ಮಡಿಕೇರಿ ಜ.1 NEWS DESK : ಪೊನ್ನಂಪೇಟೆ ಪಟ್ಟಣ ವ್ಯಾಪ್ತಿಯ ವಾಣಿಜ್ಯ ಮಳಿಗೆದಾರರಿಗೆ/ ಉದ್ದಿಮೆದಾರರಿಗೆ, ಅಂಗಡಿ, ಹೋಟೆಲ್, ಲಾಡ್ಜ್ ಮಾಲೀಕರು ಹಾಗೂ ಸರ್ಕಾರಿ ಮತ್ತು ಖಾಸಗಿ ಕಚೇರಿಯ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸಬೇಕಿದೆ. ಅದರಂತೆ, ಎಲ್ಲಾ ಅಂಗಡಿ/ ಮುಂಗಟ್ಟು/ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ.60 ಕನ್ನಡ ಪದ ಬಳಕೆಮಾಡುವಂತೆ ಆದೇಶವಿದೆ. ಆದ್ದರಿಂದ ಪೊನ್ನಂಪೇಟೆ ಪಟ್ಟಣದ ವ್ಯಾಪ್ತಿಯಲ್ಲಿನ ಎಲ್ಲಾ ಅಂಗಡಿ /ಮುಂಗಟ್ಟು/ ವಾಣಿಜ್ಯ ಮಳಿಗೆಗಳಲ್ಲಿನ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60 ಕನ್ನಡ ಪದಗಳ ಬಳಕೆ ಕಡ್ಡಾಯವಾಗಿದೆ. ಒಂದು ವೇಳೆ ನಾಮಫಲಕದಲ್ಲಿ ಶೇ.60 ಕನ್ನಡ ಪದ ಬಳಕೆಯಾಗದೇ ಇದ್ದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಈ ನಾಮಫಲಕವನ್ನು ತೆರವುಗೊಳಿಸಿ, ಅದಕ್ಕೆ ತಗಲುವ ವೆಚ್ಚವನ್ನು ತಮ್ಮಿಂದ ವಸೂಲಿ ಮಾಡಲಾಗುವುದು ಹಾಗೂ ತಮಗೆ ನೀಡಿರುವ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಿ, ಕಾನೂನಿನಂತೆ ಕ್ರಮಕೈಗೊಳ್ಳಲಾಗವುದು. ಕಾರ್ಯಾಚರಣೆಯಿಂದ ಕಟ್ಟಡಗಳಿಗೆ ಯಾವುದೇ ಹಾನಿ ಉಂಟಾದಲ್ಲಿ ಪಟ್ಟಣ ಪಂಚಾಯಿತಿ ಜವಾಬ್ದಾರಿಯಲ್ಲ ಎಂದು ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಗೋಪಿ ತಿಳಿಸಿದ್ದಾರೆ.
ಲೇಖಕ: admin
ಮಡಿಕೇರಿ NEWS DESK ಡಿ.31 : ಹುತಾತ್ಮ ದಿವಿನ್ ಅವರ ಪಾರ್ಥಿವ ಶರೀರ ಇಂದು ರಾತ್ರಿ 11.30 ಗಂಟೆ ಸುಮಾರಿಗೆ ಕುಶಾಲನಗರ ತಾಲ್ಲೂಕಿನ ಸರಕಾರಿ ಆಸ್ಪತ್ರೆಗೆ ತಲುಪುತ್ತದೆ. ಈ ರಾತ್ರಿ ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ. ನಾಳೆ ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ಕುಶಾಲನಗರದ ಜಿ ಎಂ ಪಿ ಶಾಲಾ ಮೈದಾನದಲ್ಲಿ ಹುತಾತ್ಮ ದಿವಿನ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಆ ಬಳಿಕ ಸ್ವಗ್ರಾಮ ಆಲೂರು ಸಿದ್ದಾಪುರಕ್ಕೆ ಕೊಂಡೊಯ್ದು ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ತರುವಾಯ ವಿಧಿ ವಿಧಾನಗಳ ಬಳಿಕ ಮಧ್ಯಾಹ್ನ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ. ಹುತಾತ್ಮ ದಿವಿನ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಜಿಲ್ಲಾ ಮತ್ತು ತಾಲೂಕು ಆಡಳಿತ ಕೂಡ ಎಲ್ಲಾ ವ್ಯವಸ್ಥೆಗೆ ಕೈಜೋಡಿಸಿದ್ದು, ಸಾರ್ವಜನಿಕರು ವೀರಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಮಾಡಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು…
ಮಡಿಕೇರಿ NEWS DESK ಡಿ.31 : ಹೊಸ ವರ್ಷಾಚರಣೆಯ ಹಿನ್ನೆಲೆ ಹಸಿರ ಪರಿಸರದ ಕೊಡಗಿನಲ್ಲಿ ಪ್ರವಾಸಿಗರ ದಂಡು ಕಂಡು ಬಂತು. ಮಂಜಿನ ನಗರಿ ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ವರ್ಷದ ಕೊನೆಯ ದಿನದ ಸೂರ್ಯಾಸ್ತದ ಮನಮೋಹಕ ದೃಶ್ಯವನ್ನು ಸಾವಿರಾರು ಪ್ರವಾಸಿಗರು ಕಣ್ತುಂಬಿಕೊ0ಡರು. ಸೂರ್ಯಾಸ್ತವನ್ನು ವೀಕ್ಷಿಸಿ ಸಂಭ್ರಮಿಸಿದ ಪ್ರಕೃತಿ ಪ್ರಿಯರು ತಮ್ಮ ಮೊಬೈಲ್‌ಗಳಲ್ಲಿ ಸುಂದರ ದೃಶ್ಯವನ್ನು ಸೆರೆ ಹಿಡಿದರು. ನಗರದಂಚಿನ ಅಬ್ಬಿಫಾಲ್ಸ್ ಸೇರಿದಂತೆ ಜಿಲ್ಲೆಯ ವಿವಿಧ ಪ್ರವಾಸಿತಾಣಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಜಿಲ್ಲೆಯ ಹೋಂ ಸ್ಟೇ, ರೆಸಾರ್ಟ್ಗಳು ಭರ್ತಿಯಾಗಿವೆ. ವಾಹನದಟ್ಟಣೆಯಿಂದ ಸಂಚಾರ ವ್ಯವಸ್ಥೆಯಲ್ಲಿ ಅಡಚಣೆ ಉಂಟಾಯಿತು.
ಮಡಿಕೇರಿ NEWS DESK ಡಿ.31 : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡಿನ ಶ್ರೀಮಹಾ ಮೃತ್ಯುಂಜಯ ದೇವಾಲಯದಲ್ಲಿ ಶ್ರೀಮಂತ, ಬಡವ, ಜಾತಿ, ಜನಾಂಗ ಎನ್ನುವ ಬೇಧಭಾವವಿಲ್ಲದೆ ಹಿಂದೂ ಸಮಾಜದ ಎಲ್ಲಾ ಜನಾಂಗದವರು ಒಂದೇ ಎಂದು ಪರಿಗಣಿಸಲು ಯಾವುದೇ ಸಮುದಾಯದ ಸಾಂಪ್ರದಾಯಿಕ ಉಡುಪು ಧರಿಸಿ ದೇವಾಲಯಕ್ಕೆ ಬರಲು ದೇವಾಲಯ ಸಮಿತಿಯ ಬೈಲಾದಲ್ಲಿ ಅವಕಾಶ ನೀಡಿಲ್ಲ. ಸರ್ವರೂ ಒಪ್ಪಿಕೊಂಡಿರುವ ಬೈಲಾ ಇದಾಗಿರುವುದರಿಂದ ಅಧಿಕಾರಿಗಳು ಇದಕ್ಕೆ ಸಮ್ಮತಿ ಸೂಚಿಸಬೇಕೆಂದು ಎಸ್ ಕಟ್ಟೆಮಾಡು ಪರಂಬು ಪೈಸಾರಿಯ ಗಣಪತಿ ಸೇವಾ ಸಮಿತಿ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮಾಜಿ ಅಧ್ಯಕ್ಷ ಬಿ.ಕೆ.ಉಮೇಶ್ ಹಾಗೂ ಪ್ರಮುಖರು ಗ್ರಾಮದ ಎಲ್ಲಾ ಜನಾಂಗದವರು ಒಗ್ಗೂಡಿ, ಅವಿರತ ಶ್ರಮವಹಿಸಿ, ಕೋಟ್ಯಾಂತರ ರೂ. ಖರ್ಚು ಮಾಡಿ ಶ್ರೀಮಹಾ ಮೃತ್ಯುಂಜಯ ದೇವಾಲಯವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಒಗ್ಗಟ್ಟು ಹೀಗೆ ಉಳಿಯಬೇಕು, ದೇವರ ಎದುರು ಎಲ್ಲರೂ ಸಮಾನರು ಎನ್ನುವ ಕಾರಣಕ್ಕಾಗಿ ಬೈಲಾದಲ್ಲಿ ಸಾಂಪ್ರದಾಯಿಕ ಉಡುಪಿಗೆ ಅವಕಾಶ ನೀಡಿಲ್ಲ. ಗೌಡರಿಗೂ ಸಾಂಪ್ರದಾಯಿಕ ಉಡುಪು ಇದೆ, ಆದರೆ ಬೈಲಾದ ಪ್ರಕಾರ ಅವರು ನಡೆದುಕೊಳ್ಳುತ್ತಿದ್ದು, ಸಾಂಪ್ರದಾಯಿಕ…
ಮಡಿಕೇರಿ NEWS DESK ಡಿ.31 : ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ಸಂಭವಿಸಿದ ಸೇನಾ ವಾಹನ ಅವಘಡದಲ್ಲಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ವೀರ ಯೋಧ ಕೊಡಗಿನ ಪಳಂಗೋಟು ಪಿ.ದಿವಿನ್(28) ಅವರ ಅಂತ್ಯಕ್ರಿಯೆ ಜ.1 ರಂದು ಬುಧವಾರ ಅವರ ಸ್ವಗ್ರಾಮದಲ್ಲಿ ನಡೆಯಲಿದೆ. ಕೆಲವು ದಿನಗಳ ಹಿಂದೆ ಪೂಂಚ್‌ನಲ್ಲಿ ಸೇನಾ ವಾಹನ ಪ್ರಪಾತಕ್ಕೆ ಉರುಳಿ ಗಾಯಗೊಂಡಿದ್ದ ದಿವಿನ್ ಅವರಿಗೆ ಶ್ರೀನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಇಂದು ಶ್ರೀನಗರದಿಂದ ವಿಮಾನದ ಮೂಲಕ ದಿವಿನ್ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದೆ. ಈ ಸಂದರ್ಭ ಸಂಸದ ಯದುವೀರ್ ಅವರು ವೀರ ಯೋಧನಿಗೆ ಗೌರವ ನಮನ ಸಲ್ಲಿಸಿದರು. ಕೊಡಗಿನ ಕುಶಾಲನಗರದ ಮೂಲಕ ಉತ್ತರ ಕೊಡಗಿನ ಶನಿವಾರಸಂತೆ ಬಳಿಯ ಆಲೂರು ಸಿದ್ದಾಪುರಕ್ಕೆ ರಾತ್ರಿ ಪಾರ್ಥಿವ ಶರೀರ ತಲುಪಲಿದ್ದು, ಬುಧವಾರ ಆಲೂರು ಸಿದ್ದಾಪುರದ ಸರಕಾರಿ ಶಾಲೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು.
ಮಡಿಕೇರಿ ಡಿ.31 NEWS DESK : ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನ ಪ್ರಪಾತಕ್ಕೆ ಉರುಳಿದ ದುರಂತದಲ್ಲಿ ಹುತಾತ್ಮರಾದ ಕೊಡಗಿನ ಯೋಧ ದಿವಿನ್ ಅವರ ಪಾರ್ಥಿವ ಶರೀರವನ್ನು ಇಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡ ಮೈಸೂರು – ಕೊಡಗು ಸಂಸದರ ಯದುವೀರ್ ಒಡೆಯರ್, ಸೇನಾ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿದರು.
ಗೋಣಿಕೊಪ್ಪ ಡಿ.31 NEWS DESK : ಪೊನ್ನಂಪೇಟೆ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಕುಂಞಂಗಡ ಅರುಣ್ ಭೀಮಯ್ಯ, ಗೌರವ ಕಾರ್ಯದರ್ಶಿಯಾಗಿ ಕಾಡ್ಯಮಾಡ ಗಿರೀಶ್ ಗಣಪತಿ ಆಯ್ಕೆಯಾಗಿದ್ದಾರೆ. ಪೊನ್ನಂಪೇಟೆ ತಾಲೂಕಿನಲ್ಲಿ ನಡೆದ ಕೃಷಿಕ ಸಮಾಜದ ಚುನಾವಣೆಯಲ್ಲಿ ಐದು ವರ್ಷದ ಆಡಳಿತ ಅವಧಿಗೆ ಚುನಾವಣಾಧಿಕಾರಿಗಳು ಈ ನೇಮಕಾತಿ ಆದೇಶವನ್ನು ಘೋಷಿಸಿದ್ದಾರೆ. ಉಪಾಧ್ಯಕ್ಷರಾಗಿ ಹೆಚ್.ಡಿ.ಶ್ರೀನಿವಾಸ್, ಕೋಶಾಧಿಕಾರಿಯಾಗಿ ಅಳಮೇಂಗಡ ವಿವೇಕ್, ಜಿಲ್ಲಾ ಪ್ರತಿನಿಧಿಯಾಗಿ ನೆಲ್ಲೀರ ಚಲನ್‍ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಳಮೇಂಗಡ ಬೋಸ್, ಹೆಚ್.ಕೆ.ಸುರೇಶ್, ಶರೀನ್ ಸುಬ್ಬಯ್ಯ, ಎಂ.ಬಿ.ಮೋಹನ್, ಚಿರಿಯಪಂಡ ರಾಜ ನಂಜಪ್ಪ ಆಯ್ಕೆಯಾಗಿದ್ದಾರೆ.
ಮಡಿಕೇರಿ ಡಿ.31 NEWS DESK : ಎಲ್ಲಾ ಸಮುದಾಯಗಳ ಕಷ್ಟ ಸುಖಗಳಲ್ಲೂ ಕಾಳಜಿಯಿಂದ ಸ್ಪಂದಿಸುವ ಪುರೋಹಿತರು ಅತ್ಯಂತ ಸಂಕಷ್ಟದಲ್ಲಿ ತಮ್ಮ ಬದುಕನ್ನು ಸಾಗಿಸುತ್ತಿದ್ದಾರೆ ಎಂದು ಅಖಿಲ ಭಾರತ ಪುರೋಹಿತ ಕಾರ್ಮಿಕರ ಫೆಡರೇಶನ್ ನ ರಾಜ್ಯ ಘಟಕದ ಅಧ್ಯಕ್ಷ ಡಾ.ಜೆ.ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ. ಸೋಮವಾರಪೇಟೆಯ ಸೋಮೇಶ್ವರ ದೇವಾಲಯದ ಸಭಾಂಗಣದಲ್ಲಿ ಅಖಿಲ ಭಾರತ ಪುರೋಹಿತ ಕಾರ್ಮಿಕರ ಫೆಡರೇಶನ್ ನ ಕೊಡಗು ಜಿಲ್ಲಾ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ದೇವಾಲಯಗಳಲ್ಲಿ ದುಡಿಯುತ್ತಿರುವ ಪುರೋಹಿತರಿಗೆ ಉದ್ಯೋಗ ಭದ್ರತೆಯಾಗಲಿ, ಆರೋಗ್ಯ ವಿಮಾ ಸೌಲಭ್ಯವಾಗಲಿ, ಭವಿಷ್ಯನಿಧಿ ಯೋಜನೆಯಾಗಲಿ ಯಾವುದೂ ಇಲ್ಲದೆ ಅಮಾನವೀಯವಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಎಲ್ಲಾ ಅಸಹಾಯಕ ಪರಿಸ್ಥಿತಿಯಿಂದ ಪುರೋಹಿತ ಕಾರ್ಮಿಕರನ್ನು ವಿಮುಕ್ತಿಗೊಳಿಸುವ ಉದ್ದೇಶದಿಂದ ಸಂಘಟನೆಯ ಆರಂಭಕ್ಕೆ ನಾಂದಿ ಹಾಡಲಾಗಿದೆ. ಆರಂಭಿಕವಾಗಿ 35ಕ್ಕೂ ಅಧಿಕ ಅರ್ಚಕ ವರ್ಗದವರು ಸದಸ್ಯರಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇವರುಗಳಲ್ಲೇ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜಿಲ್ಲಾ ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದರು.…
ಮಡಿಕೇರಿ ಡಿ.31 NEWS DESK : ರಾಷ್ಟ್ರಕವಿ ಕುವೆಂಪು ರಚಿತಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ನಾಡಗೀತೆಯ ಆಶಯಕ್ಕೆ ನೂರು ವರ್ಷ ತುಂಬಿದೆ. ಅದರ ನೆನಪಿಗಾಗಿ ಸಹಸ್ರಕಂಠದಲ್ಲಿ ನಾಡಗೀತೆ ಹಾಡುವ ಕಾರ್ಯಕ್ರಮವನ್ನು ಮತ್ತು ರಾಷ್ಟ್ರಕವಿ ಕುವೆಂಪು 120ನೆಯ ಜನ್ಮ ದಿನಾಚರಣೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಇಲಾಖೆ, ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸರಕಾರಿ ಹಿರಿಯ ದರ್ಜೆ ಪದವಿ ಕಾಲೇಜು, ಪದವಿಪೂರ್ವ ಕಾಲೇಜು, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಜ.4 ರಂದು ಆಯೋಜಿಸಲಾಗಿದೆ. ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬೆಳಿಗ್ಗೆ 9.45 ಗಂಟೆಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಮಂಜುಳಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗಧಾಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ…
ಮಡಿಕೇರಿ ಡಿ.31 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಮಕ್ಕಳಿಗೆ ಹಾಗೂ ಆಸಕ್ತ ಪುರುಷ-ಮಹಿಳೆಯರಿಗೆ ಕೊಡವ ಆಟ್-ಪಾಟ್ ಪಡಿಪು ಶಿಬಿರ ನಡೆಸಲು ನಿರ್ಧರಿಸಿದೆ. ಇದರನ್ವಯ ಉಮ್ಮತಾಟ್, ಉರ್‍ಟಿಕೊಟ್ಟ್ ಆಟ್, ಬೊಳಕಾಟ್, ಕೋಲಾಟ್, ಕತ್ತಿಯಾಟ್, ಚೌರಿಯಾಟ್ ಹಾಗೂ ಬಾಳೊಪಾಟ್, ದುಡಿಕೊಟ್ಟ್ ನಂತಹ ಕೊಡವ ಸಂಸ್ಕೃತಿಯ ಆಟ್-ಪಾಟ್ ತರಬೇತಿಯನ್ನು ಕನಿಷ್ಟ 15 ದಿನಗಳವರೆಗೆ ಸಾಮೂಹಿಕವಾಗಿ ನೀಡಲಾಗುವುದು. ಅಂತೆಯೇ, ಕೊಡವರ ಕುಪ್ಯ-ಚೇಲೆ, ಮಂಡೆ ವಸ್ತ್ರ, ಕೊಡವತಿ ಪೊಡಿಯ ಉಡುವ ಕ್ರಮವನ್ನು ಕಲಿಸಲಾಗುವುದು. ಕೊಡವರ ಕೋರೆಕೆಟ್ಟ್, ಪಾನಿಕೆಟ್ಟ್‍ಗಳ ತರಬೇತಿ ನೀಡಲಾಗುವುದು. ಇದರೊಂದಿಗೆ ‘ದುಡಿ ಪೊಲ್‍ಪ’ ತರಬೇತಿಯನ್ನು ನೀಡಲು ಉದ್ದೇಶಿಸಲಾಗಿದೆ. ತರಬೇತಿ ಬಯಸುವ ವಿದ್ಯಾಸಂಸ್ಥೆಗಳು, ಸಂಘ-ಸಂಸ್ಥೆಗಳ ಹೆಸರು, ವಿಳಾಸದೊಂದಿಗೆ ಅಕಾಡೆಮಿ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ಮೊಬೈಲ್ ಸಂಖ್ಯೆ-8762942976 ನ್ನು ಸಂಪರ್ಕಿಸಬಹುದು. ಆದ್ದರಿಂದ ಈ ಎಲ್ಲಾ ಕಲೆಗಳಲ್ಲಿ ಅರಿವು-ಅನುಭವ ಇರುವ ತಜ್ಞರು, ತರಬೇತುದಾರರು ತಮ್ಮ ಸ್ವ ವಿವರಗಳೊಂದಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‍ಗೆ ಬರೆಯುವುದು. ತರಬೇತುದಾರರಿಗೆ ಅಕಾಡೆಮಿ ವತಿಯಿಂದ ಸೂಕ್ತ ಸಂಭಾವನೆ…






