ಲೇಖಕ: admin

ಮಡಿಕೇರಿ NEWS DESK ಏ.25 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.26 ರಂದು ಪುರುಷರ ಪ್ರೀ-ಕ್ವಾರ್ಟರ್ ಫೈನಲ್ಸ್ *ಮೈದಾನ 1* ಬೆಳಿಗ್ಗೆ 9 ಗಂಟೆಗೆ ಮಾಳೇಟಿರ (ಕೆದಮುಳ್ಳೂರು) ಮತ್ತು ಕರಿನೆರವಂಡ, 10ಕ್ಕೆ ಅಳಮೇಂಗಡ ಮತ್ತು ಪುದಿಯೊಕ್ಕಡ, 11ಕ್ಕೆ ಪಾರುವಂಡ ಮತ್ತು ಮುಕ್ಕಾಟಿರ (ಬೆಳ್ಳೂರು- ಹರಿಹರ) ಹಾಗೂ ಮಧ್ಯಾಹ್ನ 12 ಗಂಟೆಗೆ ನೆರವಂಡ ಮತ್ತು ಕೊಟ್ಟಂಗಡ —- *ಮೈದಾನ 1* *ಮಹಿಳೆಯರ *ಕ್ವಾರ್ಟರ್ ಫೈನಲ್ಸ್* ಮಧ್ಯಾಹ್ನ 1 ಗಂಟೆಗೆ ಅರಮಣಮಾಡ ಮತ್ತು ಕಾನತಂಡ ಹಾಗೂ 2ಕ್ಕೆ ಆದೇಂಗಡ ಮತ್ತು ಮಣವಟ್ಟಿರ

Read More

ಮಡಿಕೇರಿ NEWS DESK ಏ.25 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.25 ರಂದು ಗೆಲುವು ಸಾಧಿಸಿದ ತಂಡಗಳು. *ಮೈದಾನ 1* (ಲಾಲು ಮುದ್ದಯ್ಯ ಮೈದಾನ) ಮಂಡುವoಡ ಮತ್ತು ಕಳಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಂಡುವoಡ 16 ರನ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಂಡುವoಡ 6 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 54 ರನ್ ಗಳನ್ನು ಸೇರಿಸಿತು. ಕಳಕಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 38 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು. ಮoಡೇಪoಡ ಮತ್ತು ಮಲ್ಲಜ್ಜಿರ ನಡುವಿನ ಪಂದ್ಯದಲ್ಲಿ ಮಲ್ಲಜ್ಜಿರ 8 ವಿಕೆಟ್ ಗಳ ಜಯ ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಂಡೇಪoಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 50 ರನ್ ಗಳನ್ನು ಗಳಿಸಿತು. ಮಲ್ಲಜ್ಜಿರ 4.5 ಓವರ್ ಗಳಲ್ಲಿ 2…

Read More

ಮಡಿಕೇರಿ ಏ.24 NEWS DESK : ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಶೇ.100 ರಷ್ಟು ಪಲಿತಾಂಶ ಬಂದಿದೆ. ಶಾಲೆಯ ವಿದ್ಯಾರ್ಥಿಗಳಾದ ಶ್ರೀವತ್ಸ ಯು.ಎಸ್ 619/625, ಮೊಹಮ್ಮದ್ ಶಿಫಾನ್ ಕೆ.ಸಿ 617/625, ಸೃಷ್ಟಿ ಬಿ.ಎಸ್ 614/625, ವೃ ಶಾಂಕ್ ದೇವಯ್ಯ ಬಿ 607/625, ಯಶ್ಮಿತ ಕೆ.ಎಂ 601/625, ಜೋಯಾ ಎಸ್ 601/625ರಷ್ಟು ಅತ್ಯುತ್ತಮ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಫಲಿತಾಂಶದಲ್ಲಿ ಶೇಕಡವಾರು 85ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಸುಮಾರು 25 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಪಡೆದು ಶಾಲೆಗೌರವವನ್ನು ಹೆಚ್ಚಿಸಿ ಅತ್ಯುತ್ತಮ ಸಾಧನೆ ಮಾಡಿ ತೋರಿಸಿದ್ದಾರೆ. ಶೇ.60 ರಿಂದ 85 ಅಂಕಗಳನ್ನು ಗಳಿಸಿ 10 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುದೇಶ್ ಬಿ.ಎಸ್, ಕಾರ್ಯದರ್ಶಿಯವರಾದ ವಿನೋದ್ ಪಿ.ಎನ್, ಮುಖ್ಯ ಶಿಕ್ಷಕಿಯಾದ ಪಾರ್ವತಿ ಪಿ.ಯು,…

Read More

ನಾಪೋಕ್ಲು ಏ.24 NEWS DESK : ಕೆಪಿಎಸ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಚೀಯಕಪೂವಂಡ ಕುಟುಂಬ ಆಯೋಜಿತ 5ನೇ ವರ್ಷದ ಕೊಡವ ಕೌಟುಂಬಿಕ ಕೇರ್ ಬಲಿ ನಮ್ಮೆ(ಹಗ್ಗಜಗ್ಗಾಟ) ಯ ಎರಡನೇ ದಿನದ ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ 89 ತಂಡಗಳು ಹಾಗೂ ಮಹಿಳಾ ವಿಭಾಗದಲ್ಲಿ 31 ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದಿದೆ. ಪಂದ್ಯದ ವೀಕ್ಷಕ ವಿವರಣೆಗಾರರಾಗಿ ಬಾಳೆಯಡ ದಿವ್ಯ ಮಂದಪ್ಪ, ತೀರ್ಪುಗಾರರಾಗಿ ಕೊಡವ ಟಗ್ ಆಫ್‌ ವಾರ್ ಅಕಾಡೆಮಿಯ ಸದಸ್ಯರು ಕಾರ್ಯನಿರ್ವಹಿಸಿದರು. ಪಂದ್ಯಾಟ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು. ಗುಡುಗು ಸಿಡಿಲಿನ ಅಬ್ಬರ ಜೋರಾಗಿದ್ದಿದರಿಂದ ಎಲ್ಲರೂ ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ, ಮಳೆ ಬಾರದ ಹಿನ್ನೆಲೆಯಲ್ಲಿ ಎಲ್ಲಾ ಪಂದ್ಯಗಳು ಸುಗಮವಾಗಿ ನಡೆಯುವಂತಾಯಿತು. ಚೀಯಕಪೂವಂಡ ಕೇರ್ ಬಲಿ ನಮ್ಮೆ ಕುಟುಂಬದ ಹಾಡನ್ನು ಹಾಡಿದ ಮಚ್ಚಂಡ ಶರಣ್‌ ಪರವಾಗಿ ಅವರ ಪೋಷಕರನ್ನು ಚೀಯಕಪೂವಂಡ ಸ್ಪೋಟ್ಸ್‌ ಅಧ್ಯಕ್ಷ ಸಿ.ಕೆ ಬೋಪಣ್ಣ ಹಾಗೂ ಸಿ.ಕೆ ಅಪ್ಪಚ್ಚು, ಟಗ್‌ ಆಪ್‌ ವಾರ್‌ ಅಕಾಡೆಮಿ ಅಧ್ಯಕ್ಷ ಪೊನ್ನಾಲ್‌ ತಂಡ ಕಿರಣ್‌ ಪೊನ್ನಪ್ಪ…

Read More

ಸಿದ್ದಾಪುರ ಏ.24 NEWS DESK : ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಶುಕ್ರವಾರ ಯಶಸ್ವಿಯಾಗಿ ಅರಣ್ಯಕ್ಕೆ ಅಟ್ಟಿತು. ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶದಿಂದ ಹೊರಬಂದು ಕೃಷಿ ಭೂಮಿಗಳಲ್ಲಿ ಸಂಚರಿಸುತ್ತಿದ್ದ 2 ಮರಿಯಾನೆಗಳಿದ್ದ 9 ಕಾಡಾನೆಗಳ ಹಿಂಡು ಗ್ರಾಮಸ್ಥರಲ್ಲಿ ಆತಂಕವನ್ನು ಹುಟ್ಟು ಹಾಕಿತ್ತು. ಪರಿಸ್ಥಿತಿಯನ್ನು ಗಮನಿಸಿದ ಅರಣ್ಯ ಇಲಾಖಾ ಸಿಬ್ಬಂದಿಗಳು ಕಾರ್ಯಾಚರಣೆ ಮೂಲಕ ಕಾಡಾನೆಗಳನ್ನು ಮರಳಿ ಅರಣ್ಯ ಪ್ರದೇಶಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಡಾನೆಗಳ ಹಿಂಡು ಗಾಮೀಣ ಭಾಗದಿಂದ ಅರಣ್ಯಕ್ಕೆ ಮರಳಿರುವುದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ. ಕಾರ್ಯಾಚರಣೆಯನ್ನು ಚೆನ್ನಂಗಿ ಸೆಕ್ಷನ್‍ನ ಉಪವಲಯ ಅರಣ್ಯಾಧಿಕಾರಿ ಪಿ.ಟಿ. ಶಶಿ ನೇತೃತ್ವದಲ್ಲಿ ಆರ್.ಆರ್.ಟಿ.ಸಿಬ್ಬಂದಿಗಳು ಯಶಸ್ವಿಯಾಗಿ ನಡೆಸಿದರು.

Read More

ಸೋಮವಾರಪೇಟೆ ಏ.24 NEWS DESK : ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ದೊಡ್ಡಮನೆಕೊಪ್ಪ, ಊರೊಳಕೊಪ್ಪ, ಸಿಂಗನಳ್ಳಿ, ನಡ್ಲಕೊಪ್ಪ, ಇನಕನಹಳ್ಳಿ, ಹರಪಳ್ಳಿ, ವಣಗೂರುಕೊಪ್ಪ, ಶುಭಾಷ್‌ನಗರ, ಕರಡಿಕೊಪ್ಪ, ದೊಡ್ಡತೋಳೂರು, ಚಿಕ್ಕತೋಳೂರು, ಗ್ರಾಮಗಳ ವ್ಯಾಪ್ತಿಗೆ ಒಳಪಡುವ ನಿವಾಸಿಗಳು ಸುಗ್ಗಿ ಉತ್ಸವದಲ್ಲಿ ದೇವಿಗೆ ಮಡೆ ಅರ್ಪಿಸುವ ಮೂಲಕ ಗ್ರಾಮದ ಸಮೃದ್ಧಿಗಾಗಿ, ಗ್ರಾಮಸ್ಥರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸುಗ್ಗಿ ಕುಣಿತ, ಗ್ರಾಮಸ್ಥರ ವಾದ್ಯ ಕುಣಿತ ಉತ್ಸವದಲ್ಲಿ ಆಕರ್ಷಣಿಯಾವಾಗಿತ್ತು. ಮಕ್ಕಳು, ಪುರುಷರು, ಮಹಿಳೆಯರು ಸಂಪ್ರಾದಾಯದಂತೆ ಸುಗ್ಗಿ ಕುಣಿತದಲ್ಲಿ ಪಾಲ್ಗೊಂಡರು. ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಸುಗ್ಗಿ ಕಟ್ಟೆಯ ಮುಖ್ಯ ರಂಗಕ್ಕೆ ಪ್ರದಕ್ಷಿಣೆ ಹಾಕಲಾಯಿತು. ಹರಕೆ ಮಾಡಿಕೊಂಡ ಭಕ್ತರು ಈಡುಗಾಯಿ ಸೇವೆ ಅರ್ಪಿಸಿದರು. ಮಹಿಳೆಯರು, ಮಕ್ಕಳು, ಹಿರಿಯರು ಉತ್ಸವದಲ್ಲಿ ಭಾಗವಹಿಸಿ ಗ್ರಾಮದೇವತೆಗೆ ಇಷ್ಟಾರ್ಥಗಳ ನೆರವೇರಿಕೆಗೆ ಪ್ರಾರ್ಥಿಸಿದರು. ಕುಟುಂಬ ಸಮೇತ ತವರಿನ ಸುಗ್ಗಿಯಲ್ಲಿ ಭಾಗವಹಿಸುವುದು, ಗ್ರಾಮದ ಹೆಣ್ಣುಮಕ್ಕಳಿಗೆ ವಿಶೇಷ ದಿನ. ಈ ಭಾಗದಿಂದ ಮದುವೆಯಾಗಿ ಹೋದ ಹೆಣ್ಣು ಮಕ್ಕಳು ತವರಿನ ಸುಗ್ಗಿಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ದೇವತಾ…

Read More

ಮಡಿಕೇರಿ ಏ.24 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.25 ರ ಪಂದ್ಯಗಳು. *ಮೈದಾನ 1* ಬೆಳಿಗ್ಗೆ 9 ಗಂಟೆಗೆ ಮಂಡುವಂಡ ಮತ್ತು ಕಳಕಂಡ, 10ಕ್ಕೆ ಮಂಡೇಪಂಡ ಮತ್ತು ಮಲ್ಲಜ್ಜಿರ, 11ಕ್ಕೆ ಮಾಚೆಟ್ಟಿರ (ಬಾಳುಗೋಡು) ಮತ್ತು ಬೊಟ್ಟಂಗಡ, ಮಧ್ಯಾಹ್ನ 12ಕ್ಕೆ ಓಡಿಯಂಡ ಮತ್ತು ಚೆಕ್ಕೇರ, 1ಕ್ಕೆ ಬೊಳಕಾರಂಡ (ಕೊಣಂಜಗೇರಿ) ಮತ್ತು ಅಜ್ಜೆಟ್ಟಿರ, 2ಕ್ಕೆ ಮಾಚಮಾಡ ಮತ್ತು ಮೋಟನಾಳಿರ, 3ಕ್ಕೆ ಪಾಂಡ್ಯಂಡ ಮತ್ತು ಚೊಟ್ಟಂಗಡ ಹಾಗೂ 4 ಗಂಟೆಗೆ ಪುದಿಯೊಕ್ಕಡ ಮತ್ತು ಹಂಚೆಟ್ಟಿರ

Read More

ಮಡಿಕೇರಿ ಏ.24 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.24 ರಂದು ಗೆಲುವು ಸಾಧಿಸಿದ ತಂಡಗಳು. *ಮೈದಾನ 1* (ಲಾಲು ಮುದ್ದಯ್ಯ ಮೈದಾನ) ಕೋಳೆರ ಮತ್ತು ಗೀಜಿಗಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೋಳೆರ 7 ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗೀಜಿಗಂಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 46 ರನ್ ಗಳನ್ನು ಗಳಿಸಿತು. ಕೋಳೆರ 5.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 47 ರನ್ ಗಳನ್ನು ಸೇರಿಸಿ ಜಯ ಕಂಡಿತು. ಪಾರುವಂಡ ಮತ್ತು ಮಂದೇಯಂಡ (ಮಾದಾಪುರ) ನಡುವಿನ ಪಂದ್ಯದಲ್ಲಿ ಪಾರುವಂಡ ತಂಡಕ್ಕೆ 8 ವಿಕೆಟ್ ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಂದೇಯಂಡÀ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 49 ರನ್ ಗಳನ್ನು ಸೇರಿಸಿತು. ಪಾರುವಂಡ 2.4…

Read More

ಮಡಿಕೇರಿ ಏ.24 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.24 ರಂದು ಗೆಲುವು ಸಾಧಿಸಿದ ಮಹಿಳಾ ತಂಡಗಳು. *ಮೈದಾನ 3* (ಮಹಿಳಾ ಕ್ರಿಕೆಟ್)ಸರಕಾರಿ ಪ್ರೌಢ ಶಾಲಾ ಮೈದಾನ ಮಾಚಿಮಂಡ ಮತ್ತು ಪಾಸುರ ತಂಡಗಳ ನಡುವಿನ ಪಂದ್ಯದಲ್ಲಿ ಪಾಸುರ 9 ವಿಕೆಟ್ ಗಳಿಂದ ಜಯ ಸಾಧಿಸಿತು. ಮಾಚಿಮಂಡ 5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 35 ರನ್ ಗಳನ್ನು ಗಳಿಸಿತು. ಪಾಸುರ 3.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 36 ರನ್ ಗಳನ್ನು ಸೇರಿಸಿ ಗೆಲುವು ಕಂಡಿತು. ಮುಕ್ಕಾಟಿರ (ಹರಿಹರ) ಮತ್ತು ಮಾಚಮಾಡ ನಡುವಿನ ಹಣಾಹಣಿಯಲ್ಲಿ ಮುಕ್ಕಾಟಿರ 24 ರನ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಮುಕ್ಕಾಟಿರ 5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 47 ರನ್ ಗಳನ್ನು ಸೇರಿಸಿತು. ಮಾಚಮಾಡ 5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 23 ರನ್ ಗಳನ್ನು…

Read More

ಮಡಿಕೇರಿ NEWS DESK ಏ.24 : ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲೆಯ ಹೋಂಸ್ಟೇ, ಹೊಟೇಲ್ ಮತ್ತು ಟ್ರಾವೆಲ್ಸ್ ಮಾಲೀಕರ ಸಂಘದ ಪದಾಧಿಕಾರಿಗಳ ಸಭೆ ನಡೆಸಿತು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಹಾಗೂ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಪ್ರವಾಸಿಗರ ಸುರಕ್ಷತೆಯ ಕುರಿತು ಸಲಹೆ ಸೂಚನೆಗಳನ್ನು ನೀಡಿದರು. ಹೋಂಸ್ಟೇ, ಹೊಟೇಲ್ ಗಳ ನೋಂದಣಿ, ಪ್ರವಾಸಿಗರ ಸುರಕ್ಷತೆ, ಕಾರ್ಮಿಕರ ಗುಣ ನಡತೆ ಪರಿಶೀಲನೆ, ವಿದೇಶೀ ಪ್ರವಾಸಿಗರ ನೋಂದಣಿ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ವಾರ್ತಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Read More