ಲೇಖಕ: admin

ಮಡಿಕೇರಿ ಆ.8 NEWS DESK : ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಭಕ್ತರಿಗೆ ಅರಿಶಿನ, ಕುಂಕುಮ, ಬಳೆ ವಿತರಿಸಲಾಯಿತು. ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ  ಚುಮ್ಮಿ ದೇವಯ್ಯ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

Read More

ಪುತ್ತೂರು ಆ.8 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಐಇಇಇ ವಿದ್ಯಾರ್ಥಿ ವಿಭಾಗ, ಗ್ಲೋಬಲ್ ಡಿಗ್ರೀಸ್ ಮಣಿಪಾಲ್, ಇನ್ಸ್ಟಿಟ್ಯೂಶನ್ಸ್ ಇನ್ನೋವೇಶನ್ ಸೆಲ್ ಮತ್ತು ಕೆನರಾ ಬ್ಯಾಂಕ್ ಇದರ ಸಂಯುಕ್ತ ಆಶ್ರಯದಲ್ಲಿ ನಿರ್ವಹಣೆ ಮತ್ತು ತಂತ್ರಜ್ಞಾನದಲ್ಲಿ ಹೊಸಯುಗ ಎನ್ನುವ ಕುರಿತು 3 ನೇ ಅಂತಾರಾಷ್ಟ್ರೀಯ ಸಮ್ಮೇಳನ ದೃಷ್ಟಿ-2025 ಆ.9 ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ನಡೆಯಲಿದೆ. ಪ್ರಪಂಚದಾದ್ಯಂತ ಶಿಕ್ಷಣ ತಜ್ಞರು, ಸಂಶೋಧಕರು ವಿದ್ಯಾರ್ಥಿಗಳು ಮತ್ತು ಉದ್ಯಮ ಕ್ಷೇತ್ರದ ತಜ್ಞರನ್ನು ಒಟ್ಟುಗೂಡಿಸಿ, ನಿರ್ವಹಣೆ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬಗ್ಗೆ ಬೆಳಕುಚೆಲ್ಲುವ, ಚರ್ಚೆ ಹಾಗೂ ವಿಚಾರ ವಿನಿಮಯವನ್ನು ನಡೆಸುವ ಉದ್ದೇಶದಿಂದ ಇದನ್ನು ಸಂಘಟಿಸಲಾಗಿದ್ದು ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 280ಕ್ಕೂ ಮಿಕ್ಕಿ ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಿಗಾಗಿ ಸ್ವೀಕರಿಸಲಾಗಿದೆ. ಅಂದು ಬೆಳಿಗ್ಗೆ 9.15ಕ್ಕೆ ಉದ್ಘಾಟನಾ ಸಮಾರಂಭವು ನಡೆಯಲಿದ್ದು ಕೆನರಾ ಬ್ಯಾಂಕಿನ ಪುತ್ತೂರು ವಿಭಾಗದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಂಜನ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಗ್ಲೋಬಲ್ ಡಿಗ್ರೀಸ್ ಮಣಿಪಾಲ್…

Read More

ಸುಂಟಿಕೊಪ್ಪ ಆ.8 NEWS DESK : ಚೆಟ್ಟಳ್ಳಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಮನೆ ಪೂವಯ್ಯ ಎಂಬವರ ತೋಟಕ್ಕೆ ನಿರಂತರ ದಾಳಿ ಮಾಡುತ್ತಿರುವ ಕಾಡಾನೆಗಳು ಕಾಫಿ, ಕರಿಮೆಣಸು, ಬಾಳೆಗಿಡಗಳನ್ನು ನಾಶ ಪಡಿಸಿದೆ. ನಷ್ಟ ಪರಿಹಾರಕ್ಕಾಗಿ ಹಲವು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಪೂವಯ್ಯ, ಕಾಡಾನೆ ತಡೆಗೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಆಹಾರ ಅರಸಿ ಬರುವ ಕಾಡಾನೆಗಳು ಮರಳಿ ಕಾಡಿಗೆ ಹಿಂತೆರಳದೆ ಸುತ್ತಮುತ್ತಲಿನ ತೋಟಗಳಲ್ಲಿ ಸಂಚರಿಸುತ್ತಿದ್ದು, ಕೂಲಿ ಕಾರ್ಮಿಕರು ತೋಟಗಳಲ್ಲಿ ಕೆಲಸ ಮಾಡಲು ಆತಂಕ ಪಡುವಂತಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Read More

ಸುಂಟಿಕೊಪ್ಪ ಆ.8 NEWS DESK : ಸಂತ ಮೇರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘ ಉದ್ಘಾಟನೆಗೊಂಡಿತು. ಸಂತ ಮೇರಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಟ್ಟಗೇರಿ ಸಮೂಹ ಕಾಫಿ ತೋಟಗಳ ಮಾಲೀಕರು ಮತ್ತು ಉದ್ಯಮಿಗಳಾದ ದೊಡ್ಡಮನೆ ವಿಶಾಲ್ ಶಿವಪ್ಪ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ಮತ್ತು ಬದುಕಿಗೆ ವಿದ್ಯಾಭ್ಯಾಸ ಮೂಲ ಆಧಾರ. ವಿದ್ಯಾಭ್ಯಾಸವು ಪಠ್ಯವನ್ನು ಮಾತ್ರವಲ್ಲದೆ ಕ್ರೀಡೆಯನ್ನು ಒಳಗೊಂಡಿದೆ. ಸಾಧನೆ ಮತ್ತು ಒಳ್ಳೆಯ ಬದುಕಿಗೆ ಏಕಾಗ್ರತೆ, ಕಠಿಣ ಪರಿಶ್ರಮ ಅಗತ್ಯ ಎಂದರು. ಯಾವುದೇ ಸಂದರ್ಭದಲ್ಲೂ ಆಸೆ ಆಮೀಷಗಳಿಗೆ ಬಲಿಯಾಗದಂತೆ ಸಲಹೆ ನೀಡಿದರು. ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ ಸುಪುಷ್ಠದೇಹದಲ್ಲಿ ಸುಪುಷ್ಠ ಮನಸ್ಸು ಎಂಬ ಗ್ರೀಕ್ ನಾಣ್ಣುಡಿಯಂತೆ ಸದಾ ಎಚ್ಚರವಹಿಸಲು ಅವರು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಮೇರಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರಾದ ರೇ.ಪಾ.ವಿಜಯಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ಸಿಸ್ಟರ್ ಜೋವಿಟಾವಾಸ್ ಮತ್ತು ಸಂತ ಮೇರಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾದ್ಯಾಯರಾದ ಸೆಲ್ವರಾಜ್…

Read More

ಸುಂಟಿಕೊಪ್ಪ ಆ.8 NEWS DESK : ಸಾಲವನ್ನು ನಾವುಗಳು ಯಾವ ಉದ್ದೇಶಕ್ಕೆ ಪಡೆಯುತ್ತೇವೆ ಅದನ್ನು ಅದೇ ಉದ್ದೇಶಕ್ಕೆ ವಿನಿಯೋಗಿಸಿದಲ್ಲಿ ಮಾತ್ರ ವೈಯಕ್ತಿಕ ಅಭಿವೃದ್ಧಿಯನ್ನು ಕಂಡುಕೊಂಡಿದ್ದೇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನ್ನಪೂರ್ಣ ಸ್ವಸಹಾಯ ಸಂಘದ 17ನೇ ವಾರ್ಷಿಕೋತ್ಸವದಲ್ಲಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ನಾಕೂರು-ಶಿರಂಗಾಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‍ಬೈಲ್ ಕಾರ್ಯಕ್ಷೇತ್ರದ ಅನ್ನಪೂರ್ಣ ಸ್ವ ಸಹಾಯ ಸಂಘದ 17ನೇ ವಾರ್ಷಿಕೋತ್ಸವ ಸಮಾರಂಭವು ಕಾನ್‍ಬೈಲ್‍ನಲ್ಲಿ ಆಯೋಜಿಸಲಾಗಿದ್ದು, ಸಮಾರಂಭದಲ್ಲಿ ಶ್ರೀ.ಕ್ಷೆ.ಧ.ಗ್ರಾ.ಯೋ ವತಿಯಿಂದ ಸಂಘದ ಸದಸ್ಯರಿಗೆ ವಿದ್ಯಾ ನಿಧಿಯಿಂದ ಮಕ್ಕಳ ಉನ್ನತ ಶಿಕ್ಷಣ, ಸ್ವಂತಸೂರು, ವ್ಯಾಪಾರಕ್ಕೆ, ವಾಹನಗಳಿಗೆ ಸಾಲ ಸೌಲಭ್ಯ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ನೀಡುತ್ತಿದೆ. ನಾವು ಸಾಲ ಪಡೆದುಕೊಳ್ಳುವ ಮೊದಲು ಅದರ ಸಾಧಕ ಬಾಧಕಗಳ ಅರಿತುಕೊಂಡು ಅದರಂತೆ ಯೋಜನೆಗಳನ್ನು ರೂಪಿಸಿಕೊಂಡು ಸಾಲವನ್ನು ಪಡೆದುಕೊಂಡಿದ್ದೇವೆ. ಸಾಲ ಪಡೆದ ಮೊಬಲಗನ್ನು ನಾವು ಮುಂದೆಯೇ ನಿರ್ಧರಿಸಿದ ಯೋಜನೆಗೆ ವಿನಿಯೋಗಿಸಿರುವುದರಿಂದ ನಾವುಗಳು ವೈಯಕ್ತಿಕ ಅಭಿವೃದ್ಧಿಯನ್ನು ಹೊಂದಲು ಸಾಧ್ಯ ಎಂದು ಸಂಘದ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.…

Read More

ಮಡಿಕೇರಿ NEWS DESK ಆ.8 : ಚೇರಂಬಾಣೆ ಬೇಂಗ್ ನಾಡ್ ಕೊಡವ ಸಮಾಜಕ್ಕೆ 2025 ರಿಂದ 2030 ರವರೆಗಿನ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಬಾಚರಣಿಯಂಡ ದಿನೇಶ್ ಗಣಪತಿ, ಕಾರ್ಯದರ್ಶಿಯಾಗಿ ಕೇಕಡ ರೋಮಿ ಮೊಣ್ಣಪ್ಪ, ಉಪಾಧ್ಯಕ್ಷರಾಗಿ ಖಾಯಂ ನಿರ್ದೇಶಕರಾದ ಪಟ್ಟಮಾಡ ಮಂಜು ಪೊನ್ನಪ್ಪ, ನಿರ್ದೇಶಕರುಗಳಾಗಿ ನಾಪಂಡ ದೇವಯ್ಯ, ಬೊಳಂದಂಡ ಮುತ್ತಪ್ಪ, ಕುಂಚೆಟ್ಟಿರ ಪೆಮ್ಮಯ್ಯ, ಕಲ್ಲುಮಾಡಂಡ ಕಾರ್ಯಪ್ಪ, ಪೊಡನೋಳಂಡ ರೇಷ್ಮ ತೇಜ, ನಾಟೋಳಂಡ ಕುಶಾಲಪ್ಪ, ಅಜ್ಜಿನಂಡ ಚೀಯಣ್ಣ, ಅಯ್ಯಂಡ ಅಯ್ಯಪ್ಪ, ಬೊಪ್ಪಡತಂಡ ಕಿಶೋರ್, ಕೇಕಡ ಸುಗುಣ, ಚಡಿಯಂಡ ಬೋಪಯ್ಯ, ತೇಲಪಂಡ ಲಕ್ಷಿö್ಮ ಪೆಮ್ಮಯ್ಯ, ತೇಲಪಂಡ ಬೋಪಯ್ಯ, ಕೊಟ್ಟುಕತ್ತೀರ ಪೊನ್ನಣ್ಣ, ಮಂಗೇರಿರ ಸುಮಿತ ಗಂಗಮ್ಮ, ಮಹಿಳಾ ನಿರ್ದೇಶಕರಾಗಿ ಬಡ್ಡಿರ ನಳಿನಿ ಪೂವಯ್ಯ ಹಾಗೂ ಚಿಯೇಬೇರ ರೇಖಾ ಮುದ್ದಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದು, ಖಾಯಂ ನಿರ್ದೇಶಕರಾಗಿ ಪಟ್ಟಮಾಡ ಅಶೋಕ ತಿಮ್ಮಣ್ಣ ಮುಂದುವರೆಯಲಿದ್ದಾರೆ.

Read More

ಮಡಿಕೇರಿ ಆ.8 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದೊಂದಿಗೆ ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವು ಆಗಸ್ಟ್, 09 ರಂದು ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದಲ್ಲಿ ನಡೆಯಲಿದೆ. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ಶಾಸಕರಾದ ಡಾ.ಮಂತರ್ ಗೌಡ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ್ಯಸಭಾ ಸದಸ್ಯರಾದ ಅಜಯ್ ಮಾಕನ್, ವಿಧಾನ ಪರಿಷತ್ ಶಾಸಕರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಧನಂಜಯ ಸರ್ಜಿ, ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಕುಳುವ ಸಮಾಜದ ಜಿಲ್ಲಾಧ್ಯಕ್ಷರಾದ ಎಚ್.ಪಿ.ಮಹೇಶ್, ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ.ಎಂ.ಬೆಳ್ಳಿಯಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್,…

Read More

ಮೈಸೂರು NEWS DESK ಆ. 7: ಆಂಧ್ರಪ್ರದೇಶದ ಖ್ಯಾತ ಧಾರ್ಮಿಕ ಕ್ಷೇತ್ರವಾದ ತಿರುಪತಿಗೆ ಸಾಂಸ್ಕೃತಿಕ ರಾಜಧಾನಿ ಮೈಸೂರು, ಮಂಡ್ಯ, ಚಾಮರಾಜನಗರದಿಂದ ಅತಿ ಹೆಚ್ಚು ಭಕ್ತರು ಪ್ರಯಾಣಿಸುತ್ತಿರುವುದರಿಂದ ಹೆಚ್ಚುವರಿ ರೈಲ್ವೆ ಸೇವೆ ಒದಗಿಸಬೇಕು ಎಂದು ಕೇಂದ್ರ ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ಅಶ್ವಿನ್‌ ವೈಷ್ಣವ್‌ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು *ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್* ತಿಳಿಸಿದ್ದಾರೆ. ನವದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿ ತಿರುಪತಿ-ಬೆಂಗಳೂರು ನಡುವಿನ ವಂದೇಭಾರತ್‌ ರೈಲನ್ನು ಮೈಸೂರಿನವರೆಗೆ ವಿಸ್ತರಣೆ ಮಾಡಬೇಕು ಎಂದು ಮನವಿ ಸಲ್ಲಿಸಿದ ಬಳಿಕೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಆಂಧ್ರಪ್ರದೇಶದ ತಿರುಪತಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ತಿರುಪತಿಗೆ ನಿರಂತರವಾಗಿ ಭೇಟಿ ನೀಡುತ್ತಿರುತ್ತಾರೆ. ಭಕ್ತರ ದೀರ್ಘಕಾಲದ ಬೇಡಿಕೆಯಂತೆ ತಿರುಪತಿ-ಬೆಂಗಳೂರು ವಂದೇ ಭಾರತ್‌ ರೈಲು ಸಂಚಾರವನ್ನು ಮೈಸೂರಿನವರೆಗೆ ವಿಸ್ತರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ, ಅಸ್ತಿತ್ವದಲ್ಲಿರುವ ರೈಲು ಸೇವೆಗಳು ವಿರಳವಾಗಿವೆ. ಕೆಲವು ದೀರ್ಘ…

Read More

ಮಡಿಕೇರಿ NEWS DESK ಆ.7 : ರಾಜಾಸೀಟ್‌ನಲ್ಲಿ ‘ಗ್ಲಾಸ್ ಬ್ರಿಡ್ಜ್’ ನಿರ್ಮಾಣಕ್ಕೆ ನಮ್ಮ ತೀವ್ರ ವಿರೋಧವಿದ್ದು, ಉದ್ದೇಶಿತ ಯೋಜನೆ ಜಾರಿಗೆ ಮುಂದಾದಲ್ಲಿ ನಗರದ ನಿವಾಸಿಗಳ ಸಹಕಾರದೊಂದಿಗೆ ಬೃಹತ್ ಹೋರಾಟ ರೂಪಿಸುವುದಲ್ಲದೆ, ನ್ಯಾಯಾಲಯದ ಮೊರೆ ಹೋಗುವುದಾಗಿ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಾಸೀಟ್ ನಡುವಿನ ಸ್ಮಾರಕ ಪುರಾತತ್ವ ಇಲಾಖೆಗೆ ಒಳಪಡುತ್ತ್ತದೆ. ಯಾವುದೇ ಪುರಾತನ ಸ್ಮಾರಕಗಳ ವ್ಯಾಪ್ತಿಯಲ್ಲಿ ಯಾವುದೇ ನಿರ್ಮಾಣ ಕಾರ್ಯಗಳು ನಡೆಯಕೂಡದೆನ್ನುವ ನಿಯಮಗಳಿದೆ. ಹೀಗಿದ್ದೂ ಕಾಂಗ್ರೆಸ್ ಆಡಳಿತ ವ್ಯವಸ್ಥೆ ಜನರಿಗೆ ಸಂಕಷ್ಟವನ್ನು ತಂದೊಡ್ಡುವ ‘ಗ್ಲಾಸ್ ಬ್ರಿಡ್ಜ್’ನ್ನು ಅಭಿವೃದ್ಧಿಯ ಹೆಸರಿನಲ್ಲಿ ನಿರ್ಮಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾ ವ್ಯಕ್ತಪಡಿಸಿದರು. ರಾಜಾಸೀಟ್ ಬಳಿಯಲ್ಲೆ ಇರುವ ಚಾಮುಂಡೇಶ್ವರಿ, ಇಂದಿರಾ ನಗರ ಬಡಾವಣೆ ವ್ಯಾಪ್ತಿಯಲ್ಲಿ ಕೆಲ ವರ್ಷಗಳ ಹಿಂದಿನ ಭಾರೀ ಮಳೆೆಯ ಸಂದರ್ಭ ಬಿರುಕು ಕಾಣಿಸಿಕೊಂಡಿತ್ತು. ಪಕ್ಕದಲ್ಲೇ್ಲ ಇರುವ ರಾಜಾಸೀಟ್‌ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣವಾದರೆ ಭವಿಷ್ಯದಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. *ಬಾಂಗ್ಲಾ ದೇಶಿಗರನ್ನು ಪತ್ತೆ ಹಚ್ಚಿ*…

Read More

ಮಡಿಕೇರಿ NEWS DESK ಆ.7 : ಚೆಂಬು ಗ್ರಾಮ ವ್ಯಾಪ್ತಿಯ ದಬ್ಬಡ್ಕ-ಚೆಂಬು ಮತ್ತು ಊರುಬೈಲು ಚೆಂಬು ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಕ್ಷೇತ್ರದ ಶಾಸಕರು ತಕ್ಷಣ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸಂಪಾಜೆ ವಲಯ ಅರಣ್ಯಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಚೆಂಬು ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಸಚಿನ್ ಕೆದಂಬಾಡಿ ಹಾಗೂ ಕಾರ್ಯದರ್ಶಿ ಪುಂಡರೀಕ ಅರಂಬೂರು ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರತಿದಿನ ಕೃಷಿಕರ ತೋಟಗಳಿಗೆ ಕಾಡಾನೆಗಳು ನುಗ್ಗಿ ಅಡಿಕೆ, ತೆಂಗು, ಬಾಳೆ ಮತ್ತಿತರ ಕೃಷಿ ಫಸಲನ್ನು ತಿಂದು ಅಪಾರ ನಷ್ಟ ಉಂಟು ಮಾಡುತ್ತಿದ್ದು, ಕೃಷಿಕರ ಬದುಕೇ ದುಸ್ತರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಒಂಟಿಸಲಗವೊAದು ಗ್ರಾಮದಲ್ಲೇ ಬೀಡುಬಿಟ್ಟಿದ್ದು, ಜನ ಆತಂಕದಲ್ಲೇ ದಿನದೂಡುವಂತಾಗಿದೆ. ವಿದ್ಯಾರ್ಥಿಗಳು ಶಾಲೆಗೆ ತೆರಳಲು ಭಯ ಪಡುವಂತ್ತಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ. ಈಗಾಗಲೇ ಗ್ರಾಮಸ್ಥರು ಸಮಿತಿಯೊಂದನ್ನು…

Read More