ಮಡಿಕೇರಿ ಜ.24 NEWS DESK : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ವತಿಯಿಂದ ನಗರದ ರಾಜಾಸೀಟು ಉದ್ಯಾನವನದಲ್ಲಿ ಏರ್ಪಡಿಸಲಾಗಿರುವ ‘ಫಲಪುಷ್ಪ ಪ್ರದರ್ಶನ’ ಕಣ್ಮನ ಸೆಳೆಯುತ್ತಿದೆ. ನಾಲ್ಕು ದಿನಗಳ ಕಾಲ ನಡೆಯುವ ‘ಫಲಪುಷ್ಪ ಪ್ರದರ್ಶನ’ವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು. ಕೊಡಗಿನ ಪ್ರಸಿದ್ದ ಶ್ರೀ ಓಂಕಾರೇಶ್ವರ ದೇವಸ್ಥಾನದ ಕಲಾಕೃತಿ, “ಝೇಂಕಾರ (JHENKARA)” ಬ್ರಾಂಡ್ ಹಾಗೂ ಕೊಡಗು ಜೇನಿನ “ಕೂರ್ಗ್ ಹನಿ” ಮಾರಾಟ ಬ್ರಾಂಡ್ ಗಳ ವಿವಿಧ ಕಲಾಕೃತಿ, ಹೂ ಹಾಗೂ ಜೇನು ಹುಳುವಿನ ಕಲಾಕೃತಿ, ಗಣರಾಜ್ಯೋತ್ಸವದ ಅಂಗವಾಗಿ ಯೋಧ, ಪಿರಂಗಿ ಹಾಗೂ ರಾಷ್ಟ್ರಧ್ವಜದ ಕಲಾಕೃತಿ, ವಿಂಟೇಜ್ ಕಾರ್ ನ ಕಲಾಕೃತಿ, Butterfly wings, ಪ್ರವೇಶದಾರ, ಪ್ರಾಣಿ ಮುಖದ ಕಲಾಕೃತಿ, ಮಕ್ಕಳಿಗೆ ಮನರಂಜನೆ ನೀಡುವಂತಹ ಬಾರ್ಬಿ ಡಾಲ್, ಡೊರೆಮಾನ್, ಮೋಟು ಪಟು, ಫೋಟೋ ಫ್ರೆಮ್, Selfy Zone, ತರಕಾರಿ, ಹಣ್ಣುಗಳಿಂದ ಕೆತ್ತಲಾದ ವಿವಿಧ ಕ್ಷೇತ್ರಗಳ ಗಣ್ಯರುಗಳ…
ಲೇಖಕ: admin
ಮಡಿಕೇರಿ NEWS DESK ಜ.24 : ತೋಟಗಾರಿಕೆ ಇಲಾಖೆಯು ಜಿಲ್ಲಾ, ಆಡಳಿತ, ಜಿಲಾ, ಪಂಚಾಯತ್ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಭಾರತ ದೇಶದ ಗಣರಾಜ್ಯೋತ್ಸವದ ಪ್ರಯುಕ್ತ ಜ.24 ರಿಂದ 27 ರವರೆಗೆ ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಸುಮಾರು 7000 ಸಾವಿರ ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳು ಹಾಗೂ ಬೆಡ್ ಗಳಲ್ಲಿ ಸುಮಾರು 20000 ವಿವಿಧ ಜಾತಿಯ ಹೂವುಗಳಾದ ಸಾಕ್ಷಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಇಂಪೇಷಿಯನ್ಸ್, ವಿಂಕಾ ರೋಸಿಯಾ, ಕಾಕ್ಸ್, ಕೋಂಬ್, ಡೇಲಿಯಾ, ಇತ್ಯಾದಿಗಳನ್ನು ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ಬೆಳೆಯಲಾಗಿದೆ. ಕೊಡಗಿನ ಪ್ರಸಿದ್ದ ಶ್ರೀ ಓಂಕಾರೇಶ್ವರ ದೇವಸ್ಥಾನದ ಕಲಾಕೃತಿಯನ್ನು 22 ಅಡಿ ಎತ್ತರದಲ್ಲಿ 30 ಅಡಿ ಉದ್ದ, 38 ಅಡಿ ಅಗಲದಲ್ಲಿ ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಮರ್ ಜಾತಿಯ ಸುಮಾರು 5 ಲಕ್ಷ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗಿದೆ. 2. ಕರ್ನಾಟಕ ಸರ್ಕಾರದ, ತೋಟಗಾರಿಕೆ ಇಲಾಖೆಯಿಂದ ಕರ್ನಾಟಕ ರಾಜ್ಯದಲ್ಲಿ ಉತ್ಪತ್ತಿಯಾಗುವ ಜೇನು ತುಪ್ಪವನ್ನು…
ಮಡಿಕೇರಿ ಜ.24 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆ catract ಶಸ್ತ್ರ ಚಿಕಿತ್ಸೆ ಪ್ರಯುಕ್ತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ಶಿಬಿರವನ್ನು ಮಡಿಕೇರಿ ವೈದ್ಯಕೀಯ ಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ನಿರ್ದೇಶಕ ಡಾ.ಎ.ಜೆ.ಲೋಕೇಶ್ ಉದ್ಘಾಟಿಸಿ, ಹಿರಿಯ ನಾಗರಿಕರಿಗೆ ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದಂತೆ ಕಣ್ಣಿನ ಆರೋಗ್ಯದ ಕುರಿತು ಹಾಗೂ ಆರೋಗ್ಯ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಶಸ್ತ್ರ ಚಿಕಿತ್ಸೆಕ ಡಾ.ನಂಜುಂಡಯ್ಯ ಮಾತನಾಡಿ, ಪ್ರತಿ ಗ್ರಾಮ ಮಟ್ಟದಲ್ಲಿ ಇಲಾಖೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಇದರಲ್ಲಿ ವಿಶೇಷ ಚೇತನಿಗೆ ಸಂಬಂಧಿಸಿದಂತೆ ಕಾರ್ಡ್ ನ್ನು ನೀಡುವ ಮೂಲಕ ಪ್ರತಿಯೊಬ್ಬರಿಗೂ ಇಲಾಖೆಯ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಶಿಬಿರವನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಕಣ್ಣಿನ ವಿಭಾಗದ ಮುಖ್ಯಸ್ಥರಾದ ಕೃಪಾಲಿನಿ ಅಪ್ಪಯ್ಯ ಮಾತನಾಡಿ, ಕಣ್ಣಿನ ಸಮಸ್ಯೆಗೆ ವಯಸ್ಸಿನ ಮಿತಿ ಇರುವುದಿಲ್ಲ,…
ಮಂಗಳೂರು ಜ.24 NEWS DESK : ಆಧುನಿಕ ತಂತ್ರಜ್ಞಾನ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಯತಿಕಾರ್ಪ್ ಇಂಡಿಯಾ ಪ್ರೈ.ಲಿ. ಕಂಪನಿಯು ಕರ್ನಾಟಕದಾದ್ಯಂತ ಪದವೀಧರರಿಗೆ ಉದ್ಯೋಗ ಅವಕಾಶವನ್ನು ಘೋಷಿಸಿದೆ. ಕಂಪನಿಯು ತನ್ನ ಹೊಸ ಎಐ ಸಾಕ್ಷರತಾ ಅಭಿಯಾನವನ್ನು ಮುನ್ನಡೆಸಲು ರಾಜ್ಯದ ಪ್ರತಿ ತಾಲ್ಲೂಕು ಕೇಂದ್ರಗಳಿಗೂ ಪ್ರಾದೇಶಿಕ ಪ್ರತಿನಿಧಿಗಳನ್ನು ನೇಮಿಸುತ್ತಿದ್ದು, ಆಕರ್ಷಕ ವೇತನ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಹುದ್ದೆ ಹೆಸರು :: ಎಐ ರೀಜನಲ್ ರೆಪ್ರೆಸೆಂಟೇಟಿವ್, ವೇತನ ಶ್ರೇಣಿಯು ತಿಂಗಳಿಗೆ ರೂ. 25,000 ದಿಂದ ರೂ.30,000ದವರೆಗೆ ಇರುತ್ತದೆ. ಸಂಸ್ಥೆಯು ಅಭಿವೃದ್ಧಿ ಪಡಿಸಿದ ಎಐ ಶಿಕ್ಷಕ್‌ನ ಮೂಲಕ ಎಐ ಕುರಿತು ಸಾಕ್ಷರತಾ ಅಭಿಯಾನ ನಡೆಸುವುದು ಕೆಲಸದ ಸ್ವರೂಪವಾಗಿರುತ್ತದೆ. ಎಐ ಪ್ರಾದೇಶಿಕ ಪ್ರತಿನಿಧಿಯಾಗಿ ನೇಮಕಗೊಂಡ ಅಭ್ಯರ್ಥಿಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಈ ಸ್ಥಾನವು ಹೊಸ ಪದವೀಧರರಿಗೆ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪ್ರವೇಶಿಸಲು ಹಾಗೂ ಶಿಕ್ಷಕ ಕ್ಷೇತ್ರದಲ್ಲಿ ಸಕಾರಾತ್ಮಕ ಕ್ರಾಂತಿಯನ್ನು ಮೂಡಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಪ್ರಾದೇಶಿಕ ಪ್ರತಿನಿಧಿ ಹುದ್ದೆಯ…
ಮಡಿಕೇರಿ ಜ.24 NEWS DESK : ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಜ.25 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಮಡಿಕೇರಿ ಜ.24 NEWS DESK : ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ಗ್ರಾಮಸಭೆಯು ಜ.29 ರಂದು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ. ಅಂದು ಪೂರ್ವಾಹ್ನ 11 ಗಂಟೆಗೆ ಗ್ರಾ.ಪಂ ಅಧ್ಯಕ್ಷರಾದ ಕೆ.ಸಿಂಧು ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಪುಶುವೈಧ್ಯಾಧಿಕಾರಿ ಡಾ.ಸಂಜೀವ್ ಕುಮಾರ್ ಆರ್ ಸಿಂಧೆ ಪಾಲ್ಗೊಳ್ಳಲಿದ್ದು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷ ಮತ್ತು ಸದಸ್ಯರು ಮನವಿ ಮಾಡಿದ್ದಾರೆ.
ಮಡಿಕೇರಿ ಜ.24 NEWS DESK : ಪುಟಾಣಿ ವಿಜ್ಞಾನ ಬಳಗದವರು ನಡೆಸಿದ ರಾಷ್ಟ್ರಮಟ್ಟದ ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ಚೇರಂಬಾಣೆ ಕೊಟ್ಟೂರು ರಾಜರಾಜೇಶ್ವರಿ ಶಾಲೆಯ ಒಟ್ಟು 68 ವಿದ್ಯಾರ್ಥಿಗಳು ಭಾಗವಹಿಸಿ ಉತ್ತೀರ್ಣರಾಗಿದ್ದಾರೆ. ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಚಕ್ಷ ಕಾವೇರಮ್ಮ ರಾಷ್ಟ್ರಮಟ್ಟದಲ್ಲಿ ಮೂರನೇ ಸ್ಥಾನ, 8ನೇ ತರಗತಿಯ ಟಿ.ಡಿ.ಭುವನ್ ರಾಜ್ಯಮಟ್ಟದಲ್ಲಿ 6ನೇ ಸ್ಥಾನ, 9ನೇ ತರಗತಿಯ ಹೆಚ್.ಎಲ್.ಮಂಜುಳ 6ನೇ ಸ್ಥಾನ, ಜಿಲ್ಲಾ ಮಟ್ಟದಲ್ಲಿ 10ನೇ ತರಗತಿಯ ಮೋಕ್ಷ ಬೋಪಣ್ಣ 5ನೇ ಸ್ಥಾನ, 9ನೇ ತರಗತಿಯ ಕೆ.ಜೆ.ತ್ರಿಶ 7 ನೇ ಸ್ಥಾನ, ತಾಲ್ಲೂಕು ಮಟ್ಟದಲ್ಲಿ 10ನೇ ತರಗತಿಯ ಕೆ.ಕೆ.ಇಂಚರ 5ನೇ ಸ್ಥಾನ, 8 ನೇ ತರಗತಿಯ ಪ್ರೇಕ್ಷ ಪೊನ್ನಮ್ಮ 5ನೇ ಸ್ಥಾನಪಡೆದು ಸಾಧನೆ ಮಾಡಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳೊಂದಿಗೆ ಮುಖ್ಯಶಿಕ್ಷಕರಾದ ಕವನ್ ಕುದುಪಜೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕೆ.ಬಿ.ಸ್ವರೂಪ್, ಗಣಿತ ಯೂ.ಬಿ.ಶಿಕ್ಷಕಿ ಟೀನಾ ಹಾಜರಿದ್ದರು.
ಮಡಿಕೇರಿ ಜ.24 NEWS DESK : ಮನುಷ್ಯನ ದೇಹದಲ್ಲಿ ಪ್ರಮುಖ ಅಂಶವಾಗಿರುವ ರಕ್ತ ಕೂಡ ಔಷಧೀಯ ಗುಣ ಹೊಂದಿರುವುದರಿಂದ ಇಂದಿನ ಕಾಲದಲ್ಲಿ ಜೀವಸಂರಕ್ಷಕ ರಕ್ತಕ್ಕೆ ಬೇಡಿಕೆಯ ಪ್ರಮಾಣ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ರಕ್ತ ಸಂಗ್ರಹಣೆ ಮೂಲಕ ಕೊಡಗಿನ ಆಸ್ಪತ್ರೆಗಳಲ್ಲಿ ರಕ್ತದ ಸರಬರಾಜು ಅಧಿಕವಾಗಬೇಕಾಗಿದೆ ಎಂದು ಜಿಲ್ಲಾ ಸಹಾಯಕ ಔಷಧಿ ನಿಯಂತ್ರಕ ಅಧಿಕಾರಿ ಗುರುನಾಥ್ ಹೇಳಿದ್ದಾರೆ. ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ, ರಾಷ್ಟ್ರೀಯ ಔಷಧಿ ವ್ಯಾಪಾರಸ್ಥರ ಸಂಘಕ್ಕೆ 50 ವಷ೯ಗಳ ಸಂಭ್ರಮದ ಹಿನ್ನಲೆಯಲ್ಲಿ ಆಯೋಜಿತ ರಕ್ತಸಂಗ್ರಹ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಗುರುನಾಥ್, ರಕ್ತದಾನವನ್ನು ಯಾರೂ ವೖತ್ತಿಯನ್ನಾಗಿ ಪರಿವತಿ೯ಸಿಕೊಳ್ಳಬಾರದು. ರಕ್ತವನ್ನು ದಾನ ನೀಡುವುದು ಮತ್ತೋವ೯ರ ಜೀವ ಉಳಿಸುವ ಮಾನವೀಯ ಕಾಯ೯ ಎಂದು ದಾನಿಗಳು ತಿಳಿದುಕೊಳ್ಳಬೇಕೆಂದು ಅಭಿಪ್ರಾಯಪಟ್ಟರು. ಪ್ರತೀಯೋವ೯ ಆರೋಗ್ಯವಂತ ವ್ಯಕ್ತಿಯು 3 ತಿಂಗಳಿಗೊಮ್ಮೆ ರಕ್ತ ನೀಡಬಹುದಾಗಿದೆ. ಕೊಡಗಿನ ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಹೆಚ್ಚುತ್ತಿರುವ ರಕ್ತದ ಬೇಡಿಕೆಗೆ ಅನುಗುಣವಾಗಿ ಶಿಬಿರಗಳ ಮೂಲಕ ರಕ್ತದ ಸಂಗ್ರಹ…
ವಿರಾಜಪೇಟೆ ಜ.26 NEWS DESK : ಕೊಡಗು ಜಿಲ್ಲಾ ಪಂಚಾಯಿತಿ, ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಮತ್ತು ಆರ್ಜಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಬೇಟೋಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಮಕ್ಕಳ ಗ್ರಾಮ ಸಭೆ ನಡೆಯಿತು. ಆರ್ಜಿ ಗ್ರಾ.ಪಂ ಅಧ್ಯಕ್ಷರಾದ ಫಾತಿಮ ರೆಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳ ಕುರಿತು ಗಮನ ಸೆಳೆದರು. ಈ ಸಂದರ್ಭ ಮಾತನಾಡಿದ ಆರ್ಜಿ ಗ್ರಾ.ಪಂ ಕಾರ್ಯದರ್ಶಿ ಆರ್.ರಾಜನ್, ಮಕ್ಕಳ ಮೇಲಾಗುವ ದೌರ್ಜನ್ಯಗಳು, ಎದುರಿಸುವ ಸಮಸ್ಯೆಗಳಿಗೆ ಗ್ರಾ.ಪಂ ಮಟ್ಟದಲ್ಲಿ ಇತ್ಯರ್ಥವಾಗಲೆಂದು ಸರ್ಕಾರವು ಮಕ್ಕಳ ಹಕ್ಕುಗಳನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳ ಗ್ರಾಮ ಸಭೆಯನ್ನು ಅನುಷ್ಠಾನಗೊಳಿಸಿದೆ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ನೇರವಾಗಿ ಸಭೆಯಲ್ಲಿ ತಿಳಿಸಬಹುದಾಗಿದೆ ಎಂದು ಹೇಳಿದರು. ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಬಾಣೆ ಗ್ರಾಮದಿಂದ ನಗರಕ್ಕೆ ತೆರಳಲು ಸುಮಾರು ಮೂರು ಕಿ.ಮೀ ಗಳಾಗುತ್ತದೆ. ಆರೋಗ್ಯ ಸಮಸ್ಯೆ ಎದುರಾದಲ್ಲಿ ಸ್ಥಳೀಯವಾಗಿ ಬಗೆಹರಿಸಲು ಆರೋಗ್ಯ ಕೇಂದ್ರದ ಅವಶ್ಯಕತೆ ಇದೆ ಎಂದು ಆಂಗ್ಲಾ ಮಾದ್ಯಮ ಶಾಲೆಯ ವಿಧ್ಯಾರ್ಥಿನಿ…
ಮಡಿಕೇರಿ ಜ.24 NEWS DESK : ಗಣರಾಜ್ಯೋತ್ಸವದ ಅಂಗವಾಗಿ ಎಸ್‌ಕೆಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜ.26 ರಂದು ಕೂಡಿಗೆಯಲ್ಲಿ ಮಾನವ ಸರಪಳಿ ಮತ್ತು ಸೌಹಾರ್ದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಕೆ.ಎ.ಮುಹಮ್ಮದ್ ಸುಹೈಬ್ ಫೈಝಿ ಕೊಳಕೇರಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಹದಿನಾರು ವರ್ಷಗಳಿಂದ “ರಾಷ್ಟ್ರ ರಕ್ಷಣೆಗಾಗಿ ಸೌಹಾರ್ದತೆಯ ಸಂಕಲ್ಪ” ಎಂಬ ಧ್ಯೇಯದೊಂದಿಗೆ ಎಸ್‌ಕೆಎಸ್‌ಎಸ್‌ಎಪ್ ಸಂಘಟನೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಈ ಬಾರಿ ಜ.26 ರಂದು ಕೊಡಿಗೆಯಲ್ಲಿ ಸೌಹಾರ್ದ ಸಮ್ಮೇಳನ ನಡೆಯಲಿದ್ದು, ಅಂದು ಮಧ್ಯಾಹ್ನ 2.30 ಗಂಟೆಗೆ ಕುಶಾಲನಗರದ ಜಾತ್ರಾ ಮೈದಾದಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವರೆಗೆ ವಾಹನ ಜಾಥಾ ಹಾಗೂ ಕೂಡಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸೌಹಾರ್ದ ಸಂದೇಶ ಸಾರುವ ಮೆರವಣಿಗೆ ನಡೆಯಲಿದೆ. ದೇಶದ ಐಕ್ಯತೆಗಾಗಿ ಹಾಗೂ ನಾಡಿನ ಸಾಮರಸ್ಯಕ್ಕಾಗಿ, ರಾಷ್ಟ್ರದ ಭದ್ರತೆಗೆ ಒತ್ತು ನೀಡಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಮಾನವ ಸರಪಳಿಯ ಮೂಲಕ ಸೌಹಾರ್ದತೆಯ ಸಂದೇಶ ನೀಡಲಾಗುವುದು ಎಂದು…






