ಲೇಖಕ: admin

ಮಡಿಕೇರಿ NEWS DESK ಸೆ.28 : ಕೂರ್ಗ್ ಕಾಫಿವುಡ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ಮಿಸಿ, ನಿರ್ದೇಶಿಸಿರುವ ಕೊಡವ ಚಲನಚಿತ್ರ “ಕಾಂಗತ ಮೂಡ್”(“(The Shadow) ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಪ್ರೊಮೋ ಮತ್ತು ಪೋಸ್ಟರ್ ನ್ನು ಇಂದು ಬಿಡುಗಡೆ ಮಾಡಲಾಯಿತು. ನಗರದ ಪತ್ರಿಕಾ ಭವನದಲ್ಲಿ ಪ್ರೊಮೋ ಮತ್ತು ಪೋಸ್ಟರ್ ನ್ನು ಬಿಡುಗಡೆ ಮಾಡಿ ಮಾತನಾಡಿದ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಅವರು ಕೊಡವ ಸಿನಿಮಾಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದರು. ಕೊಡಗಿನಲ್ಲಿ ಹಿಂದೆ ಕೃಷಿ ಚಟುವಟಿಕೆ ಸುಖೀಮಯವಾಗಿತ್ತು, ತೋಟದ ಮಾಲೀಕ ಬೆಂಗಳೂರು ಅಥವಾ ಬೇರೆಲ್ಲೋ ಇದ್ದುಕೊಂಡು ರೈಟರ್ ಮೂಲಕ ತೋಟವನ್ನು ನಿಭಾಯಿಸುವ ಪ್ರೀತಿ ಮತ್ತು ನಂಬಿಕೆಯ ವ್ಯವಹಾರವಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧವಾಗಿದ್ದು, ಜೀವನ ಸಂಪೂರ್ಣ ಯಾಂತ್ರೀಕೃತವಾಗಿದೆ. ಪ್ರೀತಿ ಮತ್ತು ನಂಬಿಕೆ ಕಳೆದು ಹೋಗಿದೆ. ವ್ಯಕ್ತಿ ಹಾಗೂ ಸಮಾಜಕ್ಕೆ ಇರುವ ಮತ್ತೊಂದು ಮುಖವನ್ನು ತೋರಿಸುವ ಪ್ರಯತ್ನವನ್ನು “ಕಾಂಗತ ಮೂಡ್” ಚಿತ್ರತಂಡ ಮಾಡಿದೆ. ಮದ್ಯ ವ್ಯಸನ ಮತ್ತು…

Read More

ಮಡಿಕೇರಿ ಸೆ.28 NEWS DESK : ಎಮ್.ಆರ್.ಪೈ. ಫೌಂಡೇಷನ್ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ನಾಯಕತ್ವ ಶಿಬಿರ ನಡೆಯಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ  ಉದ್ದೇಶ ರಚನೆ, ತೀರ್ಮಾನ, ಸಮಯ ಪರಿಪಾಲನೆಯನ್ನು ಚಟುವಟಿಕೆಗಳ ಮೂಲಕ ಹೇಳಿಕೊಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಮೇಜರ್. ಪ್ರೊ.ಬಿ.ರಾಘವ ಅವರ ಅಧ್ಯಕ್ಷತಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಇ.ತಿಪ್ಪೇಸ್ವಾಮಿ ಮತ್ತು ಡಾ.ಹೆಚ್.ಕೆ.ರೇಣುಶ್ರೀ ಹಾಜರಿದ್ದರು. 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು. ಎಂ.ಆರ್.ಪೈ ಫೌಂಡೇಶನ್ ನ ವಿವೇಕ ಪಟ್ಕಿ ಮತ್ತು ರಾಜೀವ್ ಕುಮಾರ್ ಲವ್ ಶಿಬಿರ ನಡೆಸಿಕೊಟ್ಟರು.

Read More

ಮಡಿಕೇರಿ ಸೆ.28 NEWS DESK : ರೋಟರಿ ಮಡಿಕೇರಿ ವತಿಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜ್ ನ ಪ್ರಾಂಶುಪಾಲ ಪಿ.ಆರ್.ವಿಜಯ್ ಹಾಗೂ ಸಂತ ಜೋಸೆಫರ ಶಾಲೆಯ ಶಿಕ್ಷಕಿ ಮಂಡೇಟಿರ ಡೈಜಿ ಸೋಮಯ್ಯ ಅವರಿಗೆ ನೆಷನ್ ಬಿಲ್ಡ್‍ರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭ ಹಾಕಿ ಕ್ರೀಡೆಯಲ್ಲಿ ಸಾಧನೆ ತೋರಿದ ಕೊಡಗು ವಿದ್ಯಾಲಯದ ವಿದ್ಯಾರ್ಥಿನಿ ಎ.ಜಿ.ಪರ್ಲಿನ್ ಪೊನ್ನಮ್ಮ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ರೋಟರಿ ಅಧ್ಯಕ್ಷ ಸುದಯ್ ನಾಣಯ್ಯ, ಕಾರ್ಯದರ್ಶಿ ಪ್ರಿನ್ಸ್ ಪೊನ್ನಣ್ಣ ಮತ್ತಿತರ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Read More

ಮಡಿಕೇರಿ ಸೆ.28 NEWS DESK : ಮಹಾರಾಷ್ಟ್ರದಲ್ಲಿ ನವೆಂಬರ್‍ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಫುಟ್ಬಾಲ್ ಕ್ರೀಡಾಕೂಟಕ್ಕೆ ಮಡಿಕೇರಿಯ ಸ.ಮಾ.ಹಿ.ಪ್ರಾ.ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪಿ.ಕೆ.ಅಂಚಲ್ ದೇಚಮ್ಮ ಆಯ್ಕೆಯಾಗಿದ್ದಾಳೆ. ಇವಳು 14 ವಯೋಮಿತಿಯ ಅಂತರ ಪ್ರಾಥಮಿಕ ಫುಟ್‍ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿ ನಾಯಕಿಯಾಗಿ ವಲಯ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟದಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು, ಇದೀಗ 14 ವಯೋಮಿತಿಯ ಬಾಲಕಿಯರ ಕರ್ನಾಟಕ ಫುಟ್ಬಾಲ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾಳೆ. ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ಎಲ್.ಸಂದೇಶ್ ತರಬೇತಿ ನೀಡುತ್ತಿದ್ದು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಎಸ್.ಡಿ.ಎಂಸಿ ಅಧ್ಯಕ್ಷರು ಮತ್ತು ಸದಸ್ಯರುಗಳು ಅಭಿನಂದನೆ ಸಲ್ಲಿಸಿದ್ದಾರೆ.

Read More

ನಾಪೋಕ್ಲು ಸೆ.28 NEWS DESK : ನಾಪೋಕ್ಲು ನಾಡು ಗ್ರಾಹಕರ ಸಂಘವು 2023-24ನೇ ಸಾಲಿನಲ್ಲಿ 2.37 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪಟ್ರಪಂಡ ಮೋಹನ್ ಮುದ್ದಪ್ಪ ಹೇಳಿದರು. ನಾಪೋಕ್ಲು ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ 639 ಮಂದಿ ಸದಸ್ಯರಿದ್ದು, ದುಡಿಯುವ ಬಂಡವಾಳ 56.49 ಲಕ್ಷ ರೂ.ಗಳಾಗಿವೆ ಎಂದರು. ಸಂಘವು ಸುಸಜ್ಜಿತವಾದ ಕಟ್ಟಡ ಹೊಂದಿದ್ದು, ಸಂಘದ ಮಳಿಗೆಯಲ್ಲಿ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸರ್ಕಾರದ ನ್ಯಾಯಬೆಲೆ ಅಂಗಡಿಯನ್ನು ಹೊಂದಿದ್ದು ಪಡಿತರವನ್ನು ವಿತರಿಸಲಾಗುತ್ತಿದೆ ಎಂದು ಸಂಘದ ಸಮಗ್ರ ಮಾಹಿತಿಯನ್ನು ನೀಡಿ ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರವನ್ನು ಕೋರಿದರು. ಸಭೆಯಲ್ಲಿ ಸಂಘದ ಶ್ರೇಯೋಭಿವೃದ್ಧಿಯ ಬಗ್ಗೆ ಚರ್ಚಿಸಿ ಬಳಿಕ ಎಲ್ಲರ ಒಪ್ಪಿಗೆ ಪಡೆದು ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಯಿತು. 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ…

Read More

ನಾಪೋಕ್ಲು ಸೆ.28 NEWS DESK : ಕಾರುಗುಂದ ಗೌಡ ಸಮಾಜದಲ್ಲಿ 1855ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಮಡಿಕೇರಿ ತಾಲೂಕು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಬೆಟ್ಟಗೇರಿ ವಲಯದ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಿಕೇರಿ ತಾಲೂಕು, ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಜಿಲ್ಲಾ ಜನಜಾಗೃತಿ ವೇದಿಕೆ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಉಜಿರೆ ಸಂಶೋಧನಾ ಕೇಂದ್ರ ಲಾಯಿಲ, ಬೆಂಗಳೂರು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಮಾರ್ಗದರ್ಶನದೊಂದಿಗೆ ಚೇರಂಬಾಣೆ ಗೌಡ ಸಮಾಜ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಬೆಟ್ಟಗೇರಿ ವಲಯ, ಬೆಟ್ಟಗೇರಿ ಗ್ರಾ.ಪಂ, ಬೇಂಗೂರು – ಚೇರಂಬಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಭಾಗಮಂಡಲ ಆರಕ್ಷಕ ಇಲಾಖೆ, ಮಡಿಕೇರಿ ತಾಲೂಕು ನವಜೀವನ ಸಮಿತಿ, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ದಾನಿಗಳ ಸಹಕಾರದೊಂದಿಗೆ ಎಂಟು ದಿನಗಳ ಕಾಲ 1855ನೇ ಮದ್ಯವರ್ಜನ ಶಿಬಿರ ನಡೆಯಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ…

Read More

ಸೋಮವಾರಪೇಟೆ NEWS DESK ಸೆ.28 : ಕಂದಾಯ ಇಲಾಖೆಯಲ್ಲಿನ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಸೋಮವಾರಪೇಟೆ ತಾಲ್ಲೂಕಿನ ಹಂಡ್ಲಿ ಗ್ರಾಮ ಆಡಳಿತ ಅಧಿಕಾರಿಗಳಾದ ಶ್ವೇತ ಶ್ರೀ ಹಾಗೂ ಚೈತ್ರ ಎಸ್.ಎಸ್ ಅವರಿಗೆ ಸರ್ಕಾರ “ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಸಮಾರಂಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಇಬ್ಬರು ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

Read More

ಮಡಿಕೇರಿ ಸೆ.28 NEWS DESK : ಕೊಡಗು ಜಿಲ್ಲೆಯ ಮೂವರು ವಿದ್ಯಾಥಿ೯ಗಳು ಮಂಗಳೂರು ವಲಯದಿಂದ 16 ವಷ೯ದೊಳಗಿನ ಕನಾ೯ಟಕ ರಾಜ್ಯ ಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.  ಶನಿವಾರಸಂತೆಯ ಕಾಫಿ ಬೆಳೆಗಾರ ಹೆಚ್.ಎಸ್.ವಸಂತ್ ಕುಮಾರ್, ಶ್ವೇತಾ ದಂಪತಿ ಪುತ್ರ ಯತೀಂದ್ರ, ಕುಶಾಲನಗರದ ಸುರೇಶ್, ಗಾಯತ್ರಿ ದಂಪತಿ ಪುತ್ರ ಸೂಯ೯ತ್ರಿಭುವನ್ ಮತ್ತು ವಿರಾಜಪೇಟೆಯ ಎಂ.ಸಿ.ಅಪ್ಪಣ್ಣ, ತನೋಜ್ ದೇವಮ್ಮ ದಂಪತಿ ಪುತ್ರ ಅಂಶಲ್ ಪೊನ್ನಣ್ಣ 16 ವಷ೯ದೊಳಗಿನ ಕ್ರಿಕೆಟ್ ಪಂದ್ಯಾಟಕ್ಕೆ ಮಂಗಳೂರು ವಲಯದಿಂದ ಕನಾ೯ಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಯತೀಂದ್ರ ಪ್ರಸ್ತುತ ಬೆಂಗಳೂರಿನ ಕ್ರೀಡಾಶಾಲೆಯಲ್ಲಿ ಕಲಿಯುತ್ತಿದ್ದರೆ. ಸೂಯ೯ತ್ರಿಭುವನ್ ಕುಶಾಲನಗರದ ಪಾತಿಮಾ ಕಾನ್ವೆಂಟ್ ವಿದ್ಯಾಥಿ೯ಯಾಗಿದ್ದು, ಅಂಶಲ್ ಪೊನ್ನಣ್ಣ ವಿರಾಜಪೇಟೆಯ ಎಸ್ ಎಂ ಎಸ್ ಶಾಲಾ ವಿದ್ಯಾಥಿ೯ಯಾಗಿದ್ದಾನೆ.

Read More

ಮಡಿಕೇರಿ ಸೆ.28 NEWS DESK : ವಿದ್ಯುತ್ ಅವಘಡದಿಂದ ಮೃತಪಟ್ಟ ಐಗೂರು ಗ್ರಾಮದ ಕಾಲೇಜು ವಿದ್ಯಾರ್ಥಿ ಹೇಮಂತ್ ಮನೆಗೆ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

Read More

ನಾಪೋಕ್ಲು ಸೆ.28 NEWS DESK : ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ಗ್ರಾಮ ಸಭೆ ನಡೆಯಿತು. ಕಕ್ಕಬೆಯ ವಿಎಸ್‍ಎಸ್ ಎನ್ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೊಂಗೇರ ಶಿಲ್ಪಾ ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ, ರಸ್ತೆಗಳು ಗುಂಡಿ ಬಿದ್ದು ಸಂಚಾರ ಯಾತನಾಮಯವಾಗಿದೆ. ಇಲಾಖಾ ಅಧಿಕಾರಿಗಳು ಗ್ರಾಮ ಸಭೆಗೆ ಹಾಜರಾಗಿಲ್ಲ. ಹೀಗೆ ವಿವಿಧ ವಿಷಯಗಳ ಕುರಿತು ಗ್ರಾಮಸ್ಥರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ಜೆಜೆಮ್ ಕಾಮಗಾರಿಯು ಪ್ರಾರಂಭಿಸಿ ಮೂರು ವರ್ಷ ಆದರು ಪೂರ್ಣವಾಗದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ರಸ್ತೆಗಳು ತುಂಬಾ ಹದಗೆಟ್ಟಿದ್ದು, ರಸ್ತೆಗಳನ್ನು ಸರಿಪಡಿಸಲು ಮತ್ತು ರಸ್ತೆಯ ಬದಿಯ ಚರಂಡಿಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು. ನಾಲಾಡಿ ಗ್ರಾಮದಲ್ಲಿ ಅವೈಜ್ಞಾನಿಕ ಕಟ್ಟಡವನ್ನು ಕಟ್ಟುತ್ತಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಮನೆಗಳನ್ನು ನಿರ್ಮಿಸಿಕೊಂಡಿರುವ ಹಾಗೂ ತೋಟಗಳನ್ನು ಮಾಡಿರುವಂತಹ ಜಾಗವನ್ನು ಯಾವುದೇ ಕಾರಣಕ್ಕೂ ಮೀಸಲು ಅರಣ್ಯಕ್ಕೆ ಬಿಟ್ಟು ಕೊಡುವುದಿಲ್ಲ ಎಂದು ಗ್ರಾಮಸ್ಥರು ಆಗ್ರಹಿಸಿದರು. ಸಭೆಗೆ ಇಲಾಖಾ ಅಧಿಕಾರಿಗಳು ಹಾಜರಾಗದ…

Read More