ಲೇಖಕ: admin

ಕುಶಾಲನಗರ ಜ.25 NEWS DESK : ಮೈಸೂರಿನ 14 ಕಾರ್‌ಬನ್‌ ಎನ್‌ಸಿಸಿಗೆ ಸಂಬಂಧಿಸಿದ ಸಿಟಿ ಎನ್‌ಸಿಸಿ ಹಿರಿಯ ಅಧೀನ ಅಧಿಕಾರಿ (ಎಸ್‌ಯುಒ) ಮುಕ್ಕಾಟೀರ ಕಲ್ಪನಾ ಕುಟ್ಟಪ್ಪ ಅವರಿಗೆ ಪ್ರತಿಷ್ಠಿತ ರಕ್ಷಾ ಮಂತ್ರಿ ಪದಕ ನೀಡಿ ಗೌರವಿಸಲಾಗಿದೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಪ್ರಶಸ್ತಿ ಪ್ರಧಾನ ಮಾಡಿದರು. ಎನ್ ಸಿಸಿ ಕೆಡೆಟ್ ಆಗಿರುವ ಕಲ್ಪನಾ ಅವರ ವಿಶೇಷ ಪ್ರತಿಭೆಯನ್ನು ಗುರುತಿಸಿ ಸರ್ಕಾರ ಈ ಪ್ರಶಸ್ತಿ ನೀಡಿದೆ. ಪ್ರಸಕ್ತ ಮೈಸೂರಿನ ಕ್ರಸ್ಟ ಕಾಲೇಜಿನಲ್ಲಿ ಪ್ರಥಮ ಡಿಗ್ರಿ ವ್ಯಾಸಂಗ ಮಾಡುತ್ತಿರುವ ಕಲ್ಪನಾ ಕುಟ್ಟಪ್ಪ ಮೂಲತ: ಕುಶಾಲನಗರ ಮಾದಾಪಟ್ಟಣ ನಿವಾಸಿ ಪ್ರಸ್ತುತ ಮೈಸೂರಿನಲ್ಲಿರುವ ಮುಕ್ಕಾಟಿರ ರವಿ ಕುಟ್ಟಪ್ಪ ಮತ್ತು ಸ್ವಾತಿ ದಂಪತಿಗಳ ಪುತ್ರಿ. ಕಲ್ಪನಾ ಕುಟ್ಟಪ್ಪ ಅಂತರರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಕ್ರೀಡಾಪಟುವಾಗಿದ್ದು, ಇದುವರೆಗೆ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 150 ಪದಕಗಳನ್ನು ಗಳಿಸಿದ್ದಾರೆ. ಇತ್ತೀಚೆಗೆ ಇಟಲಿಯಲ್ಲಿ ನಡೆದ ವರ್ಲ್ಡ್ ಸ್ಕೇಟಿಂಗ್ ಚಾಂಪಿಯನ್‍ಶಿಪ್ ನಲ್ಲಿ, ಸೆಪ್ಟೆಂಬರ್ ನಲ್ಲಿ ನಡೆದ ಏಷ್ಯನ್ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ…

Read More

ಚೆಟ್ಟಳ್ಳಿ ಜ.25 NEWS DESK :  ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಚೆಟ್ಟಳ್ಳಿಯ ಶ್ರೀ ನರೇಂದ್ರ ಮೋದಿ ಸಹಕಾರಭವನದಲ್ಲಿ ಹೋಮ, ಹವನ ಭಜನೆ ಹಾಗೂ ಪಾದುಕಾಪೂಜೆ‌ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿತು. ಕಾರ್ಯಕ್ರಮದ ಅಂಗವಾಗಿ ಕರಸೇವಕರಾದ ಬೊಪ್ಪಟ್ಟೀರ ಅಪ್ಪುಟ ನಾಣಯ್ಯ ಹಾಗೂ ಹೊಸಮನೆ ರಾಜು ಅವರನ್ನು ಸನ್ಮಾನಿಸಿ‌ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಬಲ್ಲಾರಂಡ ಮಣಿಉತ್ತಪ್ಪ, ಹಲವು ವರ್ಷ ಗಳ ರಾಮಮಂದಿರ ನಿರ್ಮಾಣ‌ ಕನಸು ಇಂದು ನನಸಾಗಿ ಎಂದು ಹರ್ಷ ವ್ಯಕ್ತಪಡಿಸಿದರು. ಬಲ್ಲಾರಂಡ ಕಂಠಿ ಕಾರ್ಯಪ್ಪ ಮಾತನಾಡಿ, ಇಂದಿನ‌ ದಿನ ಹಿಂದೂಗಳಿಗೆ ಮರೆಯಲಾಗದ ಪವಿತ್ರದಿನವೆಂದರು. ಅಯೋಧ್ಯೆಯ ಪ್ರತಿಷ್ಠಾನಾ ಪೂಜಾ ನೇರಪ್ರಸಾರ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಅಂಗವಾಗಿ ಭಕ್ತಾದಿಗಳಿಗೆ ಅನ್ನದಾನ ನೆರವೇರಿತು. ಸಂಜೆ ಮಹಿಳೆಯರಿಂದ‌ ದೀಪಾರಾಧನೆ ನೆರವೇರಿತು. ವಿವಿಧ ಸಂಘಟನೆ ಯ ಪ್ರಮುಖರು ಹಾಗೂ ಸಾರ್ವಜನಿಕರು ಹಾಜರಿದ್ದರು.

Read More

ಸೋಮವಾರಪೇಟೆ ಜ.25 : 75ನೇ ಗಣರಾಜ್ಯೋತ್ಸವದ ಪ್ರಯುಕ್ತ ಕೆಂಚಮ್ಮನ ಬಾಣೆ ಭಾರತ್ ಮಾತಾ ಸೇವಾ ಸಂಘದ ವತಿಯಿಂದ ಜ.26 ಮತ್ತು 27ರಂದು ರಿಪಬ್ಲಿಕ್ ಕಪ್ ಮುಕ್ತ ವಾಲಿಬಾಲ್ ಪಂದ್ಯಾವಳಿ ಹಾಗೂ ಗ್ರಾಮಸ್ಥರಿಗೆ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಜೆ.ಸುನಿಲ್ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಳೆದ 30 ವರ್ಷಗಳಿಂದ ಕೆಂಚಮ್ಮನ ಬಾಣೆ ಭಾರತ್ ಮಾತಾ ಸೇವಾ ಸಂಘದ ಆಶ್ರಯದಲ್ಲಿ ಕ್ರೀಡಾಕೂಟವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಜ.26 ಮತ್ತು 27ರಂದು ಕೆಂಚಮ್ಮನ ಬಾಣೆಯ ಭಾರತ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುನಿಲ್ ಹೇಳಿದರು. ಜ.26ರಂದು ವಲಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ದೊರೆಯಲಿದ್ದು, ಪ್ರಥಮ ಬಹುಮಾನ 3ಸಾವಿರ ರೂ., ದ್ವಿತೀಯ ಬಹುಮಾನ 2ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತದೆ. 27 ರಂದು ಮುಕ್ತವಾಲಿಬಾಲ್ ಪಂದ್ಯಾವಳಿ ನಡೆಯಲಿದ್ದು ಪ್ರಥಮ 14,444ರೂ, ದ್ವಿತೀಯ 7,777 ರೂ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತದೆ.…

Read More