ಕಡಂಗ ಫೆ.14 NEWS DESK : ಕಡಂಗ ಅರಪಟ್ಟು ಗ್ರಾಮಕ್ಕೆ ಸೇರಿರುವ ಪುರಾತನ ಶ್ರೀ ಉಮಾಮಹೇಶ್ವರ ದೇವಾಲಯದ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಉತ್ಸವದ ಅಂಗವಾಗಿ ಮುಂಜಾನೆ ಗಣಪತಿ ಹೋಮ ನೆಡೆಸಲಾಯಿತು. ನಂತರ ಸಾಮೂಹಿಕ ರುದ್ರಾಭಿಷೇಕ, ಎತ್ತು ಪೋರಾಟ ಹಾಗೂ ಮಹಾಪೂಜೆ ನೆಡೆಯಿತು ನೆರವೇರಿತು. ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯಿತು. ವಿವಿಧ ಗ್ರಾಮಗಳಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಉತ್ಸವದಲ್ಲಿ ದೇವಾಲಯದ ಅಧ್ಯಕ್ಷರಾದ ನೆರಪಂಡ ಚಿತ್ರ ಬೆಳ್ಳಿಪ್ಪ ಹಾಗೂ ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು. ವರದಿ : ನೌಫಲ್ ಕಡಂಗ
ಲೇಖಕ: admin
ಮಡಿಕೇರಿ ಫೆ.14 NEWS DESK : ‘ಕೊಡವ ತಕ್ಕ್ ಎಳ್ತ್‌ಕಾರಡ ಕೂಟ’ ಹಾಗೂ ವೀರಾಜಪೇಟೆ ‘ರೋಟರಿ ಸಂಸ್ಥೆ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಫೆ.17 ರಂದು ‘ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ’ ‘ಜನಪ್ರಿಯ ಕೊಡವ ಸಾಹಿತ್ಯ ಮಾಲೆ’ ಯೋಜನೆಯಲ್ಲಿ ಚೊಟ್ಟೆಯಾಂಡಮಾಡ ಲಲಿತ ಕಾರ್ಯಪ್ಪರವರು ಬರೆದ 188ನೆ ಹೆಜ್ಜೆಯ ಹಾಗೂ ನೂರೇರ ಸರಿತ ಉತ್ತಯ್ಯ ಬರೆದ 189ನೇ ಹೆಜ್ಜೆಯ ಎರಡು ನೂತನ ಪುಸ್ತಕ ನಡೆಯಲಿದೆ. ಕೂಟ’ದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ 10 ಗಂಟೆಗೆ ವಿರಾಜಪೇಟೆಯ ರೋಟರಿ ವಿದ್ಯಾಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ‘ರೋಟರಿ ಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ಬನ್ಸಿ ಪೂವಣ್ಣ, ಕಾರ್ಯದರ್ಶಿ ಬಲ್ಯಮಂಡ ಮಧು ಮಾದಪ್ಪ, ಖಜಾಂಚಿ ಅಮ್ಮಣಕುಟ್ಟಂಡ ಸರೋಜ ಕಾರ್ಯಪ್ಪ, ರೋಟರಿ ವಿದ್ಯಾಸಂಸ್ಥೆಯ ಪ್ರಿನ್ಸಿಪಾಲ್ ಹೆಚ್.ಜೆ. ವಿಶಾಲಾಕ್ಷಿ, ದಾನಿಗಳಾದ ಬಾದುಮಂಡ ಚಿಮ್ಮ ಉತ್ತಯ್ಯ, ಬೊಪ್ಪಂಡ ತಾರ ಕರ್0ಬಯ್ಯ ಲೇಖಕಿಯರಾದ ಚೊಟ್ಟೆಯಾಂಡಮಾಡ ಲಲಿತ ಕಾರ್ಯಪ್ಪ ಹಾಗೂ ನೂರೇರ ಸರಿತ ಉತ್ತಯ್ಯ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿಪ್ರಾಥಮಿಕ ಶಾಲಾ ಮಕ್ಕಳಿಗೆ ಕೊಡವ ಭಾಷೆಯ…
ಮಡಿಕೇರಿ ಫೆ.14 NEWS DESK : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಕೊಡಗು ಇವರ ವತಿಯಿಂದ 2023-24 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಜನಾಂಗದವರಿಗೆ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಜನರಿಗೆ ವ್ಯಾಪಾರ, ಸಣ್ಣ ಪ್ರಮಾಣದ ಗುಡಿ ಕೈಗಾರಿಕೆ, ಸೇವಾ ಕ್ಷೇತ್ರ, ಕೃಷಿ ಆಧಾರಿತ ಮುಂತಾದ ಚಟುವಟಿಕೆಗಳನ್ನು ಪ್ರಾರಂಭಿಸಲು ಸಾಲ ಮತ್ತು ಸಹಾಯಧನ ಒದಗಿಸಲಾಗುವುದು. ಘಟಕ ವೆಚ್ಚ ಶೇ.33 ಅಥವಾ ಗರಿಷ್ಠ ಮಿತಿ ರೂ.1 ಲಕ್ಷದ ಸಹಾಯಧನ ನೀಡಲಾಗುವುದು ಸಾಲ ಹಾಗೂ ಸಹಾಯಧನವನ್ನು ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನಿಗಮದ ವೆಬ್‍ಸೈಟ್: https://kmdconline.karnataka.gov.in/ ಮೂಲಕ ಆನ್‍ಲೈನ್ ಅರ್ಜಿ ಸಲ್ಲಿಸಬಹುದು. ಆನ್‍ಲೈನ್ ಅರ್ಜಿ ಸಲ್ಲಿಸಿದ ನಂತರ ಸೂಕ್ತ ದಾಖಲಾತಿಗಳ ಪ್ರತಿಗಳನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ,…
ವಿರಾಜಪೇಟೆ ಫೆ.14 NEWS DESK : ಜಮ್ಮುವಿನಲ್ಲಿ ನಡೆದ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕೂರ್ಗ್ ವ್ಯಾಲಿ ಶಾಲೆಯ ವಿದ್ಯಾರ್ಥಿನಿ ಗಗನಶ್ರೀ ಹಾಗೂ ಆರ್.ವಿನಿಷ ಕಪಲ್ ಮತ್ತು ಗುಂಪು ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಭೂತಾನ್‍ನಲ್ಲಿ ನಡೆಯುವ ಅಂತರಾಷ್ಟ್ರೀಯ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಗಗನಶ್ರೀ ವಿರಾಜಪೇಟೆಯ ವಿಜಯನಗರದ ನಿವಾಸಿ ಶಶಿಕುಮಾರ್ ಮತ್ತು ದಿವ್ಯ ಅವರ ಪುತ್ರಿ. ವಿರಾಜಪೇಟೆ ಸುಭಾಷ್ ನಗರದ ನಿವಾಸಿ ಕೆ.ರಜನಿಕಾಂತ್ ಮತ್ತು ಆರ್.ಅರ್ಪಿತಾ ಅವರ ಪುತ್ರಿ. ವಿನಿಷ ಆರ್ ಇವರಿಬ್ಬರು ವಿದ್ಯಾರ್ಥಿಗಳು ವಿರಾಜಪೇಟೆಯ ಟೀಂ ಇಂಟೋಪೀಸ್ ನೃತ್ಯ ಶಾಲೆಯಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದು, ವಿಷ್ಣು ಅವರು ತರಬೇತಿ ನೀಡುತ್ತಿದ್ದಾರೆ.
ವಿರಾಜಪೇಟೆ ಫೆ.14 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಬಾಪೂಜಿ ಪ್ರಭಂದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಪಟ್ಟಣದ ಸಂತ ಅನ್ನಮ್ಮ ಪ್ರೌಢ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿ ಅನಿರುಧ್ ಮನೋಜ್ ಅನ್ನು ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ. ಫಾ. ಐಸಾಕ್ ರತ್ನಾಕರ್ ರವರು ವಿದ್ಯಾರ್ಥಿ ಅನಿರುಧ್ ನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಮಾತನಾಡಿದ ವ್ಯವಸ್ಥಾಪಕರು, ವಿದ್ಯಾರ್ಥಿಯು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ವಿದ್ಯಾಸಂಸ್ಥೆಯ ಕೀರ್ತಿಯನ್ನು ರಾಜ್ಯಮಟ್ಟಕ್ಕೆ ಪಸರಿಸಿದ್ದಾನೆ. ಮಾತ್ರವಲ್ಲದೆ ಗುರುಗಳು ಹಾಗೂ ಪೋಷಕರಿಗೂ ಹೆಮ್ಮೆಯ ವಿದ್ಯಾರ್ಥಿಯಾಗಿದ್ದಾನೆ ಎಂದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಬೆನ್ನಿ ಜೋಸೆಫ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಯರಾದ ಸಿಸ್ಟರ್ ರೋಸಿ, ಸಿಸ್ಟರ್ ಐಡಾ, ಸಂತ ಅನ್ನಮ್ಮ ಪ್ರೌಢ ಶಾಲಾ ಶಿಕ್ಷಕಿ ಹಾಗೂ ಬಹುಮಾನ ಪುರಸ್ಕೃತ ಅನಿರುಧ್ ನ ತಾಯಿ ಕವಿತಾ ಮನೋಜ್ ಹಾಜರಿದ್ದರು.
ಮಡಿಕೇರಿ ಫೆ.14 NEWS DESK : ಹಿಂದಿನ ಶಾಸಕರುಗಳು ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಈಗಾಗಲೇ ಶ್ವೇತಪತ್ರ ಹೊರಡಿಸಲಾಗಿದೆ. ಈಗಿನ ಕಾಂಗ್ರೆಸ್ ಶಾಸಕರುಗಳು ಇಲ್ಲಿಯವರೆಗೆ ಯಾವ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಜನಪರವಾಗಿ ಪ್ರಶ್ನೆ ಮಾಡುವುದು ತಪ್ಪೇ ಎಂದು ಕೊಡಗು ಜಿಲ್ಲಾ ಬಿಜೆಪಿ ಪ್ರಶ್ನಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ವಕ್ತಾರರಾದ ಟಿ.ಎ.ಕಿಶೋರ್ ಕುಮಾರ್, ಸುಬ್ರಹ್ಮಣ್ಯ ಉಪಾಧ್ಯಾಯ, ಬಿ.ಕೆ.ಅರುಣ್ ಕುಮಾರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಅವರುಗಳು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷವಾಗುತ್ತಿದ್ದರೂ, ಕೊಡಗಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಹಿಂದಿನ ಬಿಜೆಪಿ ಶಾಸಕರುಗಳು ಮಂಜೂರು ಮಾಡಿಸಿರುವ ಅಭಿವೃದ್ಧಿ ಕೆಲಸಗಳಿಗೆ ಭೂಮಿಪೂಜೆ ಮಾಡುವುದು, ಒಂದೇ ರಸ್ತೆಯನ್ನು ಎರಡೆರಡು ಬಾರಿ ಉದ್ಘಾಟನೆ ಮಾಡುತ್ತಿರುವುದು ಮಾತ್ರ ಕಂಡು ಬರುತ್ತಿದೆ ಎಂದು ಟೀಕಿಸಿದರು. ಕೊಡಗಿನ ಹಾಲಿ ಶಾಸಕರು ಕೇವಲ ಕಾಂಗ್ರೆಸ್’ನ ಶಾಸಕರಲ್ಲ, ಅವರು ಎಲ್ಲಾ ಜನರಿಗೂ ಶಾಸಕರು. ಆದ್ದರಿಂದ ಅವರನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ.…
ವಿರಾಜಪೇಟೆ ಫೆ.14 NEWS DESK : ಜಮ್ಮುವಿನಲ್ಲಿ ನಡೆದ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸಂತ ಅನ್ನಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಎಮ್. ಶ್ರೀದೇವಿ ಹಾಗೂ ಕೂರ್ಗ್ ವ್ಯಾಲಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ದೇಚಮ್ಮ ಕಪಲ್ ಮತ್ತು ಗುಂಪು ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಭೂತಾನಲ್ಲಿ ನಡೆಯುವ ಅಂತರಾಷ್ಟ್ರೀಯ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಶ್ರೀದೇವಿ ವಿರಾಜಪೇಟೆ ತಾಲೂಕಿನ ಕೆ.ಬೋಯಿಕೇರಿ ಗ್ರಾಮದ ಮುರುಗೇಶ್ ಮತ್ತು ತುಳಸಿ ದಂಪತಿಯ ಪುತ್ರಿ. ದೇಚಮ್ಮ ವಿರಾಜಪೇಟೆ ಪಟ್ಟಣದ ಅಯ್ಯಪ್ಪ ಬೆಟ್ಟದ ನಿವಾಸಿ ದೀಪಕ್ ಮತ್ತು ಅನುರಾಧ ಅವರ ಪುತ್ರಿ. ಇವರು ವಿರಾಜಪೇಟೆಯ ಟೀಮ್ ಇಂಟು ಫೀಸ್ ನೃತ್ಯ ಶಾಲೆಯಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದು, ವಿಷ್ಣು ಅವರು ತರಬೇತಿ ನೀಡುತ್ತಿದ್ದಾರೆ.
ಮಡಿಕೇರಿ ಫೆ.14 NEWS DESK : ಕೊಡಗು ಜಿಲ್ಲೆಯಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಆದ್ದರಿಂದ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆ, ತಿದ್ದುಪಡಿ ಅರ್ಜಿ ಮತ್ತು ಹೆಸರು ಸೇರ್ಪಡೆಯ ಅರ್ಜಿಗಳ ವಿಲೇವಾರಿಗಾಗಿ ತಿಂಗಳಲ್ಲಿ ಕನಿಷ್ಠ 15 ದಿನಗಳನ್ನಾದರು ಮೀಸಲಿಡಬೇಕೆಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳು ಹಾಗೂ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು. ಕೊಡಗಿನಲ್ಲಿ ಕಳೆದ ಒಂದು ವರ್ಷದಿಂದ ಹೊಸ ಪಡಿತರ ಚೀಟಿ ನೀಡುವುದನ್ನೇ ನಿಲ್ಲಿಸಲಾಗಿದೆ. ಪಡಿತರ ಚೀಟಿಗಳ ತಿದ್ದುಪಡಿ, ಮೃತರ ಹೆಸರು ವಜಾಗೊಳಿಸುವುದು ಹಾಗೂ ಕುಟುಂಬದ ಸದಸ್ಯರ ಹೆಸರು ಸೇರ್ಪಡೆ ಸೇರಿದಂತೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಇದರಿಂದ ಕಾರ್ಮಿಕ ವರ್ಗ ಹೆಚ್ಚು ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು. ಹೊಸ ಪಡಿತರ ಚೀಟಿಗಾಗಿ, ತಿದ್ದುಪಡಿಗಾಗಿ ಹಾಗೂ ಹೆಸರು ಸೇರ್ಪಡೆಗಾಗಿ ಅರ್ಜಿಗಳನ್ನು ಸಲ್ಲಿಸಲು ಸೈಬರ್ ಸೆಂಟರ್‍ಗಳಲ್ಲಿ ಕಾದು ಕುಳಿತು “ಸರ್‍ವರ್ ಇಲ್ಲ” ಎಂಬ ಕಾರಣದಿಂದ ಬೇಸರದಿಂದ ಹಿಂತಿರುಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಾರದಲ್ಲಿ ಒಂದು…
ಮಡಿಕೇರಿ ಫೆ.14 NEWS DESK : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮಡಿಕೇರಿ ಮುಸ್ಲಿಂ ಜಮಾತ್ ಗಳ ಒಕ್ಕೂಟದ ವತಿಯಿಂದ ಫೆ.15 ರಂದು ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ಒಕ್ಕೂಟದ ಅಧ್ಯಕ್ಷ ನಜೀರ್ ತಿಳಿಸಿದ್ದಾರೆ. ಬೆಳಗ್ಗೆ 10.30 ಗಂಟೆಗೆ ನಡೆಯುವ ಪ್ರತಿಭಟನೆಯಲ್ಲಿ ಖ್ಯಾತ ಬರಹಗಾರರು, ಚಿಂತಕರಾದ ಶಿವಸುಂದರ್ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಮಡಿಕೇರಿ ಫೆ.14 : ರೋಟರಿ ಸಂಸ್ಥೆಗಳು ಅಂಗನವಾಡಿಗಳ ಕಾಯಕಲ್ಪಕ್ಕೆ ಅನೇಕ ಯೋಜನೆಗಳನ್ನು ರೂಪಿಸಿದ್ದು ಈ ಮೂಲಕ ಚಿಣ್ಣರ ವಿಧ್ಯಾಭ್ಯಾಸಕ್ಕೆ ಅಗತ್ಯ ಸೌಕಯ೯ ಕಲ್ಪಿಸಲಾಗುತ್ತದೆ. ಅಂಗನವಾಡಿಗಳೇ ಮಕ್ಕಳ ಮೊದಲ ಪಾಠಶಾಲೆ, ಅಂಗನವಾಡಿ ಶಿಕ್ಷಕಿಯೇ ಕಂದಮ್ಮಗಳ ಮೊದಲ ಗುರುವಂತಾಗಿರುವಾಗ ಇಂಥ ಅಂಗನವಾಡಿಗಳಿಗೆ ಸೌಲಭ್ಯ ಕಲ್ಪಿಸುವಿಕೆಯೂ ರೋಟರಿಯ ಆಧ್ಯತಾ ಯೋಜನೆಗಳಲ್ಲೊಂದಾಗಿದೆ ಎಂದು ರೋಟರಿ ಜಿಲ್ಲೆ 3181 ನ ಗವನ೯ರ್ ಹೆಚ್.ಆರ್.ಕೇಶವ್ ಹೇಳಿದ್ದಾರೆ. ನಗರದಲ್ಲಿನ ರೋಟರಿ ಮಿಸ್ಟಿ ಹಿಲ್ಸ್ ಗೆ ಅಧಿಕೃತ ಭೇಟಿ ಕಾಯ೯ಕ್ರಮ ಸಂದಭ೯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಚ್.ಆರ್.ಕೇಶವ್, ರೋಟರಿ ಜಿಲ್ಲೆ 3181 ಗೆ ಸಂಬಂಧಿಸಿದಂತೆ ಕೊಡಗು, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ ಕಂದಾಯ ಜಿಲ್ಲೆಗಳಲ್ಲಿ 87 ರೋಟರಿ ಸಂಸ್ಥೆಗಳಿದ್ದು, 3800 ಸದಸ್ಯರನ್ನು ಹೊಂದಿದೆ. ಈ ರೋಟರಿ ವಷ೯ದಲ್ಲಿ ಅಂಗನವಾಡಿಗಳಿಗೆ ಸೌಕಯ೯ ಸೇರಿದಂತೆ ಮಳೆ ಕೊಯ್ಲು,ನಂಥ ವಿಭಿನ್ನ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ತಾಯಂದಿರು ಆಥ೯ಕ ದುಸ್ಥಿತಿಯ ನಿವಾರಣೆಗಾಗಿ ಉದ್ಯೋಗ ಕಂಡುಕೊಂಡ ಪರಿಣಾಮ ಚಿಕ್ಕಂದಿನಲ್ಲಿಯೇ ಅಂಗನವಾಡಿಗಳನ್ನು ಆಶ್ರಯಿಸುತ್ತಿರುವ ಪುಟಾಣಿಗಳಿಗೆ ಇಂಥ ಅಂಗನವಾಡಿಗಳೇ ಮೊದಲ ಪಾಠಶಾಲೆಯಂತಾಗಿದ್ದು ಅಂಗನವಾಡಿ ಶಿಕ್ಷಕಿಯರೇ…






