ಲೇಖಕ: admin

ಕುಶಾಲನಗರ ಜ.29 NEWS DESK : ಗುಡ್ಡೆಹೊಸೂರು ಗ್ರಾಮ  ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಅನುಮೋದನೆಗೊಂಡಿರುವ ಹಾಗೂ ಪೂರ್ಣಗೊಂಡಿರುವ ರೂ.66 ಲಕ್ಷದ ವಿವಿಧ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಚಾಲನೆ ನೀಡಿದರು. ಗುಡ್ಡೆಹೊಸೂರು ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 2023-24ನೇ ಸಾಲಿನ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ರೂ.10 ಲಕ್ಷ ವೆಚ್ಚದಲ್ಲಿ ಮಾದಾಪಟ್ಟಣ ಗ್ರಾಮದ ರಸ್ತೆ ದುರಸ್ತಿ, ಕಾಂಕ್ರೀಟ್ ರಸ್ತೆ ಹಾಗೂ ರೂ.12 ಲಕ್ಷ ವೆಚ್ಚದಲ್ಲಿ ಬಸವನಹಳ್ಳಿ ಗ್ರಾಮದ ದಿಡ್ಡಳ್ಳಿ ನಿರಾಶ್ರಿತರ ಮನೆಯವರೆಗೆ ಹಾಗೂ ರಸ್ತೆ ದುರಸ್ತಿ, ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಹಾಗೂ ಚಿಕ್ಕಬೆಟ್ಟಗೇರಿ ಮುಖ್ಯ ರಸ್ತೆಯಿಂದ ಸೋಲಿಗರ ಕಾಲೋನಿ ಸಮುದಾಯ ಭವನದ ರಸ್ತೆ ದುರಸ್ತಿ, ರೂ.11 ಲಕ್ಷ ವೆಚ್ಚದಲ್ಲಿ ಹಾರಂಗಿ ಗ್ರಾಮದ ಬೊಳ್ಳೂರು ಮುಖ್ಯ ರಸ್ತೆ ದುರಸ್ತಿ ಹಾಗೂ ಮಡಿಕೇರಿ ಮುಖ್ಯ ರಸ್ತೆಯಿಂದ ಮೊರಾರ್ಜಿ ಶಾಲೆಯ ರಸ್ತೆ ದುರಸ್ತಿಗೆ ಚಾಲನೆ ನೀಡಲಾಗಿದೆ ಎಂದರು.  2024-25ನೇ ಸಾಲಿನ ಜಿಲ್ಲಾ ಪಂಚಾಯಿತ್ ರಾಜ್ಯ ಹಣಕಾಸು ಆಯೋಗದ…

Read More

ಮಡಿಕೇರಿ ಜ.29 NEWS DESK : ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಪ್ರಾದೇಶಿಕ ಕೇಂದ್ರ ವತಿಯಿಂದ ಮಡಿಕೇರಿಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ 126ನೇ ಹುಟ್ಟು ಹಬ್ಬ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳಾ, ಜಿಲ್ಲಾ ಉಪ ಯೋಜನೆ ಸಮನ್ವಯಾಧಿಕಾರಿ ಕೃಷ್ಣಪ್ಪ, ಪ್ರಾಂಶುಪಾಲರಾದ ವಿಜಯ, ಪ್ರಾದೇಶಿಕ ಕೇಂದ್ರದ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Read More

ಮಡಿಕೇರಿ ಜ.29 : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜನವರಿ 31ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.

Read More

ಮಡಿಕೇರಿ NEWS DESK ಜ.28 : ಮಡಿಕೇರಿ ತಾಲ್ಲೂಕಿನ ಕೆ.ನಿಡುಗಣೆ ಗ್ರಾಮದ ರೆಸಾರ್ಟ್‌ ವೊಂದರ ಹಿಂಭಾಗದಲ್ಲಿ ವಾಸವಿದ್ದ ಲಲಿತಾ.ಬಿ.ಪಿ (70) ಎಂಬುವವರನ್ನು 2021 ಫೆ.22 ರಂದು ಕೊಲೆ ಮಾಡಿ ನಗದು ಮತ್ತು ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆ ಮೂಡಬಿದ್ರೆಯ ನಿವಾಸಿ ಅನಿಲ್ ಗೆ ಮಡಿಕೇರಿಯ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸಿ ಇಂದು ಪ್ರಕರಣದ ಆರೋಪಿಯಾದ ಅನಿಲ್ (35) ಗೆ ಕೊಲೆ ಮಾಡಿರುವ ಅಪರಾಧಕ್ಕಾಗಿ ಜೀವಾವಧಿ ಜೈಲು ಶಿಕ್ಷೆ ಹಾಗೂ ರೂ.45 ಸಾವಿರ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಪ್ರಶಾಂತಿ ಅವರು ತೀರ್ಪು ನೀಡಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಲಲಿತಾ.ಬಿ.ಪಿ ಅವರು 2021 ಫೆ.22 ರಂದು ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭ ತಲೆಗೆ ಹೊಡೆದು ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣಗಳು ಮತ್ತು…

Read More

ಸೋಮವಾರಪೇಟೆ NEWS DESK ಜ.28 : ಜಿಲ್ಲೆಯ ಮೂರ್ನಾಡು ಸಮೀಪದ ಕಟ್ಟೆಮಾಡು ದೇವಾಲಯದ ಆರ್ಚಕರಾದ ವಿಘ್ನೇಶ್ ಭಟ್ ಅವರ ಮೇಲಿನ ಹಲ್ಲೆ ಖಂಡನೀಯವಾಗಿದ್ದು ಕೂಡಲೇ ಅರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಸೋಮವಾರಪೇಟೆ ಬ್ರಾಹ್ಮಣ ಸಮಾಜ ಆಗ್ರಹಿಸಿದೆ. ಸದಾಕಾಲ ಧರ್ಮದ ಒಳಿತಿಗಾಗಿ ಸೇವೆಸಲ್ಲಿಸುತ್ತ ದೇವಾಲಯ ಮತ್ತು ಆಡಳಿತ ಮಂಡಳಿಗಳೀಗೆ ಹೊಂದಿಕೊ0ಡು ಭಕ್ತರ ಒಳಿತಿಗಾಗಿ ಸರ್ವೇಜನ ಸುಖಿನೋಭವಂತು ಎನ್ನುತ್ತಾ ಭಗವಂತನ ಸೇವೆ ಮಾಡುತ್ತಿರುವ ಅರ್ಚಕರ ಮೇಲೆ ಹಲ್ಲೆ ನಡೆಸುವುದು ಅಮಾನೀಯ ಕೃತ್ಯವಾಗಿದೆ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಎಸ್.ಆರ್.ಸೋಮೇಶ್ ಖಂಡಿಸಿದ್ದಾರೆ. ಈಗಾಗಲೆ ಸಂಖ್ಯೆಯಲ್ಲಿ ಕಡಿಮೆಯಿರುವ ಬ್ರಾಹ್ಮಣವರ್ಗದ ರಕ್ಷಣೆಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಕೂಡಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಸಮಾಜ ಬಾಂಧವರ ಸಹಕಾರದಿಂದ ಜಿಲ್ಲಾಡಳಿತ ಭವನದ ಮುಂಭಾಗ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು. ಹಲವಾರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಜಾತಿಗಳ ನಡುವೆ ಯಾವುದೇ ಗಲಾಟೆ ಜಗಳ ಇಲ್ಲದೆ ಅನೂನ್ಯವಾಗಿ ಬದುಕು ನಡೆಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ…

Read More

ಮಡಿಕೇರಿ NEWS DESK ಜ.28 : ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಸ್ಥಾನದ ಪ್ರಧಾನ ಅರ್ಚಕ ವಿಘ್ನೇಶ್ ಭಟ್ ಅವರ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಬಂಧನಕ್ಕೆ ಕೊಡಗು ಜಿಲ್ಲಾ ಪೊಲೀಸ್ ಮೂರು ವಿಶೇಷ ತಂಡಗಳನ್ನು ರಚಿಸಿದ್ದು, ದುಷ್ಕೃತ್ಯ ಎಸಗಿದವರನ್ನು ಶೀಘ್ರ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟ್ಟೆಮಾಡು ದೇವಸ್ಥಾನಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಸಂಧಾನದ ಮೂಲಕ ಬಗೆಹರಿಸುವ ಪ್ರಯತ್ನ ನಡೆದಿದೆ. ಈ ಹಂತದಲ್ಲಿ ಅಶಾಂತಿ ಸೃಷ್ಟಿಸುವುದು ಸರಿಯಲ್ಲವೆಂದರು. ಪ್ರಧಾನ ಅರ್ಚಕರ ಮನೆಗೆ ಸೋಮವಾರ ಸಂಜೆ ತೆರಳಿದ ಇಬ್ಬರು, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಟ್ಟೆಮಾಡು ಪ್ರಕರಣವನ್ನು ಬಳಸಿಕೊಂಡು ದುಷ್ಕರ್ಮಿಗಳು, ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನಗಳಿಗೆ ಮುಂದಾದಲ್ಲಿ ಅವರನ್ನು ಕ್ರಿಮಿನಲ್‌ಗಳೆಂದು ಪರಿಗಣಿಸಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಪ್ರತಿಭಟನೆ ಎಲ್ಲರ ಹಕ್ಕು- ದೇವಸ್ಥಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು…

Read More

ಮಡಿಕೇರಿ NEWS DESK ಜ.28 : ಐತಿಹಾಸಿಕ ಹಿನ್ನೆಲೆಯ ನಗರದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಸ್ಥಾನದ ದಸರಾ ಉತ್ಸವ ಸಮಿತಿ ಐವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಹೊರ ತಂದಿರುವ ‘ದಶಮಿ’ ಪುಸ್ತಕವನ್ನು ಮಂಗಳವಾರ ಸಂಜೆ ಅನಾವರಣಗೊಳಿಸಲಾಯಿತು. ಸ್ಥಳೀಯ ರಾಜಾಸೀಟು ಬಳಿಯ ರಾಜದರ್ಶನ್ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ಅತಿಥಿ ಗಣ್ಯರು ಪುಸ್ತಕವನ್ನು ಅನಾವರಣಗೊಳಿಸಿದರು. ಪುಸ್ತಕದಲ್ಲಿ ದೇವಸ್ಥಾನದ ದಸರಾ ಉತ್ಸವ ಸಮಿತಿ ನಡೆದು ಬಂದಿರುವ ಹಾದಿ, ಹಿಂದೆ ಸಮಿತಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರ ವಿವರ, ದೇವಸ್ಥಾನದ ಹಿನ್ನೆಲಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಸನ್ಮಾನ- ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದಸರಾ ಸಮಿತಿ ಅಧ್ಯಕ್ಷ ರವಿ ಕರ್ಕೆರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಮಾಜಿ ಅಧ್ಯಕ್ಷರು, ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇಂದು ನಮ್ಮೊಂದಿಗೆ ಇಲ್ಲದ ಅಧ್ಯಕ್ಷರುಗಳ ಕುಟುಂಬಸ್ಥರನ್ನು, ಸಮಿತಿಗಾಗಿ ದುಡಿಯ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ಸುನಿಲ್…

Read More

ಮಡಿಕೇರಿ ಜ.28 NEWS DESK : ಸ್ವತಂತ್ರ ಭಾರತದ ಪ್ರಥಮ ಮಹಾ ದಂಡನಾಯಕ, ಅಪ್ರತಿಮ ದೇಶಭಕ್ತ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 126ನೇ ಜಯಂತಿಯನ್ನು, ವೀರಸೇನಾನಿಯ ಪ್ರತಿಮೆಗೆ ಪುಷ್ಪನಮನವನ್ನು ಸಲ್ಲಿಸುವ ಮೂಲಕ ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೊಡಗು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಂಯುಕ್ತಾಶ್ರಯದಲ್ಲಿ ನಗರದ ಫೀ.ಮಾ.ಕಾರ್ಯಪ್ಪ ಸ್ಮಾರಕದಲ್ಲಿ ವೀರಸೇನಾನಿಗೆ ಅವರ ಪುತ್ರ ಏರ್ ಮಾರ್ಷಲ್(ನಿ)ಕೆ.ಸಿ.ನಂದಾ ಕಾರ್ಯಪ್ಪ ಪುಷ್ಪ ನಮನ ಸಲ್ಲಿಸಿದರು. ಇಂದಿನ ಯುವ ಸಮೂಹ ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿಯನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ರಾಷ್ಟ್ರ ಧ್ವಜಕ್ಕೆ ಗೌರವವನ್ನು ಸಲ್ಲಿಸುವ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ, ವೀರ ಸೇನಾನಿಗಳ ಈ ನೆಲದ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಅವರು ಕರೆ ನೀಡಿದರು. ಪ್ರತಿಯೊಬ್ಬ ಪ್ರಜೆಯೂ ನಾನು ಮತ್ತು ನನ್ನದು ಎನ್ನುವ ಮನೋಭಾವದಿಂದ ಹೊರ ಬರಬೇಕು. ನಮ್ಮ ಬದುಕಿನಲ್ಲಿ ದೇಶ ಯಾವತ್ತಿಗೂ ಮೊದಲ ಸ್ಥಾನದಲ್ಲಿರಬೇಕು, ನಂತರ ನಮ್ಮ ರಾಷ್ಟ್ರಧ್ವಜವೆಂದು ತಿಳಿಸಿದ ನಂದಾ ಕಾರ್ಯಪ್ಪ, ನಮ್ಮ ಆಯ್ಕೆಯ ಕೊನೆಯ ಸ್ಥಾನದಲ್ಲಷ್ಟೆ…

Read More

ಚೆಟ್ಟಳ್ಳಿ ಜ.28 NEWS DESK : ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಭೇಟಿ ನೀಡಿದರು. ಸಿಬ್ಬಂದಿ ಕೊರತೆ, ಭದ್ರತೆ ಕೊರತೆ, ಖಾಯಂ ವೈದ್ಯರಿಲ್ಲ ದಿರುವುದು, ನೂತನ ಕಟ್ಟಡ ನಿರ್ಮಾಣ ಹೀಗೆ ಹತ್ತು ಹಲವು ಸಮಸ್ಯೆಗಳ ದೂರಿನ ಮೇರೆಗೆ ಭೇಟಿ ನೀಡಿದ ಶಾಸಕರು, ವೈದ್ಯರಾದ ರಮ್‍ಸನ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಇಂದೂಧರ್, ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರೊಂದಿಗೆ ಮಾತನಾಡಿ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. ಆಸ್ಪತ್ರೆಯ ಜಾಗದ ದಾಖಲಾಯಿತಿಯ ಸಮಸ್ಯೆಯಿಂದ ಆರೋಗ್ಯ ಇಲಾಖೆ ನೂತನ ಕಟ್ಟಡ ನಿರ್ಮಿಸಲು ಮುಂದಾಗದಿರುವ ಬಗ್ಗೆ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದಾಗ ಈ ಕುರಿತು ಸಂಬಂಧಪಟ್ಟ ಅಧಿಕಾರಿಯೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಚೆಟ್ಟಳ್ಳಿ ಆರೋಗ್ಯ ಕೇಂದ್ರವನ್ನು ಅಭಿವೃದ್ಧಿ ಪಡಿಸಲಾಗುವುದೆಂದು ಭರವಸೆ ನೀಡಿದರು.

Read More

ಚೆಟ್ಟಳ್ಳಿ ಜ.28 NEWS DESK : ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗೆ ಮಡಿಕೇರಿ ವಿಧಾನಸಭಾಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಚಾಲನೆ ನೀಡಿದರು. ಪುತ್ತರಿರ ಕುಟುಂಬದ ಐನ್‍ಮನೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ವಿವಿಧ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಶಾಸಕರು, ಮುಖ್ಯಮಂತ್ರಿಗಳ ವಿಶೇಷ ಮಂಜುರಾತಿ ಕಾರ್ಯಕ್ರಮದಡಿ 19 ಕೋಟಿ ಬಿಡುಗಡೆಗೊಳಿಸಲಾಗಿದ್ದು, ಕೂಡ್ಲೂರು ಚೆಟ್ಟಳ್ಳಿ ಪೈಸಾರಿ ರಸ್ತೆ, ಕಂಡಕರೆ ಪೈಸಾರಿ ರಸ್ತೆ, ಪೊನ್ನತಮೊಟ್ಟೆ ಪೈಸಾರಿ ರಸ್ತೆ, ಶ್ರೀಮಂಗಲ ಭಗವತಿ ದೇವಾಲಯದ ರಸ್ತೆ ಹಾಗೂ ಪುತ್ತರಿರ ಐನ್ ಮನೆ ರಸ್ತೆ, ಚೆಟ್ಟಳ್ಳಿ ಕಾಫಿ ಬೋರ್ಡ್ ಸಿದ್ದಿಕಲ್ ರಸ್ತೆ ಕಾಮಗಾರಿ, ಸಣ್ಣ ನೀರಾವರಿ ಹಾಗೂ ಕೆರೆಗಳ ವಾರ್ಷಿಕ ನಿರ್ವಹಣೆ, ದುರಸ್ಥಿಯೋಜನೆಯಡಿ ಚೇರಳ ಶ್ರೀಭಗವತಿ ದೇವಾಲಯದ ಬದಿಯ ಕೆರೆಯ ಅಭಿವೃದ್ಧಿ (ತಡೆಗೋಡೆ ನಿರ್ಮಾಣ) ಮಾಡಲಾಗುವುದೆಂದರು. ಜಿಲ್ಲಾ ಪಂಚಾಯತ್ ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನದಡಿ ಚೆಟ್ಟಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿ ಕೊಠಡಿ ದುರಸ್ಥಿ, ಪ್ರಾಥಮಿಕ ಆರೋಗ್ಯಕೇಂದ್ರ ಚೆಟ್ಟಳ್ಳಿ,…

Read More