ಕುಶಾಲನಗರ ಡಿ.21 NEWS DESK : ಉತ್ತಮ ಉದ್ದೇಶ ಹಾಗೂ ಗುರಿಯೊಂದಿಗೆ ಕಾರ್ಯಯೋಜನೆ ರೂಪಿಸಿ ಕಾರ್ಯಕ್ರಮಗಳನ್ನು ಅನುμÁ್ಠನಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ರೋಟರಿ 3181 ಜಿಲ್ಲಾ ರಾಜ್ಯಪಾಲ ವಿಕ್ರಂ ದತ್ತ ಕರೆ ನೀಡಿದ್ದಾರೆ. ಕುಶಾಲನಗರ ರೋಟರಿಗೆ ಅಧಿಕೃತ ಭೇಟಿ ನೀಡಿ ವಾರ್ಷಿಕ ಕಾರ್ಯ ಚಟುವಟಿಕೆ ಬಗ್ಗೆ ಪರಿಶೀಲನೆ ನಡೆಸಿ, ನಂತರ ನಡೆದ ಸಮಾರಂಭದಲ್ಲಿ ಪಾಲ್ಗೊಮಡು ಅವರು ಮಾತನಾಡಿದರು. ರೋಟರಿ ಸದಸ್ಯರು ತ್ಯಾಗ ಮನೋಭಾವನೆ ಮೂಲಕ ಕಾರ್ಯಯೋಜನೆ ರೂಪಿಸುತ್ತಾರೆ. ಇತರರಿಗೆ ನೆರವು ನೀಡುವ ಉದ್ದೇಶದೊಂದಿಗೆ ಸೇವೆ ಸಲ್ಲಿಸುತ್ತಾರೆ ಎಂದರು. ರೋಟರಿ ಸಂಸ್ಥೆಯ ಮೂಲಕ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಅಸಹಾಯಕರಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಎಲ್ಲೆಡೆ ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ ಎಂದ ಅವರು, ಕುಶಾಲನಗರ ರೋಟರಿ ಸಂಸ್ಥೆಯ ಮೂಲಕ ಸರಕಾರಿ ಆಸ್ಪತ್ರೆಗೆ ನೀಡಲಾದ ಡಯಾಲಿಸಿಸ್ ಘಟಕ ಸೇರಿದಂತೆ ಹಲವು ಕಾರ್ಯಯೋಜನೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕುಶಾಲನಗರ ರೋಟರಿ ಅಧ್ಯಕ್ಷ ಸಿ.ಬಿ.ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಕ್ರೀಡಾ…
ಲೇಖಕ: admin
ಸೋಮವಾರಪೇಟೆ ಡಿ.21 NEWS DESK : ಜೀವನದ ಜಂಜಾಟದಲ್ಲಿರುವ ಜನತೆಗೆ ಆಧ್ಯಾತ್ಮಿಕತೆ ಅವಶ್ಯವಿದ್ದು, ಅದರಿಂದ ನೆಮ್ಮದಿ ಕಾಣಲು ಸಾಧ್ಯವೆಂದು ಕೊಡ್ಲಿಪೇಟೆ ಕಿರಿಕೂಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು. ಅಕ್ಕನ ಬಳಗ ವತಿಯಿಂದ ಪಟ್ಟಣದ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಸಾಮೂಹಿಕ ಇಷ್ಟ ಲಿಂಗ ಪೂಜೆ ನೆರವೇರಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಹಾಗೂ ಬಿಡುವಿಲ್ಲದ ಕೆಲಸದಿಂದ ಜನರಿಗೆ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರವೆಂದರೆ ಪೂಜೆ ಹಾಗೂ ಧ್ಯಾನ ಮಾಡಿ ಒತ್ತಡವನ್ನು ಹಿಡಿತಕ್ಕೆ ತಂದುಕೊಳ್ಳಬೇಕು ಎಂದು ಹೇಳಿದರು. ದೇಹದ ಮೇಲೆ ಇಷ್ಟಲಿಂಗ ಧರಿಸಿ ಪೂಜಿಸುವ ಧರ್ಮವೊಂದು ಇದ್ದರೆ, ಅದು ವೀರಶೈವ ಲಿಂಗಾಯತ ಧರ್ಮವಾಗಿದ್ದು, ಇಲ್ಲಿ ಯಾವುದೇ ಸೂತಕಕ್ಕೂ ಆಸ್ಪದವಿಲ್ಲ. ಲಿಂಗಪೂಜೆ ಮುಖ್ಯವೆಂದರು. ಇಷ್ಟಲಿಂಗ ಪೂಜೆಗೆ ಪ್ರಾತಃಕಾಲ ಸೂಕ್ತವಾದದ್ದು. ಮನೆಯಲ್ಲಿ ತಮ್ಮ ಮಕ್ಕಳಿಗೆ ಪೂಜೆಯನ್ನು ಕಲಿಸಿ, ವಚನ ಹೇಳಿಸಿ ಆ ಮೂಲಕ ಶಿವ ಶರಣರ ಆಶಯವನ್ನು ಈಡೇರಿಸಬೇಕು. 2,3 ತಿಂಗಳಿಗೊಮ್ಮೆ ಇಂತಹ ಸಾಮೂಹಿಕ ಇಷ್ಟಲಿಂಗ ಪೂಜೆ, ವಚನ ಕಮ್ಮಟಗಳನ್ನು ಏರ್ಪಡಿಸಿದಲ್ಲಿ ಮಹಿಳೆಯರಲ್ಲಿ ಜಾಗೃತಿ…
ಮಡಿಕೇರಿ ಡಿ.21 NEWS DESK : ಕುಂಗ್‍ಫು ಅಸೋಸಿಯೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷರಾಗಿ ಮಕ್ಕಂದೂರು ಗ್ರಾಮದ ಎನ್.ಸಿ.ಸುದರ್ಶನ್ ಆಯ್ಕೆಯಾಗಿದ್ದಾರೆ. ಇವರನ್ನು ಅಂತರರಾಷ್ಟ್ರೀಯ ಕುಂಗ್‍ಫು ಕೌನ್ಸಿಲ್‍ನ ಸ್ಥಾಪಕಾಧ್ಯಕ್ಷ ಪಾಪುನ್ ಪೌಲ್ ಆಯ್ಕೆ ಮಾಡಿದ್ದಾರೆ. ಎನ್.ಸಿ.ಸುದರ್ಶನ್ ಅವರ ಬಳಿ ಕೊಡಗಿನ ಅನೇಕ ವಿದ್ಯಾರ್ಥಿಗಳು ಕುಂಗ್‍ಫು ತರಬೇತಿ ಪಡೆಯುತ್ತಿದ್ದು, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿದ್ದಾರೆ.
ಡಿ.23 ರಿಂದ ಡಿ.29ರ ವರೆಗಿನ ವಾರ ಭವಿಷ್ಯ (ಡಾ.ಮಹಾಬಲೇಶ್ವರ ಭಟ್, ಮೂರ್ನಾಡು 8105634429) ಮೇಷ ರಾಶಿ :: ಈ ವಾರ ನಿಮಗೆ ಅಷ್ಟೊಂದು ಒಳ್ಳೆಯ ದಿನಗಳಿಲ್ಲ. ಸುತ್ತಾಟ, ಹಣವ್ಯಯ, ಬಂಧು ಕಲಹ, ಹೊಸ ಸ್ನೇಹಿತರು ಆಗುವರು. ಶುಭ ಸಂಖ್ಯೆ :; 1, 2, 3, 9 :: ಶುಭ ಬಣ್ಣ :: ಕೆಂಪು, ಹಳದಿ, ಕೇಸರಿ ವೃಷಭ ರಾಶಿ :: ಈ ವಾರ ಉತ್ತಮ ಫಲ ಪಡೆಯಲಿದ್ದೀರಿ. ದೂರ ಪ್ರಯಾಣ ಮಾಡಲಿದ್ದೀರಿ, ಬಂಧು ಕಲಹದಿಂದ ದುಃಖ :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಬಿಳಿ, ಹಸಿರು, ಕಪ್ಪು ಮಿಥುನ ರಾಶಿ :: ಬಿಡುವಿಲ್ಲದ ಕೆಲಸದಲ್ಲಿ ತೊಡಗುವಿರಿ, ಉತ್ತಮ ಸ್ಥಾನಮಾನ ದೊರಕಲಿದೆ. ದೂರ ಪ್ರಯಾಣ ಮಾಡಲಿದ್ದೀರಿ. ತೀರ ಸುತ್ತಾಟದಿಂದ ಅನಾರೋಗ್ಯ ಕಾಡಲಿದೆ. :: ಶುಭಸಂಖ್ಯೆ : 3, 5, 6 :: ಶುಭ ಬಣ್ಣ :: ಕೆಂಪು, ಹಸಿರು ಕರ್ಕಾಟಕ ರಾಶಿ :: ತೀವ್ರ…
ಮಡಿಕೇರಿ ಡಿ.21 NEWS DESK : ಇಂದಿನ ರಾಜಕೀಯ ವ್ಯವಸ್ಥೆ ದು:ಖ ತರಿಸಿದೆ, ವಿಕೇಂದ್ರೀಕರಣ ರಾಜಕಾರಣ ಮರೆಯಾಗಿದ್ದು, ಸರ್ವಾಧಿಕಾರ ಮೆರೆಯುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದ್ದಾರೆ. ಮಡಿಕೇರಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಮತ್ತು ವಿವಿಧ ರಾಜ್ಯಗಳಲ್ಲಿ ಸಂವಿಧಾನಕ್ಕೆ ಪೂರಕವಾದ ರಾಜಕಾರಣ ನಡೆಯುತ್ತಿಲ್ಲ. ಸಮಬಾಳಿನ ಪರಿಕಲ್ಪನೆ ಸಾಕಾರಗೊಳ್ಳುತ್ತಿಲ್ಲ, ಅಧಿಕಾರ ವಿಕೇಂದ್ರೀಕರಣವಾಗುತ್ತಿಲ್ಲ. ಸಮಾಜ ಭ್ರಷ್ಟಾಚಾರ ಮುಕ್ತವಾಗುತ್ತಿಲ್ಲ, ಮತಚಲಾವಣೆಗೂ ಮತದಾರ ಹಣ ಪಡೆಯುವ ರೀತಿಯಲ್ಲಿ ಭ್ರಷ್ಟ ವ್ಯವಸ್ಥೆ ಬೆಳೆದು ಬಿಟ್ಟಿದೆ. ಕುಟುಂಬ ರಾಜಕಾರಣಕ್ಕೆ ಒತ್ತು ನೀಡಲಾಗುತ್ತಿದೆ, ಸರ್ವಾಧಿಕಾರದ ರಾಜಕೀಯ ನಡೆಯುತ್ತಿದೆ. ಸದನದಲ್ಲಿ ವೈಯುಕ್ತಿಕ ನಿಂದನೆಯಾಗುತ್ತಿದೆ, ಹಲ್ಲೆ ಪ್ರಕರಣಗಳು ನಡೆಯುತ್ತಿದೆ ಎಂದರು. ಇಂದಿನ ಶಿಕ್ಷಣ ವ್ಯವಸ್ಥೆ ಇದಕ್ಕೆಲ್ಲ ಮುಖ್ಯ ಕಾರಣವಾಗಿದೆ, ಸರಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಮೂಲಭೂತ ಸೌಲಭ್ಯಗಳಿಲ್ಲ. ರಾಜ್ಯದಲ್ಲಿ 60 ಸಾವಿರ ಶಿಕ್ಷಕರ ಕೊರತೆ ಇದೆ ಎಂದು ಸ್ವತ: ಶಿಕ್ಷಣ ಸಚಿವರೇ ಹೇಳುತ್ತಿದ್ದಾರೆ. ಈ ನಡುವೆ ಕನ್ನಡ ಶಾಲೆಯ ಉದ್ಧಾರ, ಕನ್ನಡ ಕಡ್ಡಾಯ ಎಂದು ಘೋಷಣೆ ಮಾಡುತ್ತಿದ್ದಾರೆ.…
ವಿರಾಜಪೇಟೆ ಡಿ.21 NEWS DESK : ಶಿಕ್ಷಣ ಸಂಸ್ಥೆಗಳು ಒಬ್ಬ ವ್ಯಕ್ತಿಗೆ ಉತ್ತಮ ಶಿಕ್ಷಣ ನೀಡಿ ಸುಸಂಸ್ಕೃತರನ್ನಾಗಿ ಮಾಡುತ್ತದೆ. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಉತ್ತಮ ವಿದ್ಯಾರ್ಥಿಯನ್ನು ಕೊಡಗೆಯಾಗಿ ನೀಡುತ್ತದೆ ಎಂದು ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಹಾಗೂ ಪ್ರಧಾನ ಧರ್ಮಗುರು ಡಾ.ಬರ್ನಾಡ್ ಮೋರಸ್ ಹೇಳಿದರು. ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧರ್ಮಗುರುಗಳು ಮನುಜನಿಗೆ ಗ್ರಹಿಸಲು ಜ್ಞಾನಿಸಲು ಶಿಕ್ಷಣ ಬಹುಮುಖ್ಯವಾಗಿದೆ. ಶಿಕ್ಷಿತರೇ ಇಂದು ಭ್ರಷ್ಟಚಾರದಂತ ಕೃತ್ಯಗಳಲ್ಲಿ ಭಾಗಿಗಳಾಗಿ ಸಮಾಜಕ್ಕೆ ಮಾರಕವಾಗಿದ್ದಾರೆ. ತಮ್ಮ ಜೀವನಕ್ಕೆ ಆದ್ಯಾತ್ಮಿಕ ಮೌಲ್ಯಗಳು ಒಳಪಡಿಸಿಕೊಂಡು ಮಾನವನಾಗಿ ಜೀವಿಸಲು ಕಲಿಯಬೇಕು. ಪ್ರತಿಯೋಬ್ಬನು ಶಿಕ್ಷೀತನಾದಲ್ಲಿ ಮಾತ್ರ ಉತ್ತಮ ಸಮಾಜ ರೂಪಿಸಿಲು ಸಾದ್ಯ. ಈ ನಿಟ್ಟಿನಲ್ಲಿ ಮೈಸೂರು ಧರ್ಮ ಕೇಂದ್ರಕ್ಕೆ ಒಳಪಟ್ಟಿರುವ ಸಂತ ಅನ್ನಮ್ಮ ವಿದ್ಯಾ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದೆ. ಇಲ್ಲಿ ವಿದ್ಯಾಭ್ಯಾಸ ಪಡದ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥರಗಳಲ್ಲಿ ಗುರುತಿಸುವಂತಾಗಬೇಕು ಎಂದು ಹೇಳಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಪಾರಿವಾಳಗಳನ್ನು…
ಮಡಿಕೇರಿ ಡಿ.21 NEWS DESK : ಈ ಬಾರಿಯ ರಾಜ್ಯ ಮಟ್ಟದ ಯುವ ಜನೋತ್ಸವ ದಾವಣಗೆರೆಯಲ್ಲಿ ಜ.4 ಮತ್ತು 5 ರಂದು ನಡೆಯಲಿದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟದ ಆಶ್ರಯದಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾನಪದ ನೃತ್ಯ, ಜಾನಪದ ಗೀತೆ, ಕವಿತೆ ಬರೆಯುವುದು, ಚಿತ್ರಕಲೆ, ಕಥೆ ಬರೆಯುವುದು ವಿಷಾಯಧಾರಿತ ಸ್ಪರ್ಧೆ (ವಿಜ್ಞಾನ ಮೇಳ) ಹಾಗೂ ಘೋಷಣೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ತಂಡ ಮತ್ತು ವೈಯಕ್ತಿಯವಾಗಿ ಪ್ರಥಮ ಸ್ಥಾನ ಪಡೆದವರು ಭಾಗವಹಿಸುವಂತೆ ಮನವಿ ಮಾಡಿದರು. ಹಾಜರಾಗುವ ಸ್ಪರ್ಧಿಗಳು ಕೊಡಗು ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳಿಂದ ಪ್ರಮಾಣಪತ್ರವನ್ನು…
ಮಡಿಕೇರಿ ಡಿ.21 NEWS DESK : ಹಾಕತ್ತೂರು ಶಕ್ತಿ ಕೇಂದ್ರದ ನೂತನ ಪ್ರಮುಖ್ ಆಗಿ ಕುಂಜಿಲನ ಎಂ.ಮೋಹನ್, ಸಹ ಪ್ರಮುಖ್ ಆಗಿ ಸಿ.ವಿ.ಸುನೀಲ್ ಆಯ್ಕೆಯಾಗಿದ್ದಾರೆ. ಹಾಕತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಶಕ್ತಿ ಕೇಂದ್ರದ ಪ್ರಮುಖರಾದ ಪಿ.ಪಿ.ಸುಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಆಯ್ಕೆ ಪ್ರಕ್ರಿಯೆಯನ್ನು ಕೊಡಗು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಾಂಗೀರ ಸತೀಶ್ ಹಾಗೂ ಹಾಕತ್ತೂರು ಶಕ್ತಿ ಕೇಂದ್ರದ ಉಸ್ತುವಾರಿಗಳಾದ ಮೇಕೇರಿಯ ಕಿರಣ ನಡೆಸಿಕೊಟ್ಟರು. ಸಭೆಯಲ್ಲಿ ಹಾಕತ್ತೂರು ಗ್ರಾ.ಪಂ ಅಧ್ಯಕ್ಷ ಯತೀಶ್, ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ತೇಜಸ್ ನಾಣಯ್ಯ, ಹಾಗೂ ಬೂತ್ ಅಧ್ಯಕ್ಷರುಗಳಾದ ಎಂ.ಎ.ರಮೇಶ್, ಕುಂಟಿಕಾನ ಲಿತೀಶ್, ಮಾಜಿ ಅಧ್ಯಕ್ಷ ಸಜನ್, ಗ್ರಾ.ಪಂ ಸದಸ್ಯರಾದ ಪೊನ್ನಚ್ಚನ ಲೋಕೇಶ್, ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ಮಡಿಕೇರಿ ಡಿ.21 NEWS DESK : ತುಳು ಭಾಷಿಕ ಆದಿ ದ್ರಾವಿಡ ಪರಿಶಿಷ್ಟ ಜಾತಿ ಬಾಂಧವರ ಬೇಡಿಕೆಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ತುಳು ಭಾಷಿಕ ಆದಿ ದ್ರಾವಿಡ ಸಮುದಾಯದವರಿಗೆ 8 ವಿವಿಧ ರೀತಿಯ `ಪರಿಶಿಷ್ಟ ಜಾತಿ’ ಪ್ರಮಾಣ ಪತ್ರವನ್ನು ನೀಡಲಾಗುತ್ತಿದ್ದು, ಇದರಿಂದ ತೊಂದರೆ ಎದುರಾಗಿದೆ ಎಂದು ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಹೆಚ್.ಎಂ.ಸೋಮಪ್ಪ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಜಿಲ್ಲೆಯಲ್ಲಿ ಸುಮಾರು 30 ಸಾವಿರ ಮಂದಿ ತುಳು ಭಾಷಿಕ ಆದಿ ದ್ರಾವಿಡ ಪರಿಶಿಷ್ಟ ಜಾತಿ ಜನರಿದ್ದಾರೆ. “ಆದಿ ದ್ರಾವಿಡ” ಪರಿಶಿಷ್ಟ ಜಾತಿ ಎಂದು ಜಾತಿ ಪ್ರಮಾಣಪತ್ರ ನೀಡಲು ಸರಕಾರದ ಕ್ರಮ ಕೈಗೊಳ್ಳಬೇಕೆಂದು ಕಳೆದ ಅನೇಕ ವರ್ಷಗಳಿಂದ ಸಂಘಟನೆ ಮೂಲಕ ಒತ್ತಾಯಿಸುತ್ತಾ ಬರಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸರಕಾರ ನಿರ್ದೇಶನ ನೀಡಿದೆ. ಜಿಲ್ಲಾಡಳಿತ ತಾಲ್ಲೂಕು ಕಚೇರಿಗಳಿಗೆ ಆದೇಶ ಮಾಡಿ “ಆದಿ ದ್ರಾವಿಡ” ಎಂದು…
ಮಡಿಕೇರಿ ಡಿ.21 NEWS DESK : ಇತ್ತೀಚೆಗೆ ಸಂಸತ್ ಅಧಿವೇಶನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅಗೌರವ ತೋರುವ ರೀತಿಯಲ್ಲಿ ಹೇಳಿಕೆ ನೀಡಿ ದೇಶದ ಜನರ ಭಾವನೆಗೆ ದಕ್ಕೆ ತಂದಿದ್ದಾರೆ ಎನ್ನುವ ಆರೋಪ ಎದುರಿಸುತ್ತಿರುವ ಗೃಹಸಚಿವ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದಾರೆ. ಭಾರತ ದೇಶದಲ್ಲಿ ಸಾವಿರಾರು ಜಾತಿ, ಮತಗಳಿವೆ. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ಸರ್ವರಿಗೂ ಸಮಾನ ಹಕ್ಕನ್ನು ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಿದ್ದಾರೆ. ಇದೇ ಕಾರಣಕ್ಕೆ ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಿಕೊಳ್ಳುವುದು ಭಾರತೀಯರ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಆದರೆ ಇದನ್ನೇ ಕೇವಲವಾಗಿ ಕಂಡಿರುವ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರನ್ನು ಸ್ಮರಿಸುವುದು ಫ್ಯಾಷನ್ ಎಂದು ಹೇಳುವ ಮೂಲಕ ಅಗೌರವ ತೋರಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ::: ರವಿ ವಿರುದ್ಧ ಕ್ರಮಕ್ಕೆ ಒತ್ತಾಯ ::: ಬೆಳಗಾವಿ ಅಧಿವೇಶನ…






