ಲೇಖಕ: admin

ಕುಶಾಲನಗರ, ಮೇ 9 NEWS DESK : ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಬರೆದಿದ್ದ 27 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ತಿಳಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಉತ್ತಮವಾಗಿ ಕಲಿತು ಉತ್ತಮ ಫಲಿತಾಂಶ ಗಳಿಸಲು ಕಾರಣರಾದ ಶ್ರಮಿಸಿದ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ – ಪೋಷಕರಿಗೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಎ.ಎಂ.ಜವರಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

Read More

ಮಡಿಕೇರಿ ಮೇ 9 NEWS DESK : ಹಾಸನದ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿಲ್ಲವೆಂದು ಆರೋಪಿಸಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು. ನಗರದ ಗಾಂಧಿ ಮೈದಾನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಜೆಡಿಎಸ್ ಪ್ರಮುಖರು ಹಾಗೂ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆಯನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ತೇಜೋವಧೆ ಮಾಡಲಾಗುತ್ತಿದೆ. ಅಲ್ಲದೆ ಶಾಸಕ ಹೆಚ್.ಡಿ.ರೇವಣ್ಣ ಅವರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು. ಜೆಡಿಎಸ್ ಜಿಲ್ಲಾ ವಕ್ತಾರ ಕಾಟ್ನಮನೆ ವಿಠಲ್ ಗೌಡ ಮಾತನಾಡಿ, ಮಹಿಳೆಯರ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಹರಿಬಿಟ್ಟಿರುವುದು ಕಾನೂನು ರೀತಿಯ ಅಪರಾಧವಾಗಿದೆ. ಇದರ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು. ಹೆಚ್.ಡಿ.ರೇವಣ್ಣ…

Read More

ಮಡಿಕೇರಿ ಮೇ 9 NEWS DESK : ಕಾವೇರಿನಾಡು ಕೊಡಗಿನಲ್ಲಿ ಒಂದೆರಡು ಮಳೆಯಾದರೂ ಕಾದಿರುವ ಭೂಮಿ ತಣ್ಣಗಾಗುತ್ತಿಲ್ಲ. ಅತಿರೇಕದ ತಾಪಮಾನದಿಂದ ಮನುಷ್ಯರು ಮಾತ್ರವಲ್ಲದೆ ವನ್ಯಜೀವಿಗಳು ಕೂಡ ನೀರು, ನೆರಳಿಗಾಗಿ ಪರಿತಪಿಸುತ್ತಿವೆ. ಮನೆಯ ಸುತ್ತಮುತ್ತ ತಂಪು ಪ್ರದೇಶದಲ್ಲಿ ವಿಷ ಜಂತುಗಳು ಆಶ್ರಯ ಪಡೆಯುತ್ತಿರುವುದು ಸಹಜವಾಗಿದ್ದು, ಜನ ಎಚ್ಚರ ವಹಿಸುವುದು ಅಗತ್ಯವಾಗಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚಾಗುತ್ತಿದೆ, ಹಿರಿಯರ ಅನುಭವದ ಪ್ರಕಾರ ದಕ್ಷಿಣದ ಕಾಶ್ಮೀರ ಕೊಡಗಿನಲ್ಲಿ ಈ ಬಾರಿಯ ಉಷ್ಣತೆ ದಾಖಲೆಯನ್ನು ಬರೆದಿದೆ. ಅತ್ಯಂತ ಕೂಲ್ ಆಗಿರುತ್ತಿದ್ದ ಕೊಡಗು ಈಗ ಬೇರೆ ಯಾವುದೇ ಜಿಲ್ಲೆಗೆ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಕುದಿಯುತ್ತಿದೆ. ನಗರ, ಪಟ್ಟಣದಲ್ಲಿ ಕುಡಿಯುವ ನೀರಿಗೂ ಕೊರತೆ ಎದುರಾಗಿದೆ. ಅರಣ್ಯ ಪ್ರದೇಶದಲ್ಲಿ ಕೆರೆಗಳು ಬತ್ತಿ ಹೋಗಿದೆ. ಮರಗಳು ಒಣಗಿ ನೆರಳೂ ಕೂಡ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು, ನೆರಳು ಇರುವ ಪ್ರದೇಶಗಳೆಡೆಗೆ ವಿಷ ಜಂತುಗಳು ಹಾಗೂ ವನ್ಯಜೀವಿಗಳು ಮುಖ ಮಾಡುತ್ತಿವೆ. ಹೆಚ್ಚಾಗಿ ಹಾವುಗಳು ಮನೆಯಂಗಳ, ಹೂದೋಟ, ಕಾಫಿ ತೋಟ, ತೋಟದ ಮನೆ,…

Read More

ಸೋಮವಾರಪೇಟೆ, ಮೇ 9 NEWS DESK : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿ ಸರ್ಕಾರಿ ‌ಪ್ರೌಢಶಾಲೆಯಲ್ಲಿ 2023-24ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯಲ್ಲಿ ಕಲಿಯುತ್ತಿದ್ದ ಓರ್ವ ವಿದ್ಯಾರ್ಥಿನಿ ಯು.ಎಸ್.ಮೀನ ತೇರ್ಗಡೆ ಹೊಂದಿದ ಪರಿಣಾಮ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ. ತಾಲ್ಲೂಕಿನ ಕುಗ್ರಾಮಗಳಲ್ಲಿ ಒಂದಾದ ಸೂರ್ಲಬ್ಬಿ ಶಾಲೆಯಲ್ಲಿ ಏಕೈಕ ವಿದ್ಯಾರ್ಥಿನಿ ಮಾತ್ರ ಕಲಿಯುತ್ತಿದ್ದಳು ಎಂದು ಶಾಲೆಯ‌ ಮುಖ್ಯ ಶಿಕ್ಷಕ ರವೀಂದ್ರ ತಿಮ್ಮಪ್ಪ ಅಂಡರದಾನಿ ತಿಳಿಸಿದ್ದಾರೆ. ಈ ಗ್ರಾಮದ ಜನರು ಬೆಂಗಳೂರು ಇತ್ಯಾದಿ ಕಡೆ ಉದ್ಯೋಗ ‌ಅರಸಿ‌ತೆರಳುತ್ತಿರುವುದರಿಂದ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ‌ತೀವ್ರವಾಗಿ ಕುಸಿದಿದೆ. ಬರುವ ಶೈಕ್ಷಣಿಕ ವರ್ಷಕ್ಕೆ ಎಸ್‍ಎಸ್‍ಎಲ್‍ಸಿ ತರಗತಿಗೆ ನಾಲ್ಕು ಮಕ್ಕಳು ಹಾಗೂ 9ನೇ ತರಗತಿ ಮತ್ತು 8ನೇ ತರಗತಿಗೆ ತಲಾ 3 ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದು, ಒಟ್ಟು 10 ವಿದ್ಯಾರ್ಥಿಗಳು ದಾಖಲಾಗಲಿದ್ದಾರೆ. ಈ ಶಾಲೆಯು ಸೋಮವಾರಪೇಟೆ ತಾಲ್ಲೂಕಿನ ಗಡಿಯಲ್ಲಿದ್ದು, ನೆರೆಯ ಮಡಿಕೇರಿ ತಾಲ್ಲೂಕಿನ ‌ಮುಟ್ಲು, ಹಮ್ಮಿಯಾಲ, ಮಂಕ್ಯ, ಕುಂಬಾರಗಡಿ ಭಾಗದಿಂದ ವಿದ್ಯಾರ್ಥಿಗಳು ಈ ಶಾಲೆಗೆ ಬರಲಿದ್ದಾರೆ.…

Read More

  ಕುಶಾಲನಗರ  ಮೇ 9 NEWS DESK : ಇಂದಿನ ಕಾಲಘಟ್ಟದಲ್ಲಿ ಎಳೆಯ ಪ್ರಾಯದ ಮಕ್ಕಳಿಗೆ ಬಸವಾದಿ ಶರಣರು ಆದರ್ಶವಾಗಬೇಕು ಎಂದು ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಆಶಿಸಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಬಸವ ಜಯಂತಿ ಆಂಗವಾಗಿ ಹುಲುಸೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬಸವಣ್ಣನ ವಚನಗಳ ಸಾರವನ್ನು ಅರಿಯುವ ಮೂಲಕ ಮನುಷ್ಯ ಬಾಹ್ಯಕ್ಕಿಂತ ಅಂತರಂಗದ ಬದುಕಿಗೆ ಹೆಚ್ಚು ಒತ್ತು ನೀಡಬೇಕು. ಯಾರನ್ನೂ ಕೂಡ ದ್ವೇಷಿಸದ, ಯಾರನ್ನೂ ಟೀಕಿಸದ ಬದುಕನ್ನು ಕಟ್ಟಲು ವಚನ ಸಾಹಿತ್ಯ ಉಪಕಾರಿ ಎಂದು ಶ್ರೀಗಳು ಹೇಳಿದರು. ಬಸವ ಜಯಂತಿ ಕುರಿತಾಗಿ ಪ್ರವಚನ ನೀಡಿದ ಹೆಬ್ಬಾಲೆ ಪ್ರೌಢಶಾಲೆ ಉಪನ್ಯಾಸಕ ಮೆ.ನಾ.ವೆಂಕಟನಾಯಕ್, ಹನ್ನೆರಡನೇ ಶತಮಾನದಲ್ಲಿ ಅಂದಿನ ಸಮಾಜದಲ್ಲಿದ್ದ ಮೇಲು ಕೀಳೆಂಬ ಬೇಧಗಳನ್ನು ತೊಡೆದು ಹಾಕಿ ಸಮಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದ ಬಸವಾದಿ ಶರಣರ ಚಿಂತನೆಗಳು ಇಂದಿನ ಸಮಾಜಕ್ಕೆ ಅತೀ ಮುಖ್ಯವಾಗಿವೆ. ತಾಯಂದಿರು ತಾವು ಕಲಿಯುವ…

Read More

ಮಡಿಕೇರಿ ಮೇ 9 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ “ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಪಂದ್ಯಾವಳಿಯ ಗುರುವಾರದ ಮೊದಲ ಪಂದ್ಯದಲ್ಲಿ ಕೂರ್ಗ್ ಯುನೈಟೆಡ್ ತಂಡ ಟೀಮ್ ಲಿವರೇಜ್ ವಿರುದ್ಧ 7 ವಿಕೆಟ್ ಗಳ ಜಯ ದಾಖಲಿಸಿದೆ. ಟಾಸ್ ಗೆದ್ದ ಕೂರ್ಗ್ ಯುನೈಟೆಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟೀಮ್ ಲಿವರೇಜ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 113 ರನ್ ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಕೂರ್ಗ್ ಯುನೈಟೆಡ್ ತಂಡ 12 ಓವರ್ ಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 114 ರನ್ ಗಳನ್ನು ಬಾರಿಸಿ ವಿಜಯ ಸಾಧಿಸಿತು. ಕೂರ್ಗ್ ಯುನೈಟೆಡ್ ತಂಡದ ಅಯ್ಯಪ್ಪ ಸಿ.ಆರ್ 20 ಬಾಲ್ ಗಳಲ್ಲಿ 39 ರನ್ ಗಳಿಸಿ, ಎರಡು ವಿಕೆಟ್ ಗಳನ್ನು ಪತನಗೊಳಿಸುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

Read More

ಕಡಂಗ ಮೇ 9 NEWS DESK :  ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ವತಿಯಿಂದ ಮೇ 10 ರ0ದು ಇಪ್ಪತ್ತನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕ್ರಿಕೆಟ್ ಕಪ್ ಹಾಗೂ ಜನಾಂಗದ ಬಾಂಧವರಿಗೆ ಮೊದಲನೇ ವರ್ಷದ ಹಗ್ಗ ಜಗ್ಗಾಟ ಕೂಟವು ಮೂರ್ನಾಡುವಿನಲ್ಲಿ ನಡೆಯಲಿದೆ. ಮೂರ್ನಾಡು ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 9.30 ಗಂಟೆಗೆ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಮುಸ್ಲಿಂ ಕಪ್ ಸ್ಥಾಪಕ ರಶೀದ್ ಕುಪ್ಪೋಡ0ಡ ವಹಿಸಲಿದ್ದಾರೆ. ಸಮಾರಂಭದಲ್ಲಿ ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಖಾದರ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಹೊದ್ದೂರು ಗ್ರಾ.ಪಂ ಸದಸ್ಯ ಹಂಸ ಕೊಟ್ಟಮುಡಿ, ಕಾಂಗ್ರೆಸ್ ಅಲ್ಪಸಂಖ್ಯಾತ ಅಧ್ಯಕ್ಷ ಹನೀಫ್ ಚೋಕಂಡಳ್ಳಿ, ಮೂರ್ನಾಡು ಜಮಾಹತ್ ಅಧ್ಯಕ್ಷ ಅಬ್ದುಲ್ ಮಜೀದ್,  ಉಮ್ಮರ್ ಯೋದ ಎಡಪಾಲ, ನಿಸಾರ್ ಮಡಿಕೇರಿ, ಕಾಳೆರ ಅಲಿ ಎಮ್ಮೆಮಾಡು, ಮೂರ್ನಾಡು ಸಹಾಯಕ ಪೊಲೀಸ್ ಉಪ ನಿರೀಕ್ಷಕ ಪಿ.ಪಿ.ಶ್ರೀನಿವಾಸ್, ರಫೀಕ್ ಕೊಳುಮಂಡ, ಉಸ್ಮಾನ್ ಎವೆರ್ಗ್ರೀನ್ ಕಡಂಗ, ಜಾಸೀರ್ ಮೂರ್ನಾಡು ಮತ್ತು ಟ್ರಸ್ಟ್…

Read More

ಸೋಮವಾರಪೇಟೆ ಮೇ 9 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ತಾಲೂಕಿನ ಹಂಡ್ಲಿ ಹಾಗೂ ಹುಲುಸೆ ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ನಮ್ಮೂರು-ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಹುಲುಸೆ ಕೆರೆಯ ಹೂಳೆತ್ತುವ ಕಾರ್ಯಕ್ರಮಕ್ಕೆ ಭೂಮಿ ಪೂಜೆ ನಡೆಯಿತು. ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಯೋಜನೆಯ ಜಿಲ್ಲಾ ನಿರ್ದೆಶಕರಾದ ಲೀಲಾವತಿ, ಇಂದು ಹನಿ ನೀರಿಗೂ ಪರದಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಜೀವ ಜಲದ ರಕ್ಷಣೆ ಆಗಬೇಕು. ಪ್ರತಿಯೊಂದು ಜೀವಿಗೂ ನೀರಿನ ಅವಶ್ಯಕತೆ ಇದೆ. ಕೆರೆಗಳ ಪುನಶ್ಚೇತನದೊಂದಿಗೆ ನೀರನ್ನು ಉಳಿಸಬೇಕಾದದ್ದು ನಮ್ಮ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಭಗವಾನ್, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರೋಹಿತ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಭರತ್, ಹಂಡ್ಲಿ ಗ್ರಾ.ಪಂ ಉಪಾಧ್ಯಕ್ಷ ಅಶೋಕ್ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. 

Read More

ಪುತ್ತೂರು ಮೇ 9 NEWS DESK : ಜೀವನದಲ್ಲಿ ಎಡರುತೊಡರುಗಳು, ಜಯ-ಅಪಜಯಗಳು, ಸನ್ಮಾನ-ಅಪಮಾನಗಳು ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅವುಗಳನ್ನು ಸ್ವೀಕರಿಸುವ ಮತ್ತು ಅದರಿಂದ ಪಾಠ ಕಲಿಯುವ ಸಾಧ್ಯತೆಗಳನ್ನು ಆರಿಸುವ ಸ್ವಾತಂತ್ರ್ಯ ಮಾತ್ರ ನಮಗಿದೆ ಎಂದು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪ್ರೋ. ದೇವಿಚರಣ್ ರೈ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳ ಪ್ರತಿಭಾ ದಿನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಏಕಾಂತದಲ್ಲಿ ಕಣ್ಮುಚ್ಚಿ ನಮ್ಮ ಬಗ್ಗೆ ನಾವು ಯೋಚಿಸಿದಾಗ ನಮ್ಮ ಅಂತರಂಗವು ತೆರೆದುಕೊಳ್ಳುತ್ತದೆ ಮತ್ತು ಸಮಾಜದಲ್ಲಿ ನಮ್ಮ ಸ್ಥಾನ ಮಾನವನ್ನು ತಿಳಿದುಕೊಳ್ಳುವುದಕ್ಕೆ ಇದು ಸಹಕಾರಿಯಾಗುತ್ತದೆ ಎಂದರು. ನಮ್ಮ ಮಾನಸಿಕ ಸ್ಥಿತಿಗತಿಯ ಮೇಲೆ ನಮ್ಮ ಯಶಸ್ಸು ನಿರ್ಣಯಿಸಲ್ಪಡುತ್ತದೆ ಆದುದರಿಂದ ಉತ್ತಮ ಮನಸ್ಥಿತಿಯೊಂದಿಗೆ ಬದುಕಿ ಸಮಾಜದ ಉನ್ನತಿಗೆ ಸಹಕಾರಿಗಳಾಗಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ಕಲಿಕೆ, ಕ್ರೀಡೆ ಸಾಹಿತ್ಯಿಕ, ಸಾಂಸ್ಕೃತಿಕ…

Read More

ಬಾಗಲಕೋಟೆ ಮೇ 9 NEWS DESK : 2023- 24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟಗೊಂಡಿದ್ದು, ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ಮುಧೋಳ ತಾಲೂಕಿನ ಮೆಳ್ಳಗೆರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿರುವ ಅಂಕಿತಾ ಅವರು 625 ಕ್ಕೆ 625 ಅಂಕ ಪಡೆದಿದ್ದಾರೆ.

Read More