ಲೇಖಕ: admin

ಮಡಿಕೇರಿ ಮಾ.30 NEWS DESK : ಪ್ರತಿ ಚುನಾವಣೆ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ನಕ್ಸಲರು ಕಾಣಿಸಿಕೊಳ್ಳುತ್ತಿದ್ದು, ಇದು ರಾಷ್ಟ್ರೀಯ ಆಂತರಿಕ ಭದ್ರತೆ ಮತ್ತು ಸಾರ್ವಭೌಮತೆಗೆ ಬೆದರಿಕೆಯಾಗಿದೆ. ನಕ್ಸಲರ ಉಪಟಳವನ್ನು ಚಿಗುರಿನಲ್ಲೇ ಚಿವುಟಿ ಹಾಕಬೇಕು ಮತ್ತು ನಕ್ಸಲ್ ಸಮಸ್ಯೆಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಿಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕೊಡಗು ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಯ ಬೆಳವಣಿಗೆಯ ಕುರಿತು ವಿವರಿಸಿದ್ದಾರೆ. ನಕ್ಸಲಿಸಂ ಮನಸ್ಸು ಮೂಲತಃ 1800 ರಲ್ಲಿ ದೇವಟ್‌ಪರಂಬ ಕೊಡವ ನರಮೇಧದ ಫಲಾನುಭವಿಗಳಿಂದ ಮೊಳಕೆಯೊಡೆಯಿತು. ಇದನ್ನು 1834 ರಿಂದ 1837 ರ ನಡುವೆ ಸ್ಥಳೀಯ ಕೊಡವ ಯೋಧರು ಪರಿಣಾಮಕಾರಿಯಾಗಿ ನಿಗ್ರಹಿಸಿದರು. ಆ ಮೂಲಕ ಕೊಡವರ ತಾಯ್ನಾಡನ್ನು ರಕ್ಷಿಸಿದರು ಮತ್ತು ನಮ್ಮ ಸ್ವ-ನಿರ್ಣಯದ ಹಕ್ಕುಗಳನ್ನು ಬಲವಾಗಿ ನಿರ್ಧರಿಸಿದರು. ಆದರೆ 1956 ರಲ್ಲಿ ಕೂರ್ಗ್ ರಾಜ್ಯವನ್ನು ವಿಶಾಲ ಮೈಸೂರಿನೊಂದಿಗೆ ವಿಲೀನಗೊಳಿಸಿದ ನಂತರ ರಾಜ್ಯ ಮರುಸಂಘಟನೆ ಕಾಯಿದೆ ಜಾರಿಗೆ ಬಂದಾಗ ಮತ್ತೆ ನಕ್ಸಲ್…

Read More

ಸೋಮವಾರಪೇಟೆ ಮಾ.30 NEWS DESK : ಲೋಕಸಭಾ ಚನಾವಣೆಯ ಹಿನ್ನಲೆಯಲ್ಲಿ ಸೋಮವಾರಪೇಟೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ನಡೆಯಿತು. ಪಟ್ಟಣದ ಖಾಸಗಿ, ಕೆ.ಎಸ್.ಆರ್.ಸಿ.ಮತ್ತು ಪಟ್ಟಣ ಪಂಚಾಯಿತಿ ಆವರಣದಲ್ಲಿ  ರಂಗೋಲಿ ಸ್ಪರ್ಧೆ ನಡೆಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಇಲ್ಲಿನ ಪಟ್ಟಣ ಪಂಚಾಯ್ತಿ ವತಿಯಿಂದ ಭಾರತ ಚುನಾವಣಾ ಆಯೋಗದ ಆದೇಶದಂತೆ ಕರ್ನಾಟಕದಲ್ಲಿ ನಡೆಯಲಿರುವ ಲೋಕಸಭಾ ಉಪಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ಹಾಗೂ ಮತಗಟ್ಟೆಗೆ ಬಂದು ಮತ ಚಲಾಯಿಸಲು ಆಸಕ್ತಿ ಮೂಡಿಸುವ ಸಲುವಾಗಿ ಜಾಗೃತಿ ಮೂಡಿಸಲು ರಂಗೋಲಿ ಸ್ಪರ್ಧೆ ನಡೆಸಲಾಯಿತು. ಸ್ಪರ್ದೆಯಲ್ಲಿ ಸಾಕಷ್ಟು ಮಹಿಳೆಯರು ಆಸಕ್ತಿಯಿಂದ ಭಾಗವಹಿಸಿ ಚುನಾವಣೆ ಸಂಬಂದಿಸಿದ ರಂಗೋಲಿ ಹಾಗೂ ಘೋಷವಾಕ್ಯಗಳನ್ನು ಬರೆದರು. ಈ ಸಂದರ್ಭ ಪ.ಪಂ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ನವೀನ್ ಕುಮಾರ್, ಮುಖ್ಯಧಿಕಾರಿ ಲೋಕ್ಯ ನಾಯಕ್, ಆರೋಗ್ಯ ನಿರೀಕ್ಷಕ ಜಾಸಿಂಖಾನ್, ಸಿಬ್ಬಂದಿಗಳಾದ ರೂಪ, ವನಿತಾ, ಹೊನಲಾ ದೇವಿ, ಆದಿಲ್ಪಾಶಾ ಹಾಗೂ ಮುಂತಾದವರು ಹಾಜರಿದ್ದರು.

Read More

ಕುಶಾಲನಗರ ಮಾ.30 :   ಕುಶಾಲನಗರ ಟೈಕೂನ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಉಚಿತ ಹಾಕಿ ತರಬೇತಿ ಶಿಬಿರ ಏ.7 ರಿಂದ ಆರಂಭಗೊಳ್ಳಲಿದೆ ಎಂದು ಕ್ಲಬ್ ಕಾರ್ಯದರ್ಶಿ ಬಿ.ಟಿ.ಪೂರ್ಣೇಶ್ ತಿಳಿಸಿದ್ದಾರೆ. ಕುಶಾಲನಗರ ಪತ್ರಿಕಾ ಭವನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ಹತ್ತು ವರ್ಷಗಳಿಂದ ಶಿಬಿರ ನಡೆಯುತ್ತಿದ್ದು, ಈ ಮೂಲಕ ತರಬೇತು ಪಡೆದ ವಿದ್ಯಾರ್ಥಿಗಳು ಕ್ರೀಡಾ ಶಾಲೆಗಳಿಗೆ ನೇಮಕಗೊಳ್ಳುತ್ತಿದ್ದಾರೆ. ಶಿಬಿರದಲ್ಲಿ ಹಾಕಿ, ಅಥ್ಲೆಟಿಕ್ಸ್ ಮತ್ತು ಈಜು ಬಗ್ಗೆ ತರಬೇತಿ ನೀಡಲಾಗುತ್ತದೆ. ನುರಿತ ತರಬೇತುದಾರರ ಮೂಲಕ ಹದಿನೈದು ದಿನಗಳ ಕಾಲ ಶಿಬಿರ ನಡೆಯಲಿದೆ ಎಂದು ತಿಳಿಸಿದ್ದಾರೆ. ಎಂಟು ವರ್ಷದಿಂದ ಮೇಲ್ಪಟ್ಟವರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಕುಶಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಶಿಬಿರ ನಡೆಯಲಿದೆ. ಬೆಳಗ್ಗೆ 6:30 ರಿಂದ 8 ಗಂಟೆ ತನಕ ಹಾಕಿ ನಂತರ ಅಥ್ಲೆಟಿಕ್ಸ್ ತರಬೇತಿ ನೀಡಲಾಗುವುದು. ಈಜು ತರಬೇತಿಗೆ ಮಾತ್ರ ಖಾಸಗಿ ಈಜುಕೊಳ ಸೌಲಭ್ಯ ಹೊಂದಬೇಕಾದ ಕಾರಣ ಶಿಬಿರಾರ್ಥಿಗಳಿಗೆ ಕನಿಷ್ಠ ಶುಲ್ಕ ವಿಧಿಸಲಾಗುತ್ತದೆ ಎಂದರು. ಕ್ರೀಡೆ ಮೂಲಕ ಮಕ್ಕಳ ದೈಹಿಕ…

Read More

ಮಡಿಕೇರಿ ಮಾ.30 NEWS DESK  : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪ್ರಸಕ್ತ ಸಾಲಿನ ಮೇ 1 ರಿಂದ 15 ರವರೆಗೆ ನಗರದ ಜಿಲ್ಲಾ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ‘ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್’ ಲೆದರ್ ಬಾಲ್ ಪಂದ್ಯಾವಳಿ ನಡೆಯಲಿದೆಯೆಂದು ಫೌಂಡೇಶನ್‍ನ ಮುಖ್ಯ ಸಂಚಾಲಕ ಪೊರ್ಕೊಂಡ ಸುನಿಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪಂದ್ಯಾವಳಿ ಟಿ-20 ಮಾದರಿಯಲ್ಲಿ ನಡೆಯಲಿದ್ದು, ಹತ್ತು ಫ್ರಾಂಚೈಸಿ ತಂಡಗಳು ಪಾಲ್ಗೊಳ್ಳಲಿವೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಈಗಾಗಲೆ ಸುಮಾರು 200 ಕ್ರಿಕಟ್ ಪಟುಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಆಟಗಾರರ ಬಿಡ್ಡಿಂಗ್ ಏ.7ರಂದು ಗೋಣಿಕೊಪ್ಪಲಿನ ಅಶುರಾ ಕೂರ್ಗ್ ಸಭಾಂಗಣದಲ್ಲಿ ನಡೆಯಲಿದೆ ಎಂದರು. ಪಂದ್ಯಾವಳಿ ವಿಜೇತ ತಂಡಕ್ಕೆ 1.50 ಲಕ್ಷ ರೂ. ನಗದು ಮತ್ತು ಟ್ರೋಫಿ, ದ್ವಿತೀಯ 75 ಸಾವಿರ ರೂ. ನಗದು ಮತ್ತು ಟ್ರೋಫಿ, ತೃತೀಯ 25 ಸಾವಿರ ರೂ. ಮತ್ತು ಟ್ರೋಫಿ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಇದರೊಂದಿಗೆ…

Read More

ಮಡಿಕೇರಿ ಮಾ.30 NEWS DESK : ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಇಂದು ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದ ಅಭ್ಯರ್ಥಿಯಾಗಿ ಎ.ಎಸ್. ಸತೀಶ್  ಅವರು ಮೈಸೂರಿನಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಾ:ಕೆ.ವಿ.ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು.

Read More

ಮಡಿಕೇರಿ ಮಾ.30 NEWS DESK : ಲೋಕಸಭಾ ಚುನಾವಣೆಯ ಹಿನ್ನೆಲೆ ಮತದಾನ ನಡೆಯುವ ದಿನ ಸರಕಾರಿ ರಜೆಯನ್ನು ಘೋಷಿಸಲಾಗಿದೆ. ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಶುಕ್ರವಾರ ಮತ್ತು ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7 ರಂದು ಮಂಗಳವಾರ ಚುನಾವಣೆ ನಡೆಯಲಿದೆ.

Read More

ವಿರಾಜಪೇಟೆ ಮಾ.30 NEWS DESK : ವಿರಾಜಪೇಟೆಯ ನಾಟ್ಯಂಜಲಿ ನೃತ್ಯ ಸಂಸ್ಥೆಯ ಗುರು ಕಾವ್ಯಶ್ರೀ ಕಾಂತ್‍ರಾಜ್ ಅವರಿಗೆ ನೃತ್ಯ ಕ್ಷೇತ್ರದಲ್ಲಿನ ವೈಯುಕ್ತಿಕ ಸಾಧನೆ ಹಾಗೂ ವಿದ್ಯಾರ್ಥಿಗಳಿಗೆ ನೀಡುತ್ತಿರುವ ತರಬೇತಿಯನ್ನು ಪರಿಗಣಿಸಿ ರಾಜ್ಯ ಮಟ್ಟದ “ಜ್ಞಾನ ಯೋಗಿ ಶಿವಚರಣೆ ನೀಲಾಂಬಿಕೆ ಪ್ರಶಸ್ತಿ ಲಭಿಸಿದೆ. ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆ ವತಿಯಿಂದ ಬೆಂಗಳೂರಿನ ಬಾಗಲಗುಂಟೆಯ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯ ಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಗಣ್ಯರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಕಾವ್ಯಶ್ರೀ ಅಮ್ಮತ್ತಿ ಬಿಳುಗುಂದ ಗ್ರಾಮದ ಹೇಮಾವತಿ, ಕಾಂತ್ ರಾಜ್ ದಂಪತಿಯ ಪುತ್ರಿ. ಪ್ರಸ್ತುತ ಅರಮೇರಿ ಕಳಂಚೇರಿ ಮಠದ ಎಸ್.ಎಂ.ಎಸ್ ವಿದ್ಯಾಪೀಠದ ಶಿಕ್ಷಕಿಯಾಗಿರುತ್ತಾರೆ.

Read More

ಮಡಿಕೆರಿ ಮಾ.30 NEWS DESK : ಗುಂಡೇಟಿಗೆ ವ್ಯಕ್ತಿಯೊಬ್ಬರು ಬಲಿಯಾಗಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ. ಅರುವತ್ತೋಕ್ಲು ಗ್ರಾ.ಪಂ ಮಾಜಿ ಅಧ್ಯಕ್ಷ ಮಲ್ಲಂಡ ಪ್ರಕಾಶ್ (57) ಗುಂಡೇಟಿಗೆ ಬಲಿಯಾದ ದುರ್ದೈವಿಯಾಗಿದ್ದಾರೆ. ಇವರ ಪುತ್ರ ಧ್ಯಾನ್ ಗೂ ಗುಂಡೇಟು ತಗುಲಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪ್ರಕಾಶ್ ಅವರ ಸಹೋದರ ಸುಬ್ರಮಣಿ ಎಂಬುವವರು ಬೇಗೂರು ಗ್ರಾಮದ ತೋಟದಲ್ಲಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More

ಮಡಿಕೇರಿ ಮಾ.30 NEWS DESK :  ಕೊಡವ ಕುಟುಂಬಗಳ ನಡುವಿನ 24ನೇ ಹಾಕಿ ಹಬ್ಬ ಪ್ರತಿಷ್ಠಿತ “ಕುಂಡ್ಯೋಳಂಡ ಹಾಕಿ ಕಾರ್ನಿವಲ್ 2024” ನಾಪೋಕ್ಲುವಿನ ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಅವರು ಹಾಕಿ ಹಬ್ಬವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕೊಡಗಿನ ವಿಶಿಷ್ಟ ಕೊಡವ ಸಂಸ್ಕೃತಿ, ಸಂಪ್ರದಾಯಗಳೊಂದಿಗೆ, ಹಾಕಿ ಕ್ರೀಡೆಯ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಿಕೊಂಡು ಮುಂದುವರಿಸಿಕೊಂಡು ಹೋಗುವುದು ಅತ್ಯವಶ್ಯ. ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬ ಹೆಮ್ಮೆಯ ಪ್ರತೀಕವಾಗಿದೆ ಎಂದರು. ::: ಸಂಭ್ರಮ ::: 24ನೇ ವರ್ಷದ ಕ್ರೀಡಾ ಹಬ್ಬದ ಅಂಗವಾಗಿ ಬಂದೂಕಿನಿಂದ ಅಷ್ಟೇ ಸಂಖ್ಯೆಯ ಗುಂಡುಗಳನ್ನು ಆಕಾಶಕ್ಕೆ ಸಿಡಿಸಿ ಸಂಭ್ರಮಿಸಲಾಯಿತು. ಇದಕ್ಕೂ ಮೊದಲು ನಾಪೋಕ್ಲು ಶ್ರೀ ರಾಮ ಮಂದಿರದಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದವರೆಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಬೃಹತ್ ಮೆರವಣಿಗೆ ಸಾಗಿತು. ಮೈದಾನದಲ್ಲಿ ಪಥಸಂಚಲನ, ಧ್ವಜಾರೋಹಣ ಮತ್ತು ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮ ನಡೆಯಿತು.…

Read More

ಸುಂಟಿಕೊಪ್ಪ ಮಾ.30 NEWS DESK : ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಪವಿತ್ರ ಗುರುವಾರದ ಸಂಜೆ ಕಡೆಯ ಭೋಜನ ಮತ್ತು ಶುಭ ಶುಕ್ರವಾರ (ಗುಡ್‍ಫ್ರೈಡೆ)ದ ಅಂಗವಾಗಿ ವಿಶೇಷ ಬಲಿಪೂಜೆ ನಡೆಯಿತು. ಸಂತ ಮೇರಿ ಶಾಲಾವರಣದಲ್ಲಿ ಪ್ರಾರ್ಥನಾ ಕೂಟವನ್ನು ದೇವಾಲಯದ ಧರ್ಮಗುರುಗಳಾದ ಫಾಧರ್ ಅರುಳ್ ಸೇಲ್ವಕುಮಾರ್ ಹಾಗೂ ಸಹಾಯಕ ಗುರುಗಳಾದ ನವೀನ್ ಕುಮಾರ್ ನೇರವೇರಿಸಿದರು. ನೂರಾರು ಸಂಖ್ಯೆಯಲ್ಲಿ ನೇರೆದಿದ್ದ ಕ್ರೈಸ್ತ ಭಾಂದವರು ಶ್ರದ್ಧಾಭಕ್ತಿಯಿಂದ ಪ್ರಾರ್ಥನಾ ಕೂಟದಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಧರ್ಮಗುರುಗಳಾದ ವಂ.ಫಾ.ಅರುಳ್‍ಸೇಲ್ವಕುಮಾರ್, ಸಹಾಯಕ ಧರ್ಮಗುರುಗಳಾದ ನವೀನ್‍ಕುಮಾರ್ ಅವರು ದೇವಾಲಯದ ಕ್ರೈಸ್ತಭಾಂದವರ ಪಾದಗಳನ್ನು ತೊಳೆಯುವ ಮೂಲಕ ಆಚರಣೆಯನ್ನು ನೇರವೇರಿಸುವ ಮೂಲಕ ನೆನಪಿಸಿದರು. ನಂತರ ಮಧ್ಯರಾತ್ರಿಯವರೆಗೆ ವಿಶೇಷ ಪ್ರಾರ್ಥನೆ ದ್ಯಾನಗಳಲ್ಲಿ ಕ್ರೈಸ್ತಭಾಂದವರು ತೊಡಗಿಸಿಕೊಂಡಿದ್ದರು. ಶುಭಶುಕ್ರವಾರದ ಅಂಗವಾಗಿ ಧೇವಾಲಯದಲ್ಲಿ ಕ್ರೈಸ್ತಾ ಭಾಂದವರು ಸಂತಮೇರಿ ಶಾಲಾ ಸಭಾಂಗಣದಲ್ಲಿ ವಿಶೇಷ ಪ್ರಾರ್ಥನೆ ಮಾಡುವ ಪ್ರಾರ್ಥನಕೂಟದಲ್ಲಿ ಪ್ರಸುತ್ತ ಪಡಿಸಲಾಗಿದ್ದು, ವಿಶೇಷ ಪ್ರಾರ್ಥನೆಯಲ್ಲಿ ಶೃದ್ಧಾ ಭಕ್ತಿಯಿಂದ ತೊಡಗಿಸಿಕೊಂಡರು. ದೇವಾಲಯದಿಂದ ಆರಂಭಗೊಂಡ ಶಿಲುಬೆಯಾದಿಯಲ್ಲಿ ಸಂತ ಅಂತೋಣಿ ಶಾಲಾವರಣದಿಂದ ಆರಂಭಗೊಂಡು ಸಂತಮೇರಿ ಕ್ರಿಸ್ತ ಶಿಲುಬೆಯಾತನೆಯನ್ನು ಸ್ಮರಿಸುತ್ತಾ…

Read More