ಲೇಖಕ: admin

ಮಡಿಕೇರಿ ಜ.19 :  ಮೇಯಲು ಬಿಟ್ಟಿದ್ದ ಹಸುವೊಂದು ಹುಲಿದಾಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆ ತಾಲೂಕಿನ  ಗರ್ವಾಲೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ  ಪುದಿಯತಂಡ ಮೊಣ್ಣಯ್ಯ  ಅವರಿಗೆ ಸೇರಿದ ಸಿಂಧಿ ತಳಿಯ ಹಸುವನ್ನು  ಎಂದಿನಂತೆ ಗದ್ದೆಯಲ್ಲಿ ಮೇಯಲು  ಬಿಟ್ಟಿದ್ದರು. ಆದರೆ, ಹಸು ಸಂಜೆಯಾದರು ಕೊಟ್ಟಿಗೆಗೆ  ಹಿಂದಿರುಗಿರಲಿಲ್ಲ. ಮರುದಿನ ಹಸುವಿಗಾಗಿ ಹುಡುಕಾಟ ನಡೆಸಿದಾಗ,  ಹಸುವನ್ನು ಕಟ್ಟಿದ ಜಾಗದಿಂದ ಸುಮಾರು 300 ಮೀಟರ್ ದೂರದಲ್ಲಿ  ಹಸುವಿನ ಕಳೆಬರ ಪತ್ತೆಯಾಗಿದೆ. ಹುಲಿಯನ್ನು ಸೆರೆಹಿಡಿದು ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Read More

ಮಡಿಕೇರಿ ಜ.19 :  ವಜ್ರಕಾಯ’ ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ ಕೊಡಗು ಮೂಲದ ನಟಿ ಶುಭ್ರ ಅಯ್ಯಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಉದ್ಯಮಿ ವಿಶಾಲ್ ಶಿವಪ್ಪ ಜೊತೆ ಕೊಡಗಿನಲ್ಲಿ  ಸಪ್ತಪದಿ ತುಳಿದಿದ್ದಾರೆ. 2014ರಿಂದ ಚಿತ್ರರಂಗದಲ್ಲಿ  ಆ್ಯಕ್ಟೀವ್ ಆಗಿದ್ದ  ಶುಭ್ರ ಅಯ್ಯಪ್ಪ ಕಳೆದ ವರ್ಷ ತೆರೆಗೆ ಬಂದ ‘ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ’ ಚಿತ್ರದಲ್ಲಿ ನಟಿಸಿದ್ದರು. ಸದ್ಯ ಶುಭ್ರಾ ಅವರು ‘ರಾಮನ ಅವತಾರ’ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ.  ಈಗ ಸಿನಿಮಾ ಕೆಲಸಗಳಿಗೆ ಬ್ರೇಕ್  ನೀಡಿದ್ದಾರೆ.

Read More

ಮಡಿಕೇರಿ ಜ.19 : ಕಡಂಗ ಕೊಕ್ಕಂಡಬಾಣೆ  ದರ್ಗಾದಲ್ಲಿ  ವಾರ್ಷಿಕವಾಗಿ ಆಚರಿಸಿಕೊಂಡು ಬರುತ್ತಿರುವ  ಉರೂಸ್ ಜ.20 ರಂದು  ನಡೆಯಲಿದೆ. ಅಂದು ಮಧ್ಯಾಹ್ನ   ಜುಮ ನಮಾಜ್ ಬಳಿಕ ಸಲಿಮ್ ಫೈಜಿ ಉಸ್ತದರ ಮತ್ತು ಆಡಳಿತ ಮಂಡಳಿಯ ಸಮ್ಮುಖದಲ್ಲಿ ಉದ್ಘಾಟನೆಗೊಳ್ಳಲಿದ್ದು,  ರಾತ್ರಿ 8 ಗಂಟೆಗೆ ಸೈಯದ್ ಸಫ್ವಾನ್  ಪ್ರಾರ್ಥನೆಯ ಮುಖಾಂತರ 4 ದಿನಗಳ ಮತ ಪ್ರವಚನ ಕಾರ್ಯ ಕ್ಕೆ ಉರೂಸ್‍ಗೆ ಚಾಲನೆ ದೊರೆಯಲಿದೆ. ಐದು ದಿನಗಳಲ್ಲಿ ನಡೆಯುವ ಉರುಸ್ ಕಾರ್ಯಕ್ರಮದಲ್ಲಿ ಸೋಮವಾರ ಮತ್ತು ಮಂಗಳವಾರ ಸಂಜೆ ನಾಲ್ಕು ಗಂಟೆಗೆ ಸಾರ್ವಜನಿಕವಾಗಿ ಅನ್ನದಾನ  ನಡೆಯಲಿದೆ. ವರದಿ : ನೌಫಲ್ ಕಡಂಗ    

Read More

ಮಡಿಕೇರಿ ಜ.19 : ತನ್ನ ಕಿರಿಯ ವಯಸ್ಸಿನಲ್ಲಿ ಸಾಧನೆಯ ಹಾದಿ ಹಿಡಿದಿರುವ ಪುಟಾಣಿ ದೀಕ್ಷಾ ಹಲವಾರು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ಈಕೆ ಕೂರ್ಗ್ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್ ಶಿಪ್‍ನ ನೃತ್ಯ ಸ್ಪರ್ಧೆಯಲ್ಲಿ ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ಪ್ರಥಮ ಬಹುಮಾನ, ಗೋಣಿಕೊಪ್ಪಲಿನ ಶ್ರೀ ಕಾವೇರಿ ದಸರಾ ಸಮಿತಿ ಆಯೋಜಿಸಿದ ಛದ್ಮವೇಶ ಸ್ಪರ್ಧೆಯಲ್ಲಿ ತೃತೀಯ ಹಾಗೂ ಕೊಡಗು ಜಿಲ್ಲಾ ಘಟಕ ಆಯೋಜಿಸಿದ ಸಮರ್ಥ ಕನ್ನಡಿಗರು ಕನ್ನಡ ಹಬ್ಬದ ಛದ್ಮವೇಶ ಸ್ಪರ್ಧೆಯಲ್ಲಿ ಪ್ರಥಮ, ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಬೆಳ್ಳಿ ಮಹೋತ್ಸವದ ಅಂಗವಾಗಿ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿರುವ ದೀಕ್ಷಾ, ಮುಳಿಯ ಜ್ಯುವೆಲರ್ಸ್ ಅವರು ಏರ್ಪಡಿಸಿದ ಛದ್ಮವೇಶ ಸ್ಪರ್ಧೆಯಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ. ಸೂಪರ್ ಕಿಡ್ಸ್ ಚಾನೆಲ್ – ವಾವ್ ಸಿನಿಮಾ ಚಾನೆಲ್ ಆಯೋಜಿಸಿದ ವಾವ್ ಕೊಡಗು ಟ್ಯಾಲೆಂಟ್ಸ್ ಚಾಂಪಿಯನ್ ಶಿಪ್‍ನಲ್ಲಿ ಕೊಡಗು ಟ್ಯಾಲೆಂಟ್ ಅವಾರ್ಡ್ ಪಡೆದಿರುತ್ತಾಳೆ. ಅಲ್ಲದೆ ಹಲವಾರು ವೇದಿಕೆಯಲ್ಲಿ ತನ್ನ ಪ್ರತಿಭೆಯನ್ನು ಹೊರಹೊಮ್ಮಿದ್ದಾಳೆ. ಈಕೆ ಬಿಟ್ಟಂಗಾಲದ ನಿವಾಸಿಗಳಾದ ಕೆ.ಎ.ನವೀನ್ ಕುಮಾರ್- ಎ.ಎಸ್.ನಿತ್ಯ…

Read More

ಮಡಿಕೇರಿ ಜ.19 : ಮಡಿಕೇರಿ ತಾಲ್ಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅನಾವರಣಗೊಳಿಸಿದರು. ನಗರದ ಶಾಸಕರ ಕಚೇರಿಯಲ್ಲಿ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಅಂಬೆಕಲ್ ನವೀನ್, ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್, ತಾಲ್ಲೂಕು ಗೌರವ ಕಾರ್ಯದರ್ಶಿ ಕಡ್ಲೆರ ತುಳಸಿ ಮೋಹನ್, ನಿರ್ದೇಶಕಿ ಪ್ರೇಮ ರಾಘವಯ್ಯ ಮತ್ತಿತರರು ಉಪಸ್ಥಿತರಿದ್ದರು. ಬೆಟ್ಟಗೇರಿಯ ಉದಯ ಪ್ರೌಢಶಾಲೆಯ ಸಭಾಂಗಣದಲ್ಲಿ ಜ.28 ರಂದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

Read More

ಮಡಿಕೇರಿ ಜ.19 : ಭಾರತೀಯ ಜನತಾ ಪಾರ್ಟಿ ಹಾಗೂ ಗ್ರಾಮಾಂತರ ವೃತ್ತಿಪರ ಪ್ರಕೋಷ್ಠದ ವತಿಯಿಂದ ಜ.22 ರಂದು ಮರಗೋಡಿನಲ್ಲಿ ಉಚಿತ ವೈದ್ಯಕೀಯ, ಶಸ್ತ್ರಚಿಕಿತ್ಸಾ ಮತ್ತು ದಂತ ಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ಪ್ರಕೋಷ್ಠದ ಜಿಲ್ಲಾ ಸಂಚಾಲಕ ಮೋಹನ್ ಅಪ್ಪಾಜಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಗೋಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಬೆಳಗ್ಗೆ 10.30 ಗಂಟೆಗೆ ಶಿಬಿರಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು. ಶಿಬಿರದಲ್ಲಿ ಉಚಿತ ವೈದ್ಯಕೀಯ ದಂತ ತಜ್ಞರಿಂದ ಸಲಹೆ ಮತ್ತು ಚಿಕಿತ್ಸೆ ಹಾಗೂ ಸಮಾಲೋಚನೆ, ದಂತ ಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸೆ, ಶ್ರವಣ ತಪಾಸಣಾ ಶಿಬಿರ, ಸಾಮಾನ್ಯ ವೈದ್ಯಕೀಯ ಚಿಕಿತ್ಸೆ, ಮೂತ್ರ ಶಾಸ್ತ್ರಜ್ಞರು ಹಾಗೂ ಸ್ತ್ರೀ ರೋಗ ತಜ್ಞರಿಂದ ಸಮಾಲೋಚನೆ, ಗಂಡು ಮತ್ತು ಹೆಣ್ಣು ಬಂಜೆತನ ಸಲಹೆಗಳು, ಫಲಾನುಭವಿಗಳಿಗೆ ಉಚಿತ ಲ್ಯಾಬ್ ಹಾಗೂ ಶಸ್ತ್ರ ಚಿಕಿತ್ಸೆಗಳು, ಮೂಲ ಔಷಧಿಗಳು, ರೋಗ ನಿರೋಧಕ ಪಾನೀಯ ನೀಡಲಾಗುವುದು…

Read More

ಮಡಿಕೇರಿ ಜ.19 : ಸುಳ್ಯದ ಶ್ರೀ ವೆಂಕಟರಮಣ ಕ್ರ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯ ಎರಡು ನೂತನ ಶಾಖೆಗಳನ್ನು ನಾಪೋಕ್ಲು ಮತ್ತು ಸೋಮವಾರಪೇಟೆಯಲ್ಲಿ ಆರಂಭಿಸಲಾಗುತ್ತಿದೆ ಎಂದು ಸೊಸೈಟಿಯ ಅಧ್ಯಕ್ಷರಾದ ಪಿ.ಸಿ. ಜಯರಾಮ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲುವಿನ ಪೊನ್ನಮ್ಮ ಕಾವೇರಪ್ಪ ಕಾಂಪ್ಲೆಕ್ಸ್‍ನಲ್ಲಿ 18ನೇ ಶಾಖೆಯ ಉದ್ಘಾಟನೆ ಜ.23 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಶಾಖೆಯ ಕಛೇರಿಯನ್ನು ವಿರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಉದ್ಘಾಟಿಸಲಿದ್ದು, ಭದ್ರತಾ ಕೊಠಡಿಯನ್ನು ಮಡಿಕೇರಿಯ ಪ್ರಾಥಮಿಕ ಕೃಷಿ ಪತ್ತಿನ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾದ ಎ.ಕೆ.ಮನು ಮುತ್ತಪ್ಪ, ಗಣಕೀಕರಣ ವ್ಯವಸ್ಥೆಯನ್ನು ಸಹಕಾರ ಸಂಘಗಳ ಉಪನಿಬಂಧಕರಾದ ಕೃಷ್ಣಪ್ರಸಾದ್ ಎಂಎಸ್. ಉದ್ಘಾಟಿಸಲಿದ್ದಾರೆ. ಪ್ರಥಮ ಪಾಲು ಪತ್ರವನ್ನು ನಾಪೋಕ್ಲು ಗ್ರಾಪಂ ಅಧ್ಯಕ್ಷರಾದ ಪಾರ್ವತಿ, ಪ್ರಥಮ ಠೇವಣಿ ಪತ್ರವನ್ನು ಮಡಿಕೇರಿ ಸರ್ವೋದಯ ಸಮಿತಿ ಅಧ್ಯಕ್ಷರಾದ ಕುಶಾಲಪ್ಪ ಗೌಡ ಅಂಬೆಕಲ್ಲು, ಪ್ರಥಮ ಉಳಿತಾಯ ಖಾತೆ ಪತ್ರವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ತುಳಸಿ ಮೋಹನ್ ಕಡ್ಲೇರ ವಿತರಿಸಲಿದ್ದಾರೆ. ಮುಖ್ಯ…

Read More

ಮಡಿಕೇರಿ ಜ.19 : ಬೂತ್ ಮಟ್ಟದಿಂದ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಜ.21 ರಿಂದ 29ರ ವರೆಗೆ ಬೂತ್ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ. ಪ್ರತಿಮನೆಯನ್ನು ಬಿಜೆಪಿ ಮನೆಯನ್ನಾಗಿಸುವುದು ನಮ್ಮ ಗುರಿಯಾಗಿದೆ ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಜೆಪಿ ಕಾರ್ಯಕರ್ತರ ಮನೆ ಮೇಲೆ ಪಕ್ಷದ ಧ್ವಜ ಹಾರಿಸುವ ಮೂಲಕ ಒಂದನೇ ಹಂತದ ಅಭಿಯಾನವನ್ನು ಪೂರ್ಣಗೊಳಿಸಲಾಗಿದೆ. ಎರಡನೇ ಹಂತದ ಅಭಿಯಾನಕ್ಕೆ ಜ.21 ರಂದು ಚಾಲನೆ ದೊರೆಯಲಿದೆ ಎಂದರು. 9 ದಿನಗಳವರೆಗೆ ನಡೆಯಲಿರುವ ಅಭಿಯಾನದಲ್ಲಿ ಒಂದು ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದ್ದು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಸಾಧನೆಗಳನ್ನು 543 ಬೂತ್‍ಗಳಲ್ಲಿಯೂ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲಾಗುವುದು ಎಂದು ತಿಳಿಸಿದರು. ಸರ್ಕಾರದ ಯೋಜನೆಯನ್ನು ಪ್ರತಿಬೂತ್‍ನಲ್ಲಿ 10 ಗೋಡೆ ಬರಹಗಳ ಮೂಲಕ ಗಮನ ಸೆಳೆಯುವುದು, ಎಲ್ಲಾ ಬೂತ್‍ಗಳಲ್ಲಿ ಈಗಾಗಲೇ ವಾಟ್ಸ್‍ಅಪ್ ಗ್ರೂಪ್ ತಯಾರಿಸಿ ಡಿಜಿಟಲ್ ಸಂಪರ್ಕ ಹೊಂದುವುದು, ಮನೆಗಳ ಮೇಲೆ ಮತ್ತು…

Read More

ನಾಪೋಕ್ಲು ಜ.19 : ಉತ್ತಮ ವ್ಯಕ್ತಿತ್ವದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಚೌರೀರ ಜಗತ್ ತಿಮ್ಮಯ್ಯ ಹೇಳಿದರು. ಹೊದವಾಡ ರಾಫಲ್ಸ್ ಇಂಟರ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿಗಳು ಮುಂದೆ ಬರಬೇಕಾದರೆ ಕೇವಲ ಶಿಕ್ಷಣ ಪಡೆದರೆ ಸಾಲದು ಎಲ್ಲಾ ರೀತಿಯ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ದೇಶ-ವಿದೇಶಗಳಲ್ಲಿ ಇಂಗ್ಲಿಷ್ ಭಾಷೆಯ ಅಗತ್ಯವಿದೆ. ಆಳವಾದ ಅಧ್ಯಯನದಿಂದ ಮುಂದೆ ಬರಲು ಸಾಧ್ಯ ಎಂದ ಜಗತ್ ತಿಮ್ಮಯ್ಯ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಜೊತೆಗೆ ಪ್ರತಿಯೊಬ್ಬರು ಧನಾತ್ಮಕ ಚಿಂತನೆ, ಶಿಸ್ತು, ಸಮಯ ಪಾಲನೆ ಇತರ ಮಾತುಗಳನ್ನು ಆಲಿಸುವ ವ್ಯವದಾನವನ್ನು ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಯ ಹಿರಿಯ ವೈದ್ಯ ಅಬ್ದುಲ್ ಅಜೀಜ್, ಖಾಲಿದ್ ಹಾಜಿ ಹಾಕತ್ತೂರು, ಶಿಕ್ಷಕ ಮೆಹಬೂಬ್ ಸಾಬ್ ನಮ್ಮ ಅನಿಸಿಕೆ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.…

Read More

ಮಡಿಕೇರಿ ಜ.19 : ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಕ್ರೀಡಾಕೂಟಗಳು ಸ್ಫೂರ್ತಿ ತುಂಬುತ್ತದೆ ಎಂದು ಕೊಡವ ಟಗ್ ಆಫ್ ವಾರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಅಭಿಪ್ರಾಯಪಟ್ಟರು. ಕೊಡಗು ಪ್ರೆಸ್‍ಕ್ಲಬ್ ಬೆಳ್ಳಿ ಮಹೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಆಯೋಜಿಸಿರುವ ಕೊಡಗು ಪ್ರೆಸ್‍ಕ್ಲಬ್ ಕ್ರಿಕೆಟ್ ಪ್ರಿಮಿಯರ್ ಲೀಗ್- 3ರ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೊನ್ನಂಪೇಟೆ ತಾಲೂಕು ಬೇಗೂರುವಿನ ಕೇವ್ ರಿಟ್ಝ್‍ರೆಸಾಟ್ರ್ನಲ್ಲಿ ಮಾತನಾಡಿದರು. ಐಪಿಎಲ್ ಮಾದರಿಯಲ್ಲಿ ಪಂದ್ಯಾವಳಿ ನಡೆಯುತ್ತಿದೆ ಎನ್ನುವುದಕ್ಕೆ ವಿಶಿಷ್ಟ ರೀತಿಯಲ್ಲಿ ಟ್ರೋಫಿ ಅನಾವರಣ ಮಾಡಿರುವುದೇ ಸಾಕ್ಷಿ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಪಾಲಿಬೆಟ್ಟ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಜನರಲ್ ಸರ್ಜನ್ ಡಾ.ಪಿ.ಎಸ್.ಲೋಹಿತ್ ಮಾತನಾಡಿ ಕೌಟುಂಬಿಕ ಚೌಕಟ್ಟಿನೊಳಗೆ ಬದುಕುವುದರ ಜೊತೆಗೆ ಸಮಾಜಕ್ಕೆ ತುಡಿಯುವ ಪತ್ರಕರ್ತರ ಸೇವೆ ಅಭಿನಂದನಾರ್ಹ ಎಂದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್ ಸವಿತಾರೈ ಮಾತನಾಡಿ, ಕೊಡಗು ಪ್ರೆಸ್‍ಕ್ಲಬ್ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿಯ ಕ್ರಿಕೆಟ್ ಪಂದ್ಯಾವಳಿ ಜಿಲ್ಲೆಯಲಿ ದೊಡ್ಡ…

Read More