ಮಡಿಕೇರಿ ಆ.10 : ಚೆನ್ನೈನಲ್ಲಿ ಆಯೋಜಿತ ಐಕಾನ್ ಇಂಡಿಯಾ ದೇಹದಾಡ್ಯ ಸ್ಪಧೆ೯ಗೆ ತೆರಳುತ್ತಿರುವ ಮಡಿಕೇರಿಯ ದೇಹದಾಡ್ಯಪಟು ಗಣೇಶ್ ಅವರಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಥಿ೯ಕ ನೆರವು ನೀಡಲಾಯಿತು. ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಅವರು ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರು ನೀಡಿದ 20 ಸಾವಿರ ರೂ.ಗಳನ್ನು ಗಣೇಶ್ ಅವರಿಗೆ ನೀಡಿ ಶುಭಹಾರೈಸಿದರು. ಈ ಸಂದಭ೯ ಮಾತನಾಡಿದ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕೌಟುಂಬಿಕ ಕಾರಣಗಳಿಂದಾಗಿ ಶಿಕ್ಷಣ ಮೊಟಕುಗೊಳಿಸಿ ಹೋಟೇಲ್ ನಲ್ಲಿ ಉದ್ಯೋಗ ಕೈಗೊಂಡ ಗಣೇಶ್ ಪ್ರಾರಂಭದಲ್ಲಿ ಹವ್ಯಾಸವಾಗಿ ದೇಹದಾಡ್ಯತೆಯನ್ನು ಮೈಗೂಡಿಸಿಕೊಂಡರು. ಆದರೆ ನಂತರ ಛಲದಿಂದ ದೇಹದಾಡ್ಯ ಪಟುವಾಗಿ ಹೊರಹೊಮ್ಮಿದರು. ಹೀಗಾಗಿಯೇ ಗಣೇಶ್ ಅವರು ಈವರೆಗೆ ಮಿಸ್ಟರ್ ದಕ್ಷಿಣ ಕನ್ನಡ, ಮಿಸ್ಟರ್ ಕನಾ೯ಟಕ ಮತ್ತು ಮಿಸ್ಟರ್ ಏಷ್ಯಾದಂಥ ಪ್ರತಿಷ್ಟಿತ ಪ್ರಶಸ್ತಿಗಳನ್ನು ದೇಹದಾಡ್ಯ ಸ್ಪಧೆ೯ಗಳಲ್ಲಿ ಪಡೆಯಲು ಸಾಧ್ಯವಾಗಿದೆ ಎಂದರು. ಆಗಸ್ಟ್ 26 ರಂದು ಚೆನ್ನೈನಲ್ಲಿ ನಡೆಯುವ ಐಕಾನ್ ಇಂಡಿಯಾ ದೇಹದಾಡ್ಯ ಸ್ಪಧೆ೯ಗೆ ಕನಾ೯ಟಕದಿಂದ…
ಲೇಖಕ: admin
ಮಡಿಕೇರಿ ಆ.9 : ಇತ್ತೀಚಿನ ವರ್ಷಗಳಲ್ಲಿ ಬಂಡವಾಳಶಾಹಿಗಳನ್ನು ಉತ್ತೇಜಿಸುತ್ತಾ ವಿದೇಶಿ ಸಂಸ್ಥೆಗಳನ್ನು ರಾಷ್ಟ್ರಕ್ಕೆ ಆಹ್ವಾನಿಸುವುದರೊಂದಿಗೆ ಕಾರ್ಮಿಕ ಸಮೂಹದ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ(ಜೆಸಿಟಿಯು) ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದೊಂದಿಗೆ ಇಂದು ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಲಾಯಿತು. ಈ ಸಂದರ್ಭ ಪಿ.ಆರ್.ಭರತ್ ಮಾತನಾಡಿ, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕರೆಯ ಮೇರೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿಯಿಂದ ‘ಕ್ವಿಂಟ್ ಇಂಡಿಯಾ’ ಚಳವಳಿಯ ಈ ಮಹತ್ವದ ದಿನದಂದು ಹೋರಾಟವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಮಹಾತ್ಮ ಗಾಂಧೀಜಿಯವರ ಅಹಿಂಸಾತ್ಮಕ ಚಳುವಳಿಯಲ್ಲಿ ರಾಷ್ಟ್ರದಲ್ಲಿ ಕಾರ್ಮಿಕರನ್ನು ಒಳಗೊಂಡಂತೆ ಎಲ್ಲಾ ಸ್ತರದ ಜನಸಮೂಹದ ಒಗ್ಗಟ್ಟಿನ ಹೋರಾಟ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟಿತು. ಪ್ರಸ್ತುತ ಸ್ವಾತಂತ್ರ್ಯ ಎಪ್ಪತ್ತೇಳು ವರ್ಷಗಳನ್ನು ನಾವು ಕಳೆೆಯುತ್ತಿರುವ ಹಂತದಲ್ಲಿ ಕಾರ್ಮಿಕರಿಗೆ ನಿಜವಾದ ಸ್ವಾತಂತ್ರ್ಯ ಲಭಿಸಿದೆಯೇ ಎನ್ನುವ ಪ್ರಶ್ನೆ…
ಮಡಿಕೇರಿ ಆ.10 : ಜಿಲ್ಲೆಯ ಕಾಫಿ ತೋಟಗಳ ಲೈನ್‍ಮನೆಗಳಲ್ಲಿ ವಾಸವಿರುವ ದಲಿತರು ಮತ್ತು ಕೂಲಿ ಕಾರ್ಮಿಕರ ಪಡಿತರಗಳನ್ನು ಕೆಲವು ಮಾಲೀಕರು ವಶಪಡಿಸಿಕೊಂಡು ಬಡವರ ಸೌಲಭ್ಯಗಳನ್ನು ತಾವೇ ಪಡೆದುಕೊಳ್ಳುತ್ತಿದ್ದಾರೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂಘಟನೆ ಸಮತ ಸೈನಿಕ ದಳ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಹೆಚ್.ಜಿ.ಗೋಪಲ್ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೆಲವು ಕಾಫಿ ತೋಟದ ಲೈನ್ ಮನೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ದಲಿತರು ಮತ್ತು ಕಾರ್ಮಿಕರು ಸ್ವಂತ ಮನೆ ಇಲ್ಲದೆ ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸೂಕ್ತ ದಾಖಲೆಗಳಿಲ್ಲದೆ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಕಾರ್ಮಿಕ ಮಹಿಳೆಯರಿಗೆ ದೊರಕದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಜಿಲ್ಲೆಯಲ್ಲಿರುವ ಕಾರ್ಮಿಕ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯನ್ನು ನೀಡಲು ಗ್ರಾ.ಪಂ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದರು. ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಮತ್ತು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಅವಮಾನಿಸಿದ ಘಟನೆ ಖಂಡಿಸಿಯ ಎಂದ ಗೋಪಲ್, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು…
ನಾಪೋಕ್ಲು ಆ.10 : ನೆಲಜಿ ಗ್ರಾಮದ ಅಂಬಲ ಮಹಿಳಾ ಸಮಾಜದ ವತಿಯಿಂದ ಕಕ್ಕಡ ಹಬ್ಬದ ಪ್ರಯುಕ್ತ ಆ.12 ರಂದು ವಿಶೇಷ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಂಬಲ ಮಹಿಳಾ ಸಮಾಜದ ಅಧ್ಯಕ್ಷೆ ಅಪ್ಪು ಮಣಿಯಂಡ ಡೇಝಿ ಸೋಮಣ್ಣ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಿಗ್ಗೆ 11.30 ಗಂಟೆಗೆ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ಕಕ್ಕಡ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಅಪರಾಹ್ನ 1.30 ಕ್ಕೆ ನೆಲಜಿ ದವಸ ಭಂಡಾರದ ಕಟ್ಟಡದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಗ್ರಾಮದ ಕಾಫಿ ಬೆಳೆಗಾರ ಮಂಡೀರ ಸರೋಜಾ ದೇವಯ್ಯ ಹಾಗೂ ವಿರಾಜಪೇಟೆಯ ವುಮೆನ್ಸ್ ವಿಂಗ್ ಅಧ್ಯಕ್ಷೆ ಮನೆಯಪಂಡ ಶಾಂತಿ ಸತೀಶ್ ಪಾಲ್ಗೊಳ್ಳಲಿದ್ದಾರೆ ಡೇಝಿ ಸೋಮಣ್ಣ ಎಂದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ,ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಹಾಗೂ…
ಸೋಮವಾರಪೇಟೆ ಆ.10 : ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕರನ್ನಾಗಿ ಹುಲುಸೆ ಗ್ರಾಮದ ಹೆಚ್.ಬಿ.ಜಯಮ್ಮ ಆಯ್ಕೆಯಾಗಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್.ಧರ್ಮಸೇನ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಸೋಮವಾರಪೇಟೆ ಆ.10 : ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿ ವಿಜ್ಞಾನ(ಆನರ್ಸ್)ಬ್ಯಾಚುಲರ್ ಪದವಿಯಲ್ಲಿ ಸೋಮವಾರಪೇಟೆಯ ಪವರ್ ಹೌಸ್ ರಸ್ತೆಯ ನಿವಾಸಿ ಪಿ.ಪ್ರಧಾನ್ ಪ್ರಥಮ ಶ್ರೇಯಾಂಕದಲ್ಲಿ ತೇರ್ಗಡೆಯಾಗುವುದರೊಂದಿಗೆ ಎರಡು ಚಿನ್ನದ ಪದಕ ಗಳಿಸಿದ್ದಾರೆ. ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆದ 57ನೇ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೊಟ್ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ಕೃಷಿ ಸಚಿವ ಎನ್.ಚೆಲುವರಾಯ ಸ್ವಾಮಿ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಮಹಾ ನಿರ್ದೇಶಕ ಡಾ. ಹಿಮಾಮ್ ಷು ಪಾಠಕ್, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್.ವಿ.ಸುರೇಶ್ ಇದ್ದರು. ಪ್ರಧಾನ್ ದಿವಗಂತ ಪ್ರಶಾಂತ್ ಮತ್ತು ಮೇನಕ ಅವರ ಪ್ರಥಮ ಪುತ್ರರಾಗಿದ್ದಾರೆ.
ಸೋಮವಾರಪೇಟೆ ಆ.10 : ಭಾರತ ಜೆಸಿಐ ವತಿಯಿಂದ ರಾಷ್ಟ್ರೀಯ ಪ್ರತಿಭಾ ಅನ್ವೇಷಣಾ ಪರೀಕ್ಷೆ (ನ್ಯಾಷನಲ್ ಲೆವಲ್ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಷನ್)ಸಂತ ಜೊಸೇಫರ ಪದವಿ ಕಾಲೇಜಿನಲ್ಲಿ ನಡೆಯಿತು. ತಾಲ್ಲೂಕಿನ 14 ಶಾಲೆಗಳ 700 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ರಾಷ್ಟ್ರ ಮಟ್ಟದ ಈ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 40 ಸಾವಿರ ರೂ.ನಗದು ದ್ವಿತೀಯ 20 ಸಾವಿರ, ತೃತೀಯ 10 ಸಾವಿರ ಮತ್ತು ಟ್ರೋಫಿಯನ್ನು ನೀಡುತ್ತಾರೆ. ರಾಜ್ಯಮಟ್ಟದಲ್ಲಿ ವಿಜೇತರಾದವರಿಗೆ ಪ್ರಥಮ 7500 ರೂ, ದ್ವಿತೀಯ 5000 ರೂ, ತೃತೀಯ 3000ರೂ ನಗದು ಟ್ರೋಫಿಯನ್ನು ಜೆಸಿಐ ವಲಯ ಮಟ್ಟದಲ್ಲಿ ನೀಡಲಾಗುವುದು ಎಂದು ಜೆಸಿಐ ಅಧ್ಯಕ್ಷೆ ಎಂ.ಎ. ರುಬೀನಾ ತಿಳಿಸಿದ್ದಾರೆ. ಜೆಸಿಐನ ಕಾರ್ಯದರ್ಶಿ ಜಗದಾಂಭ ಗುರುಪ್ರಸಾದ್, ಜೂನಿಯರ್ ಜೇಸಿ ಅಧ್ಯಕ್ಷೆ ರಿಶಾ, ಪ್ರಮುಖರಾದ ಕೆ.ಎ. ಪ್ರಕಾಶ್, ವಿನುತ ಸುದೀಪ್, ರವಿಕುಮಾರ್, ನೆಲ್ಸನ್, ಲಿಕ್ಕಿ ಇದ್ದರು.
ಸೋಮವಾರಪೇಟೆ ಆ.10 : ಹಾನಗಲ್ಲು ಗ್ರಾ.ಪಂ ಯ 2ನೇ ಅವಧಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಯಶಾಂತ್‍ಕುಮಾರ್, ಉಪಾಧ್ಯಕ್ಷರಾಗಿ ರೇಣುಕಾ ವೆಂಕಟೇಶ್ ಅವರುಗಳು ಆಯ್ಕೆಯಾದರು. 12 ಸದಸ್ಯ ಬಲದ ಗ್ರಾ.ಪಂ.ನಲ್ಲಿ ವಿಜೇತರು ತಲಾ 7 ಮತಗಳನ್ನು ಪಡೆದರು. ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಿಥುನ್ ಹಾನಗಲ್ ಹಾಗು ಅನ್ನಪೂರ್ಣ ತಲಾ 5 ಮತಗಳನ್ನು ಪಡೆದು ಪರಾಜಯಗೊಂಡರು. ಚುನಾವಣಾಧಿಕಾರಿಯಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಚುನಾವಣಾ ಪ್ರಕ್ರಿಯೆ ನಡೆಸಿದರು. ಕಳೆದ ಬಾರಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧಿಕಾರಿ ನಡೆಸಿದ್ದರು. ಈ ಬಾರಿ ಆಡಳಿತ ಬಿಜೆಪಿ ತೆಕ್ಕೆಗೆ ಬಂದಿದ್ದು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಗ್ರಾ. ಪಂ. ಸದಸ್ಯರುಗಳಾದ ಲಕ್ಷ್ಮೀ ಪಾಂಡಿಯನ್, ಕೆ.ಎಸ್. ಪ್ರಕಾಶ್, ಸುದೀಪ್, ಬಿ.ಎಸ್. ಸುರೇಶ್, ರಘು, ಜಿ. ವಿಜಯ ಚುನಾವಣೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಮುಖಂಡರಾದ ಬಿ.ಜೆ. ದೀಪಕ್, ಮಹೇಶ್ ತಿಮ್ಮಯ್ಯ, ಜಗದೀಶ್ ಹಾಜರಿದ್ದರು.
ಮಡಿಕೇರಿ ಆ.9 : ನಗರದ ದಾಸವಾಳ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಉದ್ಯಾನವನ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಮಡಿಕೇರಿ ನಗರ ಕಾಂಗ್ರೆಸ್ ಮಹಿಳಾ ಘಟಕದ ನಗರಾಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ ಮನವಿ ಮಾಡಿದ್ದಾರೆ. ಉದ್ದೇಶಿತ ಯೋಜನೆಯ ಸ್ಥಳಕ್ಕೆ ಭೇಟಿ ನೀಡಿದ್ದ ಅವರು ಅಲ್ಲಿನ ಅವ್ಯವಸ್ಥೆಯನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಮಾಜಿ ಶಾಸಕ ಎಂ.ಪಿ.ಅಪಚ್ಚು ರಂಜನ್ ಅವರು 2022 ಮೇ ತಿಂಗಳಿನಲ್ಲಿ ಉದ್ಯಾನವನ ನಿರ್ಮಾಣಕ್ಕಾಗಿ ಭೂಮಿಪೂಜೆ ನೆರವೇರಿಸಿದ್ದರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಸುಂದರವಾದ ಉದ್ಯಾನವನ ನಿರ್ಮಿಸಬೇಕೆಂದು ಯೋಜನೆಗೆ ಅನುಮೋದನೆ ನೀಡಿದ್ದರು. ಆದರೆ ಭೂಮಿಪೂಜೆ ನೆರವೇರಿಸಿ ಒಂದು ವರ್ಷ ಕಳೆದಿದ್ದರೂ ಇಲ್ಲಿಯವರೆಗೆ ಉದ್ಯಾನವನ ನಿರ್ಮಾಣಗೊಂಡಿಲ್ಲ. ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ಮತ್ತು ಬೇಲಿ ಮಾತ್ರ ನಿರ್ಮಿಸಿ ಕಾಮಗಾರಿಯನ್ನು ಅಪೂರ್ಣಗೊಳಿಸಲಾಗಿದೆ ಎಂದು ಆರೋಪಿಸಿದರು. ಇದೀಗ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಗಮನ ಸೆಳೆಯುವುದಾಗಿ ತಿಳಿಸಿದರು. ನಗರದ ಸೌಂದರ್ಯದ ಹಿತದೃಷ್ಟಿಯಿಂದ ಮತ್ತು…
ಮಡಿಕೇರಿ ಜು.9 : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ಎಂ.ಜಿ.ಅಜಿತ್ ಕುಮಾರ್ ಅವರನ್ನು ನೇಮಕಮಾಡಲಾಗಿದೆ ಎಂದು ಪಕ್ಷದ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಕೇಶವ್ ಮೂರ್ತಿ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ಕಂಡುಬರುತ್ತಿದ್ದು, ಇದನ್ನು ತೆಡೆಗಟ್ಟುವ ಸಲುವಾಗಿ ಕೆ.ಆರ್.ಎಸ್ ಪಕ್ಷ ತೊಡಗಿಸಿಕೊಂಡಿದೆ. ಜಿಲ್ಲಾದ್ಯಂತ ಪಕ್ಷವನ್ನು ಸದೃಢವಾಗಿ ಸಂಘಟಿಸುವ ಹಿನ್ನೆಲೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಉಪಾಧ್ಯಕ್ಷರಾಗಿ ಸಿ.ಜೆ.ಸತೀಶ್, ಪ್ರಧಾನ ಕಾರ್ಯದರ್ಶಿ ಎಚ್.ಡಿ.ದಿಲೀಪ್ ಕುಮಾರ್, ಕಾರ್ಯದರ್ಶಿಯಾಗಿ ಎನ್.ಬಿ.ಪ್ರದೀಪ್, ಎನ್.ಜೆ.ಗಿರೀಶ್ ಕುಮಾರ್, ಎನ್.ಎಸ್.ರಾಜಶೇಖರ್ ಗೌಡ, ಎ.ಎ.ಹುಸೇನ್ ಆಲೀರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಈಗಾಗಲೇ 100ಕ್ಕೂ ಅಧಿಕ ಯುವಕರು ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ವಿಧಾನಸಭೆಗೆ ನಮ್ಮ ಪಕ್ಷದ ಕಾರ್ಯಕರ್ತರನ್ನು ಆಯ್ಕೆ ಮಾಡಿ ಭ್ರಷ್ಟಾಚಾರ ಮುಕ್ತವಾಗಿಸಲು ಜನತೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಪಕ್ಷದ ನೂತನ ಜಿಲ್ಲಾಧ್ಯಕ್ಷ ಎಂ.ಜಿ.ಅಜಿತ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು…






