ಮಡಿಕೇರಿ ಜ.14 : ಕುಶಲ ಕರ್ಮಿಗಳಿಗೆ ಸಾಲ ಸಹಾಯಧನ ಕಾರ್ಯಕ್ರಮವನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖಾ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಕುಶಲಕರ್ಮಿಗಳು ತಮ್ಮ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಲು ಬ್ಯಾಂಕ್‍ನಿಂದ ಸಾಲ ಪಡೆದಲ್ಲಿ, ಇಲಾಖಾ ವತಿಯಿಂದ ಶೇ.30 ರಷ್ಟು ಹಾಗೂ ಗರಿಷ್ಟ ರೂ. 15 ಸಾವಿರಗಳ ವರೆಗೆ ಸಹಾಯಧನ ನೀಡಲಾಗುವುದು. ಕುಶಲಕರ್ಮಿಯು 18 ವರ್ಷ ವಯಸ್ಸಾಗಿರಬೇಕು, ಹಾಗೂ ಇಲಾಖೆ ನಿಗಧಿ ಪಡಿಸಿದ ಯಾವುದಾದರೂ ಒಂದು ವೃತ್ತಿಯಲ್ಲಿ ತೊಡಗಿಸಿಕೊಂಡಿರಬೇಕು. ವಾಣಿಜ್ಯ ಬ್ಯಾಂಕ್, ಸಹಕಾರ ಬ್ಯಾಂಕ್, ಪ್ರಾದೇಶಿಕ ಬ್ಯಾಂಕ್ ವತಿಯಿಂದ ಸಾಲ (ಅವಧಿ ಹಾಗೂ ದುಡಿಮೆ ಬಂಡವಾಳ) ಪಡೆಯಬೇಕು. ಅಭ್ಯರ್ಥಿಯು ನಿಗಧಿ ಪಡಿಸಿದ ಅರ್ಜಿಯ ಜೊತೆಗೆ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್‍ಪುಸ್ತಕ ಪ್ರತಿ, ಕುಶಲಕರ್ಮಿ ವೃತ್ತಿಯ ಬಗ್ಗೆ ಧೃಡೀಕರಣ ಪತ್ರಗಳನ್ನು ಸಲ್ಲಿಸಬೇಕು. ಅರ್ಜಿಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ದಾಖಲಾತಿಗಳೊಂದಿಗೆ ಜನವರಿ, 21 ರೊಳಗೆ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ ಕಚೇರಿಯನ್ನು (08272-228431/…
ಲೇಖಕ: admin
ಮಡಿಕೇರಿ ಜ.14 : ಮಂಗಳೂರು ವಿಶ್ವವಿದ್ಯಾನಿಲಯದ ಆವರಣ, ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳ ಸ್ನಾತಕ, ಸ್ನಾತಕೋತ್ತರ ಕೋರ್ಸುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿ ಇಂಗ್ಲೀಷ್, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಸಂಖ್ಯಾಶಾಸ್ತ್ರ, ಕೊಡವ ಭಾಷೆ ವಿಷಯಗಳಿಗೆ ಜ.16 ರಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಆಡಳಿತ ಸೌಧದ ಸಿಂಡಿಕೇಟು ಸಭಾಂಗಣದಲ್ಲಿ ನೇರ ಸಂದರ್ಶನ ನಡೆಯಲಿದೆ. ಇಂಗ್ಲೀಷ್ ಬೆಳಗ್ಗೆ 10.30 ಗಂಟೆಯಿಂದ 11.30 ಗಂಟೆವರೆಗೆ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನಕ್ಕೆ ಬೆಳಗ್ಗೆ 11.30 ಗಂಟೆಯಿಂದ 12.30 ಗಂಟೆವರೆಗೆ, ಸಂಖ್ಯಾ ಶಾಸ್ತ್ರ ಮಧ್ಯಾಹ್ನ 12.30 ಗಂಟೆಯಿಂದ 1.30 ಗಂಟೆಯವರೆಗೆ ಹಾಗೂ ಕೊಡವ ಭಾಷೆ ಮಧ್ಯಾಹ್ನ 2.30 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನೇರ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕ ಹೊಂದಿದ್ದು (ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ ಶೇ.50 ಅಂಕಗಳು), ಯುಜಿಸಿ, ಎನ್‍ಇಟಿ/ ಎಸ್‍ಎಲ್‍ಇಟಿ ಉತ್ತೀರ್ಣತೆ, ಎಂ.ಫಿಲ್/ ಪಿಎಚ್‍ಡಿ ಪದವಿ ಪ್ರಮಾಣಪತ್ರ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಅವಶ್ಯಕತೆಗೆ…
ಮಡಿಕೇರಿ ಜ.14 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಫೆ.3 ರಿಂದ 6 ರವರೆಗೆ ನಗರದ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್ ಅವರು ತಿಳಿಸಿದ್ದಾರೆ. ಫಲಪುಷ್ಪ ಪ್ರದರ್ಶನದ ಪ್ರಯುಕ್ತ ಈಗಾಗಲೇ ರಾಜಾಸೀಟು ಉದ್ಯಾನವನದಲ್ಲಿ 10 ರಿಂದ 12 ಸಾವಿರ ಸಂಖ್ಯೆಯ 15-20 ರೀತಿಯ ಹೂವುಗಳಾದ ಪೇಟೂನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಕ್ಯಾಲಾಂಡೂಲಾ, ಪ್ಲಾಕ್ಸ್, ವಿಂಕಾ ರೋಸಿಯಾ, ಡೇಲಿಯಾ, ಅಲಿಸಂ ಮತ್ತಿತರ ಗಿಡಗಳನ್ನು ಪಾತಿಯಲ್ಲಿ ಹಾಗೂ ಕುಂದಗಳಲ್ಲಿ ನಾಟಿ ಮಾಡಲಾಗಿದ್ದು, ಪ್ರದರ್ಶನದಲ್ಲಿ ಜೋಡಿಸಲಾಗುವುದು. ಫಲಪುಷ್ಪ ಪ್ರದರ್ಶನದ ಮುಖ್ಯ ಆರ್ಕಷಣೆಯಾಗಿ ವಿವಿಧ ಹೂಗಳಿಂದ ಕಲಾಕೃತಿಗಳನ್ನು ನಿರ್ಮಿಸಿ ಪ್ರದರ್ಶನಕ್ಕೆ ಇಡಲಾಗುವುದು ಹಾಗೂ ಅಲಂಕಾರಿಕ ವಿವಿಧ ಹೂ ಕುಂದಗಳ ಪ್ರದರ್ಶನ, ಬೋನ್ ಸಾಯ್ ಪ್ರದರ್ಶನ, ತರಕಾರಿ ಕೆತ್ತನೆ ಪ್ರದರ್ಶಿಸಲಾಗುವುದು. ಫಲಪುಷ್ಪ ಪ್ರದರ್ಶನ ಜೊತೆಗೆ ವೈನ್ ಉತ್ಸವ (Wine Festival) ಆಯೋಜಿಸಲಾಗುವುದು ವೈನ್ ಉತ್ಸವದಲ್ಲಿ ವಿವಿಧ ಹಣ್ಣುಗಳಿಂದ ತಯಾರಿಸಿದ ವೈನ್…
ಕುಶಾಲನಗರ, ಜ.14: ಕುಶಾಲನಗರ ಸಮೀಪದ ಕೊಪ್ಪ ಭಾರತ್ ಮಾತಾ ಪದವಿ ಕಾಲೇಜಿನಲ್ಲಿ ಅಂತರ ಜಿಲ್ಲಾ ಮಟ್ಟದ ಪಿಯು ಕಾಲೇಜಿನ ಬಾಲಕರ ಮತ್ತು ಬಾಲಕಿಯರ ವಾಲಿಬಾಲ್ ಹಾಗೂ ಥ್ರೋಬಾಲ್ ಪಂದ್ಯಾವಳಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಫಾ.ಜೋಸೇಫ್ ವರ್ಗಿಸ್ ಪಂದ್ಯಾವಳಿಗೆ ಚಾಲನೆ ನೀಡಿದರು. ಪಂದ್ಯಾವಳಿಯಲ್ಲಿ ಒಟ್ಟು 15 ತಂಡಗಳು ಪಾಲ್ಗೊಂಡಿದ್ದವು. ವಾಲಿಬಾಲ್ ಪಂದ್ಯಾವಳಿಯಲ್ಲಿ ಅರಕಲಗೂಡು ಬಿಜಿಎಸ್ ತಂಡ ಪ್ರಥಮ, ದ್ವೀತಿಯ ಸ್ಥಾನವನ್ನು ಹುಣಸೂರು ಟಾಲೆಂಟ್ ಪಿಯು ಕಾಲೇಜ್ ಮತ್ತು ತೃತೀಯ ಸ್ಥಾನವನ್ನು ಪಾಲಿಬೆಟ್ಟ ಸರ್ಕಾರಿ ಪಿಯು ಕಾಲೇಜು ಪಡೆದುಕೊಂಡಿತ್ತು. ಬಾಲಕಿಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಸುಂಟಿಕೊಪ್ಪ ಸೆಂಟ್ ಮೇರಿಸ್ ಪ್ರಥಮ, ನೆಲ್ಲಿಹುದಿಕೇರಿ ಸರ್ಕಾರಿ ಪಿಯು ಕಾಲೇಜು ದ್ವಿತೀಯ ಸ್ಥಾನ ಮತ್ತು ತೃತೀಯ ಸ್ಥಾನವನ್ನು ಕೊಪ್ಪ ಭಾರತ್ ಮಾತಾ ಪಿಯು ಕಾಲೇಜು ತನ್ನದಾಗಿಸಿಕೊಂಡಿತು. ಸಮಾರೋಪ ಸಮಾರಂಭದಲ್ಲಿ ಉಪಪ್ರಾಂಶುಪಾಲರಾದ ಫಾ.ಅಭಿನ್ ಬೇಬಿ, ಉದ್ಯಮಿ ಬಾಷಾ, ಉಲ್ಲಾಸ್ ಕೃಷ್ಣ, ಸೆಂಟ್ ಮೇರಿಸ್ ಕಾಲೇಜಿನ ಆಡಳಿತಾಧಿಕಾರಿ ಅರುಲ್ ಸೆಲ್ವಿ, ಲೋಕೋಪಯೋಗಿ ಅಧಿಕಾರಿ ಸೈಜನ್ ಕೆ.ಪೀಟರ್, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಂಚಾಲಕರಾದ…
ಮಡಿಕೇರಿ ಜ.13 : ಕೊಡಗು ಜಿಲ್ಲೆಯಲ್ಲಿರುವ ತುಳುನಾಡಿನ ದೈವಸ್ಥಾನದ ಹೆಸರು, ಊರು, ದೈವ ನರ್ತಕರು, ದೈವ ಆರಾಧಕರು ಮತ್ತು ದೈವ ಸಂಪ್ರದಾಯದ ಮಾಹಿತಿಯನ್ನೊಳಗೊಂಡ ದಾಖಲೀಕರಣದ ಪುಸ್ತಕವನ್ನು ಹೊರ ತರುವ ಯೋಜನೆಯನ್ನು ರೂಪಿಸುವ ಅಗತ್ಯವಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪಿ.ಎಂ.ರವಿ ತಿಳಿಸಿದ್ದಾರೆ. ನಗರದ ಬಾಲಭವನದ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲೆಯ ದೈವ ಆರಾಧಕರು ಹಾಗೂ ದೈವ ನರ್ತಕರ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಂಡು ಅವರು ಮಾತನಾಡಿದರು. ಜಿಲ್ಲೆಯಲ್ಲಿ ತುಳುನಾಡಿನ ದೈವಾರಾಧನೆಯ ಬಹಳಷ್ಟು ದೈವ ಕ್ಷೇತ್ರಗಳಿವೆ. ದೈವ ಆರಾಧಕರು ಹಾಗೂ ದೈವ ನರ್ತಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ದೈವ ಮತ್ತು ದೈವಾರಾಧನೆಯನ್ನು ಅವಮಾನಿಸುವ, ದೈವದ ಬಗ್ಗೆ ಅಪಹಾಸ್ಯ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ. ಶಾಲಾ, ಕಾಲೇಜು ಸೇರಿದಂತೆ ಖಾಸಗಿ ಕಾರ್ಯಕ್ರಮಗಳಲ್ಲಿ ದೈವದ ವೇಷಭೂಷಣ ತೊಟ್ಟು ಪಾತ್ರ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದರು. ಸರಕಾರದ ಆದೇಶದಂತೆ ದೈವ…
ಮಡಿಕೇರಿ ಜ.13 : ಪ್ರಸಕ್ತ ಸಾಲಿನ 15ನೇ ಹಣಕಾಸು ಆಯೋಗದಡಿ ಸುಮಾರು 148 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಮತ್ತು ನಗರಸಭಾ ನಿಧಿ ಆಯೋಗ ಅನುದಾನದಡಿ ಸುಮಾರು 111.72 ಲಕ್ಷ ರೂ. ಕಾಮಗಾರಿಗೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು. ವಾರ್ಡ್ ನಂಬರ್ 2 ಭಗವತಿ ನಗರದ ಹೌಸಿಂಗ್ ಬೋರ್ಡ್‍ನಲ್ಲಿ ಚರಂಡಿ ನಿರ್ಮಾಣ ಕಾಮಗಾರಿ, ವಾರ್ಡ್ ನಂ.10 ರಲ್ಲಿ ಕಾಲೇಜು ರಸ್ತೆಯ ಐಡಿಬಿಐ ಬ್ಯಾಂಕ್ ಹತ್ತಿರ ಚರಂಡಿ ನಿರ್ಮಾಣ ಕಾಮಗಾರಿ, ವಾರ್ಡ್ ನಂ.16 ರಲ್ಲಿ ಕುಮಾರವಿಲಾಸ ರಸ್ತೆಯ ಮೈಲಾರಿ ಹೋಟೆಲ್ ಮುಂಭಾಗ ಚರಂಡಿ ನಿರ್ಮಾಣ ಕಾಮಗಾರಿ, ವಾರ್ಡ್ ನಂ.1 ರಲ್ಲಿ ವಿದ್ಯಾನಗರದ ಹೌಸಿಂಗ್ ಬೋರ್ಡ್‍ನಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ವಾರ್ಡ್ ನಂಬರ್ 8 ರಲ್ಲಿ ಮಾರುಕಟ್ಟೆ ಬಳಿ ರಾಣಿಪೇಟೆ ಸಂಪರ್ಕ ಕಲ್ಪಿಸುವ ರಸ್ತೆ ಪಾದಚಾರಿ ನಿರ್ಮಾಣ ಕಾಮಗಾರಿ, ವಾರ್ಡ್ ನಂ.6 ರ ಕನ್ನಂಡ ಬಾಣೆ ಪಂಪ್‍ಹೌಸ್ ಹಿಂಭಾಗ ಫುಟ್‍ಪಾತ್ ನಿರ್ಮಾಣ ಕಾಮಗಾರಿ, ವಾರ್ಡ್ ನಂ.14 ರಲ್ಲಿ…
ಮಡಿಕೇರಿ ಜ.13 : ಅರಣ್ಯ ಇಲಾಖೆಯಿಂದ ಹಿಂಪಡೆಯುವ 2 ಲಕ್ಷ ಏಕರೆ ಜಾಗವನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ದಲಿತರು, ಆದಿವಾಸಿಗಳು ಹಾಗೂ ಕೃಷಿ ಕಾರ್ಮಿಕರಿಗೆ ಹಂಚಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘದ ಕೊಡಗು ಜಿಲ್ಲಾ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಕಾರ್ಯಪ್ಪ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡು ಬೇಡಿಕೆಯ ಈಡೇರಿಗಾಗಿ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ದಲಿತರು, ಆದಿವಾಸಿಗಳು ತಲತಲಾಂತರದಿಂದ ಸ್ವಂತ ಭೂಮಿ ಇಲ್ಲದೆ, ಸ್ವಂತ ಸೂರಿಲ್ಲದೆ ಉಳ್ಳವರ ಲೈನ್ ಮನೆಗಳಲ್ಲಿ, ಅರಣ್ಯದಲ್ಲಿ ಟಾರ್ಪಲ್ ಗುಡಿಸಲು ನಿರ್ಮಿಸಿಕೊಂಡು ನರಕಯಾತೆನಲ್ಲಿ ಬದುಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 2 ಲಕ್ಷ ಏಕರೆ ಭೂಮಿಯನ್ನು ಅರಣ್ಯದಿಂದ ಹಿಂಪಡೆದು ಕಂದಾಯ ಭೂಮಿಯಾಗಿ ಪರಿವರ್ತಿಸಿ ದಲಿತರಿಗೆ, ಆದಿವಾಸಿ ಕೃಷಿ ಕಾರ್ಮಿಕ ನಿರಾಶ್ರಿತರಿಗೆ ತಲಾ 3 ಏಕರೆಯಂತೆ ಹಂಚಬೇಕು, ಎಲ್ಲಾ ಲೈನ್ ಮನೆ ನಿವಾಸಿಗಳಿಗೆÉ…
ಮಡಿಕೇರಿ ಜ.13 : ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಇದೇ ಜ.25 ರ ಒಳಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜ.31 ರಂದು ರಾಜ್ಯವ್ಯಾಪಿ ನಮ್ಮೆಲ್ಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ‘ವಿಧಾನಸೌಧ’ ಮುತ್ತಿಗೆ ಮತ್ತು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಿರುವುದಾಗಿ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಡಿ.ಡಿ. ಈರಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹೊರಗುತ್ತಿಗೆ ನೌಕರರನ್ನು ಮಲತಾಯಿ ಧೋರಣೆಯಿಂದ ನಡೆಸಿಕೊಳ್ಳುತ್ತಿದ್ದು, ಈ ಬಾರಿ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ನೀರು ಸರಬರಾಜು, ಡಾಟಾ ಆಪರೇಟರ್‍ಗಳು, ಸ್ವಚ್ಛತಾ ಕಾರ್ಯದಲ್ಲಿ ನಿರತ ಕಾರ್ಮಿಕರು ತಮ್ಮ ಕೆಲಸವನ್ನು ಪ್ರತಿಭಟನೆಯ ಸಂದರ್ಭ ಸ್ಥಗಿತಗೊಳಿಸಲಿದ್ದಾರೆ. ಸಾರ್ವಜನಿಕರು ನಮ್ಮ ಸಂಕಷ್ಟಗಳನ್ನು ಅರಿತು ಸಹಕರಿಸುವಂತೆ ಮನವಿ ಮಾಡಿಕೊಂಡರು. ಪೌರಕಾರ್ಮಿಕರ ನೇರ ನೇಮಕಾತಿಯನ್ನು ಸ್ವಾಗತಿಸುತ್ತೇವೆ. ಆದರೆ, ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾಹನ ಚಾಲಕರು, ನೀರು ಸರಬರಾಜುದಾರರು, ಡಾಟಾ ಅಪರೇಟರ್ಸ್, ಸಹಾಯಕರು, ಲೋಡರ್ಸ್, ಕ್ಲೀನರ್ಸ್,…
ಮಡಿಕೇರಿ ಜ.13 : ಕಾಡಾನೆ ಸೆರೆ ಕಾರ್ಯಾಚರಣೆಯ ಸಂದರ್ಭ ಕಾಡಾನೆಯೊಂದು ಬಿದ್ದು ಮೃತಪಟ್ಟಿರುವ ಘಟನೆ ಸುಂಟಿಕೊಪ್ಪ ಸಮೀಪದ ಅತ್ತೂರು ನಲ್ಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಾಫಿತೋಟವೊಂದರಲ್ಲಿ ಸೆರೆ ಸಿಕ್ಕ 20 ವರ್ಷದ ಗಂಡಾನೆಯನ್ನು ಸಾಕಾನೆಗಳ ಸಹಾಯದಿಂದ ಸ್ಥಳಾಂತರಿಸುವ ಸಂದರ್ಭ ಈ ಘಟನೆ ನಡೆದಿದೆ. ಅತ್ತೂರು ನಲ್ಲೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದರಿಂದ ಕಳೆದ 3 ದಿನಗಳಿಂದ ಅರಣ್ಯ ಇಲಾಖೆ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ದುಬಾರೆ ಸಾಕಾನೆ ಶಿಬಿರದ ಪ್ರಶಾಂತ್, ಹರ್ಷ, ಸುಗ್ರೀವ, ಶ್ರೀರಾಮ ಹಾಗೂ ಲಕ್ಷ್ಮಣ ಎಂಬ 5 ಸಾಕಾನೆಗಳ ಸಹಕಾರ ಪಡೆಯಲಾಗಿತ್ತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರಂಜನ್, ಇಲಾಖೆಯ ವೈದ್ಯರಾದ ಡಾ.ಚಿಟ್ಟಿಯಪ್ಪ ಮತ್ತು ಡಾ. ರಮೇಶ್ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ಸೆರೆ ಹಿಡಿದಿದ್ದರು. ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಮೋದೂರು ತೋಟವೊಂದರಲ್ಲಿ ಪುಂಡಾನೆ ಬೀಡು ಬಿಟ್ಟಿರುವುದನ್ನು ಕಾರ್ಯಾಚರಣೆ ತಂಡ ಗುರುತಿಸಿತು. ಬಳಿಕ…
ಸುಂಟಿಕೊಪ್ಪ, ಜ.13: ಸ್ವಸ್ಥ ವಿಶೇಷ ಶಿಕ್ಷಣ ಪುನರ್ವಸತಿ ಕೇಂದ್ರದ 10ನೇ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಚೇತನ ಮಕ್ಕಳು ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಮೂಲಕ ನೆರೆದಿದ್ದವರ ಗಮನ ಸೆಳೆದರು. ಭಾರತದ ಏಕತೆಯನ್ನು ಸಾರುವ ವೈವಿಧ್ಯಮಯ ನೃತ್ಯಗಳನ್ನು ತಾಳೆ ಮದಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಪೋಷಕರು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.






