ಸೋಮವಾರಪೇಟೆ ಮೇ 9 NEWS DESK : ಕುಮಾರಳ್ಳಿ ಗ್ರಾಮದ ಸಬ್ಬಮ್ಮದೇವಿ ಸುಗ್ಗಿ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಸುಗ್ಗಿಕಟ್ಟೆಯಲ್ಲಿ ಸುಗ್ಗಿಕಂಬಕ್ಕೆ ಊಲು ಏರಿಸುವ ಮೂಲಕ ಧಾರ್ಮಿಕ ಆಚರಣೆಗೆ ಚಾಲನೆ ನೀಡಲಾಯಿತು. ಪ್ರಾರಂಭದ ದಿನವೇ ಗ್ರಾಮಸ್ಥರು ಮಳೆಗಾಗಿ ಗ್ರಾಮದೇವತೆಗೆ ಪ್ರಾರ್ಥಿಸಿದರು. ಪ್ರಕೃತಿ ರಕ್ಷಣೆ ಹಾಗೂ ವರ್ಷವಿಡಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ರೈತರಿಗೆ ವಿಶ್ರಾಂತಿಗೋಸ್ಕರ 8 ದಿನಗಳ ಕಾಲ ಕೆಲಸ ಮಾಡದಂತೆ ಸಂಪ್ರದಾಯದಂತೆ ಆಜ್ಞೆ ನೀಡಲಾಗಿತ್ತು. ಹಸಿ ಮರಗಳನ್ನು ಕಡಿಯುವಂತಿಲ್ಲ. ಒಣಕಡ್ಡಿಗಳನ್ನು ಮುರಿಯುವಂತಿಲ್ಲ. ಮಣ್ಣಿನ ಕೆಲಸ ಮಾಡುವಂತಿಲ್ಲ ಎಂಬ ಪದ್ದತಿಯನ್ನು ಸುಗ್ಗಿ ಮುಗಿಯುವ ತನಕ ಆಚರಿಸಲಾಯಿತು. ಸುಗ್ಗಿ ಕೊನೆದಿನ ಸುಗ್ಗಿಕಟ್ಟೆಯಲ್ಲಿ ಬೆಳಗ್ಗಿನ ತನಕ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ವಾದ್ಯಗೋಷ್ಠಿಯೊಂದಿಗೆ ಸುಗ್ಗಿಕುಣಿತ, ಮಲ್ಲುಬೆಳಗುವುದು, ಕೋಲಾಟ, ಹುಲಿಭಂಗಿ ಕುಣಿತ, ಬಿಲ್ಲು ಪ್ರದರ್ಶನ, ಸೊಡ್ಲುಪೂಜೆ, ಸಾಂಪ್ರಾದಾಯಿಕ ಕಡವೆ ಬೇಟೆ, ಉತ್ಸವ ಮೂರ್ತಿ ಮೆರವಣಿಗೆ ಬಳಿಕ ಅನ್ನಸಂತರ್ಪಣೆ ನಡೆಯಿತು. ದೇವರ ಒಡೆಕಾರರಾದ ತಮ್ಮಯ್ಯ, ಮನೋಹರ, ಈರಪ್ಪ, ಉದಯ, ಕುಮಾರ್, ಗಣೇಶ, ನಾಗರಾಜು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಸುಗ್ಗಿಉತ್ಸವ…
ಲೇಖಕ: admin
ಮಡಿಕೇರಿ ಮೇ 9 NEWS DESK : 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಕೊಡಗು ಶೇ. 88.67 ಅಂಕಗಳನ್ನು ಪಡೆಯುವ ಮೂಲಕ 3ನೇ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡಿಸಿದ ಸುದ್ದಿಗೋಷ್ಠಿಯಲ್ಲಿ, ರಾಜ್ಯದಲ್ಲಿ 6,31,204 ವಿದ್ಯಾರ್ಥಿಗಳು (76.91%) ಉತ್ತೀರ್ಣರಾಗಿದ್ದಾರೆ. ಉಡುಪಿ (94%) ಪ್ರಥಮ ಸ್ಥಾನ ಪಡೆದರೆ, ಕೊಡಗು ಮತ್ತು ಶಿವಮೊಗ್ಗ ಮೂರನೇ ಸ್ಥಾನವನ್ನು ಹಂಚಿಕೊಂಡಿದೆ. ಯಾದಗಿರಿ (50.59%) ಕೊನೆಯ ಸ್ಥಾನ ಪಡೆದಿದೆ. ಬಾಗಲಕೋಟೆಯ ಅಂಕಿತಾ 625/625 ಪಡೆದುಕೊಂಡಿದ್ದು, 7 ವಿದ್ಯಾರ್ಥಿಗಳು 624/625 ಅಂಕಗಳನ್ನು ಪಡೆದುಕೊಂಡಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮೇಲುಗೈ ಸಾಧಿಸಿದ್ದು, ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ ಸಾಧನೆ. ವಿದ್ಯಾರ್ಥಿಗಳು ಫಲಿತಾಂಶವನ್ನು karresults.nic.in ಮತ್ತು kseab.karnataka.gov.in ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಈ ಬಾರಿ ಮಾರ್ಚ್ 25 ರಿಂದ ಏಪ್ರಿಲ್ 6ರವರೆಗೆ ಪರೀಕ್ಷೆ ನಡೆದಿತ್ತು.
ಮಡಿಕೇರಿ ಮೇ 9 NEWS DESK : ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬಾವೈಕ್ಯತಾ ಶಿಬಿರದಲ್ಲಿ ಕೊಡಗಿನ ನಾಲ್ಕು ವಿದ್ಯಾರ್ಥಿಗಳು ಹಾಗೂ ಓರ್ವ ಎನ್.ಎಸ್.ಎಸ್ ಅಧಿಕಾರಿ ಭಾಗವಹಿಸಿದ್ದಾರೆ. ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾಲಯದಲ್ಲಿ ಇಂದಿನಿಂದ ಮೇ 15ರ ವರಗೆ ನಡೆಯುವ ರಾಷ್ಟ್ರೀಯ ಬಾವೈಕ್ಯತಾ ಶಿಬಿರದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ರೀಶು ಕಾವೇರಪ್ಪ, ಕಾವೇರಿ ಕಾಲೇಜು ವಿರಾಜಪೇಟೆ ಸ್ವಯಂ ಸೇವಕ ಕೆ.ಕೆ.ಮುತ್ತಣ್ಣ ಹಾಗೂ ಎನ್.ಎಸ್.ಎಸ್ ಅಧಿಕಾರಿ ಬಿ.ಬಿ.ಸುನಿಲ್ ಕುಮಾರ್, ಸೆಂಟ್ ಆನ್ ವಿದ್ಯಾ ಸಂಸ್ಥೆ ಸ್ವಯಂ ಸೇವಕಿಯರಾದ ಬಿ.ಎನ್.ಲಾವಣ್ಯ, ಜಿ.ಎಂ.ಜನಿತಾ ಭಾಗವಹಿಸಿದ್ದಾರೆ. ಕೊಡಗು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಶೀನಾಪ್ಪ ಮತ್ತು ಎನ್.ಎಸ್.ಎಸ್ ಸಂಯೋಜನಾಧಿಕಾರಿ ಬಿ.ಎಸ್.ಗುಣಶ್ರೀ ಅವರ ಮಾರ್ಗದರ್ಶನದಲ್ಲಿ ಕೊಡಗು ಎನ್.ಎಸ್.ಎಸ್ ನೊಡಲ್ ಅಧಿಕಾರಿ ಎಂ.ಎನ್.ವನಿತ್ ಕುಮಾರ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಶಿಬಿರಕ್ಕೆ ಕಳುಹಿಸಿ ಕೊಡಲಾಯಿತು. ಕೊಡಗು ವಿಶ್ವವಿದ್ಯಾಲಯ ಪ್ರಾರಂಭವಾದ ನಂತರ ಕೊಡಗು ಎನ್.ಎಸ್.ಎಸ್ ಪ್ರತ್ಯೇಕಗೊಂಡ ಮೇಲೆ ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಬಾವೈಕ್ಯತಾ ಶಿಬಿರದಲ್ಲಿ ಕೊಡಗಿನ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದಾಗಿ ಎಂ.ಎನ್.ವನಿತ್ ಕುಮಾರ್…
ಮಡಿಕೇರಿ ಮೇ 9 NEWS DESK : ಹುಲಿದಾಳಿಗೆ ಹಸು ಬಲಿಯಾದ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಹರಿಹರ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಮುಕ್ಕಾಟಿರ ವಿನಯ್ ಎಂಬವರಿಗೆ ಸೇರಿದ ಗಬ್ಬದ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಆತಂಕ ಮೂಡಿಸಿರುವ ಹುಲಿಯನ್ನು ತಕ್ಷಣ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಡಿಕೇರಿ/ ಸೋಮವಾರಪೇಟೆ ಮೇ 8 NEWS DESK : ಕೊಡಗು ಜಿಲ್ಲೆಯ ವಿವಿಧೆಡೆ ಬುಧವಾರ ಉತ್ತಮ ಮಳೆಯಾಗಿದೆ. ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ಸುಂಟಿಕೊಪ್ಪ, ನಾಪೋಕ್ಲು ಸೇರಿದಂತೆ ಕೆಲವು ಭಾಗಗಳಲ್ಲಿ ಗಾಳಿ ಸಹಿತ ಮಳೆ ಸುರಿದಿದೆ. ನಾಪೋಕ್ಲು ಹಾಗೂ ಚೆರಿಯಪರಂಬು ವ್ಯಾಪ್ತಿಯಲ್ಲಿ ಭಾರೀ ಗಾಳಿ, ಗುಡುಗು ಸಹಿತ ಮಳೆಯಾಗಿದ್ದು, ನೀರು ಹಲವು ಮನೆಗಳನ್ನು ಆವರಿಸಿ ಆತಂಕವನ್ನು ಸೃಷ್ಟಿಸಿತು. ಮರ ಮತ್ತು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ನಾಪೋಕ್ಲು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮಡಿಕೇರಿ ತಾಲ್ಲೂಕಿನ ಕೆಲವು ಗ್ರಾಮಗಳು ಹಾಗೂ ನಗರ ವ್ಯಾಪಿಯಲ್ಲಿ ಉತ್ತಮ ಮಳೆಯಾಗಿದೆ. ನಿರಂತರವಾಗಿ ಒಂದು ಗಂಟೆ ಕಾಲ ಮಳೆ ಸುರಿದಿದ್ದು, ರಸ್ತೆಗಳು ಜಲಾವೃತಗೊಂಡಿದ್ದವು. ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿರುವ ಮಡಿಕೇರಿ ನಗರಕ್ಕೆ ಮತ್ತಷ್ಟು ಮಳೆಯಾಗುವ ಅಗತ್ಯವಿದೆ ಎಂದು ನಾಗರೀಕರು ಅಭಿಪ್ರಾಯಪಟ್ಟಿದ್ದಾರೆ. ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬುಧವಾರ ಸಂಜೆ ಉತ್ತಮ ಮಳೆ ಸುರಿದಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದೆ. ರಣಬಿಸಿಲಿನಿಂದ ಕಂಗಾಲಾಗಿದ್ದ ಕಾಫಿ ಬೆಳೆಗಾರರು…
ಸೋಮವಾರಪೇಟೆ ಮೇ 8 NEWS DESK : ಕೂತಿ ಗ್ರಾಮದಲ್ಲಿ ರೂ.9 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಚಿತಾಗಾರವನ್ನು ಉದ್ಘಾಟಿಸಲಾಯಿತು. ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಮೂಲಕ ರೂ. 7.50 ಲಕ್ಷ ಹಾಗೂ ಸಿಲಿಕಾನ್ ಚೇಂಬರ್‍ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ 1.57 ಲಕ್ಷ ವಿನಿಯೋಗಿಸಲಾಗಿದ್ದು, ಸುಸಜ್ಜಿತ ಚಿತಾಗಾರವನ್ನು ಪ್ರಮುಖರು ಜನೋಪಯೋಗಕ್ಕೆ ಮುಕ್ತಗೊಳಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ಚಿತಾಗಾರವು ಶಾಶ್ವತ ಯೋಜನೆಯಾಗಿದ್ದು, ಎಲ್ಲಾ ಗ್ರಾಮಗಳಿಗೂ ಇದು ಅನಿವಾರ್ಯವಾಗಿದೆ. ಆಧುನಿಕ ಚಿತಾಗಾರಗಳು ಬಡವರು, ಭೂ ಹೀನರಿಗೆ ಹೆಚ್ಚು ಉಪಯೋಗವಾಗಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನ ಬಜೆಗುಂಡಿ, ಕೊಡಗರಹಳ್ಳಿ, ಕೂತಿ ಗ್ರಾಮಗಳಿಗೆ ಸಿಲಿಕಾನ್ ಚೇಂಬರ್ ಮಂಜೂರಾಗಿದ್ದು, ಇದರಲ್ಲಿ ಕೂತಿ ಗ್ರಾಮಸ್ಥರು ಹೆಚ್ಚಿನ ಶ್ರಮವಹಿಸಿ ನಿರೀಕ್ಷಿತ ಸಮಯದಲ್ಲಿ ಕೆಲಸ ಪೂರ್ಣಗೊಳಿಸಿದ್ದಾರೆ ಎಂದು ಶ್ಲಾಘಿಸಿದರು. ಇದರೊಂದಿಗೆ ರಾಜ್ಯದಲ್ಲಿ ಒಟ್ಟು 678 ಚಿತಾಗಾರಗಳನ್ನು ಒದಗಿಸಲಾಗಿದ್ದು, 9.70 ಕೋಟಿ ವಿನಿಯೋಗಿಸಲಾಗಿದೆ.…
ಮಡಿಕೇರಿ ಮೇ 8 NEWS DESK : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದಿಂದ ನೀಡಲಾಗುವ ಪ್ರತಿಷ್ಠಿತ ಪ.ಗೋ(ಪದ್ಯಾಣ ಗೋಪಾಲಕೃಷ್ಣ) ಪ್ರಶಸ್ತಿಗೆ ಭಾಜನರಾಗಿರುವ ಕೊಡಗು ಜಿಲ್ಲೆಯ ವಾರ್ತಾಭಾರತಿ ವಿಶೇಷ ವರದಿಗಾರ ಇಸ್ಮಾಯಿಲ್ ಕಂಡಕರೆಗೆ ಮೇ 9 ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಂಗಳೂರಿನ ಪತ್ರಿಕಾ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ,ಪಿ.ಎಲ್ ಧರ್ಮ ಅವರು ಪ್ರಶಸ್ತಿ ಪ್ರದಾನ ಮಾಡದಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಭಾವಹಿಸಲಿದ್ದಾರೆ.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ ಹರೀಶ್ ರೈ,ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷರಾದ ರಾಮಕೃಷ್ಣ ಆರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಡಿಕೇರಿ ಮೇ 8 NEWS DESK : ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದವರಿಗೆ ಹಾಗೂ ಅರಣ್ಯ ಆಧಾರಿತ ಆದಿವಾಸಿ ಸಮುದಾಯದ ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರಿಗೆ ವಿವಿಧ ಕೌಶಲ್ಯಾಭಿವೃದ್ಧಿ (ತಾಂತ್ರಿಕ ನೈಪುಣ್ಯತೆ) ತರಬೇತಿಗೆ ಆಪ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಯೊಂದಿಗೆ ದಾಖಲಾತಿಗಳನ್ನು ಕೂಡಲೇ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸುವುದು. ಅಭ್ಯರ್ಥಿಯು ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಪ್ರತಿ(ಕಡ್ಡಾಯ), ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ, ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರದ ಪ್ರತಿ ಹಾಗೂ ಮೊಬೈಲ್ ಸಂಖ್ಯೆ ಸಲ್ಲಿಸಬೇಕು. ಕೌಶಲ್ಯ ತರಬೇತಿಗೆ ಅರ್ಹತೆ ಮತ್ತು ವಯೋಮಿತಿ: ಮಲ್ಟಿ ಸ್ಕಿಲ್ ಟೆಕ್ನೀಷಿಯನ್(ಎಲೆಕ್ಟ್ರಿಕಲ್), ಸೆಲ್ಫ್ ಎಂಪ್ಲಾಯ್ಡ್ ಟೈಲರ್, ಅಸಿಸ್ಟೆಂಟ್ ಬ್ಯೂಟಿ ಥೆರಪಿಸ್ಟ್ ತರಬೇತಿಗೆ 8ನೇ ತರಗತಿ ವಿದ್ಯಾರ್ಹತೆ ಹೊಂದಿದ್ದು, 18 ರಿಂದ 45 ವರ್ಷದೊಳಗಿರಬೇಕು. ಡೊಮೆಸ್ಟಿಕ್ ಡಾಟಾ ಎಂಟ್ರಿ ಆಫರೇಟರ್‍ಗೆ 10 ತರಗತಿ ವಿದ್ಯಾರ್ಹತೆ…
ಮಡಿಕೇರಿ ಮೇ 8 NEWS DESK : ಪ್ರಸಕ್ತ(2024-25) ಸಾಲಿಗೆ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪರಿಶಿಷ್ಟ ಜಾತಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ ದಾಖಲಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ, 21 ಕೊನೆಯ ದಿನವಾಗಿದೆ. 5ನೇ ತರಗತಿಯಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ಆಯ್ಕೆಯಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಜಿಲ್ಲೆಯ ಪ್ರತಿಷ್ಠಿತ ಶಾಲೆಯಲ್ಲಿ 6ನೇ ತರಗತಿಗೆ ಪ್ರವೇಶ ಅವಕಾಶವನ್ನು ಕಲ್ಪಿಸಲಾಗುವುದು. ವಿದ್ಯಾರ್ಥಿಗಳಿಂದ ಜಾತಿ ದೃಢೀಕರಣ ಪ್ರಮಾಣ ಪತ್ರ, ಆದಾಯ ದೃಢೀಕರಣ ಪತ್ರ ಹಾಗೂ ಮುಖ್ಯೋಪಾಧ್ಯಾಯರಿಂದ ದೃಢೀಕೃತಗೊಂಡ ಅಂಕ ಪಟ್ಟಿಯನ್ನು ಸಲ್ಲಿಸುವುದು. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಪೋಷಕರ ಆದಾಯ ಮಿತಿ ರೂ.2 ಲಕ್ಷ ಒಳಗೆ ಇರಬೇಕು. (ಈ ಬಗ್ಗೆ ತಹಶೀಲ್ದಾರರಿಂದ ಪಡೆದ ಆದಾಯ ಪ್ರಮಾಣ ಪತ್ರ ಸಲ್ಲಿಸುವುದು). ಅರ್ಜಿಯನ್ನು ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ 9480843037, ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ,…
ಮಡಿಕೇರಿ ಮೇ 8 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ “ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಪಂದ್ಯಾವಳಿಯ ಬುಧವಾರದ ಎರಡನೇ ಪಂದ್ಯ ಮಳೆಯ ಕಾರಣದಿಂದ ರದ್ದುಗೊಂಡಿತು. ಮಧ್ಯಾಹ್ನ ಆಯೋಜಿಸಲಾಗಿದ್ದ ಪಂದ್ಯಾಟದಲ್ಲಿ ಟಾಸ್ ಗೆದ್ದ ರಾಯಲ್ ಟೈಗರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಣ್ಣಿಗೇರಿ ನಾಡ್ ತಂಡ 15.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 147 ರನ್ ಗಳನ್ನು ಗಳಿಸಿತ್ತು. ಆದರೆ ಮಳೆ ಬಂದ ಕಾರಣ ಆಯೋಜಕರು ಪಂದ್ಯವನ್ನು ರದ್ದುಗೊಳಿಸಿದರು. ::: ಇಂದಿನ ಪಂದ್ಯ ::: ಮೇ 9 ಪಂದ್ಯ-1(ಬೆಳಿಗ್ಗೆ 8:30) ಟೀಮ್ ಲಿವರೇಜ್ / ಕೂರ್ಗ್ ಯುನೈಟೆಡ್ ಪಂದ್ಯ -2 (ಮಧ್ಯಾಹ್ನ 1:30) ಕೊಡವ ಟ್ರೈಬ್ / ಟೀಮ್ ವೈಲ್ಡ್ ಫ್ಲವರ್






