ಮೂರ್ನಾಡು ಜ.24 NEWS DESK : ಮೈಸೂರಿನ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಭಾರತೀಯ ನೃತ್ಯಕಲಾ ಶಾಲೆಯ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಶೇ.100ರಷ್ಟು ಫಲಿತಾಂಶವನ್ನು ನೀಡಿದ್ದಾರೆ. ನೃತ್ಯಕಲಾ ಶಾಲೆಯ ಮೂರ್ನಾಡಿನ ವಿದ್ಯಾರ್ಥಿಗಳಾದ ವಿ.ವಿ.ಭಾರ್ಗವಿ, ಕೆ.ಎಂ.ಸೃಷ್ಟಿ, ಪಿ.ಟಿ. ಸವಿನ ಮತ್ತು ಸಿದ್ದಾಪುರದ ವಿದ್ಯಾರ್ಥಿಗಳಾದ ವಿ.ಜೆ.ಸೌಜನ್ಯ, ಕೆ.ಕೆ.ದಿವ್ಯ, ಬಿ. ಸಾನಿಕ ಇವರುಗಳು ಉನ್ನತ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ. ವಿ.ವಿ. ಭಾರ್ಗವಿ ಶೇ.90.3 ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನಪಡೆದು ಕೊಂಡಿದ್ದಾಳೆ ಎಂದು ಭಾರತೀಯ ನೃತ್ಯಕಲಾ ಶಾಲೆಯ ನೃತ್ಯಗುರು ವಿದುಷಿ ಜಲಜನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ : ಟಿ.ಸಿ.ನಾಗರಾಜ್, ಮೂರ್ನಾಡು.
ಲೇಖಕ: admin
ಮಡಿಕೇರಿ NEWS DESK ಜ.24 : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ದೇವಾಲಯದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಆರಂಭಗೊಂಡ ಆರೋಪ, ಪ್ರತ್ಯಾರೋಪಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಎರಡೂ ಕ್ಷೇತ್ರಗಳ ಶಾಸಕರುಗಳು ತಕ್ಷಣ ಇದಕ್ಕೆ ಪರಿಹಾರ ಸೂಚಿಸಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಧಾನ ಸಂಚಾಲಕರಾದ ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶ್ರದ್ಧಾಭಕ್ತಿಯ ಕೇಂದ್ರ ಮತ್ತು ಒಗ್ಗಟ್ಟನ್ನು ಸಾರುವ ದೇವಾಲಯದ ವಿಚಾರವನ್ನು ಮುಂದಿಟ್ಟುಕೊಂಡು ದ್ವೇಷವನ್ನು ಬೆಳೆಸುತ್ತಾ ಹೋಗುವುದು ಸರಿಯಲ್ಲ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಜನಾಂಗೀಯ ಸಂಘರ್ಷಕ್ಕೆ ಎಡೆಮಾಡದೆ ಆಡಳಿತ ಪಕ್ಷದ ಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಬೇಕೆಂದು ಆಗ್ರಹಿಸಿದ್ದಾರೆ. ಕೊಡಗು ಜಿಲ್ಲೆಯ ಗೌರವಕ್ಕೆ ದಕ್ಕೆ ಬರಬಹುದಾದ ಇಂತಹ ವಿಚಾರಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳು ಅಸಡ್ಡೆ ತೋರುವುದು ಸರಿಯಲ್ಲ. ಈಗಾಗಲೇ ಗೊಂದಲ ಏರ್ಪಟ್ಟು ಒಂದೂವರೆ ತಿಂಗಳು ಕಳೆದು ಹೋಗಿದೆ. ಪರಸ್ಪರ ಹೇಳಿಕೆ, ಪ್ರತಿ ಹೇಳಿಕೆಗಳನ್ನು…
ಮಡಿಕೇರಿ ಜ.24 NEWS DESK : ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಮೂಲ ಸೌಕರ್ಯಗಳ ಕುರಿತು ಸಭೆ ನಡೆಯಿತು. ಕಾವೇರಿ ಭವನದಲ್ಲಿ ನಡೆದ ಸಭೆಯಲ್ಲಿ ವಿರಾಜಪೇಟೆ ಕ್ಷೇತ್ರದಲ್ಲಿ ಮಸೀದಿ ದುರಸ್ತಿ, ರಸ್ತೆಗಳು, ವಿದ್ಯಾರ್ಥಿ ವೇತನ, ಮೂಲಭೂತ ಸೌಕರ್ಯಗಳು, ಹೆಚ್ಚುವರಿಯಾಗಿ ಮನೆಗಳನ್ನು ಮಂಜೂರು ಮಾಡಲು ಶಾಸಕರು ಹಾಗೂ ಮುಖಂಡರು ಮನವಿ ಸಲ್ಲಿಸಿದರು. ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿ ವಿರಾಜಪೇಟೆ ಕ್ಷೇತ್ರದ ಅಲ್ಪಸಂಖ್ಯಾತರ ಮೂಲಭೂತ ಸೌಕರ್ಯಕ್ಕೆ ರೂ.3.5 ಕೋಟಿ ಅನುದಾನ ನೀಡಲಾಗಿದೆ. ಡಾ ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ ಅಡಿ ಹಾಗೂ ಬಸವ ವಸತಿ ಯೋಜನೆ ಅಡಿ 1200 ಮನೆಗಳನ್ನು ನೀಡಲಾಗಿದೆ ಎಂದು ಹೇಳಿದರು. ಶಾಸಕರ ಮನವಿ ಮೇರೆಗೆ ರೂ.4 ಕೋಟಿ ಹೆಚ್ಚುವರಿ ಅನುದಾನವನ್ನು ಅಭಿವೃದ್ಧಿಗಾಗಿ ನೀಡುವ ಬಗ್ಗೆ ಭರವಸೆ ನೀಡಿದರು. ಡಾ.ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ ಅಡಿ ಮತ್ತು ಬಸವ ವಸತಿ ಯೋಜನೆ ಅಡಿ…
ಮಡಿಕೇರಿ ಜ.24 NEWS DESK : ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ಬಿ.ಎಸ್ಸಿ ಅರಣ್ಯ ಸ್ನಾತಕ ಪದವಿಯಲ್ಲಿ ಹಾನರ್ಸ್ (HONS) ಅರಣ್ಯ ವಿಭಾಗದ ಪದವಿಯಲ್ಲಿ ಮರೂರು ಗ್ರಾಮದ ಎಂ.ಎಂ.ಸುಪ್ರಿತಾ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ನಡೆದ 9ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಿ, ಗೌರವಿಸಿದರು. ಈ ಸಂದರ್ಭ ಶಿವಮೊಗ್ಗ ವಿಶ್ವವಿದ್ಯಾಲಯದ ಉಪ ಕುಲಪತಿ ಆರ್.ಪಿ.ಜಗದೀಶ್, ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ.ಜಿ.ಎಂ.ದೇವಗಿರಿ, ಮೂಡಗರೆ ಕೃಷಿ ಇಲಾಖೆಯ ಡೀನ್ ಮತ್ತು ಹಿರಿಯೂರು ತೋಟಗಾರಿಕೆ ಇಲಾಖೆಯ ಡೀನ್ ಸೇರಿದಂತೆ ಪ್ರಾಧ್ಯಾಪಕ ವೃಂದ ಹಾಜರಿದ್ದರು. ಎಂ.ಎಂ. ಸುಪ್ರಿತಾ ಮಾರೂರು ಗ್ರಾಮದ ಹೆಬ್ಬಾಲೆ ಗ್ರಾ.ಪಂ ಸದಸ್ಯ ಹೆಚ್.ಸಿ.ಮಹದೇವ್ ಹಾಗೂ ಮಂಜಳಾ ದಂಪತಿಯ ಪುತ್ರಿ.ಇವರು ಈಗಾಗಲೇ ನಾಗರಿಕ ಸೇವಾ ಇಲಾಖೆಯ ವಿಭಾಗದ ಉನ್ನತ ಮಟ್ಟದ ತರಬೇತಿಯನ್ನು ಪಡೆದು ಉನ್ನತ ವ್ಯಾಸಂಗದಲ್ಲಿ ತೊಡಗಿದ್ದಾರೆ.
ನಾಪೋಕ್ಲು ಜ.24 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ಸಂಯುಕ್ತ ಆಶ್ರಯದಲ್ಲಿ ಮಂಡೆಪಂಡ ಅಕ್ಕಮ್ಮ ಗಣಪತಿ ಸ್ಮಾರಕ ದತ್ತಿ ಮತ್ತು ಎಸ್.ಎಸ್.ರಾಮಮೂರ್ತಿ ದತ್ತಿ ಉಪನ್ಯಾಸ ಕಾರ್ಯಕ್ರಮ ಜ.25 ರಂದು ಬೇತು ಗ್ರಾಮದಲ್ಲಿ ನಡೆಯಲಿದೆ. ಬೆಳಿಗ್ಗೆ 10.30 ಗಂಟೆಗೆ ಬೇತು ಗ್ರಾಮದ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ಅಧ್ಯಕ್ಷ ಕುಟ್ಟಂಜೆಟ್ಟಿರ ಮಾದಪ್ಪ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೆರವಂಡ ಉಮೇಶ್ ವಹಿಸಲಿದ್ದಾರೆ. ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಪ್ರಾಸ್ತಾವಿಕ ನುಡಿ ಮತ್ತು ಕೊಡಗಿನ ಸಾಹಿತಿಗಳು, ಸಾಹಿತ್ಯ, ಜನರಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಕುರಿತು ಬಲಮುರಿಯ ನಿವೃತ್ತ ಶಿಕ್ಷಕ ಸಿ.ಕೆ.ತಿಮ್ಮಯ್ಯ ಉಪನ್ಯಾಸ ನೀಡಲಿದ್ದಾರೆ. ಕನ್ನಡ…
ಸುಂಟಿಕೊಪ್ಪ ಜ.23 NEWS DESK : ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಆರೋಗ್ಯವಂತರಾಗಿರಬೇಕಾದರೆ ಶಿಬಿರಗಳಲ್ಲಿ ಪಾಲ್ಗೊಂಡು ವೈದ್ಯರಿಂದ ಸೂಕ್ತ ತಪಾಸಣೆ ಸಲಹೆಗಳನ್ನು ಪಡೆಯುವ ಮೂಲಕ ಸಧೃಡ ಆರೋಗ್ಯವಂತರಾಗಿರಬಹುದೆಂದು ಜಿಲ್ಲಾಡಳಿತ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಹೇಳಿದರು. ಸುಂಟಿಕೊಪ್ಪ ಲಯನ್ಸ್ ಕ್ಲಬ್ ಹಾಗೂ ಕಂಪನಿಯೋ ಸಂಯುಕ್ತಾಶ್ರಯದಲ್ಲಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿರುವ 15 ದಿನಗಳ ಉಚಿತ ಫೂಟ್ ಪಲ್ಸ್ ಥೆರಫಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಲಯನ್ಸ್ ಸಂಸ್ಥೆ ಸಾರ್ವಜನಿಕರಿಗೆ ಉಚಿತವಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಜನಪರ ಕಾಳಜಿ ವಹಿಸುತ್ತಿರುವುದು ಶ್ಲಾಘನೀಯ. ಸಾರ್ವಜನಿಕರು ಇಂತಹ ಶಿಬಿರದ ಸದುಪಯೋಗ ಪಡೆದು ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯನ್ನು ಪಡೆದು ಉತ್ತಮ ಆರೋಗ್ಯದಿಂದ ಜೀವನ ನಡೆಸುವಂತೆ ಕರೆ ನೀಡಿದರು. ಕಂಪನಿ ಪ್ರತಿನಿಧಿ ಶಶಿಕಾಂತ್ ಪೂಜಾರಿ ಮಾತನಾಡಿ, ಶಿಬಿರದಲ್ಲಿ ಫೂಟ್ ಪಲ್ಸ್ ಥೆರಫಿ ಮಾಡುವುದರಿಂದ ಥೈರಾಯ್ಡ್, ಪಾಶ್ರ್ವವಾಯು, ಅಧಿಕರಕ್ತದೊತ್ತಡ, ನಿದ್ರಾಹೀನತೆ, ಪಾರ್ಕಿನ್‍ಸನ್, ಸರ್ವಿಕಲ್, ವೆರಿಕೋಸ್ ವೈಯ್ನ್, ಕುತ್ತಿಗೆ ನೋವು, ಬೆನ್ನುನೋವು, ಸ್ನಾಯು ಸೆಳೆತ, ಸೋರಿಯಸಿಸ್, ಸಕ್ಕರೆ ಕಾಯಿಲೆ ಹೀಗೆ 120ಕ್ಕೂ…
ಮಡಿಕೇರಿ ಜ.24 NEWS DESK : ಕ್ರಾಂತಿಕಾರಿ ಆಲೋಚನೆಗಳ ಮೂಲಕ ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದ್ದ ಅಪ್ರತಿಮ ದೇಶಪ್ರೇಮಿ, ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಇಡೀ ಬದುಕನ್ನೇ ಸವೆಸಿದ ನೇತಾಜಿ ಸುಭಾಷ್ ಚಂದ್ರ ಬೋಸ್‌ರ ದೇಶಪ್ರೇಮ ಮತ್ತು ಸಮರ್ಪಣಾಭಾವವನ್ನು ಸ್ಮರಿಸಬೇಕಿದೆ ಎಂದು ಬಿ.ಜೆ.ಪಿ. ಎಸ್.ಸಿ. ಮೋರ್ಚಾದ ಕೊಡಗು ಜಿಲ್ಲಾಧ್ಯಕ್ಷ ಪಿ.ಎಂ. ರವಿ ಹೇಳಿದರು.“ಪರಾಕ್ರಮ್ ದಿವಸ್” ಅಂಗವಾಗಿ ಮಡಿಕೇರಿ ನಗರದ ವಾರ್ಡ್ ನಂ.6 ರ ಸ್ಥಳೀಯ ರಾಘವೇಂದ್ರ ದೇವಾಲಯದ “ನೇತಾಜಿ ಜಂಕ್ಷನ್” ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ‘ನನಗೆ ನೀವು ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ’ ಎಂಬ ಸಂದೇಶದ ಮೂಲಕ ಕೋಟಿ ಕೋಟಿ ಭಾರತೀಯರನ್ನು ಒಂದುಗೂಡಿಸಿದ ಮಹಾನ್ ಚೇತನ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್. ಅವರ ಜನ್ಮದಿನದಂದು ಅವರಿಗೆ ನಮನವನ್ನು ಸಲ್ಲಿಸಿ, ಸ್ವಾತಂತ್ರ ಹೋರಾಟಕ್ಕಾಗಿ ಮಾಡಿದ ತ್ಯಾಗವನ್ನು ಮುಂದಿನ ಪೀಳಿಗೆಗೆ…
ಮಡಿಕೇರಿ ಜ.24 NEWS DESK : ಪರಾಕ್ರಮ್ ದಿವಸ್ – ಪರೀಕ್ಷಾ ಪೇ ಚರ್ಚಾ 9ನೇ ಆವೃತ್ತಿಯನ್ನು ಕೊಡಗಿನ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಅರ್ಥಪೂರ್ಣವಾಗಿ ನಡೆಸಲಾಯಿತು. ಜವಾಹರ್ ನವೋದಯ ವಿದ್ಯಾಲಯ, ಸೇಂಟ್ ಜೋಸೆಫ್ಸ್ ಕಾಂಪೋಸಿಟ್ ಹೈಸ್ಕೂಲ್ ಮತ್ತು ಪಿಯು ಕಾಲೇಜು, ಕ್ರೆಸೆಂಟ್ ಸ್ಕೂಲ್ ಮತ್ತು ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದಿಂದ ಕೊಡಗಿನ ಒಟ್ಟು 100 ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಭಾಗವಹಿಸಿದ್ದರು. ಭಾರತ್ ಹೈ ಹಮ್ ಸರಣಿಯ ಐದು ಸಂಚಿಕೆಗಳನ್ನು ಪ್ರದರ್ಶಿಸಲಾಯಿತು. ನಂತರ ವಿದ್ಯಾರ್ಥಿಗಳು ಲಿಖಿತ ರೂಪದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ವಿಜೇತರನ್ನು ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಯಿತು. ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಮಹೇಶ್ ಕುಮಾರ್ ವಿಜೇತರಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಚಟುವಟಿಕೆಯಲ್ಲಿ ಭಾಗವಹಿಸಿದಲ್ಲದೆ, ಕಾರ್ಯಕ್ರಮದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.
ಮಡಿಕೇರಿ ಜ.24 NEWS DESK : ಅಮೂಲ್ಯವಾದ ದಾಖಲೆಗಳು ಇದ್ದ “file”(ಕೆಂಪುಪ್ಲಾಸ್ಟಿಕ್ ಹೊದಿಕೆಯ 300-350 ಹಾಳೆಗಳ ದಾಖಲಾತಿ) ಕಾಣೆಯಾಗಿದೆ. ಕಳೆದ ಇಪ್ಪತ್ತು, ಇಪ್ಪತೈದು ದಿನಗಳ ಹಿಂದೆ ಮಡಿಕೇರಿಯ ಸುತ್ತ ಮುತ್ತ ಕಾಣೆಯಾಗಿದ್ದು, ದಾಖಲೆಗಳು ಸಿಕ್ಕಿದವರು ಸೂದನ ಈರಪ್ಪ, ಅಧ್ಯಕ್ಷರು, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ (ರಿ), ಮಡಿಕೇರಿ, ದೂರವಾಣಿ: 7022707398 ಈ ವಿಳಾಸ ಅಥವಾ ಮೊಬೈಲ್ ನಂಬರನ್ನು ಸಂಪರ್ಕಿಸಲು ಕೋರಿದೆ.
ಮಡಿಕೇರಿ ಜ.24 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಫೆ.27 ಹಾಗೂ 28 ರಂದು ಅಮ್ಮತ್ತಿ ಕೊಡವ ಸಮಾಜದಲ್ಲಿ ‘ಕೊಡವ ಬಲ್ಯನಮ್ಮೆ’ಯನ್ನು ಆಯೋಜಿಸಲು ಸರ್ವ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಮ್ಮತ್ತಿ ಕೊಡವ ಸಮಾಜದ ಸಹಭಾಗಿತ್ವದಲ್ಲಿ ಅದ್ಧೂರಿಯ ಕೊಡವ ಬಲ್ಯ ನಮ್ಮೆಯನ್ನು ನಡೆಸುವಂತೆ ಒಕ್ಕೊರಲಿನ ತೀರ್ಮಾನ ತೆಗೆದುಕೊಳ್ಳಲಾಯಿತು. ಕೊಡವ ಬಲ್ಯ ನಮ್ಮೆಯ ಮೊದಲ ದಿನ ಸಾರ್ವತ್ರಿಕವಾಗಿ ಕೊಡವ ಸಾಂಸ್ಕøತಿಕ ಸ್ಪರ್ಧೆಗಳು ನಡೆಯಲಿದ್ದು, ಈ ಪ್ರಯುಕ್ತ ಉಮ್ಮತಾಟ್, ಬೊಳಕಾಟ್, ಕೋಲಾಟ್, ಕತ್ತಿಯಾಟ್, ಕಪ್ಪೆಯಾಟ್, ದುಡಿಕೊಟ್ಟ್ ಪಾಟ್ (ದೇಶಕೆಟ್ಟ್ ಪಾಟ್ ಅಥವಾ ಕಾವೇರಿ ಪಾಟ್), ಪರೆಯಕಳಿ, ಸಮ್ಮಂಧ ಅಡ್‍ಕುವ, ವಾಲಗ ನುಡಿಸುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು. ಅಂತೆಯೇ ಸಾಹಿತ್ಯ ಪರ ಸ್ಪರ್ಧೆಗಳಾದ ಕವನ ಸ್ಪರ್ಧೆ, ಕೊಡವ ಪಾಟ್ ಸ್ಪರ್ಧೆ, ಕೊಡವ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಕೊಡವ ವಸ್ತು ಪ್ರದರ್ಶನ ಹಾಗೂ ಪೈಪೋಟಿಗೆ ಅವಕಾಶವನ್ನು ಬಲ್ಯನಮ್ಮೆಯಲ್ಲಿ ಕಲ್ಪಿಸಲಾಗಿದೆ. ವಸ್ತು ಪ್ರದರ್ಶನ ನೀಡುವವರು ತಮ್ಮ…






