Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸುಂಟಿಕೊಪ್ಪದಲ್ಲಿ ಅ.16ರಿಂದ 18ರವರೆಗೆ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ*
  • *ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯಿರಿ; ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಆಧುನಿಕ ವೈದ್ಯಕೀಯ ವ್ಯವಸ್ಥೆ*
  • **ತಾಳತ್ತಮನೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ ಯಶಸ್ವಿ**
  • *ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಸಾಧನೆ : ಜನರಲ್ ತಿಮ್ಮಯ್ಯ ಶಾಲಾ ವಿದ್ಯಾರ್ಥಿನಿಯರಿಗೆ ಗೌರವ*
  • *ನಿಯಮ ಉಲ್ಲಂಘಿಸಿ ಮರದ ದಿಮ್ಮಿ ಸಾಗಾಟ : ಐದು ಲಾರಿ ವಶ : ರೂ.2.97 ಲಕ್ಷ ದಂಡ*
  • *ತಾಳತ್ತಮನೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ ಯಶಸ್ವಿ*
  • *ತಾಳತ್ತಮನೆಯಲ್ಲಿ ಯುವಜನತೆ ಹಾಗೂ ಮಹಿಳೆಯರಿಗೆ ಅಣಬೆ ಕೃಷಿ ತರಬೇತಿ : ಸ್ವಾವಲಂಬಿಗಳಾಗಲು ಕರೆ*
  • *ಮಂಗಳೂರಿನ MRPLನಲ್ಲಿ ಭಾರೀ ಸ್ಫೋಟ*
  • *ಮಡಿಕೇರಿಯಲ್ಲಿ ಕಾಫಿ ದಸರಾ: ಮಳಿಗೆ ತೆರೆಯಲು ಅವಕಾಶ*
  • *ಸಮುದಾಯದ ಸಂಸ್ಕೃತಿ, ಆಚಾರ-ವಿಚಾರ, ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಿ: ಬಿಲ್ಲರಿಕುಟ್ಟಡ ಪ್ರಭು ಅಯ್ಯಪ್ಪ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಜನರ ಹಾದಿ ತಪ್ಪಿಸುವ ರಾಜಕೀಯ ಪ್ರೇರಿತ ಧರಣಿ : ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಟೀಕೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಜನರ ಹಾದಿ ತಪ್ಪಿಸುವ ರಾಜಕೀಯ ಪ್ರೇರಿತ ಧರಣಿ : ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಟೀಕೆ*

ಮಾರ್ಚ್ 7, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮಾ.7 NEWS DESK : ಕೊಡಗು ಜಿಲ್ಲೆಯ ಶಾಸಕದ್ವಯರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಬಿಜೆಪಿ ಮಂದಿ ಜಿಲ್ಲೆಯ ಜನರ ಹಾದಿ ತಪ್ಪಿಸುವುದಕ್ಕಾಗಿ ರಾಜಕೀಯ ಪ್ರೇರಿತವಾದ ಧರಣಿ ಸತ್ಯಾಗ್ರಹ ನಡೆಸಿದ್ದಾರೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ.ಜಿ.ಮೋಹನ್ ಟೀಕಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನಿಂದ ಹತಾಶೆಗೊಂಡಿರುವ ಬಿಜೆಪಿ ನಾಯಕರು ಇಬ್ಬರು ಕಾಂಗ್ರೆಸ್ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ನಿತ್ಯ ಪ್ರತಿಭಟನೆಯ ಪ್ರಹಸನ ಮಾಡುತ್ತಿದ್ದಾರೆ. ತಮ್ಮ ಸುದೀರ್ಘ ಕಾಲದ ಅಧಿಕಾರವಧಿಯಲ್ಲಿ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಸೂಚಿಸದವರು ಇಂದು ಅದೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಆರೋಪಿಸಿದ್ದಾರೆ.  ಸಿ ಮತ್ತು ಡಿ ಭೂಮಿಯ ಗೊಂದಲ, ವನ್ಯಜೀವಿಗಳ ಹಾವಳಿ, ಬೆಳೆಗಾರರ ಕಡೆಗಣನೆ, ಪರಿಶಿಷ್ಟರ ಸಂಕಷ್ಟ ಇವುಗಳೆಲ್ಲವು ಇಂದು ಸೃಷ್ಟಿಯಾದ ಸಮಸ್ಯೆಗಳಲ್ಲ. ಕಳೆದ ಎರಡು ದಶಕಗಳಿಂದಲೂ ಈ ಸಮಸ್ಯೆ ಶಾಶ್ವತವಾಗಿಯೇ ಉಳಿದುಕೊಂಡಿವೆ.  ಕಳೆದ 20 ವರ್ಷಗಳಿಂದ ಅಭಿವೃದ್ಧಿ ಕಾಣದ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರದ ರಸ್ತೆಗಳೆಲ್ಲವೂ ಶಾಸಕರಾದ ಡಾ.ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರ ಕಾಳಜಿಯಿಂದ ಅಭಿವೃದ್ಧಿಯನ್ನು ಕಾಣುತ್ತಿವೆ. ಇವರುಗಳ ವಿಶೇಷ ಆಸಕ್ತಿಯಿಂದಲೇ ಮುಖ್ಯಮಂತ್ರಿಗಳು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಆಸ್ಪತ್ರೆಗಳು ಮತ್ತು ರಸ್ತೆಗಳ ಅಭಿವೃದ್ಧಿಗೆ ಜಿಲ್ಲೆಗೆ ಅನುದಾನ ಮೀಸಲಿಡಲಾಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ದಾಖಲೆ ರೂಪದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವನ್ನು ಪಡೆದುಕೊಂಡಿದ್ದು, ಇನ್ನು ಮುಂದೆಯೂ ಉತ್ತಮ ಅಭಿವೃದ್ಧಿ ಯೋಜನೆಗಳನ್ನು ನಿರೀಕ್ಷಿಸಬಹುದಾಗಿದೆ. ಮುಖ್ಯಮಂತ್ರಿಗಳಿಗೆ ಕೊಡಗಿನ ಬಗ್ಗೆ ವಿಶೇಷ ಕಾಳಜಿ ಇರುವುದರಿಂದಲೇ ಅವರು ಮೂರು ಬಾರಿ ಇಲ್ಲಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಕೊಡಗು ವಿವಿ ಮುಚ್ಚದಂತೆ ತಡೆಯಲು ಜಿಲ್ಲೆಯ ಇಬ್ಬರು ಶಾಸಕರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದರೂ ವಿನಾಕಾರಣ ರಾಜಕೀಯ ಲಾಭಕ್ಕಾಗಿ ಬಿಜೆಪಿ ಧರಣಿ ನಡೆಸುತ್ತಿದೆ ಎಂದು ವಿ.ಜಿ.ಮೋಹನ್ ಆರೋಪಿಸಿದ್ದಾರೆ. ಬಿಜೆಪಿ ನಾಯಕರು ಅಭಿವೃದ್ಧಿಪರ ಚಿಂತನೆಯ ಜಿಲ್ಲೆಯ ಇಬ್ಬರು ಶಾಸಕರು ಹಾಗೂ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರದಿಂದ ಕೊಡಗು ಜಿಲ್ಲೆಗೆ ಬರಬೇಕಾದ ಯೋಜನೆ ಮತ್ತು ಅನುದಾನಗಳ ಬಗ್ಗೆ ಚಿಂತಿಸಲಿ. ಈ ಕ್ಷೇತ್ರದ ಸಂಸದರು ವಿಶೇಷ ಕಾಳಜಿ ತೋರಿ ಕೇಂದ್ರ ಸರ್ಕಾರದಿಂದ ಅನುದಾನ ತಂದು ಕೊಡಗು ವಿವಿ ಉಳಿಸಲು ನೈಜ ಕಾಳಜಿ ತೋರಲಿ ಎಂದು ಒತ್ತಾಯಿಸಿರುವ ಅವರು, ಬಿಜೆಪಿಯ ನಾಟಕೀಯ ರೂಪದ ಪ್ರತಿಭಟನೆಗಳನ್ನು ಜಿಲ್ಲೆಯ ಜನ ಇನ್ನು ಮುಂದೆ ನಂಬುವುದಿಲ್ಲವೆಂದು ತಿಳಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Related Posts

*ಸುಂಟಿಕೊಪ್ಪದಲ್ಲಿ ಅ.16ರಿಂದ 18ರವರೆಗೆ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ*

ಸೆಪ್ಟೆಂಬರ್ 30, 2026

*ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯಿರಿ; ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಆಧುನಿಕ ವೈದ್ಯಕೀಯ ವ್ಯವಸ್ಥೆ*

ಸೆಪ್ಟೆಂಬರ್ 30, 2026

**ತಾಳತ್ತಮನೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ ಯಶಸ್ವಿ**

ಸೆಪ್ಟೆಂಬರ್ 30, 2026

*ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯಿರಿ; ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಆಧುನಿಕ ವೈದ್ಯಕೀಯ ವ್ಯವಸ್ಥೆ*

ಸೆಪ್ಟೆಂಬರ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಸೆ.30: ಜೀರ್ಣಾಂಗದ ಕಾಯಿಲೆಗಳು, ಜಠರ-ಕರುಳಿನ ಕ್ಯಾನ್ಸರ್ ಹಾಗೂ ಲಿವರ್ ಸಂಬಂಧಿತ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು…

**ತಾಳತ್ತಮನೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ ಯಶಸ್ವಿ**

ಸೆಪ್ಟೆಂಬರ್ 30, 2026

*ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಸಾಧನೆ : ಜನರಲ್ ತಿಮ್ಮಯ್ಯ ಶಾಲಾ ವಿದ್ಯಾರ್ಥಿನಿಯರಿಗೆ ಗೌರವ*

ಸೆಪ್ಟೆಂಬರ್ 30, 2026

*ನಿಯಮ ಉಲ್ಲಂಘಿಸಿ ಮರದ ದಿಮ್ಮಿ ಸಾಗಾಟ : ಐದು ಲಾರಿ ವಶ : ರೂ.2.97 ಲಕ್ಷ ದಂಡ*

ಸೆಪ್ಟೆಂಬರ್ 30, 2026

*ತಾಳತ್ತಮನೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ ಯಶಸ್ವಿ*

ಸೆಪ್ಟೆಂಬರ್ 30, 2026

*ತಾಳತ್ತಮನೆಯಲ್ಲಿ ಯುವಜನತೆ ಹಾಗೂ ಮಹಿಳೆಯರಿಗೆ ಅಣಬೆ ಕೃಷಿ ತರಬೇತಿ : ಸ್ವಾವಲಂಬಿಗಳಾಗಲು ಕರೆ*

ಸೆಪ್ಟೆಂಬರ್ 30, 2026

*ಮಂಗಳೂರಿನ MRPLನಲ್ಲಿ ಭಾರೀ ಸ್ಫೋಟ*

ಸೆಪ್ಟೆಂಬರ್ 30, 2026

*ಮಡಿಕೇರಿಯಲ್ಲಿ ಕಾಫಿ ದಸರಾ: ಮಳಿಗೆ ತೆರೆಯಲು ಅವಕಾಶ*

ಸೆಪ್ಟೆಂಬರ್ 29, 2026

*ಸಮುದಾಯದ ಸಂಸ್ಕೃತಿ, ಆಚಾರ-ವಿಚಾರ, ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಿ: ಬಿಲ್ಲರಿಕುಟ್ಟಡ ಪ್ರಭು ಅಯ್ಯಪ್ಪ*

ಸೆಪ್ಟೆಂಬರ್ 29, 2026

*ನ.21 ಮತ್ತು 22ರಂದು ವಿರಾಜಪೇಟೆಯಲ್ಲಿ ಕೂರ್ಗ್ ಮಾಸ್ಟರ್ಸ್ ಕಪ್ 50+ ಕಾಲ್ಚೆಂಡು ಪಂದ್ಯಾಟ*

ಸೆಪ್ಟೆಂಬರ್ 29, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.