ಬೆಂಗಳೂರು ಫೆ.5 NEWS DESK : ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ ಅವಶ್ಯಕತೆಗಳಿಗಾಗಿ ಸಣ್ಣ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು, ಮರುಪಾವತಿಸುವಲ್ಲಿ ವಿಳಂಬ ಮಾಡಿದ ಸಾಲಗಾರರ ಮೇಲೆ ಅನಧಿಕೃತ ಲೇವಾದೇವಿದಾರರು ಹಣಕಾಸು ಸಂಸ್ಥೆಗಳಿಂದ ಆಗುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ದೌರ್ಜನ್ಯ ತಡೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕರ್ನಾಟಕ ಸರ್ಕಾರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹೇಳಿದ್ದಾರೆ. ತುರ್ತು ವೈದ್ಯಕೀಯ ಚಿಕಿತ್ಸೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಇನ್ನಿತರ ಖರ್ಚಿಗಾಗಿ ತುರ್ತಾಗಿ ಕೈ ಸಾಲ ಪಡೆಯುವ ಪದ್ಧತಿ ರೂಢಿಯಲ್ಲಿದೆ.ಬಹುತೇಕರು ಪಡೆದ ಸಾಲವನ್ನು ವಾಪಸ್ಸು ನೀಡುತ್ತಾರೆ. ಆದರೆ ಕೆಲವು ವ್ಯಕ್ತಿಗಳು ಸಾಮಾಜಿಕ,ವೈಯಕ್ತಿಕ ಅಥವಾ ಉತ್ಪಾದಕವಲ್ಲದ ಕಾರ್ಯಗಳಿಗಾಗಿ ಹಣ ಖರ್ಚು ಮಾಡುವುದರಿಂದ, ಮರುಪಾವತಿ ಕ್ಷಮತೆ ಕಡಿಮೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಲ ನೀಡಿದವರು ಮರು ವಸೂಲಿಗಾಗಿ ಒತ್ತಾಯಿಸುತ್ತಾರೆ.ಕೆಲವೆಡೆ ಇದು ಕಿರುಕುಳವಾಗಿ ಬೆಳೆಯುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ :: ಕಳೆದ ಜನವರಿ 25 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ…
ಲೇಖಕ: admin
ನಾಪೋಕ್ಲು ಫೆ.5 NEWS DESK : ಕಾಫಿ ಕೊಯ್ಲಿನ ಸಮಯ. ರೆಂಬೆಗಳಲ್ಲಿರುವ ಕಾಫಿ ಕೊಯ್ಲು ಮಾಡಿ ತಂದು ಒಣಗಿಸುವುದು ಸಾಮಾನ್ಯ. ಆದರೆ ಇಲ್ಲಿ ಕಾಫಿ ಗಿಡದ ಮುಖ್ಯ ಕಾಂಡದಲ್ಲೇ ಕಾಫಿಯ ಗೊಂಚಲು ಹಣ್ಣಾಗಿ ಅಚ್ಚರಿಯನ್ನುಂಟು ಮಾಡಿದೆ. ಈ ವಿಚಿತ್ರ ಕಂಡು ಬಂದಿದ್ದು, ಸಮೀಪದ ಕಕ್ಕಬೆ ಗ್ರಾ.ಪಂ ವ್ಯಾಪ್ತಿಯ ಯವಕಪಾಡಿಯ ಗ್ರಾಮದ ಕೋಡಿಮನಿಯಂಡ ಎಂ.ಮೊಣ್ಣಪ್ಪ ಅವರ ಕಾಫಿ ತೋಟದಲ್ಲಿ. ಕಾಂಡದಲ್ಲಿ ಮೂಡಿದ ಗೊಂಚಲು-ಗೊಂಚಲು ಕಾಫಿ ಹಣ್ಣು ಅಚ್ಚರಿಗೆ ಕಾರಣವಾಗಿದೆ. ಈ ವಿಸ್ಮಯವನ್ನು ಗ್ರಾಮದ ಕಾಫಿ ಬೆಳೆಗಾರ ಪಾಂಡಂಡ ನರೇಶ್ ಗಮನಿಸಿದ್ದು, ಈ ಒಂದು ಗಿಡದಲ್ಲಿ ಪ್ರತಿ ವರ್ಷ ಕಾಂಡದಲ್ಲೇ ಹೂ ಬಿಟ್ಟು ಕಾಫಿ ಆಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ವರದಿ : ದುಗ್ಗಳ ಸದಾನಂದ.
ನಾಪೋಕ್ಲು ಫೆ.5 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಸಮಾರಂಭವು ಫೆ.21 ರಿಂದ 28 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಎಮ್ಮೆಮಾಡು ಎಮ್ಮೆಮಾಡು ಜಮಾಯತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ತಿಳಿಸಿದ್ದಾರೆ. ಎಮ್ಮೆಮಾಡು ಗ್ರಾಮದಲ್ಲಿ ಸೂಫಿ ಶಹೀದ್ ದರ್ಗಾದಲ್ಲಿ ಉರೂಸ್ ಸಮಾರಂಭದ ಪ್ರಯುಕ್ತ ಉರೂಸ್ ಕುರಿಕ್ಕಲ್ ಕಾರ್ಯಕ್ರಮದಲ್ಲಿ ಅಸರ್ ನಮಾಜಿನ ಬಳಿಕ ಸಂಪ್ರದಾಯದಂತೆ ದಫ್ ಪ್ರದರ್ಶನದೊಂದಿಗೆ ಸೂಫಿ ಶಹೀದ್ ದರ್ಗಾಕ್ಕೆ ತೆರಳಿದ ಸಮುದಾಯ ಬಾಂಧವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಎಮ್ಮೆಮಾಡು ಮಸೀದಿಯ ಖತೀಬರಾದ ರಾಝಿಕ್ ಫೈಝಿ, ಮುದರ್ರಿಸ್ ಹಂಝ ಸಖಾಫಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಮಾತನಾಡಿದ ಎಮ್ಮೆಮಾಡು ಜಮಾಯತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಉರೂಸ್ ಸಮಾರಂಭದ ಅಂಗವಾಗಿ ಸಂಪ್ರದಾಯದಂತೆ ಉರೂಸ್ ಕುರಿಕ್ಕಲ್ ಕಾರ್ಯಕ್ರಮ ನಡೆಸಲಾಗಿದೆ ಎಂದರು. ಜಮಾಯತ್ ಕಾರ್ಯದರ್ಶಿ ಸಿ.ಕೆ.ಹಾರಿಸ್, ಸಹ ಕಾರ್ಯದರ್ಶಿ ಸಿ.ಎಸ್.ಇಬ್ರಾಹಿಂ, ಸಯ್ಯದ್ ಅಝೀಝ್ ತಂಙಳ್, ಸಯ್ಯದ್ ಇಲ್ಯಾಸ್ ತಂಙಳ್,ಶಿಹಾಬುದ್ದೀನ್ ಮತ್ತಿತರ ಪ್ರಮುಖರು, ಸಮುದಾಯ ಬಾಂಧವರು ಪಾಲ್ಗೊಂಡಿದ್ದರು. ವರದಿ…
ಪಾಲಿಬೆಟ್ಟ ಫೆ.5 NEWS DESK : ಭಾವೈಕ್ಯತೆಯ ಧಾರ್ಮಿಕ ಕೇಂದ್ರ ಎಂದೇ ಇತಿಹಾಸ ಪ್ರಸಿದ್ಧಿಯಾಗಿರುವ ಪಾಲಿಬೆಟ್ಥ ಆರ್ಕಾಡ್ ಪಟ್ಟಾಣ್ ಬಾಬಾ ಶಾಹ್ ವಲಿಯವರ ಉರೂಸ್ ಸಮಾರಂಭದ ಸಮಾರೋಪ ಹಾಗೂ ಸರ್ವಧರ್ಮ ಸಮ್ಮೇಳನ ದರ್ಗಾ ಆವರಣದಲ್ಲಿ ನಡೆಯಿತು. ಮನೆಹಳ್ಳಿಮಠದ ಶ್ರೀ ತಪೋ ಕ್ಷೇತ್ರ ಮಹಾಂತ ಶಿವಲಿಂಗ ಸ್ವಾಮಿಜಿ ಮಾತನಾಡಿ ಸರ್ವಧರ್ಮದ ಸಮನ್ವಯ ಕೇಂದ್ರಗಳಿಂದ ಶಾಂತಿ ಸಹ ಬಾಳ್ವೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದ್ದು, ಇಂತಹ ಸರ್ವಧರ್ಮ ಸಮ್ಮೇಳನಗಳ ಮೂಲಕ ಭಾವೈಕ್ಯತೆಯೊಂದಿಗೆ ಒಗ್ಗೂಡಿ ಆಚರಣೆಗಳು ಮಾಡಿದ್ದಲ್ಲಿ ಸಹೋದರತ್ವ ನಿರ್ಮಾಣವಾಗಲು ಸಾಧ್ಯವಾಗಲಿದೆ. ಪಾಲಿಬೆಟ್ಟ ಉರೂಸ್ ಸರ್ವ ಧರ್ಮಿಯರನ್ನು ಒಗ್ಗೂಡಿಸಿ ಇತಿಹಾಸದಿಂದಲೂ ಆಚರಣೆ ಮಾಡಿಕೊಂಡು ಬರುವ ಮೂಲಕ ಸೌಹಾರ್ದತೆ ಸಾರುತ್ತಿರುವುದು ಉರೂಸ್ ನಲ್ಲಿ ಪಾಲ್ಗೊಳ್ಳುತ್ತಿರುವ ಭಕ್ತ ಸಮೂಹವೇ ಸಾಕ್ಷಿಯಾಗಿದೆ. ನಾವು ನಡೆಯುವ ದಾರಿಗಳು ಬೇರೆ ಇರಬಹುದು ಆದರೆ ತಲುಪುವ ಗುರಿ ಮಾತ್ರ ಭಗವಂತನ ಸನ್ನಿಧಿಗೆ. ಕೆಡುಕಿನಿಂದ ದೂರವಾಗಿ ಒಳಿತನ್ನ ಬಯಸಿ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು. ಪಾಲಿಬೆಟ್ಟ ಲೂರ್ಡ್ಸ್…
ಮಡಿಕೇರಿ ಫೆ.5 NEWS DESK : ಆಲ್ ಸ್ಟಾರ್ ಎಫ್.ಸಿ ಗೋಣಿಕೊಪ್ಪಲು ತಂಡವು ಆಯೋಜಿಸರುವ ಆಲ್ ಇಂಡಿಯಾ ಸೂಪರ್ ಫೈವ್ಸ್ ಹೊನಲು ಬೆಳಕಿನ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯು ಮೇ 1 ರಿಂದ 4ರವರೆಗೆ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಮೈದಾನ ಶುಲ್ಕ 7500 ರೂ ನಿಗದಿಪಡಿಸಿದ್ದು, ಚಾಂಪಿಯನ್ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ 2 ಲಕ್ಷ ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ಒಂದು ಲಕ್ಷ ರೂ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ. ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ಹಲವು ವೈಯಕ್ತಿಕ ಪ್ರಶಸ್ತಿಗಳನ್ನು ಕೂಡ ನೀಡಲಾಗುತ್ತಿದ್ದು, ಆಸಕ್ತ ತಂಡಗಳು ಹೆಚ್ಚಿನ ಮಾಹಿತಿಗಾಗಿ 78298 63710, 78992 88471,7356590210 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಬೆಂಗಳೂರು ಫೆ.5 NEWS DESK : ಜಗತ್ತಿನ ಕಾಫಿ ಬೆಳೆಯುವ ದೈತ್ಯ ದೇಶಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಅಂತರ್ರಾಷ್ಟ್ರೀಯ ಮಾರುಕಟ್ಟೆಗೆ ಕಾಫಿಯ ಸರಬರಾಜಿನಲ್ಲಿ ತೀವ್ರ ಕೊರತೆ ಉಂಟಾಗಿದ್ದು ಇದು ಸಹಜವಾಗಿಯೇ ಕಾಫಿಯ ದರ ಏರಿಕೆಗೂ ಕಾರಣವಾಗಿದೆ. ಮಂಗಳವಾರ ಕಾಫಿ ಬೆಳೆಗಾರರಿಗೆ ಶುಭ ಮಂಗಳವಾರವೇ ಆಗಿದೆ. ಕಳೆದ 7 ದಿನಗಳ ಹಿಂದೆ 24,100 ರೂಪಾಯಿ ತಲುಪಿದ್ದ ಅರೇಬಿಕಾ ಪಾರ್ಚ್ ಮೆಂಟ್ ಕಾಫಿ ದರ ಇಂದು ಸರ್ವಕಾಲಿಕ ದಾಖಲೆ ಬೆಲೆ ಆಗಿರುವ 26,200 ರೂಪಾಯಿಗಳನ್ನು ತಲುಪಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮಿನುಗಿಸಿದೆ. ಈ ಬಾರಿಯ ದರ ಏರಿಕೆಯ ವಿಶೇಷವೆಂದರೆ ಸಾಮಾನ್ಯವಾಗಿ ಕಾಫಿ ದರವು ಕೊಯ್ಲು ಸಮಯದಲ್ಲಿ ಕಾಫಿಯ ಆವಕ ಹೆಚ್ಚಾಗುವುದರಿಂದ ಕೊಂಚ ಕುಸಿತ ಇರುತ್ತದೆ . ಕೊಯಿಲು ಮುಗಿದ ಮೂರು ನಾಲ್ಕು ತಿಂಗಳಿನಲ್ಲಿ ಅಲ್ಪ ಏರಿಕೆ ದಾಖಲಿಸುತ್ತದೆ. ಆದರೆ ಈ ಬಾರಿ ಕಾಫಿ ಕೊಯ್ಲು ಇನ್ನೂ ಪೂರ್ಣಗೊಳ್ಳುವ ಮೊದಲೇ ಬೆಲೆಗಳು ಜಿಗಿತ ದಾಖಲಿಸಿವೆ. ಶುಕ್ರವಾರವಷ್ಟೇ 50 ಕೆಜಿ ಚೀಲಕ್ಕೆ 24 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿ ಮಾರಾಟವಾಗುತಿದ್ದ…
ಮಡಿಕೇರಿ ಫೆ.4 NEWS DESK : ಆರೋಗ್ಯವೇ ನಮಗೆ ಒಂದು ಸಂಪತ್ತು. ಆರೋಗ್ಯವನ್ನು ಕಾಪಾಡಿಕೊಂಡರೆ ಅದಕ್ಕಿಂತ ಸಂಪತ್ತು ಬೇರೊಂದಿಲ್ಲ. ಹಾಗಾಗಿ ನಾವು ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಉತ್ತಮ ಆರೋಗ್ಯ ಹೊಂದಿದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹೊಸಮನಿ ಪುಂಡಲಿಕ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಡಿಕೇರಿ ಸರ್ಕಾರಿ ಅಭಿಯೋಜನಾ ಇಲಾಖೆ ಮತ್ತು ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತ್ತಾಶ್ರಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ನಡೆದ “ಆರೋಗ್ಯ ಮಾಹಿತಿ, ತಪಾಸಣಾ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷರಾದ ಎಂ.ಎ.ನಿರಂಜನ್ ಮಾತನಾಡಿ ಆಯುಷ್ ಇಲಾಖೆಯು ಸುಸ್ಸಜಿತ ಸವಲತ್ತು ಹೊಂದಿರುವ ಆಸ್ಪತ್ರೆಯಾಗಿದೆ. ಹಾಗೆಯೇ ನಮ್ಮ ವೈದ್ಯಕೀಯ ವ್ಯವಸ್ಥೆಯು ಬಹಳ ದೊಡ್ಡಮಟ್ಟದಲ್ಲಿ ಬೆಳೆದಿದೆ. ವಿದೇಶಿಜನರು ಹೆಚ್ಚಾಗಿ ಇದರ ಉಪಯೋಗ ಪಡೆದುಕೊಂಡು ಕಲಿತು…
ಮಡಿಕೇರಿ ಫೆ.4 NEWS DESK : ಶಾಲಾ-ಕಾಲೇಜು ಹಂತದಲ್ಲಿಯೇ ಮಕ್ಕಳಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯ ಅರವಳಿಕೆ ವಿಭಾಗ ಮತ್ತು ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಸಹಯೋಗದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನ ಕೊಠಡಿಯಲ್ಲಿ ಅಂಗಾಂಗ ದಾನದ ಜಾಗೃತಿ ಕುರಿತು ವೈದ್ಯಕೀಯ ಕಾರ್ಯಾಗರದಲ್ಲಿ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಅಂಗಾಂಗ ದಾನ ಮಾಡಿಸುವಲ್ಲಿ ಸಾಮಾಜಿಕವಾಗಿ ಎಲ್ಲರಲ್ಲೂ ಜಾಗೃತಿಗೊಳಿಸಬೇಕು. ಶಾಲಾ-ಕಾಲೇಜು ಹಂತದಲ್ಲಿಯೇ ಮಕ್ಕಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಪಠ್ಯದಲ್ಲಿ ಅಂಗಾಂಗ ದಾನದ ಮಹತ್ವವನ್ನು ವಿವರಿಸುವ ಕೆಲಸವಾಗಬೇಕು. ವೈದ್ಯರುಗಳು ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಕ್ರಮ ವಹಿಸಬೇಕೆಂದು ತಿಳಿಸಿದರು. ರಸ್ತೆ ಅಪಘಾತವಾದ ಸಂದರ್ಭ ಹೆಚ್ಚಾಗಿ ರೋಗಿಯ ಮೆದುಳು ನಿಷ್ಕ್ರಿಯವಾಗಿರುತ್ತದೆ. ಈ ಸಂದರ್ಭ ಕುಟುಂಬದ ಮನವೊಲಿಸಿ ಅಂಗಾಂಗ ದಾನ ಮಾಡಲು ಪ್ರೇರೇಪಿಸುವ ಬಗ್ಗೆ ಜಾಗೃತಿ ಹೆಚ್ಚಾಗಬೇಕೆಂದು ತಿಳಿಸಿದರು. ಅಂಗಾಂಗ ದಾನದ…
ಮಡಿಕೇರಿ ಫೆ.4 NEWS DESK : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀಮಹಾ ಮೃತ್ಯುಂಜಯ ದೇವಾಲಯದ ವಿಚಾರದಲ್ಲಿ ಎರಡು ಜನಾಂಗಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಮತ್ತು ಗೊಂದಲ ನಿವಾರಣೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾಧ್ಯಕ್ಷ ಮುಕ್ಕಾಟಿರ ಅಪ್ಪಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ದೇವಾಲಯದಲ್ಲಿ ಗೊಂದಲ ಏರ್ಪಟ್ಟು ಹಲವು ದಿನಗಳೇ ಕಳೆದಿದೆ, ಈ ವಿಚಾರವಾಗಿ ಎರಡು ಜನಾಂಗಗಳ ನಡುವೆ ಮನಸ್ತಾಪಗಳು ಏರ್ಪಟ್ಟು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕೊಡಗಿನ ಕುರಿತು ಕೆಟ್ಟ ಅಭಿಪ್ರಾಯ ಮೂಡುತ್ತಿದೆ. ಶಾಂತಿ ಮತ್ತು ಸಾಮರಸ್ಯ ಕಾಪಾಡಬೇಕಾದ ದೊಡ್ಡ ಜವಾಬ್ದಾರಿ ಹೊಂದಿರುವ ಚುನಾಯಿತ ಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದು ಸರಿಯಾದ ಕ್ರಮವಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಯ ಸಮಗ್ರ ಅಭ್ಯುದಯಕ್ಕಾಗಿ ಇಲ್ಲಿ ಜೀವನ ಸಾಗಿಸುತ್ತಿರುವ ಪ್ರತಿಯೊಂದು ಜನಾಂಗವೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಇರಬೇಕಾಗಿದೆ. ಜನಾಂಗ ಜನಾಂಗಗಳ ನಡುವೆ ಬಿರುಕು ಮೂಡಿದಾಗ ಅದನ್ನು ಸರಿಪಡಿಸಿ ಶಾಂತಿ…
ಮಡಿಕೇರಿ ಫೆ.4 NEWS DESK : ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ಎನ್.ಐ.ಎಂ.ಎ), ಕೊಡಗು ಸಂಘದ ವತಿಯಿಂದ ಮಡಿಕೇರಿಯಲ್ಲಿ ಆಯುರ್ವೇದ ವೈದ್ಯರಿಗೆ ನಿರಂತರ ಶಿಕ್ಷಣ ನಡೆಯಿತು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜೆಡ್ಡು ಆಯುರ್ವೇದ ಆಸ್ಪತ್ರೆ ಮತ್ತು ಜೆಡ್ಡು ಫಾರ್ಮಸಿ ಸ್ಥಾಪಕರಾದ ಡಾ.ಗಣಪತಿ ಭಟ್ ಜೆಡ್ಡು, ಮಾತನಾಡಿ “ಆರೋಗ್ಯ ಕಾಪಾಡಲು ಆಯುರ್ವೇದ ಇಂದಿನ ಅಗತ್ಯವಾಗಿದೆ. ವೃದ್ಯಾಪ್ಯದಲ್ಲಿ ಯೌವನ ಕಾಪಾಡುವಲ್ಲಿ ಆಯುರ್ವೇದದ ಮಹತ್ವ” ಎಂಬ ಬಗ್ಗೆ ಮಾಹಿತಿ ನೀಡಿದರು. ಸಮಯಕ್ಕೆ ಸರಿಯಾದ ಭೋಜನ, ನಮ್ಮ ಜೀವನಶೈಲಿ, ಮಾನಸಿಕ ಸುಸ್ಥಿತಿ, ಹೀಗೆ ಯಾವ ಬದಲಾವಣೆ ಹೇಗೆ ನಮ್ಮ ದೀಘಾ೯ಯಷ್ಯವನ್ನು ಆರೋಗ್ಯಕರವಾಗಿ ಉತ್ಸಾಹಭರಿತವಾಗಿ ಕಾಪಾಡುವಲ್ಲಿ ಆಯುರ್ವೇದ ನೆರವಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ವಿರಾಮವಿಲ್ಲದೆ, ನಿಯತ ಗುರಿ ಇಲ್ಲದೆ ಓಡುತ್ತಿರುವ ಈ ಸಮಾಜ ವಿಶ್ರಮಿಸುವಷ್ಟರಲ್ಲಿ ವಾರ್ಧಕ್ಯ ಮತ್ತು ಅನಾರೋಗ್ಯ ಮಾನವನನ್ನು ಸಂಪೂರ್ಣ ದುರ್ಬಲನನ್ನಾಗಿಸುತ್ತದೆ. ಆದ್ದರಿಂದ ಸರಿಯಾದ ಸಮಯದಲ್ಲಿ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಉಪಚಾರಗಳನ್ನು ಕೂಡ ಮಾಡುವುದರ ಮೂಲಕ ಆರೋಗ್ಯಕರ ವಾರ್ಧಕ್ಯವನ್ನು ಕಳೆಯುವ ಬಗ್ಗೆ ಡಾ.ಗಣಪತಿ ಭಟ್…






