ಲೇಖಕ: admin

ಮಡಿಕೇರಿ ಡಿ.9 : ಕೊಡಗಿನ ಗಡಿ ಕರಿಕೆ ಗ್ರಾಮದ ಪಚ್ಚೆಪಿಲಾವು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ತೋಟಗಳಿಗೆ ನುಗ್ಗಿ ಕೃಷಿ ಫಸಲನ್ನು ನಾಶಪಡಿಸುತ್ತಿರುವ ಗಜಹಿಂಡು ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ. ಸ್ಥಳೀಯ ನಿವಾಸಿ ಹೆಚ್.ಎಂ.ನಂಜುಂಡ ಎಂಬುವವರ ತೋಟಕ್ಕೆ ನುಗ್ಗಿರುವ ಕಾಡಾನೆಗಳು ಕರಿಮೆಣಸು, ಬಾಳೆ, ಅಡಿಕೆ ಮರಗಳು ಮತ್ತು ಸ್ಪಿಂಕ್ಲರ್‍ನ್ನು ನಾಶಪಡಿಸಿವೆ. ಅಕ್ಕಪಕ್ಕದ ತೋಟಗಳಿಗೂ ಲಗ್ಗೆ ಇಟ್ಟಿರುವ ವನ್ಯಜೀವಿಗಳು ನಷ್ಟವನ್ನುಂಟು ಮಾಡಿವೆ. ಪ್ರತಿವರ್ಷ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಎದುರಾಗುತ್ತಿದ್ದು, ಫಸಲು ಕಾಡಾನೆಗಳ ಹೊಟ್ಟೆ ಸೇರುತ್ತಿದೆ ಎಂದು ಕೃಷಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟಬೇಕು, ದಾಳಿಯನ್ನು ನಿಯಂತ್ರಿಸಲು ಆನೆ ಕಂದಕಗಳನ್ನು ನಿರ್ಮಿಸಬೇಕು ಮತ್ತು ಆನೆಗಳಿಂದ ಉಂಟಾದ ಬೆಳೆ ನಷ್ಟಕ್ಕೆ ಶೀಘ್ರ ಪರಿಹಾರ ವಿತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Read More

ಮಡಿಕೇರಿ ಡಿ.9 : ಸಂಪಾಜೆ ಸಮೀಪ ಪೇರಡ್ಕ ಗೂನಡ್ಕದ ಮುಹಿಯ್ಯದ್ದೀನ್ ರಿಫಾಯಿ ದಫ್ ಅಸೋಸಿಯೇಷನ್ ವತಿಯಿಂದ ಡಿ.16 ಮತ್ತು 17 ರಂದು ಇಸ್ಲಾಮಿಕ್ ಕಥಾ ಪ್ರಸಂಗ ಹಾಗೂ ದಫ್ ಪ್ರದರ್ಶನ ನಡೆಯಲಿದೆ ಎಂದು ಮಹಿಯ್ಯದ್ದೀನ್ ಜುಮಾ ಮಸೀದಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತಿಹಾಸ ಪ್ರಸಿದ್ಧ ಸರ್ವ ಧರ್ಮಗಳ ಸಮನ್ವಯ ಕೇಂದ್ರ ಪೇರಡ್ಕ ಮುಹಿಯ್ಯದ್ದೀನ್ ಜುಮಾ ಮಸೀದಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಡಿ.16 ರಂದು ಝಬೈರ್ ಮಾಸ್ಟರ್ ತೋಟಿಕಲ್ ಹಾಗೂ ಸಂಗಡಿಗರಿಂದ “ಮಣಲಾರುಣ್ಯತ್ತಿಲೆ ಚೋರ ಪೈದಲ್” ಎಂಬ ವಿಷಯದ ಕುರಿತು ಇಸ್ಲಾಮಿಕ್ ಕಥಾ ಪ್ರಸಂಗ ನಡೆಯಲಿದೆ ಎಂದರು. ಅಂದು ಸಂಜೆ 7 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಪೇರಡ್ಕ-ಗೂನಡ್ಕ ಎಂಜೆಎಂ ಖತೀಬರಾದ ರಿಯಾಝ್ ಪೈಝಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಎಂಜೆಎಂ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರಂತೋಡುವಿನ ಬಿಜೆಎಂ ಖತೀಬರಾದ ಇಸಾಖ್ ಬಾಖವಿ, ಸುಳ್ಯದ ಆದಂ ಹಾಜಿ ಕಮ್ಮಾಡಿ, ಸುಳ್ಯ ಗಾಂಧಿನಗರದ…

Read More

ಮಡಿಕೇರಿ ಡಿ.9 : ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದ ರೆಸಾರ್ಟ್ ವೊಂದರಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ. ರೆಸಾರ್ಟ್ ನ ಕೋಣೆಯಲ್ಲಿ ಪತಿ, ಪತ್ನಿಯ ಮೃತದೇಹ ನೇಣು ಬಿಗದ ಸ್ಥಿತಿಯಲ್ಲಿದ್ದು, ಪುತ್ರಿಯ ಮೃತದೇಹ ಹಾಸಿಗೆಯಲ್ಲಿದೆ. ಕೇರಳ ರಾಜ್ಯದ ಕೊಲ್ಲಂ ಬಳಿಯ ಪಡಿಚಾಟು ಗ್ರಾಮದ ವಿನೋದ್ (37), ಅವರ ಪತ್ನಿ ಜಿಬಿ ಅಬ್ರಹಾಂ (35) ಹಾಗೂ 8 ವರ್ಷದ ಪುತ್ರಿ ಮೃತಪಟ್ಟಿದ್ದಾರೆ. ಪುತ್ರಿಯನ್ನು ಉಸಿರುಗಟ್ಟಿಸಿ ಕೊಂದು ದಂಪತಿ ನೇಣಿಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ಸಂಜೆ ಪ್ರವಾಸಕ್ಕೆಂದು ಕೊಡಗಿಗೆ ಬಂದವರು ರೆಸಾರ್ಟ್ನಲ್ಲಿ ತಂಗಿದ್ದರು ಎಂದು ಹೇಳಲಾಗಿದೆ. ಕೇರಳದಿಂದ ಕುಟುಂಬದ ಸದಸ್ಯರು ಬಂದ ನಂತರವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಸ್ಥಳಕ್ಕೆ ಮಡಿಕೇರಿ ಗಾಮಾಂತರ ಠಾಣಾ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More

ಸೋಮವಾರಪೇಟೆ ಡಿ.9 : ಬಸ್ಸಿನೊಳಗೆ ಕೇರೆ ಹಾವೊಂದು ಸೇರಿಕೊಂಡು ಆತಂಕ ಸೃಷ್ಟಿಸಿದ ಘಟನೆ ಸೋಮವಾರಪೇಟೆ  ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಕೂಡ್ಲಿಪೇಟೆಯಿಂದ ಸೋಮವಾರಪೇಟೆ ಮಾರ್ಗವಾಗಿ ವಿರಾಜಪೇಟೆಗೆ ತೆರಳುವ ಪಶುಪತಿ ಬಸ್ ಪಟ್ಟಣಕ್ಕೆ ಬಂದ ಸಂದರ್ಭ ಇಂಜಿನ್ ಸಮೀಪ ಹಾವೊಂದು ಕಾಣಿಸಿಕೊಂಡಿತು. ಇದರಿಂದ ಕೆಲಕಾಲ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಸ್ನೇಕ್ ರಘು ಹಾವನ್ನು  ಹಿಡಿದು ರಕ್ಷಿಸಿದರು. ಹಾವುಗಳನ್ನು ಕಂಡರೆ ಕೊಲ್ಲದೆ ಈ ಸಂಖ್ಯೆಗೆ  9844558693 ಕರೆ ಮಾಡುವಂತೆ ಸ್ನೇಕ್ ರಘು ಮನವಿ ಮಾಡಿದ್ದಾರೆ.

Read More

ಮಡಿಕೇರಿ ಡಿ.9 :   ಮೈಸೂರಿನ ಬ್ರಹ್ಮಾಕುಮಾರಿ ಯಾದವಗಿರಿ ಹಾಗೂ ಜಯಲಕ್ಷ್ಮಿಪುರಂ ಶಾಖೆಯಲ್ಲಿ ಒಂದು ವಾರ ಪ್ರಪುಲ್ಲಿತ ಮನಸ್ಸಿಗಾಗಿ ದಿವ್ಯ ಗುಣಗಳ ಧ್ಯಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ  ಮಡಿಕೇರಿ ಶಾಖೆಯ ಬ್ರಹ್ಮಾಕುಮಾರಿ ಧನಲಕ್ಷ್ಮೀ ಅಕ್ಕನವರು  ದಿವ್ಯ ಗುಣಗಳ ಕುರಿತು ಪ್ರವಚನ ನೀಡಿ, ಧ್ಯಾನದ ಮುಖಾಂತರ ಅನುಭವ ಮಾಡಿಸಿದರು. ಈ ಸಂದರ್ಭ ಮೈಸೂರು ಉಪ ವಲಯದ ಹಿರಿಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀ ಜೀ ಹಾಗೂ ಶಾಖೆಯ ಸಹೋದರ, ಸಹೋದರಿಯರು ಧನಲಕ್ಷ್ಮೀ ಅಕ್ಕ ಅವರನ್ನು ಸನ್ಮಾನಿಸಿ, ಗೌರವಿಸಿದರು.

Read More

ಸಿದ್ದಾಪುರ ಡಿ.9 :  ಮಕ್ಕಳ ಭವಿಷ್ಯವನ್ನು ರೂಪಿಸಲು ಶಿಕ್ಷಣ ಅತ್ಯಗತ್ಯವಾಗಿದ್ದು,  ಪೋಷಕರು ಮಕ್ಕಳನ್ನು ಶಾಲೆಗೆ ಕಡ್ಡಾಯವಾಗಿ ಕಳಿಸುವುದರ ಮೂಲಕ  ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗಲಿದ್ದು, ಭವಿಷ್ಯದ ಚಿಂತನೆಯೊಂದಿಗೆ ಮುಖ್ಯ ವಾಹಿನಿಗೆ ಬರಬೇಕೆಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಪರಹಿತಾನಂದಜಿ ಮಹಾರಾಜ್ ಕರೆ ನೀಡಿದರು. ಚೆನ್ನಂಗಿ ಸರ್ಕಾರಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿ, ಸಂಘ ಸಂಸ್ಥೆಗಳು ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿಯೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ಬಂದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು. ಶಾರದಾಶ್ರಮದ ಮೂಲಕ ಚೆನ್ನಂಗಿ ಶಾಲೆಗೆ ಕುಡಿಯುವ ನೀರಿಗಾಗಿ ಬೋರ್ವೆಲ್ ಕೊರಸಲಾಗಿದೆ. ಸಮೀಪದ ಹಾಡಿಗಳಲ್ಲಿ ಸಮುದಾಯ ಭವನ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ಯೋಜನೆಗಳನ್ನು ಮಾಡಲಾಗಿದೆ. ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದುಕೊಂಡು ಉನ್ನತ ಶಿಕ್ಷಣ ದೊಂದಿಗೆ ವಿವೇಕಾನಂದರ ಆದರ್ಶ ಜೀವನವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ  ಪಾಲಿಬೆಟ್ಟದ ಸಮಾಜ ಸೇವಕ…

Read More

ಮಡಿಕೇರಿ ಡಿ.9 : ಮೈಸೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕಾವೇರಿ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಸನತ್ ಮುತ್ತಣ್ಣ ಭಾಗವಹಿಸಿ ಚಿನ್ನದ ಪದಕ ಪಡೆದು ಕೊಂಡು, ಶಾಲೆಗೆ ಕೀರ್ತಿ ತಂದಿದ್ದಾನೆ. ಶಾಲಾ ಸಂಯೋಜಕಿ ಬಿ.ಡಿ.ಭಾಗ್ಯ, ಶಾಲೆಯ ಕರಾಟೆ ತರಬೇತುದಾರ ಸೋಮಣ್ಣ ಉಪಸ್ಥಿತರಿದ್ದರು. ವಿಜೇತ ವಿದ್ಯಾರ್ಥಿಗೆ ಶಾಲೆಯ ಆಡಳಿತ ಮಂಡಳಿ, ಶಾಲಾ ಸಂಯೋಜಕರು, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿ ಹಾರೈಸಿದ್ದಾರೆ. 

Read More

ಮೂರ್ನಾಡು ಡಿ.9 : ಚೇರಂಬಾಣೆ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಕರಾಟೆ ಪರೀಕ್ಷೆಯಲ್ಲಿ ಪದಕ ಮತ್ತು ವಿವಿಧ ಬೆಲ್ಟ್‍ಗಳನ್ನು ಪಡೆದುಕೊಂಡಿದ್ದಾರೆ. ಅಂತರಾಷ್ಟ್ರೀಯ ಶಾವೊಲಿನ್ ಕುಂಗ್-ಫುಕರಾಟೆ ಶಾಲೆಯ ವತಿಯಿಂದ ನಡೆಸಲಾದ ಕರಾಟೆ ಪರೀಕ್ಷೆಯಲ್ಲಿ 47 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಈ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕ ಕುದುಪಜೆ ಕವನ್ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪದಕ ಮತ್ತು ವಿವಿಧ ರೀತಿಯ ಕರಾಟೆ ಬೆಲ್ಟ್‍ಗಳನ್ನು ವಿತರಿಸಿದರು. ಅಂತರಾಷ್ಟ್ರೀಯ ಶಾವೊಲಿನ್ ಕುಂಗ್-ಫುಕರಾಟೆ ಶಾಲೆಯ ಭಾರತದ ಮುಖ್ಯತರಬೇತುದಾರ ದೇವರಾಜ್, ಕರ್ನಾಟಕ ತರಬೇತುದಾರ ಹಾಗೂ ರಾಜರಾಜೇಶ್ವರಿ ಪ್ರೌಢಶಾಲೆಯ ಕರಾಟೆ ಶಿಕ್ಷಕ ನಾಟೋಳಂಡ ನಂಜುಂಡ, ಕೊಡಗು ಜಿಲ್ಲಾ ತರಬೇತುದಾರರಾದ ವೇಣು ಮತ್ತು ಸತೀಶ್ ಹಾಜರಿದ್ದರು.

Read More

ವಿರಾಜಪೇಟೆ ಡಿ.9 : ಮೈಸೂರಿನಲ್ಲಿ ನಡೆದ 6ನೇ ಜಿ ಕೆ ಎ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್‍ಶಿಪ್‍ನ 13 ರಿಂದ 14 ವರ್ಷದ ಬಾಲಕಿಯರ ವಿಭಾಗದ ಕತಾ ಸ್ಪರ್ಧೆಯಲ್ಲಿ ಕಾವೇರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅಪ್ಸರಾ ಜಯನ್ ದ್ವಿತೀಯ ಸ್ಥಾನ ಹಾಗೂ ಕುಮಿತೆ ಯಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ವಿಜೇತ ವಿದ್ಯಾರ್ಥಿನಿಯನ್ನು ಶಾಲಾ ಆಡಳಿತ ಮಂಡಳಿ, ಪೋಷಕರು ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿರುತ್ತಾರೆ. ಶಾಲಾ ಸಂಯೋಜಕಿ ಎನ್.ಬಿ.ಚೈತ್ರಾ ಹಾಗೂ ದೈಹಿಕ ಶಿಕ್ಷಕಿ ಬಿ.ಬಿ.ಲಾವಣ್ಯ ಉಪಸ್ಥಿತರಿದ್ದರು.

Read More

ಮಡಿಕೇರಿ ಡಿ.9 :  ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿಯಿಂದ ಡಿ.12ರಂದು  ಅಮ್ಮತ್ತಿಯಲ್ಲಿ ಎರಡನೇ ವರ್ಷದ ರಾಜ್ಯಮಟ್ಟದ ಕೊಡವ ವಾಲಗತ್ತಾಟ್ ನಮ್ಮೆ  ನಡೆಯಲಿದೆ ಎಂದು  ಕಾರ್ಯಕ್ರಮದ ಸಂಚಾಲಕ ಮುಲ್ಲೇಂಗಡ ಮಧೋಶ್ ಪೂವಯ್ಯ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,  ಅಮ್ಮತ್ತಿ ಕೊಡವ ಸಮಾಜದ ಸಹಕಾರದೊಂದಿಗೆ   ಅಮ್ಮತ್ತಿ ಕೊಡವ ಸಮಾಜದ ಆವರಣದಲ್ಲಿ  ಕೊಡವ ವಾಲಗತ್ತಾಟ್ ನಮ್ಮೆ ನಡೆಯಲಿದ್ದು,  ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ವಿವಿಧ ವಿಭಾಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು. 1 ರಿಂದ 7ನೇ ತರಗತಿಯವರೆಗೆ ಪ್ರಾಥಮಿಕ ವಿಭಾಗ, 8ನೇ ತರಗತಿಯಿಂದ 10ನೇ ತರಗತಿಯವರೆಗೆ ಪ್ರೌಢಶಾಲಾ ವಿಭಾಗ,  ಪ್ರಥಮ ಪಿಯುಸಿಯಿಂದ  3ನೇ ಪದವಿಯವರೆಗೆ ಕಾಲೇಜು ವಿಭಾಗ, ಕಾಲೇಜಿನ ನಂತರ 60 ವಯಸ್ಸಿನವರೆಗೆ ಮತ್ತೊಂದು ವಿಭಾಗ, 60 ವಯಸ್ಸಿನ ಮೇಲ್ಪಟ್ಟು ಹಿರಿಯ ನಾಗರಿಕರ ವಿಭಾಗ  ಸೇರಿದಂತೆ  ಐದು ವಿಭಾಗಗಳಲ್ಲಿ ಪುರುಷರು ಹಾಗೂ ಮಹಿಳೆಯರು ಎಂದು ತಲಾ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಮಧೋಶ್ ಪೂವಯ್ಯ ಮಾಹಿತಿ ನೀಡಿದರು. ಕಳೆದ ವರ್ಷ ಮೊದಲ…

Read More