ಮಡಿಕೇರಿ ಡಿ.11 : ಗೋಣಿಕೊಪ್ಪಲಿನ ಸಂಪೂರ್ಣ ಸ್ವಾಸ್ಥ್ಯ ಯೋಗ ಕೇಂದ್ರದ ವತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜನ್ಮದಿನಾಚರಣೆ ಪ್ರಯುಕ್ತ ಜ.14 ರಂದು ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಯೋಗಾಸನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕೆ.ಕೆ.ಸೋಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಕೊಡಗಿನಲ್ಲಿ ಪ್ರಥಮ ಬಾರಿಗೆ ಸೂರ್ಯ ನಮಸ್ಕಾರ ಚಾಲೆಂಜ್ ಸ್ಪರ್ಧೆಯನ್ನು ಏರ್ಪಡಿಸಿ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಈ ಬಾರಿಯೂ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಯೋಗದಿಂದ ನಿರೋಗದ ಕಡೆ ಸಾಗುವ, ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಯೋಗದ ಮಹತ್ವ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಗೋಣಿಕೊಪ್ಪಲಿನ ಕೈಕೇರಿ ಗ್ರಾಮದ ಭಗವತಿ ದೇವಾಲಯದ ಆವರಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಎಂದರು. ಸ್ಪರ್ಧೆಯು ಸೀನಿಯರ್, ಜೂನಿಯರ್ ಮತ್ತು ಸಾರ್ವಜನಿಕ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದ್ದು, ಪ್ರಥಮ ವಿಜೇತರಿಗೆ ರೂ.15 ಸಾವಿರ ನಗದು, ದ್ವಿತೀಯ ರೂ.10 ಸಾವಿರ ನಗದು ಹಾಗೂ ತೃತೀಯ ವಿಜೇತರಿಗೆ ರೂ.5 ಸಾವಿರ ನಗದು ಬಹುಮಾನ…
ಲೇಖಕ: admin
ಮಡಿಕೇರಿ ಡಿ.11 : ಧನ್ಯಶ್ರೀ ನೃತ್ಯ ಕಲಾನಿಕೇತನ ವತಿಯಿಂದ ಡಿ.15 ರಂದು ಭರತನಾಟ್ಯ ಕಲಾವಿದೆ ಪ್ರೇಕ್ಷ ಭಟ್ ಅವರ “ಭರತನಾಟ್ಯ ರಂಗಪ್ರವೇಶ” ಕಾರ್ಯಕ್ರಮ ನಡೆಯಲಿದೆ. ಮಡಿಕೇರಿಯ ಶ್ರೀಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದ ಶತಮಾನೋತ್ಸವ ಭವನದಲ್ಲಿ ಸಂಜೆ 5 ಗಂಟೆಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಸನದ “ನಾಟ್ಯಶ್ರೀ” ಭಾರತೀಯ ಸಂಗೀತ ನೃತ್ಯ ಕಲಾ ಶಾಲೆಯ ವಿದುಷಿ ಕೆ.ಎಸ್.ಅಂಬಳೆ ರಾಜೇಶ್ವರಿ ಹಾಗೂ ಪೊನ್ನಂಪೇಟೆ ನಿನಾದ ವಿದ್ಯಾಸಂಸ್ಥೆಯ ಚೇಂದಿರ ನಿರ್ಮಲ ಬೋಪಣ್ಣ ಪಾಲ್ಗೊಳ್ಳಲಿದ್ದಾರೆ. ಕಲಾವಿದರು, ಕಲಾ ಆಸಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರೇಕ್ಷ ಭಟ್ ಅವರ ಪೋಷಕರಾದ ವಿದ್ಯಾಶ್ರೀ ಹಾಗೂ ಎನ್.ಸಿ.ಅಶೋಕ್ ಭಟ್ ಮನವಿ ಮಾಡಿದ್ದಾರೆ.
ಮಡಿಕೇರಿ ಡಿ.11 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಮಾಜ ಕಾರ್ಯ ವಿದ್ಯಾರ್ಥಿಗಳಿಂದ ಚೇರಂಬಾಣೆಯ ಅರುಣ ಪಿಯು ಕಾಲೇಜಿನಲ್ಲಿ ಪಿಯುಸಿ ನಂತರದ ಅವಕಾಶಗಳು ಕುರಿತು ಕಾರ್ಯಕ್ರಮ ನಡೆಯಿತು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜ್ ಮತ್ತು ಸಮಾಜ ಕಾರ್ಯ ವಿಭಾಗದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮೀನುಗಾರಿಕೆ ಇಲಾಖೆಯ ಸಹಾಯಕಿ ನಿರ್ದೇಶಕಿ ಮಿಲನ ಭರತ್, ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯ ನಂತರ ಇರುವ ಶೈಕ್ಷಣಿಕ ಅವಕಾಶಗಳು ಮತ್ತು ಉದ್ಯೋಗ ಆಧಾರಿತ ಶಿಕ್ಷಣದ ಕುರಿತು ಮಾಹಿತಿ ನೀಡಿದರು. ಎಲ್ಲರ ಬಳಿ ಸುಲಭವಾಗಿ ಲಭ್ಯವಿರುವ ಮೊಬೈಲ್ ಅನ್ನು ಶೈಕ್ಷಣಿಕ ಮತ್ತು ಔದ್ಯೋಗಿಕ ಮಾಹಿತಿ ಪಡೆಯುವ ಸಲುವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದದರು. ಬೆಂಗೂರು ಗ್ರಾ.ಪಂ ಉಪಾಧ್ಯಕ್ಷ ಬಡ್ಡೀರ ಸೋಮಣ್ಣ ಮಾತನಾಡಿ, ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆ ಆತ್ಮವಿಶ್ವಾಸವನ್ನು ಹೆಚ್ಚಿಸಿ ಬದುಕನ್ನು ರಚನಾತ್ಮಕವಾಗಿ ಕಟ್ಟಿಕೊಳ್ಳಲು ಸಹಕರಿಸುತ್ತದೆ ಎಂದರು. ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ದಿನಪತ್ರಿಕೆಗಳನ್ನು, ಗ್ರಂಥಾಲಯಗಳನ್ನು…
ಮಡಿಕೇರಿ ಡಿ.11 : ಸಮಾಜಸೇವೆ ಮೂಲಕ ಸಮಾಜದಲ್ಲಿ ನಾವು ಶಾಶ್ವತವಾಗಿ ಸ್ಮರಣೀಯರಾಗಲು ಸಾಧ್ಯ ಇದೆ ಎಂದು ಮಡಿಕೇರಿಯ ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಬಿ.ರಾಘವ ಅಭಿಪ್ರಾಯಪಟ್ಟಿದ್ದಾರೆ. ನಗರದ ಕಾಯ೯ಪ್ಪ ಕಾಲೇಜಿನ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಆಯೋಜಿತ ವಲಯ 6 ರ ಸಾಂಸ್ಕೃತಿಕ ಸ್ಪಧೆ೯ ಕಲಾಪವ೯ವನ್ನು ಉದ್ಘಾಟಿಸಿ ಮಾತನಾಡಿದ ಅವರು,, ಸಾಮಾಜಿಕ ಬದಲಾವಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾತ್ಮ ಗಾಂಧೀಜಿ, ರಾಜಾರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ ,ಬಾಬಾ ಆಮ್ಟೆ, ಮಥರ್ ಥೆರೆಸಾ, ಸ್ವಾಮಿ ವಿವೇಕಾನಂದ ಅವರಂಥ ಅನೇಕ ಮಹಾನೀಯರು ಪ್ರತೀಯೋವ೯ರ ಜೀವನದ ಆದಶ೯ವಾಗಬೇಕು ಎಂದು ಕರೆ ನೀಡಿದರು. ಸಾಮಾಜಿಕ ಚಳವಳಿಗಳ ಮೂಲಕ ದೇಶವನ್ನು ಸುಭದ್ರಗೊಳಿಸುವಲ್ಲಿ ಸಾಕಷ್ಟು ಮಹನೀಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಇಂಥ ಮಹನೀಯರ ಜೀವನಾದಶ೯ಗಳನ್ನು ವಿದ್ಯಾಥಿ೯ ದಿಸೆಯಲ್ಲಿಯೇ ಹೇಳಿಕೊಡಬೇಕೆಂದು ಅನಿಸಿಕೆ ವ್ಯಕ್ತಪಡಿಸಿದ ಮೇಜರ್ ಡಾ. ಬಿ.ರಾಘವ, ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿಯು ಸಮಾಜ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಮೂಲಕ ಶಿಕ್ಷಣ, ಆರೋಗ್ಯ,…
ಪುತ್ತೂರು ಡಿ.11 : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯ ಪುತ್ತೂರು ಕೇಂದ್ರ ಇದರ ಸಂಯುಕ್ತ ಆಶ್ರಯದಲ್ಲಿ ನಿರ್ಮಾಣ ಕ್ಷೇತ್ರದಲ್ಲಿನ ಇತ್ತೀಚಿನ ಹೊಸತನಗಳು ಹಾಗೂ ಗುಣಮಟ್ಟದ ಮಾನದಂಡಗಳು ಎನ್ನುವ ವಿಷಯದ ಬಗ್ಗೆ 5 ದಿನಗಳ ಕೌಶಲ್ಯ ಉದ್ದೀಪನಾ ಕಾರ್ಯಾಗಾರವನ್ನು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಏರ್ಪಡಿಸಲಾಗಿದೆ. ಕಾರ್ಯನಿರತ ಸಿವಿಲ್ ಇಂಜಿನಿಯರುಗಳು, ಗುತ್ತಿಗೆದಾರರು, ಮೇಲ್ವಿಚಾರಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಂಶೋಧನಾ ನಿರತರಿಗೆ ಅನುಕೂಲವಾಗುವ ಈ ವಿಚಾರಸಂಕಿರಣವನ್ನು ಡಿಸೆಂಬರ್ 12 ರಿಂದ 16ರ ವರೆಗೆ ನಡೆಸಲಾಗುತ್ತದೆ. ದಿನಾಂಕ 12.12.2023ರ ಬೆಳಿಗ್ಗೆ 9.30ಕ್ಕೆ ಕಾರ್ಯನಿರತ ಸಿವಿಲ್ ಇಂಜಿನಿಯರುಗಳಿಗೆ ಕಾರ್ಯಾಗಾರ ನಡೆಯಲಿದ್ದು ದ.ಕ ಜಿಲ್ಲಾ ಪಂಚಾಯತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್.ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ. ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕಿ ಡಾ.ಯಶೋದಾ ರಾಮಚಂದ್ರ ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ. ದಿನಾಂಕ 13.12.2023ರ ಬೆಳಿಗ್ಗೆ 9.30ಕ್ಕೆ ಗುತ್ತಿಗೆದಾರರಿಗೆ ಹಾಗೂ ಮೇಲ್ವಿಚಾರಕರಿಗೆ…
ನಾಪೋಕ್ಲು ಡಿ.11 : ಸಮೀಪದ ಚೆರಿಯಪರಂಬು- ಕಲ್ಲುಮೊಟ್ಟೆ ರಸ್ತೆ ಕಾಮಗಾರಿ ಆರಂಭಗೊಂಡಿದ್ದು, ನಿರ್ಮಿಸುತ್ತಿರುವ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಅಂಬೇಡ್ಕರ್ ಯುವಕ ಸಂಘದ ಸತತ ಪ್ರಯತ್ನದಿಂದ ಶಾಸಕ ಪೊನ್ನಣ್ಣ ಅವರ ಮುತುವರ್ಜಿಯಿಂದ 10 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿ ಆರಂಭಗೊಂಡಿದೆ. ಆದರೆ ನಿರ್ಮಾಣವಾಗುತ್ತಿರುವ ರಸ್ತೆ ಉತ್ತಮ ಗುಣಮಟ್ಟದಿಂದ ಕೂಡಿಲ್ಲ. ರಸ್ತೆ ನಿರ್ಮಾಣ ಹಂತದಲ್ಲೇ ಬಿರುಕು ಬಿಟ್ಟು ಕಳಪೆ ಕಾಮಗಾರಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ಚೆರಿಯ ಪರಂಬು ಬಶೀರ್ ಆಲಿ ಮಾತನಾಡಿ, ರಸ್ತೆ ಕಾಮಗಾರಿ ಕೈಗೊಳ್ಳುತ್ತಿದ್ದಂತೆ ಬಿರುಕು ಬಿಟ್ಟು ಕಳಪೆ ಕಾಮಗಾರಿ ಆಗುತ್ತಿದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಕಾಮಗಾರಿ ನಡೆಯುವ ಸಂದರ್ಭ ಕಾಮಗಾರಿಗಳ ವಿವರ ಗಳ ಮಾಹಿತಿಯನ್ನು ನೀಡಬೇಕಾಗಿದೆ. ಈ ಬಗ್ಗೆ ಇಂಜಿನಿಯರ್ ಅಶೋಕ ಹಾಗೂ ಗ್ರಾ.ಪಂ ಗ್ರಾಮ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅವರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ…
ಕುಶಾಲನಗರ ಡಿ.11: ಶಿವಮೊಗ್ಗದ ನೆಹರು ಒಳಾಂಗಣ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕುಶಾಲನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಕುಶಾಲನಗರದ ಇಂಪನ 14 ವರ್ಷದ ವಯೋಮಿತಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬ್ರಿಜೇಶ್, ಹಾಗೂ ತೆವೀನ್ ದ್ವಿತೀಯ ಸ್ಥಾನ ಪಡೆದರೆ. ಹಿತೇಶ್ ಹಾಗೂ ಮುಕುಂದ್ ತೃತೀಯ ಬಹುಮಾನ ಪಡೆದುಕೊಂಡರು. ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಜಿಲ್ಲೆಯಿಂದ ಪ್ರತಿನಿಧಿಸಿದ ಕುಶಾಲನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಶಾಲೆಯ 11 ವಿದ್ಯಾರ್ಥಿಗಳ ಫೈಕಿ ಸಂಸ್ಥೆಯ ವಿದ್ಯಾರ್ಥಿಗಳು ಒಂದು ಚಿನ್ನದ ಪದಕ, ಎರಡು ಬೆಳ್ಳಿ ಪದಕ, ಎರಡು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಥಮ ಸ್ಥಾನ ಪಡೆದ ಸಂಸ್ಥೆಯ ಇಂಪನಾ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಇವರುಗಳಿಗೆ ಕರಾಟೆ ತರಬೇತುದಾರರಾದ ಸಂಕೇತ್ ತರಬೇತಿಯನ್ನು ನೀಡಿದ್ದರು. ಕುಶಾಲನಗರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಶಾಲೆಯ…
ನಾಪೋಕ್ಲು ಡಿ.11 : ಮಡಿಕೇರಿಯ ನೆಹರು ಯುವ ಕೇಂದ್ರದ ವತಿಯಿಂದ ಮೈಸೂರಿನ ಫಿಲೋಮಿನಾ ಸಭಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ವಿದ್ಯಾಸಂಸ್ಥೆಯ 5ನೇ ತರಗತಿ ವಿದ್ಯಾರ್ಥಿನಿ ಬಿ.ಎ.ಪ್ರಾರ್ಥನಾ ಪೊನ್ನಮ್ಮ ಕಟಾ ವಿಭಾಗದಲ್ಲಿ ಪ್ರಥಮ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಎಂಟನೇ ತರಗತಿಯ ವಿದ್ಯಾರ್ಥಿನಿಯರಾದ ಗಂಗಮ್ಮ ಹಾಗೂ ಕೆ.ಆಯುಷ್ಯ ಕಟಾ ವಿಭಾಗದಲ್ಲಿ ಕ್ರಮವಾಗಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳು ಸೆನ್ ಸಾಯಿ ಚಂದನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ವರದಿ : ದುಗ್ಗಳ ಸದಾನಂದ
ಕಡಂಗ ಡಿ.11 : ಎಡಪಾಲದ ಫೋರ್ ಸ್ಟಾರ್ ಕ್ರೀಡಾ ಸಂಘದ ವತಿಯಿಂದ ತಂಡದ ತರಬೇತುದಾರಾಗಿ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅಬ್ದುಲ್ಲ ಪೊಯಕೆರೆ ಅವರನ್ನು ಸನ್ಮಾನಿಸಲಾಯಿತು. ಎಡಪಾಲ ಫೋರ್ ಸ್ಟಾರ್ ತಂಡ ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಲು ಕಾರಣರಾದ ಅಬ್ದುಲ್ಲ ಪೊಯಕೆರೆ ಅವರನ್ನು ಸಂಘದ ಕಚೇರಿಯಲ್ಲಿ ಗ್ರಾಮ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಫೋರ್ ಸ್ಟಾರ್ ಅಧ್ಯಕ್ಷ ಹನೀಫ ಹನೀಫ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಶಂಸುದ್ದೀನ್, ಶಿಯಾಬ್, ಶಂಸೀರ್, ಉಸ್ಮಾನ್, ಸಾಬಿತ್ ಸಫ್ವಾನ್ ಮುಹಸಿನ್ ಇಲ್ಯಾಜ್, ಊರಿನ ಹಿರಿಯರಾದ ಅಬ್ಬಾಸ್ ಬಷೀರ್, ಕುಪ್ಪೋದಂಡ ಹಮೀದ್, ಜುನೈದ್ ರಾಜಾಕ್ ಲತೀಫ್, ರಿಯಾಜ್, ನಾಸರ್, ಶುಕೂರ್, ಝುಬೈರ್, ನಂದಕುಮಾರ್ ಮತ್ತು ಹಲವು ಯುವಕರು ಹಾಜರಿದ್ದರು. ರಶೀದ್ ಕುಪ್ಪೋಡ0ಡ ಸ್ವಾಗತಿಸಿದರು. ವರದಿ : ನೌಫಲ್ ಕಡಂಗ
ವಿರಾಜಪೇಟೆ ಡಿ.11 : ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಐಎಂಐಟಿ ಘಟಕದ ವತಿಯಿಂದ ವಿರಾಜಪೇಟೆ ಸೆಂಟ್ ಆನ್ಸ್ ಕಾಲೇಜಿನ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಮಸ್ಟರಿಂಗ್ ಮೆಷಿನ್ ಲರ್ನಿಂಗ್, ಪ್ರಾಕ್ಟಿಕಲ್ ಅಪ್ರೋಚ್ ಬಗ್ಗೆ ಕಾರ್ಯಾಗಾರ ನಡೆಯಿತು. ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಡಾ. ಶ್ರೀನಿವಾಸ್ ಬಿ. ಎಲ್. ಹಾಗೂ ಎಂ.ಎಸ್.ಸಿ ಡಾಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಜಾಹ್ನವಿ, ದೃತಿ, ದಿಶಾ, ಭೂಮಿಕಾ, ರಿಯೋನ, ಅಲರೊಯ್ ಮಾಹಿತಿಯನ್ನು ನೀಡಿದರು. ಕಾರ್ಯಾಗಾರದಲ್ಲಿ ಯಂತ್ರ ಕಲಿಕೆ ಮತ್ತು ಕೃತಕ ಬುದ್ದಿಮತ್ತೆ ವಿಷಯದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಯಿತು. ಯಂತ್ರ ಕಲಿಕೆ ಅಪ್ಲಿಕೇಶನ್, ಪರಿಕಲ್ಪನೆಗಳ ಬಗ್ಗೆ ವಿದ್ಯಾರ್ಥಿಗಳು ಅರಿತರು. ಮಾತ್ರವಲ್ಲದೆ ಪ್ರಸ್ತುತದಲ್ಲಿ ಎ.ಐ.ನ ಪಾತ್ರದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಯಿತು. ಮತ್ತು ತಂತ್ರಜ್ಞಾನದಲ್ಲಾಗುತ್ತಿರುವ ಬದಲಾವಣೆ ಬಗ್ಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮ, ಬಿ.ಸಿ.ಎ ವಿಭಾಗದ ಮುಖ್ಯಸ್ಥೆ ಸೌಮ್ಯ ಸೋಮರಾಜ್, ಉಪನ್ಯಾಸಕರು ಹಾಜರಿದ್ದರು.






