
ಸಿದ್ದಾಪುರ NEWS DESK ಸೆ.25 : ಶ್ರೀ ಸಿದ್ದಿ ವಿನಾಯಕ ಮಿತ್ರ ಮಂಡಳಿ ವತಿಯಿಂದ 16 ನೇ ವರ್ಷದ ಗೌರಿ ಗಣೇಶೋತ್ಸವ ಅಂಗವಾಗಿ ಇಲ್ಲಿನ ಅಂಬೇಡ್ಕರ್ ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವ ವಿಜೃಂಭಣೆಯಿಂದ ನಡೆಯಿತು. ಅರ್ಚಕರಾದ ರಘು ಭಟ್ಟರ ನೇತೃತ್ವದಲ್ಲಿ ಗಣಪನಿಗೆ ಹೋಮ ಮಂಗಳಾರತಿ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ಸಿದ್ದಾಪುರ ನೆಲ್ಯಹುದಿಕೇರಿ ಅಮ್ಮತ್ತಿ ವಿರಾಜಪೇಟೆ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ಪೂಜೆ ಬಳಿಕ ಪುಷ್ಪಾಲಂಕೃತ ಭವ್ಯ ಮಂಟಪದಲ್ಲಿ ಮೂರ್ತಿಗಳನ್ನು ಕುಳ್ಳಿರಿಸಿ ಸಿದ್ದಾಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ಕಾವೇರಿ ನದಿಗೆ ವಿಸರ್ಜಿಸಲಾಯಿತು. ಶ್ರೀ ಸಿದ್ದಿ ವಿನಾಯಕ ಮಿತ್ರ ಮಂಡಳಿ ವತಿಯಿಂದ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮ ಪಂಚಾಯತಿ ಸದಸ್ಯ ಜಾಫರ್ ಅಲಿ ಮಾತನಾಡಿ ಹಬ್ಬಗಳ ಆಚರಣೆ ಮೂಲಕ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. ಅಧ್ಯಕ್ಷ ಅಯ್ಯ, ಕಾರ್ಯದರ್ಶಿ ಸಂತೋಷ್, ಖಜಾಜಿ ಮಹೇಂದ್ರ, ಗೌರವಾಧ್ಯಕ್ಷ ಪಳನಿಸ್ವಾಮಿ ಸ್ವಾಮಿ, ಸುರೇಶ ಎಚ್ಪಿ, ಸುರೇಶ ಬಾಬು,ನಾರಾಯಣ, ಲೋಕೇಶ, ಬಾಲು, ಮಾದೇವ, ಮಂಜ, ಚರಣ್, ಚಂದ್ರು, ನಿರೇಶ, ಕೃಷ್ಣಪ್ಪ, ಅರುಣ ಚಿಕ್ಕ, ರಾಜ, ಸ್ವಾಮಿ, ಪ್ರಶಾಂತ್, ಪ್ರಭು, ಶಿವ, ಶೇಖರ, ಅರವಿಂದ, ಅಜಯ್, ಸುರೇಶ್ ಎಚ್ ಪಿ, ಜಗ್ಗು, ಗಣೇಶ, ಕಿರಣ, ಕರ್ಣ, ದಿನೇಶ, ಜೀವನ್, ಟೋನಿ, ಅರುಣಾಚಲ, ಸಾಯಿ ಕುಮಾರ್, ಅಯ್ಯಪ್ಪ, ಸುರೇಶ್.ಎಚ್.ಕೆ, ಕುಶ, ನಾಗರಾಜ್, ರಮೇಶ ಮತ್ತಿರರು ಹಾಜರಿದ್ದರು.(ವರದಿ : ಸುರೇಶ್ ಗುಹ್ಯ)








