ಲೇಖಕ: admin

ಮಡಿಕೇರಿ ಜ.28 NEWS DESK : ಶ್ರೀಮಂಗಲದ ಜೆ.ಸಿ.ವಿದ್ಯಾ ಸಂಸ್ಥೆಯ 35ನೇ ವಾರ್ಷಿಕೋತ್ಸವವು ಸಂಭ್ರಮದಿಂದ ನಡೆಯಿತು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕೊಟ್ರಂಗಡ ಸುಬ್ರಮಣಿ ಪ್ರತಿಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ತಂದು ಕೊಡುವುದಲ್ಲದೆ ಕೊಡಗಿನಲ್ಲಿ ಪ್ರಪ್ರಥಮ ಬಾರಿಗೆ ಗ್ರಾಮಾಂತರ ಶಾಲೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ತಂದು ಕೊಟ್ಟಿದ್ದು ನಮ್ಮ ಸಂಸ್ಥೆಯ ಸಾಧನೆ ಎಂದರು. ಇದಕ್ಕೆ ಶ್ರಮಿಸಿದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಸಂಸ್ಥೆಯ ಕರೆಸ್ಪಾಂಡೆಂಟ್ ಮಚ್ಚಮಾಡ ಸುರೇಶ್ ಮಾತನಾಡಿ, ಈ ವಿದ್ಯಾ ಸಂಸ್ಥೆಯಲ್ಲಿ ವಿದ್ಯೆಯನ್ನು ಪಡೆದ ವಿದ್ಯಾರ್ಥಿಗಳು ಇಂದು ಡಾಕ್ಟರ್, ಇಂಜಿನಿಯರ್, ಸೈನಿಕರಾಗಿ, ಕ್ರೀಡಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಶಾಲೆಯ ಆಡಳಿತ ಅಧಿಕಾರಿ ಕೊಟ್ರಂಗದ ತಿಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ತಾವು ಸದಾಸಿದ್ಧ ಎಂದು ಹೇಳಿದರಲ್ಲದೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎನ್.ಸತೀಶ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಂಧು ವಾರ್ಷಿಕ ವರದಿ ವಾಚಿಸಿದರು.  ಸಹ ಶಿಕ್ಷಕ ಪ್ರಸನ್ನ…

Read More

ಬೆಂಗಳೂರು ಜ.28 NEWS DESK :  ಬೆಂಗಳೂರಿನ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ನಾಡದೇವಿ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿ, ಕನ್ನಡದ ಕಂಪು ಜಗದಗಲ ಪಸರಿಸಲೆಂದು ಶುಭ ಕೋರಿದರು. ವಿಶೇಷ ಪೂಜೆ ಮೂಲಕ 43.6 ಅಡಿ ಎತ್ತರದ ಭುವನೇಶ್ವರಿ ಪ್ರತಿಮೆ ಅನಾವರಣಗೊಳಿಸಲಾಗಿದ್ದು, ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಸ್ಪೀಕರ್ ಯು.ಟಿ.ಖಾದರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮತ್ತು ಸಚಿವರು, ಶಾಸಕರು ಸೇರಿದಂತೆ ಹಲವರು ಭಾಗಿಯಾಗಿದ್ದರು.

Read More

ಮಡಿಕೇರಿ ಜ.28 NEWS DESK : ಪುಟಾಣಿ ವಿಜ್ಞಾನ ಬಳಗದವರು ನಡೆಸಿದ ರಾಷ್ಟ್ರಮಟ್ಟದ ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ಚೇರಂಬಾಣೆ ಕೊಟ್ಟೂರು ರಾಜರಾಜೇಶ್ವರಿ ಶಾಲೆಯ ಕಿರಿಯ ಪ್ರಾಥಮಿಕ ವಿಭಾಗದ ಒಟ್ಟು 73 ವಿದ್ಯಾರ್ಥಿಗಳು ಭಾಗವಹಿಸಿ ಉತ್ತೀರ್ಣರಾಗಿದ್ದಾರೆ. ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಡಿ.ಎನ್.ಪಂಚಮಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ, 5ನೇ ತರಗತಿಯ ಪಿ.ಎಸ್.ದ್ವಿತೀಯ ಸ್ಥಾನ, ರಾಜ್ಯಮಟ್ಟದಲ್ಲಿ 4ನೇ ತರಗತಿಯ ಪಿ.ವಿ.ಕವಿನ  ದ್ವಿತೀಯ ಸ್ಥಾನ, ಐದನೇ ತರಗತಿಯ ಬಿ.ಜೆ.ಡಿಂಪನಾ ದ್ವಿತೀಯ ಸ್ಥಾನ,ಜಿಲ್ಲಾ ಮಟ್ಟದಲ್ಲಿ 4ನೇ ತರಗತಿಯ ಪಿ.ವಿ.ಕವನ ದ್ವಿತೀಯ ಸ್ಥಾನ, 5ನೇ ತರಗತಿಯ ಕೆ.ವೈ.ಪಾರ್ಥ ದ್ವಿತೀಯ ಸ್ಥಾನ, ತಾಲ್ಲೂಕು ಮಟ್ಟದಲ್ಲಿ 4ನೇ ತರಗತಿಯ ಬಿ.ಜಿ.ಪ್ರತೀಕ್  ದ್ವಿತೀಯ ಸ್ಥಾನ, 5ನೇ ತರಗತಿಯ ಪ್ರಥಮ್ ಕಾರ್ಯಪ್ಪ 3ನೇ ಸ್ಥಾನಪಡೆದು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳೊಂದಿಗೆ ವಿದ್ಯಾಸಂಸ್ಥೆಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಕೆ.ಬಿ.ಸ್ವರೂಪ್ ಹಾಗೂ ಗಣಿತ ಶಿಕ್ಷಕಿ ಸರಳ ಹಾಜರಿದ್ದರು.

Read More

ಬೆಂಗಳೂರು  ಜ.28 NEWS DESK : ಮಹಿಳೆಯರನ್ನು ಕಾಫಿ ಉದ್ಯಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಅವರಿಗೆ ಸೂಕ್ತ ಉದ್ಯೋಗಾವಕಾಶ ಒದಗಿಸುವ ಜತೆಗೇ ಕಾಫಿಯ ಆಂತರಿಕ ಬೇಡಿಕೆಯನ್ನೂ ಹೆಚ್ಚಿಸಲು ಕಾಫಿ ಮಂಡಳಿಯು ಕರ್ನಾಟಕ ರಾಷ್ಟ್ರೀಯ ಜೀವನೋಪಾಯ ಮಿಷನ್‌ ನ ಸಹಯೋಗದೊಂದಿಗೆ ಮಹತ್ತರವಾದ ಯೋಜನೆಯೊಂದನ್ನು ಜಾರಿಗೊಳಿಸಿದೆ. ಈ ಯೋಜನೆಯ ಪ್ರಕಾರ ಕರ್ನಾಟಕದಾದ್ಯಂತ ರಾಷ್ಟ್ರೀಯ ಜೀವನೋಪಾಯ ಮಿಷನ್ ಸ್ವ-ಸಹಾಯ ಗುಂಪುಗಳ (SHGs) ಸುಮಾರು ಒಂದು ಲಕ್ಷ ಮಹಿಳಾ ಸದಸ್ಯರಿಗೆ ಕಾಫಿ ತಯಾರಿಸುವ ತಂತ್ರಗಳು ಮತ್ತು ಗ್ರಾಮೀಣ ಕೆಫೆ ನಿರ್ವಹಣೆಯಲ್ಲಿ ಸಬಲೀಕರಣ ನೀಡುವ ಯೋಜನೆಯನ್ನು ಸಹಭಾಗಿತ್ವದಲ್ಲಿ ಪ್ರಾರಂಭಿಸಿದೆ. ಇದು ಮುಖ್ಯವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೆಫೆಗಳ ಸ್ಥಾಪನೆಗೆ ಅನುಕೂಲವಾಗುವಂತೆ ಮಾಡುವ ಗುರಿಯನ್ನು ಹೊಂದಿದೆ, ಇದು ಅಧಿಕೃತ ಉತ್ಕೃಷ್ಟ ಫಿಲ್ಟರ್ ಕಾಫಿಯ ಅನುಭವವನ್ನು ಕಾಫಿ ಪ್ರಿಯರಿಗೆ ನೀಡಲಿದೆ. ಈ ಈ ಯೋಜನೆಯ ತಿಳುವಳಿಕೆ ಒಪ್ಪಂದಕ್ಕೆ (MoU) ಇತ್ತೀಚೆಗೆ ಕಾಫಿ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಡಾ. ಕೆ. ಜಿ. ಜಗದೀಶ ಮತ್ತು ರಾಷ್ಟ್ರೀಯ ಜೀವನೋಪಾಯ ಮಿಷನ್‌ನ…

Read More

ಮಡಿಕೇರಿ ಜ.28 NEWS DESK : ಸ್ವಾತಂತ್ರ್ಯ ಭಾರತದ ಮೊದಲ ಸೇನಾ ಮಹಾ ದಂಡನಾಯಕರಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ  ಜನ್ಮ ದಿನಾಚರಣೆಯನ್ನು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸಲಾಯಿತು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿರುವ ಕಾರ್ಯಪ್ಪ ಅವರ ಪ್ರತಿಮೆಗೆ ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ, ಜಿಲ್ಲಾಧಿಕಾರಿ ವೆಂಕಟ್‍ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್,  ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ನಗರಸಭೆ ಮಾಜಿ ಅಧ್ಯಕ್ಷರಾದ ಅನಿತಾ ಪೂವಯ್ಯ, ಮಾಜಿ ಸೈನಿಕರು ಪುಷ್ಪಗುಚ್ಛ ಇರಿಸಿ, ಗೌರವ ನಮನ ಸಲ್ಲಿಸಿದರು.  ಜಿಲ್ಲಾ ಪೊಲೀಸ್ ವಾದ್ಯ ತಂಡ ವೀರ ಸೇನಾನಿಗೆ ಗೌರವ ನಮನ ಸಲ್ಲಿಸಿ ಗಮನ ಸೆಳೆಯಿತು.

Read More

ಮಡಿಕೇರಿ ಜ.28 NEWS DESK : ವಿದೇಶದಲ್ಲಿ ಚಿಕಿತ್ಸೆ ಪಡೆದ ಬಳಿಕ ತಾಯಿನಾಡಿಗೆ ಮರಳಿದ ಕರ್ನಾಟಕ ಚಲನಚಿತ್ರರಂಗದ ಪ್ರಖ್ಯಾತ ನಟ ಡಾ. ಶಿವರಾಜ್ ಕುಮಾರ್ ಅವರ ನಿವಾಸಕ್ಕೆ  ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ  ಆರೋಗ್ಯವನ್ನು ವಿಚಾರಿಸಿದರು. ನಾಗವಾರದಲ್ಲಿನ ನಿವಾಸಕ್ಕೆ ಮುಖ್ಯಮಂತ್ರಿಗಳೊಂದಿಗೆ ಭೇಟಿ ನೀಡಿದ ಶಾಸಕರು, ಅತಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

Read More

ಮಡಿಕೇರಿ ಜ.28 NEWS DESK : ಬೆಳಗಾವಿ ಜಿಲ್ಲೆಯ ಆಜುರ ಪ್ರತಿಷ್ಠಾನದ ವತಿಯಿಂದ ಕೃಪಾ ದೇವರಾಜ್ ಅವರ ಮರ್ಮರ ಕಥಾ ಸಂಕಲನಕ್ಕೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಾರೋಗೇರಿಯಲ್ಲಿ ಆಜೂರ ಕುಟುಂಬದ ತೋಟದ ಮಹಾಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಪ್ರತಿಷ್ಠಿತ ಆಜೂರ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾದ ರಮೇಶ್ ಗುಬ್ಬಿ ಕಾರವಾರ, ಕೃಪಾ ದೇವರಾಜ್ ಮಡಿಕೇರಿ, ಎ.ಎಂ.ಜಯಶ್ರೀ ಬಳ್ಳಾರಿ, ಡಾ.ತಿಪ್ಪೇಸ್ವಾಮಿ ಹುನಗುಂದ, ಡಾ.ಅಶೋಕ ನರೋಡೆ ಮಹಾಲಿಂಗಪುರ, ವಿಜಯ ಬಡಿಗೇರ ಇಟಗಿ, ಭಾಗ್ಯಶ್ರೀ ಗವಿಸಿದ್ಧಯ್ಯ ಗದಗ, ಟಿ.ಎಸ್.ವಂಟಗುಡಿ ಹಿಟಗಲ್ಲು ಅವರನ್ನು ಶಾಲು ಹೊದಿಸಿ, ಪ್ರಶಸ್ತಿ ಫಲಕ, ನಗದು ನೀಡಿ ಸನ್ಮಾನಿಸಲಾಯಿತು. ಆಜೂರ ಪ್ರತಿಷ್ಠಾನದ ಪ್ರತಿಷ್ಠಿತ ರಾಜ್ಯ ಮಟ್ಟದ ಪ್ರಶಸ್ತಿ ಸಮಾರಂಭವನ್ನು ಶ್ರೀ ಶಿವಾನಂದ ಮಹಾಸ್ವಾಮಿ, ಶ್ರೀ ಶಶಿಕಾಂತ ಗುರೂಜಿ ದರೂರ, ಶ್ರೀ ವಿಠಲ ಶರಣರು ಇನ್ನಿತರ ಸ್ವಾಮೀಜಿಗಳ ಸಾನಿಧ್ಯದಲ್ಲಿ, ನೇತಾರಾದ ಬಸವರಾಜ ಆಜೂರ ಹಾಗೂ ಪ್ರಶಸ್ತಿ ಪುರಸ್ಕೃತರಾದ ಸಾಹಿತಿಗಳ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಶಿವಾನಂದ ಮಹಾಸ್ವಾಮಿ ಮಾತನಾಡಿ,…

Read More

ಕುಶಾಲನಗರ ಜ.28 NEWS DESK :  ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡಾ ಆಸಕ್ತಿಯನ್ನೂ ಬೆಳೆಸಿಕೊಂಡು ತಮ್ಮನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ.ಪ್ರವೀಣ್ ದೇವರಗುಂಡ ಸೋಮಪ್ಪ ಕರೆ ನೀಡಿದರು. ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ವಿದ್ಯಾರ್ಥಿ ಸಂಘ, ಎಸ್.ಡಿ.ಎಂ.ಸಿ. ಎನ್.ಎಸ್.ಎಸ್.ಘಟಕ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಸಹಯೋಗದೊಂದಿಗೆ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ಗ್ರಾಮೀಣ ವಾರ್ಷಿಕ ಕ್ರೀಡೋತ್ಸವ : 2025ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡೆಯು ಮಕ್ಕಳಲ್ಲಿ ಕ್ರೀಡಾ ಸ್ಫೂರ್ತಿ ಬೆಳೆಸಲು ಸಹಕಾರಿಯಾಗಿವೆ ಎಂದರು.  ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಸದೃಢತೆ ಹೆಚ್ಚುತ್ತದೆ ಹಾಗೂ ವಿದ್ಯಾರ್ಥಿಯು ಹೆಚ್ಚು ಕ್ರಿಯಾಶೀಲ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ ಎಂದು ಹೇಳಿದರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಚಟುವಟಿಕೆಗಳೊಂದಿಗೆ ಕ್ರೀಡೆ ಹಾಗೂ ಇನ್ನಿತರ ಕ್ರಿಯಾತ್ಮಕ ಚಟುವಟಿಕೆ, ಇಕೋ ಕ್ಲಬ್,…

Read More

ಮಡಿಕೇರಿ ಜ.28 NEWS DESK :  ಶಿರಂಗಾಲ ಗ್ರಾ.ಪಂ ವತಿಯಿಂದ ಶಿರಂಗಾಲ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಅಮೃತ ಗ್ರಾಮ ಪಂಚಾಯತಿ ಯೋಜನೆಯ ‌ಅಡಿಯ ರೂ. 2.68 ಲಕ್ಷದ ಹಣದಲ್ಲಿ ವಿವಿಧ ಬಗೆಯ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಎಂ.ಆರ್.ಲತಾಬಾಯಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಿ ಮಾತಾನಾಡಿ, ಸರಕಾರದ ವಿವಿಧ ಯೋಜನೆಯ ಭಾಗಗಳಲ್ಲಿ ಒಂದಾದ ಅಮೃತ ಗ್ರಾಮ ಪಂಚಾಯತಿ ಯೋಜನೆಯ ಅನುದಾನವು ದೊರೆತ ಹಿನ್ನೆಲೆಯಲ್ಲಿ ಅದರ ಸ್ವಲ್ಪ ಭಾಗದ ಹಣವನ್ನು ಉಪಯೋಗಿಸುವ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಅನುಕೂಲವಾಗುವಂತೆ ಕ್ರೀಡಾ ಸಾಮಗ್ರಿಗಳನ್ನು ಖರೀದಿಸಿ 7 ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಮಾಡಲಾಗಿದೆ. ಅದರ ಜೊತೆಯಲ್ಲಿ ವ್ಯಾಪ್ತಿಯ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.  ಈ ಸಂದರ್ಭ ಉಪಾಧ್ಯಕ್ಷ ಹೆಚ್.ಎಸ್.ಬಸವರಾಜ್, ಎಂ.ಎನ್.ಧರ್ಮಪ್ಪ, ಪ್ರದೀಪ್, ಶ್ರೀಕಾಂತ್, ಸರಿತಾ, ಭಾಗ್ಯರತಿ, ಗೀತಾ, ಲಕ್ಷ್ಮಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಿ.ಆರ್.ಹೇಮಲತಾ, ಕಾರ್ಯದರ್ಶಿ ಕೆ‌.ಸಿ.ರವಿ…

Read More

ಮಡಿಕೇರಿ ಜ.28 NEWS DESK : ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ, ಕಥೆಗಾರ್ತಿ ಕೆ.ಜಲಯಕ್ಷ್ಮಿ ಅವರ ‘ಮತ್ತೆ ವಸಂತ’ ಕಥಾ ಸಂಕಲನವು ನಗರದ ‘ರೆಡ್ ಬ್ರಿಕ್ಸ್ ಇನ್ ‘ಸತ್ಕಾರ್’ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ಕಾರ್ಯಕ್ರಮವನ್ನು ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಕೃತಿ ಲೋಕಾರ್ಪಣೆ ಮಾಡಿ, ಕೊಡಗು ಸಾಹಿತ್ಯ ಚರಿತ್ರೆ ಹಾಗೂ ಪ್ರಸ್ತುತ ಕೊಡಗಿನ ಸಾಹಿತ್ಯದ ಸ್ಥಿತಿಗತಿ ಕುರಿತು ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಬೆಳ್ತಂಗಡಿಯ ಎನ್.ಜಯಶಂಕರ್ ಶರ್ಮ ಹಾಗೂ ಶಕ್ತಿ‌ ದಿನಪತ್ರಿಕೆಯ ಸಂಪಾದಕ ಚಿದ್ವಿಲಾಸ್ ಭಾಗವಹಿಸಿ ಮಾತನಾಡಿದರು. 32 ಸಣ್ಣ ಕಥೆಗಳನ್ನು ಹೊಂದಿರುವ ‘ಮತ್ತೆ ವಸಂತ ಕೃತಿ ಪರಿಚಯವನ್ನು ಮಡಿಕೇರಿ ತಾಲ್ಲೂಕು ಜನಪದ ಪರಿಷತ್ ಅಧ್ಯಕ್ಷ, ಪತ್ರಕರ್ತ ಅನಿಲ್ ಹೆಚ್.ಟಿ  ಸಂಕ್ಷಿಪ್ತವಾಗಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಕೊಡಗಿನಲ್ಲಿ ಗಮನಾರ್ಹವಾಗಿ ಹೆಚ್ಚುತ್ತಿರುವ ಮಹಿಳಾ ಲೇಖಕಿಯರ ಕುರಿತು ಸಂತೋಷ ವ್ಯಕ್ತಪಡಿಸಿದರು.…

Read More