ಮಡಿಕೇರಿ NEWS DESK ಏ.21 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.21 ರ ವಿಜೇತ ತಂಡಗಳು. *ಮೈದಾನ 1* (ಲಾಲು ಮುದ್ದಯ್ಯ ಮೈದಾನ) ಕಲಿಯಂಡ ಮತ್ತು ಪುದಿಯೊಕ್ಕಡ ತಂಡಗಳ ನಡುವಿನ ಪಂದ್ಯವನ್ನು ಪುದಿಯೊಕ್ಕಡ 43 ರನ್ ಗಳಿಂದ ಗೆದ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪುದಿಯೊಕ್ಕಡ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 79 ರನ್ ಗಳನ್ನು ಸೇರಿಸಿತು. ಕಲಿಯಂಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 36 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು. ತೆಕ್ಕಡ ಮತ್ತು ಕರಿನೆರವಂಡ ನಡುವಿನ ಪಂದ್ಯದಲ್ಲಿ ಕರಿನೆರವಂಡ 8 ವಿಕೆಟ್ ಗಳಿಂದ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತೆಕ್ಕಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 54 ರನ್ ಗಳನ್ನು ಗಳಿಸಿತು. ಕರಿನೆರವಂಡ 4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ…
ಲೇಖಕ: admin
ಮಡಿಕೇರಿ ಏ.21 NEWS DESK : ಮಡಿಕೇರಿ ನಗರದ ಶ್ರೀ ಓಂಕಾರೇಶ್ವರ ದೇವಾಲಯ ಹಾಗೂ ಶ್ರೀ ಆಂಜನೇಯ ದೇವಾಲಯದ ವಾರ್ಷಿಕ ಪ್ರತಿಷ್ಠಾ ದಿನಾಚರಣೆ ಏ.26 ರಂದು ಜರುಗಲಿದೆ. ಶ್ರೀ ಆಂಜನೇಯ ದೇವಾಲಯದ ಆವರಣದಲ್ಲಿ ನೂತನವಾಗಿ ನವಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಕ್ಷೇತ್ರ ತಂತ್ರಿಗಳಾದ ಉಚ್ಚಿಲದ ವೇದಬ್ರಹ್ಮ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆ ಜರುಗಲಿದೆ. ಏ.25 ರಂದು ಸಂಜೆ 6ರಿಂದ ಪ್ರಾರ್ಥನೆ, ಆಂಜನೇಯ ಗುಡಿಯಲ್ಲಿ ಪುಣ್ಯಾಹ, ಆರೂಢ ಪರಿಗ್ರಹ ಹಾಗೂ ನವಗ್ರಹ ಬಿಂಬ ಪರಿಗ್ರಹ, ಜಲಾಧಿವಾಸ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ ಹಾಗೂ ಮಹಾಪೂಜೆ ನಡೆಯಲಿದೆ. ಏ.26 ರಂದು ಬೆಳಿಗ್ಗೆ 7 ಗಂಟೆಯಿಂದ ಗಣಪತಿ ಹೋಮ, ಬಿಂಬ ಶುದ್ಧಿ, ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರಿಂದ 11 ಗಂಟೆಗೆ ಆಂಜನೇಯ ದೇವಾಲಯದ ಆವರಣದಲ್ಲಿ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ನವಗ್ರಹ ಪ್ರತಿಷ್ಠಾಪನೆ, ಸಾನಿಧ್ಯ ಕಳಶ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆಯಾಗಲಿದೆ ಎಂದು ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ…
ಮಡಿಕೇರಿ NEWS DESK ಏ.21 : ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು “ಭಯೋತ್ಪಾದಕ” ಎಂದು ಸಂಭೋದಿಸಿರುವ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೀಳುಮಟ್ಟದ ರಾಜಕೀಯ ನಡೆ ಖಂಡನೀಯವೆoದು ಕೊಡಗು ಜಿಲ್ಲಾ ಬಿಜೆಪಿಯ ವಕ್ತಾರ ಬಿ.ಕೆ.ಅರುಣ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ತಮಿಳುನಾಡು ಚುನಾವಣಾ ಪ್ರಚಾರದ ಸಂದರ್ಭ ಮಲ್ಲಿಕಾರ್ಜುನ ಖರ್ಗೆ ಅವರು ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ದೇಶದ ಜನ ಮಾತ್ರವಲ್ಲದೆ ಇಡೀ ವಿಶ್ವವೇ ಮೆಚ್ಚಿಕೊಂಡಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಲಘುವಾಗಿ ಮಾತನಾಡುವ ಮೂಲಕ ಖರ್ಗೆ ಅವರು ತಮ್ಮ ಸಣ್ಣತನವನ್ನು ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದ್ದಾರೆ. ಜನಸ್ನೇಹಿ ಆಡಳಿತದ ಮೂಲಕ ದೇಶವನ್ನು ಪ್ರಗತಿಪಥದತ್ತ ಸಾಗಿಸಿ ಮೂರು ಬಾರಿ ಅಧಿಕಾರಕ್ಕೇರಿರುವ ನರೇಂದ್ರ ಮೋದಿ ಅವರ ವಿರುದ್ಧ ಕಟು ಭಾಷೆಯನ್ನು ಬಳಸುವ ಮೊದಲು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿರುವ ಖರ್ಗೆ ಅವರು ಮೊದಲು ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಸಾಹಸವನ್ನು ಮಾಡಲಿ ಎಂದು ಸವಾಲು ಹಾಕಿದ್ದಾರೆ.…
ಮಡಿಕೇರಿ NEWS DESK ಏ.21 : ಜಾತ್ಯಾತೀತ ನೆಲೆಗಟ್ಟಿನಲ್ಲಿ ಉತ್ತಮ ಸಮಾಜ ಸ್ಥಾಪಿಸಬೇಕೆನ್ನುವ ಉದ್ದೇಶದಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಸಮಸ್ತ ಮುಸಲ್ಮಾನರು ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಸಿದ ಪರಿಣಾಮ ಅದು ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಬಂತು. ಆದರೆ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರಕಾರ ಮುಸ್ಲಿಮರ ದಮನಕ್ಕೆ ಮುಂದಾಗಿದೆ ಎಂದು ಸುನ್ನಿ ಸಮನ್ವಯ ಸಮಿತಿಯ ಕೊಡಗು ಜಿಲ್ಲಾ ಘಟಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನ್ನಿ ಸಮನ್ವಯ ಸಮಿತಿಯ ಜಿಲ್ಲಾ ಮಾಧ್ಯಮ ಪ್ರತಿನಿಧಿ ಸಿ.ಎಂ.ಅಬ್ದುಲ್ ಹಮೀದ್ ಮೌಲವಿ ಅವರು ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ಮಸ್ಲಿಮರನ್ನು ಕಡೆಗಣಿಸುತ್ತಿದ್ದು, ಈ ಬೆಳವಣಿಗೆ ಅತ್ಯಂತ ನೋವನ್ನುಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷವು ಕರ್ನಾಟಕದ ಮುಸ್ಲಿಂ ಸಮುದಾಯ ಮತ್ತು ಅದರ ನಾಯಕರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ಕೊಡಗು ಜಿಲ್ಲೆಯ ಪ್ರಮುಖ ಮುಸ್ಲಿಂ ಸಂಘಟನೆಗಳಾದ ಎಸ್‌ಕೆಎಸ್‌ಎಸ್‌ಎಫ್, ಎಸ್‌ಎಸ್‌ಎಫ್, ಮುಸ್ಲಿಂ ಸಂಘ ಸಂಸ್ಥೆಗಳು ಹಾಗೂ ಒಕ್ಕೂಟಗಳು ತೀವ್ರವಾಗಿ ಖಂಡಿಸುತ್ತವೆ. ಮುಸ್ಲಿಮರು ನೀಡಿರುವ ಒಗ್ಗಟ್ಟಿನ ಬೆಂಬಲದಿoದ…
ಮಡಿಕೇರಿ ಏ.20 NEWS DESK : ಅಕ್ಕಪಡೆ ವತಿಯಿಂದ ಮಡಿಕೇರಿಯ ವಿವಿಧೆಡೆ ತುರ್ತು ಸಹಾಯವಾಣಿಯ ಕುರಿತು ಅರಿವು ಮೂಡಿಸಲಾಯಿತು. ಅಕ್ಕಪಡೆ ಸಿಬ್ಬಂದಿಗಳು ನಗರದ ಕೋಟೆ ಆವರಣದಲ್ಲಿ ಪ್ರವಾಸಿಗರಿಗೆ ಅಕ್ಕಪಡೆ ಕರ್ತವ್ಯ, ವಿವಿಧ ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮೊಗೇರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಅಕ್ಕಪಡೆಯ ಬಗ್ಗೆ ಮತ್ತು ತುರ್ತು ಸಹಾಯವಾಣಿಗಳ ಬಗ್ಗೆ ಅರಿವು ಮೂಡಿಸಿದರು.
ಮಡಿಕೇರಿ ಏ.20 NEWS DESK : ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಕ್ರಿಕೆಟ್ ಆಟದ ಮೈದಾನದಲ್ಲಿ ಕುಶಾಲನಗರ ತಾಲ್ಲೂಕು ಮಟ್ಟದ ಕುಶಾಲನಗರ ವಲಯ ಅರಣ್ಯ ಇಲಾಖೆಯ ವತಿಯಿಂದ ಸಾರ್ವಜನಿಕ ಯುವಕರು ಮತ್ತು ಅರಣ್ಯ ಇಇಲಾಖೆಯ ಸಿಬ್ಬಂದಿ ಒಳಗೊಂಡಂತೆ ತಂಡಗಳ ರಚನೆ ಮೂಲಕ ಎರಡು ದಿನಗಳ” ಹುಲಿ ಮಿತ್ರ” ಕ್ರಿಕೆಟ್ ಪಂದ್ಯಾವಳಿಯು ಚಿಕ್ಕತ್ತೂರು ಸಾರ್ವಜನಿಕ ಆಟದ ಮೈದಾನದಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ನೆರವೇರಿ ನಂತರ ಮಾತಾನಾಡುತ್ತಾ ಗ್ರಾಮಾಂತರ ಪ್ರದೇಶದ ಯುವಕರು ಅರಣ್ಯ ಇಲಾಖೆಯೊಂದಿಗೆ ಸೌಹಾರ್ದ ಮನೋಭಾವ ಬೆಳೆಸಿಕೊಂಡು ,ಗ್ರಾಮದ ಅಭಿವೃದ್ಧಿ, ಮತ್ತು ಇಲಾಖೆಗೆ ಸಹಕಾರಿಯಾಗುವ ಸ್ನೇಹ ಸಂಬಂಧ ಒಗ್ಗೂಡುವ ಹಿತದೃಷ್ಟಿಯಿಂದ ಇಂತಹ ಕ್ರೀಡಾಕೂಟಗಳು ಅರಣ್ಯ ಇಲಾಖೆಯ ವತಿಯಿಂದ ಆಯೋಜನೆಗೊಂಡಿರುವುದರಿಂದ ಯುವಕರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪೂರಕವಾಗುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತಾನಾಡುತ್ತಾ ಕ್ರೀಡಾಕೂಟ ಮೂಲಕ ಒಗ್ಗೂಡಿ ಸಮಾಜಕ್ಕೆ ಪೂರಕವಾಗುವ ವಿಷಯಗಳು…
ಕುಶಾಲನಗರ ಏ.20 NEWS DESK : ಕೊಡಗು ಸೈನಿಕ ಶಾಲೆಯಲ್ಲಿ 2026–27ನೇ ಸಾಲಿನ ದಕ್ಷಿಣ ವಲಯದ ಅಂತರ ಗುಂಪು ಫುಟ್ಬಾಲ್ ಪಂದ್ಯಾವಳಿಗೆ (ಗುಂಪು-ಹೆಚ್) ಚಾಲನೆ ದೊರೆಯಿತು. ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಸೈನಿಕ ಶಾಲೆ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಸೈನಿಕ ಶಾಲೆ ಅಮರಾವತಿನಗರ(ತಮಿಳುನಾಡು), ಸೈನಿಕ ಶಾಲೆ ಕಲಿಕಿರಿ(ಆಂಧ್ರಪ್ರದೇಶ), ಸೈನಿಕ ಶಾಲೆ ಕಝಕೂಟಂ(ಕೇರಳ), ಮಧುರೈನ ವಲ್ಲಭ ವಿದ್ಯಾಲಯ (ತಮಿಳುನಾಡು), ಮತ್ತು ಟ್ಯೂಟಿಕೋರಿನ್ ನ ವಿಕಾಸ ಶಾಲೆ (ತಮಿಳುನಾಡು) ತಂಡಗಳನ್ನು ಹಾಗೂ ಆತಿಥೇಯ ಶಾಲೆಯ ತಂಡವನ್ನು ಸ್ವಾಗತಿಸಿದರು. ತಂಡದ ಕೆಲಸ, ನಾಯಕತ್ವ ಮತ್ತು ಸ್ಥಿತಿಸ್ಥಾಪಕತ್ವವನ್ನು ಬೆಳೆಸುವಲ್ಲಿ ಕ್ರೀಡೆಗಳ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ಫುಟ್‌ಬಾಲ್ ಕ್ರೀಡೆಯು ಸಮನ್ವಯತೆ, ನಂಬಿಕೆ ಮತ್ತು ಸಾಂಘಿಕ ಹೋರಾಟದ ಗುಣಗಳನ್ನು ಕಲಿಸುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಪ್ರಾಮಾಣಿಕತೆಯಿಂದ ಸ್ಪರ್ಧಿಸಲು ಮತ್ತು ಕ್ರೀಡಾ ಮನೋಭಾವದ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಕರೆ ನೀಡಿದರು. ವಿದ್ಯಾರ್ಥಿಗಳಿಂದ ಪ್ರದರ್ಶಿಸಲ್ಪಟ್ಟ ಪಥಸಂಚಲನ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಶ್ಲಾಘಿಸಿದ ಅವರು, ಸಂಘಟನಾ ತಂಡದ ಪ್ರಯತ್ನಗಳನ್ನು…
ಮಡಿಕೇರಿ NEWS DESK ಏ.20 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.21 ರ ಪಂದ್ಯಗಳು. *ಮೈದಾನ 1* ಬೆಳಿಗ್ಗೆ 8 ಗಂಟೆಗೆ ಪುದಿಯೊಕ್ಕಡ ಮತ್ತು ಕಲಿಯಂಡ, 9ಕ್ಕೆ ತೆಕ್ಕಡ ಮತ್ತು ಕರಿನೆರವಂಡ, 10ಕ್ಕೆ ನಂದಿನೆರವoಡ ಮತ್ತು ಮಂದತoಡ, 11ಕ್ಕೆ ಕಂಬೀರoಡ ಮತ್ತು ಅಮ್ಮಾಟಂಡ, ಮಧ್ಯಾಹ್ನ 12ಕ್ಕೆ ನಂದೀರ ಮತ್ತು ದಾಸಂಡ, 1ಕ್ಕೆ ಬೊಟ್ಟಂಗಡ ಮತ್ತು ಕಾಂಡೇರ ಹಾಗೂ 2 ಗಂಟೆಗೆ ಕಾನತಂಡ ಮತ್ತು ಬೊಳಕಾರಂಡ (ಕುಂಜಲಗೇರಿ) *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಚೊಟ್ಟೆಯಂಡಮಾಡ ಮತ್ತು ಪಾಲಂದಿರ, 10ಕ್ಕೆ ಮೊಣ್ಣಂಡ ಮತ್ತು ಅಳಮೇಂಗಡ, 11ಕ್ಕೆ ಮುಂಡoಡ ಮತ್ತು ಅಜ್ಜಿಕುಟ್ಟಿರ, ಮಧ್ಯಾಹ್ನ 12.30ಕ್ಕೆ ಹಂಚೆಟ್ಟಿರ ಮತ್ತು ಕೈಬಿಲಿರ ಹಾಗೂ 2 ಗಂಟೆಗೆ ಚಾಮೆರ ಮತ್ತು ಅಜ್ಜೆಟ್ಟಿರ *ಮೈದಾನ 3* *ಮಹಿಳಾ ಕ್ರಿಕೆಟ್* ಬೆಳಿಗ್ಗೆ 10 ಗಂಟೆಗೆ ಮೇರಿಯಂಡ ಮತ್ತು ಕಲಿಯಂಡ, 11ಕ್ಕೆ ಮೂಕಳೇರ ಮತ್ತು ಮುಕ್ಕಾಟಿರ (ಪುಲಿಕೋಟ್), ಮಧ್ಯಾಹ್ನ…
ಮಡಿಕೇರಿ NEWS DESK ಏ.20 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.20 ರಂದು ಗೆಲುವು ಸಾಧಿಸಿದ ತಂಡಗಳು. *ಮೈದಾನ 1* (ಲಾಲು ಮುದ್ದಯ್ಯ ಮೈದಾನ) ಮಾಳೇಟಿರ (ಕೆದಮುಳ್ಳೂರು) ಮತ್ತು ಕೊಡಂದೇರ ತಂಡಗಳ ನಡುವಿನ ಪಂದ್ಯದಲ್ಲಿ ಮಾಳೇಟಿರ ತಂಡಕ್ಕೆ 148 ರನ್ ಗಳ ಭರ್ಜರಿ ಗೆಲುವು ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಾಳೇಟಿರ 6 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ ದಾಖಲೆಯ 190 ರನ್ ಗಳನ್ನು ಸೇರಿಸಿತು. ಕೊಡಂದೇರ 6 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 42 ರನ್ ಗಳನ್ನಷ್ಟೇ ಗಳಿಸಿ ಸೋಲು ಅನುಭವಿಸಿತು. ತಂಬುಕುತ್ತೀರ ಮತ್ತು ಚೇಂದoಡ ನಡುವಿನ ಪಂದ್ಯದಲ್ಲಿ ತಂಬುಕುತ್ತೀರ ತಂಡಕ್ಕೆ 49 ರನ್ ಗಳ ದೊರೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತಂಬುಕುತ್ತೀರ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 111 ರನ್ ಗಳನ್ನು ಗಳಿಸಿತು. ಚೇಂದoಡ 6 ಓವರ್‌ಗಳಲ್ಲಿ…
ಮಡಿಕೇರಿ ಏ.20 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.21 ರ ಪಂದ್ಯಗಳು *ಮೈದಾನ 1* ಬೆಳಿಗ್ಗೆ 8 ಗಂಟೆಗೆ ಪುದಿಯೊಕ್ಕಡ ಮತ್ತು ಕಲಿಯಂಡ, 9ಕ್ಕೆ ತೆಕ್ಕಡ ಮತ್ತು ಕರಿನೆರವಂಡ, 10ಕ್ಕೆ ನಂದಿನೆರವಂಡ ಮತ್ತು ಮಂದತಂಡ, 11ಕ್ಕೆ ಕಂಬೀರಂಡ ಮತ್ತು ಅಮ್ಮಾಟಂಡ, ಮಧ್ಯಾಹ್ನ 12ಕ್ಕೆ ನಂದೀರ ಮತ್ತು ದಾಸಂಡ, 1ಕ್ಕೆ ಬೊಟ್ಟಂಗಡ ಮತ್ತು ಕಾಂಡೇರ ಹಾಗೂ 2 ಗಂಟೆಗೆ ಕಾನತಂಡ ಮತ್ತು ಬೊಳಕಾರಂಡ (ಕುಂಜಲಗೇರಿ) *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಚೊಟ್ಟೆಯಂಡಮಾಡ ಮತ್ತು ಪಾಲಂದಿರ, 10ಕ್ಕೆ ಮೊಣ್ಣಂಡ ಮತ್ತು ಅಳಮೇಂಗಡ, 11ಕ್ಕೆ ಮುಂಡಂಡ ಮತ್ತು ಅಜ್ಜಿಕುಟ್ಟಿರ, ಮಧ್ಯಾಹ್ನ 12.30ಕ್ಕೆ ಹಂಚೆಟ್ಟಿರ ಮತ್ತು ಕೈಬಿಲಿರ ಹಾಗೂ 2 ಗಂಟೆಗೆ ಚಾಮೆರ ಮತ್ತು ಅಜ್ಜೆಟ್ಟಿರ *ಮೈದಾನ 3* *ಮಹಿಳಾ ಕ್ರಿಕೆಟ್* ಬೆಳಿಗ್ಗೆ 10 ಗಂಟೆಗೆ ಮೇರಿಯಂಡ ಮತ್ತು ಕಲಿಯಂಡ, 11ಕ್ಕೆ ಮೂಕಳೇರ ಮತ್ತು ಮುಕ್ಕಾಟಿರ (ಪುಲಿಕೋಟ್), ಮಧ್ಯಾಹ್ನ…






