ಮಡಿಕೇರಿ ಡಿ.19 NEWS DESK : ಮಡಿಕೇರಿಯ ಭಾರತಿ ರಮೇಶ್ ಗೆ ದೇವಾಂಗ ರತ್ನ ರಾಜ್ಯ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ನೆಲಮಂಗಲದ ಕೆಂಪಲಿಂಗನಹಳ್ಳಿಯ ದೇವಾಂಗ ಶಾಖಾಮಠದಲ್ಲಿ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ ಹೇಮಕೂಟ ಹಂಪಿ ಮತ್ತು ಕರ್ನಾಟಕ ರಾಜ್ಯ ದೇವಾಂಗ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಶ್ರೀ ದೇವಲ ಮಹರ್ಷಿ ಜಯಂತ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕುಲಗುರುಗಳಾದ ಶ್ರೀ ದಯಾನಂದ ಪುರಿ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ರಾಜ್ಯಾಧ್ಯಕ್ಷ ರವೀಂದ್ರ ಕಲಬುರ್ಗಿ ಮತ್ತು ರಾಜ್ಯ ಪದಾಧಿಕಾರಿಗಳು ಭಾರತಿ ರಮೇಶ್‌ಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಕರ್ನಾಟಕ ರಾಜ್ಯದ 24 ಜಿಲ್ಲೆಗಳಿಂದ ಜಿಲ್ಲೆಗೊಬ್ಬರಂತೆ ದೇವಾಂಗ ಸಾಧಕರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗಿದ್ದು, ಮಡಿಕೇರಿ ಅಧ್ಯಕ್ಷ ಕೆ.ಎನ್.ಗಜಾನನ ಹಾಗೂ ಕುಲಬಾಂಧವರ ಒಮ್ಮತದ ನಿರ್ಧಾರದಂತೆ “ದೇವಾಂಗ ರತ್ನ ರಾಜ್ಯಪ್ರಶಸ್ತಿಗೆ ಭಾರತಿ ರಮೇಶ್ ಅವರನ್ನ ಆಯ್ಕೆ ಮಾಡಲಾಗಿದೆ. 24 ಜನ ಮಹನೀಯರ ನಡುವೆ ಒಬ್ಬಳು ಮಹಿಳೆಯನ್ನು ಆಯ್ಕೆ ಮಾಡಿ ಕಳುಹಿಸಿದ್ದು ಕೊಡಗಿನ ದೇವಾಂಗ ಕುಲದವರ ಹೆಗ್ಗಳಿಕೆಯಾಗಿದೆ ಎಂದು…
ಲೇಖಕ: admin
ವಿರಾಜಪೇಟೆ ಡಿ.19 NEWS DESK : ಪೊಂಬೊಳ್ಚ ಕೂಟದ ಮುಂದಿನ ಮೂರು ವರ್ಷಗಳ ಕಾಲಾವಧಿಯ ಹೊಸ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ಕಾಕೋಟುಪರಂಬುವಿನಲ್ಲಿರುವ ಕಾಲಭೈರವ ದೇವರ ಸನ್ನಿದಿಯ ಸಮುದಾಯ ಭವನದಲ್ಲಿ ನಡೆಯಿತು. ಕೂಟದ ಸ್ಥಾಪಕ ಅಧ್ಯಕ್ಷ ಕೋಟೆರ ಪೂಣಚ್ಚಅವರ ಅಧ್ಯಕ್ಷತೆಯಲ್ಲಿ ಮತ್ತು ಮಾಜಿ ಮಾಳೇಟಿರ ಶ್ರೀನಿವಾಸ್ ಅವರ ಸಮ್ಮುಖದಲ್ಲಿ ನಡೆಯಿತು. ಆಯ್ಕೆ ಪ್ರಕ್ರಿಯೆಯಲ್ಲಿ ಪೊಂಬೊಳ್ಚ ಕೂಟದ ಅಧ್ಯಕ್ಷರನ್ನಾಗಿ ಚಂಗೇಟಿರ ಸೋಮಣ್ಣ, ಉಪಾಧ್ಯಕ್ಷರನ್ನಾಗಿ ಮುಂಡ್ಯೋಳಂಡ ಧರಣಿ ಜಗದೀಶ್, ಕಾರ್ಯದರ್ಶಿಯನ್ನಾಗಿ ಜಮ್ಮಡ ಮೋನ (ಸರಸ್ವತಿ) ಭೀಮಯ್ಯ, ಸಹಕಾರ್ಯದರ್ಶಿಯಾಗಿ ಅಜ್ಜಿಕುಟ್ಟಿರ ಭವ್ಯ ಬೋಪಣ್ಣ, ಖಜಾಂಜಿಯಾಗಿ ಶಿವಚಾಳಿಯಂಡ ರೋಹಿಣಿ ಬೋಪಣ್ಣ, ಸಂಘಟನಾ ಕಾರ್ಯದರ್ಶಿಯಾಗಿ ಮಲ್ಚೀರ ಯಶೋಧ ದೇವಯ್ಯ, ನಿರ್ದೇಶಕರಾಗಿ ಕಾಣತಂಡ ವಿವೇಕ್ ಅಯ್ಯಪ್ಪ, ಚೇನಂಡ ತೇಜ ಬೋಪಣ್ಣ, ಅಪ್ಪನೆರವಂಡ ಮಾದಪ್ಪ, ಕುಂಡ್ಯೋಳಂಡ ಬೋಪಣ್ಣ, ಕಳ್ಳಿಚಂಡ ದೀನಾ ಉತ್ತಪ್ಪ ಹಾಗೂ ಮೊಣ್ಣಂಡ ವಿನು ಕಾರ್ಯಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಮಡಿಕೇರಿ ಡಿ.19 NEWS DESK : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅವಹೇಳನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ದೇಶದ ಜನರಲ್ಲಿ ಕ್ಷಮೆಯಾಚಿಸಬೇಕೆಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ಪಕ್ಷದ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಂಬೇಡ್ಕರ್ ಅವರ ಹೆಸರನ್ನು ಪದೇಪದೇ ಹೇಳುವುದು ಪ್ಯಾಶನ್ ಆಗಿದೆ. ಅಂಬೇಡ್ಕರ್ ಹೆಸರನ್ನು ಹೇಳಿದಷ್ಟು ಬಾರಿ ದೇವರ ಸ್ಮರಣೆ ಮಾಡಿದರೆ ಏಳು ಜನ್ಮಗಳಿಗೆ ಸ್ವರ್ಗ ದೊರಕುತ್ತಿತ್ತು ಎಂದು ಸಚಿವ ಅಮಿತ್ ಶಾ ಅವರು ಸದನದಲ್ಲಿ ಹೇಳಿಕೆ ನೀಡಿರುವುದು ಖಂಡನೀಯ. ಅಂಬೇಡ್ಕರ್ ಅವರ ಅವಹೇಳನ ದೇಶದ ಸಂವಿಧಾನವನ್ನೇ ಅವಹೇಳನ ಮಾಡಿದ್ದಕ್ಕೆ ಸಮ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶತಮಾನಗಳಿಂದ ಅವಮಾನ, ಶೋಷಣೆ, ದೌರ್ಜನ್ಯಕ್ಕೆ ಒಳಗಾಗಿದ್ದ ಜನರಿಗೆ ಸಂವಿಧಾನದ ಮೂಲಕ ರಕ್ಷಣೆ ನೀಡಿದ ದೇಶದ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ…
ಮಡಿಕೇರಿ ಡಿ.19 NEWS DESK : ಗಾಳಿಬೀಡು ರಸ್ತೆ ಡಾಂಬರೀಕರಣಕ್ಕಾಗಿ ಒತ್ತಾಯಿಸಿ ಗ್ರಾಮಸ್ಥರ ಹೆಸರಿನಲ್ಲಿ ನಡೆಸಿದ ಪ್ರತಿಭಟನೆ ಬಿಜೆಪಿಯ ಕೃಪಾಪೋಷಿತ ಪ್ರತಿಭಟನೆಯಾಗಿದೆ ಎಂದು ಗಾಳಿಬೀಡು ವಲಯ ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ಆಳ್ವ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗ್ರಾಮದ ರಸ್ತೆ ಕಳೆದ 20 ವರ್ಷಗಳಿಂದ ಸಂಪೂರ್ಣ ಡಾಂಬರೀಕರಣಗೊಂಡಿಲ್ಲ, ಅಂದಿನಿಂದ ಇಂದಿನವರೆಗೆ ರಸ್ತೆಗೆ ತೇಪೆ ಹಾಕುವ ಕಾರ್ಯವೇ ಮುಂದುವರಿದುಕೊಂಡು ಬಂದಿದೆ. ಈ ಹಿಂದೆ ನಡೆದ ತೇಪೆ ಕಾರ್ಯವನ್ನು ವಿರೋಧಿಸದೇ ಇದ್ದ ಬಿಜೆಪಿ ಸದಸ್ಯರು ಇಂದು ಆಡಳಿತ ವ್ಯವಸ್ಥೆ ಬದಲಾಗಿರುವುದನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಸ್ವಾರ್ಥ ರಾಜಕಾರಣಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮಸ್ಥರ ಹೆಸರಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ ಎನ್ನುವ ಮಾಹಿತಿ ಇದ್ದ ಕಾರಣದಿಂದ ಗ್ರಾಮಸ್ಥರಿಂದ ದೊಡ್ಡ ಬೆಂಬಲ ದೊರೆತ್ತಿಲ್ಲವೆಂದು ತಿಳಿಸಿದ್ದಾರೆ. ಈ ಹಿಂದೆ ಬಿಜೆಪಿ ಶಾಸಕರು ಇದ್ದ ಸಂದರ್ಭದಲ್ಲಿ ಗ್ರಾಮಸ್ಥರು ಪ್ರತಿಭಟನೆಗೆ ಕರೆ ನೀಡಿದಾಗ ಬೆಂಬಲಿಸದೇ ಇದ್ದ ಪ್ರಮುಖರು, ಇಂದು ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ನಡೆಸಿದ್ದಾರೆ. 2008ನೇ ಇಸವಿಯಲ್ಲಿ ಬಿಜೆಪಿ ಮಂದಿ…
ಮಡಿಕೇರಿ ಡಿ.19 NEWS DESK : ಇಶಾ ಗ್ರಾಮೋತ್ಸವದ ಪ್ರಯುಕ್ತ ಡಿ.28 ಮತ್ತು 29 ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಬ್ಲಾಕ್ ಪ್ಯಾಂಥರ್ಸ್ ಮರಗೋಡು ತಂಡ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದೆ ಎಂದು ಬ್ಲಾಕ್ ಪ್ಯಾಂಥರ್ಸ್ ತಂಡದ ನಾಯಕಿ ಕೆ.ಎಂ.ಚಂದ್ರಕಲಾ ತಿಳಿಸಿದ್ದಾರೆ. ಈ ತಂಡ ಕಳೆದ ವರ್ಷ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು.
ಮಡಿಕೇರಿ ಡಿ.19 NEWS DESK : ಆಲ್ ಇಂಡಿಯಾ ಸೂಪರ್ ಫೈವ್ಸ್ “ಕೊಡಗು ವರ್ಲ್ಡ್ ಕಪ್”ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಗೋಣಿಕೊಪ್ಪಲಿನ ಸರ್ವದೈವತಾ ಶಾಲೆಯ ಆವರಣದಲ್ಲಿ ನಡೆಯಿತು. ಮೇ ತಿಂಗಳ ಒಂದರಿಂದ ನಾಲ್ಕರವೆಗೆ ಜಿಲ್ಲೆಯ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಗಳಲ್ಲಿ ಒಂದಾದ ಆಲ್ ಸ್ಟಾರ್ ಎಫ್.ಸಿ ಗೋಣಿಕೊಪ್ಪ ತಂಡವು ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಫುಟ್ಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಂಡಿದೆ. ಪಂದ್ಯಾವಳಿಯ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಶಿಕ್ಷಕಿ ಶೀಲಾ ಬೋಪಣ್ಣ, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ವಿಜೇತ ತಂಡಕ್ಕೆ ಎರಡು ಲಕ್ಷದ ನಗದು ಬಹುಮಾನ ನೀಡುವ ಫುಟ್ಬಾಲ್ ಕ್ರೀಡಾಕೂಟವನ್ನು ಆಲ್ ಸ್ಟಾರ್ ಎಫ್.ಸಿ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ. ವಲ್ಡ್ ಕಪ್ ಫುಟ್ಬಾಲ್ ಅಚ್ಚುಕಟ್ಟಾಗಿ ನಡೆಯಲಿ ಎಂದು ಅವರು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲಿನ ಎಒನ್ ಶರತ್, ಬಿಎನ್ಎಸ್ ಟ್ರೇಡರ್ಸ್ ಸುಧಾಕರ್ ರೈ, ಪಿಮ್ ಸ್ಪೋರ್ಟ್ಸ್ ಮಾಲೀಕ ಸಲೀಮ್, ಹಮೀದ್, ಮುಕ್ತಾರ್, ಅಕ್ಷಯ್, ಸುಮನ್, ಲಕ್ಷಣ್, ಆಲ್ ಸ್ಟಾರ್ ಫುಟ್ಬಾಲ್ ಪದಾಧಿಕಾರಿಗಳಾದ ರನೀಸ್,ಶಾನಿಫ್,ಸವಾದ್,ರಾಫಿ,ಅಮೀನ್,ಬೋಪಣ್ಣ, ವಿನ್ಸಿ ಹಾಗೂ…
ಕುಶಾಲನಗರ, ಡಿ.19 NEWS DESK : ಸ್ವಚ್ಛ ಭಾರತ ಅಭಿಯಾನದ ಯೋಜನೆಯಡಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರಕಾರಿ ಪ್ರೌಢಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕುಶಾಲನಗರ ತಾಲ್ಲೂಕು ಸ್ಥಳೀಯ ಸಂಸ್ಥೆ ಹಾಗೂ ಕೂಡುಮಂಗಳೂರು ಗ್ರಾ.ಪಂ ಸಹಕಾರದಿಂದ ಶಾಲೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ-ಕ್ಲಬ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.) ವತಿಯಿಂದ ಸ್ವಚ್ಛ ಭಾರತ ಅಭಿಯಾನದ ಯೋಜನೆಯಡಿ ಹಾಗೂ ಆರೋಗ್ಯ ಮತ್ತು ಶುಚಿತ್ವ ಕಾರ್ಯಕ್ರಮದಡಿಯಲ್ಲಿ ಶೌಚಾಲಯಗಳು- ಶಾಂತಿಗಾಗಿ ಒಂದು ಸ್ಥಳ- ಎಂಬ ಧ್ಯೇಯ ವಾಕ್ಯ (ಥೀಮ್) ದೊಂದಿಗೆ ವಿಶ್ವ ಶೌಚಾಲಯ ದಿನ:2024 ರ ಅಂಗವಾಗಿ “ನಮ್ಮ ಶೌಚಾಲಯ ನಮ್ಮ ಗೌರವ”ಎಂಬ ಧ್ಯೇಯದಡಿ ಸ್ವಚ್ಛತಾ ಜಾಗೃತಿ ನಡೆಯಿತು. ಸ್ವಚ್ಛ ಭಾರತ ಮಿಷನ್ ಗ್ರಾಮೀಣ, ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಕುಶಾಲನಗರ, ತಾಲೂಕು ಪಂಚಾಯಿತಿಯ ಜನಜಾಗೃತಿ ಕಾರ್ಯಕ್ರಮದಡಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಶೌಚಗೃಹ…
ಸಿದ್ದಾಪುರ ಡಿ.19 NEWS DESK : ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಬದುಕುವ ಸಮಾನ ಹಕ್ಕನ್ನು ಪ್ರತಿಪಾದಿಸಿದ ಶರಣರು ದಯೆಯನ್ನು ಧರ್ಮದ ಮೂಲವಾಗಿಸಿದರು. ಜೊತೆಗೆ ಎಲ್ಲಾ ಧರ್ಮಗಳ ಸಾರವೂ ಇದೇ ಆಗಿದೆ ಎಂದು ಸಾಹಿತಿ ಕಣಿವೆ ಭಾರಧ್ವಜ್ ಆನಂದತೀರ್ಥ ಹೇಳಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನೆಲ್ಲಿಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಚನ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಣಿ ಪಕ್ಷಿಗಳೊಂದಿಗಿನ ಜೀವರಾಶಿಗಳು ಹಾಗೂ ಮನುಷ್ಯನ ಜೀವ ಒಂದೇ. ಯಾವ ಕಾರಣಕ್ಕೂ ಅನಗತ್ಯವಾಗಿ ಹರಣವಾಗಬಾರದು ಎಂಬ ಸದುದ್ದೇಶದಿಂದ ಬಸವಾದಿ ಶರಣರು, ಕಲಬೇಡ ಕೊಲಬೇಡ ಎಂಬ ವಚನದ ಮೂಲಕ ಮನುಷ್ಯನ ಸುಂದರ ಬದುಕಿಗೆ ಅಗತ್ಯವಿರುವ ದೀವಿಗೆ ಹಚ್ಚಿದ್ದಾರೆ. ಹಾಗೆಯೇ ಇಸ್ಲಾಂ, ಕ್ರೈಸ್ತ , ಬೌದ್ಧ ಮೊದಲಾದ ಎಲ್ಲಾ ಧರ್ಮಗಳು ಕೂಡ ಅದೇ ಸಂದೇಶ ಸಾರಿವೆ. ಆದರೆ ನಾವು ಅವುಗಳನ್ನು ಅರಿಯುವಲ್ಲಿ ಹಾಗೂ ಪಾಲನೆ ಮಾಡುವಲ್ಲಿ ಎಡವಿದ್ದೇವೆ. ಹಾಗಾಗಿ ಸಂಕೋಲೆಗಳಲ್ಲಿ ಸಿಲುಕಿದ್ದೇವೆ ಎಂದು ಭಾರಧ್ವಜ್ ವಿಷಾದಿಸಿದರು. “ಸಾಂಸ್ಕೃತಿಕ ನಾಯಕ ಬಸವಣ್ಣ…
ಮಡಿಕೇರಿ ಡಿ.19 NEWS DESK : ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಹೋಬಳಿಯ ಈರಳೆವಳಮುಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಅಕ್ರಮ ಸಕ್ರಮದಡಿ ಮಂಜೂರಾಗಿದ್ದ ಊರ್ ಮಂದ್ ನ 98 ಸೆಂಟ್ಸ್ ಜಾಗದ ಮಂಜೂರಾತಿಯನ್ನು ವಜಾಗೊಳಿಸಲಾಗಿದೆ. ನಿಯಮ ಬಾಹಿರ ಎನ್ನುವ ಕಾರಣಕ್ಕಾಗಿ ವಜಾಗೊಳಿಸಿ ಆದೇಶಿಸುವ ಮೂಲಕ, ಊರ್ ಮಂದ್ ನ್ನು ಸಾರ್ವಜನಿಕರ ಉಪಯೋಗಕ್ಕೆ ಸಿಗುವಂತೆ ಮಾಡಿದ ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಕ್ರಮ ಸ್ವಾಗತಾರ್ಹ ಮತ್ತು ತಮ್ಮ 27 ವರ್ಷಗಳ ಸತತ ಹೋರಾಟಕ್ಕೆ ಸಿಕ್ಕ ಜಯ ಎಂದು ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳೆಗಾರರೊಬ್ಬರು ತಮಗೆ ಬೇಕಾದಷ್ಟು ಜಮೀನು ಇದ್ದರೂ ಊರ್ ಮಂದ್ ನ್ನು ಒತ್ತುವರಿ ಮಾಡಿಕೊಂಡು ಮಾಜಿ ಅರಣ್ಯ ಸಚಿವರೊಬ್ಬರ ಪ್ರಭಾವ ಬಳಸಿ ಅಕ್ರಮ ಸಕ್ರಮದಡಿ ಮಂಜೂರಾತಿ ಮಾಡಿಕೊಂಡಿದ್ದರು ಎಂದು ಆರೋಪಿಸಿದರು. 27 ವರ್ಷಗಳ ಹಿಂದೆ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತುವರಿ ಕುರಿತು ದೂರಿಕೊಂಡು ಊರ್ ಮಂದ್ ನ…
ಮಡಿಕೇರಿ ಡಿ.19 NEWS DESK : ಗ್ರಾಮೀಣ ಪ್ರದೇಶದಲ್ಲಿ ನೆಲೆನಿಂತಿರುವ ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿ ಈಗ ವಜ್ರ ಮಹೋತ್ಸವದ ಸಂಭ್ರಮದಲ್ಲಿದ್ದು, ಇದೇ 27 ಮತ್ತು 28 ರಂದು ಸಂಸ್ಥೆಯ 60 ನೇ ವಷಾ೯ರಣೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕನ೯ಲ್ ಬಿ.ಜಿ.ವಿ.ಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕನ೯ಲ್ ಕುಮಾರ್, ದಾನಿಗಳಾದ ದಿವಂಗತ ಲೆಫ್ಟಿನೆಂಟ್ ಕನ೯ಲ್ ಡಿ.ಸಿ.ಬಸಪ್ಪ ಅವರ ಪ್ರಯತ್ನದಿಂದಾಗಿ ಅವರ ತಾಯಿ ಡಿ ಚೆನ್ನಮ್ಮ ಸ್ಮರಣಾಥ೯ 1960 ರ ಜುಲೈ 22 ರಂದು ಆರಂಭವಾದ ಪ್ರೌಢಶಾಲೆ 6 ದಶಕಗಳಲ್ಲಿ ಈ ವ್ಯಾಪ್ತಿಯ ಗ್ರಾಮೀಣ ವಿದ್ಯಾಥಿ೯ಗಳಿಗೆ ಜ್ಞಾನದೀವಿಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದಿವಂಗತರಾದ ಮಚ್ಚಂಡ ಗಣಪತಿ, ಪುಟ್ಟುಸ್ವಾಮಿ ಮುತ್ತಯ್ಯ ಗುಂಡುಕುಟ್ಟಿ ಮಂಜುನಾಥಯ್ಯ, ಎಂ.ಎ.ಪೊನ್ನಪ್ಪ, ಕೆ.ಡಿ.ಸೋಮಯ್ಯ, ಸಿ.ಎ.ಪೂವಯ್ಯ, ಎಂ.ಜಿ.ಬೋಪಣ್ಣ ಸೇರಿದಂತೆ ಅನೇಕ ಮಹನೀಯರ ಪರಿಶ್ರಮದಿಂದಾಗಿ ಶಿಕ್ಷಣ ಸಂಸ್ಥೆಯು ಸಾಕಷ್ಟು ಅಭಿವೖದ್ದಿ ಹೊಂದಿದೆ ಎಂದು ಸ್ಮರಿಸಿಕೊಂಡರು. 1964ರಲ್ಲಿ ಗರಗಂದೂರಿನ ಈಗಿನ ಸುಂದರ ಕಟ್ಟಡಕ್ಕೆ ಶಾಲೆಯನ್ನು…






