ನಾಪೋಕ್ಲು ಫೆ.7 : ಇತ್ತೀಚಿನ ದಿನಗಳಲ್ಲಿ ಪರಿಸರಕ್ಕೆ ಮಾರಕವಾಗಿರುವ ಇ-ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದ್ದು, ಅವುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಸಂಸ್ಥೆ ನಾಪೋಕ್ಲುವಿನಲ್ಲಿ ಇ-ತ್ಯಾಜ್ಯ ಸಂಗ್ರಹಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದು ಸಂಸ್ಥೆಯ ವಲಯಾಧ್ಯಕ್ಷ ಲಯನ್ ಮುಕ್ಕಾಟಿರ ಎಂ.ವಿನಯ ತಿಳಿಸಿದ್ದಾರೆ. ನಾಪೋಕ್ಲುವಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಮನೆಯಲ್ಲಿ ಇ-ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದೆ. ಇ-ತ್ಯಾಜ್ಯ ಉಪಯೋಗಕ್ಕೆ ಬಾರದೇ ಇರುವಂತಹ ಎಲೆಕ್ಟ್ರಾನಿಕ್ ವಸ್ತುಗಳು, ಕಂಪ್ಯೂಟರ್ ತ್ಯಾಜ್ಯಗಳು, ಕೆಟ್ಟು ಹೋಗಿರುವ ಎಲೆಕ್ಟ್ರಿಕಲ್ ಉಪಕರಣಗಳು, ಮೊಬೈಲ್ಗಳು ಇತ್ಯಾದಿ ವಸ್ತುಗಳಿಂದ ಪರಿಸರ ಮಾಲಿನ್ಯದ ಜೊತೆಗೆ ಆರೋಗ್ಯಕ್ಕೂ ದುಷ್ಪರಿಣಾಮ ಉಂಟಾಗಲಿದೆ ಎಂದರು. ದೇಶದಲ್ಲಿ ಸುಮಾರು 32 ಲಕ್ಷ ಟನ್ ಇ-ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಹೆಚ್ಚುತ್ತಿರುವ ಬೇಡಿಕೆ, ಪರಿಸರ ಸ್ನೇಹಿ ವಸ್ತುಗಳ ಅಲಭ್ಯತೆ, ಸೂಕ್ತ ವೈಜ್ಞಾನಿಕ ರೀತಿ ವಿಲೇವಾರಿ ಕೊರತೆಯಿಂದ ಸಮಸ್ಯೆ ಹೆಚ್ಚುತ್ತಿದೆ. ಪಾದರಸ, ಲಿಥಿಯಂ, ಬೋರಿಯಂ ನಂತಹ ರಾಸಾಯನಿಕಗಳು ನದಿ, ಸರೋವರಗಳಲ್ಲಿ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದು, ಅವೈಜ್ಞಾನಿಕ ದಹನದಿಂದ ಗಾಳಿಗೆ ಸೇರಿ ಸೀನಾ ಕ್ಯಾಡಿಯಂ ಅನಿಲಗಳು ಮಾರಕ…
ಲೇಖಕ: admin
ಮಡಿಕೇರಿ ಫೆ.7 : ಕರಿಕೆ- ಭಾಗಮಂಡಲ ರಸ್ತೆಯನ್ನು ತಕ್ಷಣ ಅಭಿವೃದ್ಧಿ ಪಡಿಸಬೇಕು ಮತ್ತು ಮಳೆಗಾಲದಲ್ಲಿ ಬಿದ್ದಿರುವ ಮಣ್ಣಿನ ರಾಶಿಯನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಪ್ರಮುಖರು ಜಿಲ್ಲಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಮುಂದಿನ 15 ದಿನಗಳೊಳಗೆ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡದಿದ್ದಲ್ಲಿ ಕರಿಕೆ ಗ್ರಾಮಸ್ಥರ ಸಹಕಾರದೊಂದಿಗೆ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮನವಿ ಸಲ್ಲಿಸಿ ಮಾತನಾಡಿದ ಕರಿಕೆ ಗ್ರಾ.ಪಂ ಉಪಾಧ್ಯಕ್ಷ ಎನ್.ಬಾಲಚಂದ್ರ ನಾಯರ್ ಕರಿಕೆ ಗ್ರಾಮದ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಕೊಡಗಿನ ಗಡಿಭಾಗದ ರಸ್ತೆಯ ಅಭಿವೃದ್ಧಿಯನ್ನೇ ಸರ್ಕಾರ ಮರೆತಿದೆ ಎಂದು ಆರೋಪಿಸಿದರು. ಕರಿಕೆ ಗ್ರಾಮವು ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ ಕೇವಲ 68 ಕಿ.ಮೀ. ದೂರದಲ್ಲಿದೆ. ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗೆ ಹೊಂದಿಕೊಂಡಿದೆ. ಪುಣ್ಯಕ್ಷೇತ್ರಗಳಾದ ತಲಕಾವೇರಿ ಮತ್ತು ಎಮ್ಮೆಮಾಡುವಿಗೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಬೇಕಾಗಿದೆ. ಅಂತರ ರಾಜ್ಯ ವ್ಯಾಪಾರ, ವಹಿವಾಟು, ಸರಕು ಸಾಗಾಣಿಕೆಗೂ ಇದು…
ಕಡಂಗ ಫೆ.7 : ಕಡಂಗ ಪ್ರೀಮಿಯರ್ ಕ್ರಿಕೆಟ್ ಲೀಗ್ -2023 ಪಂದ್ಯಾವಳಿಯು ಫೆ.9 ರಿಂದ 12 ರವರೆಗೆ ಕಡಂಗ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಮಾಜಿ ಕಾರ್ಯದರ್ಶಿ ಎಂ.ಬಿ.ನೌಫಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 8 ವರ್ಷಗಳ ಹಿಂದೆ-2016ರಲ್ಲಿ ಕೆಪಿಎಲ್ ಕ್ರಿಕೆಟ್ ಕ್ರೀಡಾಕೂಟವು ಆಯೋಜಿಸಲಾಗಿದ್ದು, ಇದೀಗ ಎಂಟನೇ ವರ್ಷಕ್ಕೆ ಕ್ರೀಡಾಕೂಟಕ್ಕೆ ಫೆ.9 ರಂದು ಬೆಳಿಗ್ಗೆ 10 ಗಂಟೆಗೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಲಿದ್ದಾರೆ ಎಂದರು. ಕ್ರೀಡಾಕೂಟದ ಅಧ್ಯಕ್ಷ ಆಸ್ಕರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶಾಂತಕುಮಾರಿ, ನೆಲಚಂಡ ಕಿರಣ್ ಕಾರ್ಯಪ್ಪ ,ಸುಲೇಮಾನ್ ಅಬ್ದುಲ್ಲಾ ಜುನಿದ್, ಗಣು ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು. ಎಂಟು ಬಲಿಷ್ಠ ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದ್ದು, ಕಡಂಗ ಸುತ್ತಮುತ್ತಲಿನ ಗ್ರಾಮದ ಯುವ ಕ್ರೀಡಾಪಟುಗಳ ಪ್ರತಿಭೆಗಳನ್ನು ಹೊರ ತರುವುದು ಕ್ರೀಡಾಕೂಟದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಕಳೆದ ಎಂಟು ವರ್ಷಗಳಿಂದ ಕ್ರೀಡಾಕೂಟದ ಆಯೋಜಕರು ಬಡ ವಿದ್ಯಾರ್ಥಿಗಳಿಗೆ ಬುಕ್ ವಿತರಣೆ, ಬಡ ರೋಗಿಗಳಿಗೆ ಸಹಾಯ ನೀಡುವುದು …
ಮಡಿಕೇರಿ ಫೆ.7 : ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಜೋನ್ 6 ರ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯೂಥ್ ಮೊಮೆಂಟ್ ಸೋಮವಾರಪೇಟೆ ಕಾರ್ಯಕರ್ತೆ ಸುನಿತಾ, ಶನಿವಾರ ಸಂತೆಯ ಹಿಂದೂ ರುದ್ರ ಭೂಮಿಯ ಲಿಂಗಪ್ಪ, ಸಮಾಜ ಸೇವಕ ಗೌಡಳ್ಳಿಯ ಗಣೇಶ್ , ಸಮುದಾಯ ಆರೋಗ್ಯ ಕೇಂದ್ರ ಶನಿವಾರ ಸಂತೆಯ ನೌಕರ ಸತ್ಯನಾರಾಯಣ ಮತ್ತು ಶನಿವಾರ ಸಂತೆ ಗ್ರಾ.ಪಂ ತ್ಯಾಜ್ಯ ವಿಲೇವಾರಿ ವಾಹನದ ಚಾಲಕ ನಾಗೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ರೋಟರಿ ಕ್ಲಬ್ ನ ಅಧ್ಯಕ್ಷ ರೊಟೇರಿಯನ್ ಕೆ.ಪಿ. ಜಯಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಅಸಿಸ್ಟೆಂಟ್ ಗವರ್ನರ್ ಮೇಜರ್ ಡೋನರ್ ಸತೀಶ್ ಕುಮಾರ್, ವಲಯ ಸೇನಾನಿ ಹೆಚ್.ವಿ. ದಿವಾಕರ್ , ರೊಟೇರಿಯನ್ ಚಂದ್ರಕಾಂತ್ , ವಲಯ ಸೇನಾನಿ ದಿವಾಕರ್, ಚಂದ್ರಕಾಂತ್,…
ಮಡಿಕೇರಿ ಫೆ.7 : ಕೊಡಗು ಐರಿ ಸಮಾಜ ಸಹಯೋಗದಲ್ಲಿ ಕೊಡಗಿನ ಐರಿ ಜನಾಂಗದ ಮಧ್ಯೆ ಏ.22 ಮತ್ತು 23 ರಂದು 9ನೇ ವರ್ಷದ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಆಯೋಜನಾ ಸಮಿತಿ ಸಂಚಾಲಕ ಐಮಂಡ ಗೋಪಾಲ್ ಸೋಮಯ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಐರಿ ಮಕ್ಕಡ ಕೂಟ ಆತಿಥ್ಯವಹಿಸಲಿದೆ ಎಂದು ತಿಳಿಸಿದರು. ಈ ಬಾರಿ ಬಹಳ ವಿಭಿನ್ನವಾಗಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕ್ರಿಕೆಟ್ ಮಾತ್ರವಲ್ಲದೆ ಮಹಿಳೆಯರಿಗೆ ಹಗ್ಗ ಜಗ್ಗಾಟ, ಜನಾಂಗದ ಹೆಣ್ಣುಮಕ್ಕಳಿಗೆ ಪ್ರದರ್ಶನ ಕ್ರಿಕೆಟ್ ಪಂದ್ಯಾಟ ಹಾಗೂ ಇತರ ಆಟೋಟ ಸ್ಪರ್ಧೆಗಳು ನಡೆಯಲಿವೆ. ಅಲ್ಲದೆ ಪುರುಷರಿಗೆ ಮತ್ತು ಮಹಿಳೆಯರಿಗೆ 100 ಮೀ. ಓಟ, ಹಿರಿಯ ಪುರುಷರು ಮತ್ತು ವಿವಾಹಿತ ಮಹಿಳೆಯರಿಗೆ 100 ಮೀಟರ್ ಓಟ, ಪುಟಾಣಿಗಳಿಗೆ ವಿವಿಧ ಬಗೆಯ ಆಟೋಟ ಹಾಗೂ ಹಲವು ಬಗೆಯ ಮನರಂಜನಾ ಸ್ಪರ್ಧೆಗಳನ್ನ ಆಯೋಜಿಸಲಾಗಿದೆ ಎಂದರು. ಸಮಗ್ರ ಚಾಂಪಿಯನ್ ತಂಡಕ್ಕೆ ಐನ್ ಮನೆ ಪ್ರಶಸ್ತಿ…
ಮಡಿಕೇರಿ ಫೆ.7 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕೊಡವ ಅಧಿಕೃತ ಲಿಪಿಯ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಸರ್ಕಾರ ತಕ್ಷಣ ಇದನ್ನು ಅಂಗೀಕರಿಸಿ, ಜಿಲ್ಲೆಯ ವಾಣಿಜ್ಯ ಮಳಿಗೆ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಭಾಷೆಯೊಂದಿಗೆ ಬಳಸಲು ಆದೇಶ ನೀಡಬೇಕೆಂದು ಕರ್ನಾಟಕ ಭಾಷಾ ಅಲ್ಪಸಂಖ್ಯಾತರ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರತೀಕ್ ಪೊನ್ನಣ್ಣ ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಗಮಂಡಲದ ದೇವಾಯದಲ್ಲಿ ಸಿಕ್ಕ ಶಾಸನ ಕೊಡವ ಲಿಪಿಯಲ್ಲಿರುವ ಮೊದಲ ಶಾಸನವಾಗಿದೆ. ಇದು 1370ರ ಇಸವಿಯದಾಗಿದ್ದು, ಅದರಂತೆ 1887ರಲ್ಲಿ ಡಾ.ಕೊರವಂಡ ಅಪ್ಪಯ್ಯ ಅವರು ಲಿಪಿಯನ್ನು ಬಿಡುಗಡೆ ಮಾಡಿದ್ದಾರೆ ಎಂದರು. ನಂತರ 1970ರಲ್ಲಿ ಸುಮಾರು 12 ಲಿಪಿಗಳನ್ನು ಸಂಶೋಧನೆ ಮಾಡಿ ಡಾ.ಐ.ಎಂ.ಮುತ್ತಣ್ಣ ಅವರು ಕೊಡವ ಭಾಷೆಗೆ ಸರಳವಾಗಿರುವ ಒಂದು ಲಿಪಿಯನ್ನು ತಂದಿದ್ದಾರೆ. ಅಲ್ಲದೆ ನಂತರ ದಿನಗಳಲ್ಲಿ ಐದು ಲಿಪಿಗಳು ಕೊಡವ ಭಾಷೆಗೆ ಬಂದವು. ಇದೀಗ ಅಧಿಕೃತವಾಗಿ ಯಾವ ಲಿಪಿಯನ್ನು ಬಳಸಬೇಕು ಎಂಬ ಗೊಂದಲಕ್ಕೆ ತೆರೆ ಎಳೆದಿರುವ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕೊಡವ ಅಧಿಕೃತ ಲಿಪಿಯನ್ನು…
ಶನಿವಾರಸಂತೆ ಫೆ.7 : ಕೊಡ್ಲಿಪೇಟೆ ಶ್ರೀ ಗುರುಪೀಠ ಕಲ್ಲಳ್ಳಿ ಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮವು ಫೆ.9 ಮತ್ತು 10 ರಂದು ನಡೆಯಲಿದೆ ಎಂದು ಕೊಡ್ಲಿಪೇಟೆ ಶ್ರೀ ಗುರುಪೀಠ ಕಲ್ಲಳ್ಳಿ ಮಠ ಹಾಗೂ ಕೊಡ್ಲಿಪೇಟೆ ವೀರಶೈವ ಮಂಡಳಿ ಅಧ್ಯಕ್ಷ ಎಸ್.ಎಸ್.ವರಪ್ರಸಾದ್ ತಿಳಿಸಿದರು. ಶನಿವಾರ ಸಂತೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡ್ಲಿಪೇಟೆ ಶ್ರೀ ಗುರುಪೀಠ ಕಲ್ಲಳ್ಳಿ ಮಠಾಧೀಶರಾದ ಶ್ರೀ ರುದ್ರಮುನಿ ಮಹಾಸ್ವಾಮಿಗಳಿಗೆ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಹೋತ್ಸವದ ಅಂಗವಾಗಿ ಫೆ. 9ರಂದು ಶ್ರೀ ಕ್ಷೇತ್ರ ಕಲ್ಲಳ್ಳಿ ಮಠದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಲಿದೆ. ಫೆ.10ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಕ್ಷೇತ್ರ ಕಲ್ಲಳ್ಳಿ ಮಠದ ಆವರಣದಲ್ಲಿರುವ ಶ್ರೀ ವೀರಭದ್ರ ಸ್ವಾಮೀ ವೇದಿಕೆಯಲ್ಲಿ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಮತ್ತು ಧರ್ಮಸಭಾ ಕಾರ್ಯಕ್ರಮ ನಡೆಯಲಿದೆ ಎಂದರು. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಶ್ರೀ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿ ವೃಷಭದೇಸಿ ಕೇಂದ್ರ ಶಿವ ಯೋಗಿಶ್ವರ…
ಮಡಿಕೇರಿ ಫೆ.7 : ಬೆಟ್ಟಗೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಒಣ, ಹಸಿ, ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಜನ ಪ್ರದೇಶದಲ್ಲಿ ನಿರ್ಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪ್ರಸ್ತುತ ಘಟಕ ಸ್ಥಾಪನೆಗೆ ಬೆಟ್ಟಗೇರಿ ಗ್ರಾಮದ ಹೃದಯ ಭಾಗದಲ್ಲಿರುವ ಹಳೆಯ ಪಶು ಚಿಕಿತ್ಸಾ ಕೇಂದ್ರದ ಸಮೀಪದ ಜಾಗ ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ. ಇದರ ಮುಂಭಾಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಹಿಂಭಾಗದಲ್ಲಿ ನೂತನ ಪಶು ಚಿಕಿತ್ಸಾ ಕೇಂದ್ರ, ಬಲಬದಿಯಲ್ಲಿ ಊರಿನ ಭಗವತಿ ದೇವಸ್ಥಾನಕ್ಕೆ ಹೋಗುವ ರಸ್ತೆ, ನೂರಾರು ಮನೆ ಹಾಗೂ ಊರಿನ ಅಂಬಲವಿದೆ. ಎಡಭಾಗದಲ್ಲಿ ರಾಷ್ಟ್ರೀಯ ಬ್ಯಾಂಕ್ ಮತ್ತು ಖಾಸಗಿ ವೈದ್ಯಕೀಯ ಚಿಕಿತ್ಸಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಶಾಲೆಗೆ ತೆರಳುವ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಊರಿನ ಧಾರ್ಮಿಕ ಕೇಂದ್ರವು ಉದ್ದೇಶಿತ ಜಾಗದ ಪಕ್ಕದಲ್ಲೇ ಇದೆ, ಪ್ರತಿನಿತ್ಯ ಸಾವಿರಾರು ಮಂದಿ ಸಂಚರಿಸುತ್ತಾರೆ. ಇಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಗೊಂಡರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳು…
ಸೋಮವಾರಪೇಟೆ ಜ.7 : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಜಲಜೀವನ್ ಮಿಷನ್ ಯೋಜನೆಯಡಿ ಶಾಂತಳ್ಳಿ ಗ್ರಾ.ಪಂ ನ ಅನೇಕ ಗ್ರಾಮಗಳು ಸೇರಿದಂತೆ ಗೌಡಳ್ಳಿ ಗ್ರಾ.ಪಂ ನ ಶುಂಠಿ ಗ್ರಾಮದಲ್ಲಿ ಅಸಮರ್ಪಕ ಕಾಮಗಾರಿ ನಡೆಸಲಾಗಿದ್ದು, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಶಾಂತಳ್ಳಿ ಗ್ರಾ.ಪಂ ವ್ಯಾಪ್ತಿಯ ಹರಗ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‍ಲೈನ್ ಅಳವಡಿಸಿ 2 ವರ್ಷ ಕಳೆದರೂ ಈವರೆಗೆ ನೀರಿನ ವ್ಯವಸ್ಥೆಯಾಗಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಿಸುವಂತಾಗಿದ್ದು, ಲಕ್ಷಾಂತರ ರೂಪಾಯಿ ವೆಚ್ಚದ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ ಎಂದು ಶರಣ್ ಗೌಡ, ಡಾಲಿ ಪ್ರಕಾಶ್ ಸೇರಿದಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ತಲ್ತರೆಶೆಟ್ಟಳ್ಳಿಯ ಉದ್ರಳ್ಳಿಯಲ್ಲೂ ಇದೇ ಪರಿಸ್ಥಿತಿ ಬಂದಿದೆ. ಕಳೆದ 2 ವರ್ಷಗಳಿಂದ ಮನವಿ ನೀಡುತ್ತ ಬಂದಿದ್ದರೂ ಈವರೆಗೆ ಕ್ರಮವಹಿಸಿಲ್ಲ. ಅಳವಡಿಸಿರುವ ಪೈಪ್‍ಲೈನ್ ಕಾಮಗಾರಿಯೂ ಕಳಪೆಯಾಗಿದೆ. ಟ್ಯಾಂಕ್‍ಗೆ ನೀರು ಹಕುತ್ತಿಲ್ಲ ಎಂದು ಬಗ್ಗನ ಅನಿಲ್‍ಕುಮಾರ್, ಡಾಲಿ ಪ್ರಕಾಶ್, ಜೀವನ್, ಸುಖಾಂತ್,…
ಸೋಮವಾರಪೇಟೆ ಫೆ.7 : ನೇರುಗಳಲೆ ಗ್ರಾ.ಪಂ ವ್ಯಾಪ್ತಿಯ ತಣ್ಣೀರುಹಳ್ಳ ಗ್ರಾಮದಲ್ಲಿ ಅರಣ್ಯ ಹಕ್ಕು ಸಮಿತಿ ಸಭೆ ನಡೆಯಿತು. ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್ ಅವರು, ಫಲಾನುಭವಿಗಳು ತಮ್ಮ ಜಾಗಕ್ಕೆ ಸಂಬಂಧಿಸಿದಂತೆ ಈವರೆಗೆ ಪಡೆದುಕೊಂಡಿರುವ ದಾಖಲೆಗಳು, ಆಧಾರ್‍ಕಾರ್ಡ್, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ನಿಗದಿತ ಅವಧಿಯೊಳಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಬೇಕೆಂದು ಸೂಚಿಸಿದರು. ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭೇಟಿ ನೀಡುವ ಸಂದರ್ಭ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲಾ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಅಕ್ರಮ ಸಕ್ರಮ ಸಮಿತಿ, 94 ಸಿ ಮತ್ತು 94 ಸಿ.ಸಿ., ಅರಣ್ಯ ಹಕ್ಕು ಸಮಿತಿ ಯೋಜನೆಯಡಿ ಕ್ಷೇತ್ರ ವ್ಯಾಪ್ತಿಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಕೃಷ್ಣ ರೈ ಮಾತನಾಡಿ, ಫಲಾನುಭವಿಗಳು ಸಮಿತಿಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ನಂತರ ಅರಣ್ಯ ಇಲಾಖೆ ಮತ್ತು ಸರ್ವೆ ಇಲಾಖೆಯಿಂದ ಜಂಟಿ ಸರ್ವೆ ನಡೆಸಲಾಗುವುದು.…






