ಲೇಖಕ: admin

ಮಡಿಕೇರಿ ಆ.11 : ಮನೆ ಹಿಂಭಾಗ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ವ್ಯಾಪ್ತಿಯ ಅವರೆಗುಂದ ನಿವಾಸಿ ಆಟೋ ಚಾಲಕ ಹರೀಶ(48) ಎಂಬಾತ ತನ್ನ ಮನೆಯ ಹಿಂಭಾಗದಲ್ಲಿ ಐದು ಗಾಂಜಾ ಗಿಡಗಳನ್ನು ಬೆಳೆಸಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆ ದಾಳಿ ನಡೆಸಿದ ಪೊಲೀಸರು ಮಾಲು ಸಹಿತ ಆರೋಪಿ ಹರೀಶ್‍ನನ್ನು ಬಂಧಿಸಿ 2 ಕೆ.ಜಿ.ಗಾಂಜಾ ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಜಗದೀಶ್ ಮತ್ತು ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಮುಖ್ಯಪೇದೆ ಲಕ್ಷ್ಮೀಕಾಂತ್ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Read More

ಮಡಿಕೇರಿ ಆ.10 : ವಿಶ್ವ ಮುಸ್ಲಿಮರ ಪರಮೋಚ್ಚ ಪವಿತ್ರ ವಾಗಿರುವ ಕಅಬಾ ಸಂದರ್ಶನ ವಿಶ್ವಸಿಗಳನ್ನು ಸತ್ಕರ್ಮಗಳೆಡೆಗೆ ಪ್ರೇರೇಪಿಸುತ್ತದೆ ಪವಿತ್ರ ಮಕ್ಕ ಮತ್ತು ಮದೀನ ಮಣ್ಣಿನ ಸ್ಪರ್ಶ ಏಕತೆ ಮತ್ತು ಸಹೋದರತ್ವದ ಮನೋಭಾವವನ್ನು ಉತ್ತೇಜಿಸುತ್ತದೆ ಎಂದು ಕೊಂಡಗೇರಿ ಹಾರಿಸ್ ಮದನಿ ಹೇಳಿದರು.  ವಿರಾಜಪೇಟೆ ಎನ್ ಸಿ ಟಿ ಸಂಸ್ಥೆ ವತಿಯಿಂದ ನಡೆದ ಉಮ್ರಾ ಯಾತ್ರಾರ್ಧಿಗಳ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಾಗಾರದಲ್ಲಿ ವಿಶೇಷ ತರಬೇತುದಾರರಾಗಿ ಪಾಲ್ಗೊಂಡಿದ್ದ ಯಾತ್ರೆಯ ಅಮೀರರಾದ ಹಮೀದ್ ಮದನಿ ಮಡಿಕೇರಿ ಅವರು ಉಮ್ರಾ ಯಾತ್ರೆಯ ಆರಂಭದಿಂದ ಅಂತ್ಯದವರೆಗಿನ ಕುರಿತ ಧಾರ್ಮಿಕ ವಿಧಿ ವಿಧಾನಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು ಅಲ್ಲದೆ ಎನ್ ಸಿ ಟಿ ಮೂಲಕ ಈ ಬಾರಿ ತೆರಳುತ್ತಿರುವ ಉಮ್ರಾ ಯಾತ್ರಾರ್ಥಿಗಳಿಗೆ ಉಮ್ರಾ ಕಿಟ್ ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಇದಕ್ಕೆ ಮೊದಲು ವಿರಾಜಪೇಟೆಯ ಎನ್ ಸಿ ಟಿ ವ್ಯವಸ್ಥಾಪಕ ಕೆ ಎ ಹನೀಫ್ ಸ್ವಾಗತಿಸಿದರು. ವೇದಿಕೆಯಲ್ಲಿ ನಝೀರ್ ಸಖಾಫಿ ಕುಂಜಿಲ…

Read More

ಸೋಮವಾರಪೇಟೆ ಆ.10 : ಜೆಸಿಐ ಸೋಮವಾರಪೇಟೆ ಪುಷ್ಪಗಿರಿಯ ಜೂನಿಯರ್ ಜೆಸಿ ವಿಭಾಗದಿಂದ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಜೆಜೆಸಿ ಸಪ್ತಾಹವನ್ನು ಆಚರಿಸಲಾಯಿತು. ಜೂನಿಯರ್ ಜೆಸಿ ಚೇರ್ ಪರ್ಸನ್ ರಿಶಾ ಎಸ್. ಎ. ಸಂಕಷ್ಟದಲ್ಲಿದ್ದ ಕುಟುಂಬವೊಂದಕ್ಕೆ ದಿನಸಿ ಕಿಟ್ ನೀಡುವ ಮೂಲಕ ಜೆಜೆಸಿ ಸಪ್ತಾಹಕ್ಕೆ ಚಾಲನೆ ನೀಡಿದರು. ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಬಗ್ಗೆ ತರಬೇತಿ, ಡ್ರಾಯಿಂಗ್,ಮಕ್ಕಳ ಸಂತೆ, ಸ್ವಚ್ಛತಾ ಕಾರ್ಯಕ್ರಮ, ಚೌಡೇಶ್ವರಿ ಬ್ಲಾಕ್’ನ ಅಂಗನವಾಡಿ ಮಕ್ಕಳಿಗೆ ಬಿಸ್ಕತ್ ವಿತರಣೆ ಹೀಗೆ ಹಲವು ಕಾರ್ಯಕ್ರಮವನ್ನು ನಡೆಸಿ..ಸಮಾರೋಪ ಸಮಾರಂಭ ಸಂತ ಜೋಸೆಫರ ಪ್ರೌಢ ಶಾಲೆಯ ಗಣಿತ ಶಿಕ್ಷಕರಾದ ಹ್ಯೂಬರ್ಟ್ ರವರನ್ನು ಗುರುತಿಸಿ ‘ನನ್ನ ನೆಚ್ಚಿನ ಟೀಚರ್’ ಎಂಬ ಶೀರ್ಷಿಕೆಯಡಿಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಿದ ಜೂನಿಯರ್ ಜೆಸಿ ಚೇರ್ ಪರ್ಸನ್ ರಿಶಾ, ನಾ ಕಲಿತ ಶಾಲೆಯಲ್ಲಿ ಇಂದು ನನ್ನ ಅಧ್ಯಕ್ಷತೆಯಲ್ಲಿ ನನ್ನ ನೆಚ್ಚಿನ ಗುರುಗಳನ್ನು ಸನ್ಮಾನಿಸಿದ್ದು ನನ್ನ ಪುಣ್ಯವೆಂದರು. ಜೆಸಿಐ ಅಧ್ಯಕ್ಷೆ ರುಬೀನಾ ಎಂ.ಎ, ಶಾಲೆಯ ಮುಖ್ಯೋಪಾಧ್ಯಾಯರಾದ ಹ್ಯಾರಿ ಮೊರಸ್, ಜೆಸಿ ನಯನ…

Read More

ಮಡಿಕೇರಿ ಆ.10: ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾದ ಕ್ರೀಡೆ ನಮ್ಮ ಜೀವನದ ಪ್ರಮುಖ ಭಾಗವಾಗಿದ್ದು, ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಉತ್ತಮ ನಾಯಕತ್ವ, ವ್ಯಕ್ತಿತ್ವ ಮೈಗೂಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕೆ.ವಿ.ಸುರೇಶ್ ಕರೆ ನೀಡಿದರು.   ಕ್ರೀಡೆಗಳು ದೈಹಿಕ ಮತ್ತು ಮಾನಸಿಕವಾಗಿ ನಮ್ಮ ಅಭಿವೃದ್ಧಿ ಮೂಲವಾಗಿದೆ. ಆದ್ದರಿಂದ ಎಲ್ಲರೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಪ್ರತಿಯೊಬ್ಬರಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಗುರುವಾರ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕುಶಾಲನಗರ ತಾಲ್ಲೂಕಿನ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಗುರುವಾರ ಆರಂಭಿಸಲಾದ ಕುಶಾಲನಗರ  ಪ್ರೌಢಶಾಲಾ ‘ಬಿ’ ವಲಯ ಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.  ಕ್ರೀಡೆಗಳು ರಾಷ್ಟ್ರೀಯ ಭಾವೈಕ್ಯತೆ, ಸಾಮರಸ್ಯ ಬೆಳೆಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಶಿಸ್ತು- ಸಂಯಮ ಬೆಳೆಸಲು ನೆರವಾಗಿವೆ  ಎಂದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್ ಮಾತನಾಡಿ, ಕ್ರೀಡಾಳುಗಳು  ಸೋಲು-ಗೆಲವಿನ ಕಡೆಗೆ ಗಮನ ಕೊಡದೇ…

Read More

ಮಡಿಕೇರಿ ಆ.10 : ಭತ್ತವನ್ನು ಬೆಳೆಸುವ ವಿಧಾನದ ಕುರಿತು ಅರಿವು ಮೂಡಿಸುವ ಸಲುವಾಗಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಕಗ್ಗೋಡ್ಲುವಿನ ಕೃಷಿಕ ಮಂದ್ರೀರ ತೇಜಸ್ ನಾಣಯ್ಯ ಅವರ ಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ಅಗೆ ಮತ್ತು ನಾಟಿ ಮಾಡುವ ತರಬೇತಿ ನೀಡಲಾಯಿತು. ಮಡಿಕೇರಿಯ ಲಿಟ್ಲ್ ಫ್ಲವರ್ ಶಾಲೆಯ ಪುಟ್ಟ ಪುಟ್ಟ ಮಕ್ಕಳು ಮೊದಲ ಬಾರಿಗೆ ಕೆಸರಿನ ಗದ್ದೆಗೆ ಇಳಿದು ಖುಷಿಪಟ್ಟರು. ಅಗೆ ತೆಗೆಯುವಾಗ ವಹಿಸಬೇಕಾದ ಎಚ್ಚರಿಕೆ, ನಾಟಿ ನೆಡುವಾಗ ಕಲಿಯಬೇಕಾದ ಕೃಷಿ ನಿಯಮಗಳ ಬಗ್ಗೆ ತಿಳಿಹೇಳಲಾಯಿತು. ಮಕ್ಕಳು ಕುತೂಹಲದ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳುವ ಮೂಲಕ ತಮ್ಮ ತಟ್ಟೆಯ ಅನ್ನದ ಹಿಂದಿರುವ ಕೃಷಿ ಕತೆಯ ಅನುಭವ ಹೊಂದಿದರು. ನಂತರ ತೇಜಸ್ ಅವರ ಕೆರೆಯಲ್ಲಿ ಮಕ್ಕಳಿಗೆ ಬೋಟಿಂಗ್ ಮಾಡಿಸಲಾಯಿತು. ಮೀನು ಮತ್ತು ಬಾತುಕೋಳಿಗಳಿಗೆ ಸ್ವತಃ ಆಹಾರ ನೀಡುವುದರೊಂದಿಗೆ ಅವುಗಳ ಜೀವನ ಕ್ರಮ ಅರಿತುಕೊಂಡರು. ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಊರಿನ ದಾನಿಗಳಾದ ಬಳಪದ ರೋಷನ್ ಮಂದಣ್ಣ, ಕೊಡಂದಿರ ಪೊನ್ನಣ್ಣ, ತುಮ್ತಜಿರ ದಯಾನಂದ್, ಕುಂಜಿಲನ ಮೋಹನ್ ವಿವಿಧ ನೆರವು ನೀಡಿದರು.…

Read More

ಮಡಿಕೇರಿ ಆ.10 : ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಆ.12, 13 ಮತ್ತು 14 ರಂದು ನಡೆಯಲಿರುವ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್ದಾರೆ. ಆಗಸ್ಟ್, 11 ರ ಮಧ್ಯರಾತ್ರಿ 12 ಗಂಟೆಯಿಂದ ಆಗಸ್ಟ್, 13 ರ ಬೆಳಗ್ಗೆ 6 ಗಂಟೆಯವರೆಗೆ ಮಾದಾಪುರ ಹಾಗೂ ಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ, ಆಗಸ್ಟ್, 12 ರಂದು ಮಧ್ಯರಾತ್ರಿ 12 ಗಂಟೆಯಿAದ ಆಗಸ್ಟ್, 13 ರ ಮಧ್ಯರಾತ್ರಿ 12 ಗಂಟೆಯವರೆಗೆ ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಪಟ್ಟಣ ವ್ಯಾಪ್ತಿಯ ಸುತ್ತಮುತ್ತಲಿನ 10 ಕಿ,ಮೀ. ಹಾಗೂ ಆಗಸ್ಟ್, 14 ರ ಬೆಳಗ್ಗೆ 6 ಗಂಟೆಯಿAದ ಆಗಸ್ಟ್, 14 ರ ಮಧ್ಯರಾತ್ರಿ 12 ಗಂಟೆಯವರೆಗೆ ಕುಶಾಲನಗರ ಪಟ್ಟಣ ಹಾಗೂ ಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ…

Read More

ಮಡಿಕೇರಿ ಆ.10 : ನಗರದ ಐತಿಹಾಸಿಕ ಕೋಟೆಯಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿ ಡಿಸೆಂಬರ್ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಗುರುವಾರ ಕೋಟೆಯ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು. ಕೋಟೆಯ ನೆಲ ಮಹಡಿ ಮತ್ತು ಮೊದಲ ಮಹಡಿ ಕಾಮಗಾರಿ ವೀಕ್ಷಿಸಿ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಗರದ ಕೋಟೆಯು ಹೃದಯ ಭಾಗದಲ್ಲಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯ ಕೋಟೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಬೇಕು ಎಂದರು. ಸರ್ಕಾರ ನಗರದ ಕೋಟೆ ಅಭಿವೃದ್ಧಿಗೆ 10.76 ಕೋಟಿ ರೂ ಬಿಡುಗಡೆ ಮಾಡಿದ್ದು, ಕೋಟೆ ನವೀಕರಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ಈ ಸಂದರ್ಭ ಮಾತನಾಡಿದ ಪುರಾತತ್ವ ಇಲಾಖೆಯ ಬಿಪಿನ್‌ಚಂದ್ರ ನೇಗಿ ಅವರು ಛಾವಣಿ ಕೆಲಸ ಪೂರ್ಣಗೊಂಡಿದ್ದು, ಪ್ಲಾಸ್ಟಿಂಗ್ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಪಾಲಿಶ್ ಕೆಲಸ ಜೊತೆಗೆ ಸುಣ್ಣ ಬಣ್ಣ ಕೆಲಸ ಭರದಿಂದ ಸಾಗಿದ್ದು, ಡಿಸೆಂಬರ್ ವೇಳೆಗೆ ಕೋಟೆಯ ನವೀಕರಣ ಕಾಮಗಾರಿ ಕೆಲಸ ಪೂರ್ಣಗೊಳ್ಳಲಿದೆ ಎಂದು…

Read More

ಮಡಿಕೇರಿ ಆ.10 : ಪಕ್ಷ ವಿರೋಧಿ ಧೋರಣೆ ಹಿನ್ನೆಲೆ ಮಾಲ್ದಾರೆ ಗ್ರಾ.ಪಂ ಯ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಕಿರಣ್ ಹಾಗೂ ಹನೀಫ್ ಅವರನ್ನು ಕಾಂಗ್ರೆಸ್ ನಿಂದ ಅಮಾನತುಗೊಳಿಸಿರುವುದಾಗಿ ಪಕ್ಷದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ. ಎರಡನೇ ಅವಧಿಯ ಅಧಿಕಾರಕ್ಕೆ ಮಾಲ್ದಾರೆ ಗ್ರಾ.ಪಂ ಗೆ ಚುನಾವಣೆ ನಡೆದ ಸಂದರ್ಭ ಇವರಿಬ್ಬರು ಗೈರು ಹಾಜರಾಗಿದ್ದರು. ಅಲ್ಲದೆ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸದೆ ಪಕ್ಷ ವಿರೋಧಿ ಚಟುವಟಿಕೆಯನ್ನು ನಡೆಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಮತ್ತು ವಲಯ ಕಾಂಗ್ರೆಸ್ ಅಧ್ಯಕ್ಷರು ನೀಡಿದ ದೂರಿನ ಹಿನ್ನೆಲೆ ಕಿರಣ್ ಹಾಗೂ ಹನೀಫ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

Read More

ಮಡಿಕೇರಿ ಆ.10 : ಮಡಿಕೇರಿಯಲ್ಲಿ ಕಂಡುಬಂದಿರುವ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ ನಾಗರಿಕರಲ್ಲಿಯೇ ಇದ್ದು, ಪರಸ್ಪರ ಸಹಕಾರ ಮನೋಭಾವದಿಂದ ವಾಹನ ದಟ್ಟಣೆ ಸಮಸ್ಯೆ ನಿವಾರಿಸಲು ಸಾಧ್ಯವಿದೆ ಎಂದು ನಗರ ಸಂಚಾರಿ ಪೊಲೀಸ್ ಠಾಣೆಯ ಸಹಾಯಕ ಇನ್ಸ್ ಪೆಕ್ಟರ್  ಐಮುಡಿಯಂಡ  ನಂದ ಅಭಿಪ್ರಾಯಪಟ್ಟಿದ್ದಾರೆ. ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ವುಡ್ಸ್ ಸಂಸ್ಥೆಯಿಂದ ಆಯೋಜಿತವಾಗಿದ್ದ ಟ್ರಾಫಿಕ್ ಜಾಗೃತಿ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಡಿಕೇರಿಗೆ ಇತ್ತೀಚಿನ  ವಷ೯ಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಪ್ರವಾಸಿಗರ ವಾಹನ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಿರಿದಾದ ರಸ್ತೆಗಳಲ್ಲಿ ವಾಹನ ಸಂಚಾರ ಸಮಸ್ಯೆ ಸಾಮಾನ್ಯವಾಗುತ್ತಿದೆ. ಪರಸ್ಪರ ಸಹಕಾರದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಂತೆಯೇ ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಸ್ಥಳೀಯರು ತಮ್ಮ ವಾಹನಗಳಲ್ಲಿ ಹತ್ತಿರದ ಸ್ಥಳಗಳಿಗೆ ತೆರಳುವುದನ್ನು ಕಡಮೆ ಮಾಡಿದರೆ ಸ್ಥಳೀಯರ ವಾಹನ ಸಂಚಾರ  ಪ್ರಮಾಣ  ಇಳಿಮುಖವಾಗಿ ಸಂಚಾರ ದಟ್ಟಣೆ ಕಡಮೆಯಾಗಲಿದೆ ಎಂದು ಸಲಹೆ ನೀಡಿದರು. ಜಗತ್ತಿನಲ್ಲಿಯೇ ಭಾರತ ದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವಾಹನ ದುರಂತಗಳು ಸಂಭವಿಸುತ್ತಿದೆ.  ಪ್ರತೀ ಗಂಟೆಗೆ ದೇಶದಲ್ಲಿ…

Read More

ಮಡಿಕೇರಿ ಆ.10 : ಮಡಿಕೇರಿ ತಾಲ್ಲೂಕಿನ ಕರಿಕೆ ಗ್ರಾ.ಪಂ ಅಧ್ಯಕ್ಷರಾಗಿ ಎನ್.ಬಾಲಚಂದ್ರನ್ ನಾಯರ್ ಹಾಗೂ ಉಪಾಧ್ಯಕ್ಷರಾಗಿ ಕುದುಪಜೆ ಕಲ್ಪನಾ ಜಗದೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ 9 ಮತ್ತು ಬಿಜೆಪಿ ಬೆಂಬಲಿತ ಇಬ್ಬರು ಸದಸ್ಯರು ಸೇರಿ ಒಟ್ಟು 11 ಸದಸ್ಯ ಬಲದ ಪಂಚಾಯ್ತಿಯ ಎರಡನೇ ಅವಧಿಯ ಅಧಿಕಾರಕ್ಕೆ ಇಂದು ಚುನಾವಣಾ ಪ್ರಕ್ರಿಯೆ ನಡೆಯಿತ್ತಾದರೂ ಯಾರೂ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಇಬ್ಬರು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕ ರಿಯಾಜ್ ಅಹಮ್ಮದ್ ಕಾರ್ಯನಿರ್ವಹಿಸಿದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪಿ.ಪಿ.ಗಣಪತಿ ಹಾಗೂ ಎಲ್ಲಾ 11 ಸದಸ್ಯರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷ ಬಾಲಚಂದ್ರನ್ ನಾಯರ್ ಮಾತನಾಡಿ ಮೂಲಭೂತ ಸೌಲಭ್ಯಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಜನಪರವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಕರಿಕೆಯನ್ನು ಮಾದರಿ ಗ್ರಾ.ಪಂ ಯನ್ನಾಗಿ ಮಾಡುವುದಾಗಿ ತಿಳಿಸಿದರು.

Read More