*ವಧು ಬೇಕಾಗಿದೆ*
ಲೇಖಕ: admin
ಮಡಿಕೇರಿ ಜ.28 NEWS DESK : ಭಾರತೀಯ ಸೇನೆಯ ಪ್ರಥಮ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರಂತೆ ಯುವಜನರು ಭಾರತೀಯ ಸೇನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಜಿಲ್ಲೆ ಹಾಗೂ ರಾಜ್ಯಕ್ಕೆ ಒಳ್ಳೆಯ ಹೆಸರು ತರುವಂತಾಗಬೇಕು ಎಂದು ಏರ್ ಮಾರ್ಷಲ್ ನಿವೃತ್ತ ಕೆ.ಸಿ.ಕಾರ್ಯಪ್ಪ ಅವರು ಕರೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 125 ನೇ ಜನ್ಮ ದಿನಾಚರಣೆ ಪ್ರಯುಕ್ತ ಭಾನುವಾರ ನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಗೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು. ಶಿಸ್ತು, ಶ್ರದ್ಧೆ ಮತ್ತು ಸಮಯಪ್ರಜ್ಞೆಗೆ ಹೆಸರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ರಾಷ್ಟçದ ರಕ್ಷಣಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಆ ದಿಸೆಯಲ್ಲಿ ಪ್ರತಿಯೊಬ್ಬರಲ್ಲಿಯೂ ರಾಷ್ಟ್ರ ಮೊದಲು ಎಂಬುದು ಮೊಳಗಬೇಕು ಎಂದು ತಿಳಿಸಿದರು. ಯುವ ಜನರು ದೇಶವನ್ನು ಪ್ರೀತಿಸಬೇಕು. ರಾಷ್ಟç ಮೊದಲು, ನಂತರ ಉಳಿದವು ಎಂಬುದು ಪ್ರತಿಯೊಬ್ಬರಲ್ಲಿಯೂ ಇರಬೇಕು. ಈ…
ಮಡಿಕೇರಿ ಜ.28 : ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಷನ್ ನ ಸೋಮವಾರಪೇಟೆ ತಾಲ್ಲೂಕು ಸಮಿತಿ ಗಣರಾಜ್ಯೋತ್ಸವ ಪ್ರಯುಕ್ತ ಸೋಮವಾರಪೇಟೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋಗೆ ಜೂನಿಯರ್ಸ್ ವಿಭಾಗದಲ್ಲಿ ಪ್ರಥಮ ಹಾಗೂ ಸೀನಿಯರ್ಸ್ ವಿಭಾಗದಲ್ಲಿ ತೃತೀಯ ಬಹುಮಾನ ದೊರೆತ್ತಿದೆ. ಜೂನಿಯರ್ಸ್ ವಿಭಾಗದಲ್ಲಿ ಮೊನಾಲಿ, ಸಿಂಚನ, ಸಾನ್ವಿಕ, ದಿಶಾ, ಲಹರಿ, ವಿಶಾಕ್, ಆಧ್ಯಾಶ್ರೀ, ಲವಿಶ್, ದಿಯಾ, ಲೀಶ, ಗ್ರಂಥ, ಧೃತಿ ಹಾಗೂ ಸೀನಿಯರ್ಸ್ ವಿಭಾಗದಲ್ಲಿ ಯಾನ ಶೆಟ್ಟಿ, ಆರಾಧ್ಯ, ಆಧ್ಯ ದೇಚಮ್ಮ, ಶಿವ ಕುಮಾರ್, ಕೀರ್ತನ್, ವೆನಿಷಾ, ಪ್ರಜ್ಞಾ, ತೇಜಸ್, ಜಾನ್ವಿ ಬೋಜಮ್ಮ, ತಶ್ಮಿತ, ವರ್ಣಿಕ, ಜನನಿ, ಆರ್ಯನ್, ರೋಷನ್, ಐಶ್ವರ್ಯ, ಅಭಿನವ್ ಭಾಗವಹಿಸಿದ್ದರು. ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋದ ನೃತ್ಯ ಸಂಯೋಜಕ ಅಭಿಷೇಕ್ ಮಡಿಕೇರಿ ಅವರ ನಿರ್ದೇಶನದಲ್ಲಿ ನೃತ್ಯ ಮೂಡಿ ಬಂತು.
ಮಡಿಕೇರಿ ಜ.27 NEWS DESK : ದೇಶದ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾದ ಅಂತರರಾಷ್ಟ್ರೀಯ ಕ್ರೀಡಾಪಟುಗಳಾದ ಮಚ್ಚಂಡ ರೋಹನ್ ಬೋಪಣ್ಣ ಹಾಗೂ ಕುಟ್ಟಂಡ ಜೋಶ್ನ ಚಿಣ್ಣಪ್ಪ ಅವರಿಗೆ ಹಾರ್ದಿಕ ಅಭಿನಂದನೆಗಳು.. (ಹಂಚೆಟ್ಟೀರ ಮನು ಮುದ್ದಪ್ಪ, ಅಧ್ಯಕ್ಷರು, ವ್ಯಾಲಿ ಡ್ಯೂ ಅಸೋಸಿಯೇಷನ್, ಮುಕ್ಕೋಡ್ಲು)
ಮಡಿಕೇರಿ ಜ.27 NEWS DESK : ನಮ್ಮ ಕೊಡಗು ಜಿಲ್ಲೆ ಕ್ರೀಡೆಗಳ ತವರೂರು. ಇಲ್ಲಿನ ಕ್ರೀಡಾ ಕಲಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದ್ದಾರೆ. ಇಂಥ ಸಾಧಕರ ಸಾಲಿನಲ್ಲಿರುವ ನಮ್ಮ ಹೆಮ್ಮೆಯ ಟೆನಿಸ್ ಪಟು ರೋಹನ್ ಬೋಪಣ್ಣ ಹಾಗೂ ಕೊಡಗು ಮೂಲದ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿಣ್ಣಪ್ಪ ಅವರಿಗೆ ಪದ್ಮಶ್ರೀ ಪುರಸ್ಕಾರ ಭಾಜನವಾಗಿದೆ. ಇದು ಅವರ ಸಾಧನೆಗೆ ಸಿಕ್ಕ ಸಮ್ಮಾನವಾಗಿದೆ. 43ನೇ ವಯಸ್ಸಿನಲ್ಲಿ ಡಬಲ್ಸ್ ವಿಭಾಗದಲ್ಲಿ ನಂಬರ್ ಸ್ಥಾನಕೇರಿದ ರೋಹನ್ ಬೋಪಣ್ಣ ಅವರಿಗೆ ಇದು ಡಬಲ್ ಸಂಭ್ರಮ. ನಮ್ಮ ಕೊಡಗಿನ ಕೀರ್ತಿ ಪತಾಕೆಯನ್ನು ಜಗದಗಲ ಪಸರಿಸಿದ ಈ ಕ್ರೀಡಾ ಕಲಿಗಳಿಗೆ ಅಭಿನಂದನೆಗಳು. ಜಿಲ್ಲೆಯಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಉತ್ತೇಜಸಲು ನಮ್ಮ ಸರ್ಕಾರ ಸದಾ ಸಿದ್ದವಿದೆ. N. S ಬೋಸರಾಜು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು. ಕರ್ನಾಟಕ ಸರ್ಕಾರ.
ಮಡಿಕೇರಿ ಜ.27 NEWS DESK: ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧವಾದ, ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಕೊಡಗು ಜಿಲ್ಲೆಯ 6 ಕೊಡವ ಪದ್ಮ ಪುರಸ್ಕೃತರು ಕೊಡಗಿಗೆ ಹಾಗೂ ಕೊಡವರಿಗೆ ಹೆಮ್ಮೆಯ ವಿಷಯ. ಇವರ ಹೆಸರುಗಳು ಕೊಡಗಿನ ಚರಿತ್ರೆಯಲ್ಲಿ ಬಂಗಾರದ ಅಕ್ಷರದಲ್ಲಿ ಬರೆಯಲ್ಪಡುತ್ತದೆ. ಈ ವರ್ಷ ವಿಶ್ವದ ನಂಬರ್.1 ಟೆನ್ನಿಸ್ ಆಟಗಾರ ಮಚಂಡ ರೋಹನ್ ಬೋಪಣ್ಣ ಹಾಗೂ ಸ್ಕ್ವಾಶ್ ಆಟಗಾರ್ತಿ ಕುಟ್ಟಂಡ ಜೋಶ್ನ ಚಿಣ್ಣಪ್ಪ ಅವರಿಗೆ ಪದ್ಮಶ್ರೀ ಲಭ್ಯವಾಗಿದೆ. ಇದು ಕ್ರೀಡಾ ಲೋಕಕ್ಕೂ ಹಾಗೂ ಕೊಡಗಿಗೂ ಗೌರವ ತರುವಂತಹ ವಿಷಯ. ಈಗಾಗಲೇ ಹಾಕಿ ದಿಗ್ಗಜ ಡಾ.ಮೊಳ್ಳೇರ.ಪಿ.ಗಣೇಶ್ ಹಾಗೂ ಉಮ್ಮತ್ತಾಟ್ ನಲ್ಲಿ ಐಮುಡಿಯಂಡ ರಾಣಿ ಮಾಚಯ್ಯ ಅವರಿಗೆ ಪದ್ಮಶ್ರೀ ಲಭ್ಯವಾಗಿದೆ. ಸೈನ್ಯದಲ್ಲಿ ಜನರಲ್ ಕೊಡಂದೇರ.ಎಸ್.ತಿಮ್ಮಯ್ಯ ಅವರಿಗೆ ಪದ್ಮಭೂಷಣ, ಶಿಕ್ಷಣ ಹಾಗೂ ಸಮಾಜಸೇವೆ ಕ್ಷೇತ್ರದಲ್ಲಿ ಕೋದಂಡ ರೋಹಿಣಿ ಅವರಿಗೆ ಪದ್ಮಶ್ರೀ ನೀಡಲಾಗಿದೆ. ಇದನ್ನು ಇಲ್ಲಿ ಸ್ಮರಿಸಬಹುದು. ಭಾರತದ ಅತೀ ಉನ್ನತ ನಾಗರೀಕ ಪ್ರಶಸ್ತಿ ಕೊಡಗಿನವರಿಗೆ ಲಭಿಸಿದ್ದು, ಕೊಡಗಿನ ಎಲ್ಲರಿಗೂ ಸಂತಸ ತಂದಿದೆ. ಹೀಗೆ ಈ ಪ್ರಶಸ್ತಿಗಳು ಕೊಡಗಿನವರಿಗೆ…
ಮಡಿಕೇರಿ ಜ.27 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯ ಕೋಟೆ ಆವರಣ, ಪಾಡಿನಾಡಿನ ಯವಕಪಾಡಿಯ ನಾಲ್ ನಾಡ್ ಅರಮನೆ ಮತ್ತು ದೇವಟ್‌ಪರಂಬ್ ನರಮೇಧದ ಸ್ಮಾರಕ ಸ್ಥಳದಲ್ಲಿ “ಅಂತರರಾಷ್ಟ್ರೀಯ ಹತ್ಯಾಕಾಂಡದ ದಿನ” ವನ್ನು ಆಚರಿಸಿತು. ಸಂಚಿನಿಂದ ಹತ್ಯೆಗೀಡಾದ ಹಿರಿಯರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಿಎನ್‌ಸಿ ಪ್ರಮುಖರು ಗೌರವ ಅರ್ಪಿಸಿದರು. ಈ ಸಂದರ್ಭ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೆಳದಿ/ಪಾಲೇರಿ ಅರಸರಿಂದ ಮಡಿಕೇರಿ ಕೋಟೆಯಲ್ಲಿ ನಡೆದ ರಾಜಕೀಯ ಹತ್ಯೆಗಳು, ನಾಲ್ನಾಡ್ ಅರಮನೆಯಲ್ಲಿ ಕೆಳದಿ/ಪಾಲೇರಿ’ ಆಡಳಿತಗಾರರಿಂದ ಕೊಡವ ಬುಡಕಟ್ಟು ಜನಾಂಗದ ಮಂದಿಗೆ ಅಮಾನವೀಯ ಮರಣದಂಡನೆ ಮತ್ತು ದೇವಟ್ ಪರಂಬು ನರಮೇಧ ಈ ಮೂರು ದುರಂತ ಕೃತ್ಯಗಳನ್ನು ಅಂತರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ಪಟ್ಟಿಯಲ್ಲಿ ಸೇರಿಸಬೇಕು. ಕೊಡವರು ಹತ್ಯೆಗೀಡಾದ ಮೂರೂ ಪ್ರದೇಶದಲ್ಲಿ ಸ್ಮಾರಕ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಅರಮನೆಗಳು ಮತ್ತು ದೇವಟ್‌ಪರಂಬ್‌ನಲ್ಲಿ ನಡೆದ ಮೂರು ದುರಂತ ನರಮೇಧಗಳನ್ನು ಕೊಡವ ಬುಡಕಟ್ಟು ಜನಾಂಗ ಮರೆಯಲು ಸಾಧ್ಯವಿಲ್ಲ. ಕೊಡವ ಜನಾಂಗೀಯ ಇತಿಹಾಸದಲ್ಲಿ ಈ ಆಘಾತಕಾರಿ ಅಧ್ಯಾಯವನ್ನು ನೆನಪಿಸಿಕೊಳ್ಳಲಾಗುತ್ತದೆ…
ಕುಶಾಲನಗರ ಜ.27 : ಕೂಡಿಗೆ ಕೊಡಗು ಸೈನಿಕ ಶಾಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪತ್ರಿಕಾ ಮಾಧ್ಯಮದ ಸಹಕಾರ ಸ್ಮರಣೀಯವಾಗಿದೆ ಎಂದು ಶಾಲೆಯ ಆಡಳಿತ ಅಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್ ಹೇಳಿದರು. ಸೈನಿಕ ಶಾಲೆಯ ಪ್ರಾಂಶುಪಾಲರು ಕುಶಾಲನಗರ ತಾಲೂಕು ಪತ್ರಕರ್ತರಿಗೆ ಸೈನಿಕ ಶಾಲೆಯಲ್ಲಿ ಏರ್ಪಡಿಸಿದ್ದ ಚಹಾ ಕೂಟದಲ್ಲಿ ಅವರು ಮಾತನಾಡಿ, ಕೊಡಗು ಜಿಲ್ಲೆಯ ಹೆಮ್ಮೆಯ ಸೈನಿಕ ಶಾಲೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ಒದಗಿಸಿದರು. ಮುಂದಿನ ದಿನಗಳಲ್ಲಿ ಇದೇ ರೀತಿಯ ಸಹಕಾರ ಬಯಸಿದರು. ಪತ್ರಿಕಾ ಮಾಧ್ಯಮ ಮಿತ್ರರಿಗೆ ತಮ್ಮ ಶಾಲೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಚಹಾ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಕುಶಾಲನಗರ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್ ಚಂದ್ರಮೋಹನ್, ಕಳೆದ 17 ವರ್ಷಗಳಿಂದ ಕೊಡಗು ಸೈನಿಕ ಶಾಲೆಯ ಆಗುಹೋಗುಗಳ ಬಗ್ಗೆ ಪತ್ರಿಕೆ ಮಾಧ್ಯಮಗಳ ಮೂಲಕ ಸಮಗ್ರ ಮಾಹಿತಿಯನ್ನು ಸಮಾಜಕ್ಕೆ ನೀಡುವ ಕೆಲಸ ನಿರಂತರವಾಗಿ ನಡೆದಿದೆ. ಕೊಡಗು ಸೈನಿಕ ಶಾಲೆ ಜಿಲ್ಲೆಯ ಹೆಮ್ಮೆಯ ಸಂಸ್ಥೆಯಾಗಿದ್ದು ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ…
ಮಡಿಕೇರಿ ಜ.27 NEWS DESK : ಭಾಗಮಂಡಲ- ಕರಿಕೆ ರಸ್ತೆ ಅಭಿವೃದ್ಧಿಗೆ ರಾಜ್ಯ ರಸ್ತೆ ಅಭಿವೃದ್ಧಿ ಯೋಜನೆಯಡಿ 12 ಕೋಟಿ ರೂ. ಅನುಮೋದನೆ ದೊರೆತ್ತಿದ್ದು ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ. ಗಡಿ ಸಾಂಸ್ಕೃತಿಕೋತ್ಸವ ಆಚರಣೆ ಸಮಿತಿ ಕರಿಕೆ ಗ್ರಾಮ, ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಸವಿನೆನಪು, ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು,ಭಾಗಮಂಡಲ ಹೋಬಳಿ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರಿಕೆ ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಕರಿಕೆ ಗ್ರಾಮದ ಬೇಕಲ್ ಉಗ್ಗಪ್ಪ ನಗರದ ಎಳ್ಳುಕೊಚ್ಚಿ ಇಲ್ಲಿ ನಡೆದ ಗಡಿ ಸಾಂಸ್ಕೃತಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಭವನ, ಆಟದ ಮೈದಾನ ಸೇರಿದಂತೆ ಕರಿಕೆ ಗ್ರಾಮದ ವಿವಿಧ ಅಭಿವೃದ್ಧಿ ಯೋಜನೆಗಳ ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು…
ಮಡಿಕೇರಿ ಜ.27 NEWS DESK : ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಬಾಂಧವರ ನಡುವೆ ಲೀಗ್ ಮಾದರಿಯ ಫುಟ್ಬಾಲ್ ಪಂದ್ಯಾವಳಿಗೆ ಮರಗೋಡಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಡಿಕೇರಿ ತಾಲ್ಲೂಕು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಕೆ.ಎಸ್ ರಮೇಶ್ ಮಡಿಕೇರಿ ಚಾಲನೆ ನೀಡಿದರು. ಫುಟ್ಬಾಲ್ ಪಂದ್ಯವಾಳಿಯ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ಸಂಸ್ಥಾಪಕ ದರ್ಶನ್ ಸುಕುಮಾರ್ ಮರಗೋಡು ನೆರವೇರಿಸಿದರು. ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ ವಿರಾಜಪೇಟೆ ಹಾಗೂ ಶ್ರೀ ನಿಧಿ ಎಫ್.ಸಿ ಒಂಟಿಯಂಗಡಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಶ್ರೀ ನಿಧಿ ತಂಡವು 3-2 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಶ್ರೀ ನಿಧಿ ಎಫ್.ಸಿ ಪರವಾಗಿ ಸತ್ಯನ್, ದೀಕ್ಷಿತ್ ಹಾಗೂ ಸ್ರೀಜಿತ್ ತಲಾ ಒಂದು ಗೋಲ್ ಬಾರಿಸಿದರು. ಮುತ್ತಪ್ಪನ್ ಮಲಯಾಳಿ ಸಮಾಜದ ಪರವಾಗಿ ಕಿರಣ್ ಎರಡು ಗೋಲುಗಳಿಸಿದರು.ಗೋಣಿಕೊಪ್ಪ ಎಫ್.ಸಿ ಹಾಗೂ ಹಿಂದೂ ಮಲಯಾಳಿ ಸಮಾಜ ಮರಗೋಡು ತಂಡಗಳ ನಡುವೆ ನಡೆದ…






