ವಿರಾಜಪೇಟೆ ಜ.2 : ಕುಶಾಲನಗರದ ಹಾರಂಗಿಯಲ್ಲಿರುವ ಜ್ಞಾನ ಗಂಗಾ ವಸತಿ ಶಾಲೆಯಲ್ಲಿ ಏರ್ಪಡಿಸಿದ ಜಿಲ್ಲಾಮಟ್ಟದ ಅಂತರ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಆಕರ್ಷ್ ಕೊಂಗಂಡ, ಅಯ್ಯಪ್ಪ ಎಂ.ಜಿ, ತಹನ್ ಪೂವಯ್ಯ ಸಿ, ಮತ್ತು 8 ನೇ ತರಗತಿ ವಿದ್ಯಾರ್ಥಿ ಸೋಹನ್ ಗೌಡ ಭಾಗವಹಿಸಿ, ಪ್ರಥಮ ಸ್ಥಾನ ಗಳಿಸಿ ಟ್ರೋಫಿ ಮತ್ತು ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದು, ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ.









