕಾರು‌ ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ಆಕರ್ಷಕ ಉಡುಗೆಗಳನ್ನು ತೊಟ್ಟ ಮದ್ರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶಿಸಲಾಯಿತು. ‌ನಂತರ ಕಾರು‌ ನಿಲ್ದಾಣದಲ್ಲಿ ಮೌಲಿದ್ ಮಜ್ಲಿಸ್ (ಪ್ರಾರ್ಥನೆ) ನಡೆಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ಸಂಘಟನೆಯ ಪದಾಧಿಕಾರಿಗಳು, ಪ್ರಮುಖರಾದ ಉಸ್ಮಾನ್ ಫೈಜ಼ಿ ಭಾಗಿಯಾಗಿದ್ದರು.

Read More

ಕುಶಾಲನಗರ NEWS DESK  ಸೆ.29 : ಕುಶಾಲನಗರದಲ್ಲಿ ನಾರಾಯಣ ಗುರುಗಳ 170 ನೇ ಜನ್ಮದಿನೋತ್ಸವ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಾಜಿ ಜಿಲ್ಲಾ ಪಂಚಾಯತ್  ಅಧ್ಯಕ್ಷರು ಹಾಗೂ ಹಿಂದೂ ಮಲಯಾಳಿ ಸಂಘದ ಜಿಲ್ಲಾಧ್ಯಕ್ಷರು ಆಗಿರುವ ವಿ.ಎಂ.ವಿಜಯ್ ಮಾತನಾಡಿ ಆಧುನಿಕ ತಂತ್ರಜ್ಞಾನದಿಂದಾಗಿ ಸನಾತನ ಹಿಂದೂ ಧರ್ಮ ಅಳಿವು ಉಳಿವಿನ ಬಗ್ಗೆ ಪ್ರತಿಯೊಬ್ಬರು ಚಿಂತನೆ ಮಾಡಬೇಕಾಗಿದೆ. ಹಿರಿಯರು ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕಾಗಿದೆ.  ಧರ್ಮ, ಸಂಸ್ಕ್ರತಿ ಸಂಪ್ರದಾಯಗಳ ಪರಿಪಾಲನೆ ಮುಂದುವರೆಯಬೇಕು  ಎಂದು ವಿಜಯ್  ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ  ಮಾಜಿ ಸದಸ್ಯೆ ಸುನೀತಾ ಮಂಜುನಾಥ್, ನಾರಾಯಣ ಗುರುಗಳು ಸಮಾಜಕ್ಕೆ ನೀಡಿರುವ ಸಂದೇಶಗಳು, ಮಾರ್ಗದರ್ಶನ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಎಸ್ ಎನ್ ಡಿಪಿ ಯೂನಿಯನ್ ಅಧ್ಯಕ್ಷರಾದ  ವಿ.ಕೆ .ಲೋಕೇಶ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಾಳಜಿ ವಹಿಸಬೇಕು ಎಂದರು. ಕುಶಾಲನಗರ ವಲಯ ಎಸ್ ಎನ್ ಡಿ ಪಿ ವಲಯ ಅಧ್ಯಕ್ಷ ಕೆ.ಟಿ.ಗಣೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ‌ ಕೇರಳ ಸಮಾಜದ ಅಧ್ಯಕ್ಷ…

Read More

ಮಡಿಕೇರಿ NEWS DESK ಸೆ.29 : ಎಂಆರ್ ಐ ಸ್ಕ್ಯಾನಿಂಗ್ ಸೌಲಭ್ಯ ಕೊಡಗಿನ ಜನತೆಗೆ ವರದಾನವಾಗಿದೆ. ಕಳೆದ 25 ವರ್ಷಗಳಿಂದ ಈಡೇರದೆ ಇದ್ದ ಜನರ ದೊಡ್ಡ ಬೇಡಿಕೆ ಕೇವಲ ಒಂದೂವರೆ ವರ್ಷದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಂದ ಈಡೇರಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಎಂ.ಎ.ಕಲೀಲ್ ಬಾಷ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಎಂಆರ್ ಐ ಸ್ಕ್ಯಾನಿಂಗ್ ವ್ಯವಸ್ಥೆಯಿಂದ ಬಡವರಿಗೆ ಹೆಚ್ಚು ಅನುಕೂಲವಾಗಿದೆ. ಶಾಸಕ ಡಾ.ಮಂತರ್ ಗೌಡ ಅವರು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯನ್ನು ಅರಿತು ಎಂಆರ್ ಐ ಸ್ಕ್ಯಾನಿಂಗ್ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ಬಡ ರೋಗಿಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಅಗತ್ಯವಾಗಿ ಬೇಕಾಗಿದ್ದ ಎಂಆರ್ ಐ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲದೆ ರೋಗಿಗಳು ದೂರದ ಬೆಂಗಳೂರು, ಮಂಗಳೂರು ಆಸ್ಪತ್ರೆಗಳಿಗೆ ತೆರಳಿ ಜೀವ ಉಳಿಸಿಕೊಳ್ಳಬೇಕಾಗಿತ್ತು. ಆದರೆ ಇದು ಬಡವರಿಗೆ, ಕೂಲಿ ಕಾರ್ಮಿಕರಿಗೆ ಅಸಾಧ್ಯವಾಗಿತ್ತು. ಇದೀಗ ಜಿಲ್ಲಾಸ್ಪತ್ರೆಯಲ್ಲೇ ಈ ಸೌಲಭ್ಯ ಲಭ್ಯವಿರುವುದರಿಂದ…

Read More

ಮಡಿಕೇರಿ NEWS DESK ಸೆ.29 : ಕೊಡಗಿನ ಜನರ ಹಲವು ವರ್ಷಗಳ ಬೇಡಿಕೆಯಾದ ಎಂಆರ್ ಐ ಸ್ಕ್ಯಾನಿಂಗ್ ಸೌಲಭ್ಯ ಇದೀಗ ಜಿಲ್ಲಾಸ್ಪತ್ರೆಗೆ ದೊರೆತ್ತಿದ್ದು, ಇದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಇಚ್ಛಾಶಕ್ತಿಗೆ ಸಾಕ್ಷಿಯಾಗಿದೆ ಎಂದು ಮಾನವ ಬಂಧುತ್ವ ವೇದಿಕೆಯ ಜಿಲ್ಲಾಧ್ಯಕ್ಷ ಜೆ.ಎಲ್.ಜನಾರ್ಧನ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇದೇ ಮೊದಲ ಬಾರಿಗೆ ಮಡಿಕೇರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಸ್ವತ: ವೈದ್ಯರೂ ಆಗಿರುವ ಡಾ.ಮಂತರ್ ಗೌಡ ಅವರು ಕೆಲವೇ ದಿನಗಳಲ್ಲಿ ಇಲ್ಲಿನ ಜನರ ಬೇಡಿಕೆಗೆ ಸ್ಪಂದಿಸಿ ಎಂಆರ್ ಐ ಸ್ಕ್ಯಾನಿಂಗ್ ಸೌಲಭ್ಯವನ್ನು ತ್ವರಿತವಾಗಿ ಸರ್ಕಾರದಿಂದ ಮಂಜೂರು ಮಾಡಿಸಿರುವುದು ಹೆಮ್ಮೆಯ ವಿಚಾರವೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರು, ಕಡು ಬಡವರು, ಪರಿಶಿಷ್ಟರು ಹಾಗೂ ಆರ್ಥಿಕವಾಗಿ ಹಿಂದುಳಿದಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆರೋಗ್ಯ ಸಂಬಂಧಿತ ಚಿಕಿತ್ಸೆಗಾಗಿ ದೂರದ ಮಂಗಳೂರು, ಮೈಸೂರು, ಬೆಂಗಳೂರನ್ನೇ ಅವಲಂಬಿಸಬೇಕಾಗಿತ್ತು. ಆದರೆ ಇದೀಗ ಎಂಆರ್ ಐ ಸ್ಕ್ಯಾನಿಂಗ್ ವ್ಯವಸ್ಥೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲೇ ಲಭ್ಯವಿರುವುದರಿಂದ ಎಲ್ಲಾ ವರ್ಗದ ಜನ…

Read More

ಮಡಿಕೇರಿ NEWS DESK ಸೆ.29 : ಕೊಡಗು ಜಿಲ್ಲೆಯಾಧ್ಯಂತ ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಸ್ಥೆ /ಆಸ್ಪತ್ರೆಗಳಲ್ಲಿ ಎಂ.ಆರ್. ಐ ಸ್ಕ್ಯಾನಿಂಗ್ ಸೌಲಭ್ಯ ಇಲ್ಲದಿರುವುದರಿಂದ ರೋಗಿಗಳು ಸ್ಕಾನಿಂಗ್ ಗಾಗಿ ಇತರೇ ದೂರದ ಜಿಲ್ಲೆಗಳಾದ ಮೈಸೂರು, ಮಂಗಳೂರು, ಬೆಂಗಳೂರು ನಗರಗಳನ್ನು ಅವಲಂಬಿಸಲಾಗುತ್ತಿತ್ತು. ಪ್ರಸ್ತುತ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಮಡಿಕೇರಿಯಲ್ಲಿಯೇ ಅತ್ಯಾಧುನಿಕ ಎಂ.ಆರ್.ಐ ಸ್ಕ್ಯಾನಿಂಗ್ ಉಪಕರಣವನ್ನು ಸರ್ಕಾರದ ವತಿಯಿಂದ ಅಳವಡಿಸಲಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಇಲ್ಲಿಯೇ ಅಗತ್ಯ ಸ್ಕ್ಯಾನಿಂಗ್ ಗಳನ್ನು ಮಾಡಬಹುದು. ಪರೀಕ್ಷಾ ವರದಿಗಳನ್ನು ಅನುಸರಿಸಿ ಅಗತ್ಯ ಹೆಚ್ಚಿನ ಚಿಕಿತ್ಸೆಗಳನ್ನು ಇಲ್ಲಿಯೇ ಒದಗಿಸಬಹುದಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಹೆಚ್ಚಿನ ಹಣದ ವ್ಯಯ ತಪ್ಪಿಸಿದಂತಾಗಿದೆ. ರೇಡಿಯಾಲಜಿ ವಿಭಾಗದಲ್ಲಿನ ವರದಿಗಳನ್ನು ಮಾಡಲು ತಜ್ಞವೈದ್ಯರುಗಳ ಕೊರತೆಯ ಹಿನ್ನೆಲೆಯಲ್ಲಿ ಟೆಲಿ-ರೇಡಿಯಾಲಜಿ ವಿಧಾನದ ಮೂಲಕ ವರದಿಗಳನ್ನು ಒದಗಿಸುವ ಟೆಂಡರ್ ಪ್ರಕ್ರಿಯೆ ಮಾಡಲಾಗಿದೆ. ಸಧ್ಯದಲ್ಲಿಯೇ ಸಂಪೂರ್ಣ ಎಲ್ಲಾ ರೀತಿಯ ವರದಿಗಳನ್ನು ಇಲ್ಲಿಯೇ ನೀಡುವ ಕ್ರಮಗಳನ್ನು ಕೈಗೊಳ್ಳಲಾಗುವುದು. ಜಿಲ್ಲಾಸ್ಪತ್ರೆಗೆ ಎಂ.ಆರ್.ಐ ಸ್ಕ್ಯಾನಿಂಗ್ ಸೌಲಭ್ಯ ದೊರೆಯಲು ಸ್ವತ: ವೈದ್ಯರೂ ಆಗಿರುವ ಮಡಿಕೇರಿ ಕ್ಷೇತ್ರದ…

Read More

ಮಡಿಕೇರಿ NEWS DESK ಸೆ.29 : ಕೋಟ್ಯಾಂತರ ಭಕ್ತರ ಧಾರ್ಮಿಕ ನಂಬಿಕೆಯ ಕ್ಷೇತ್ರವಾಗಿರುವ ತಿರುಪತಿಯ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದೇವಸ್ಥಾನಗಳ ಮಹಾಸಂಘದ ಕೊಡಗು ಶಾಖೆ ಒತ್ತಾಯಿಸಿದೆ. ನಗರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ ಮಹಾಸಂಘದ ಪ್ರಮುಖರು ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು. ಇದು ಹಿಂದೂಗಳನ್ನು ಧರ್ಮಭ್ರಷ್ಟರನ್ನಾಗಿ ಮಾಡುವ ಷಡ್ಯಂತ್ರ ಮತ್ತು ಹಿಂದೂಗಳ ಧರ್ಮಶ್ರದ್ಧೆಯ ಮೇಲಿನ ದಾಳಿಯಾಗಿದೆ. ಇದೊಂದು ಗಂಭೀರ ವಿಚಾರವಾಗಿದ್ದು, ಈ ಹಿಂದಿನ ಸರ್ಕಾರಗಳು ತಿರುಪತಿಯಲ್ಲಿ ಜಾರಿಗೆ ತಂದ ಹಿಂದೂ ವಿರೋಧಿ ನಿರ್ಧಾರಗಳೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದರು. ಹಿಂದೂಗಳ ಧಾರ್ಮಿಕ ಭಾವನೆಗೆ ವಿರುದ್ಧವಾಗಿ ಲಡ್ಡು ಪ್ರಸಾದದಲ್ಲಿ ಕೊಬ್ಬು ಬೆರೆಸಲು ಕಾರಣಕರ್ತರಾದವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಈಗಿನ ಆಂಧ್ರ ಸರ್ಕಾರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈ ಹಿಂದಿನ ಸರ್ಕಾರ ರೂಪಿಸಿರುವ ಹಿಂದೂ ವಿರೋಧಿ ನೀತಿಗಳನ್ನು ತಕ್ಷಣ…

Read More

ಮಡಿಕೇರಿ NEWS DESK ಸೆ.29 : ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಆರ್ ಐ ಸ್ಕ್ಯಾನಿಂಗ್ ಉಪಕರಣಗಳನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರು ಭಾನುವಾರ ಲೋಕಾರ್ಪಣೆಗೊಳಿಸಿದರು. ವೈದ್ಯಕೀಯ ಶಿಕ್ಷಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಎಂಆರ್ ಐ ಸ್ಕ್ಯಾನಿಂಗ್ ಉಪಕರಣಗಳನ್ನು ಉದ್ಘಾಟಿಸಿದರು. ಕೊಡಗು ಜಿಲ್ಲೆಯ ಹಲವು ವರ್ಷಗಳ ಬೇಡಿಕೆಯಾದ ಎಂಆರ್ ಐ ಸ್ಕ್ಯಾನಿಂಗ್ ಯಂತ್ರವನ್ನು ಅಳವಡಿಸಲಾಗಿದೆ. ಆ ನಿಟ್ಟಿನಲ್ಲಿ ಇಬ್ಬರು ವೈದ್ಯಕೀಯ ತಾಂತ್ರಿಕರನ್ನು ನೇಮಿಸಲು ತುರ್ತು ಕ್ರಮ ವಹಿಸಲಾಗುವುದು ಎಂದು ಶರಣ ಪ್ರಕಾಶ ಪಾಟೀಲ ಅವರು ಹೇಳಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಂದುವರೆದ ಕಾಮಗಾರಿಗೆ ಇನ್ನೂ 50 ರಿಂದ 60 ಕೋಟಿ ರೂ. ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ದಿಸೆಯಲ್ಲಿ ಶೀಘ್ರ ಹಣ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವರು ತಿಳಿಸಿದರು. ಸರ್ಕಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಆ ನಿಟ್ಟಿನಲ್ಲಿ ಕೊಡಗು…

Read More