ಲೇಖಕ: admin

ಮಡಿಕೇರಿ NEWS DESK ಏ.23 : ಕೊಡಗು ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಎಸ್ಸೆಸ್ಸೆಲ್ಸಿಯ ಒಟ್ಟು 625 ಅಂಕಕ್ಕೆ 621 ಅಂಕವನ್ನು ಪಡೆದು ಪ್ರಥಮ ಸ್ಥಾನ ಹೊಂದಿದ್ದಾರೆ. ನಗರದ ಸಂತ ಜೋಸೆಫರ ಸಂಯುಕ್ತ ಪ್ರೌಢ ಶಾಲೆಯ ಲಿನ್ಸಿ ದೇಚಮ್ಮ ಟಿ.ಟಿ. ಅವರು 621, ಹಾಗೆಯೇ ಕೊಡಗರಹಳ್ಳಿಯ ಶಾಂತಿನಿಕೇತನ ಪ್ರೌಢ ಶಾಲೆಯ ಸಿಂಚನ ಕೆ.ಐ. ಅವರು 621 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಉಳಿದಂತೆ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಯ ಡೀನ್ ಸೆಲ್ವ ಡಿ’ಸೋಜ 620, ಸೋಮವಾರಪೇಟೆಯ ವಿಶ್ವಮಾನವ ಕುವೆಂಪು ಪ್ರೌಢ ಶಾಲೆಯ ಶಿವಾನಿ ಶಾರದಮಣಿ, ವಿರಾಜಪೇಟೆಯ ಕಾವೇರಿ ಪ್ರೌಢಶಾಲೆಯ ಯು.ಎಸ್.ಶ್ರೀವತ್ಸ, ಗೋಣಿಕೊಪ್ಪ ಕಳತ್ಮಾಡುವಿನ ಲಯನ್ಸ್ ಪ್ರೌಢ ಶಾಲೆಯ ಸಿದ್ಧಾರ್ಥ ಕಾವೇರಪ್ಪ ಇವರು 619 ಅಂಕ ಪಡೆದಿದ್ದಾರೆ. ನಗರದ ಸಂತ ಜೋಸೆಫರ ಸಂಯುಕ್ತ ಪ್ರೌಢ ಶಾಲೆಯ ಸೋನಶ್ರೀ ಕೆ.ಇ., ಗೋಣಿಕೊಪ್ಪ ಸೆಂಟ್ ಥಾಮಸ್ ಪ್ರೌಢ ಶಾಲೆಯ ನಮನ ಈ ಇಬ್ಬರು 618 ಅಂಕ ಪಡೆದಿದ್ದಾರೆ. ಉಳಿದಂತೆ ಸೋಮವಾರಪೇಟೆಯ ಅವರ್ ಲೇಡಿ…

Read More

ಮಡಿಕೇರಿ ಏ.23 NEWS DESK : ಕಠಿಣ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಬಹುದು ಎಂದು ತೋರಿಸಿಕೊಟ್ಟ ಭಗೀರಥ ಅವರ ಪ್ರಯತ್ನ ಮನುಕುಲಕ್ಕೆ ಮಾದರಿಯಾಗಿದೆ ಎಂದು ಚಿಂತಕರು ಹಾಗೂ ಸಾಹಿತಿಗಳಾದ ಚಿ.ನಾ.ಸೋಮೇಶ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗಂಗೆಯನ್ನು ಧರೆಗಿಳಿಸಿ ಗಂಗಾ ನದಿಯನ್ನಾಗಿಸಿ ಜನರ ನೀರಿನ ದಾಹ ತೀರಿಸಿದ ಭಗೀರಥರು ಪ್ರಯತ್ನ ಶೀಲತೆಯ ರೂಪಕವಾಗಿ ನಿಲ್ಲುತ್ತಾರೆ. ಅತ್ಯಂತ ಕಠಿಣವಾದ ಅಥವಾ ಅಸಾಧ್ಯವೆನಿಸುವ ಕಾರ್ಯವನ್ನು ಅಚಲವಾದ ಛಲ ಮತ್ತು ನಿರಂತರ ಪರಿಶ್ರಮದಿಂದ ಸಾಧಿಸುವ ಭಗೀರಥ ಅವರ ಪ್ರಯತ್ನದ ಮೂಲಕ ಯುವ ಸಮೂಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಕುಶಾಲನಗರದ ಬಿ.ಸಿ.ಶಂಕರಯ್ಯ ಅವರು ಉಪನ್ಯಾಸ ನೀಡಿ, ಭಗೀರಥನು ಪೌರಾಣಿಕ ರಾಜ. ತನ್ನ ಪೂರ್ವಜರ ಭೀಕರ ಅಂತ್ಯವನ್ನು ತಿಳಿದು, ತನ್ನ ಪೂರ್ವಜರಿಗೆ ಸದ್ಗತಿ ಪ್ರಾಪ್ತಿಯಾಗಲಿಲ್ಲವೆಂಬ ವಿಷಾದದಿಂದ ತನ್ನ ಮಂತ್ರಿಗೆ…

Read More

ಮಡಿಕೇರಿ ಏ.23 NEWS DESK : ಮನೆ ಸಂಸಾರದಲ್ಲಿ ಓದು-ಬರಹದಂತಹ ಅಭ್ಯಾಸಗುಣಗಳು ಒಳ್ಳೆಯ ಸಂಸ್ಕಾರಕ್ಕೆ ದಾರಿ ತೋರಿಸಬಲ್ಲದು. ಇದರಿಂದ ಒಳ್ಳೆಯ ಸಂಸ್ಕೃತಿಯು ರೂಪುಗೊಳ್ಳುವುದೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಭಿಪ್ರಾಯಿಸಿದರು.  ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಅಮ್ಮತ್ತಿ ಕೊಡವ ಸಮಾಜದಲ್ಲಿ 8ನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟಿಸಿ ಮಾತನಾಡಿದ ಮಹೇಶ್ ನಾಚಯ್ಯ, ಒಂದು ಒಳ್ಳೆಯ ಸಂಸ್ಕøತಿಯಿಂದ ಜನರು ಒಂದು ಕುಟುಂಬದಲ್ಲಿ ಉತ್ತಮ ಪರಿಸರ ಹೊಂದಬಹುದು. ಮೊದಲು ಮನೆಯಿಂದಲೇ ಸಂಸ್ಕಾರವನ್ನು ಕಲಿಯಬೇಕು. ಯಾವುದೇ ಭಾಷೆಯಲ್ಲಿ ಪರಿಣತಿ ಹೊಂದಿದ್ದರೂ ಮುಖ್ಯ ಭಾಷೆ ಕೊಡವ ಭಾಷೆ ಮನೆಯ ವ್ಯವಹಾರಿಕ ಭಾಷೆಯಾಗಿರಬೇಕು. ಮಾತೃ ಭಾಷೆಯ ಮೇಲಿನ ಕೀಳರಿಮೆ ಸಲ್ಲದು. ಇದು ತಂದೆ-ತಾಯಿಯನ್ನು ಕಡೆಗಣಿಸಿದಂತೆ. ಕೊಡವ ಭಾಷೆಯಲ್ಲಿ ತನ್ನದೇ ಆದ ನಾಲ್ಕು ಸಾವಿರದಷ್ಟು ಮೂಲ ಶಬ್ಧಗಳಿವೆ. ಅವೆಲ್ಲದರ ಬಳಕೆಯಾದಲ್ಲಿ ಭಾಷೆಗೆ ತನ್ನತನ ಉಳಿಯಲು ಸಾಧ್ಯವಾಗುತ್ತದೆ. ಕೊಡವ ಪುಸ್ತಕ ಪತ್ತಾಯ ಅಕಾಡೆಮಿಯ ನೂತನ ಯೋಜನೆಯಾಗಿದ್ದು ಕೊಡವ ಸಮಾಜಗಳಲ್ಲಿ ಐನ್‍ಮನೆಗಳಲ್ಲಿ ಇದರ ಸ್ಥಾಪನೆಗೆ ಸಂಬಂಧಪಟ್ಟವರು…

Read More

ಮಡಿಕೇರಿ ಏ.23 NEWS DESK : ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಮತಾಂತರ ಮತ್ತು ದೌರ್ಜನ್ಯ ಪ್ರಕರಣವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಜಿಲ್ಲಾ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಮತಾಂತರ, ಲವ್ ಜಿಹಾದ್, ಕಾರ್ಪೋರೇಟ್ ಜಿಹಾದ್, ಲ್ಯಾಂಡ್ ಜಿಹಾದ್, ಗೋ ಹತ್ಯೆ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಂವಿಧಾನ ಬಾಹಿರವಾಗಿರುವ ಇಂತಹ ಘಟನೆಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕೆಲವು ಜಿಮ್ ಗಳಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ತರಬೇತಿ ನೀಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ. ಕೆಲವು ಘಟನೆಗಳನ್ನು ವಿಡಿಯೋ ಚಿತ್ರೀಕರಿಸಿ ಮತಾಂತರ, ಗೋಮಾಂಸ ಸೇವನೆ ಸಹಿತ ಭಯೋತ್ಪಾದಕ ಕೃತ್ಯಗಳಿಗೂ ಹಿಂದೂ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರತಿಭಟನಾಕಾರರು ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಸಲ್ಲಿಸಿದರು. ಜಿಲ್ಲಾ…

Read More

ಮಡಿಕೇರಿ ಏ.23 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.24 ರ ಪಂದ್ಯಗಳು. *ಮೈದಾನ 1* ಬೆಳಿಗ್ಗೆ 9 ಗಂಟೆಗೆ ಕೋಳೆರ ಮತ್ತು ಗೀಜಿಗಂಡ, 10ಕ್ಕೆ ಪಾರುವಂಡ ಮತ್ತು ಮಂದೇಯಂಡ (ಮಾದಾಪುರ), 11ಕ್ಕೆ ಮೂಕಳೆರ ಮತ್ತು ಮುಕ್ಕಾಟಿರ (ಬೆಳ್ಳೂರು ಹರಿಹರ) ಹಾಗೂ 12 ಗಂಟೆಗೆ ಕೊಟ್ಟಂಗಡ ಮತ್ತು ಮೂಕೊಂಡ *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಮುಕ್ಕಾಟಿರ (ಕುಂಬಳದಾಳು) ಮತ್ತು ನೆರವಂಡ, 10ಕ್ಕೆ ಮಾಳೇಟಿರ (ಕೆದಮುಳ್ಳೂರು) ಮತ್ತು ತಂಬುಕುತ್ತಿರ, 11ಕ್ಕೆ ಕರಿನೆರವಂಡ ಮತ್ತು ನಂದಿನೆರವಂಡ ಹಾಗೂ 12 ಗಂಟೆಗೆ ಅಲಮೇಂಗಡ ಮತ್ತು ದಾಸಂಡ *ಮೈದಾನ 3* (ಮಹಿಳಾ ಕ್ರಿಕೆಟ್) ಬೆಳಿಗ್ಗೆ 9 ಗಂಟೆಗೆ ಮಾಚಿಮಂಡ ಮತ್ತು ಪಾಸುರ, 10ಕ್ಕೆ ಮಾಚಮಾಡ (ತಾವಳಗೇರಿ) ಮತ್ತು ಮುಕ್ಕಾಟಿರ (ಹರಿಹರ), 1ಕ್ಕೆ ಮೇವಡ ಮತ್ತು ಓಡಿಯಂಡ ಹಾಗೂ 3 ಗಂಟೆಗೆ ಚೆಕ್ಕೇರ ಮತ್ತು ಕಂಬೀರಂಡ

Read More

ಮಡಿಕೇರಿ ಏ.23 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.23 ರಂದು ಗೆಲುವು ಸಾಧಿಸಿದ  ತಂಡಗಳು. *ಮೈದಾನ 1* (ಲಾಲು ಮುದ್ದಯ್ಯ ಮೈದಾನ) ತಂಬುಕುತ್ತಿರ ಮತ್ತು ಚಿರಿಯಪಂಡ ತಂಡಗಳ ನಡುವಿನ ಪಂದ್ಯದಲ್ಲಿ 26 ರನ್ ಗಳಿಂದ ತಂಬುಕುತ್ತಿರ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತಂಬುಕುತ್ತಿರ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 74 ರನ್ ಗಳನ್ನು ಸೇರಿಸಿತು. ಚಿರಿಯಪಂಡ 6 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 48 ಗಳಿಸಿ ಸೋಲು ಅನುಭವಿಸಿತು. ಕನ್ನಂಡ ಮತ್ತು ಕರಿನೆರವಂಡ ನಡುವಿನ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಕರಿನೆರವಂಡ ತಂಡ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರಿನೆರವಂಡ ತಂಡ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 87 ರನ್ ಗಳನ್ನು ಗಳಿಸಿತು. ಕನ್ನಂಡ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 87…

Read More

ಮಡಿಕೇರಿ ಏ.23 NEWS DESK : ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕೊಡಗು ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ 5,948 ವಿದ್ಯಾರ್ಥಿಗಳಲ್ಲಿ 5,742 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.96.54 ರಷ್ಟು ಫಲಿತಾಂಶ ಪಡೆದು, ರಾಜ್ಯದಲ್ಲಿ 8 ನೇ ಸ್ಥಾನ ಹೊಂದಿದೆ. ಕೊಡಗು ಜಿಲ್ಲೆ ಕಳೆದ ಬಾರಿ ಶೇ.82 ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 4ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಫಲಿತಾಂಶ ಹೆಚ್ಚಳವಾಗಿದ್ದರೂ ಸಹ, ಫಲಿತಾಂಶ ಸ್ಥಾನದಲ್ಲಿ ಪಲ್ಲಟವಾಗಿದೆ. ಸ್ಥಾನದಲ್ಲಿ ಬದಲಾವಣೆ ಕಂಡು ಬಂದಿದ್ದರೂ ಸಹ ಕಳೆದ ಬಾರಿಗಿಂತ ಈ ಬಾರಿ ಶೇ.14.54 ರಷ್ಟು ಫಲಿತಾಂಶ ವೃದ್ಧಿಯಾಗಿರುವುದು ಕಂಡು ಬಂದಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ 2904 ಬಾಲಕರಲ್ಲಿ 2776 ಉತ್ತೀರ್ಣರಾಗಿ ಶೇ.95.59 ರಷ್ಟು ಫಲಿತಾಂಶ ಪಡೆದಿದ್ದಾರೆ. ಹಾಗೆಯೇ ಪರೀಕ್ಷೆ ಬರೆದಿದ್ದ 3044 ಬಾಲಕಿಯರಲ್ಲಿ 2966 ಬಾಲಕಿಯರು ಉತ್ತೀರ್ಣರಾಗಿ ಶೇ.97.44 ರಷ್ಟು ಫಲಿತಾಂಶ ಪಡೆದಿದ್ದಾರೆ. ತಾಲ್ಲೂಕುವಾರು ಶೇಕಡ ಫಲಿತಾಂಶ ಗಮನಿಸಿದಾಗ ಮಡಿಕೇರಿ…

Read More

ಕೆ.ಆರ್ ಪೇಟೆ, ಮಂಡ್ಯ ಏ.23 : ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಕೆ.ಆರ್ ಪೇಟೆಯ SSKC ಪಿಯು ಕಾಲೇಜು AI (ಕೃತಕ ಬುದ್ಧಿಮತ್ತೆ) ಆಧಾರಿತ ಹಾಜರಾತಿ ದಾಖಲಿಸುವ ವ್ಯವಸ್ಥೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ದಿನನಿತ್ಯದ ತರಗತಿ ಕಾರ್ಯಾಚರಣೆಯಲ್ಲಿ ಈ ಮಟ್ಟದ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದು ಈ ಪ್ರದೇಶದಲ್ಲೇ ಮೊದಲ ಪ್ರಯತ್ನವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಜುಪೈ (EDUPI) ಸಂಸ್ಥೆಯ ವತಿಯಿಂದ ಕೃತಕ ಬುದ್ಧಿಮತ್ತೆ (ಎಐ) ಮೂಲಕ ಹಾಜರಾತಿ ದಾಖಲಿಸುವ ವಿನೂತನ ವ್ಯವಸ್ಥೆ ಇದಾಗಿದೆ. ಈ ಉಪಕ್ರಮವು ದೂರದೃಷ್ಟಿಯ ಶಿಕ್ಷಣತಜ್ಞ ಹಾಗೂ ವಕೀಲರಾದ ಕಿರಣ್ ಕುಮಾರ್ ಎಸ್‌ಸಿ ಅವರ ಮಾರ್ಗದರ್ಶನದಲ್ಲಿ ಜಾರಿಗೊಂಡಿದೆ. ಸಂಸ್ಥೆಯು ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಮತ್ತು ಅರ್ಥಪೂರ್ಣವಾಗಿ ಅಳವಡಿಸಿಕೊಳ್ಳುವ ಬದ್ಧತೆಯನ್ನು ಈ ಕ್ರಮ ಪ್ರತಿಬಿಂಬಿಸುತ್ತದೆ. AI ಆಧಾರಿತ ಈ ವ್ಯವಸ್ಥೆಯ ಮೂಲಕ ಹಾಜರಾತಿಯನ್ನು ತಕ್ಷಣ, ನಿಖರವಾಗಿ ಹಾಗೂ ಸ್ವಯಂಚಾಲಿತವಾಗಿ ದಾಖಲಿಸಬಹುದು. ಇದರಿಂದ ಕೈಯಾರೆ ನಡೆಸುವ ಪ್ರಕ್ರಿಯೆಗಳ ಅವಶ್ಯಕತೆ ಕಡಿಮೆಯಾಗಿದ್ದು, ಕಾರ್ಯಕ್ಷಮತೆ…

Read More

*ವಿಶ್ವ ಪುಸ್ತಕ ದಿನ : ಹೊತ್ತಿಗೆಯ ಜ್ಞಾನ ಬೇಕು ಹೊತ್ತು ಹೊತ್ತಿಗೆ : ಬರಹ : ಗೀತಾಂಜಲಿ ಎನ್.ಎಮ್ ಸೋಮವಾರಪೇಟೆ* ಬದುಕು ಬದಲಿಸುವ ಪುಸ್ತಕ ನೀ ಅಜ್ಞಾನ ನಿವಾರಕ ಸುಜ್ಞಾನಕೆ ದ್ಯೋತಕ ಜ್ಞಾನದ ಸಂರಕ್ಷಕ ಗೌರವದ ಪ್ರತೀಕ ವಿದ್ಯೆಯೊಡತಿ ಶಾರದೆಯ ಕೃಪಾಶೀರ್ವಾದದೊಂದಿಗೆ ಸೇರಿಕೋ ನಮ್ಮ ಮಸ್ತಕ !!!! ಪುಸ್ತಕಗಳು ಕೇವಲ ಅಕ್ಷರಗಳ ಸಂಕಲನವಲ್ಲ, ಅವು ಮಾನವ ಜೀವನದ ಅತ್ಯಂತ ಅಮೂಲ್ಯ ಸಂಪತ್ತಾಗಿವೆ. ಜ್ಞಾನ, ಅನುಭವ ಮತ್ತು ಭಾವನೆಗಳ ಜೀವಂತ ಭಂಡಾರ. ಒಂದು ಪುಸ್ತಕವನ್ನು ಓದುವುದು ಎಂದರೆ, ಅನೇಕ ಮನಸ್ಸುಗಳ ಚಿಂತನೆಗಳನ್ನು ಅರಿಯುವುದು ಅನೇಕ ಕಾಲಘಟ್ಟಗಳ ಅನುಭವವನ್ನು ಸ್ಪರ್ಶಿಸುವುದಾಗಿದೆ. ಮನುಷ್ಯನ ಜೀವನಕ್ಕೆ ಗಾಳಿ,ನೀರು,ಆಹಾರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಜ್ಞಾನ ! ಜ್ಞಾನವಿಲ್ಲದಿದ್ದರೆ ಮನುಷ್ಯನಿಗೂ ಪ್ರಾಣಿಗಳಿಗೂ ವ್ಯತ್ಯಾಸವೆ ಇರುವುದಿಲ್ಲ ಅಂತಹ ಜ್ಞಾನವನ್ನು ಮನುಷ್ಯ ಸಂಪಾದಿಸಬೇಕೆಂದರೆ ಅದಕ್ಕೆ ಓದು ವಿದ್ಯೆಯೇ ಮೂಲ ಅಡಿಪಾಯ ಹಾಗಾಗಿ ಎಲ್ಲಾ ಜ್ಞಾನವನ್ನು ತನ್ನಲ್ಲೇ ಹಿಡಿದಿಟ್ಟು ಕೊಂಡಿರುವ ಪುಸ್ತಕಗಳ ಓದು ಜ್ಞಾನಕ್ಕೆ ಅತ್ಯವಶ್ಯಕ. ಜ್ಞಾನವನ್ನು ನೀಡುವ ಪುಸ್ತಕಗಳು ನಮಗೆ…. ಶಿಕ್ಷಣದ ಮೂಲಭೂತ ಆಧಾರ ಸ್ಥಂಭಗಳು…. ವಿಜ್ಞಾನ, ಇತಿಹಾಸ,…

Read More

ಮಡಿಕೇರಿ ಏ.22 NEWS DESK : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 5 ರಡಿ ಹಾಗೂ 308(ಇ)(ಎಫ್) ರ ಪ್ರಕರಣದಡಿ ದತ್ತವಾದ ಅಧಿಕಾರದಂತೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಕೊಡಗು ಜಿಲ್ಲೆಯ ಐದು ತಾಲ್ಲೂಕುಗಳಿಂದ ಆಯ್ಕೆಯಾಗುವ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕದಲ್ಲಿರುವಂತೆ ನಿಗದಿಪಡಿಸಿ. ಕೋಷ್ಟಕದ 2ನೇ ಅಂಕಣದಲ್ಲಿರುವ ಗ್ರಾಮ ಪಂಚಾಯಿತಿಯಿಂದ ಆಯ್ಕೆಯಾಗುವ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ. ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆಯ ದಿನಾಂಕದಿಂದ 7 ದಿವಸಗಳ ಒಳಗೆ ಅಂದರೆ ಏಪ್ರಿಲ್, 24 ರ ಸಂಜೆ 5 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್‍ಲೈನ್ ಮೂಲಕ ಹಾಗೂ ಖುದ್ದಾಗಿ/ ಅಂಚೆಯ ಮೂಲಕ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, 3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ :222/ಎ, ಬಹುಮಹಡಿ ಕಟ್ಟಡ, ಅಂಬೇಡ್ಕರ್…

Read More