ಲೇಖಕ: admin

ಮಡಿಕೇರಿ ಏ.19 NEWS DESK : ವಾಲ್ನೂರಿನಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಸಿದ್ದಾಪುರ ನಗರ, ವಾಲ್ನೂರು ಗ್ರಾಮ, ಅರೆಕಾಡು ಗ್ರಾಮ, ನೆಲ್ಯಹುದಿಕೇರಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಏ.19ರ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರಬಾರದು, ಪ್ರತಿಭಟನೆ, ಮೆರವಣಿಗೆ, ರಾಲಿ, ಜಾಥಾ ನಡೆಸಬಾರದು, ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗಬಾರದೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Read More

ನಾಪೋಕ್ಲು ಏ.21 NEWS DESK : ಜಿಲ್ಲೆಯಲ್ಲಿ ಕೊಡವ ಹಾಕಿ ಉತ್ಸವದಂತೆ ಹಗ್ಗಜಗ್ಗಾಟ ಕ್ರೀಡೆಯೂ ಪ್ರಸಿದ್ಧಿ ಹೊಂದಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೆರ ಬಾಂಡ್ ಗಣಪತಿ ಹೇಳಿದರು. ಕೆಪಿಎಸ್ ಶಾಲೆಯ ಆಟದ ಮೈದಾನದಲ್ಲಿ ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿದ್ದ ಮೂರನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮೊಟ್ಟ ಮೊದಲ ಬಾರಿ ಪೊನ್ನೋಲತಂಡ ಕುಟುಂಬಸ್ಥರು ಕೊಡವ ಹಗ್ಗಜಗ್ಗಾಟ ಕ್ರೀಡಾಕೂಟವನ್ನು ಆರಂಭಿಸಿದ್ದರು. ನಂತರದ ದಿನಗಳಲ್ಲಿ ಇದು ಹಾಕಿ ನಮ್ಮೆಯಂತೆ ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆ,. ಈ ಬಾರಿ 9 ಮಹಿಳಾ ತಂಡಗಳು ಕೂಡ ಪಾಲ್ಗೊಂಡಿರುವುದು ವಿಶೇಷ ಎಂದರು. ಕೊಡವ ಜನಾಂಗದಲ್ಲಿ ಹಬ್ಬದ ರೂಪದಲ್ಲಿ ಕ್ರೀಡೆಯನ್ನು ಆಚರಿಸಲಾಗುತ್ತಿದೆ. ಮುಂದಿನ ವರ್ಷ ಐದು ತಂಡಗಳು ಸ್ಪರ್ಧೆ ಆಯೋಜಿಸಲು ಮುಂದೆ ಬಂದಿರುವುದು ಹೆಮ್ಮೆಯ ವಿಷಯ ಎಂದರು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಮಾತನಾಡಿ, ಕಕ್ಕಬ್ಬೆಯಲ್ಲಿ ಮೊದಲ ಬಾರಿಗೆ ಪೊನ್ನೋಲತಂಡ ಕುಟುಂಬಸ್ಥರು ಕೌಟುಂಬಿಕ ಹಗ್ಗಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಿದರು. ಕೊಡವ…

Read More

ನಾಪೋಕ್ಲು ಏ.19 NEWS DESK : ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ನಮ್ಮೆಯ ಪಂದ್ಯಗಳಲ್ಲಿ ನೆಲ್ಲಮಕ್ಕಡ, ಕುಪ್ಪಂಡ, ಅರೆಯಡ, ಕುಲ್ಲೇಟಿರ, ಅಂಜಪರವಂಡ, ಕೊಕ್ಕಂಡ ತಂಡಗಳು ಜಯಭೇರಿ ಬಾರಿಸಿದವು. ನೆಲ್ಲಮಕ್ಕಡ ಮತ್ತು ಕರ್ತಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನೆಲ್ಲಮಕ್ಕಡ 3- 0 ಅಂತರದಿಂದ ಕರ್ತಮಾಡ ವಿರುದ್ಧ ಭರ್ಜರಿ ಜಯಗಳಿಸಿತು. ಕುಪ್ಪಮಡ (ಕೈಕೇರಿ) ಬೊಪ್ಪಂಡ ವಿರುದ್ಧ 4- 0 ಅಂತರದಲ್ಲಿ ಗೆಲುವು ಸಾಧಿಸಿತು. ಅರೆಯಡ ಕರೋಟಿರ ವಿರುದ್ಧ 5-4 ಅಂತರದಲ್ಲಿ ಟೈ ಬ್ರೇಕರ್ ನಲ್ಲಿ ಗೆಲುವು ಸಾಧಿಸಿತು.ಕುಲ್ಲೇಟಿರ ಕಲಿಯಾಟಂಡ ವಿರುದ್ಧ 4-0 ಅಂತರದಲ್ಲಿ ಗೆಲುವು ದಾಖಲಿಸಿತು. ಅಂಜಪರವಂಡ ಮತ್ತು ಅಪ್ಪಚೆಟ್ಟೋಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಂಜಪರವಂಡ 3-1 ಅಂತರದ ಗೆಲುವು ದಾಖಲಿಸಿತು. ಕೊಕ್ಕಂಡ ಮುಕ್ಕಾಟಿರ ವಿರುದ್ಧ 2-0 ಅಂತರದಲ್ಲಿ, ಜಯ ಸಾಧಿಸಿತು.ಚೆರುಮಮದಂಡ ಬಲ್ಲಚಂಡ ವಿರುದ್ಧ ಟೈ ಬ್ರೇಕರ್ ನಲ್ಲಿ 5-4 ಅಂತರದಿಂದ ಜಯ ದಾಖಲಿಸಿದರೆ ಮಂಡೇಪಂಡ ನಾಗಂಡ ವಿರುದ್ಧ 5-0 ಅಂತರದ ಗೆಲುವು ದಾಖಲಿಸಿತು.…

Read More

ಮಡಿಕೇರಿ ಏ.19 NEWS DESK : ವಾಲ್ನೂರಿನಲ್ಲಿ ನಡೆದ ಅಪಘಾತದಲ್ಲಿ  ಸಾವಿಗೀಡಾದ ರಾಮಪ್ಪ ಅವರ ಪಾರ್ಥಿವ ಶರೀರವನ್ನು  ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಆಸ್ಪತ್ರೆಯಲ್ಲಿ ವೀಕ್ಷಿಸಿ, ಅಂತಿಮ ನಮನ ಸಲ್ಲಿಸಿದರು. ಕುಟುಂಬದವರಿಗೆ ಸಾಂತ್ವನ ಹೇಳಿ ಮಾತನಾಡಿದ ಶಾಸಕರು, ಸರಕಾರದಿಂದ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವುದಲ್ಲದೆ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

Read More

ಮಡಿಕೇರಿ.ಏ.19 NEWS DESK : ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಚುನಾವಣಾ ಕರ್ತವ್ಯ ನಿರತ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗೆ ಅಂಚೆ ಸೌಲಭ್ಯ ಕೇಂದ್ರ ಸ್ಥಾಪಿಸಲು ಚುನಾವಣಾ ಆಯೋಗದಿಂದ ನಿರ್ದೇಶನ ನೀಡಲಾಗಿದೆ. ಅದರಂತೆ 21-ಮೈಸೂರು ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ, 208-ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮೂನೆ-12 ರಲ್ಲಿ ನೀಡಲಾದ ಅರ್ಜಿಗಳಿಗೆ ಮತ ಚಲಾಯಿಸಲು ಸೌಲಭ್ಯವನ್ನು ಒದಗಿಸಬೇಕಾಗಿರುತ್ತದೆ. ಮತದಾರರಿಗೆ ಅನುಕೂಲವಾಗುವಂತೆ ಅಂಚೆ ಮತದಾನ ಸೌಲಭ್ಯ ಕೇಂದ್ರವನ್ನು (Postal Ballot Facilitation Center) ಮಡಿಕೇರಿಯ ಸಂತ ಜೋಸೇಫರ ಶಾಲೆಯಲ್ಲಿ ಸ್ಥಾಪಿಸಲಾಗಿದ್ದು, ಚುನಾವಣಾ ಕರ್ತವ್ಯದಲ್ಲಿ ನಿರತರಾದ ಅಧಿಕಾರಿ/ಸಿಬ್ಬಂಧಿಗಳಿಗೆ ಏ.20, 21 ಹಾಗೂ 22 ರಂದು ಪೂರ್ವಾಹ್ನ 9 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿರುವುದರಿಂದ ಅಂಚೆ ಮತದಾರರು  ತಪ್ಪದೆ ಮತ ಚಲಾಯಿಸಲು ಮಡಿಕೇರಿ ಉಪವಿಭಾಗಾಧಿಕಾರಿಗಳು ಕೋರಿದ್ದಾರೆ.

Read More

ಮಡಿಕೇರಿ ಏ.19 NEWS DESK : ವಿರಾಜಪೇಟೆ ತಾಲ್ಲೂಕಿನಲ್ಲಿ ಯರವ ಸಮಾಜ ಆಯೋಜಿಸಿರುವ ಯರವ ಕ್ರಿಕೆಟ್ ಹಬ್ಬದ ಲೋಗೋವನ್ನು  ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಬಿಡುಗಡೆ ಮಾಡಿದರು. ಪಂದ್ಯಾವಳಿಯು ಮೇ 1 ರಿಂದ 5ರ ವರೆಗೆ ತಿತಿಮತಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.

Read More

ಮಡಿಕೇರಿ ಏ.18 : ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರು ಜಾಗಲೆ ಗ್ರಾಮದಲ್ಲಿ ಇಂದು ಸಂಜೆ ಅಸ್ಸಾಂ ಮೂಲದ ಕಾರ್ಮಿಕ ಮುಝೀದ್ ರೆಹಮಾನ್ (55) ಮೇಲೆ ಹುಲಿ ದಾಳಿ ನಡೆಸಿದೆ.  ಕುತ್ತಿಗೆ ಹಾಗೂ ತಲೆಬಾಗಕ್ಕೆ ಗಾಯಗೊಳಿಸಿದ ಪರಿಣಾಮ ರೆಹಮಾನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗದ್ದೆಯಲ್ಲಿ ಹಸುಗಳನ್ನು ಮೇಯಿಸುತ್ತಿದ್ದಾಗ ಹುಲಿ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More

ಮಡಿಕೇರಿ ಏ.18 NEWS DESK : ಕಾಂಗ್ರೆಸ್ಸಿಗರು ಕುರ್ಚಿ ಅಜೆಂಡಾದಿಂದ ಇನ್ನೂ ಹೊರ ಬಂದಿಲ್ಲ, ಲೋಕಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಭವಿಷ್ಯ ನುಡಿದಿದ್ದಾರೆ. ಕುಶಾಲನಗರದ ಗೌಡ ಸಮಾಜದ ಆವರಣದಲ್ಲಿ ಮೈಸೂರು- ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯ ಸರಕಾರ ನೀಡಿರುವ ಗ್ಯಾರಂಟಿ ಯೋಜನೆ ಸರಕಾರದ ಖಜಾನೆ ಖಾಲಿಯಾದ ನಂತರ ಬಂದ್ ಆಗಲಿದೆ ಎಂದು ಹೇಳಿದ ಸದಾನಂದ ಗೌಡರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರದ್ದು ನಿರಂತರ ಹಾಗೂ ಶಾಶ್ವತ ಯೋಜನೆಯಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಎನ್‍ಡಿಎ ಮೈತ್ರಿಕೂಟ 28 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಅಪಪ್ರಚಾರದ ಆಧಾರದಲ್ಲಿ ಗೆಲುವಿಗೆ ಶತ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಿರುವುದು ಜನರ ದುರ್ದೈವ, ಈ ಬಾರಿಯ ಚುನಾವಣೆ ವಿಭಿನ್ನವಾದ ಚುನಾವಣೆಯಾಗಿದ್ದು, ಜಾತಿ ಲೆಕ್ಕಾಚಾರ ನಡೆಯುವುದಿಲ್ಲ. ಮೋದಿ ಅವರ…

Read More

ಮಡಿಕೇರಿ ಏ.18  NEWS DESK  : ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಅಗತ್ಯ ಸೇವೆಗಳ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂಧಿಗಳ ಗೈರು ಮತದಾರರ (AVES) ವರ್ಗದ ಮತದಾರರಿಗೆ ಸ್ಥಾಪಿಸಲಾದ ಅಂಚೆ ಮತ ಕೇಂದ್ರ (PVC) ಗಳನ್ನು ಸ್ಥಾಪಿಸಲು ಚುನಾವಣಾ ಆಯೋಗದಿಂದ ನಿರ್ದೇಶನ ನೀಡಲಾಗಿದೆ. ಅದರಂತೆ 21-ಮೈಸೂರು ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ, 208-ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 107 ಅಗತ್ಯ ಸೇವೆಗಳ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂಧಿಗಳಿಗೆ ಅಂಚೆ ಮತಪತ್ರದ ಸೌಲಭ್ಯವನ್ನು ಒದಗಿಸಬೇಕಾಗಿದ್ದು, ಮತದಾರರಿಗೆ ಅನುಕೂಲವಾಗುವಂತೆ ಅಂಚೆ ಮತ ಕೇಂದ್ರವನ್ನು (Postal Voting Center) ಜಿಲ್ಲಾಧಿಕಾರಿಗಳ ಹೊಸ ಕಛೇರಿ, ನೆಲ ಮಹಡಿ ಕೊಠಡಿ ಸಂಖ್ಯೆ-10 ಬನ್ನೂರು ರಸ್ತೆ ಸಿದ್ದಾರ್ಥ ನಗರ, ಮೈಸೂರು ಸ್ಥಾಪಿಸಲಾಗಿದೆ. ಅಗತ್ಯ ಸೇವೆಗಳಡಿ ಕೆಲಸ ನಿರ್ವಹಿಸುತ್ತಿರುವ ಮತದಾರರು ಏ.19, 20 ಹಾಗೂ 21 ರಂದು (AVES) ವರ್ಗದ ಮತದಾರರು ಮೇಲ್ಕಂಡ ಸ್ಥಳದಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿರುವುದರಿಂದ ಎಲ್ಲಾ (AVES) ವರ್ಗದ…

Read More

ಸೋಮವಾರಪೇಟೆ ಏ.18 NEWS DESK : ಶತಮಾನಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ದಲಿತರು, ಅಸ್ಪೃಶ್ಯರಿಗೆ ಗೌರವಯುತ ಬದುಕನ್ನು ಕಟ್ಟಿಕೊಟ್ಟ, ಡಾ.ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ದಲಿತಪರ ಹೋರಾಟಗಾರ ಜಯಪ್ಪ ಹಾನಗಲ್ ಅಭಿಪ್ರಾಯಪಟ್ಟರು. ಸಮೀಪದ ಯಡೂರು ಗ್ರಾಮದ ಬಿ.ಟಿ.ಚನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಬಾಬಾ ಸಾಹೇಬರ ಸಾಧನೆ ಅಸಾಧಾರಣವಾದುದು. ಅವರು ಬದುಕಿನುದ್ದಕ್ಕೂ ಅವಮಾನ ಶೋಷಣೆಗಳಿಗೆ ಒಳಗಾಗಿ, ಅವುಗಳನ್ನು ಮೆಟ್ಟಿನಿಂತು ನೊಂದವರ ಬಾಳಿಗೆ ಬೆಳಕಾದವರು ಎಂದು ಹೇಳಿದರು. ಇನ್ನು ಮುಂದಿನ ದಿನಗಳಲ್ಲಿ ಮೀಸಲಾತಿಯಿಂದ ನೌಕರಿ ಪಡೆಯುವುದು ಅಸಾಧ್ಯದ ಮಾತು. ದೇಶದ ಸ್ವಾಯುತ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ಸರ್ಕಾರಿ ಸಂಸ್ಥೆಗಳು ಇಲ್ಲದೇ ಹೋದರೆ, ಮೀಸಲಾತಿ ಇಲ್ಲವಾಗುತ್ತದೆ ಎಂಬುದನ್ನು ಆಡಳಿತ ಮಾಡುವವರು ತಿಳಿದುಕೊಂಡಿದ್ದಾರೆ. ಶಿಕ್ಷಣ ತಾರಾತಮ್ಯದಿಂದ ಅನೇಕ ಬಡವರು, ದೀನದಲಿತರು ನೌಕರಿಯಿಂದ ವಂಚಿತರಾಗುವ ಸಂದರ್ಭ ಬರಲಿದೆ. ಈಗಾಗಲೇ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕಾಗಿದೆ.…

Read More