ಬೆಂಗಳೂರು NEWS DESK ಏ.22 : ಕೊಡಗು ಜಿಲ್ಲೆಯ ಕುಟ್ಟ ಪ್ರದೇಶದಲ್ಲಿರುವ ಖಾಸಗಿ ಹೋಂಸ್ಟೇಯಲ್ಲಿ (𝗛𝗼𝗺𝗲𝘀𝘁𝗮𝘆) ಅಮೆರಿಕಾ ಮೂಲದ ಮಹಿಳೆಯೊಬ್ಬರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಎಸ್ ಭೋಸರಾಜು ಅವರು, ಈ ಕುರಿತು ಶೀಘ್ರವೇ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (𝗦𝗣) ಜೊತೆ ದೂರವಾಣಿ ಮಾತನಾಡಿದ ಸಚಿವರು, ಪ್ರಕರಣದ ವಿವರಗಳನ್ನು ಪಡೆದುಕೊಂಡರು. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದೆ ತನಿಖೆ ಮುಂದುವರೆದಿದೆ. “ಕೊಡಗು ಜಿಲ್ಲೆಯು ಪ್ರವಾಸೋದ್ಯಮಕ್ಕೆ (𝗧𝗼𝘂𝗿𝗶𝘀𝗺) ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇಂತಹ ಅಹಿತಕರ ಘಟನೆಗಳಿಂದ ಜಿಲ್ಲೆಯ ಘನತೆ ಹಾಗೂ ಪ್ರವಾಸೋದ್ಯಮದ ಮೇಲೆ ಗಂಭೀರವಾದ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ…
ಲೇಖಕ: admin
ವಿರಾಜಪೇಟೆ ಏ.22 NEWS DESK : ವಿಷು ಹಬ್ಬದ ಪ್ರಯುಕ್ತ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಏ.26 ರಂದು ವಿರಾಜಪೇಟೆಯ ತಾಲ್ಲೂಕು ಮೈದಾನದಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ.ಸುಮೇಶ್ ತಿಳಿಸಿದ್ದಾರೆ. ಗ್ರಾಮೀಣ ಕ್ರೀಡಾಕೂಟದ ಅಂಗವಾಗಿ ಹಿಂದೂ ಮಹಿಳಾ ಮಲಯಾಳಿ ಬಂಧುಗಳಿಂದ ಮೆಗಾ(100ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿರುವ) ತಿರುವಾದಿರ ನೃತ್ಯವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ವಿಷು ಹಬ್ಬದ ಮಹತ್ವ ಸೇರಿದಂತೆ ಹಬ್ಬದ ವಿಷು ಕಣಿ ಮಡಗುವ ರೀತಿ, ಈ ಸಂದರ್ಭ ಹೇಗೆ ದೀಪವನ್ನು ಹಚ್ಚುವುದು, ಸಾಂಪ್ರಾದಾಯಿಕವಾಗಿ ವಿಷು ಕಣಿ ಇಡುವ ಮತ್ತು ಆಚರಿಸುವ ರೀತಿಯನ್ನು ಪ್ರಸ್ತುತ ಪಡಿಸಲಾಗುತ್ತದೆ. ಮತ್ತು ಇಂದಿನ ಯುವಜನತೆಗೆ ವಿಷು ಹಬ್ಬದ ಮಹತ್ವವನ್ನು ತಿಳಿಯಪಡಿಸಲಾಗುವುದು. ಬಳಿಕ ಮೆಗಾ ತಿರುವಾದಿರ ನೃತ್ಯ ಪ್ರದರ್ಶನ ಹಾಗೂ ಪುರುಷರಿಗೆ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ. ಮಧ್ಯಾಹ್ನದ ಊಟದ ನಂತರ ಮಹಿಳೆಯರಿಗೆ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಅಧ್ಯಕ್ಷ ಸುಮೇಶ್…
ಮಡಿಕೇರಿ NEWS DESK ಏ.22 : ಆಟೋ ರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾಲ್ದಾರೆ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಅಂಚೆತಿಟ್ಟು ಹಾಡಿಯ ನಿವಾಸಿ ವೈ.ಎನ್.ಮಾದ ಮೃತ ಚಾಲಕನಾಗಿದ್ದು, ಸುನಿಲ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಮಾದ ಅವರ ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಡಿಕ್ಕಿಯ ತೀವ್ರತೆಗೆ ವೈ.ಎನ್.ಮಾದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸಿದ್ದಾಪುರ ರಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ ಏ.22 NEWS DESK : ಸೋಮವಾರಪೇಟೆಯ ಖಾಸಗಿ ಕಲ್ಯಾಣ ಮಂಟದಲ್ಲಿ ಪರಿಶಿಷ್ಟ ಜನಾಂಗದವರ ಕುಂದುಕೊರತೆ ಆಲಿಸುವ ಸಭೆಯು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪರಿಶಿಷ್ಟ ಜನಾಂಗದವರ ಕುಂದುಕೊರತೆ ಸಭೆಯಲ್ಲಿ ಸುಮಾರು 48 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಕಂದಾಯ ದುರಸ್ತಿ, ಹಕ್ಕುಪತ್ರ ವಿತರಿಸುವುದು, ಮನೆ ದಾಖಲಾತಿ, ಅಕ್ರಮ ಸಕ್ರಮ, ಜಾಗ ಅತಿಕ್ರಮಣ ತೆರವುಗೊಳಿಸುವುದು, ಜಮೀನಿಗೆ ತೆರಳಲು ದಾರಿ ಬಿಡಿಸುವುದು, ಸಮಾಜ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೊಲೀಸ್, ಕೃಷಿ, ಆಹಾರ, ಸೆಸ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹೀಗೆ ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 40 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿ, ಹಕ್ಕುಪತ್ರ, ನಿವೇಶನ ಒದಗಿಸುವುದು, ಮನೆ ನಿರ್ಮಾಣ, ಕೃಷಿ ಭೂಮಿ ಅತಿಕ್ರಮಣ ಮಾಡಿಕೊಂಡಿರುವುದು ಇಂದಿನ ಕುಂದುಕೊರತೆ ಸಭೆಯಲ್ಲಿ ಹೆಚ್ಚಾಗಿ ಕೇಳಿಬಂದವು. ಈ ಸಂದರ್ಭದಲ್ಲಿ ಮಾತನಾಡಿದ ಕುಂಬೂರಿನ ಸೋಮಪ್ಪ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಲವು ಸಮಸ್ಯೆಗಳಿದ್ದು,…
ಸೋಮವಾರಪೇಟೆ ಏ.22 NEWS DESK : ತಣ್ಣೀರುಹಳ್ಳ ಗ್ರಾಮದ ಬಸವೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ ಅಂಗವಾಗಿ ದೇವಾಲಯದಲ್ಲಿ ವಿಶೇಷ ಹೋಮಹವನಗಳು ಶ್ರದ್ಧಾಭಕ್ತಿಯಿಂದ ನಡೆಯಿತು. ಮೂಡಿಗೆರೆಯ ತಂತ್ರಿಗಳಾದ ಶಿವಪ್ರಸಾದ್, ದೇವಾಲಯ ಸಮಿತಿ ಅಧ್ಯಕ್ಷ ಕೆ.ರವಿ, ಉಪಾಧ್ಯಕ್ಷ ಭುವನೇಂದ್ರ, ಕಾರ್ಯದರ್ಶಿ ಅನಿಲ್ ಶೆಟ್ಟಿ, ಖಜಾಂಚಿ ಏಳುಮಲೈ ಇದ್ದರು.
ಮಡಿಕೇರಿ ಏ.22 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.23 ರ ಪಂದ್ಯಗಳು. *ಮೈದಾನ 1* ಬೆಳಿಗ್ಗೆ 9 ಗಂಟೆಗೆ ತಂಬುಕುತ್ತಿರ ಮತ್ತು ಚಿರಿಯಪಂಡ, 10ಕ್ಕೆ ಕನ್ನಂಡ ಮತ್ತು ಕರಿನೆರವಂಡ, 11ಕ್ಕೆ ಅಮ್ಮಾಟಂಡ ಮತ್ತು ನಂದಿನೆರವಂಡ, ಮಧ್ಯಾಹ್ನ 12ಕ್ಕೆ ಪೆಬ್ಬಟಿರ ಮತ್ತು ದಾಸಂಡ ಹಾಗೂ 1 ಗಂಟೆಗೆ ಅಳಮೇಂಗಡ ಮತ್ತು ಚೊಟ್ಟೆಯಂಡಮಾಡ *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಮುಂಡಂಡ ಮತ್ತು ಪುದಿಯೊಕ್ಕಡ, 10ಕ್ಕೆ ಮುಕ್ಕಾಟಿರ (ಕುಂಜಲಗೇರಿ) ಮತ್ತು ಮೂಕೊಂಡ, 11ಕ್ಕೆ ಸಣ್ಣುವಂಡ ಮತ್ತು ಹಂಚೆಟ್ಟಿರ, ಮಧ್ಯಾಹ್ನ 12ಕ್ಕೆ ಕೊಟ್ಟಂಗಡ ಮತ್ತು ಕರವಂಡ, 1ಕ್ಕೆ ಮುಕ್ಕಾಟಿರ (ಕುಂಬಳದಾಳು) ಮತ್ತು ಸಿದ್ದಂಡ ಹಾಗೂ 2 ಗಂಟೆಗೆ ನೆರವಂಡ ಮತ್ತು ಬೊಳ್ಳೆರ *ಮೈದಾನ 3* ಮಹಿಳಾ ಕ್ರಿಕೆಟ್ ಬೆಳಿಗ್ಗೆ 10 ಗಂಟೆಗೆ ನಾಟೋಳಂಡ ಮತ್ತು ಮೇವಡ, 11ಕ್ಕೆ ಒಡಿಯಂಡ ಮತ್ತು ಮಂದನೆರವಂಡ, ಮಧ್ಯಾಹ್ನ 12ಕ್ಕೆ ಅರಮಣಮಾಡ ಮತ್ತು ಕಲಿಯಂಡ,…
ಮಡಿಕೇರಿ ಏ.22 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.22 ರಂದು ಗೆಲುವು ಸಾಧಿಸಿದ ತಂಡಗಳು. *ಮೈದಾನ 1* (ಲಾಲು ಮುದ್ದಯ್ಯ ಮೈದಾನ) ಮೋಟನಾಳಿರ ಮತ್ತು ಚೌರೀರ ತಂಡಗಳ ನಡುವಿನ ಪಂದ್ಯದಲ್ಲಿ ಮೋಟನಾಳಿರ 25 ರನ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮೋಟನಾಳಿರ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 114 ರನ್ ಗಳನ್ನು ಗಳಿಸಿತು. ಚೌರೀರ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 89 ರನ್ ಗಳನ್ನು ಸೇರಿಸಿ ಸೋಲು ಕಂಡಿತು. ಮಚ್ಚಮಾಡ ಮತ್ತು ಸರ್ಕಂಡ ನಡುವಿನ ಪಂದ್ಯದಲ್ಲಿ ಮಚ್ಚಮಾಡ 57 ರನ್ ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಚ್ಚಮಾಡ 6 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 100 ರನ್ ಗಳನ್ನು ಸೇರಿಸಿತು. ಸರ್ಕಂಡ 6 ಓವರ್ ಗಳಲ್ಲಿ…
ಮಡಿಕೇರಿ ಏ.22 NEWS DESK : ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಮಡಿಕೇರಿ ತಾಲ್ಲೂಕು ಸಮಿತಿಯ ವತಿಯಿಂದ ಮಡಿಕೇರಿಯಲ್ಲಿ ನಡೆದ 10ನೇ ವರ್ಷದ ರಾಜ್ಯ ಮಟ್ಟದ ಮೊಗೇರ ಕ್ರೀಡಾಕೂಟಕ್ಕೆ ಸಂಭ್ರಮದ ತೆರೆ ಬಿದ್ದಿತು. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ ಮತ್ತಿತರ ಕ್ರೀಡಾಕೂಟಗಳಲ್ಲಿ ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಸಾವಿರಾರು ಸಂಖ್ಯೆಯ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಕ್ರಿಕೆಟ್ ಪಂದ್ಯಾವಳಿಯಲ್ಲ್ಲಿ ಡಾಮಿನೇಟರ್ ಮಾರ್ಗೊಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದರೆ, ವಿನಾಯಕ ಕೊಡಗು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮೊಗೇರ ಫ್ರೆಂಡ್ಸ್ ಸುಳ್ಯ ಪ್ರಥಮ ಹಾಗೂ ಭರತ್ ಫ್ರೆಂಡ್ಸ್ ಬೆಳ್ಳಾರಿಮಾಡು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಹಗ್ಗಜಗ್ಗಾಟ ಮಹಿಳೆಯರ ಸ್ಪರ್ಧೆಯಲ್ಲಿ ಡಾಮಿನೇಟರ್ ಚೆಯ್ಯಂಡಾಣೆ ಪ್ರಥಮ ಮತ್ತು ಕಿಗ್ಗಾಲು ವಾರಿಯರ್ಸ್ ದ್ವಿತೀಯ ಸ್ಥಾನವನ್ನು ಪಡೆಯಿತು. ವಾಲಿಬಾಲ್ ಪಂದ್ಯಾವಳಿಯಲ್ಲಿ ಷಣ್ಮುಗ ಹೆಬ್ಬೆಟ್ಟಗೇರಿ ಎ ಮತ್ತು…
ಮಡಿಕೇರಿ ಜ.22 NEWS DESK : ಶ್ರೀ ಯೋಗಿ ನಾರಾಯಣ ಕೊಡಗು ಜಿಲ್ಲಾ ಬಲಿಜ ಸಮಾಜದ ವಾರ್ಷಿಕ ಮಹಾಸಭೆಯು ಮೇ 1 ರಂದು ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧ್ಯಕ್ಷರಾದ ಟಿ.ಜಿ.ಗಣೇಶ್ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಮೂರ್ನಾಡು ವಿಎಸ್ಎಸ್ಎನ್ ಸಭಾಂಗಣದಲ್ಲಿ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಟಿ .ಆರ್.ಸುಬ್ರಹ್ಮಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಬಿಸಿಲಿನ ತೀವ್ರತೆಯ ಪರಿಣಾಮ : ದೇಹದ ತಾಪಮಾನ ನಿಯಂತ್ರಣ ವ್ಯವಸ್ಥೆ ಅಸಮರ್ಪಕವಾದಾಗ ಹೀಟ್ ಎಕ್ಸಾಸ್ಷನ್ ಅಥವಾ ಹೀಟ್ ಸ್ಟ್ರೋಕ್ ಉಂಟಾಗಬಹುದು : ಬರಹ : ಡಾ|| ಕೆ.ಬಿ.ಸೂರ್ಯ ಕುಮಾರ್, ಮಡಿಕೇರಿ* ಈಗಂತೂ ಬೇಸಿಗೆಯ ಕಾಲ. ಈ ಸಮಯದಲ್ಲಿ ಹವಾಮಾನದಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಂದಾಗಿ ಬಿಸಿಲಿನ ತೀವ್ರತೆ , ತಾಪ, ತಡೆಯಲಾರದಷ್ಟು ಹೆಚ್ಚಾಗಿದೆ. ಇದು ಎಲ್ ನೀನೋ ಎಂಬ ಪೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಭಾಗದ ಮೇಲ್ಮೈ ನೀರು ಅಸಹಜವಾಗಿ ಬೆಚ್ಚಗಾಗಿ, ತಾಪಮಾನದಲ್ಲಿನ ಏರುಪೇರಿನಿಂದ ಉಂಟಾಗುತ್ತಿರುವ ಬದಲಾವಣೆ. ಇದರಿಂದ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿ, ಅತಿ ಬಿಸಿಲಿನ ಮತ್ತು ಬರಗಾಲದ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುತ್ತದೆ. ಈ ದಿನಗಳಲ್ಲಿ ಹೊರಗೆ ಕೆಲಸ ಮಾಡುವುದು ಅಥವಾ ಪ್ರಯಾಣಿಸುವುದು ಅನಿವಾರ್ಯವಾಗಿರುವುದರಿಂದ, ಅದರ ತೀವ್ರತೆಯಲ್ಲಿ ಕೆಲಸ ಮಾಡುವ ಪರಿಣಾಮವಾಗಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. *ಆರೋಗ್ಯ ಸಮಸ್ಯೆಗಳು* >> ಬಿಸಿಲಿನಲ್ಲಿ ದೀರ್ಘಕಾಲ ಕಾಲ ಕಳೆಯುವವರು ದೇಹದಲ್ಲಿ ನೀರಿನ ಕೊರತೆಯನ್ನು (ಡಿಹೈಡ್ರೇಶನ್) ಅನುಭವಿಸುತ್ತಾರೆ. ಇದರಿಂದ ತಲೆಸುತ್ತು, ದೌರ್ಬಲ್ಯ, ನಿಶಕ್ತಿ, ಚರ್ಮ ಒಣಗುವುದು, ತೀವ್ರ…






