ಲೇಖಕ: admin

ಕಡಂಗ ಡಿ.15 :  ಅರಪಟ್ಟು ಶ್ರೀ ಉಮಾ ಮಹೇಶ್ವರಿ ದೇವಾಲಯದಲ್ಲಿ  ಕಾರ್ತಿಕ ದೀಪೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಗ್ರಾಮದ ದೇವಸ್ಥಾನದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಊರಿನ ಭಕ್ತರು ದೇವಾಲಯದ ಸುತ್ತಲೂ ಹಣತೆಯನ್ನಿರಿಸಿ ದೀಪ ಹಚ್ಚಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪೂಜೆಯ ಅಂಗವಾಗಿ ಸಾಮೂಹಿಕ ರುದ್ರಾಭಿಷೇಕ, ಮಹಾಪೂಜೆ ನಡೆಯಿತು. ಪೂಜಾ ಕೈಂಕಾರ್ಯವನ್ನು ಅರ್ಚಕರಾದ ಕೀರ್ತಿಶ್ ಹಾಗೂ ಅಖಿಲೇಶ್ ಸಹೋದರರು ನಡೆಸಿಕೊಟ್ಟರು. ದೇವಸ್ಥಾನ ಸಮಿತಿ ಅಧ್ಯಕ್ಷ  ನೆರಪಂಡ ಚಿತ್ರ ಬೆಳ್ಳಿಯಪ್ಪ ಹಾಗೂ ಪದಾಧಿಕಾರಿಗಳು ಹಾಜರಿದ್ದರು. ನೆರೆದಿದ್ದ ಭಕ್ತಾದಿಗಳಿಗೆ ಕೋಡಿರ  ಪಿ.ಅಪ್ಪಣ್ಣ ಹಾಗೂ ಸಂಸಾರ ಇವರ ಸೇವಾರ್ಥವಾಗಿ ಅನ್ನ ಸಂತರ್ಪಣೆ  ನಡೆಯಿತು.   ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ವರದಿ : ನೌಫಲ್ 

Read More

ಮಡಿಕೇರಿ ಡಿ.15 : ಹಿರಿಯ ನಾಗರಿಕರ ವೇದಿಕೆಯ ಮಹಾಸಭೆಯು ಡಿ.23 ರಂದು ಬೆಳಗ್ಗೆ 11 ಗಂಟೆಗೆ ನಗರದ ಬಾಲಭವನದಲ್ಲಿ ನಡೆಯಲಿದೆ. ಸಭೆಯಲ್ಲಿ ಹಿರಿಯರ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿದ ಮಾರಮಡ ಮಾಚಮ್ಮ ಅವರನ್ನು ಸನ್ಮಾನಿಸಲಾಗುತ್ತದೆ. ಡಾ.ಎಚ್.ಆರ್.ಸರಸ್ವತಿ ಅವರು ಆಯುರ್ವೇದ ಔಷಧಿ ಹಾಗೂ ಚಿಕಿತ್ಸೆ ಹಿರಿಯರಿಗೆ ಹೇಗೆ ಪರಿಣಾಮಕಾರಿಯಾಗಬಲ್ಲದು ಎಂಬುದನ್ನು ತಿಳಿಸಲಿದ್ದಾರೆ ಎಂದು ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ತಿಮ್ಮಯ್ಯ ತಿಳಿಸಿದ್ದಾರೆ.

Read More

ಮಡಿಕೇರಿ ಡಿ.15 : ಪೊನ್ನಂಪೇಟೆ 66/11 ಕೆವಿ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾರ್ಯ ನಿರ್ವಹಿಸ ಬೇಕಾಗುವುದರಿಂದ ಕ.ವಿ.ಪ್ರ.ನಿ.ನಿ. ರವರ ಕೋರಿಕೆಯಂತೆ ಡಿ.16 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 66/11 ಕೆವಿ ವಿರಾಜಪೇಟೆ, 33/11 ಕೆವಿ ಸಿದ್ದಾಪುರ, 33/11 ಕೆವಿ ಮೂರ್ನಾಡು ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ವಿರಾಜಪೇಟೆ, ಬಿ.ಶೆಟ್ಟಗೇರಿ, ಬೇತ್ರಿ, ಕಡಂಗಮರೂರು, ಕಾಕೋಟುಪರಂಬು, ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ, ಮೂರ್ನಾಡು, ಮರುಗೋಡು, ನಾಪೋಕ್ಲು, ಕಕ್ಕಬೆ, ಅರೆಕಾಡು, ಐಯ್ಯಂಗೇರಿ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.

Read More

ಮಡಿಕೇರಿ ಡಿ.15 : ಗ್ರಾಮೀಣ ಹೋಂ-ಸ್ಟೇಗಳನ್ನು ಉತ್ತೇಜಿಸುವ ಸಲುವಾಗಿ ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ಗ್ರಾಮೀಣ ಹೋಂ-ಸ್ಟೇಗಳ ಪ್ರಚಾರಕ್ಕಾಗಿ ರಾಷ್ಟ್ರೀಯ ಕಾರ್ಯತಂತ್ರವನ್ನು ಪ್ರಾರಂಭಿಸಿದ್ದು, ಇದರ ಪರ್ಯಾಯ ರೂಪವಾಗಿ ಗ್ರಾಮೀಣ ಹೋಂ-ಸ್ಟೇಗಳ ಪ್ರಚಾರ, ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಕೇಂದ್ರೀಯ ನೋಡಲ್ ಏಜೆನ್ಸಿ ಮೂಲಕ ಪ್ರವಾಸೋದ್ಯಮ ಸಚಿವಾಲಯವು ಅತ್ಯುತ್ತಮ ಗ್ರಾಮೀಣ ಹೋಂ ಸ್ಟೇ ಸ್ಪರ್ಧೆ-2024 ನ್ನು ನಡೆಸುತ್ತಿದ್ದು, ಅತ್ಯುತ್ತಮ ಗ್ರಾಮೀಣ ಹೋಂ ಸ್ಟೇ ಸ್ಪರ್ಧೆಗೆ ವಿಭಾಗಗಳನ್ನು ಗುರುತಿಸಲಾಗಿದೆ. ರೋಮಾಂಚಕ ಗ್ರಾಮ, ಹಸಿರು, ಸಮುದಾಯ ಚಾಲಿತ, ಮಹಿಳಾ ನೇತೃತ್ವ ಘಟಕ, ಪರಂಪರೆ ಮತ್ತು ಸಂಸ್ಕೃತಿ ಫಾರ್ಮ್ ಸ್ಟೇ, ಕಾಟೇಜ್, ಆಯುರ್ವೇದ ಮತ್ತು ಸ್ವಾಸ್ಥ್ಯ, ದೇಶೀಯ ವಾಸ್ತುಶಿಲ್ಪ, ಎಲ್ಲವನ್ನು ಒಳಗೊಂಡ ಅಭ್ಯಾಸಗಳು, ಕ್ಲಸ್ಟರ್, ಜವಾಬ್ದಾರಿಯುತ ಅಭ್ಯಾಸಗಳು, ಟ್ರೀ ಹೌಸ್, ವಿಲಾ ಈ ವಿಭಾಗಗಳಡಿಯಲ್ಲಿ ನಾಮ ನಿರ್ದೇಶನವನ್ನು ಹೋಂ-ಸ್ಟೇ ಮಾಲೀಕರು ಭರ್ತಿ ಮಾಡಿ ಅರ್ಜಿಯನ್ನು ವೆಬ್‍ಸೈಟ್ https://www.rural.tourism.gov.in ಮುಖಾಂತರ ಸಲ್ಲಿಸಬಹುದು. ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂ-ಸ್ಟೇಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ…

Read More

ಮಡಿಕೇರಿ ಡಿ.15 : ಕೊಡಗು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ ಏಕಲವ್ಯ ಮಾದರಿ/ ಅಟಲ್ ಬಿಹಾರಿ ವಾಜಪೇಯಿ/ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಲ್ಲಿ 2024-25ನೇ ಸಾಲಿಗೆ 6 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಸರ್ಕಾರವು ಸ್ಥಾಪಿಸಿರುವ ಮೊರಾರ್ಜಿ ದೇಸಾಯಿ, ಏಕಲವ್ಯ ಮಾದರಿ/ ಅಟಲ್ ಬಿಹಾರಿ ವಾಜಪೇಯಿ/ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಲ್ಲಿ 6 ರಿಂದ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಇನ್ನಿತರೆ ಸಾಮಗ್ರಿಗಳನ್ನು ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಈ ಶಾಲೆಗಳಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅಂದರೆ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರವೇಶ ಲಭ್ಯವಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ ರೂ.2.50 ಲಕ್ಷಗಳು ಮತ್ತು…

Read More

ಮಡಿಕೇರಿ ಡಿ.15 : ಕನ್ನಡ ಚಿತ್ರರಂಗದ ಖ್ಯಾತ ನಟ ದಿ.ಡಾ.ವಿಷ್ಣುವರ್ಧನ್ ಅವರ ಸಮಾಧಿ ಇರುವ ಸ್ಥಳ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಿಸಬೇಕೆಂದು ಒತ್ತಾಯಿಸಿ ಡಿ.17 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಕೊಡಗು ಜಿಲ್ಲೆಯ ವಿಷ್ಣು ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ಜಿಲ್ಲಾ ವಿಷ್ಣು ಸೇನಾ ಸಮಿತಿಯ ಜಿಲ್ಲಾಧ್ಯಕ್ಷ ರಫೀಕ್ (ದಾದಾ) ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಡಾ.ವಿಷ್ಣುವರ್ಧನ್ ಅವರು ನಿಧನ ಹೊಂದಿ ಇಷ್ಟು ವರ್ಷಗಳೇ ಕಳೆದರೂ ಸ್ಮಾರಕವನ್ನು ನಿರ್ಮಿಸದೆ ಇರುವುದು ವಿಷಾದನೀಯ. ಈ ನಿರ್ಲಕ್ಷ್ಯ ಧೋರಣೆ ಅಭಿಮಾನಿಗಳಿಗೆ ಅತೀವ ದು:ಖ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಿಸಬೇಕೆಂದು ಆಗ್ರಹಿಸಿ ವಿಷ್ಣು ಅಭಿಮಾನಿಗಳಿಂದ ಭಾನುವಾರ ಬೃಹತ್ ಪ್ರತಿಭಟನೆ ನಡೆಯಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಸಾವಿರಾರು ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಕೊಡಗು ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬೆಂಗಳೂರಿಗೆ ತೆರಳಿ ಸ್ಮಾರಕಕ್ಕಾಗಿ…

Read More

ವಿರಾಜಪೇಟೆ ಡಿ.15 : ಕುಂದಾ ಮನೆಯಪಂಡ ಕುಟುಂಬದ ಆಶ್ರಯದಲ್ಲಿ ಮನೆಯಪಂಡ ಐನ್‍ಮನೆ ಸಮೀಪದಲ್ಲಿರುವ ಮುದರೆ ಪಾಲ ಮೈದಾನದಲ್ಲಿ ಮನೆಯಪಂಡ ಕುಟುಂಬದ ಪುತ್ತರಿ ಒತ್ತೋರ್ಮೆ ಕೂಟ ನಡೆಯಿತು. ನಿವೃತ್ತ ಎಸ್.ಪಿ ಮುಕ್ಕಾಟ್ಟಿರ ಅಪ್ಪಯ್ಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕುಟುಂಬದ ಅಧ್ಯಕ್ಷ ಮನೆಯಪಂಡ ರಾಜ ಸೋಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಆಚಾರ, ವಿಚಾರ, ಪದ್ಧತಿ, ಪರಂಪರೆ ಉಳಿಸಿ ಬೆಳೆಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು. ನಮ್ಮ ಎಲ್ಲ ಕುಟುಂಬದವರು ಐನ್‍ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳು, ಗುರು ಕಾರೋಣ, ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತಾಗಬೇಕು ಎಂದು ಕಿವಿಮಾತು ಹೇಳಿದರು. ಪಟ್ಟೆದಾರ ಮನೆಯಪಂಡ ಸಿದ್ದು ನಾಚಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ಐನ್‍ಮನೆ, ಗುರುಮಠ, ಗಣಪತಿ ಗುಡಿಯಲ್ಲಿ ಪ್ರತಿದಿನ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರುತ್ತಿರುವ ಮನೆಯಪಂಡ ಬೊಳ್ಳು ಬೆಳ್ಳಿಯಪ್ಪ, ಅವರ ಪತ್ನಿ ಮಧು ಬೆಳ್ಳಿಯಪ್ಪ, ಮಕ್ಕಳಾದ ಆಧಿತ್ಯ ಅಯ್ಯಣ್ಣ, ಆದರ್ಶ ಕುಟ್ಟಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸಾಂಪ್ರಾದಾಯಿಕ ಪೀಚೆಕತ್ತಿ ನೀಡಿ ಗೌರವಿಸಲಾಯಿತು. ಅಲ್ಲದೇ ಸೇನೆಯಲ್ಲಿ…

Read More

ಮಡಿಕೇರಿ ಡಿ.15 : ಮಾನವ ಬಂಧುತ್ವ ವೇದಿಕೆ ವತಿಯಿಂದ ಡಿ.18 ರಂದು ‘ಕಲ್ಯಾಣ ರಾಜ್ಯದ ಪರಿಕಲ್ಪನೆ ಸತ್ಯ ಮತ್ತು ಮಿಥ್ಯೆಗಳು’ ಎನ್ನುವ ವಿಷಯವನ್ನು ಆಧರಿಸಿ ನಗರದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ವಿಭಾಗೀಯ ಸಂಚಾಲಕ ಸತೀಶ್ ಕುಮಾರ್ ಸರ್ವರಿಗು ಸಮಪಾಲು, ಸರ್ವರಿಗು ಸಮ ಬಾಳು ಎಂಬ ತತ್ತ್ವದ ಮೇಲೆ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ‘ಕಲ್ಯಾಣ ರಾಜ್ಯ’ ಎಂಬ ಪರಿಕಲ್ಪನೆ ನಮ್ಮ ರಾಜ್ಯ ಮತ್ತು ದೇಶದಲ್ಲಿ ಯಾವ ಪ್ರಮಾಣದಲ್ಲಿ ಅನುಷ್ಟಾನಗೊಂಡಿದೆ ಎನ್ನುವ ಅಂಶದ ಬಗ್ಗೆ ವಿಚಾರ ಸಂಕಿರಣದಲ್ಲಿ ಬೆಳಕು ಚೆಲ್ಲಲಾಗುವುದು ಎಂದರು. ನಗರದ ಕೂರ್ಗ್ ಕಮ್ಯೂನಿಟಿ ಹಾಲ್‍ನಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳುವ ವಿಚಾರ ಸಂಕಿರಣವನ್ನು ಚಿಂತಕರು, ಸಾಹಿತಿಗಳು ಮತ್ತು ಇತಿಹಾಸ ಸಂಶೋಧಕರಾದ ಕೆ.ಆರ್.ವಿದ್ಯಾಧರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ವಹಿಸಲಿದ್ದಾರೆ. ಮೊದಲ ಗೋಷ್ಠಿಯಲ್ಲಿ ಕರ್ನಾಟಕ ಕಾರ್ಮಿಕ ಚಳವಳಿಯ ನಾಯಕರಾದ ಬೆಂಗಳೂರಿನ ಡಾ.ಪ್ರಕಾಶ್ ಅವರು ‘ಕಲ್ಯಾಣ ರಾಜ್ಯದ ಪರಿಕಲ್ಪನೆ ಮತ್ತು ಕಾರ್ಪೋರೇಟ್ ಶಕ್ತಿಗಳ…

Read More

ಮಡಿಕೇರಿ ಡಿ.15 : ದಕ್ಷಿಣ ಕೊಡಗಿನಲ್ಲಿ ವರ್ಷದ ಹಿಂದೆ ‘ಪೊನ್ನಂಪೇಟೆ ತಾಲ್ಲೂಕು’ ರಚನೆಯಾಗಿದೆ. ಆದರೆ ನೂತನ ತಾಲ್ಲೂಕಿಗೆ ಮತ್ತು ಇಲ್ಲಿನ ಜನತೆಗೆ ದೊರಕಬೇಕಾದ ಯಾವುದೇ ಸೌಲಭ್ಯಗಳು ಇಲ್ಲಿಯವರೆಗೆ ತಲುಪಿಲ್ಲವೆಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಆರೋಪಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ, ವಿವಿಧ ಸಂಘಟನೆಗಳ ಹೋರಾಟದಿಂದ ಪೊನ್ನಂಪೇಟೆ ತಾಲ್ಲೂಕು ಅಸ್ತಿತ್ವಕ್ಕೆ ಬಂದಿದೆ. ನೂತನ ತಾಲ್ಲೂಕು ಕಚೇರಿ ಆರಂಭಿಸಿರುವ ಸರಕಾರ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಿಲ್ಲ. ಈಗ ಇರುವ ಸಿಬ್ಬಂದಿಗಳ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ಇದರಿಂದ ಅಗತ್ಯ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಹಿಂದಿನಂತೆ ವಿರಾಜಪೇಟೆ ತಾಲ್ಲೂಕು ಕಚೇರಿಗೆ ತೆರಳುವ ಅನಿವಾರ್ಯತೆ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪೊನ್ನಂಪೇಟೆ ತಾಲ್ಲೂಕು ಕಚೇರಿಯಲ್ಲಿರುವ ಕೆಲವೇ ಸಿಬ್ಬಂದಿಗಳು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಹಳಷ್ಟು ಕೆಲಸಗಳಿಗೆ ವಿರಾಜಪೇಟೆ ತಾಲ್ಲೂಕು ಕಚೇರಿಗೆ ತೆರಳುವಂತೆ ಸೂಚಿಸುತ್ತಾರೆ. ಸರ್ವೇ ವಿಭಾಗವು ವಿರಾಜಪೇಟೆಯಿಂದ ಪೊನ್ನಂಪೇಟೆಗೆ ವರ್ಗಾವಣೆಯಾಗದೇ ಇರುವುದರಿಂದ ಈ ವ್ಯಾಪ್ತಿಯ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ತಕ್ಷಣ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಲು ಕ್ರಮ…

Read More

ಮಡಿಕೇರಿ ಡಿ.15 : ವಿಶ್ವ ರಾಷ್ಟ್ರ ಸಂಸ್ಥೆಯ ಜಾಗತಿಕ ಅಲ್ಪಸಂಖ್ಯಾತ ಜನಾಂಗಗಳ ಹಕ್ಕುಗಳ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 14ನೇ ವರ್ಷದ “ಗನ್ ಕಾರ್ನಿವಲ್ ತೋಕ್ ನಮ್ಮೆ”ಯನ್ನು ಡಿ.18 ರಂದು ನಾಪೋಕ್ಲು ಕೊಳಕೇರಿಯ ನೂರಂಬದ ನಾಡ್ ನಲ್ಲಿ ಆಚರಿಸಲಾಗುವುದು ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜನಪದೀಯ ಹಬ್ಬವಾಗಿ ತೋಕ್ ನಮ್ಮೆಯನ್ನು ಅತಿ ಉತ್ಸಾಹದಿಂದ ಆಚರಿಸುವ ಮೂಲಕ ಕೋವಿ ಹೊಂದುವ ಕೊಡವರ ಹಕ್ಕನ್ನು ಪ್ರತಿಪಾದಿಸಲಾಗುವುದು ಎಂದಿದ್ದಾರೆ. ಕೊಳಕೇರಿಯ ನೂರಂಬದ ನಾಡ್ ನಲ್ಲಿರುವ ರಮ್ಮಿ ನಾಣಯ್ಯ ಹಾಗೂ ರೀನಾ ನಾಣಯ್ಯ ಅವರ ಕಾವೇರಿ ಎಸ್ಟೇಟ್ ನ ಕಾವೇರಿ ನದಿ ದಂಡೆಯಲ್ಲಿ ನಮ್ಮೆ ನಡೆಯಲಿದೆ. ಕೋವಿಗಳನ್ನು ಸಾಂಪ್ರದಾಯಿಕ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಗುವುದು. ನಂತರ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ಗುಂಡು ಹಾರಿಸುವ ಸ್ಪರ್ಧೆ ನಡೆಯಲಿದೆ. ನಮ್ಮೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಂದೂಕುಗಳನ್ನು ಪ್ರದರ್ಶಿಸುವುದರಿಂದ ಪ್ರತಿಯೊಬ್ಬರು ಬಂದೂಕು ಸಹಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನಾಚಪ್ಪ ಮನವಿ…

Read More