Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮೂರ್ನಾಡಿನಲ್ಲಿ ಧರ್ಮಸ್ಥಳ ಯೋಜನೆಯಿಂದ ‘ರೈತ ಕ್ಷೇತ್ರ ಪಾಠಶಾಲೆ’*
  • *ಮೂರ್ನಾಡು ಕೊಡವ ಸಮಾಜದಿಂದ ಕೈಲ್ ಪೊಳ್ದ್ ಒತ್ತೊರ್ಮೆ ಕೂಟ ಹಾಗೂ ಸನ್ಮಾನ ಕಾರ್ಯಕ್ರಮ*
  • *ಆನೆಕಾಡು ಬಳಿ ಹೆಚ್ಚುತ್ತಿರುವ ಅಪಘಾತ: ಶಾಸಕರ ನೇತೃತ್ವದಲ್ಲಿ ಸಭೆ*
  • *ಕೂಡಿಗೆಯಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ*
  • *ಧರ್ಮಜ ಉತ್ತಪ್ಪರಿಗೆ ಸನ್ಮಾನ : 2028ರಲ್ಲೂ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ : ಕೆ.ಜಿ.ಪೀಟರ್ ವಿಶ್ವಾಸ*
  • *ದುಬಾರೆ ಆನೆ ಶಿಬಿರದಲ್ಲಿ ಗಂಡಾನೆ ಸಾವು*
  • *ವಿರಾಜಪೇಟೆ ಗೌರಿ-ಗಣೇಶ ವಿಸರ್ಜನಾ ಮಹೋತ್ಸವ: ಪೊಲೀಸ್, ಚೆಸ್ಕಾಂ ವಿರುದ್ಧ ಸಮಿತಿಗಳ ಆಕ್ರೋಶ*
  • *ವಿರಾಜಪೇಟೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಆರೋಗ್ಯದ ಪಾಠ*
  • *ಮೂರ್ನಾಡಿನಲ್ಲಿ ರೈತ ಕ್ಷೇತ್ರ ಪಾಠಶಾಲೆ : ಸಮಗ್ರ ಹೈನುಗಾರಿಕೆಯಿಂದ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ : ಡಾ.ಶಿಲ್ಪ
  • *ವಿಶ್ವ ಪ್ರವಾಸೋದ್ಯಮ ದಿನಾಚರಣೆ : ಮೈಸೂರಿನಲ್ಲಿ ಅನಾವರಣಗೊಂಡ ಕೊಡವ ಸಂಸ್ಕೃತಿಯ ವೈಭವ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಬಿಜೆಪಿ ವಿರುದ್ಧ ಶಾಸಕದ್ವಯರ ಅಸಮಾಧಾನ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಬಿಜೆಪಿ ವಿರುದ್ಧ ಶಾಸಕದ್ವಯರ ಅಸಮಾಧಾನ*

ಏಪ್ರಿಲ್ 6, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಏ.5 :  ವಿನಯ್ ಸೋಮಯ್ಯ ಸಾವಿನ  ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಷಡ್ಯಂತ್ರ ರೂಪಿಸಿರುವುದು ಖಂಡನೀಯವೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶವದ ಮೇಲಿನ ರಾಜಕೀಯವನ್ನು ರಾಜ್ಯದ ಪ್ರಜ್ಞಾವಂತ ಜನತೆ ದಿಕ್ಕರಿಸಬೇಕೆಂದು ಕರೆ ನೀಡಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಭಾವುಕರಾಗಿ ಮಾತನಾಡಿದ ಪೊನ್ನಣ್ಣ ಅವರು, ಕೊಡಗಿನಾದ್ಯಂತ ಇಬ್ಬರು ಶಾಸಕರು ಕಳೆದ 2 ವಷ೯ಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಯ೯ಗಳನ್ನು ಸಹಿಸಲಾರದೆ ಮತ್ಸರದಿಂದ ವಿನಯ್ ಸಾವಿನ ಪ್ರಕರಣವನ್ನು ಬಳಸಿಕೊಂಡಿರುವ ಬಿಜೆಪಿ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ. ವಾಸ್ತವಾಂಶವನ್ನು ತಿರುಚಿ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರು ವಿನಯ್ ಮೃತದೇಹವನ್ನು ತೆಗೆಯಲು ಕೂಡ ಬಿಡದೆ ಹೀನ ಮನಸ್ಥಿತಿಯನ್ನು ಬಹಿರಂಗಗೊಳಿಸಿದ್ದಾರೆ. ವಿನಯ್ ಕುಟುಂಬಸ್ಥರ ನೋವಿಗೆ ಧನಿಯಾಗದ ಬಿಜೆಪಿ ನಾಯಕರು ಕಾಂಗ್ರೆಸ್ ನ್ನು ಹಾಗೂ ನಮ್ಮಿಬ್ಬರನ್ನು ಟೀಕಿಸಿ ಸ್ಥಳದಿಂದ ಪಲಾಯನ ಮಾಡುವುದಕ್ಕೆ ಸೀಮಿತರಾಗಿದ್ದಾರೆ ಎಂದು ಆರೋಪಿಸಿದರು. ಸಾವಿನ ಮನೆಯಲ್ಲಿಯೂ  ರಾಜಕೀಯ ಮಾಡುವ ಹೀನ ಪ್ರವೃತ್ತಿಯಿಂದ ಬಿಜೆಪಿಯವರು ಹಿಂದೆ ಸರಿಯದೇ ಇರುವುದು ಬೇಸರ ತಂದಿದೆ ಎಂದರು. ವಿನಯ್ ಸಾವಿನಲ್ಲಿ ಕೆಲವೊಂದು ನಿಗೂಢತೆಗಳು ಅಡಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 3-4 ದಿನಗಳಲ್ಲಿ ಸಾವಿನ ಹಿಂದಿನ ನೈಜಾಂಶ ಬೆಳಕಿಗೆ ಬರಲಿದೆ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕುಶಾಲನಗರಕ್ಕೆ ಬಂದು ವಿನಯ್ ಕುಟುಂಬಕ್ಕೆ ಆಥಿ೯ಕ ನೆರವು ನೀಡಿದ್ದಾರೆ. ಈ ಹಣವನ್ನು ವಾರದ ಮೊದಲೇ ನೀಡಿದ್ದರೆ ಖಂಡಿತವಾಗಿಯೂ ವಿನಯ್ ಆತ್ಮಹತ್ಯೆಯನ್ನು ತಡೆಯಬಹುದಿತ್ತು ಎಂದು ಅಭಿಪ್ರಾಯಪಟ್ಟರು.  ವಿನಯ್ ಮೊಬೈಲ್ ನಲ್ಲಿರುವ ಸಂದೇಶದಂತೆ ತಾನು ಯಾರೊಬ್ಬ ಪೊಲೀಸನ ಜೊತೆ ಮಾತನಾಡಿ ಯಾವುದೇ ರೀತಿಯ ಸೂಚನೆ ನೀಡಿದ್ದರೆ ಆ ಬಗ್ಗೆ ಬಿಜೆಪಿಯವರು ದಾಖಲೆ ಸಹಿತ ನಿರೂಪಿಸಲಿ ಎಂದು ಪೊನ್ನಣ್ಣ ಸವಾಲೆಸೆದರು. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಮಾತನಾಡಿ, ಕಳೆದ ನವಂಬರ್ 25 ರಂದು ತಾನು ಕುಶಾಲನಗರ ಸಕಾ೯ರಿ ಆಸ್ಪತ್ರೆಯ ಸಮಸ್ಯೆಗೆ ಸಂಬಂಧಿಸಿದಂತೆ ವಿನಯ್ ಜತೆ ವಾಟ್ಸಪ್ ಕಾಲ್ ನಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದೆ. ವಿನಯ್ ಜೊತೆ ತನಗೆ ಯಾವುದೇ ಸಂಪಕ೯ವೂ ಇಲ್ಲ, ಆತ ಯಾರೆಂದೇ ನನಗೆ ತಿಳದಿಲ್ಲ. ಹೀಗಿರುವಾಗ ಅನವಶ್ಯಕವಾಗಿ ನನ್ನ ಹೆಸರನ್ನು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೊಡಗಿನ ಪ್ರಗತಿ ಬಗ್ಗೆ ಕಾಳಜಿ ವಹಿಸಿ ಕೋಟಿಗಟ್ಟಲೆ ಅನುದಾನವನ್ನು ಜಿಲ್ಲೆಯ ಅಭಿವೖದ್ದಿಗಾಗಿ ತರುತ್ತಿರುವ ಇಬ್ಬರು ಶಾಸಕರ ಸಾಧನೆ ಸಹಿಸಿಕೊಳ್ಳಲಾಗದ ಬಿಜೆಪಿ ಷಡ್ಯಂತ್ರ ಮಾಡಲು ಮುಂದಾಗಿದೆ. ಜಿಲ್ಲೆಯ ಜನತೆ ಸರಿಯಾಗದ ಪಾಠ ಕಲಿಸಲಿದ್ದಾರೆ ಎಂದೂ ಮಂಥರ್ ಹೇಳಿದರು. ದಿನದ 24 ಗಂಟೆಯೂ ಜನರ ಪರವಾಗಿ ಪಕ್ಷಬೇಧವಿಲ್ಲದೇ ಕೆಲಸ ಮಾಡುತ್ತಿರುವಾಗ ರಾಜಕೀಯ ಪಿತೂರಿ ನಡೆಸುತ್ತಿರುವುದು ಖಂಡನೀಯ. ಅಭಿವೃದ್ಧಿ ಮತ್ತು ಸಾವ೯ಜನಿಕ ಸೇವೆಯ ವಿಚಾರದಲ್ಲಿ ಇನ್ನು ಮುಂದೆಯೂ ರಾಜಿಯಿಲ್ಲದೆ ಕಾಯ೯ನಿವ೯ಹಿಸುವುದಾಗಿ ಹೇಳಿದರು. ಕೊಡಗು ಜಿಲ್ಲಾ ಕಾಂಗ್ರೆಸ್  ಅಧ್ಯಕ್ಷ  ಧಮ೯ಜ ಉತ್ತಪ್ಪ ಮಾತನಾಡಿ ವಿನಯ್ ಸಾವಿನ ಪ್ರಕರಣದಲ್ಲಿ ಯಾವುದೇ ರೀತಿಯಲ್ಲಿಯೂ ಸಂಬಂಧ ಹೊಂದಿರದೇ ಇದ್ದರೂ ಈವ೯ರು ಶಾಸಕರನ್ನು ದಾಳವಾಗಿರಿಸಿಕೊಂಡಿರುವುದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ ಎಂದರು. ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ, ಪ್ರಮುಖರಾದ ಟಿ.ಪಿ.ರಮೇಶ್, ಮುನೀರ್ ಅಹಮ್ಮದ್, ಕೊಲ್ಯದ ಗಿರೀಶ್ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

*ಮೂರ್ನಾಡಿನಲ್ಲಿ ಧರ್ಮಸ್ಥಳ ಯೋಜನೆಯಿಂದ ‘ರೈತ ಕ್ಷೇತ್ರ ಪಾಠಶಾಲೆ’*

ಸೆಪ್ಟೆಂಬರ್ 29, 2026

*ಮೂರ್ನಾಡು ಕೊಡವ ಸಮಾಜದಿಂದ ಕೈಲ್ ಪೊಳ್ದ್ ಒತ್ತೊರ್ಮೆ ಕೂಟ ಹಾಗೂ ಸನ್ಮಾನ ಕಾರ್ಯಕ್ರಮ*

ಸೆಪ್ಟೆಂಬರ್ 29, 2026

*ಆನೆಕಾಡು ಬಳಿ ಹೆಚ್ಚುತ್ತಿರುವ ಅಪಘಾತ: ಶಾಸಕರ ನೇತೃತ್ವದಲ್ಲಿ ಸಭೆ*

ಸೆಪ್ಟೆಂಬರ್ 29, 2026

*ಮೂರ್ನಾಡು ಕೊಡವ ಸಮಾಜದಿಂದ ಕೈಲ್ ಪೊಳ್ದ್ ಒತ್ತೊರ್ಮೆ ಕೂಟ ಹಾಗೂ ಸನ್ಮಾನ ಕಾರ್ಯಕ್ರಮ*

ಸೆಪ್ಟೆಂಬರ್ 29, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ನಾಪೋಕ್ಲು, NEWS DESK ಸೆ.29: ಇಲ್ಲಿಗೆ ಸಮೀಪದ ಮೂರ್ನಾಡು ಕೊಡವ ಸಮಾಜದ (ರಿ.) ಆಶ್ರಯದಲ್ಲಿ ಕೈಲ್ ಪೊಳ್ದ್ ಒತ್ತೊರ್ಮೆ ಕೂಟ…

*ಆನೆಕಾಡು ಬಳಿ ಹೆಚ್ಚುತ್ತಿರುವ ಅಪಘಾತ: ಶಾಸಕರ ನೇತೃತ್ವದಲ್ಲಿ ಸಭೆ*

ಸೆಪ್ಟೆಂಬರ್ 29, 2026

*ಕೂಡಿಗೆಯಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ*

ಸೆಪ್ಟೆಂಬರ್ 29, 2026

*ಧರ್ಮಜ ಉತ್ತಪ್ಪರಿಗೆ ಸನ್ಮಾನ : 2028ರಲ್ಲೂ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ : ಕೆ.ಜಿ.ಪೀಟರ್ ವಿಶ್ವಾಸ*

ಸೆಪ್ಟೆಂಬರ್ 29, 2026

*ದುಬಾರೆ ಆನೆ ಶಿಬಿರದಲ್ಲಿ ಗಂಡಾನೆ ಸಾವು*

ಸೆಪ್ಟೆಂಬರ್ 29, 2026

*ವಿರಾಜಪೇಟೆ ಗೌರಿ-ಗಣೇಶ ವಿಸರ್ಜನಾ ಮಹೋತ್ಸವ: ಪೊಲೀಸ್, ಚೆಸ್ಕಾಂ ವಿರುದ್ಧ ಸಮಿತಿಗಳ ಆಕ್ರೋಶ*

ಸೆಪ್ಟೆಂಬರ್ 29, 2026

*ವಿರಾಜಪೇಟೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಆರೋಗ್ಯದ ಪಾಠ*

ಸೆಪ್ಟೆಂಬರ್ 29, 2026

*ಮೂರ್ನಾಡಿನಲ್ಲಿ ರೈತ ಕ್ಷೇತ್ರ ಪಾಠಶಾಲೆ : ಸಮಗ್ರ ಹೈನುಗಾರಿಕೆಯಿಂದ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ : ಡಾ.ಶಿಲ್ಪ

ಸೆಪ್ಟೆಂಬರ್ 29, 2026

*ವಿಶ್ವ ಪ್ರವಾಸೋದ್ಯಮ ದಿನಾಚರಣೆ : ಮೈಸೂರಿನಲ್ಲಿ ಅನಾವರಣಗೊಂಡ ಕೊಡವ ಸಂಸ್ಕೃತಿಯ ವೈಭವ*

ಸೆಪ್ಟೆಂಬರ್ 28, 2026

*ಅ.4 ರಂದು 2ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ*

ಸೆಪ್ಟೆಂಬರ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.