ಮಡಿಕೇರಿ NEWS DESK ಫೆ.16 : ಕೊಡಗು ಜಿಲ್ಲಾ ವ್ಯಾಪ್ತಿಯ ವಿವಾಹ ಸಮಾರಂಭಗಳಲ್ಲಿ ಮದ್ಯ ಬಳಕೆಗೆ ಒಂದು ದಿನದ ಸನ್ನದು ಪಡೆಯಬೇಕು ಎಂದು ಅಬಕಾರಿ ಇಲಾಖೆ ಹೊರಡಿಸಿರುವ ಹೊಸ ಆದೇಶಕ್ಕೆ ವಿರಾಜಪೇಟೆ ಬಿಜೆಪಿ ಮಂಡಲ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ವಿರಾಜಪೇಟೆ ಬಿಜೆಪಿ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ವಿನಾಕಾರಣ ಹೊಸ ಹೊಸ ಆದೇಶಗಳ ಮೂಲಕ ಕೊಡಗಿನ ಸಂಪ್ರದಾಯಗಳಿಗೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಕೊಡಗು ಜಿಲ್ಲೆಯಲ್ಲಿ ವಿವಾಹ ಸಮಾರಂಭಗಳು ನಡೆದಿದೆ. ಸಂಪ್ರದಾಯದಂತೆ ಎಲ್ಲೂ ಎಲ್ಲೆ ಮೀರದೆ, ಅಪರಾಧಗಳಿಗೆ ಅವಕಾಶ ನೀಡದೆ ಮತ್ತು ಸಾರ್ವಜನಿಕವಾಗಿ ಅಶಾಂತಿ ಮೂಡಿಸದೆ ಶಿಸ್ತುಬದ್ಧವಾಗಿ ಮದ್ಯವನ್ನು ಬಳಸಲಾಗಿದೆ. ಆದರೆ ಇದೀಗ ರಕ್ಷಣಾ ಮದ್ಯ, ಹೊರ ರಾಜ್ಯದ ಮದ್ಯ, ನಕಲಿ ಮದ್ಯ, ಅಕ್ರಮ ಮದ್ಯ ಸರಬರಾಜಾಗುತ್ತಿರುವ ಬಗ್ಗೆ ದೂರು ಬಂದಿದೆ ಎಂಬ ನೆಪವೊಡ್ಡಿ ಸನ್ನದು ಪಡೆಯಬೇಕೆನ್ನುವ ನಿಯಮ ಜಾರಿ ಮಾಡಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ವಿವಾಹ ಸಮಾರಂಭದಲ್ಲಿ…
ಲೇಖಕ: admin
ಮಡಿಕೇರಿ NEWS DESK ಫೆ.16 : ಇತ್ತೀಚೆಗೆ ಸೈಬರ್ ವಂಚನೆ ಪ್ರಕರಣಗಳು, ಮೊಬೈಲ್ ಕಳ್ಳತನ ಹಾಗೂ ನಕಲಿ ಸಿಮ್ ಕಾರ್ಡ್ ಗಳ ಬಳಕೆಯಿಂದ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಮೊಬೈಲ್ ಅಂಗಡಿಯ ಮಾಲೀಕರಿಗೆ ಹಾಗೂ ಸಿಮ್ ಕಾರ್ಡ್ ವಿತರಕರಿಗೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಸೈಬರ್ ಅಪರಾಧದ ಬಗ್ಗೆ ಜಾಗೃತಿ ಸಭೆ ಏರ್ಪಡಿಸಲಾಗಿತ್ತು. ಮುಂದಿನ ದಿನಗಳಲ್ಲಿ ಸಿಮ್ ಕಾರ್ಡ್ ವಿತರಣೆ ಹಾಗೂ ಹಳೆಯ ಮೊಬೈಲ್ ಗಳ ಮಾರಾಟ ಹಾಗೂ ಖರೀದಿ ಸಂದರ್ಭದಲ್ಲಿ ನೋಂದಣಿ ಪುಸ್ತಕ ನಿರ್ವಹಣೆ, ಸಂಪೂರ್ಣ ವಿಳಾಸ ಪಡೆದುಕೊಳ್ಳುವುದು, ಗುರುತಿನ ಚೀಟಿ ಹಾಗೂ ಮೊಬೈಲ್ ನಂಬರ್ ಪಡೆದುಕೊಳ್ಳುವುದು ಹೀಗೆ ಹಲವು ಅಂಶಗಳ ಬಗ್ಗೆ ಕೊಡಗು ಸಿಇಎನ್ ಠಾಣೆಯ ಡಿಎಸ್ಪಿ ರವಿ ಅವರು ಮಾಹಿತಿ ನೀಡಿದರು.
ಮಡಿಕೇರಿ NEWS DESK ಫೆ.16 : ತಲಕಾವೇರಿ ಉಪ ಠಾಣೆಯ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಬಿದ್ದು ಸಿಕ್ಕಿದ ರೂ.40,000 ಹಣ ಮತ್ತು 40,000 ಯುಎಸ್ ಡಾಲರ್ ಇರುವ ಪರ್ಸನ್ನು ಅದರ ವಾರಸುದಾರರಿಗೆ ಹಿಂದಿರುಗಿಸಲಾಯಿತು. ಪರ್ಸ್ ಮತ್ತು ಹಣವನ್ನು ಹಿಂದಿರುಗಿಸಿದ ಭಾಗಮಂಡಲ ಠಾಣೆಯ ಸಿಬ್ಬಂದಿ ಎಸ್.ಎಸ್.ಜಯಪ್ರಕಾಶ್ ಅವರ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.
ಮಡಿಕೇರಿ NEWS DESK ಫೆ.16 : ಇತ್ತೀಚೆಗೆ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆದ 2025ನೇ ಸಾಲಿನ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದ ಮಾದಕ ದ್ರವ್ಯ ಪತ್ತೆ ವಿಭಾಗದಲ್ಲಿ ಕೊಡಗು ಜಿಲ್ಲೆಯ ಶ್ವಾನದಳದ ಎಆರ್ ಎಸ್ಐ ಜಿತೇಂದ್ರ ರೈ ಅವರ ತಂಡ ಪಾಲ್ಗೊಂಡು ಬೆಳ್ಳಿ ಪದಕ ಪಡೆದುಕೊಂಡಿದೆ. ಪದಕ ವಿಜೇತ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘಿಸಿದ್ದಾರೆ.
ಮಡಿಕೇರಿ NEWS DESK ಫೆ.16 : ಚೆಟ್ಟಳ್ಳಿಯ ಪೊನ್ನತ್ ಮೊಟ್ಟೆಯ ಶ್ರೀ ಶನೈಶ್ಚರ ದೇವಾಲಯದಲ್ಲಿ ಶ್ರೀ ಶನೈಶ್ಚರ, ಮಹಾಗಣಪತಿ ಹಾಗೂ ನವಗ್ರಹ ದೇವರ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಯಿತು. ಪುತ್ತೂರಿನ ಬ್ರಹ್ಮ ಶ್ರೀ ವೇದಮೂರ್ತಿ ಗಿರೀಶ ತಂತ್ರಿ ಅವರ ನೇತೃತ್ವದಲ್ಲಿ ಫೆ.14 ರಂದು ಸಾಮೂಹಿಕ ಪ್ರಾರ್ಥನೆ, ಪಂಚಗವ್ಯ ಪುಣ್ಯಾಹ ವಾಚನ, ಆಚಾರ್ಯ ವರ್ಣ, ಪ್ರಸಾದ ಪರಿಗ್ರಹ, ಪಶುದಾನ ಶುದ್ಧಿ, ಅಂಕುರ ಆರೋಹಣ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಕ್ಪಾಲಕ ಬಲಿ, ಮಹಾಗಣಪತಿ, ನವಗ್ರಹ ದೇವರ, ಆದಿವಾಸ ಪೂಜೆ ಶಯನಾದಿವಾಸ ಜರುಗಿತು. ಫೆ.15 ರಂದು ಬೆಳಿಗ್ಗೆ ಅಂಕುರ ಪೂಜೆ, ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ನವಗ್ರಹ ಶಾಂತಿ ಹೋಮ, ಮಹಾಗಣಪತಿ, ನವಗ್ರಹ ದೇವರ ಪ್ರತಿಷ್ಠಾ ಕಲಶ ಪೂಜೆ, ಮಹಾಗಣಪತಿ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಮಹಾಪೂಜೆ, ನವಗ್ರಹ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು.…
ಮಡಿಕೇರಿ NEWS DESK ಫೆ.15 : ಶನಿವಾರಸಂತೆಯಲ್ಲಿ ಸಾಲದ ಬಾಧೆಯಿಂದ ಆತ್ಮಹತ್ಯೆಗೆ ಶರಣಾದ ಹಸೀನಾ ಅವರ ಮನೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಇಂದು ಭೇಟಿ ನೀಡಿದರು. ಕುಟುಂಬದ ಸದಸ್ಯರುಗಳಿಗೆ ಸಾಂತ್ವನ ಹೇಳಿದ ಅವರು ಘಟನೆಯ ಮಾಹಿತಿ ಪಡೆದರು. ನಂತರ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ಸೋಮವಾರಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ.ಕಾಂತರಾಜ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಕ್ಮಲ್ ಪಾಷಾ, ಸೋಮವಾರಪೇಟೆ ತಾಲ್ಲೂಕು ಕೆಡಿಪಿ ಸದಸ್ಯ ಶರತ್ ಶೇಖರ್, ಸೋಮವಾರಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಡಿ.ಯು.ಕಿರಣ್, ಸ್ಥಳೀಯ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಮಡಿಕೇರಿ NEWS DESK ಫೆ.15 : ಪುಂಡಾನೆ ಸೆರೆ ಕಾರ್ಯಾಚರಣೆ ಕುರಿತು ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ ಅವರು ಪುಂಡಾನೆ ಸೆರೆ ಹಿಡಿಯಲು ಅರಣ್ಯ ಸಚಿವರು ಆದೇಶ ನೀಡಿದ ಬಳಿಕ ಶನಿವಾರ ಬೆಳಗ್ಗೆಯಿಂದ ಕಾರ್ಯಾಚರಣೆ ಕೈಗೊಂಡು ಕಾಡಾನೆಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಕಾಡಾನೆಗಳ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಸುಮಾರು 15 ಕಿ.ಮೀ ದೂರದವರೆಗೆ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸುಮಾರು 22 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಿದ್ದು, ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾರ್ಯಕ್ಕೆ ಶೀಘ್ರವಾಗಿ ಚಾಲನೆ ನೀಡಲಾಗುವುದು ಎಂದರು. ಅರಣ್ಯ ಇಲಾಖಾಧಿಕಾರಿಗಳ ಜೊತೆ ವಿಶೇಷ ಪ್ರವಾಸ ಆಯೋಜಿಸಿ, ಬೆಳೆಗಾರರು, ಕೃಷಿಕರು, ಸ್ಥಳೀಯರೊಂದಿಗೆ ಚರ್ಚಿಸಿ, ಸೂಕ್ಷö್ಮ ಪ್ರದೇಶಗಳಲ್ಲಿ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುವುದು ಎಂದರು.
ಮಡಿಕೇರಿ NEWS DESK ಫೆ.15 : ಕಾರ್ಮಿಕ ಮಹಿಳೆ ಚನ್ನಂಗೊಲ್ಲಿ ಗ್ರಾಮದ ಪೈಸಾರಿ ನಿವಾಸಿ ಜಾನಕಿ ಎಂಬುವವರನ್ನು ಬಲಿ ಪಡೆದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಗೋಣಿಕೊಪ್ಪಲು–ಮೈಸೂರು ರಸ್ತೆ ಸಮೀಪದ ಕಾಫಿ ತೋಟವೊಂದರಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಜಾನಕಿ ಅವರ ಮೇಲೆ ಕಾಡಾನೆ ದಾಳಿ ಮಾಡಿ ಸಾವಿಗೆ ಕಾರಣವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಎ.ಎಸ್.ಪೊನ್ನಣ್ಣ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಮಾತನಾಡಿ, ಪುಂಡಾನೆಯನ್ನು ಸೆರೆ ಹಿಡಿಯಲು ಅವಕಾಶ ಕೋರಿದರು. ಈ ಹಿನ್ನೆಲೆ ಶನಿವಾರ ಬೆಳಗ್ಗೆಯಿಂದಲೇ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಿತು. ಹಾರಂಗಿ, ದುಬಾರೆ ಮತ್ತು ಮತ್ತಿಗೋಡು ಸಾಕಾನೆ ಶಿಬಿರಗಳಿಂದ 6 ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಯಿತು. ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರ ನೇತೃತ್ವದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಸ್ಥಳೀಯ ಮುಖಂಡರು, ಅರಣ್ಯಾಧಿಕಾರಿಗಳಾದ ಜಗನ್ನಾಥ್, ಭಾಸ್ಕರ್, ಸೀಮಾ, ಗೋಪಾಲ್ ಮತ್ತು ಸಿಬ್ಬಂದಿಗಳು ಅರವಳಿಕೆ ತಜ್ಞರೊಂದಿಗೆ…
ಮಡಿಕೇರಿ NEWS DESK ಫೆ.15 : ಕೊಡಗು ಜಿಲ್ಲಾ ವ್ಯಾಪ್ತಿಯ ವಿವಾಹ ಸಮಾರಂಭ ಸೇರಿದಂತೆ ಇತರೆ ಖಾಸಗಿ ಕಾರ್ಯಕ್ರಮಗಳಲ್ಲಿ ಮದ್ಯ ಬಳಕೆಗೆ ಒಂದು ದಿನದ ಸನ್ನದು ಪಡೆಯುವುದು ಕಡ್ಡಾಯವೆಂದು ಅಬಕಾರಿ ಇಲಾಖೆ ಉಪ ಆಯುಕ್ತರು ತಿಳಿಸಿದ್ದಾರೆ. ಕೊಡಗು ಜಿಲ್ಲೆಯ ಎಲ್ಲಾ ಕಲ್ಯಾಣ ಮಂಟಪಗಳು, ಹೋಂ ಸ್ಟೇ, ರೆಸಾರ್ಟ್ಸ್ ಇನ್ನಿತರೆ ಸಾರ್ವಜನಿಕ, ಖಾಸಗಿ ಸ್ಥಳಗಳಲ್ಲಿ ನಡೆಯುವ ಮದುವೆ, ಸಭೆ, ಸಮಾರಂಭಗಳಲ್ಲಿ ರಕ್ಷಣಾ ಮದ್ಯ, ಹೊರ ರಾಜ್ಯದ ಮದ್ಯ, ನಕಲಿ ಮದ್ಯ, ಅಕ್ರಮ ಮದ್ಯ ಸರಬರಾಜಾಗುತ್ತಿರುವ ಬಗ್ಗೆ ದೂರು ಬಂದಿದ್ದು, ಇದು ರಾಜ್ಯ ಅಬಕಾರಿ ಕಾಯ್ದೆಯನ್ವಯ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅವರು ಹೇಳಿದ್ದಾರೆ. ಅಬಕಾರಿ ಕಾಯ್ದೆ ಅಡಿಯಲ್ಲಿ ಒಂದು ದಿನಕ್ಕೆ ಸಂಬಂಧಿಸಿದಂತೆ ಖಾಸಗಿ ಸಮಾರಂಭಗಳಲ್ಲಿ ನಿಗದಿತ ಶುಲ್ಕ ಪಾವತಿಸಿ ಸ್ಥಳದ ಮಾಲೀಕರು, ಸಮಾರಂಭದ ಆಯೋಜಕರು, ಅಬಕಾರಿ ವೆಬ್‌ಸೈಟ್ ಮೂಲಕ ಆನ್ ಲೈನ್‌ನಲ್ಲಿ ನಿಗದಿತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ, ಅರ್ಜಿ ಸಲ್ಲಿಸಿದ ಸ್ಥಳಕ್ಕೆ ನಿಯಮಾನುಸಾರ ಮದ್ಯ ತರಲು ಹಾಗೂ ಬಳಕೆ ಮಾಡಲು ಸಿಎಲ್-5 ಸನ್ನದು (ಸಾಂದರ್ಭಿಕ…
ಮಡಿಕೇರಿ ಫೆ.15 NEWS DESK : ಅರೆಭಾಷಾ ಸಾಹಿತ್ಯ, ಸಂಸ್ಕೃತಿ ಮತ್ತು ಅದರ ಬೆಳವಣಿಗೆಯಲ್ಲಿ ಗಣನೀಯ ಸಾಧನೆ ಮಾಡಿದ ಆರು ಮಂದಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅರೆಭಾಷಾ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು ಈ ಕುರಿತು ಮಾಹಿತಿ ನೀಡಿ, 2022ನೇ ಸಾಲಿನ ಗೌರವ ಪ್ರಶಸ್ತಿಯನ್ನು ‘ಸಂಶೋಧನೆ ಮತ್ತು ಅರೆಭಾಷೆ ಸಾಹಿತ್ಯ’ ಕ್ಷೇತ್ರದ ಸಾಧನೆಗಾಗಿ ಕೊಡಗಿನ ಡಾ.ಕಾವೇರಿಮನೆ ಬೋಜಪ್ಪ, ‘ಅರೆಭಾಷೆ ಮತ್ತು ಸಂಸ್ಕೃತಿಯ ಸೇವೆ’ಗಾಗಿ ತುಂತಜೆ ವೆಂಕಟೇಶ್(ಗಣೇಶ್) ಮತ್ತು ‘ಶಿಕ್ಷಣ ಮತ್ತು ವೈದ್ಯಕೀಯ ಸೇವೆ’ಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಡಾ.ಕೆ.ವಿ.ಚಿದಾನಂದ ಅವರು ಪಡೆದುಕೊಂಡಿದ್ದಾರೆಂದರು. 2023ನೇ ಸಾಲಿನ ಗೌರವ ಪ್ರಶಸ್ತಿಗೆ ‘ಅರೆಭಾಷೆ ಸಾಹಿತ್ಯ ಮತ್ತು ಶೈಕ್ಷಣಿ ಸೇವೆ’ಗಾಗಿ ಕೊಡಗಿನ ಕುಯಿಂತೋಡು ದಾಮೋದರ, ‘ಅರೆಭಾಷಾ ಅಧ್ಯಯನ ಮತ್ತು ಸಂಶೋಧನೆ’ಗಾಗಿ ದಕ್ಷಿಣ ಕನ್ನಡದ ಎ.ಕೆ. ಹಿಮಕರ ಮತ್ತು ‘ಅರೆಭಾಷಾ ಸಾಧನೆ ಮತ್ತು ಕಲಾ ಪೋಷಕ’ರ ನೆಲೆಯಲ್ಲಿ ಕೊಡಗಿನ ಕೂಡಕಂಡ ಕಾವೇರಮ್ಮ ಸೋಮಣ್ಣ ಅವರುಗಳು ಆಯ್ಕೆಯಾಗಿದ್ದಾರೆಂದು ತಿಳಿಸಿದರು.…






