ಲೇಖಕ: admin

ಮಡಿಕೇರಿ ನ.24 : ವಿದ್ಯಾರ್ಥಿಗಳು ಪ್ರಗತಿ ಕಾಣಬೇಕಿದ್ದರೆ ಗುರು-ಹಿರಿಯರಿಗೆ ಗೌರವ ನೀಡಬೇಕು ಎಂದು ಸಾಹಿತಿ ಮೇಚಿರ ಸುಭಾಷ್ ನಾಣಯ್ಯ ತಿಳಿಸಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಶಿಸ್ತು ಬದ್ಧ ಜೀವನ ಮುಖ್ಯ. ಮೊಬೈಲ್ ಗೀಳನ್ನು ವಿದ್ಯಾರ್ಥಿಗಳು ಕಡಿಮೆ ಮಾಡಬೇಕು. ಹೆಚ್ಚು ಮೊಬೈಲ್ ಬಳಕೆಯಿಂದ ಮಾನವನ ಜ್ಞಾನ ಹಾಗೂ ಯೋಚನಾ ಶಕ್ತಿ ಕಡಿಮೆ ಮಾಡುತ್ತದೆ ಎಂದು ತಿಳಿಸಿದರು. ಪ್ರಶಸ್ತಿ ಪ್ರಶಂಸೆ ಮುಖ್ಯವಲ್ಲ. ಎಂದಿಗೂ ಅದರ ಹಿಂದೆ ಹೋಗಬಾರದು. ಪ್ರಯತ್ನಗಳಿಂದ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಕಾಯುವ ತಾಳ್ಮೆ ವಿದ್ಯಾರ್ಥಿಗಳಿಗೆ ಇರಬೇಕು ಎಂದು ಸುಭಾಷ್ ನಾಣಯ್ಯ ಅವರು ಹೇಳಿದರು. ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಪಿ.ಎಂ.ದೇವಕಿ ಅವರು ಮಾತನಾಡಿ ವಿದ್ಯಾರ್ಥಿಗಳ ಸವಾರ್ಂಗೀಣ ಅಭಿವೃದ್ಧಿ ಮುಖ್ಯವಾಗಿರುವುದರಿಂದ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದೆ ಎಂದರು. ವಿದ್ಯಾರ್ಥಿಗಳಲ್ಲಿ ಪ್ರೌಢಶಾಲಾ ಹಾಗೂ ಪದವಿ ಹಂತದಲ್ಲಿಯೇ ಸ್ಪರ್ಧಾ ಮನೋಭಾವ ಬೆಳೆಸುವುದು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಹಕರಿಸುತ್ತದೆ ಎಂದು ಪಿ.ಎಂ.ದೇವಕಿ…

Read More

ಮಡಿಕೇರಿ ನ.24 : ಹುದ್ದೆ ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಘೋಷಣೆಗಳನ್ನು ಕೂಗಿದ ಸಂಘದ ಪ್ರಮುಖರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕು ಮತ್ತು ಸಾಮಾಜಿಕ ಭದ್ರತೆಯನ್ನು ನೀಡಬೇಕೆಂದು ಒತ್ತಾಯಿಸಿದರು. ಕರ್ನಾಟಕದಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14 ಸಾವಿರ ಅತಿಥಿ ಉಪನ್ಯಾಸಕರುಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇವರುಗಳ ಜೀವನ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತಂತ್ರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯ ವ್ಯಾಪಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಕೊಡಗಿನಲ್ಲಿ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಸರ್ಕಾರ ತಕ್ಷಣ ನಮ್ಮ ಮನವಿಗೆ ಸ್ಪಂದಿಸಿ ಹುದ್ದೆ ಖಾಯಂಗೊಳಿಸಲು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಕೊಡಗು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಶ್ಯಾಮ್ ಪ್ರಸಾದ್ ಸಂಘದ ಉಪಾಧ್ಯಕ್ಷ ನಟರಾಜ್, ಸಂಘದ ಸಂಘಟನಾ ಕಾರ್ಯದರ್ಶಿ ಮನೋಜ್…

Read More

ಮಡಿಕೇರಿ ನ.24 : ಪ್ರಸ್ತುತ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವ ಭರದಲ್ಲಿ ಮಾತೃಭಾಷೆಯನ್ನು ಮೂಲೆ ಗುಂಪು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿರುವ ಪೊಮ್ಮಕ್ಕಡ ಪರಿಷತ್‍ನ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ, ಮಕ್ಕಳಲ್ಲಿ ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚಾಗಬೇಕು ಎಂದು ಕರೆ ನೀಡಿದ್ದಾರೆ. ವಿರಾಜಪೇಟೆ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್, ಕೊಡವ ಎಂ.ಎ.ಸ್ನಾತಕೋತ್ತರ ವಿಭಾಗ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ಮತ್ತು ಕೊಡವ ಮಕ್ಕಡ ಕೂಟದ ಸಹಯೋಗದಲ್ಲಿ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಸಭಾಂಗಣದಲ್ಲಿ ನಡೆದ ವಿಚಾರ ಮಂಡನೆ, ಸನ್ಮಾನ ಹಾಗೂ “ನಾಡ ಕೊಡಗ್” ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾಷೆ, ಕಲೆ, ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಮಹಿಳೆಯ ಪ್ರಮುಖ ಪಾತ್ರವಾಗಬೇಕು. ಆದರೆ ಪ್ರಸ್ತುತ ದಿನಗಳಲ್ಲಿ ಮಹಿಳೆಯರು ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಪದ್ಧತಿ ಪರಂಪರೆಯನ್ನೆ ಮರೆಯುತ್ತಿದ್ದಾರೆ. ತಮ್ಮ ನೆಲವನ್ನು ಇತರರಿಗೆ ಮಾರಿ ಮಣ್ಣಿನ ಸಂಬಂಧವನ್ನು…

Read More

ಮಡಿಕೇರಿ ನ.24 : ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಸಭೆ ಸುಂಟಿಕೊಪ್ಪದ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆಯಿತು. ಮೊಗೇರ ಸಮಾಜದ ಗೌರವ ಸಲಹೆಗಾರ ಪಿ.ಎಂ.ರವಿ ಮಾತನಾಡಿ, ಮೊಗೇರ ಜನಾಂಗದ ಸಂಸ್ಕೃತಿ, ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಜನಾಂಗದ ಅಭಿವೃದ್ಧಿಗೆ ಶ್ರಮಿಸಲು ಸಂಘಟನೆಯ ಅಗತ್ಯವಿದೆ, ಪ್ರತಿಯೊಬ್ಬರು ಸಂಘಟನೆಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಮೊಗೇರ ಜನಾಂಗಕ್ಕೆ ತನ್ನದೇ ಆದ ಇತಿಹಾಸವಿದ್ದು, ಎಲ್ಲಾ ಕ್ಷೇತ್ರದಲ್ಲೂ ಮೊಗೇರ ಸಮುದಾಯ ಗುರುತಿಸಿಕೊಳ್ಳುವಂತಾಗಬೇಕು. ಜಿಲ್ಲೆಯಾದ್ಯಂತ ಮೊಗೇರ ಸಮಾಜದ ಸಂಘಟನೆಯನ್ನು ಬಲಿಷ್ಠಗೊಳಿಸಲು ಸಮುದಾಯದ ಯುವಕ, ಯುವತಿಯರು ಮುಂದೆ ಬರಬೇಕು ಎಂದು ಕರೆ ನೀಡಿದರು. ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಗೌತಮ್ ಶಿವಪ್ಪ ಮಾತನಾಡಿ, ಸಮಾಜದ ಬೆಳವಣಿಗೆಗೆ ಎಲ್ಲರೂ ಮುಂಚೂಣಿಯಲ್ಲಿ ನಿಲ್ಲಬೇಕು. ನಮ್ಮ ಸಮುದಾಯ ಆರ್ಥಿಕವಾಗಿ ಹಿಂದುಳಿದಿದ್ದು, ಸಮಾಜದ ಅಭಿವೃದ್ಧಿ ಆಗಬೇಕಾದರೆ ನಾವೆಲ್ಲರೂ ಒಗ್ಗಟ್ಟಾಗಿ ಸಂಘಟನೆಯನ್ನು ಬಲಪಡಿಸಬೇಕು ಮತ್ತು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು. ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದ ಸಮಾಜದ ಜಿಲ್ಲಾಧ್ಯಕ್ಷ ಪಿ.ಬಿ.ಜನಾರ್ಧನ, ಮೊಗೇರ ಸಮಾಜದ ಅಧ್ಯಕ್ಷನಾಗಿ…

Read More

ಮಡಿಕೇರಿ ನ.24 : ರೀಬಿಲ್ಡ್ ಕೊಡಗು ಸಂಸ್ಥೆ ತನ್ನ 5ನೇ ವಾರ್ಷಿಕೋತ್ಸವದ ಹಿನ್ನೆಲೆ ವಿರಾಜಪೇಟೆ ನರ್ಸಿಂಗ್ ಹೋಮ್ ನ ರೋಗಿಗಳಿಗೆ ನಡೆದಾಡಲು ಪೂರಕವಾದ ಸ್ಟೀಲ್ ಸ್ಟಾಂಡ್ ವಾಕರ್, ವಾಕಿಂಗ್ ಸ್ಟಿಕ್, ವೀಲ್ ಚೇರ್ ಸೇರಿದಂತೆ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ವಿತರಿಸಿತು. ಸಂಸ್ಥೆಯ ಸ್ಥಾಪಕ ಕೆ.ಎ.ಕುಶಾಲಪ್ಪ ಅವರು ಸಲಕರಣೆಗಳನ್ನು ವಿತರಿಸಿ ಮಾತನಾಡಿ, ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ವತಿಯಿಂದ ಇಂದು ಅಗತ್ಯ ವೈದ್ಯಕೀಯ ಸಾಧನ, ಸಲಕರಣೆಗಳನ್ನು ವಿತರಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅಸಹಾಯಕ ರೋಗಿಗಳ ಸಮಸ್ಯೆಯನ್ನು ಮನಗಂಡು ನಮ್ಮ ತಂಡ ಸಹಾಯ ಮಾಡುತ್ತಿದೆ ಎಂದರು. ಕೊಡಗಿನಲ್ಲಿ ಈ ಹಿಂದೆ ಯಾರೂ ಕಂಡು ಕೇಳರಿಯದ ರೀತಿಯಲ್ಲಿ ಜಲಪ್ರಳಯ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಮನೆ, ಆಸ್ತಿ ಕಳೆದುಕೊಂಡು ಅಸಾಹಯಕ ಸ್ಥಿತಿಯಲ್ಲಿದ್ದ ಕೊಡಗಿನ ಜನತೆಯ ಸಂಕಷ್ಟಕ್ಕೆ ನಮ್ಮಿಂದ ಸಾಧ್ಯವಾದಷ್ಟು ರೀತಿಯಲ್ಲಿ ಸ್ಪಂದಿಸಿದ್ದೇವೆ. ದೇಶವನ್ನು ಕಾಡಿದ ಕೋವಿಡ್ ಸೋಂಕು ಸಂದರ್ಭದಲ್ಲಿಯೂ ಸಂಕಷ್ಟಕ್ಕೀಡಾದ ಜನರ ನೆರವಿಗೆ ಧಾವಿಸಿದ್ದೇವೆ ಎಂದು ಹೇಳಿದರು. ಸಂಸ್ಥೆ ಸ್ಥಾಪನೆಯಾಗಿ 5 ವರ್ಷಗಳಾಗಿದೆ, ಇಲ್ಲಿಯವರೆಗೆ ಹಲವು…

Read More

ಮಡಿಕೇರಿ ನ.24 : ಪೌರಾಣಿಕ ಹಿನ್ನೆಲೆಯ ಇತಿಹಾಸ ಪ್ರಸಿದ್ಧ ಮಡಿಕೇರಿ ಸಮೀಪದ ಬಿಳಿಗೇರಿ ಗ್ರಾಮದ ಶ್ರೀ ಪರದೇವರ ದೇವಸ್ಥಾನದ ಪುನರ್ ಪ್ರತಿಷ್ಠಾ ಕಾರ್ಯಕ್ರಮ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ, ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಸಮಾಪನಗೊಂಡಿತು. ಶ್ರೀ ಪರದೇವರ ದೇವಸ್ಥಾನದ ಪುನರ್ ಪ್ರತಿಷ್ಠಾ ಕಾರ್ಯಗಳು ಕ್ಷೇತ್ರದ ತಂತ್ರಿಗಳಾದ ಉದಯ ಕುಮಾರ್ ಹುಲಿತಾಳ ಅವರ ನೇತೃತ್ವದಲ್ಲಿ ಗುರುವಾರ ಮತ್ತು ಶುಕ್ರವಾರ ಸಾಂಗವಾಗಿ ನೆರವೇರಿತು. ಶ್ರೀ ಪರದೇವರ ದೇವಾಲಯವನ್ನು ಗ್ರಾಮಸ್ಥರ ಮತ್ತು ದಾನಿಗಳ ಸಹಕಾರದಿಂದ 20 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ ಆರಂಭಿಕ ದಿನವಾದ ನ.23 ರಂದು ಸಂಜೆ ಸ್ಥಳ ಶುದ್ಧಿ, ಪಂಚಗವ್ಯ ಪುಣ್ಯಾಹಃ, ದೇವತಾ ಪ್ರಾರ್ಥನೆ, ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮ, ರಾಕ್ಷೋಘ್ನ, ಸುದರ್ಶನ ಹೋಮ ನಡೆದು, ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಪರದೇವರ ಮೊಗ ಪ್ರತಿಷ್ಠಾಪನೆ- ಶುಕ್ರವಾರ ಬೆಳಗ್ಗೆ ಗಣಪತಿ ಹೋಮ, ಸಪ್ತಶತಿ ಪಾರಾಯಣ, ನವಕ ಕಲಶ ಪ್ರತಿಷ್ಠೆ, ಕಲಶ ಪೂಜೆಗಳು ನಡೆದವು. ಬೆಳಗ್ಗೆ 8.50 ರಿಂದ 10.30 ರವರೆಗಿನ ಧನುರ್…

Read More

ಮಡಿಕೇರಿ ನ.24 : ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದಿಂದ  ಉದ್ದೇಶಿತ ಕೆಮಿಸ್ಟ್ ಭವನಕ್ಕೆ ಜನವರಿಯಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್ ಹೇಳಿದ್ದಾರೆ. ನಗರದ ಹೊರವಲಯದಲ್ಲಿನ ಆಹನ್ ಹಿಲ್ ಕಾಟೇಜ್ ನಲ್ಲಿ ಸಂಘದ  24 ನೇ ವಾಷಿ೯ಕ ಮಹಾಸಭೆಯಲ್ಲಿ ಮಾತನಾಡಿದ ಜೀವನ್, ನಗರದ ಚೇನ್ ಗೇಟ್ ಬಳಿಯಲ್ಲಿನ ಸಂಘದ ನಿವೇಶನದಲ್ಲಿ ಸುಸಜ್ಜಿತವಾಗಿ 60 ಲಕ್ಷ ರು. ವೆಚ್ಚದಲ್ಲಿ ಕೆಮಿಸ್ಟ್ ಭವನ ನಿಮಾ೯ಣ ಮಾಡಲಾಗುತ್ತದೆ. ಮುಂದಿನ ಜನವರಿಯಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು. ಜಿಲ್ಲೆಯ ವಿವಿಧೆಡೆ 260  ಔಷಧಿ ವ್ಯಾಪಾರಿಗಳಿದ್ದಾರೆ. ಹೊಸ ಸದಸ್ಯರು ಸಂಘಕ್ಕೆ ಸೇಪ೯ಡೆಯಾಗುತ್ತಿದ್ದಾರೆ. ಜಿಲ್ಲಾ ಸಂಘದಿಂದ ರಾಜ್ಯ ಸಂಘದಲ್ಲಿಯೂ ನಿದೇ೯ಶಕರಾಗಿ ಕಾಯ೯ನಿವ೯ಹಿಸುವ ಮೂಲಕ ಕೊಡಗಿನ ಔಷಧಿ ವ್ಯಾಪಾರಿಗಳು  ಗಮನ ಸೆಳೆದಿದ್ದಾರೆ ಎಂದು ಜೀವನ್ ಹಷ೯ ವ್ಯಕ್ತಪಡಿಸಿದರು. ಸಂಘದ ರಾಜ್ಯ ಕಾನೂನು ಸಲಹೆಗಾರ ಹರೀಶ್ ಮಾತನಾಡಿ, ಕೇಂದ್ರ ಸಕಾ೯ರ ಔಷಧಿ ರಂಗದಲ್ಲಿ ನಾನಾ ಬದಲಾವಣೆ ತರುತ್ತಿದೆ. ಶೀಘ್ರದಲ್ಲಿಯೇ 1948 ರ ಔಷಧಿ…

Read More

ಮಡಿಕೇರಿ ನ.24 : ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಸಂಯುಕ್ತ ಹೋರಾಟ-ಕರ್ನಾಟಕ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ನ.26 ರಿಂದ 28ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯುವ 72 ಗಂಟೆಗಳ ಮಹಾಧರಣಿಗೆ ಎಐಟಿಯುಸಿ ಕೊಡಗು ಜಿಲ್ಲಾ ಸಮಿತಿಯ ಬೆಂಬಲವಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಎಐಟಿಯುಸಿ ಸಂಘಟನೆಯ ಕೊಡಗು ಜಿಲ್ಲಾ ಸಮಿತಿಯ ನೂರಕ್ಕೂ ಅಧಿಕ ಸದಸ್ಯರು ಬೆಂಗಳೂರಿನಲ್ಲಿ ನ.27 ರಂದು ನಡೆಯುವ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು ಮಹಾಧರಣಿಯಲ್ಲಿ ಪಾಲ್ಗೊಂಡು ಸುಮಾರು 26 ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಿದ್ದಾರೆ ಎಂದು ಹೇಳಿದ್ದಾರೆ. ರೈತರ ಉತ್ಪನ್ನಗಳಿಗೆ ಎಂ.ಎಸ್.ಸ್ವಾಮಿನಾಥನ್ ಶಿಫಾರಸ್ಸಿನಂತೆ ಕನಿಷ್ಠ ಬೆಂಬಲ ಹಾಗೂ ಖರೀದಿ ಖಾತ್ರಿ ಒದಗಿಸುವ ಶಾಸನ ಜಾರಿ ಮಾಡಬೇಕು, ರೈತರಿಗೆ ನೀಡುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ವಿದ್ಯುತ್‌ಚ್ಛಕ್ತಿ ಮೇಲಿನ ಸಬ್ಸಿಡಿ ಮೊತ್ತ ಹೆಚ್ಚಳ ಮಾಡಬೇಕು, ರೈತರ ಆತ್ಮಹತ್ಯೆ ತಡೆಯಲು ಎಲ್ಲಾ…

Read More

ಮಡಿಕೇರಿ ನ.23 : ವಿಶ್ವ ಹಿಂದು ಪರಿಷದ್ ವತಿಯಿಂದ ನ.26 ರಂದು ಭಾಗಮಂಡಲದಲ್ಲಿ ಕಾವೇರಿ ಆರತಿ ನಡೆಯಲಿದೆ. ಸಂಜೆ 5 ಗಂಟೆಗೆ ಭಾಗಮಂಡಲದ ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಭಜನೆ, ವೇದಘೋಷಗಳೊಂದಿಗೆ ಕಾವೇರಿ ತಾಯಿಗೆ ಕಾವೇರಿ ಆರತಿ ನೆರವೇರಲಿದೆ. ಮುಖ್ಯ ಭಾಷಣಕಾರರಾಗಿ ಸುವರ್ಣ ನ್ಯೂಸ್ ಚಾನಲ್ ನ ಸಂಪಾದಕ ಹಾಗೂ ಸುದ್ದಿ ನಿರೂಪಕ ಅಜಿತ್ ಹನುಮಕ್ಕನವರ್ ಪಾಲ್ಗೊಳ್ಳಲಿದ್ದಾರೆ. ವಿಶ್ವ ಹಿಂದು ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಉಪಸ್ಥಿತರಿರುವರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾತೆ ಕಾವೇರಿಗೆ ಆರತಿ ಬೆಳಗುವಂತೆ ವಿಶ್ವ ಹಿಂದು ಪರಿಷದ್ ನ ಕೊಡಗು ಜಿಲ್ಲಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದೆ.

Read More

ಮಡಿಕೇರಿ ನ.24 : ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ 2023-24ನೇ ಸಾಲಿಗೆ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಶ್ರೇಯಾಂಕದ ಆಧಾರದಲ್ಲಿ ನಡೆಸಲಾಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ತೃತೀಯ ಬಿಎಸ್ಸಿಯ ವಿದ್ಯಾರ್ಥಿನಿ ತೀರ್ಥ ತಂಗಮ್ಮ, ಉಪಾಧ್ಯಕ್ಷರಾಗಿ ಮಾನಸ ಪಿ. ಪಿ, ಕಾರ್ಯದರ್ಶಿಯಾಗಿ ಪುಷ್ಯ ಪೂವಮ್ಮ ಕೆ.ಎನ್, ಜಂಟಿ ಕಾರ್ಯದರ್ಶಿಯಾಗಿ ದ್ವಿತೀಯ ಬಿ ಎ ವಿಭಾಗದ ಮಹೇಂದ್ರ ಎನ್. ವಿ ಹಾಗೂ ದ್ವಿತೀಯ ಬಿ ಎಚ್ ಆರ್ ಡಿ ಯ ಅಲೀನಾ ಜಸ್ಮ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ತೃತೀಯ ಬಿ ಎ ವಿಭಾಗದ ಅಭಿಷೇಕ್ ಎಂ.ಎಸ್ ಹಾಗೂ ಮಾನಸ ಬಿ.ಕೆ ಆಯ್ಕೆಯಾಗಿದ್ದಾರೆ. ಹಿಂದಿ ವಿಭಾಗದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಸಂಘದ ಸಂಚಾಲಕರಾದ ತಳವಾರ್ ಬಿ.ಎಚ್ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಕಾಲೇಜು ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಅವರ ನೇತೃತ್ವದಲ್ಲಿ ಅಧ್ಯಾಪಕರ ಸಹಕಾರದೊಂದಿಗೆ ಚುನಾವಣೆ ನಡೆಸಲಾಯಿತು. ತರಗತಿ ಪ್ರತಿನಿಧಿಗಳು ತಮ್ಮ ಮತಗಳನ್ನು ಮತಪೆಟ್ಟಿಗೆಗೆ ಹಾಕುವ ಮೂಲಕ ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.…

Read More