ಮಡಿಕೇರಿ ಸೆ.12 : ಮೂರ್ನಾಡು ಸಮುದಾಯ ಭವನದಲ್ಲಿ ಪೋಷಣ್ ಮಾಸಾಚರಣೆ ನಡೆಯಿತು. ಮೂರ್ನಾಡು ವೃತ್ತಕ್ಕೆ ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಾಲ್ಗೊಂಡ ಫಲಾನುಭವಿಗಳು ವಿವಿಧ ರೀತಿಯ ಆಹಾರಗಳನ್ನು ತಯಾರಿಸಿ ಪ್ರದರ್ಶಿಸಿದರು. ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಸವಿತ ಕೀರ್ತನ್ ಪೋಷಣ್ ಮಾಸಾಚರಣೆಯ ಉದ್ದೇಶ, ಪೌಷ್ಟಿಕ ಆಹಾರದ ಮಹತ್ವ, ಮಾತೃವಂದನ ಸಪ್ತಾಹ, ಆಹಾರದಲ್ಲಿರುವ ಔಷಧೀಯ ಗುಣಗಳು, ಪೌಷ್ಟಿಕತೆಯ ಬಗ್ಗೆ ಮಾಹಿತಿ ನೀಡಿದರು.
ಲೇಖಕ: admin
ಕಡಂಗ ಸೆ.12 : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೀಡುತ್ತಿರುವ 2023-24 ನೇ ಸಾಲಿನ ಎರಡನೇ ಜೊತೆ ಸಮವಸ್ತ್ರದ ಬಟ್ಟೆ, ಶೂ ಹಾಗೂ ಸಾಕ್ಸ್ ಗಳ್ಳನ್ನು ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನರಿಯಂದಡ ಗ್ರಾ.ಪಂ ಅಧ್ಯಕ್ಷ ಪೆಮ್ಮಂಡ ಕೌಶಿ ಕಾವೇರಮ್ಮ, ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಮುಖ್ಯ ಶಿಕ್ಷಕಿ ಶಾಂತಿ ಕುಮಾರಿ, ಎಸ್ ಡಿ ಎಂ ಸಿ ಅಧ್ಯಕ್ಷೆ ಫಾತಿಮಾ, ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಗ್ರಾ.ಪಂ ಸದಸ್ಯರಾದ ಸುಬೀರ್, ರಾಣಿ ಗಣಪತಿ, ವಾಣಿ ಕವಿತಾ ,ಮಮ್ಮದ್, ಶಿಕ್ಷಕ ವೃಂದದವರು, ಗ್ರಾಮಸ್ಥರು ಹಾಜರಿದ್ದರು. ವರದಿ : ನೌಫಲ್
ಮಡಿಕೇರಿ ಸೆ.12 : ಸಮತೋಲನ ಮತ್ತು ಶುದ್ಧ ಆಹಾರ ಪದ್ಧತಿಯನ್ನು ಪಾಲಿಸುವ ಮೂಲಕ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಸಲಹೆ ನೀಡಿದ್ದಾರೆ. ಕುಶಾಲನಗರದ ಹಿಲಾಲ್ ಮದರಸ ಸಭಾಂಗಣದಲ್ಲಿ ಮಡಿಕೇರಿಯ ಬೀಬಿ ಫಾತಿಮಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೈಸೂರಿನ ಅಲ್ ಅನ್ಸಾರ್ ಆಸ್ಪತ್ರೆ, ವಿರಾಜಪೇಟೆಯ ಕೊಡಗು ದಂತ ವೈದ್ಯ ಮಹಾವಿದ್ಯಾನಿಲಯ ಮತ್ತು ಮಂಗಳೂರಿನ ಯೇನಪೊಯ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳ ತಜ್ಞ ವೈದರುಗಳ ಸಹಯೋಗದೊಂದಿಗೆ ನಡೆದ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒತ್ತಡದ ಜೀವನದಿಂದ ಆರೋಗ್ಯದಲ್ಲಿ ಏರುಪೇರಾಗುವುದು ಸಹಜವಾಗಿದ್ದು, ವೈದ್ಯರ ಸಲಹೆ ಪಾಲಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಸೇವೆಯೇ ವೈದ್ಯರ ಪ್ರಮುಖ ಗುರಿಯಾಗಿದೆ, ವೈದ್ಯರು ಹಾಗೂ ರೋಗಿಗಳಿಗೆ ತಾಳ್ಮೆ ಮುಖ್ಯವಾಗಿದೆ. ಯಾವುದೇ ಸಂದರ್ಭ ಎದುರಾದರೂ ವೈದ್ಯರ ಮೇಲೆ ಹಲ್ಲೆ ಮಾಡುವ ಮನೋಭಾವನೆ ಬರಬಾರದು ಎಂದರು. ಟ್ರಸ್ಟ್ ಅಧ್ಯಕ್ಷ ಅಫ್ರೋಜ್ ಮಹಮ್ಮದ್ ಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ…
ಮಡಿಕೇರಿ ಸೆ.12 : ರಾಜ್ಯ ಸರ್ಕಾರ ಕೊಡಗು ವಿಶ್ವವಿದ್ಯಾನಿಲಯ ಸೇರಿದಂತೆ ನೂತನ ಎಂಟು ವಿವಿಗಳನ್ನು ರದ್ದುಗೊಳಿಸುವ ಚಿಂತನೆ ಮಾಡಿದೆ ಎಂದು ಆರೋಪಿಸಿ ಮತ್ತು ಬಿಜೆಪಿ ಸರ್ಕಾರದ ಅವಧಿಯ ರೈತ ನೀತಿಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿದರು. ಗಣಪತಿ ದೇವಾಲಯ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಪ್ರಸಕ್ತ ರಾಜ್ಯ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತಪರವಾಗಿ ಜಾರಿಗೆ ತಂದಿದ್ದ ರೈತ ಸನ್ಮಾನ ನಿಧಿ, ರೈತ ವಿದ್ಯಾರ್ಥಿಗಳ ವಿದ್ಯಾನಿಧಿ ಸೇರಿದಂತೆ ಕೃಷಿ ಕಾಯಿದೆ ಮತ್ತಿತರ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸುತ್ತಿದ್ದು, ರೈತಾಪಿ ವರ್ಗಕ್ಕೆ ಕಷ್ಟ ಎದುರಾಗಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲವೆಂದು ಆರೋಪಿಸಿದರು.…
ಮಡಿಕೇರಿ ಸೆ.12 : ಕೂಡಿಗೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜೇನುಕಲ್ಲುಬೆಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾನ್ಯ ಗೌಡ ಎಂಬ ವಿದ್ಯಾರ್ಥಿನಿ ಛದ್ಮವೇಷ ಸ್ಪರ್ಧೆಯಲ್ಲಿ ಪರಿಸರ ಸ್ನೇಹಿ ಕಾಗದ ಬಳಸಿ ವೇಷಧಾರಣೆ ಮಾಡಿ ಗಮನ ಸೆಳೆದರು.
ಮಡಿಕೇರಿ ಸೆ.12 : 2023-24 ನೇ ಸಾಲಿನ ಕರ್ನಾಟಕ ಸರ್ಕಾರದ ಆಯವ್ಯಯದಲ್ಲಿ ಮಂಡನೆಯಾಗಿರುವ “ಸಸ್ಯ ಶ್ಯಾಮಲಾ” ಕಾರ್ಯಕ್ರಮವನ್ನು ಕುಶಾಲನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶಾಸಕ ಡಾ. ಮಂತರ್ ಗೌಡ ಗಿಡನೆಡುವ ಮೂಲಕ ಉದ್ಘಾಟಿಸಿದರು. ಶಾಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ತಾಲ್ಲೂಕು, ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಹಲವಾರು ಗಿಡಗಳನ್ನು ನೆಟ್ಟು ನೀರನ್ನು ಹರಿಸಿ ಉದ್ಘಾಟಿಸಿ ನಂತರ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಇಂದಿನ ವಾತಾವರಣದಲ್ಲಿ ಜಾಗತಿಕ ತಾಪಮಾನ ಹೆಚ್ಚುವಿಕೆ, ಅನಾವೃಷ್ಟಿ, ಅರಣ್ಯ ನಾಶ ಮುಂತಾದ ಪ್ರಾಕೃತಿಕ ವಿಕೋಪಗಳು ಆಗದಿರುವುದಕ್ಕೆ ಪ್ರತಿಯೊಬ್ಬರೂ ಕನಿಷ್ಠ ವರ್ಷಕ್ಕೊಂದಾದರೂ ಗಿಡವನ್ನು ನೆಟ್ಟು ಪೋಷಿಸುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣದಿಂದಲೇ ಗಿಡ ನೆಡಲು ಮತ್ತು ಪೋಷಿಸುವಲ್ಲಿ ಪ್ರವೃತ್ತವಾಗಬೇಕೆಂದರು. ಹಸಿರಿನಿಂದ ಕಂಗೊಳಿಸುವ ಶಾಲೆಯ ವಾತಾವರಣವು ಕಲಿಕೆಗೆ ಮತ್ತು ಸಾಧನೆಗೆ ಹೆಚ್ಚು ಪ್ರೇರಣೆ ನೀಡುತ್ತದೆ, ಎಲ್ಲರೂ ಒಗ್ಗಟ್ಟಾದರೆ, ಒಗ್ಗಟ್ಟಾಗಿ ಪರಿಸರವನ್ನು ಬೆಳೆಸಿದರೆ ಮಾತ್ರ ಭವಿಷ್ಯದಲ್ಲಿ ಉತ್ತಮ ಗಾಳಿ, ಮಳೆ ಮತ್ತು…
ಮಡಿಕೇರಿ ಸೆ.12 : ಕೇರಳದ ಕಣ್ಣೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಕಣ್ಣೂರ್ ಯೂನಿವರ್ಸಿಟಿ ಸಿಂಥೆಟಿಕ್ ಸ್ಟೇಡಿಯಂ ಮಾಗಟು ಪರಂಬದಲ್ಲಿ ನಡೆದ 2ನೇ ಕೇರಳ ರಾಜ್ಯ ಮಾಸ್ಟರ್ಸ್ ಮಾನ್ಸೂನ್ ಓಪನ್ ಅಥ್ಲೆಟಿಕ್ ಮೀಟ್-2023 ರ 55+ ಸ್ಪರ್ಧೆಯಲ್ಲಿ ಮಡಿಕೇರಿಯ ಬಿ.ವಸಂತಿ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. 400ಮೀ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ, 200ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, 100ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಹಾಗೂ ರಿಲೇ ಯಲ್ಲಿ ಚಿನ್ನದ ಪದಕ ಗೆದ್ದು ಕೊಡಗಿಗೆ ಕೀರ್ತಿ ತಂದಿದ್ದಾರೆ. ವಸಂತಿ ಅವರು ಮಡಿಕೇರಿ ಆಸ್ಪತ್ರೆಯಿಂದ ವರ್ಗಾವಣೆಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸೀನಿಯರ್ ನರ್ಸಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಡಿಕೇರಿ ಸೆ.12 : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದರು. ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ದಸರಾ ಸಮಿತಿ ಅಧ್ಯಕ್ಷೆ, ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ದಸರಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ದಸರಾ ಉತ್ಸವಕ್ಕೆ ಮೆರುಗು ನೀಡುವ ದಶಮಂಟಪಗಳ ವೈಭವದ ಹಿಂದೆ ಇರುವ ಮಂಟಪ ಸಮಿತಿಗಳ ಶ್ರಮವನ್ನು ತಾನು ಹತ್ತಿತರದಿಂದ ಕಂಡಿದ್ದೇನೆ. ಅಲ್ಲದೇ ಉತ್ಸವದ ಯಶಸ್ಸಿಗಾಗಿ ಉಪ ಸಮಿತಿಗಳ ಪರಿಶ್ರಮ ಅರಿವು ಕೂಡ ತನಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆದು ಸೂಕ್ತ ಅನುದಾನ ಒದಗಿಸಲು ಶ್ರಮಿಸುತ್ತೇನೆ ಎಂದು ಶಾಸಕರು ಹೇಳಿದರು. ಪ್ರಾಸ್ತಾವಿಕ ಮಾತನಾಡಿದ ಅಧ್ಯಕ್ಷೆ ಅನಿತಾ ಪೂವಯ್ಯ, ದಸರಾ ಸಮಿತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 3 ಕೋಟಿ ಅನುದಾನ ಬೇಡಿಕೆ ಮುಂದಿಡಲಾಗಿದೆ. ಈ ಬಾರಿ ದಸರಾ ಉತ್ಸವವನ್ನು ವಿಜ್ರಂಭಣೆಯಿಂದ ನಡೆಸುವ ನಿಟ್ಟಿನಲ್ಲಿ ಸರ್ವರ ಸಹಕಾರ…
ಮಡಿಕೇರಿ ಸೆ.12 : ಕೊಡಗು ಜಿಲ್ಲಾ ವ್ಯಾಪಿ ಸಾವಿರಾರು ಹೋಂಸ್ಟೇಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹೋಂಸ್ಟೇ ಮಾಲೀಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಡಿವೈಎಸ್‍ಪಿ ಗಂಗಾಧರಪ್ಪ ಮನವಿ ಮಾಡಿದ್ದಾರೆ. ಸೋಮಾವಾರಪೇಟೆ ಹೋಂಸ್ಟೇ ಅಸೋಸಿಯೇಷನ್ ವತಿಯಿಂದ ನಡೆದ ತ್ರೈಮಾಸಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಿಯಮದ ಪ್ರಕಾರ ಹೋಂಸ್ಟೇ ಮಾಲೀಕರುಗಳು ಹೋಂಸ್ಟೇಗಳಲ್ಲಿಯೇ ವಾಸ ಇರಬೇಕು, ಮನೆಯ ವಾತಾವರಣ ಸೃಷ್ಟಿಸಬೇಕು. ಆದರೆ ಜಿಲ್ಲೆಯ ಹೋಂಸ್ಟೇಗಳಲ್ಲಿ ಮಾಲೀಕರು ವಾಸವೇ ಇರುವುದಿಲ್ಲ, ಕಾರ್ಮಿಕರೇ ಎಲ್ಲಾ ನೋಡಿಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಹೋಂಸ್ಟೇಗಳಲ್ಲಿ ಮಾದಕ ವಸ್ತುಗಳ ಬಳಕೆ ಅಧಿಕವಾಗುತ್ತಿದ್ದು, ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಹೋಂಸ್ಟೇಗಳನ್ನು ಮಾಲೀಕರು ನಿರ್ವಹಿಸದೆ ಕಾರ್ಮಿಕರು ನಿರ್ವಹಣೆ ಮಾಡುತ್ತಿದ್ದಾರೆ. ಕೇವಲ 1 ಸಾವಿರ ಹೋಂಸ್ಟೇಗಳಷ್ಟೇ ಅಧಿಕೃತವಾಗಿ ಪರವಾನಗಿ ಪಡೆದಿದ್ದು, ಸಾವಿರಾರು ಹೋಂಸ್ಟೇಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ಇದು ಪ್ರವಾಸೋದ್ಯಮದ ಬೆಳವಣಿಗೆಗೆ ಮಾರಕವಾಗಿದ್ದು, ಹೋಂಸ್ಟೇ ಅಸೋಸಿಯೇಷನ್ ಗಳು ಎಚ್ಚೆತ್ತುಕೊಳ್ಳಬೇಕು. ಮಾದಕ ವಸ್ತು ಮತ್ತು ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ…
ಕುಶಾಲನಗರ/ ಕೂಡಿಗೆ ಸೆ.12 : ಶಾಲಾ ಮಕ್ಕಳಲ್ಲಿ ಗುಪ್ತವಾಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಹಕಾರಿಯಾಗಿರುವ ಪ್ರತಿಭಾ ಕಾರಂಜಿ, ಕಲೋತ್ಸವ ಸ್ಪರ್ಧೆಗಳು ಮಕ್ಕಳಲ್ಲಿ ಮನೋವಿಕಾಸ ಬೆಳವಣಿಗೆಯೊಂದಿಗೆ ಸ್ಪರ್ಧಾ ಮನೋಭಾವ ಬೆಳವಣಿಗೆಗೆ ಉತ್ತಮ ವೇದಿಕೆ ಒದಗಿಸುತ್ತವೆ ಎಂದು ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷ ಡಿ.ಭಾಸ್ಕರ್ ನಾಯಕ್ ಹೇಳಿದರು. ತಾಲ್ಲೂಕು ಶಾಲಾ ಶಿಕ್ಷಣ ಇಲಾಖೆ ಹಾಗೂ ಕೂಡಿಗೆ ಕ್ಲಸ್ಟರ್ ಕೇಂದ್ರದ ವತಿಯಿಂದ ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಶಾಲಾ ಶಿಕ್ಷಕರ ಬಳಗದ ಸಹಯೋಗದೊಂದಿಗೆ ಕೂಡಿಗೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕೂಡಿಗೆ ಕ್ಲಸ್ಟರ್ ಮಟ್ಟದ 2023-24 ನೇ ಸಾಲಿನ ಪ್ರತಿಭಾ ಕಾರಂಜಿ, ಕಲೋತ್ಸವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಿಗೆ ಇಂತಹ ಸ್ಪರ್ಧಾ ಕಾರ್ಯಕ್ರಮವು ನಮ್ಮ ನಾಡಿನ ಸಂಸ್ಕೃತಿ ಬಿಂಬಿಸುವ ಸ್ಪರ್ಧೆಯಾಗಿದ್ದು, ಇವು ಪಠ್ಯದ ಜತೆಗೆ ಮಕ್ಕಳ ಪ್ರತಿಭಾ ಅನ್ವೇಷಣೆಗೆ ಅವಶ್ಯಕವಾಗಿದೆ ಎಂದರು. ಶಿಕ್ಷಣ ಇಲಾಖೆಯೊಂದಿಗೆ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಶಾಲಾ ಶಿಕ್ಷಕರ ಬಳಗದ ಶಿಕ್ಷಕರು ಜತೆಗೂಡಿ ಆರ್ಥಿಕ ನೆರವಿನೊಂದಿಗೆ ಈ…






