ಮಡಿಕೇರಿ ಜ.1 : ಪ್ರಶಸ್ತಿ ವಿಜೇತ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ “ನಾಡ ಪೆದ ಆಶಾ” ಕೊಡವ ಚಿತ್ರಕ್ಕೆ ಸೌತ್ ಇಂಡಿಯನ್ ಫಿಲಂ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತ್ತಿದೆ. ಈ ಚಿತ್ರದ ನಟನೆಗಾಗಿ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಹಾಗೂ ನಾಯಕ ನಟ ಬೊಳ್ಳಜಿರ ಬಿ.ಅಯ್ಯಪ್ಪ ಅವರುಗಳಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಫಿಲಂ ಫೆಸ್ಟಿವಲ್ ಗೆ 11,520 ಚಿತ್ರಗಳು ಬಂದಿದ್ದು, ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ 630 ಚಿತ್ರಗಳಲ್ಲಿ “ನಾಡ ಪೆದ ಆಶಾ” ಕೂಡ ಒಂದು. ಚಿತ್ರ ಪ್ರದರ್ಶನಗೊಳ್ಳುವ ಮೂಲಕ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸ್ತ್ರೀ ಪ್ರಧಾನ ಕಥಾವಸ್ತುವಿನ “ನಾಡ ಪೆದ ಆಶಾ” 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡು ಕೊಡಗು ಜಿಲ್ಲೆಯಾದ್ಯಂತ 123 ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ನಡೆದ ಅಂತರರಾಷ್ಟ್ರೀಯ ಚಲಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ “ನಾಡ ಪೆದ ಆಶಾ” ಕೊಡವ ಚಿತ್ರ ಇಲ್ಲಿಯವರೆಗೆ ಒಟ್ಟು 10 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.…
Breaking News
- *ಗೌರಿ–ಗಣೇಶ ಹಬ್ಬ: 2,400 ವಿಶೇಷ ಬಸ್ಗಳ ವ್ಯವಸ್ಥೆ*
- *ಗೌರಿ ಗಣೇಶೋತ್ಸವ : ಕಾನೂನು ಪಾಲನೆಗೆ ಆದ್ಯತೆ ನೀಡಿ : ಎಸ್ಪಿ ಬಿಂದುಮಣಿ ಮನವಿ*
- *ಇಂಡಿಯಾ ಸ್ಕಿಲ್ : ಹೆಸರು ನೋಂದಣಿಗೆ ಅವಕಾಶ*
- *ಬೆಳ್ಳುಮಾಡು ಶ್ರೀ ಮಾದೇರಪ್ಪ ದೇವಾಲಯದ ಜೀರ್ಣೋದ್ಧಾರಕ್ಕೆ ರೂ.3 ಲಕ್ಷ ಅನುದಾನ*
- *ಸೆ.14 ರಂದು ಇತಿಹಾಸ ಪ್ರಸಿದ್ದ ಶ್ರೀಕ್ಷೇತ್ರ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಣೆ*
- *ಸೆ.15 ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ : ಅಗತ್ಯ ಸಿದ್ಧತೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ ಸೂಚನೆ*
- *ಸೆ.19 ರಂದು ಕೊಡಗು ಮಹಿಳಾ ಸಹಕಾರ ಸಂಘದ 86ನೇ ವಾರ್ಷಿಕ ಮಹಾಸಭೆ*
- *ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬಾಲಕಾರ್ಮಿಕ ತಪಾಸಣೆ : ಕಾನೂನು ಅರಿವು*
- *ಅರಣ್ಯ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸಿ ವರದಿ ಜಾರಿಗೆ ಪ್ರಸ್ತಾವನೆ ಸಲ್ಲಿಸಲಿ : ಸೇವ್ ಕೊಡಗು ಸಂಘಟನೆ ಒತ್ತಾಯ*
- *ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಖಂಡನೆ : ಮಡಿಕೇರಿಯಲ್ಲಿ ಪ್ರತಿಭಟನೆ*






