ಲೇಖಕ: admin

ಮಡಿಕೇರಿ NEWS DESK ಏ.24 :  ಸ್ವಾಮಿ ವಿವೇಕಾನಂದ ಯುವಕ ಸಂಘ ಮತ್ತು ಜಂಕ್ಷನ್ ರಾಯಲ್ ಕೊಂಡಂಗೇರಿ ಆಶ್ರಯದಲ್ಲಿ  ಏ.27 ರಿಂದ ಮೇ 1ರ ವರೆಗೆ 13ನೇ ವರ್ಷದ ಕೊಂಡಂಗೇರಿ ಕ್ರಿಕೆಟ್ ಪ್ರೀಮಿಯರ್‌ ಲೀಗ್ ಪಂದ್ಯಾವಳಿ  ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಕೊಂಡಂಗೇರಿ ಶಾಲಾ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ 33,333, ದ್ವಿತೀಯ ಬಹುಮಾನ 22,222 ,ತೃತೀಯ ಮತ್ತು 4ನೇ ಬಹುಮಾನ ಆಕರ್ಷಕ ಟ್ರೋಫಿ ನೀಡಲಾಗುವುದೆಂದು ಆಯೋಜಕರು ತಿಳಿಸಿದ್ದಾರೆ. ಅದಲ್ಲದೇ ವಿವಿಧ ಕ್ರೀಡಾ ಮತ್ತು ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುವುದೆಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ  9535782783,966338006, 87626743996 ಸಂಪರ್ಕಿಸಬಹುದು.

Read More

ಮಡಿಕೇರಿ ಏ.24 NEWS DESK : ಮತದಾನ ನಮ್ಮ ಹಕ್ಕು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಪ್ರಮುಖ ಅಂಶವಾಗಿದೆ. ಆದ್ದರಿಂದ ಏ.26 ರಂದು ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸುವ ಮೂಲಕ ತಮ್ಮ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕೆಂದು ಮದನೀಸ್ ಅಸೋಸಿಯೇಷನ್ ನ ಕೊಡಗು ಜಿಲ್ಲಾಧ್ಯಕ್ಷ ಹಮೀದ್ ಮದನಿ ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪರಂಪರಾಗತ ಜಾತ್ಯಾತೀತ, ಸೌಹಾರ್ಧಯುತ ಭಾರತವೇ ನಮ್ಮ ಗುರಿ. ಜಾತ್ಯಾತೀತ ಮನೋಭಾವವುಳ್ಳ ಪಕ್ಷಗಳನ್ನು ಮತ್ತು ವ್ಯಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಉತ್ತಮ ಆಡಳಿತವನ್ನು ಅಸ್ತಿತ್ವಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆೆ. ಆದ್ದರಿಂದ ಚುನಾವಣಾ ದಿನದಂದು ಎಲ್ಲಾ ಕಾರ್ಯಗಳನ್ನು ಬದಿಗಿಟ್ಟು ಮತದಾನ ಮಾಡಲು ಪ್ರತಿಜ್ಞಾಬದ್ಧರಾಗಬೇಕು ಎಂದು ತಿಳಿಸಿದ್ದಾರೆ.

Read More

ಮಡಿಕೇರಿ ಏ.24 NEWS DESK : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಡಿಕೇರಿ, ಕುಶಾಲನಗರ ಸೇರಿದಂತೆ ಕೊಡಗಿನ ವಿವಿಧೆಡೆ ಪೊಲೀಸ್ ಇಲಾಖೆ ವತಿಯಿಂದ ಪಥಸಂಚಲನ ನಡೆಯಿತು. ಮಡಿಕೇರಿ ನನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಪೊಲೀಸ್ ಉಪವಿಭಾಗ, ಜಿಲ್ಲಾ ಶಸಸ್ತ್ರ ದಳ(ಡಿ.ಎ.ಆರ್) ಗುಜರಾತ್ ರಿಸರ್ವ್ ಫೋರ್ಸ್ ಸಿಬ್ಬಂದಿಗಳು ಶಸ್ತ್ರಸಜ್ಜಿತರಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜನರಲ್ಲಿ ಸ್ಥೈರ್ಯ ತುಂಬಿದರು. ಈ ಸಂದರ್ಭ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಮಡಿಕೇರಿ ಡಿ.ವೈ.ಎಸ್.ಪಿ.ಮಹೇಶ್, ನಗರ ವೃತ್ತ ನಿರೀಕ್ಷಕ ಪಿ.ಕೆ.ರಾಜು, ಮಹಿಳಾ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಮಂಜು, ಸೆನ್ ಸ್ಟೇಷನ್ ಇನ್ಸ್‍ಪೆಕ್ಟರ್ ಶ್ರೀಕಾಂತ್, ಗ್ರಾಮಾಂತರ ಪೊಲೀಸ್ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಡಿಎಆರ್ ಇನ್ಸ್‍ಪೆಕ್ಟರ್ ಚನ್ನನಾಯಕ ಸೇರಿದಂತೆ ಇನ್ನಿತರರು ಹಾಜರಿದ್ದರು. ಕುಶಾಲನಗರ ಬೈಚನಹಳ್ಳಿ ಪೆಟ್ರೋಲ್ ಬಂಕ್ ಬಳಿಯಿಂದ ಹೊರಟ ಪಥ ಸಂಚಲನಕ್ಕೆ ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‍ರಾಜ್ ಚಾಲನೆ ನೀಡಿದರು. ಸೋಮವಾರಪೇಟೆ ಪೊಲೀಸ್ ಉಪವಿಭಾಗದ ಡಿವೈಎಸ್‍ಪಿ ಆರ್.ವಿ.ಗಂಗಾಧರಪ್ಪ ನೇತೃತ್ವದಲ್ಲಿ ಏಳು ಮಂದಿ ಇನ್ಸ್‍ಪೆಕ್ಟರ್‍ಗಳು, ಉಪ…

Read More

ನಾಪೋಕ್ಲು ಏ.24 NEWS DESK : ಬೇಂಗೂರು ಗ್ರಾಮದ ಶ್ರೀ ಕಡಪಾಲಪ್ಪ ದೇವರ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದ ಅರ್ಚಕ ರಾಧಾಕೃಷ್ಣ ಭಟ್ ಉಪಸ್ಥಿತಿಯಲ್ಲಿ ವೈದಿಕ ವಿದ್ವಾಂಸ ಕಳತೂರು ವೇದಮೂರ್ತಿ ಬ್ರಹ್ಮಶ್ರೀ ಉದಯತಂತ್ರಿ ನೇತೃತ್ವದಲ್ಲಿ, ರಂಜಾಳ ಪೌರೋಹಿತ್ಯ ವಾಚಸ್ಪತಿ ವೇದಮೂರ್ತಿ ಗುರುರಾಜ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಿತು. ಪ್ರತಿಷ್ಠಾಪನೆಯ ಬಳಿಕ ಮಧ್ಯಾಹ್ನ ಹೂವಿನಿಂದ ಅಲಂಕೃತ ದೇವರ ಬಿಂಬಕ್ಕೆ ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಿತು. ಈ ಸಂದರ್ಭ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ತೇಲಪಂಡ ನಂದ ಮಂದಣ್ಣ, ಉಪಾಧ್ಯಕ್ಷ ಕುಂಚೆಟ್ಟಿರ ಸುಬ್ಬಯ್ಯ, ಕಾರ್ಯದರ್ಶಿ ಕುಂಚೆಟ್ಟಿರ ಗೋಪಾಲ,ಖಜಾಂಚಿ ಪಟ್ಟಮಾಡ ಅಶೋಕ್, ಸದಸ್ಯರಾದ ಕಲ್ಲು ಮಾಡಂಡ ವಾಸು, ಕುಂಚೆಟ್ಟಿರ ರಮೇಶ್, ಚೋಕಿರ ಪೊನ್ನಣ್ಣ, ಕಲ್ಲು ಮಾಡಂಡ ಅಶೋಕ್, ಕುಂಚೆಟ್ಟಿರ ರಮೇಶ್, ಚೋಕಿರ ಪೊನ್ನಣ್ಣ, ಕೀಪಾಡಂಡ ವಾಸು, ಬೊಳ್ಳಾರ್ಪಂಡ ಚಂಗಪ್ಪ, ತಕ್ಕಮುಖ್ಯಸ್ಥರು, ಚುನಾಯಿತ ಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು…

Read More

ನಾಪೋಕ್ಲು ಏ.23 NEWS DESK : ಜೀವನದಲ್ಲಿ ನಾವು ಸುಖ, ಶಾಂತಿ, ನೆಮ್ಮದಿಯನ್ನು ಬಯಸುತ್ತೇವೆ. ನಾವು ಬಯಸಿದ ಕ್ಷಣ ಎಲ್ಲವೂ ನಮ್ಮ ಬಳಿಗೆ ಬರುವುದಿಲ್ಲ. ಅವುಗಳನ್ನು ಪಡೆಯಲು ಸತತ ಶ್ರಮಬೇಕು. ಶ್ರಮದ ಜೊತೆಗೆ ದೇವರ ಅನುಗ್ರಹ ಇದ್ದರಷ್ಟೇ ಸುಖ, ಶಾಂತಿ, ನೆಮ್ಮದಿಯನ್ನು ಗಳಿಸಲು ಸಾಧ್ಯ ಎಂದು ಉಡುಪಿ ಪೇಜಾವರ ಅದೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಬೇಂಗೂರು ಗ್ರಾಮದ ಶ್ರೀ ನಾಡುಕಡಪಾಲಪ್ಪ ದೇವಾಲಯದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು. ದೇವರು ಗುಡಿಯಲ್ಲಿ ಮಾತ್ರ ನೆಲೆಸಿರುವುದಲ್ಲ. ಸಮಾಜದ ಎಲ್ಲರ ಹೃದಯದಲ್ಲೂ ನೆಲೆಸಿದ್ದಾರೆ. ಬದುಕಿಗಾಗಿ ನಾವು ಒಂದು ಬುತ್ತಿಯನ್ನು ಆಯ್ದುಕೊಂಡಿರುತ್ತೇವೆ. ಅದು ಬರೀ ಹಣ ಸಂಪಾದನೆಗಾಗಿ ಮಾತ್ರ ಅಲ್ಲ. ಆ ವೃತ್ತಿಯ ಮೂಲಕ ಸಮಾಜದ ಸೇವೆ ಮಾಡುತ್ತಿದ್ದೇವೆ ಎನ್ನುವ ಅರಿವು ನಮ್ಮಲ್ಲಿದ್ದರೆ ವೃತ್ತಿಗೆ ಗೌರವವಿರುತ್ತದೆ. ವೃತ್ತಿಯಲ್ಲಿ ಮೋಸ, ಅವ್ಯವಹಾರಕ್ಕೆ ಎಡೆ ಇರಬಾರದು, ಮೋಸ ಅವ್ಯವಹಾರ ರಹಿತವೃತ್ತಿಯೇ ದೇವರ ಪೂಜೆ. ಭಗವಂತನ ಆರಾಧನೆ ಎಂಬುದು…

Read More

ನಾಪೋಕ್ಲು ಏ.23 NEWS DESK  : ಜಿಲ್ಲೆಯಲ್ಲಿ ವಿವಿಧ ಕ್ರೀಡಾ ಕೂಟಗಳು ಯಶಸ್ವಿಯಾಗಿ ನಡೆಯುತ್ತಿವೆ. ಇದೇ ರೀತಿ ಮುಂಬರುವ ವರ್ಷಗಳಲ್ಲೂ ಕ್ರೀಡಾ ಉತ್ಸವಗಳು ಜರುಗಲಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಕ್ರೀಡಾಂಗಣದಲ್ಲಿ ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿರುವ ಮೂರನೇ ವರ್ಷದ ಬೊಟ್ಟೋಳಂಡ ಕಪ್ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಪಂದ್ಯಾವಳಿಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಾಕಿ ಅಕಾಡೆಮಿಯ ಮನವಿಯಂತೆ ಅಕಾಡೆಮಿ ಸ್ಥಾಪನೆಗಾಗಿ 5 ಎಕರೆ ಜಾಗವನ್ನು ತೋರದಲ್ಲಿ ಗುರುತಿಸಲಾಗಿದೆ. ಹೋಬಳಿವಾರು ಕ್ರೀಡಾ ಮೈದಾನದ ಪುನಶ್ಚೇತನ ಮಾಡಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಮಟ್ಟದಲ್ಲೂ ಕ್ರೀಡಾ ಮೈದಾನಗಳನ್ನು ಅಭಿವೃದ್ಧಿಪಡಿಸ ಬೇಕು. ಹಾಕಿ ಮಾತ್ರವಲ್ಲ. ಎಲ್ಲಾ ಕ್ರೀಡೆಗಳನ್ನು ಗ್ರಾಮೀಣ ಪ್ರದೇಶದ ಪ್ರತಿಭೆಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತಾಗಬೇಕು .ಆ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸುವುದು ಅಗತ್ಯ ಎಂದರು. ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ತಿತೀರ…

Read More

ಸುಂಟಿಕೊಪ್ಪ ಏ.24 NEWS DESK : ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮಾತ್ರ ಗುರುತಿಸದೇ ಪ್ರಾದೇಶಿಕ ಪಕ್ಷವಾದ ಕೆ.ಆರ್ ಪಕ್ಷದ ಕಡೆಗೂ ಒಲವು ತೋರಿಸಿದರೆ ಜನ ಸೇವೆ, ದೇಶ ಸೇವೆಗೂ ನಾವು ಕಟ್ಟಿಬದ್ಧರಾಗಿ ಸಿದ್ದರಿದ್ದೇವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಎಸ್.ಪ್ರವೀಣ್ ಹೇಳಿದರು. ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು. ನಮ್ಮ ಪಕ್ಷ ಕಳೆದ ಹಲವು ವರ್ಷಗಳಿಂದಲೂ ಜನ ಪರವಾದ ಸೇವೆಗಳು ಸೂಕ್ತ ರೀತಿಯಲ್ಲಿ ದೊರಯಬೇಕೆಂದು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಬಡವರ ಸೇವೆ, ಜನಪರ ಕಾಳಜಿಯೊಂದಿಗೆ ನಿರಂತರವಾಗಿ ಕೆಲಸ ಮಾಡುವ ಮೂಲಕ ಬಡವರ ಪರವಾಗಿ ನಿಂತಿದ್ದೇವೆ. ಭ್ರಷ್ಟಚಾರದಿಂದ ಕೂಡಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಪಕ್ಷವನ್ನು ತೊಡೆದು ಹಾಕಿ ಪ್ರಾದೇಶಿಕ ಪಕ್ಷವಾದ ಕೆಆರ್‍ಎಸ್ ಪಕ್ಷವನ್ನು ಗೆಲ್ಲಿಸಿ ಅರ್ಹ, ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು. ನಂತರ ಪಟ್ಟಣದ ಅಂಗಡಿ, ಮನೆ ಮನೆಗೆ ತೆರಳಿ ಭಿತ್ತಿಪತ್ರ ನೀಡಿ ಮತಯಾಚನೆ…

Read More

ಸುಂಟಿಕೊಪ್ಪ ಏ.24 NEWS DESK : ಕೊಡಗರಹಳ್ಳಿ ಮಾರುತಿ ನಗರದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಹಾಗೂ ಹನುಮಾನ್ ಜಯಂತಿ ಶ್ರದ್ಧಾಭಕ್ತಿಯಿಂದ ನಡೆಯಿತು. ಮುಂಜಾನೆ ಪುಣ್ಯಾಹ ಗಣಪತಿ ಹೋಮ, ನವಕಲಶ ಪೂಜೆ, ಕಲಶಾಭಿಷೇಕ, ಮಂತ್ರಾಕ್ಷತೆ, ಮಹಾಪೂಜೆ ಹಾಗೂ ಮಹಾ ಮಂಗಳಾರತಿ ನಡೆಯಿತು. ನಂತರ ತೀರ್ಥ ಪ್ರಸಾದ ವಿತರಿಸಲಾಯಿತು. ದಿನದ ವಿಶೇಷ ಪೂಜಾ ಕೈಕರ್ಯಗಳನ್ನು ದೇವಾಲಯದ ಆರ್ಚಕರಾದ ನರಸಿಂಹ ಭಟ್ ಹಾಗೂ ಗಣೇಶ್ ಶರ್ಮಾ ನೇರವೇರಿಸಿದರು. ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು.

Read More

ಮಡಿಕೇರಿ ಏ.23 NEWS DESK : ಮೈಸೂರು- ಕೊಡಗು ಲೋಕಸಭಾ ಚುನಾವಣೆಯ ಮತದಾನದ ದಿನವಾದ ಏ.26 ಸಮೀಪಿಸುತ್ತಿದೆ. ಕೊಡಗು ಜಿಲ್ಲೆಯಾದ್ಯಂತ ಕಾಂಗ್ರೆಸ್ ಬಿರುಸಿನ ಪ್ರಚಾರ ನಡೆಸಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ದಕ್ಷಿಣ ಕೊಡಗಿನ ಹಲವು ಭಾಗಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡ ಅವರ ಪರ ಮತಯಾಚಿಸಿದರು. ರಾಜ್ಯ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವೈಫಲ್ಯಗಳನ್ನು ಮತದಾರರೆದುರು ವಿವರಿಸಿದರು. ತೋರ ಗ್ರಾಮ, ಕೆದಮಳ್ಳೂರು ಪಂಚಾಯತಿ ವ್ಯಾಪ್ತಿಯ  ಬಾರಿಕಾಡು ಪೈಸಾರಿ ಸೇರಿದಂತೆ ಅನೇಕ ಭಾಗಗಳಿಗೆ ಭೇಟಿ ನೀಡಿ ಎಂ.ಲಕ್ಷ್ಮಣ ಅವರ ಪರ  ಮತಯಾಚಿಸಿದರು. ಈ ಸಂದರ್ಭ ಪಕ್ಷದ  ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Read More

ಸುಂಟಿಕೊಪ್ಪ ಏ.23 NEWS DESK : ಸುಂಟಿಕೊಪ್ಪ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿ ಯದುವೀರ್ ಪರ ಮತಯಾಚನೆ ನಡೆಸಿದರು. ಬಿಜೆಪಿ ನಗರಾಧ್ಯಕ್ಷ ಧನುಕಾವೇರಪ್ಪ ಅವರ ನೇತೃತ್ವದಲ್ಲಿ ಪಟ್ಟಣದ ಮನೆ, ಅಂಗಡಿಗಳಿಗೆ ತೆರಳಿ ಯದುವೀರ್ ಅವರನ್ನು ಗೆಲ್ಲಿಸಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು. ಮತಯಾಚನೆ ಮಾಡುವುದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ, ನಾಯಕರುಗಳಾದ ಅಮೀತ್ ಶಾ, ಯಡಿಯೂರಪ್ಪ,ಅಭ್ಯರ್ಥಿ ಯದುವೀರ್, ಸ್ಥಳೀಯ ನಾಯಕರು ಮತ್ತು ಪಕ್ಷದ ಪರ ಘೋಷಣೆ ಕೂಗಿದರು. ನಂತರ ಕಾಲ್ನನಡಿಗೆ ಮೂಲಕ ಗದ್ದೆಹಳ್ಳದಿಂದ ಪಟ್ಟಣದವರೆಗೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಿತ್ತಿ ಪತ್ರ ವಿತರಿಸಿ ಮತಯಾಚನೆ ಮಾಡಿದರು. ಮುಖಂಡರಾದ ಪಿ.ಆರ್.ಸುನಿಲ್ ಕುಮಾರ್, ವಿಘ್ನೇಶ್, ಬಿ.ಕೆ.ಮೋಹನ್, ಈಶ್ವರ, ವಸಂತಿ,ಸಿಸಿ.ಸುನಿಲ್, ಓಡಿಯಪ್ಪನ ಸುದೇಶ್, ಅನಿಲ್, ರಾಜ, ಸಹದೇವನ್, ಬಿ.ಕೆ.ಪ್ರಶಾಂತ್, ಶಾಂತಿ ಸೇರಿದಂತೆ ಕಾರ್ಯಕರ್ತರು ಇದ್ದರು.

Read More