ಮಡಿಕೇರಿ ಫೆ.10 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಗ್ರಂಥಾಲಯ ವಿಭಾಗ ವತಿಯಿಂದ ಕರ್ನಾಟಕ ಆರೋಗ್ಯ ವಿಜ್ಞಾನಗಳ ಗ್ರಂಥಾಲಯಗಳ ಸಂಘ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿರುವ 14 ನೇ ‘ರಾಷ್ಟ್ರೀಯ ಗ್ರಂಥಾಲಯ ಸಮ್ಮೇಳನ’ಕ್ಕೆ ಗಣ್ಯರಿಂದ ಚಾಲನೆ ದೊರೆಯಿತು. ಈ ಬಾರಿ ಗ್ರಂಥಪಾಲಕರು ಮತ್ತು ವೈದ್ಯರಿಗೆ ಆರೋಗ್ಯ ವಿಜ್ಞಾನದ ಮಾಹಿತಿ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ವಿಶ್ರಾಂತಿ ಕುಲಪತಿಗಳಾದ ಡಾ.ಟಿ.ಡಿ.ಕೆಂಪರಾಜು ಅವರು ಮಾತನಾಡಿ ಭಾರತವನ್ನು ಜ್ಞಾನ ಸಮಾಜವಾಗಿ, ಗ್ರಂಥಾಲಯಗಳಾಗಿ ಪರಿವರ್ತಿಸುವುದು ದೃಷ್ಟಿಯಾಗಿದೆ. ಆ ನಿಟ್ಟಿನಲ್ಲಿ ಆಧುನಿಕ ದಿನಗಳಲ್ಲಿ ಗ್ರಂಥಾಲಯಗಳು ತಮ್ಮ ಕಾರ್ಯಕ್ರಮ, ಕಾರ್ಯವಿಧಾನಗಳು, ಉಪಕರಣಗಳು ಮತ್ತು ತಂತ್ರಗಳನ್ನು ವಿವಿಧ ಗ್ರಂಥಾಲಯದ ಕೆಲಸಗಳು ಮತ್ತು ಸೇವೆಗಳಲ್ಲಿ ಮರು ವಿನ್ಯಾಸಗೊಳಿಸುವ ಅಗತ್ಯವಿದೆ ಎಂದರು. ಸ್ಮಾರ್ಟ್ ಟೆಕ್ನಾಲಜೀಸ್‍ನ ಹೊರಹೊಮ್ಮುವಿಕೆ, ಮಾಹಿತಿ ಸಂಪನ್ಮೂಲಗಳ ಹೊಸ ಸ್ವರೂಪ, ಡಿಜಿಟಲ್ ಸಂಪನ್ಮೂಲಗಳ ತೀವ್ರ ಬಳಕೆ ಮತ್ತು ನವೀನ ತಂತ್ರಜ್ಞಾನಗಳು ಮತ್ತು…
ಲೇಖಕ: admin
ವಿರಾಜಪೇಟೆ ಫೆ.9 : ಎರಡು ಶತಮಾನಕ್ಕು ಹೆಚ್ಚಿನ ಇತಿಹಾಸವನ್ನು ಹೊಂದಿರುವ ಪಟ್ಟಣ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕ ಮಹೋತ್ಸವ ಹಾಗೂ ಲೂರ್ದು ಮಾತೆಯ ಉತ್ಸವವು ಫೆ.11 ರಂದು ಶ್ರದ್ಧಾಭಕ್ತಿಯಿಂದ ನಡೆಯಲಿದೆ. ಉತ್ಸವಕ್ಕೆ ಸಂತ ಅನ್ನಮ್ಮ ಚರ್ಚ್‍ನ ಪ್ರಧಾನ ಧರ್ಮಗುರುಗಳಾದ ಡಾ.ದಯಾನಂದ ಪ್ರಭು ಅವರ ನೇತೃತ್ವದಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಹಾಸನದ ಸಂತ ಅಂತೋಣಿ ಧರ್ಮಕೇಂದ್ರದ ಧರ್ಮಗುರು ಪ್ಯಾಟ್ರಿಕ್ ಜೊವಾನ್ನೆಸ್ ಅವರು ಉತ್ಸವದ ಅಂಗವಾಗಿ ನಡೆಯಲಿರುವ ಆಡಂಭರ ಗಾಯನ ಬಲಿಪೂಜೆಯನ್ನು ನೆರವೇರಿಸಿಕೊಡಲಿದ್ದಾರೆ. ಪ್ರಧಾನ ಪೂಜೆಯ ಬಳಿಕ ಸಾಹಿತಿ ಹಾಗೂ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾದ ಡಾ.ದಯಾನಂದ ಪ್ರಭು ಅವರ ‘ಧ್ಯಾನ ಸಂಗಮ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಬಳಿಕ ವಿದ್ಯುತ್ ದೀಪಾಲಂಕೃತ ತೇರಿನ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ರಾತ್ರಿ ಚರ್ಚ್‍ನಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ. ವಾರ್ಷಿಕ ಉತ್ಸವದಲ್ಲಿ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ಧರ್ಮಗುರು ಐಸಾಕ್ ರತ್ನಾಕರ್, ಧರ್ಮಗುರು ಯೇಸು ಪ್ರಸಾದ್ ಸೇರಿದಂತೆ ವಿವಿಧೆಡೆಯ ಧರ್ಮಗುರುಗಳು ಭಾಗವಹಿಸಲಿದ್ದಾರೆ.
ಕುಶಾಲನಗರ ಫೆ.10: ಕುಶಾಲನಗರ ಸಮೀಪದ ಬೈಲುಕುಪ್ಪೆಯ ಟಿಬೇಟಿಯನ್ ನಿರಾಶ್ರಿತ ಶಿಬಿರದಲ್ಲಿ ಫೆ.23 ರಿಂದ ಒಂದು ವಾರಗಳಕಾಲ ಟಿಬೇಟಿಯನ್ ಉತ್ಸವ ನಡೆಯಲಿದೆ ಎಂದು ಟಿಬೇಟನ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ತಶಿ ವುಂಗ್ಡು ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಟಿಬೇಟಿಯನ್ ಸಂಸ್ಕೃತಿ ಮತ್ತು ಪರಂಪರೆಯ ವಾರದ ಆಚರಣೆಯು ವರ್ಣರಂಜಿತವಾಗಿರಲಿದೆ ಎಂದು ತಿಳಿಸಿದರು. ಉತ್ಸವವು ಸಾಂಪ್ರದಾಯಿಕ ಸಂಗೀತ ಮತ್ತು ನೃತ್ಯ, ಮರಳು ಮಂಡಲದ ಲೈವ್ ರಚನೆ, ಕಾರ್ಪೆಟ್ ನೇಯ್ಗೆ ಮತ್ತು ಟಿಬೇಟಿಯನ್ ಚಿತ್ರಕಲೆ, ಟಿಬೇಟಿಯನ್ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ರುಚಿಕರವಾದ ಟಿಬೆಟಿಯನ್ ಪಾಕ ಪದ್ಧತಿ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಉತ್ಸವದಲ್ಲಿ ಪ್ರದರ್ಶಿಸಲಾಗುವುದು ಹಾಗೂ ಟಿಬೆಟ್ ವೈದ್ಯಕೀಯ ಶಿಬಿರ ಮತ್ತು ಸಾಂಪ್ರದಾಯಿಕ ಟಿಬೇಟಿಯನ್ ಕ್ರೀಡೆಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶವಿದೆ. ಮನರಂಜನೆಯ ಜೊತೆಗೆ, ಉತ್ಸವವು ಟಿಬೇಟಿಯನ್ ಬೌದ್ಧಧರ್ಮ, ಟಿಬೇಟಿಯನ್ ಮೆಡಿಸಿನ್, ವಿಶಿಷ್ಟಚಿತ್ರಕಲೆ ಮತ್ತು ಟಿಬೆಟ್ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಕುರಿತು ಸಂವಾದ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗುತ್ತದೆ ಎಂದರು. ಉತ್ಸವ ಸಂದರ್ಭ ಮ್ಯಾಜಿಕ್…
ಮಡಿಕೇರಿ ಫೆ.10 : ಹಿರಿಯ ರಾಜಕಾರಣಿ, ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಟಿ.ಜಾನ್ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘದ ಅಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು ಹಾಗೂ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜಿ.ಪೀಟರ್ ಸಂತಾಪ ಸೂಚಿಸಿದ್ದಾರೆ.
ಮಡಿಕೇರಿ ಡಿ.10 : ನಿಟ್ಟೂರು ಗ್ರಾ.ಪಂ ವಾರ್ಡ್ ಸಂಖ್ಯೆ 1 ರ ಸದಸ್ಯ ಸಾಸು ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ತಟ್ಟಕೆರೆ ಹಾಡಿ ನಿವಾಸಿ ಜೆ.ಕೆ.ಅಯ್ಯಪ್ಪ ನಾಮಪತ್ರ ಸಲ್ಲಿಸಿದರು. ನಾಪಪತ್ರ ಸಲ್ಲಿಸುವಾಗ ಅಯ್ಯಪ್ಪ ಅವರೊಂದಿಗೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಮತ್ತು ನಿಟ್ಟೂರು ಗ್ರಾ.ಪಂ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ಬಿಜೆಪಿ ಶಕ್ತಿ ಕೇಂದ್ರದ ಸಹ ಪ್ರಮುಖ ಅಳಮೇಂಗಡ ಸುರೇಶ, ಬಿಜೆಪಿ ಬೂತ್ ಅಧ್ಯಕ್ಷರುಗಳಾದ ಕಾಯಮಡ ರಾಜ, ಅಳಮೇಂಗಡ ಮೋಹನ್, ರಾಜ್ಯ ಬಿಜೆಪಿ ಕೃಷಿ ಮಹೋರ್ಚದ ನಿರ್ದೇಶಕಿ ಮಾಪಂಗಡ ಯಮುನಾ ಚಂಗಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷ ಚಕ್ಕೇರ ಅಯ್ಯಪ್ಪ, ಮಾಜಿ ಉಪಾಧ್ಯಕ್ಷೆ ಪಡಿಞರಂಡ ಕವಿತಾ ಪ್ರಭು, ಸದಸ್ಯರಾದ ಅಮ್ಮಣಿ, ತಟ್ಟಕೆರೆ ಹಾಡಿ ಪ್ರಮುಖರಾದ ದಾಸಪ್ಪ, ಪಕ್ಷದ ಪ್ರಮುಖರಾದ ಅಳಮೇಂಗಡ ಬೋಸ್ ಮಂದಣ್ಣ, ಸತೀಶ್ ತಟ್ಟಕೆರೆ ಮತ್ತು ಹಿಂದುಪರ ಸಂಘಟನೆಯ ಕಾರ್ಯಕರ್ತ ಶ್ರೀನಿವಾಸ್ ಮತ್ತು ಹಿತೈಷಿಗಳು ಹಾಜರಿದ್ದರು.
ಮಡಿಕೇರಿ ಫೆ.10 : ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಮಡಿಕೇರಿ ಉಪವಲಯ ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಖಚಿತ ಮಾಹಿತಿಯ ಹಿನ್ನೆಲೆ ಮೇಕೇರಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳು ಕಾರು ಸಹಿತ ಸುಮಾರು 3 ಲಕ್ಷ ರೂ.ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬoಧಿಸಿದoತೆ ಅರ‍್ವತ್ತೋಕ್ಲು ಗ್ರಾಮದ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಡಿಕೇರಿ ವಿಭಾಗದ ಡಿಸಿಎಫ್ ಎ.ಟಿ.ಪೂವಯ್ಯ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಮೋಷಿನ್ ಬಾಷಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಗಳಾದ ಬಾಬು ರಾಥೋಡ್, ಮಲ್ಲಯ್ಯ ಹಿರೇಮಠ, ಗಸ್ತು ಅರಣ್ಯ ಪಾಲಕರಾದ ಭವ್ಯ ಯತೀಶ್ ಅರಣ್ಯ ವೀಕ್ಷಕ ವಾಸುದೇವ, ವಾಹನ ಚಾಲಕರಾದ ಸಂಜು, ಮೋಹನ್, ಕುಶ ಮತ್ತಿತರ ಅರಣ್ಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಮಡಿಕೇರಿ ಫೆ.10 : ಭಾರತ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಆಗಿ ಕೊಡಗಿನವರಾದ ಚೇನಂಡ ಎ.ವಿಶು ಕುಟ್ಟಪ್ಪ ಅವರು ಮತ್ತೊಮ್ಮೆ ನೇಮಕಗೊಂಡಿದ್ದಾರೆ. ಪ್ರತಿಷ್ಠಿತವಾದ ದ್ರೋಣಾಚಾರ್ಯ ಪ್ರಶಸ್ತಿ ವಿಜೇತರೂ ಆಗಿರುವ ಕುಟ್ಟಪ್ಪ ಅವರು ಭಾರತೀಯ ಬಾಕ್ಸಿಂಗ್ ತಂಡದ ಈ ಮಹತ್ವದ ಜವಾಬ್ದಾರಿಗೆ ಎರಡನೇ ಬಾರಿಗೆ ನಿಯುಕ್ತಿಗೊಂಡಿದ್ದು, ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ (ಬಿಎಫ್‍ಐ) ಇದನ್ನು ಪ್ರಕಟಿಸಿದೆ. ಈ ಹಿಂದೆ ಕುಟ್ಟಪ್ಪ ಅವರು 2018 ರಿಂದ 2021ರ ವರೆಗೆ ರಾಷ್ಟ್ರೀಯ ಬಾಕ್ಸಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 2021ರ ಟೋಕಿಯೋ ಒಲಂಪಿಕ್ಸ್ ನಂತರ ಇವರು ಈ ಸ್ಥಾನದಿಂದ ಹೊರಗಿಳಿದಿದ್ದರು. ಇದೀಗ ಹೈಪರ್ ಫಾರ್ಮೆನ್ಸ್ ಡೈರೆಕ್ಟರ್ ಬೆರ್ನಾಡ್‍ಡುನ್ ಸಲಹೆಯ ಆಧಾರದಲ್ಲಿ ಭಾರತೀಯ ಬಾಕ್ಸಿಂಗ್ ಒಕ್ಕೂಟ (ಬಿ.ಎಫ್.ಐ) ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಕುಟ್ಟಪ್ಪ ಅವರು ಮರಳಿ ಬಂದಿದ್ದಾರೆ. ಪ್ರಸ್ತುತ ಕೋಚ್ ಆಗಿದ್ದ ನರೇಂದರ್ ರಾಣಾ ಅವರಿಂದ ಕುಟ್ಟಪ್ಪ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮುಂಬರುವ ವಿಶ್ವ ಚಾಂಪಿಯನ್‍ಶಿಪ್, ಏಷ್ಯನ್ ಗೇಮ್ಸ್ ಸೇರಿದಂತೆ 2024ರ ಪ್ಯಾರಿಸ್ ಒಲಂಪಿಕ್ಸ್ ತನಕವೂ ಕುಟ್ಟಪ್ಪ ಅವರು…
ಮಡಿಕೇರಿ ಫೆ.10 : ಹಿರಿಯ ರಾಜಕಾರಣಿ, ಕಾಂಗ್ರೆಸ್ ಮುಖಂಡ, ಕೊಡುಗೈ ದಾನಿ ಮಾಜಿ ಸಚಿವ ಟಿ.ಜಾನ್ (92) ಅವರು ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಮೂಲತಃ ಕೇರಳದವರಾದ ಟಿ.ಜಾನ್, ಕೊಡಗಿಗೆ ಬಂದು ಶ್ರಮಿಕ ಜೀವಿಯಾಗಿ ದುಡಿದರು, ಉದ್ಯಮಿಯಾಗಿ ಬೆಳೆದರು. ಶಿಕ್ಷಣ ಸಂಸ್ಥೆಗಳು ಮತ್ತು ರೆಸಾರ್ಟ್ ಗಳನ್ನು ಆರಂಭಿಸಿ ಯಶಸ್ಸು ಕಂಡರು. ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಅಬಕಾರಿ ಉದ್ಯಮದ ಮೂಲಕ ಹೆಸರು ಮಾಡಿದ್ದರು. ಕಷ್ಟ ಹೇಳಿಕೊಂಡು ಯಾರೇ ಹೋದರೂ ಸಹಾಯಹಸ್ತ ಚಾಚುತ್ತಿದ್ದ ಟಿ.ಜಾನ್ ಅವರು ಕೊಡುಗೈ ದಾನಿಯೆಂದೇ ಖ್ಯಾತರಾಗಿದ್ದರು. ಶನಿವಾರ ಬೆಂಗಳೂರಿನಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ. ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಟಿ.ಜಾನ್ ಅಗಲಿದ್ದಾರೆ. ::: ಸಂತಾಪ ::: ಟಿ.ಜಾನ್ ಅವರ ನಿಧನಕ್ಕೆ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜಿ.ಪೀಟರ್ ಸಂತಾಪ ಸೂಚಿಸಿದ್ದಾರೆ.
ಮಡಿಕೇರಿ ಫೆ.9 : ಬಿಜೆಪಿ ಸರ್ಕಾರ ಜನರ ಬೇಡಿಕೆಗೆ ಭಾವನತ್ಮಕಾವಾಗಿ ಸ್ಪಂದಿಸುತ್ತಿದೆ, ರಾಜ್ಯ ಪ್ರಗತಿಯೆಡೆಗೆ ಸಾಗುತ್ತಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ ಬೋಪಯ್ಯ ತಿಳಿಸಿದ್ದಾರೆ. ಬಿ.ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯ ಕೊಂಗಣ ಒಡಿಬೈಲು ಕಾಲೋನಿಯಲ್ಲಿ ಕಾವೇರಿ ನಿರಾವರಿ ನಿಗಮದ ರೂ.68 ಲಕ್ಷ ಅನುದಾನದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಸರ್ಕಾರ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೊಳಿಸಿ ಸಮರ್ಪಕವಾಗಿ ನಿರ್ವಹಿಸಿದೆ. ಎಂದು ಹೇಳಿದರು. ಬಲಿಷ್ಠ ಭಾರತ ನಿರ್ಮಾಣಕ್ಕೆ ಬಿಜೆಪಿಗೆ ಆಶೀರ್ವಾದ ಮಾಡಬೇಕು. ದೇಶ ಇಂದು ಪ್ರಗತಿಯಲ್ಲಿ ಪ್ರಪಂಚದಲ್ಲಿಯೇ 5ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಭಾರತ ನಿಲ್ಲಲು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಬೋಪಯ್ಯ ಕರೆ ನೀಡಿದರು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.
ಮಡಿಕೇರಿ ಫೆ.9 : ಮಡಿಕೇರಿಯಿಂದ ಮೇಕೇರಿ ಮೂಲಕ ವಿರಾಜಪೇಟೆಗೆ ಹಾದು ಹೋಗುವ ಹೆದ್ದಾರಿ ಬದಿಯಲ್ಲಿ ಪ್ರತಿನಿತ್ಯ ಕಸದ ರಾಶಿ ಕಂಡು ಬರುತ್ತಿತ್ತು. ಇದರಿಂದ ಎಚ್ಚೆತ್ತುಕೊಂಡ ಮಡಿಕೇರಿ ನಗರಸಭೆ ಕಸ ವಿಲೇವಾರಿಗೊಳಿಸಿ, ಕಸ ಹಾಕಿದವರನ್ನು ಪತ್ತೆ ಹಚ್ಚಿ ದಂಡ ವಿಧಿಸಿದೆ. ಚೀಲ ಮತ್ತು ಬಾಕ್ಸ್ಗಳಲ್ಲಿ ತ್ಯಾಜ್ಯ ತುಂಬಿಕೊoಡು ವಾಹನಗಳಲ್ಲಿ ತಂದು ರಸ್ತೆಯ ಬದಿಯಲ್ಲೇ ಕಸ ಸುರಿಯಲಾಗುತ್ತಿತ್ತು. ಮೆಡಿಕಲ್ ತ್ಯಾಜ್ಯ, ಮಾಂಸದ ಅಂಗಡಿಯ ತ್ಯಾಜ್ಯ, ಹೊಟೇಲ್‌ನ ಹಳಸಿದ ಆಹಾರ, ಪ್ಲಾಸ್ಟಿಕ್, ತಿಂಡಿ ಪೊಟ್ಟಣಗಳು, ಹಳೇ ಬಟ್ಟೆಗಳು ಸೇರಿದಂತೆ ಹಲವು ಬಗೆಯ ತ್ಯಾಜ್ಯ ಇಲ್ಲಿ ಪ್ರತಿನಿತ್ಯ ಕಂಡು ಬರುತ್ತಿತ್ತು. ಗುರುವಾರ ಬೆಳಗ್ಗೆ 8 ಗಂಟೆಯಿAದಲೇ ನಗರಸಭೆಯ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ರಸ್ತೆ ಬದಿಯ ತ್ಯಾಜ್ಯವನ್ನು ಶುಚಿಗೊಳಿಸಿ ಟ್ರಾö್ಯಕ್ಟ್ಟರ್ ಮೂಲಕ ವಿಲೇವಾರಿಗೊಳಿಸಿದರು. ಕೆಲವು ಕಸ ಚೀಲಗಳಲ್ಲಿ ಇದ್ದ ಅಂಗಡಿ ಬಿಲ್, ವಿದ್ಯುತ್ ಬಿಲ್, ಆನ್‌ಲೈನ್ ಆರ್ಡರ್‌ಗಳ ರಶೀದಿ, ಕೆಲ ಹೋಂಸ್ಟೇಗಳಿಗೆ ಸೇರಿದ ವಿಸಿಟಿಂಗ್ ಕಾರ್ಡ್ಗಳು, ಬಿಲ್ ಬುಕ್‌ಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನಾಧರಿಸಿ ಕಸ ಹಾಕುತ್ತಿದ್ದವರನ್ನು ಪತ್ತೆ…






