ಮಡಿಕೇರಿ ಜ.2 : ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮುಂದಿನ 3 ವರ್ಷ ಅವಧಿಗೆ ಅಧ್ಯಕ್ಷರಾಗಿ ಹೆಚ್.ಪಿ.ರವೀಶ್ ಮರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ವೀಣಾ, ಖಜಾಂಚಿಯಾಗಿ ರಾಜಶೇಖರ ಆಯ್ಕೆಯಾಗಿದ್ದಾರೆ.
ರಾಜ್ಯ ಪರಿಷತ್ ಸ್ಥಾನಕ್ಕೆ ಉಳಿದ 6 ಪದಾಧಿಕಾರಿಗಳು ಆಯ್ಕೆಯಾಗಿದ್ದು, ಕಕ್ಕಬ್ಬೆ ಗ್ರಾ.ಪಂ ಪಿಡಿಒ ಅಶೋಕ್ ಕುಮಾರ್ ಬಿ.ವೈ, ಉಪಾಧ್ಯಕ್ಷ ರಾಗಿ ವಾಲ್ನೂರು ತ್ಯಾಗತ್ತೂರು ಪಿಡಿಒ ಲೋಕೇಶ್, ಸಂಘಟನಾ ಕಾರ್ಯದರ್ಶಿಯಾಗಿ ಪೊನ್ನಂಪೇಟೆ ಪಿಡಿಒ ಪುಟ್ಟರಾಜು, ಲಿಖಿತಾ, ಕ್ರೀಡಾ ಕಾರ್ಯದರ್ಶಿಯಾಗಿ ಮದೆನಾಡು ಪಿಡಿಒ ನಂಜುಂಡಸ್ವಾಮಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಾಳಿಬೀಡು ಪಿಡಿಒ ಶಶಿಕಿರಣ್ ಅವಿರೋಧ ಆಯ್ಕೆಯಾಗಿದ್ದಾರೆ.
ಮಡಿಕೇರಿ ತಾ.ಪಂ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿ ಮೋಹನ್ ಕುಮಾರ್,ಚುನಾವಣಾ ಸಿಬ್ಬಂದಿಗಳಾದ ಹುಸೇನ್ ಮುಲ್ಲಾ, ದೀಪ್ತಿ ಚುನಾವಣಾ ಪ್ರಕ್ರಿಯೆ ಹಾಗೂ ಮತ ಎಣಿಕೆ ಪ್ರಕ್ರಿಯೆ ನಡೆಸಿದರು. ನೊಂದಣಿಯಾದ 78 ಮತದಾರರಲ್ಲಿ 75 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಮತದಾರರಿಗೆ ಇಲಾಖೆ ಆಯುಕ್ತರು ಓಓಡಿ ಸೌಲಭ್ಯ ಕಲ್ಪಿಸಿದ್ದ ರು. ಕಾನೂನು ಸಲಹೆಗಾರ ಹಾಗೂ ಗೌರವಾಧ್ಯಕ್ಷ ಹುದ್ದೆಗೆ ಜಿಲ್ಲಾ ಸಮಿತಿ ಸಭೆಯಲ್ಲಿ ನಿರ್ಣಯಿಸಿ ಆಯ್ಕೆಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷ ಹೆಚ್.ಪಿ. ರವೀಶ್ ತಿಳಿಸಿದರು.