ಲೇಖಕ: admin

ಮಡಿಕೇರಿ ಜ.12 : ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜ.15 ರಂದು ಕಾವೇರಿ ಕ್ಷೇತ್ರ ಭಾಗಮಂಡಲದ ಟ್ರಸ್ಟ್ ನ ಜಾಗದಲ್ಲಿ `ಚಂಡಿಕಾ ಹೋಮ’ ನಡೆಯಲಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಪುತ್ತೂರಿನ ಸುಬ್ರಹ್ಮಣ್ಯ ಬೆಳ್ಳೂಕರಾಯ ಅವರ ನೇತೃತ್ವದಲ್ಲಿ ಬೆಳಗ್ಗೆ 7 ಗಂಟೆಯಿಂದ ಶ್ರೀ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, ಶತರುದ್ರ ಪಠಣ ಹಾಗೂ ಚಂಡಿಕಾ ಹೋಮ ನಡೆಯಲಿದೆ ಎಂದರು. ಜಿಲ್ಲೆಯ ಕೊಡವ ಮತ್ತು ಅಮ್ಮಕೊಡವ ಜನಾಂಗ ಬಾಂಧವರು ಒಂದಾಗಿ ಸೇರಿ ಟ್ರಸ್ಟ್ ನ ಸಹಯೋಗದಲ್ಲಿ ಚಂಡಿಕಾ ಹೋಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಪುರಾಣಗಳಲ್ಲಿ ಪ್ರಸ್ತಾಪವಾಗಿರುವಂತೆ ಅಗಸ್ತ್ಯ ಮುನಿಗಳು ಮತ್ತು ಕಾವೇರಿಯ ನಡುವೆ ಕಲಹವೇರ್ಪಟ್ಟಾಗ ಕಾವೇರಿಯ ಪರವಾಗಿ ನಿಂತ ಕೊಡವರಿಗೆ ಮತ್ತು ಅಮ್ಮ ಕೊಡವರಿಗೆ ಅಗಸ್ತ್ಯ ಮುನಿಗಳು ಶಾಪ ನೀಡಿದ್ದರು. ಈ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಬಂದ ಪರಿಹಾರ ಕ್ರಮಗಳಂತೆ ಕಾವೇರಿಯ ಕ್ಷೇತ್ರದಲ್ಲಿ `ಚಂಡಿಕಾ…

Read More

ಮಡಿಕೇರಿ. ಜ, 12: ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಸುಪರ್ದಿಯಲ್ಲಿರುವ ಬಾಲಭವನದ ಸನಿಹ ಇರುವ “ಚೇತನ ಚಿಲುಮೆ” ಮಕ್ಕಳ ಉದ್ಯಾನವನ್ನು ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಉದ್ಘಾಟಿಸಿದರು. ಈ ಹಿಂದೆ ಚಾಲ್ತಿಯಲ್ಲಿದ್ದ ಉದ್ಯಾನವು ಕೋವಿಡ್ ಬಳಿಕ ಗಿಡಗಂಟಿಗಳಿಂದ ತುಂಬಿ ಮುಚ್ಚಲ್ಪಟ್ಟಿತ್ತು. ಇದೀಗ ಸಾರ್ವಜನಿಕ ಒತ್ತಾಯದ ಮೇಲೆ ಪುಟ್ಟ ಉದ್ಯಾನವನ್ನು ಶಿಶು ಕಲ್ಯಾಣ ಸಂಸ್ಥೆ ಹೊಸ ರೂಪು ನೀಡಿ ಮಕ್ಕಳು, ಆಸಕ್ತರ ಬಳಕೆಗೆ ತೆರೆದಿದೆ. ಉದ್ಯಾನವನ್ನು ಸಾರ್ವಜನಿಕರಿಗೂ ಒದಗಿಸಲಿದ್ದು, ಐದು ರೂಪಾಯಿ ಟಿಕೆಟ್ ಇರಿಸುವುದಾಗಿ ಸಂಸ್ಥೆಯ ಕಾರ್ಯಾಧ್ಯಕ್ಷ ರವೀಂದ್ರ ರೈ ಹೇಳಿದರು. ಪ್ರಧಾನ ಕಾರ್ಯದರ್ಶಿ ನಮಿತಾ ರೈ, ಕೆಮಿಸ್ಟ್ರ್ ಮತ್ತು ಡ್ರಗ್ಗಿಸ್ಟ್ರ್ ಸಂಸ್ಥೆಯ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಎ.ಕೆ. ಜೀವನ್, ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ರವೀಂದ್ರ ರೈ, ಯೋಗ ಮಾರ್ಗದರ್ಶಕಿ ಶಿಲ್ಪಾ ರೈ, ಸಂಸ್ಥೆಯ ಸದಸ್ಯರಾದ ಬೇಬಿ ಪೂವಯ್ಯ, ಪಾಲಾಕ್ಷ, ಪತ್ರಕರ್ತ ಗಿರೀಶ್, ಕೌಸರ್, ರಂಜಿತ್ ಕವಲಪಾರ, ಕವಿತ ಹಾಗೂ ಇತರರು ಹಾಜರಿದ್ದರು.

Read More

ಸುಂಟಿಕೊಪ್ಪ ಜ.12 : ಸುಂಟಿಕೊಪ್ಪ ಸರಕಾರಿ ಶಾಲೆಗೆ ಬೆಟ್ಟಗೇರಿ ತೋಟದ ಮಾಲಿಕರಾದ ವಿನೋದ್ ಶಿವಪ್ಪ ಅವರ ಪುತ್ರ ವಿಶಾಲ್ ಶಿವಪ್ಪ ಹಾಗೂ ಅವರ ಪತ್ನಿ ನಟಿ ಶುಭ್ರಾ ಅಯ್ಯಪ್ಪ ಭೇಟಿ ನೀಡಿ, ಶಾಲಾ ಪರಿಸರ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಶೂಟು ಹಾಗೂ ಕಂಪ್ಯೂಟರ್‍ಗಳನ್ನು ನೀಡುವುದಾಗಿ ಭರವಸೆ ನೀಡಿದರು. ಅಲ್ಲದೇ ಶಾಲೆಯ ಮಕ್ಕಳಿಗೆ ಕೈ ತೊಳೆಯುವ ತೊಟ್ಟಿಯನ್ನು ಹಾಗೂ ಮೇಲ್ಚಾವಣಿಯನ್ನು ನಿರ್ಮಿಸಿಕೊಟ್ಟರು. ಈ ಸಂದರ್ಭ ಸುಂಟಿಕೊಪ್ಪ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರಾದ ಆಲಿಕುಟ್ಟಿ, ಶಬ್ಬೀರ್ ಹಾಗೂ ಶಾಲಾ ಶಿಕ್ಷಕರು ಮತ್ತಿತರರು ಹಾಜರಿದ್ದರು.

Read More

ವಿರಾಜಪೇಟೆ ಜ.12 : ಕರ್ನಾಟಕ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವಿರಾಜಪೇಟೆಯ ಟೀಂ ಇಂಟೋಪೀಸ್ ತಂಡ 9 ಚಿನ್ನ, 5 ಬೆಳ್ಳಿ, 4 ಕಂಚಿನ ಪದಕವನ್ನು ಗೆದ್ದುಗೊಂಡು ರಾಷ್ಟ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ವಿದ್ಯಾರ್ಥಿಗಳು ನೃತ್ಯ ತರಬೇತುದಾರರಾದ ವಿಷ್ಣು ಅವರ ಬಳಿ ತರಬೇತಿ ಪಡೆಯುತ್ತಿದ್ದು, ಫೆ.5ರಂದು ಜಮ್ಮುವಿನಲ್ಲಿ ನಡೆಯುವ ರಾಷ್ಟ ಮಟ್ಟದ ಸ್ಪರ್ಧೆ ನಡೆಯಲಿದೆ.

Read More

ಮಡಿಕೇರಿ ಜ.12 : ಮಡಿಕೇರಿಯ ಮಂಗಳಾದೇವಿ ನಗರದಲ್ಲಿರುವ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಜ.14 ಮತ್ತು 15 ರಂದು ಶ್ರೀ ರಾಜರಾಜೇಶ್ವರಿ, ಮಹಾಗಣಪತಿ ಹಾಗೂ ನಾಗದೇವರುಗಳ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದೆ. ವಾರ್ಷಿಕೋತ್ಸವದ ಪ್ರಯುಕ್ತ ಎರಡು ದಿನಗಳ ಕಾಲ ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿವೆ. ಜ.14 ರಂದು ಸಂಜೆ 6 ಗಂಟೆಗೆ ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತುಹೋಮ, ದಿಶಾಬಲಿ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ಜ.15 ರಂದು ಬೆಳಿಗ್ಗೆ 8 ಗಂಟೆಯಿಂದ ಪುಣ್ಯಾಹ, ಗಣಪತಿ ಹೋಮ, ಚಂಡಿಕಾ ಹೋಮ, ನವಕಲಶ ಪೂಜೆ, ಪ್ರಧಾನ ಹೋಮ, ನಾಗದೇವರಿಗೆ ತಂಬಿಲ ಪೂಜೆ, ಆಶ್ಲೇಷ ಬಲಿ, ಕಳಶಾಭಿಷೇಕ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 5.30 ರಿಂದ ಸಾಯಂಪೂಜೆ, 6.30 ಗಂಟೆಗೆ ರಂಗಪೂಜೆ, 7 ಗಂಟೆಯಿಂದ ಬಲಿ…

Read More

ನಾಪೋಕ್ಲು ಜ.12 : ಅಯೋಧ್ಯೆಯಲ್ಲಿ ಜ.22 ರಂದು ನಡೆಯುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಪಾಲೂರು ಗ್ರಾಮದಲ್ಲಿ ಮನೆ ಮನೆಗೆ ಪವಿತ್ರ ಮಂತ್ರಾಕ್ಷತೆ ವಿತರಣೆ ಮಾಡಲಾಯಿತು.ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಂತ್ರಾಕ್ಷತೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಹಿಂದೂ ಸಂಘಟನೆಯ ಪ್ರಮುಖರು ಮಂತ್ರಾಕ್ಷತೆಯನ್ನು ಪಾಲೂರು ಗ್ರಾಮ ವ್ಯಾಪ್ತಿಯ ಮನೆ ಮನೆಗಳಿಗೆ ವಿತರಿಸಿದರು. ಈ ಸಂದರ್ಭ ಸೂದನ ಮದನ್, ಸೂದನ ಸುಜಿ, ಬೈತಾಡ್ಕ ಡೆಲಿವಿ ದೇವಯ್ಯ, ಎಡಿಕೇರಿ ಪ್ರವೀಣ ಸೇರಿದಂತೆ ಮುಖ್ಯ ಪಟ್ಟವರು ಭಾಗವಹಿಸಿದ್ದರು. ವರದಿ : ದುಗ್ಗಳ ಸದಾನಂದ 

Read More

ಮಡಿಕೇರಿ ಜ.12 : ಕೃಷಿಕರನ್ನು ಕಾಡುತ್ತಿರುವ ಹತ್ತು ಹಲವು ಸಮಸ್ಯೆಗಳ ನಡುವೆ ಅಕಾಲಿಕ ಮಳೆ ಮತ್ತಷ್ಟು ತಲ್ಲಣಗೊಳಿಸಿದೆ. ಮುಂದಿನ ಜೀವನ ನಿರ್ವಹಣೆ ಹೇಗೆ ಎಂಬ ಪ್ರಶ್ನೆಯನ್ನು ಕೂಡ ಹುಟ್ಟು ಹಾಕಿದೆ. ಸರ್ಕಾರ ತಕ್ಷಣ ಬೆಳೆಗಾರರ ನೆರವಿಗೆ ಬರಬೇಕು ಎನ್ನುವ ಒತ್ತಾಯ ಕೃಷಿಕ ವರ್ಗದಿಂದ ಕೇಳಿ ಬಂದಿದೆ. ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಕಂಬಿಬಾಣೆಯ ಕಾಫಿ ತೋಟದಲ್ಲಿ ನಡೆದ “ಪತ್ರಕರ್ತರ ನಡಿಗೆ ಕೃಷಿಕರ ಕಡೆಗೆ” ಎಂಬ ಸಂವಾದ ಕಾರ್ಯಕ್ರಮದಲ್ಲಿ ಬೆಳೆಗಾರರು ತಮ್ಮ ಅಹವಾಲನ್ನು ತೋಡಿಕೊಂಡರು. ಪ್ರಗತಿಪರ ಕೃಷಿಕ ಟಿ.ಕೆ.ಸಾಯಿಕುಮಾರ್ ಮಾತನಾಡಿ ಬೆಲೆಯ ಏರಿಳಿತ, ಸಾಲದ ಹೊರೆ, ಕಾರ್ಮಿಕರ ಕೊರತೆ, ಕಾಡಾನೆ ಸೇರಿದಂತೆ ವನ್ಯಜೀವಿಗಳ ಹಾವಳಿಯಿಂದ ರೈತರು ಕಂಗೆಟ್ಟು ಹೋಗಿದ್ದಾರೆ. ಅದರ ಜೊತೆಗೆ ನಮ್ಮ ಅನುಭವದಲ್ಲೇ ಇಲ್ಲದ ಜನವರಿ ತಿಂಗಳ ಅಕಾಲಿಕ ಮಳೆಯಿಂದ ಕಾಫಿ ಹಣ್ಣಾಗಿ ಕೊಯ್ಲು ಮಾಡುವ ಸಂದರ್ಭದಲ್ಲೇ ಕಾಫಿ ಹೂವನ್ನು ನೋಡುತ್ತಿದ್ದೇವೆ. ಕಾಫಿಯನ್ನು ಕೊಯ್ಲು ಮಾಡಬೇಕೋ ಅಥವಾ ಹೂವನ್ನು ರಕ್ಷಿಸಿಕೊಳ್ಳಬೇಕೋ ಎಂಬ ಅತಂತ್ರ ಪರಿಸ್ಥಿತಿ ಉದ್ಭವಿಸಿದೆ…

Read More

ನಾಪೋಕ್ಲು ಜ.12 : ಕೊಡವ ಕುಟುಂಬಗಳ ನಡುವಿನ ಬೊಟ್ಟೋಳಂಡ ಕಪ್ ಹಗ್ಗ ಜಗ್ಗಾಟ -2024ರ ಸ್ಪರ್ಧೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದು, ಕೊಡವ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ಸಿಗೆ ಸಹಕರಿಸಬೇಕು ಎಂದು ಬೊಟ್ಟೋಳಂಡ ಕಪ್ ಹಗ್ಗ ಜಗ್ಗಾಟ ಕ್ರೀಡಾ ಸಮಿತಿ ಅಧ್ಯಕ್ಷ ಬೊಟ್ಟೋಳಂಡ ಗಣೇಶ್ ಮನವಿ ಮಾಡಿದರು. ನಾಪೋಕ್ಲು ಭಗವತಿ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯನ್ನು ಏ.18 ರಿಂದ ಏ.21 ರವರೆಗೆ ಆಯೋಜಿಸಲಾಗಿದ್ದು, ಮಹಿಳಾ ಮತ್ತು ಪುರುಷರ ತಂಡಗಳು ಪಾಲ್ಗೊಳ್ಳಲು ಅವಕಾಶವಿದೆ. ಪ್ರತಿ ತಂಡದಲ್ಲಿ ಏಳು ಮಂದಿ ಆಟಗಾರರು ಪಾಲ್ಗೊಳ್ಳಬಹುದಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಗಳು ನೋಂದಾಯಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸಬೇಕು ಎಂದರು. 2022ರಲ್ಲಿ ಕಕ್ಕಬ್ಬೆಯಲ್ಲಿ ಪೊನ್ನೋಲತಂಡ ಕುಟುಂಬಸ್ಥರು ಮೊದಲ ವರ್ಷದ ಹಗ್ಗ ಜಗ್ಗಾಟ ಸ್ಪರ್ಧೆಯನ್ನು, 2023 ರಲ್ಲಿ ಟಿ.ಶೆಟ್ಟಿಗೇರಿಯ ಚೆಟ್ಟಂಡ ಕುಟುಂಬಸ್ಥರು ಎರಡನೇ ವರ್ಷದ ಸ್ಪರ್ಧೆಯನ್ನು ಆಯೋಜಿಸಿದ್ದು, ಇದೀಗ ಮೂರನೇ ವರ್ಷದ ಹಗ್ಗ ಜಗ್ಗಾಟ ಸ್ಪರ್ಧೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು. ಕ್ರೀಡಾ…

Read More

ಮಡಿಕೇರಿ ಜ.12  : ಕಿರುಗೂರಿನಲ್ಲಿ ಕಿರೆಹೊಳೆ ಸೇತುವೆ ಸಹಿತ ಅಣೆಕಟ್ಟು ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ  ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು.

Read More

ನಾಪೋಕ್ಲು ಜ.12 : ಕಾರು ಮತ್ತು ಜೀಪಿನ ನಡುವೆ ಅಪಘಾತ ಸಂಭವಿಸಿ ಕೊಡಗಿನ ಕೊಡಗಿನ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಕುಶಾಲನಗರ ಸಮೀಪ ಬೈಲುಕುಪ್ಪೆ ನಿವಾಸಿ ಬಿ.ಎಂ.ಸುಬ್ಬಯ್ಯ ಎಂಬುವವರ ಪತ್ನಿ ನೇತ್ರಾವತಿ (29) ಮೃತ ದುರ್ದೈವಿ. ಬಿ.ಎಮ್. ಸುಬ್ಬಯ್ಯ ತಮ್ಮ ಕಾರಿನಲ್ಲಿ ಅವರ ಪತ್ನಿ ನೇತ್ರಾವತಿ, ಪುತ್ರ ದಿವಿತ್  ಹಾಗೂ ಅಕ್ಕ ಮೂರ್ನಾಡು ನಿವಾಸಿ ಜಯಂತಿ ಅವರೊಂದಿಗೆ ಬೆಂಗಳೂರಿನಿಂದ ಕುಶಾಲನಗರಕ್ಕೆ ಬರುವ ಸಂದರ್ಭ ರಾಮನಗರದಲ್ಲಿ ಕಾರು ಮತ್ತು ಜೀಪಿನ ನಡುವೆ ಅಪಘಾತ ಸಂಭವಿಸಿದೆ. ನೇತ್ರಾವತಿ ಮೃತಪಟ್ಟಿದ್ದು, ಬಿ.ಎಮ್. ಸುಬ್ಬಯ್ಯ(38), ಪುತ್ರ ಮೂರೂವರೆ ವರ್ಷದ ದಿವಿತ್ ಹಾಗೂ ಅಕ್ಕ ಜಯಂತಿ (40) ಕೆಂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ನೇತ್ರಾವತಿ ಅವರ ಅಂತ್ಯಕ್ರಿಯೆ ಸುಬ್ಬಯ್ಯ ಅವರ ತೋಟದ ಮನೆ ಗೋಣಿಕೊಪ್ಪಲು, ಮಾಯಾಮುಡಿಯಲ್ಲಿ ನೆರವೇರಿತು. ವರದಿ : ದುಗ್ಗಳ ಸದಾನಂದ 

Read More